“ಅಪ್ಪಾ…. ಎನ್ನಪ್ಪಾ……” ಆ ಧ್ವನಿ ಎಷ್ಟೋ ವರ್ಷಗಳ ನಂತರ ಕೇಳಿಯಪ್ಪಗ ಚಂದ್ರಣ್ಣನ ಹೃದಯಕ್ಕೆ ಎಂತೋ ಆತು. ಸಂತೋಶವೋ, ದುಃಖವೋ ಅರಡಿಯದ್ದೆ ಉಸಿಲು ಮೇಲೆ ಕೆಳ ಹೋಪಲೆ ಬಂಙಪ್ಪಗ ಡಾಕ್ಟರಂಗೆ ಗಾಬರಿಯಾತು. ಅಂಬಗಳೇ ಅವಕ್ಕೆ ಆಕ್ಸಿಜನ್ ಕೊಡ್ಲೆ ಏರ್ಪಾಡು ಮಾಡಿಕ್ಕಿ ,ಸುಶೀಲನ ಮನುಶಿದಲ್ಲಿಗೆ ಬಪ್ಪಗ ಡಾಕ್ಟರ್ ಪ್ರದೀಪ್ ಬಂದು ಅದಕ್ಕೆ ಇಂಜೆಕ್ಷನ್ ಕೊಟ್ಟಾಗಿದ್ದತ್ತು.
ಹತ್ತು ನಿಮಿಷಲ್ಲಿ ಅಲ್ಲಿ ಆದ ಘಟನೆ ಗ್ರೇಶುಗ ನರ್ಸುಗೊಕ್ಕೆ ಕೂಡ ಮೈ ನಡುಗಿದ್ದು.
ಸುಶೀಲಂಗೂ ಎದೆಬಡಿತ ಹೆಚ್ಚು ಕಮ್ಮಿ ಆಗಿ ಬೋದ ತಪ್ಪಿರೂ ಫಕ್ಕನೆ ಎಚ್ಚರಿಕೆ ಆತು. ಎಚ್ಚರಿಕೆ ಆದ ಕೂಡ್ಲೇ “ಎನ್ನ ಅಪ್ಪನ ನೋಡೆಕು..ಒಂದರಿ ಎನಗೆ ಅಪ್ಪನ ತೋರ್ಸಿ” ಹೇಳಿ ಕೂಗಲೆ ಸುರು ಮಾಡಿತ್ತು. ಆದರೆ ಅಷ್ಟಪ್ಪಗ ಚಂದ್ರಣ್ಣನ ಅಲ್ಲಿಂದ ಮತ್ತೊಂದು ಹೊಡೇಂಗೆ ಕರಕ್ಕೊಂಡು ಹೋಗಿ ಆಗಿದ್ದತ್ತು. ಅವರ ಆರೋಗ್ಯದ ವಿಷಯಲ್ಲಿ ಡಾಕ್ಟರಕ್ಕೊಗೆ ಕೂಡ ಎಂತ ಹೇಳ್ಲೂ ಎಡಿಯದ್ದ ಸ್ಥಿತಿಲಿ ಇತ್ತಿದ್ದವು.
ಅದೇ ಸಮಯಕ್ಕೆ ಸರಿಯಾಗಿ ಹೆರಾಂದ ಶಾರದಕ್ಕಂಗೂ ಒಂದರಿ ಗೆಂಡನ ಮೋರೆ ನೋಡೆಕೂಳಿ ಆತು. ಅಲ್ಲಿ ನರ್ಸುಗಳತ್ರೆ ಕೇಳಿರೂ ಒಳ ಬಿಟ್ಟಿದವಿಲ್ಲೆ. ಶೈಲ ಅಬ್ಬೆಯ ಹತ್ತರೆ ನಿಂದು ಸಮದಾನ ಹೇಳುವ ಹಾಂಗೆ ಗಟ್ಟಿಯಾಗಿ ಕೈ ಹಿಡ್ಕೊಂಡೇ ಇದ್ದತ್ತು. ಕೇಶವ° ಮಾತು ಮರದವರ ಹಾಂಗೆ ಅಂತೇ ಕೈ ಕಟ್ಟಿ ನಿಂದು ಕೊಂಡು ತಲೆ ತಗ್ಸಿ ನಿಂದ.
“ಈಗ ಎಂತ ಮಾಡುದು ಭಾವಾ” ರಾಮಚಂದ್ರ ಕೇಶವನ ಹತ್ತರಂಗೆ ಬಂದ.
“ಎನಗೆ ಎಂತದೂ ತಲಗೆ ಹೋವ್ತಿಲ್ಲೆ…..”
ಶೈಲನೂ ಅಬ್ಬೆಯ ಹತ್ತರಂದ ಎದ್ದು ಅವನ ಹತ್ತರಂಗೆ ಬಂತು.
‘ಪಾಪ ಅವಂಗೆ ನಿತ್ರಾಣ ಆವ್ತಾ ಏನಾ..ಸುಶೀಗೆ ನೆತ್ತರು ಕೊಟ್ಟಿಕ್ಕಿ ಬಂದ ಮತ್ತೆ ಎಂತದೂ ಕುಡುದು, ತಿಂದು ಮಾಡಿದ್ದಾಯಿಲ್ಲೆ. ಸುಶೀ ಈಗ ಹೇಂಗಿದ್ದೋ..ಅದರ ನೋಡಿಕ್ಕಿ ಬಂದ ಮತ್ತೆ ಕೇಶವ ಆರತ್ರೂ ಸರಿಯಾಗಿ ಮಾತಾಡುದು ಕಂಡಿದಿಲ್ಲೆ.
“ಆನೊಂದರಿ ನಿನ್ನ ಅಪ್ಪನ ನೋಡಿಕ್ಕಿ ಬತ್ತೆ. ಹತ್ತರಂದ ಬೇಡ, ದೂರಂದ ನೋಡಿರೆ ಸಾಕೆನಗೆ” ಶಾರದಕ್ಕ ಮತ್ತೆ ಹಠ ಮಾಡ್ಲೆ ಸುರು ಮಾಡಿದವು.
“ನಾವು ನೋಡೆಕು ಹೇಳಿಯಪ್ಪಗ ಒಳಾಂಗೆ ಬಿಡುವ ಕ್ರಮ ಇಲ್ಲೆ ಅಬ್ಬೇ..ರಜ ಹೊತ್ತು ಕಳುದು ಅವು ಅಪ್ಪನ ಹೆರ ಕರಕ್ಕೊಂಡು ಬಕ್ಕು. ಅಷ್ಟಪ್ಪಗ ನೋಡುವ° ” ಶೈಲ ಸಮದಾನ ಮಾಡಿರೂ ಶಾರದಕ್ಕ ಏಕೋ ಕಣ್ಣೀರು ಹಾಕಲೆ ಸುರು ಮಾಡಿದವು.
ಒಳ ಸುಶೀಲನದ್ದೂ ಇದೇ ಹಠ.
“ಎನಗೆ ಅಪ್ಪನ ನೋಡೆಕು. ಒಂದರಿ ಅವರ ಕಾಲು ಹಿಡಿತ್ತೆ. ಒಂದರಿ ಅಪ್ಪನ ತೋರ್ಸಿ” ಹೇಳಿ ಹಠ ಮಾಡಿ ಕೈ ಕಾಲು ಬಡಿವಗ ನರ್ಸುಗೊಕ್ಕೂ ಹೆದರಿಕೆ ಆಗಿ ಡಾಕ್ಟರ್ ಸುಲೋಚನಂಗೆ ಪೋನ್ ಮಾಡಿದವು. ಬಾಳಂತಿ ಆದ ಕಾರಣ ಬೇರೆ ರೋಗಿಗಳ ಹಾಂಗೆ ಎಲ್ಲಾ ಇಂಜೆಕ್ಷನುದೆ ಅದಕ್ಕೆ ಕೊಡ್ಲೆಡಿಯದ್ದೆ ಅವಕ್ಕೆ ಎಂತ ಮಾಡುದೂಳಿ ಆತು.
ಡಾಕ್ಟರ್ ಪ್ರದೀಪ್, ಸುಲೋಚನ ಚಂದ್ರಣ್ಣನ ನೋಡುವ ಡಾಕ್ಟರ್ ಸತೀಶ್ ಎಲ್ಲೋರು ಒಟ್ಟಿಂಗೆ ಸುಶೀಲನ ಪರೀಕ್ಷೆ ಮಾಡಿ ನೋಡಿಕ್ಕಿ ಒಂದರಿ ಅಪ್ಪನ ನೋಡ್ಲೆ ಒಳಾಂಗೆ ಕರಕ್ಕೊಂಡು ಹೋಪದು ಹೇಳಿ ತೀರ್ಮಾನ ಮಾಡಿದವು. ಎದ್ದು ಕೂಬಲೆ ಸಾನೂ ಎಡಿಯದ್ದ ಅದರ ನಾಲ್ಕೈದು ನರ್ಸುಗೊ ದೂಡುವ ಮಂಚಲ್ಲಿ ಮನುಶಿ, ಕೈಗೆ ಕುತ್ತಿದ ವಯರಿನ ಸಮೇತ ಇಪ್ಪ ಗ್ಲೂಕೋಸ್ ಕುಪ್ಪಿಯನ್ನು ಹಿಡ್ಕೊಂಡು ಚಂದ್ರಣ್ಣನ ಮನುಶಿದ ಎಮರ್ಜೆನ್ಸಿ ವಾರ್ಡಿಂಗೆ ಕರಕ್ಕೊಂಡು ಹೆರಟವು.
ಉಸಿಲು ರಜಾ ಸರಿಯಾದರೂ ಚಂದ್ರಣ್ಣನ ಆರೋಗ್ಯ ಸರಿಯಾಯಿದಿಲ್ಲೆ. ಆದರೂ ಅವಕ್ಕೆ ಬೋದ ಬಂದ ಕಾರಣ ಫಕ್ಕನೆ ಸುಶೀಲನ ನೆಂಪಾತು.
“ಅಪ್ಪಾ….” ಹೇಳಿ ದಿನಿಗೇಳಿದ್ದು ಸುಶೀ ಅಲ್ಲದಾ. ಇಲ್ಲಿಗೆಂತಕೆ ಬಂತಪ್ಪಾ. ಅದರ ಮೋರೆ ಕೂಡ ನೋಡ್ಲಾಗ ಗ್ರೇಶಿರೂ ಆ ಒಂದು ಕ್ಷಣಲ್ಲಿ ಅವರ ಮಗಳ ಮೇಗಾಣ ಪ್ರೀತಿಯ ಮುಂದೆ ಆ ಶಪಥ ಎಲ್ಲ ಕರಗಿ ಹೋತು.
ಕಾಣದ್ದೆ ಎಷ್ಟೊರುಶಾತು ಅದರ. ಒಂದರಿ ಅದರ ಮೋರೆ ನೋಡೆಕಾತು. ದಿನೇಸನೊಟ್ಟಿಂಗೆ ಹೇಂಗೆ ಬದ್ಕುತ್ತೋ..ಅದಕ್ಕೆ ಮಕ್ಕಳೋ ಮತ್ತೋ ಇದ್ದವೋ….! ದಿನೇಸ ಇದರನ್ನೂ ಕೂಲಿ ಕೆಲಸಕ್ಕೆ ಕಳ್ಸುಗೋ..! ಅದರ ಕಂಡರೂ ಮದ್ಲಾಣಾಂಗೆ’ ಮಗಳೂ’ ಹೇಳಿ ದಿನಿಗೇಳ್ಲೆ ಎನಗೆಡಿಗೋ..! ಅದಿಲ್ಲಿದ್ದೂಳಿ ಶಾರದೆಗೆ ಗೊಂತಾದರೆ ಎಂತ ಮಾಡುಗು! ಸುಶೀಲನಿಂದಾಗಿಯೇ ಎನಗೆ ಕೈ ಕಾಲು ಬಿದ್ದದೂಳಿ ಅದರ ನಂಬಿಕೆ. ಈಗ ಸುಶೀಲನ ಕಂಡ್ರೂ ಅದರ ನಾಕು ಬೈಗಷ್ಟೆ. ಅಷ್ಟು ರೋಷ,ಸಂಕಟ,ದುಃಖ ಅದರ ಎದೆಲಿ ಕಟ್ಟಿ ಮಡುಗಿಂಡಿದ್ದದು. ಬೇಡ, ಶಾರದೆಗೆ ಸುಶೀಯ ನೋಡ್ಲೆ ಮನಸ್ಸಿಲ್ಲದ್ರೆ ಎನಗೂ ನೋಡೆಡ. ಅದಕ್ಕೆ ಬೇಕಾದವರೊಟ್ಟಿಂಗೆ ‘ಸ್ವಯಂವರ’ ಮಾಡಿಂಡು ಹೋದ್ದಲ್ಲದಾ..ಅದಕ್ಕೆ ಎನ್ನ ಅಪ್ಪಾ°.. ಹೇಳುವ ಅರ್ಹತೆ ಇಲ್ಲೆ….” ಚಂದ್ರಣ್ಣನ ದೇಹಾರೋಗ್ಯ ಸರಿ ಇಲ್ಲದ್ರೂ ಮನಸ್ಸಿನ ಆಲೋಚನಾ ಶಕ್ತಿಗೆ ಎಂತದೂ ಆಗದ್ದ ಕಾರಣ ಅವರ ಆಲೋಚನೆಗೊ ಎಲ್ಲೆಲ್ಲೋ ಹೋಪಲೆ ಸುರು ಮಾಡಿತ್ತು.
ಅದೇ ಹೊತ್ತಿಂಗೆ ಅಪ್ಪನ ನೋಡ್ಲೆ ಸುಶೀಲನ ಕರಕ್ಕೊಂಡು ಬಪ್ಪ ನರ್ಸ್ ಗಳ ಹಿಂದೆ ಬಂದ ಶಾರದಕ್ಕ ‘ಒಂದರಿ ಚಂದ್ರಣ್ಣನ ದೂರಂದ ನೋಡ್ಲಕ್ಕೋ’ ಹೇಳಿ ಅವರತ್ರೆ ಕೇಳಿತ್ತು.
“ನಿಂಗೊ ಇಲ್ಲಿಗೆಲ್ಲ ಬಪ್ಪಲಾಗ” ಹೇಳಿ ಹೇಳಿಂಡೇ ಅದು ಸುಶೀಲ ಮನುಗಿದ ಮಂಚದ ಹಿಂದಂದ ಹೋಪಗ ಶಾರದಕ್ಕ ಸೆರಗಿಲ್ಲಿ ಕಣ್ಣು ಉದ್ದಿದವು. ಅಷ್ಟಪ್ಪಗ ಡಾಕ್ಟರ್ ಸತೀಶ್ ಬಪ್ಪದು ಕಂಡತ್ತವಕ್ಕೆ. ಅವಕ್ಕೆ ಶಾರದಕ್ಕನ ಗುರ್ತಯಿದ್ದು. ಚಂದ್ರಣ್ಣನ ಈಗಾಣ ಪರಿಸ್ಥಿತಿ ತುಂಬಾ ಗಂಭೀರ ಇದ್ದ ಕಾರಣ ಆರನ್ನೂ ಒಳ ಬಿಡದ್ರೂ, ಈಗ ಸುಶೀಲನ ಕರಕ್ಕೊಂಡು ಹೋಪಗ ಒಂದರಿ ಅವರ ಹಿಂದಂದ ಹೋಗಿ ದೂರಂದ ನೋಡಿಕ್ಕಿ ಬಂದರೆ ಎಂತಾಗ ಹೇಳಿ ಗ್ರೇಶಿದವು.
ಅವಕ್ಕೆ ಸುಶೀಲನ ಕತೆ ಗೊಂತಿಲ್ಲೆ. ಅದು ಎಂತಕೆ ಅಪ್ಪನ ನೋಡ್ಲೆ ಅಷ್ಟು ಹಠ ಮಾಡ್ತೂಳಿಯು ಕಾರಣ ಗೊಂತಿಲ್ಲೆ. ಬಾಳಂತಿ ಆಸ್ಪತ್ರೆಂದ ಹೆರ ಹೋಪಗ ನಾಲ್ಕೈದು ದಿನ ಅಕ್ಕು ಹೇಳಿ ಸುಲೋಚನ ಹೇಳಿದ ಕಾರಣ ಅವು ನೋಡ್ಲೆ ಒಪ್ಪಿಗೆ ಕೊಟ್ಟದಷ್ಟೆ. ಸಾಲದ್ದಕ್ಕೆ ಸುಶೀಲನ ಹಠವೂ ಅವಕ್ಕೆ ಉಪದ್ರ ಆಗಿಂಡಿದ್ದತ್ತು. ಮತ್ತೆ ಎಂತಾರು ಹೆಚ್ಚು ಕಮ್ಮಿ ಆದರೆ ಈ ಕಾರಣಂದ ಹೇಳಿ ಅಪ್ಪಲಾಗಾಳಿ ರಜ ಜಾಗ್ರತೆ ಮಾಡಿದ್ದದು.
ಶಾರದಕ್ಕಂಗೆ ರಜ್ಜ ಸಮದಾನ ಆತು.
“ನೀನೂದೆ ಬಾ ಶೈಲಾ..ದೂರಂದಾರು ನೋಡಿಕ್ಕಿ ಬಪ್ಪೋ°. ಎನಗೆಕೋ ನಿನ್ನಪ್ಪನ ಒಂದರಿ ನೋಡದ್ದೆ ಮನಸಿಂಗೆ ಎಂತೋ ಹಿತ ಆಗದ್ದಾಂಗಾವ್ತು” ಅವು ಅಷ್ಟು ಹೇಳಿಯಪ್ಪಗ ಶೈಲ ಕೇಶವನ ಮೋರೆ ನೋಡಿತ್ತು. “ಹೋಗು” ಹೇಳುವ ಹಾಂಗೆ ಕಣ್ಣು ಬಾಶೆ ಮಾಡಿದ°.
“ಯೇವದೋ ರೋಗಿಯ ಕರಕ್ಕೊಂಡು ಹೋವ್ತವು. ಅವರ ಹಿಂದಂದ ಹೋಪಲೆ ಹೇಳಿದ್ದವು ಶೈಲ” ಹೇಳಿಂಡು ಎರಡು ಉಗ್ರಾಣದ ಹಾಂಗಿದ್ದ ಜಾಗೆ ದಾಂಟಿ ಮುಂದೆ ಮುಂದೆ ಹೋದವು. ಅಲ್ಲೆಲ್ಲ ಬೇರೆ ಬೇರೆ ಹೊಡೆಲಿ ವಯರುಗಳ ಮೂಗಿಂಗೆ ಬಾಯಿಗೆ ಕುತ್ತಿ ಮಡುಗಿ ಮನುಶಿದ ರೋಗೊಗಳ ಕಾಂಬಗ ಶಾರದಕ್ಕಂಗೆ ಝುಮ್ ಆಗಿಂಡಿದ್ದತ್ತು. ಶೈಲನ ಕೈಯ ಗಟ್ಟಿ ಹಿಡ್ಕೊಂಡತ್ತು.
“ನಾವು ಹೆರ ಹೋಪ ಶೈಲ..ಅಪ್ಪನ ಹೀಂಗೆ ಮನುಶಿಂಡಿದ್ದರೆ ಎನಗೆ ನೋಡ್ಲೆಡಿಯ” ಹೇಳಿ ಸಣ್ಣಕೆ ಕೂಗಲೆ ಸುರು ಮಾಡಿದವು.
“ನೀನೆಂತ ಹೆದರೆಡ ಅಬ್ಬೇ.ಇನ್ನೀಗ ಇಷ್ಟು ಒಳ ಬಂದಿಕ್ಕಿ ಅರ್ಧಂದ ವಾಪಾಸು ಹೋಪದೇಂಗೆ” ಶೈಲ ಅದರ ಹೆದರಿಕೆ ಹುಗ್ಗುಸಿ ಮಡುಗಿಕ್ಕಿ ಅಬ್ಬಗೆ ಧೈರ್ಯ ಹೇಳಿತ್ತು.
ಚಂದ್ರಣ್ಣನ ಮನುಶಿದ ಮಂಚದ ಹತ್ತರಂಗೆ ಸುಶೀಲನ ಗಾಡಿ ಮಂಚ ತಂದು ನಿಲ್ಸಿದವು ನರ್ಸುಗೊ. ಎರಡು ಜೆನ ಡಾಕ್ಟರಕ್ಕಳೂ ಹತ್ತರೇ ಇತ್ತಿದ್ದವು.
ಅಪ್ಪನ ಕಂಡದೂದೆ ಸುಶೀಲ ಮೆಲ್ಲಂಗೆ ಮನುಗಿದಲ್ಲಿಂದ ಏಳ್ಲೆಡಿತ್ತಾ ನೋಡಿತ್ತು.
“ಏಳೆಡಿ..ನಿಂಗೊಗೆ ಎಡಿಯ” ಹೇಳಿ ಹತ್ತರೆ ಇಪ್ಪ ನರ್ಸು ಅದರ ಏಳ್ಲೆ ಬಿಟ್ಟಿದಿಲ್ಲೆ.
“ಅಪ್ಪನ ಕಾಲು ಹಿಡಿಯೆಕೆನಗೆ. ಆನು ದೊಡ್ಡ ತಪ್ಪು ಮಾಡಿದ್ದೆ” ಹೇಳಿ ಕೂಗಲೆ ಸುರು ಮಾಡಿದ ಅದರ ಸಮದಾನ ಮಾಡಿಕ್ಕಿ ಚಂದ್ರಣ್ಣನ ಕಾಲಿನ ಹತ್ತರೆ ಅದರ ತಲೆ ಬಪ್ಪ ಹಾಂಗೆ ಗಾಡಿಯ ತಿರುಗಿಸಿದವು. ಸುಶೀಲ ಅಪ್ಪನ ಕಾಲು ಮುಟ್ಟಿತ್ತು. ಎರಡೂ ಕೈಲಿ ಅಪ್ಪನ ಪಾದ ಹಿಡುದು ” ಎನ್ನದು ತಪ್ಪಾತಪ್ಪ°. ಈ ಸುಶೀ ಒಂದು ಜನ್ಮಲ್ಲಿ ಅನುಭವಿಸುವ ಕಷ್ಟ ಪೂರಾ ಈ ನಾಲ್ಕೈದು ವರ್ಷಲ್ಲಿ ಅನುಭವಿಸಿತ್ತು..ಒಂದರಿ ನಿಂಗೊ ಕಣ್ಣೊಡದು ನೋಡಿ ಎನ್ನತ್ರೆ ಒಂದಕ್ಷರ ಆದರೂ ಮಾತಾಡಿ ಅಪ್ಪಾ°. ಮತ್ತೆನಗೆ ಸತ್ತರೂ ತೊಂದರೆ ಇಲ್ಲೆ.ಎನ್ನ ಪಾಪ ಪರಿಹಾರ ಆತೂಳಿ ಆನು ಗ್ರೇಶಿಕೊಂಬೆ. ಎನಗೆ ಈ ಬದ್ಕೇ ಬೇಡ ಅಪ್ಪಾ°..” ಹೀಂಗೆ ಹೇಳಿ ಕೂಗುವ ಸುಶೀಲನ ಕಂಡುಕೊಂಡೇ ಶಾರದಕ್ಕ ಅಲ್ಲಿಗೆ ಎತ್ತಿದ್ದದು.
ಸುಶೀಲನ ಕಂಡದೂದೆ ಇಷ್ಟು ದಿನ ಮನಸಿಲ್ಲಿ ಹುಗ್ಗುಸಿ ಮಡುಗಿದ ಕೋಪ,ಸಂಕಟ ಎಲ್ಲ ಒಟ್ಟಿಂಗೆ ಬಂದು ಸುಶೀಲ ಯೇವ ಸ್ಥಿತಿಲಿ ಇದ್ದು ಹೇಳಿ ಕೂಡ ನೋಡದ್ದೆ” ಮಾರಿ ಸಂತಾನ ನೀನಿನ್ನೂ ಇದ್ದೆಯಾ..ಅಪ್ಪನ ಹೀಂಗಿದ್ದ ಸ್ಥಿತಿಗೆ ತಂದು ಹಾಕಿಕ್ಕಿ ಈಗ ಎಂತ ಕೊಲ್ಲಲೆ ಬಂದದಾ ನೀನು ಪಾಪಿ” ಹೇಳಿಂಡು ಅದರ ಕೆಪ್ಪಟಗೆ ಎರಡೂ ಕೈಲಿ ಸಮಾ ಜೆಪ್ಪುವ ಶಾರದಕ್ಕನ ಹಿಡುದು ತಡವಲೆ ಶೈಲಂಗೆ ಎಡಿಗಾಯಿದಿಲ್ಲೆ…….!!
ಇನ್ನೂ ಇದ್ದು, ಇನ್ನಾಣ ವಾರಕ್ಕೆ >>>
~*~*~
ಕಳುದ ವಾರದ ಸಂಚಿಕೆ:
-
ಸ್ವಯಂವರ : ಕಾದಂಬರಿ : ಭಾಗ 38: https://oppanna.com/kathe/swayamvara-38-prasanna-chekkemane/
- ಒಲುಮೆಯ ಸಿರಿದೀಪ - October 22, 2021
- ಸ್ವಯಂವರ ಭಾಗ 51-ಪ್ರಸನ್ನಾ ವಿ ಚೆಕ್ಕೆಮನೆ - June 1, 2020
- ಸ್ವಯಂವರ ಭಾಗ 50-ಪ್ರಸನ್ನಾ ವಿ ಚೆಕ್ಕೆಮನೆ - May 25, 2020
ಕಣ್ಣಿಲ್ಲಿ ಒಂದೆರಡು ಹನಿ ಹರುದತ್ತು ಕತೆ ಓದಿ. ಅಪ್ಪ/ಅಮ್ಮ ಮಗಳ ಒಂದುಗೂಡಿದ ಸನ್ನಿವೇಶ ಮನ ಕಲಕಿತ್ತು. ಸುಶೀಲ ಚಂದ್ರಣ್ಣರಿಂಗೆ ಗುಣ ಆಗಲಿ ಅಲ್ಲದೊ.
ಎಂಥ ಒಂದು ಸನ್ನಿವೇಶ ಅಪ್ಪ ಮಗಳ ಭೇಟಿ…ಸುಷಿಯ ಪಶ್ಚಾತ್ತಾಪ….ಅದರ ದುಃಖ ತುಂಬಿದ ಮಾತುಗೋ.. ಓದುವಾಗ ಕಣ್ಣೀರು ಬತ್ತು.. ರಜಾ ಪಾಪ ಕಮ್ಮಿ ಆದಿಕ್ಕು.. ಚಂದ್ರಣ್ಣ ನ ಮನಸ್ಸಿನ ದ್ವಂದ್ವ….ಮನಸ್ಸೇ ಕರಗಿತ್ತು..ಅಬ್ಬೆಗೆ ಸುಷಿಯ ಸ್ಥಿತಿ ಗೊಂತಿಲ್ಲದ್ದೆ ಕೋಪ ಬಂದಿಕ್ಕು..ಒಂದು ಪೆಟ್ಟು ಕೊಟ್ರು ತಪ್ಪಲ್ಲ..ಎಲ್ಲ ಸರಿಯಾಗಿ ಒಂದಾದರೆ ಸುಷಿ ಮತ್ತೆ ಅದರ ಮಕ್ಕೊಗೆ ಒಂದು ಜೀವನ ಸಿಕ್ಕುಗು..ಮನಸ್ಸು ಕರಗಿ ಕಣ್ಣೀರು ಬತ್ತು ಪ್ರಸನ್ನ.. ಎಲ್ಲೋರು ಕಾಂಬಲೆ ಸಿಕ್ಕಿದವನ್ನೆ ಹೇಳಿ ಸಮಾಧಾನ…
ಮನ ಮಿಡಿಯುವ ಸನ್ನಿವೇಶ.ಮಗಳಿಂಗೆ ಎಷ್ಟು ಬಡುದರೂ ಮಗಳ ಸ್ಥಿತಿ ಗೊಂತಾಪಗ ಆ ಅಬ್ಬೆ ಎಷ್ಟು ಸಂಕಟ ಪಡುಗೋ ಏನೋ.
Antu appa magala bheti intaha stithili ayekkathu… Kopavo preethiyo ottaare adara ardadastu paapa parihaara athu appana kaalinge biddu.. appana sthithige kaarana magale helva kopalli abbe badudarli thappille.. innadaru adara kastanga theerali.. manamidiva sandarbha.. adbhutha.