ಸ್ವಯಂವರ 41
ಸುಶೀಲಂಗೆ ಎಚ್ಚರಿಕೆಯಪ್ಪಗ ಎಷ್ಟು ಗಂಟೆ ಆಯಿದೂಳಿ ಸಾನು ಅದಕ್ಕೆ ಅಂದಾಜಾಯಿದಿಲ್ಲೆ. ಒಂದರಿ ಕಣ್ಣೊಡದು ಸುತ್ತೂ ನೋಡಿತ್ತು. ಒಂದು ನರ್ಸು ಮಾತ್ರ ರಜಾ ದೂರ ಕೂದೊಂಡು ಎಂತೋ ಓದಿಂಡಿದ್ದತ್ತು.
ಒಂದರಿ ಗಟ್ಟಿಯಾಗಿ ಕಣ್ಣು ಮುಚ್ಚಿ ಒಡದಪ್ಪಗ ಹಳೇ ವಿಶಯಂಗೊ ಎಲ್ಲ ನೆಂಪಾತು. ಅಪ್ಪ°, ಅಬ್ಬೆ, ಅಣ್ಣ,ಅಕ್ಕ….ಎಲ್ಲರನ್ನೂ ಕಂಡ ನೆಂಪು ಬಂತು! ಅದು ಕನಸಾ!! ಅಪ್ಪ° “ಸುಶೀಯ ಲಾಯ್ಕಲ್ಲಿ ನೋಡ್ಲೆ ಹೇಳು” ಹೇಳಿ ಅಕ್ಕನತ್ರೆ ಹೇಳಿದ್ದದು ಬರೀ ಕನಸಲ್ಲ! ಅಂಬಗ ಅವು ಈಗ ಎಲ್ಲಿದ್ದವು? ಆನೆಲ್ಲಿಪ್ಪದು!
ಹತ್ತು ನಿಮಿಷ ಹಾಂಗೇ ಮನುಗಿಯಪ್ಪಗ ಅದರ ಮನಸ್ಸಿಂಗೆ ಎಲ್ಲವೂ ಅಂದಾಜಾತು. ಅಪ್ಪ° “ಮಗಳೇ….” ಹೇಳಿ ದಿನಿಗೇಳಿದ್ದು ಅಕೇರಿ. ಇನ್ನೆಂದೂ ಅಪ್ಪ° ಹಾಂಗೆ ದಿನಿಗೇಳವು. ಅಪ್ಪ° ಇನ್ನು ಇಲ್ಲೆ……!
ಈ ಸರ್ತಿ ಅದಕ್ಕೆ ಕೂಗಲೆ ಬಯಿಂದಿಲ್ಲೆ. ಮನಸ್ಸಿನ ಗಟ್ಟಿ ಮಾಡಿ ಮುಂದಾಣ ದಾರಿ ಎಂತರ ಹೇಳಿ ಆಲೋಚನೆ ಮಾಡುವ ಪ್ರಯತ್ನ ಮಾಡಿತ್ತು. ಮೂರು ಜನರ ಹೊಟ್ಟೆ ತುಂಬುಸುವ ಕೆಲಸ ಆಯೆಕು. ಮರ್ಯಾದೆ ಹೋಪ ಕೆಲಸ ಆಗ. ಮನಸಿಂಗೆ ಧೈರ್ಯ ಬಪ್ಪ ಜಾಗೆ ಆಯೆಕು.ದಿನೇಸಂಗೂ ತಂಗಮ್ಮಂಗೂ ಆನೆಲ್ಲಿದ್ದೇಳಿ ಗೊಂತಪ್ಪಲಾಗ…..’ ಹೀಂಗೇ ಆಲೋಚನೆ ಮಾಡಿದ ಅದಕ್ಕೆ ಎಷ್ಟೊತ್ತಿಂಗೆ ಒರಕ್ಕು ಬಂತೋ ಗೊಂತಿಲ್ಲೆ.
“ಒಂದರಿ ಎನ್ನ ನೋಡು.ಆಗಂದ ಒರಗುತ್ತೆ ಹೇಳಿತ್ತು ನರ್ಸು. ಇನ್ನು ಒರಗಿದ್ದು ಸಾಕು” ಪ್ರೀತಿಯ ಸ್ವರ ಕೇಳಿ ಮನಸ್ಸು ತುಂಬಿ ಬಂದು ಕಣ್ಣೊಡದು ನೋಡಿಯಪ್ಪಗ ಎದುರು ನಿಂದು ಕೊಂಡಿದ್ದು ಡಾಕ್ಟರ್ ಪೂರ್ಣಿ!!
ಸಂತೋಷಂದ ಸುಶೀಲನ ಕಣ್ಣಿಲ್ಲಿ ನೀರು ತುಂಬಿತ್ತು. ಏಳ್ಲೆಡಿತ್ತಾಳಿ ನೋಡಿರೂ ಪೂರ್ಣಿ ಅದರ ಹೆಗಲು ಹಿಡುದು ಹತ್ತರೆ ಕೂದತ್ತು
“ತುಂಬ ಬಂಙ ಬಂದೆ ಅಲ್ಲದಾ. ಅತ್ತೆ ಫಕ್ಕನೆ ತೀರಿ ಹೋದ ಬೇಜಾರ ಮುಗಿವ ಮದಲೇ ಒಂದೇ ತಿಂಗಳಿಲ್ಲಿ ಮಾವನೂ ತೀರಿ ಹೋದವು. ಈ ಆಸ್ಪತ್ರೆ ಅವರ ಕನಸಾಗಿದ್ದತ್ತು. ಹಾಂಗಾಗಿ ಆನು ಇದರ ಅಭಿವೃದ್ಧಿ ಕಡೆಂಗೆ ಗಮನ ಕೊಟ್ಟೆ. ನಿನ್ನ ನೆಂಪಾದರೂ ಅತ್ಲಾಗಿ ಬಪ್ಪಲಾಯಿದಿಲ್ಲೆ. ಎನಗೆ ಟ್ರಾನ್ಸ್ ಫರ್ ಆದ ಕಾರಣ ಹೊಸ ಜಾಗೆಗೆ ಹೊಂದಿಕೊಂಡು ಇಲ್ಯಾಣ ಕೆಲಸವನ್ನೂ ನೋಡಿಕೊಂಡು ಇತ್ತಿದ್ದೆ. ನಿನ್ನ ಆನಿಪ್ಪಲ್ಲಿಗೆ ಕರಕ್ಕೊಂಡು ಬಪ್ಪದು ಹೇಳಿ ಅಂದಾಜಿ ಮಾಡಿಂಡು ಇತ್ತಿದ್ದೆ. ಆದರೆ ಎಂತದಕ್ಕೂ ಕೆಲಸದ ಒತ್ತಡಲ್ಲಿ ‘ ಇನ್ನಾಣ ವಾರ ಅಕ್ಕು, ಮತ್ತಾಣ ವಾರ ಅಕ್ಕು’ ಹೇಳಿ ಮುಂದೆ ಮುಂದೆ ಹೋತು. ನಿನಗಾದರೂ ಎನ್ನ ನೆಂಪಾತನ್ನೇ……! ನೀನು ಬಸರಿ ಹೇಳಿ ಗೊಂತಾದ ಕೂಡ್ಲೇ ಎನ್ನ ಹತ್ತರಂಗೆ ಬರೆಕಾತು. …” ಪೂರ್ಣಿಯ ಮಾತು ಕೇಳುಗ ಅಕ್ಕ ಶೈಲ ಹತ್ತರೆ ಕೂದು ಮಾತಾಡುಷ್ಟೇ ಸಂತೋಶಾತು ಸುಶೀಲಂಗೆ.
“ನೀನು ಅತ್ತೆ ಕೈಲಿ ಕೊಟ್ಟ ಪೈಸೆ ಸಿಕ್ಕಿದ್ದು. ಅದರ ಹಾಂಗೇ ಮಡುಗಿದ್ದೆ. ಅತ್ತೆ ದಿನಾಗಳ ಡೈರಿ ಬರವ ಕ್ರಮ ಇದ್ದು. ಹಾಂಗೆ ಒಂದು ಡೈರಿ ಒಳ ನಿನ್ನ ಹೆಸರು ಬರದು , ಪೈಸೆಯನ್ನು ಮಡುಗಿತ್ತಿದ್ದವು. ಎನಗೆ ಗೊಂತಾದ್ದು ಮಾತ್ರ ಈಗ ಎರಡು ತಿಂಗಳು ಮದಲು. ಬೇಂಕಿಂಗೆ ಹಾಕಲೆ ಪುರ್ಸೊತ್ತಾಯಿದಿಲ್ಲೆ. ಆದರೆ ಪೈಸೆ ವಿಷಯಲ್ಲಿ ನೀನು ಬೇಜಾರು ಮಾಡೆಡ. ಅತ್ತಗೆ ನೀನು ಹೇಳಿರೆ ಎಷ್ಟು ಪ್ರೀತಿ ಹೇಳಿ ಎನಗೆ ನೆಂಪಿದ್ದು. ಈಗ ಯೇವ ಆಲೋಚನೆಯನ್ನು ತಲಗೆ ತೆಕ್ಕೊಳ್ಳದ್ದೆ ಸುಮ್ಮನೇ ಮನುಗು.
ಮನುಗಿದಲ್ಲಿಂದ ಎದ್ದು ಕೊಣಿಯೇಕೂಳಿ ಆತು ಸುಶೀಲಂಗೆ. ಅಬ್ಬಾ….ಪೈಸೆ ಪುನಾ ಸಿಕ್ಕಿತ್ತನ್ನೇ. ಅಪ್ಪ° ಬಂಙ ಬಂದ ಪೈಸೆ ಮಗಳ ಅಗತ್ಯಕ್ಕೆ ಸಿಕ್ಕದ್ದಿಕ್ಕಾ…! ದೇವರೇ ಇನ್ನು ಆನು ಆರಿಂಗೂ ಕಾಣದ್ದ ಹಾಂಗೆ ಯೇವದಾದರು ಊರಿಂಗೆ ಹೋಗಿ ಬದ್ಕಿಕೊಂಬೆ. ಆರ ಹಂಗೂ ಬೇಡ…..’
“ಹಠ ಮಾಡದ್ದೆ ಡಾಕ್ಟರಕ್ಕೊ, ನರ್ಸುಗೊ ಹೇಳಿದ ಹಾಂಗೆ ಕೇಳು. ನಿನ್ನ ಮಗಳು ಪ್ರಮೀಳನೊಟ್ಟಿಂಗೆ ಇದ್ದು. ಆನಿನ್ನು ನಾಕು ದಿನ ಕಳುದು ಬಪ್ಪದು” ಪೂರ್ಣಿ ಸುಶೀಲಂಗೆ ಧೈರ್ಯ ಹೇಳಿಕ್ಕಿ ಹೋತು.
ಮನಸ್ಸಿಂಗೆ ಧೈರ್ಯ ಬಂದ ಕಾರಣ ಸುಶೀಲನ ಆರೋಗ್ಯ ಬೇಗ ಸುದಾರ್ಸಿತ್ತು. ಹದಿನೈದು ದಿನಲ್ಲಿ ಅದು ಎದ್ದು ನಡವಲೆ ಸುರು ಮಾಡಿತ್ತು. ಅಲ್ಯಾಣ ಡಾಕ್ಟರಕ್ಕೊ, ನರ್ಸುಗೊ ಪೂರಾ ಸುಶೀಲನ ಮೇಗೆ ರಜ ಹೆಚ್ಚು ಜಾಗ್ರತೆ ಮಾಡಿ,ವಿಶೇಷ ಉಪಚಾರ ಮಾಡಿಂಡಿತ್ತಿದ್ದವು. ಅದರ ಮನಸ್ಸು ಪೂರ್ತಿ ಸರಿಯಪ್ಪಲೆ ಬೇಕಾಗಿ ಮದ್ದು ಕೊಡುವ ಕಾರಣ ರಜ್ಜ ಸಮಯ ಆಸ್ಪತ್ರೆಲಿ ಬೇಕಕ್ಕು ಹೇಳಿ ಡಾಕ್ಟರಕ್ಕೊಗೆ ಗೊಂತಿದ್ದು.
ಒಪ್ಪಕ್ಕಂಗೂ ಅಲ್ಲಿಪ್ಪವರ ಇಷ್ಟ ಆತು. ಅಬ್ಬೆಯೂ ಮದ್ಲಾಣಾಂಗೆ ಬೊಬ್ಬೆ ಹಾಕದ್ದೆ ಪ್ರೀತಿಲಿ ಕೊಂಗಾಟ ಮಾಡುಗ ಆ ಪುಟ್ಟು ಮನಸ್ಸಿಂಗೂ ಕೊಶಿಯಾತು. ಹಾಂಗೆ ಒಂದು ತಿಂಗಳು ಸುಶೀಲ ಆಸ್ಪತ್ರೆಲಿ ಮನುಗಿತ್ತು. ಹಳೆಯ ವಿಶಯವ ಎಲ್ಲ ಮರದು ಹೊಸ ಬದುಕು ಕಟ್ಟುವ ಆಶೆಲಿ ಸುಶೀಲ ಮಕ್ಕಳೊಟ್ಟಿಂಗೆ ಡಾಕ್ಟರಕ್ಕೊ ಹೇಳಿದಷ್ಟು ದಿನ ಅವು ಹೇಳಿದ ಹಾಂಗೆ ಕೇಳಿಂಡು ಕೂದತ್ತು. ಮನಸ್ಸಿನ ಭಾರ ಎಷ್ಟೋ ಕಡಮ್ಮೆ ಆದಾಂಗೆ ಆಗಿಂಡಿದ್ದತ್ತು ಅದಕ್ಕೆ. ಮಕ್ಕಳತ್ರೂ ಪ್ರೀತಿ ಬಂತು. ಒಪ್ಪಕ್ಕನ ಕೊಂಗಾಟ ಮಾಡಿ ತಮ್ಮನ ಹತ್ತರೆ ಬಪ್ಪ ಹಾಂಗೆ ಮಾಡಿತ್ತು.
“ಶಾಲಗೆ ಹೋಗಿ ಕಲ್ತು ಉಶಾರಿ ಅಯೆಕು ಮಗಳು” ಹೇಳಿ ಒಪ್ಪಕ್ಕಂಗೆ ಇಷ್ಟರವರೆಗೆ ಗೊಂತಿಲ್ಲದ್ದ ಶಾಲೆ ಹೇಳುವ ಹೊಸ ವಿಶಯ ತಿಳಿಶಿ ಒಪ್ಪಕ್ಕಂಗೂ ಆದಷ್ಟು ಬೇಗ ಶಾಲಗೆ ಸೇರೆಕು ಹೇಳುವ ಕೊದಿ ಬಪ್ಪ ಹಾಂಗೆ ಮಾಡಿತ್ತು.
ಪುಟ್ಟು ಒಪ್ಪಕ್ಕನ ಕುಞಿ ಮನಸಿಲ್ಲಿ ಶಾಲೆ, ಅಕ್ಷರ ಹೇಳುವ ಒಂದು ಅದ್ಭುತ ಲೋಕದ ಚಿತ್ರ ಅದಕ್ಕೆ ಗೊಂತಿಲ್ಲದ್ದ ಹಾಂಗೆ ಅಚ್ಚೊತ್ತಿ ನಿಂದತ್ತು.
“ನಾಳಂಗೆ ನಿನಗೆ ನಿನ್ನ ಮನಗೆ ಹೋಪಲಕ್ಕು. ನಿನ್ನ ವಸ್ತ್ರ ಎಲ್ಲ ತುಂಬುಸಿ ಮಡುಗು” ಡಾಕ್ಟರ್ ಸುಲೋಚನ ಅಂದು ಸುಶೀಲನ ಹತ್ತರೆ ಬಂದು ಹೇಳಿಯಪ್ಪಗ ಅದಕ್ಕೆ ಆಶ್ಚರ್ಯ ಆತು.
ಡಾಕ್ಟರ್ ಪೂರ್ಣಿ ಬಂದು ಕರಕ್ಕೊಂಡು ಹೋಕು ಹೇಳಿ ಇಷ್ಟು ದಿನ ಜಾನ್ಸಿಂಡಿತ್ತಿದ್ದದು. ಆದರೆ ಈಗ ಇವು ಹೇಳುದು ಕೇಳುಗ ಪೂರ್ಣಿಯ ಶುದ್ದಿ ಕರಕ್ಕೊಂಡು ಹೋಪ ಶುದ್ದಿ ಇಲ್ಲೆ. ಇಲ್ಲಿಂದ ಹೋಗು ಹೇಳಿರೆ ಆನೆಂತ ಮಾಡುದು! ಆಸ್ಪತ್ರೆಲಿ ಇಷ್ಟು ದಿನ ನಿಂದದಕ್ಕೆ ಎಷ್ಟು ಪೈಸೆ ಆದಿಕ್ಕು…!!….
“ನೀನೆಂತರ ಆಲೋಚನೆ ಮಾಡುದು? ಇಲ್ಲಿಂದ ಬರದು ಕೊಟ್ಟ ಮದ್ದು, ಮಾತ್ರೆಗಳ ಇನ್ನೂ ಆರು ತಿಂಗಳು ತೆಕ್ಕೊಳೆಕು. ಮನಸಿಂಗೆ ಧೈರ್ಯ ಬೇಕು. ಒಂದರಿ ತಪ್ಪು ಮಾಡಿದ ಕೂಡ್ಲೇ ಬದುಕು ಹಾಳಾಗಿ ಹೋತು ಹೇಳಿ ಕುಸಿದು ಹೋಪಲಾಗ. ಮಕ್ಕಳ ಭವಿಷ್ಯ ನೋಡಿ, ಅವಕ್ಕೆ ಬೇಕಾಗಿ ಬದುಕೆಕು” ಡಾಕ್ಟರ್ ಸುಲೋಚನ ಅಷ್ಟೆಲ್ಲ ಹೇಳಿರೂ ಸುಶೀಲಂಗೆ ಮುಂದಾಣ ದಾರಿ ಎಂತರ ಹೇಳಿ ಅಂದಾಜಾಯಿದಿಲ್ಲೆ.
ಇರುಳು ಸರಿಯಾಗಿ ಒರಕ್ಕು ಬಾರದ್ದೆ ಅತ್ಲಾಗಿತ್ಲಾಗಿ ಹೊಡಚ್ಚಿಂಡು ಹಳೇ ಕತೆ ಎಲ್ಲ ನೆಂಪು ಮಾಡಿಂಡು ಮನುಗಿತ್ತದು. ಉದಿಯಪ್ಪಗ ಯೇವಗಾಣ ಹಾಂಗೆ ಎದ್ದು ಮಗಂಗೆ ಜಾಯಿ ಕೊಟ್ಟು ಕೊಂಡಿಪ್ಪಗ ಆ ರೂಮಿನ ಬಾಗಿಲು ತೆಗದು ಬಂದ ಜನರ ಕಂಡು ಆಶ್ಚರ್ಯ ಆತದಕ್ಕೆ.
ಅಬ್ಬೆ, ಅಣ್ಣ, ಅಕ್ಕ, ಭಾವ..!!!!!
ಶಾರದಕ್ಕ ಹತ್ತರೆ ಬಂದು ಮಗಳ ಬೆನ್ನುದ್ದಿದವು. ಸುಶೀಲಂಗೆ ಅಬ್ಬೆಯ ಕಂಡಪ್ಪಗ ಅಪ್ಪನ ನೆಂಪಾಗಿ ದುಃಖ ಬಂತು. ಮದಲು ಹೇಂಗಿದ್ದ ಅಬ್ಬೆ ಈಗ ಹೇಂಗಾಯಿದು!!
ಅಬ್ಬೆಯ ಮೋರೆಲಿ ಯೇವಗಲೂ ಹೊಳದು ಕಾಂಬ ಕುಂಕುಮ ಇಲ್ಲೆ. ಕೊರಳಿಂಗೆ ಲಕ್ಷಣವಾಗಿ ಕಂಡು ಕೊಂಡಿದ್ದ ಕೆಂಪು ಪಟ್ಟೆನೂಲಿನ ತಾಲಿ ಇಲ್ಲೆ. ನಿತ್ಯಕ್ಕೆ ಹಾಕುವ ಕರಿಮಣಿ ಮಾಲೆ, ಕಾಲುಂಗಿಲು….ಯೇವದೂ ಇಲ್ಲದ್ದ ಅಬ್ಬೆಯ ಬೋಳು ಬೋಳು ಕಾಂಬಗ ಅದಕ್ಕೆ ವಿಶಯ ಎಲ್ಲ ಅರ್ಥಾತು.
“ಸುಶೀ..ಹೆರಟಾತ, ಮನಗೆ ಹೋಪೋ° ” ಕೇಶವ ತಂಗೆಯ ಹತ್ತರೆ ಬಂದು ಹೇಳಿಯಪ್ಪಗ ಅದು ಮಗನ ಅಬ್ಬೆಯ ಕೈಲಿ ಕೊಟ್ಟು ಅವನ ಕಾಲಿಂಗೆ ಬಿದ್ದು ಕೂಗಿತ್ತು.
“ಅಣ್ಣಾ.. ಎನ್ನ ಕ್ಷಮಿಸಿ ಬಿಡು, ಆನು ದೊಡ್ಡ ತಪ್ಪು ಮಾಡಿದ್ದೆ. ಹಾಂಗಾಗಿ ಆ ಮನಗೆ ಬತ್ತಿಲ್ಲೆ ಅಣ್ಣ, ಎನ್ನ ಒತ್ತಾಯ ಮಾಡೆಡ”
ಕೇಶವನ ಹೃದಯ ಹಿಂಡಿದ ಹಾಂಗಾತು. ಎಷ್ಟು ದೊಡ್ಡ ತಪ್ಪು ಮಾಡಿರೂ ‘ಪಶ್ಚಾತ್ತಾಪಂದ ದೊಡ್ಡ ಪ್ರಾಯಶ್ಚಿತ್ತ ಇಲ್ಲೆ’ ಹೇಳಿ ಹಿರಿಯರು ಹೇಳುದು ಕೇಳಿದ್ದ° ಅವ°.
ಸುಶೀ ತಪ್ಪು ಮಾಡಿದ್ದು. ಆದರೆ ಈ ನಾಲ್ಕೈದು ವರ್ಷ ಅದು ಎಷ್ಟು ಬಂಙ ಬಯಿಂದು ಹೇಳುದು ಅವಂಗೆ ಡಾಕ್ಟರ್ ಪೂರ್ಣಿಯ ಮೂಲಕ ಗೊಂತಾಯಿದು.
ಅಪ್ಪನ ಅಕೇರಿಯಾಣ ಆಶೆಯ ಈಡೇರ್ಸೆಕು ಹೇಳಿಯೇ ಅವ° ಇಷ್ಟು ದಿನ ಕಾದ್ದದು.
“ಸುಶೀಲನ ಮನಸ್ಸು ಸರಿ ಇಲ್ಲೆ. ಒಂದು ತಿಂಗಳು ಇಲ್ಲಿಯೇ ಮನುಶಿ ಮದ್ದು ಮಾಡ್ತೆಯ°. ಇಲ್ಲದ್ರೆ ಮುಂದಂಗೆ ಅಪಾಯ ಇದ್ದು. ಇನ್ನೂ ಆರು ತಿಂಗಳು ಮದ್ದು ತೆಕ್ಕೊಳೆಕು. ಇಲ್ಲದ್ರೆ ಫಕ್ಕನೆ ಎಂತಾರು ಆಘಾತ ಬಂದರೆ ಅದರ ಮನಸ್ಸು ಏರಿಳಿತ ಅಕ್ಕು” ಹೇಳಿ ಅಲ್ಯಾಣ ಡಾಕ್ಟರಕ್ಕೊ ಹೇಳಿದ ಕಾರಣ ಈ ಒಂದು ತಿಂಗಳು ತಂಗೆಯ ನೋಡ್ಲೆ ಬಂದರೂ ಅದರ ದೂರಂದಲೇ ನೋಡಿಕ್ಕಿ ಹೋದ್ದು. ಅದರ ವಿಶಯ ಎಲ್ಲ ತಿಳುದು ವಾಪಾಸು ಮನಗೆ ಕರಕ್ಕೊಂಡು ಹೋಪದು ಹೇಳಿ ಗಟ್ಟಿ ತೀರ್ಮಾನ ತೆಕ್ಕೊಂಡದು.
“ಊರಿನವು ,ನೆಂಟ್ರು ನೆಗೆ ಮಾಡುಗು. ಆದರೂ ಸುಶೀಯ ಈ ಸ್ಥಿತಿಲಿ ನಾವು ನಡುನೀರಿಲ್ಲಿ ಕೈ ಬಿಟ್ಟ ಹಾಂಗೆ ಮಾಡ್ಲಾಗ” ಹೇಳಿ ಶೈಲನ ಮನೆಯವುದೆ ಕೇಶವಂಗೆ ಧೈರ್ಯ ತುಂಬಿದ್ದು ಅವಂಗೆ ಸಂತೋಷಾತು. ಶೈಲನ ಮನೆಯವು ಎನ್ನ ಒಟ್ಟಿಂಗೆ ಇದ್ದವನ್ನೇ.ಅಷ್ಟು ಸಾಕು. ಬೇರೆ ಆರು ಎಂತ ಬೇಕಾರೂ ಹೇಳಲಿ.ಎನಗೆ ಲಗಾವಿಲ್ಲೆ. ಬಾಯಿಲಿ ಉಪದೇಶ ಕೊಡುವವು ಆರೂದೆ ಕಷ್ಟ ಸುಖಕ್ಕೆ ಜೊತೆಲಿ ಇರವು. ಹಾಂಗಾಗಿ ಇನ್ನು ತಂಗೆಯ ಕರಕ್ಕೊಂಡು ಹೋಪಲೆ ಯೇವ ಯೋಚನೆಯೂ ಇಲ್ಲೆ.
ಅಬ್ಬೆಯತ್ರೂ ಸುಶೀಯ ಆರೋಗ್ಯದ ವಿಶಯ ಹೇಳಿ ಸಮದಾನ ಮಾಡಿದ್ದ,”ಸುಶೀಯ ಮಕ್ಕಳ ಬೇರೆ ಹೇಳಿ ನೋಡ್ಲಾಗ’ ಅದಕ್ಕೆ ಬೇಜಾರಪ್ಪ ಮಾತುಗಳ ತಪ್ಪಿ ಕೂಡ ಹೇಳ್ಲಾಗ. ಇಲ್ಲಿಂದ ಹೋದ ಮತ್ತೆ ಅದು ಅನುಭವಿಸಿದ ಕಷ್ಟ ಅದರ ಪಾಪವ ತೊಳದ್ದು ಹೇಳಿ ಗ್ರೇಶೆಕು”
ಹೀಂಗೆ ಸುಶೀಯ ಕರಕ್ಕೊಂಡು ಹೋಪಲೆ ಬೇಕಾಗಿ ಎಲ್ಲರೊಟ್ಟಿಂಗೆ ಬಂದದು. ಕೊಂಗಾಟದ ತಂಗೆಯ ವಾಪಾಸು ಮನಗೆ ಕರಕ್ಕೊಂಡು ಹೋಗಿ,ಅದರ ಬದುಕಿಲ್ಲಿ ಹೊಸ ಬೆಣಚ್ಚು ಬಪ್ಪ ಹಾಂಗೆ ಮಾಡೆಕು ಹೇಳಿ ಗ್ರೇಶಿಂಡು ಬಂದಪ್ಪಗ ಅದು “ಮನಗೆ ಬತ್ತಿಲ್ಲೆ” ಹೇಳಿ ಕೂಗುದು ಕಂಡು ಎಂತ ಸಮದಾನ ಹೇಳುದು ಹೇಳಿ ಅರಡಿಯದ್ದೆ ಸುಮ್ಮನೆ ನಿಂದ° ಅವ°.
ಇನ್ನೂ ಇದ್ದು, ಇನ್ನಾಣ ವಾರಕ್ಕೆ >>>
~*~*~
ಕಳುದ ವಾರದ ಸಂಚಿಕೆ:
-
ಸ್ವಯಂವರ : ಕಾದಂಬರಿ : ಭಾಗ 40: https://oppanna.com/kathe/swayamvara-40-prasanna-chekkemane/
- ಒಲುಮೆಯ ಸಿರಿದೀಪ - October 22, 2021
- ಸ್ವಯಂವರ ಭಾಗ 51-ಪ್ರಸನ್ನಾ ವಿ ಚೆಕ್ಕೆಮನೆ - June 1, 2020
- ಸ್ವಯಂವರ ಭಾಗ 50-ಪ್ರಸನ್ನಾ ವಿ ಚೆಕ್ಕೆಮನೆ - May 25, 2020
ಸುಶೀಲೆಯ ಕತೆಲಿ ಸುಖಾಂತ್ಯ ಕಾಂಬ ಹಾಂಗೆ ಕಾಣ್ತು. ಅದರ ಪೈಸೆ ಸಿಕ್ಕಿತ್ತು. ಪೂರ್ಣ ಡಾಕ್ಟ್ರು ಬಂದವು. ಮನೆಯವೂದೆ ಒಪ್ಪಿದವು. ಇನ್ನೆಂತಾವ್ತೂ ಹೇಳಿ ನೋಡೆಕು. ದಿನೇಶ ಪೈಸೆಗೆ ಅಸಬಡಿಯದ್ದೆ ಇರ. ಅದರದ್ದೊಂದು ಡೈವೊರ್ಸು ಆಗದ್ದೆ ಸುಶೀಲಂಗೆ ನೆಮ್ಮದಿ ಸಿಕ್ಕ. ಮುಂದುವರಿಯಲಿ ಕತೆ.
Is this novel in havyaka available in thebook form ? I want to buy one.
Please inform. Thanks and regards.
ಇದೀಗ ಧಾರಾವಾಹಿಯಾಗಿ ಬರುತ್ತಾ ಇದೆಯಷ್ಟೆ
ಬಾಯಿಲಿ ಉಪದೇಶ ಕೊಡುವವು ಆರು ಕಷ್ಟ ಸುಖಕ್ಕೆ ಬಾರವು..ನಿಜ ಪ್ರಸನ್ನ… ಈ ಭಾಗ ಭಾರಿ ಲಾಯ್ಕಲ್ಲಿ ಬೈಂದು..ಸುಷಿಯ ಜೀವನ ಸರಿ ಅಪ್ಪ ಅಂದಾಜಿ..ಓದುವವಕ್ಕೆ ಆನಂದ ಭಾಷ್ಪ…ಅದರ ಮನಸ್ಸು ಪಶ್ಚಾತ್ತಾಪಲ್ಲಿ ಬಳಲಿದ್ದು… ಎಲ್ಲೋರು ಅದರ ಕರಕ್ಕೊಂಡು ಹೋಪ ಖುಷಿಲಿ ಇದ್ದವು..ಈಗ ಸುಷಿ ಅವರೊಟ್ಟಿಗೆ ಹೋದರೆ ಮುಂದೆ ಮಕ್ಕೋಗು ಒಳ್ಳೆ ಜೀವನ ಸಿಕ್ಕುಗು…ಸುಷಿಗೆ ದೇವರು ಸರಿಯಾದ ದಾರಿ ತೋರ್ಸಲಿ…
Antu intu susheelana jeevanalli hosa belaku kaamba lakshana iddu.. abbe anna akka elloru adara kshamisiddu kathege olleya thiruvu. Appana kone aase eedersuva saluvagi adaru adara jeevana sari hogali.. paschatapakinta prayaschitha inondille heltavu.. hange adu madida paapa ellavu karagi hogali.. sushee ya jeevana elloringu udaaharane chikki.. kaadambarige hosa gari moodittu ega👏