- ಉಪ್ಪುಸೊಳೆಯ ಸುತ್ತ - May 1, 2020
- ಮಂಗಳೂರು ಹವ್ಯಕ ಸಭೆಲಿ “ವಿಷು ಸಂಭ್ರಮದ ಸಂಗೀತ ಸೌರಭ” - May 1, 2017
- ಶಪಥಪರ್ವ – ಕ್ಯಾಮರಲ್ಲಿ - October 9, 2016
ಬ್ರಾಹ್ಮಣರೆಲ್ಲ ಋಷಿಪುತ್ರರು. ಹಾಂಗಾಗಿ ಬ್ರಾಹ್ಮಣರೆಲ್ಲೋರು ಧರ್ಮ ಸಂಸ್ಕೃತಿಲಿದ್ದೊಂಡು ನೀತಿ ಧರ್ಮಂಗಳ ಸಮಾಜಕ್ಕೆ ಮಾರ್ಗದರ್ಶನ ಮಾಡುವ ಹೊಣೆಗಾರಿಕೆ ಅವಕ್ಕಿದ್ದು. ಈಗಾಣ ಕಾಲಲ್ಲಿ ಒಂದು ಸಂಸ್ಕೃತ ಶಬ್ದ ಬ್ರಾಹ್ಮಣ ಹುಡುಗನ ಬಾಯಿಲಿ ಬತ್ತಿಲ್ಲೆ, ವೇದ ಕಲಿತ್ತ ಮಕ್ಕಳ ಕಾಣ್ತದೇ ಅಪರೂಪ. ಎಲ್ಲ ಇಂಗ್ಳೀಶುಮಯ ಆಯಿದು. ಈಗಾಣ ಬ್ರಾಹ್ಮಣ, ದುಡ್ಡಿನ ಹಿಂದೆ ಹೋವ್ತಾ ಇದ್ದ. ಬ್ರಾಹ್ಮಣರೆಲ್ಲೋರು ಆತ್ಮವಿವೇಚನೆ ಮಾಡ್ಯೊಳೆಕಾದ ಕಾಲ ಬಯಿಂದು ಹೇಳಿ ಶ್ರೀಯುತ ಪಳ್ಳತ್ತಡ್ಕ ವಿಶ್ವೇಶ್ವರ ಭಟ್ಟ್ ಹೇಳಿದವು. ಮಂಗಳೂರು ಹವ್ಯಕ ಸಭಾ ಪ್ರತಿ ವರ್ಷವೂ ನೆಡೆಶೆಂಡು ಬತ್ತಾ ಇಪ್ಪ ಹಾಂಗೆ ಈ ಸರ್ತಿ ಒಕ್ಟೋಬರ್ ೨೭, ೨೦೧೩ರಂದು ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆಯುದೆ ವೈದಿಕ ಸನ್ಮಾನ ಕಾರ್ಯಕ್ರಮವುದೆ ನೆಡದತ್ತು. ಅದರಲ್ಲಿ ಶ್ರೀಯುತರಿಂಗೆ ಹವ್ಯಕ ಸಭೆಯವು ಸನ್ಮಾನ ಮಾಡಿದವು. ಕಾರ್ಯಕ್ರಮ ಶಕ್ತಿನಗರದ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಸಭಾಂಗಣಲ್ಲಿ ನೆಡದತ್ತು.
ಹವ್ಯಕ ಸಭಾಧ್ಯಕ್ಷ ಶ್ರೀ ಉಳ್ಳೋಡಿ ಗೋಪಾಲಕೃಷ್ಣ ಭಟ್ ದಂಪತಿಗೊ ವೇ.ಮೂ.ಕೊಡಿಪ್ಪಾಡಿ ನಾರಾಯಣ ಜೋಯಿಸರ ಪೌರೋಹಿತ್ಯಲ್ಲಿ ಪೂಜೆಯ ನೆಡಶಿಕೊಟ್ಟವು. ಹೆಮ್ಮಕ್ಕೊ ಲಲಿತಾ ಸಹಸ್ರನಾಮ/ಕುಂಕುಮಾರ್ಚನೆ ಮಾಡಿದವು. ವಿಷ್ಣು ಸಹಸ್ರನಾಮ ಪಾರಾಯಣ ನೆಡದತ್ತು. ಮಂಗಳಾರತಿ/ ಪೂಜೆ ಕಳುದ ಕೂಡ್ಳೆ ಸಭಾ ಕಾರ್ಯಕ್ರಮ ನೆಡದತ್ತು. ವೇದಘೋಷದ ಒಟ್ಟಿಂಗೆ ಕಾರ್ಯಕ್ರಮ ಸುರುಆತು. ಮರುವಳ ನಾರಾಯಣಣ್ಣ ಸ್ವಾಗತಿಸಿದವು. ದೇವಸ್ಥಾನದ ವ್ಯವಸ್ಥಾಪಕ, ಶ್ರೀ ಕಾನ ಕೃಷ್ಣಕುಮಾರ್ ಸನ್ಮಾನಿತರ ಪರಿಚಯ ಮಾಡಿದವು.
ಸನ್ಮಾನ ಸ್ವೀಕರುಸಿದ ವೇದ ವಿದ್ವಾಂಸ ಪಳ್ಳತ್ತಡ್ಕ ವಿಶ್ವೇಶ್ವರ ಭಟ್ ಮಾತನಾಡಿ ಬ್ರಾಹ್ಮಣ ಸಮಾಜದ ಬಗ್ಗೆ ನಾವೆಲ್ಲ ಎಂತ ಕೊಟ್ಟಿದು, ಎಷ್ಟು ಕೆಲಸ ಮಾಡ್ತಾ ಇದ್ದು ಹೇಳಿ ಆಲೋಚಿಸೆಕು. ನಮ್ಮ ಸಂಸ್ಕೃತಿಲಿ ವೇದವೊಂದೇ ನಿಜವಾದ ವಿದ್ಯೆ. ಉಳಿದೆಲ್ಲವೂ ಕಲೆಗೊ, ಅದರ ಆರು ಬೇಕಾರು ಕಲಿಯಲಕ್ಕು. ಆದರೆ ವೇದವಿದ್ಯೆಯ ಒಳುಸಿ ಅದರ ಮುಂದಾಣ ಪೀಳಿಗೆಗೆ ತೆಕ್ಕೊಂಡು ಹೋಪದು ನಮ್ಮ ಕೈಲಿದ್ದು. ಬ್ರಾಹ್ಮಣ ಸಮಾಜದ ಹಿತ ದೃಷ್ಟಿಂದ ವೇದಗಳ ಒಳುಶೆಳೆಕು. ಭಾರತೀಯ ಸಂಸ್ಕೃತಿಲಿ ಮಹಿಳೆಗೆ ಉನ್ನತ ಸ್ಥಾನ ಇದ್ದು. ಪಾಶ್ಚಾತ್ಯ ಸಂಸ್ಕೃತಿಲಿ ಹೆಮ್ಮಕ್ಕಳೆಲ್ಲೋರನ್ನು ಪುರುಷರು ಹೆಂಡತ್ತಿಯ ರೂಪಲ್ಲಿ ಕಂಡರೆ, ನಮ್ಮ ವೈದಿಕ ಧರ್ಮಲ್ಲಿ ಹೆಮ್ಮಕ್ಕೊಗೆ ಮಾತೃಸ್ಥಾನವ ಕೊಟ್ಟಿದವು. ಈ ಗೌರವವ ಮಹಿಳೆಯರು ಒಳುಶೆಳೆಕು. ಶ್ರೀ ಗುರುಗಳ ಶ್ರೀರಾಮಕಥೆಗೆ ಕೇವಲ ಮನೋರಂಜನೆಗೆ ಬೇಕಾಗಿ ಹೋವ್ತರ ಬದಲು, ರಾಮಾಯಣ ಕಥೆಲಿಪ್ಪ ಸೀತೆಯ ಚಾರಿತ್ರ್ಯ ಮೊದಲಾದ ಒಳ್ಳೆಯ ವಿಷಯಂಗಳ ಅರ್ಥ ಮಾಡ್ಯೊಳೆಕು. ಸ್ತ್ರೀಗೆ ಎಷ್ಟು ಗೌರವವ ನಾವು ಕೊಡ್ತಾ ಇದ್ದು, ಈ ಬಗ್ಗೆ ಮಕ್ಕಳಲ್ಲಿ ಹೇಳಿ. ನಯ ವಿನಯ, ಗೌರವ ಎಲ್ಲವುನ್ನುದೆ ಅವು ಕಲಿಯೆಕು. ವೇದದ ಬಗ್ಗೆ ಮಕ್ಕೊಗೆ ಪ್ರೀತಿ ಕಡಮ್ಮೆ ಆದು, ಹಾಂಗಪ್ಪಲಾಗ, ಒಟ್ಟಿಂಗೆ ನಮ್ಮ ಸಂಸ್ಕೃತಿ ಬಗ್ಗೆ ಅವಕ್ಕೆ ಅಭಿಮಾನ ಬರೆಕು, ನಮ್ಮ ಸಂಸ್ಕೃತಿಯ ಒಳುಶಲೆ ಅವಕ್ಕೆ ಎಲ್ಲೋರು ಪ್ರೇರಣೆ ಕೊಡೆಕು ಹೇಳಿ ಅವು ಚುರುಕು ಮುಟ್ಟುಸಿದವು.
ಭಸ್ಮ ಹಾಕುವ ಹುಡುಗ, ಸಂಧ್ಯಾವಂದನೆ ಮಾಡುವ ಹುಡುಗನ ಆನು ಮದುವೆ ಆಗೆ ಹೇಳಿ ಬ್ರಾಹ್ಮಣ ವಧುಗೊ ತಿರಸ್ಕರಿಸುತ್ತಾ ಇಪ್ಪದು ಕಾಂಬಗ ನಮ್ಮ ಸಮಾಜ ಎಷ್ಟು ಕೆಳಮಟ್ಟಕ್ಕೆ ಇಳುದ್ದು ಹೇಳಿ ಕಾಣ್ತು. ಈಗಾಣ ಕಾಲಲ್ಲಿ ಅಪ್ಪ-ಅಬ್ಬೆ ಒಟ್ಟಿಂಗೆ ಮಕ್ಕೊ ಇಲ್ಲೆ, ಮಕ್ಕಳ ಒಟ್ಟಿಂಗೆ ಅಪ್ಪ-ಅಬ್ಬೆ ಇಲ್ಲೆ, ವೃದ್ಧಾಶ್ರಮಂಗೊ ಹೆಚ್ಚುತ್ತಾ ಇದ್ದು. ಈ ಬಗ್ಗೆ ಯುದೆ ಎಲ್ಲೋರು ಆಲೋಚನೆ ಮಾಡೆಕಾದು. ಮಕ್ಕೊ ಮತಾಂತರ ಆವ್ತಾ ಇಪ್ಪ ವಿಷಯಂಗಳನ್ನು ಕೇಳುವಗ ಬೇಜಾರಾವ್ತು. ಅವಕ್ಕೆ ಸರಿಯಾದ ಸಂಸ್ಕಾರ ನೀಡಿ.
ಇಂದು ಇಲ್ಲಿ ಹವ್ಯಕ ಸಭೆ ಮಾಡಿದ ಸನ್ಮಾನ,ಸಮರ್ಪಣೆ ಎನಗಲ್ಲ, ಇದು ವೇದಕ್ಕೆ. ಇದರಿಂದ ಎನಗೆ ಸಂತೋಷ ಆವ್ತಾ ಇದ್ದು, ಅಭಿಮಾನ ಆವ್ತಾ ಇದ್ದು, ಅಹಂಕಾರ ಆ”ಲ್ಲೆ. ನಮ್ಮ ಬ್ರಾಹ್ಮಣ ಸಮಾಜ, ನಮ್ಮ ಸಂಸ್ಕೃತಿ ಒಳುದರೆ ಮಾಂತ್ರ ಹಿಂದು ಧರ್ಮ ಒಳಿಗು, ನಮ್ಮ ದೇಶ ಒಳಿಗು ಹೇಳಿ ಅವು ಹೇಳಿದವು.
ಸಭಾಧ್ಯಕ್ಷ ಶ್ರೀ ಯು.ಜಿ.ಕೆ.ಭಟ್ ಮಾತನಾಡಿ, ಸನ್ಮಾನಿತರು ತುಂಬಾ ಜೆನ ಶಿಷ್ಯ ವೃಂದವ ತಯಾರು ಮಾಡಿ ನಮ್ಮ ಸಮಾಜಕ್ಕೆ ಕೊಟ್ಟಿದವು ಹೇಳಿ ಅವರ ಅಭಿನಂದಿಸಿದವು.
ಕಾರ್ಯದರ್ಶಿ ಮಾಂಬಾಡಿ ವೇಣುಗೋಪಾಲಣ್ಣ ಕಾರ್ಯಕ್ರಮ ನಿರೂಪಿಸಿ ಧನ್ಯವಾದ ಅರ್ಪಿಸಿದವು. ಸ್ಟೇಜಿಲ್ಲಿ ವೇ.ಮೂ.ಕೊಡಿಪ್ಪಾಡಿ ನಾರಾಯಣ ಜೋಸರುದೆ, ಸಭಾದ ಉಪಾಧ್ಯಕ್ಷ ಮೆದು ತಿರುಮಲೇಶ್ವರ ಭಟ್ ಉಪಸ್ಥಿತರಿದ್ದಿದ್ದವು. ಕಾರ್ಯಕ್ರಮಲ್ಲಿ ಎಂಟುನೂರಕ್ಕಿಂತಲೂ ಮೇಲೆ ಹವ್ಯಕ ಬಂಧುಗೊ ಭಾಗವಹಿಸಿದವು, ಕಡೆಂಗೆ ಪ್ರಸಾದ ಭೋಜನವುದೆ ಅಚ್ಚುಕಟ್ಟಾಗಿ ನೆಡದತ್ತು.
ಎನಗೆ ಗಾಯತ್ರಿ ಮಂತ್ರವ ಸ್ವರಬದ್ಧವಾಗಿ ಕಲಿಸಿದ ಗುರುಗೊ,ಪಳ್ಳತ್ತಡ್ಕ ವಿಶ್ವೇಶ್ವರ ಭಟ್ರ(ಎನ್ನ ಕುಟುಂಬಸ್ತರೂ ಕೂಡ) ಕಂಡು ಮಾತನಾಡಿ ಖುಷಿ ಆತು,ಅವರ “ನಿಷ್ಠುರ”ಮಾತುಗಳ ಕೇಳಿದೆ,”ವೇದವೊಂದೇ ವಿದ್ಯೆ,ಉಳಿದದ್ದೆಲ್ಲವೂ ಕಲೆ”ಹೇಳುವ ಮಾತು ಗಮನಾರ್ಹ..ಇಲ್ಲಿ ಪ್ರಸ್ತುತ ಪಡಿಸಿದ ಬೊಳುಂಬು ಗೋಪಾಲ ಭಾವಂಗೆ ಧನ್ಯವಾದಂಗೊ..
ಕೊಡೆಯಾಲದ ಸುದ್ದಿ ಕೇಳಿ ಕೊಷಿ ಆತು
programme olledagi kaluddu
adara bayalilli hakida bolumbinannange dhanyavadango
ಲಾಯ್ಕ ಆಯಿದು.
ಒಳ್ಳೆ ಶುದ್ದಿ-ಒಳ್ಳೆ ಕಾರ್ಯಕ್ರಮ 🙂
ಇನ್ನೂ ಹೀಂಗಿಪ್ಪ ಕಾರ್ಯಕ್ರಮಂಗೊ ನಡೆದು ಬತ್ತಾ ಇರಳಿ ಹೇಳುದು ಆಶಯ 🙂
—
ಪಳ್ಳತ್ತಡ್ಕ ವೇ।ಮೂ ವಿಶ್ವೇಶ್ವರ ಭಟ್ಟರ ಕೆಲವು ಮಾತುಗೊಕ್ಕೆ ಪೂರಕವಾಗಿ ಎನ್ನ ಅಭಿಪ್ರಾಯ ಹೇಳುಲೆ ಮನಸ್ಸಾವುತ್ತು.
{ಭಸ್ಮ ಹಾಕುವ……..ನೀಡಿ.} – ಹೀಂಗಿಪ್ಪ ಸ್ಥಿತಿ ನವಗೆ ನಾವೇ ತಂದುಗೊಂಡದೋ ಕಾಂಬದೆನಗೆ!
ನಮ್ಮ ಮಾಣಿಯಂಗೊ ಸಂಸ್ಕಾರವ ಬಿಟ್ಟದೇ, ನಮ್ಮ ಕೂಸುಗೊ ಬೇರೆ ಜಾತಿಯವರ ಒಟ್ಟಿಂಗೆ ಹೋಪ ಹಾಂಗೆ ಅಪ್ಪಲೆ ಕಾರಣ! 🙁 ಹೇಳಿ ಎನ್ನ ಮನಸ್ಸು ಹೇಳುತ್ತು.
ಬೇರೆ ಧರ್ಮದವಕ್ಕೆ ಅವರ ಧರ್ಮದ ಮೇಲೆ ಇಪ್ಪ ಹಾಂಗೆ ನಮ್ಮವಕ್ಕೆ ನಮ್ಮದರ ಮೇಲೆ ಶ್ರಧ್ಧೆ ಇಲ್ಲೆ! 🙁
-ಉದಾಹರಣೆಗೆ ಹೇಳ್ತರೆ, ನಿಜವಾಗಿ ನೋಡ್ತರೆ ನವಗೆ ಅದೆಷ್ಟೇ ಕೊಳಕ್ಕು ಕಂಡರೂ-ಉಪದ್ರ ಅಕ್ಕು ಹೇಳಿ ಗ್ರೇಶಿಯರೂ ಬ್ಯಾರಿಗೊ ಗೆಡ್ಡ ಬಿಡುದು ನಿಲ್ಸುಗೋ? ಅವ್ವು ತಪ್ಪದ್ದೆ ಐದು ಹೊತ್ತು ನಮಾಜು ಮಾಡ್ತವು, ಕ್ರಿಶ್ಚಿಯನ್ನರು ಪ್ರತಿ ವಾರ ತಪ್ಪದ್ದೆ ಪಾದ್ರಿಗಳತ್ರೆ ಹೋಗಿ ಮಾಡಿದ ತಪ್ಪೆಲ್ಲ ಒಪ್ಪಿಯೊಳ್ತವು.
ನಮ್ಮಲ್ಲಿಯೂ ಸಾಂಪ್ರದಾಯಿಕ ಉಡುಗೆಗೊ ಇದ್ದು – ಅದು ನಮ್ಮ ಶರೀರಕ್ಕೆ, ಈ ಹವಾಮಾನಕ್ಕೆ ಹೇಳಿ ಮಾಡುಸಿದ ಹಾಂಗೆ ಇದ್ದು. ಪ್ರತಿ ಸರ್ತಿ ಜೆಪ ಮಾಡುವಾಗ ‘ಕಾಯೇನ ವಾಚಾ..’ ಹೇಳ್ಲಿದ್ದು – ಅದು ನಮ್ಮ ಪವಿತ್ರ ಮಾಡುದು ಆಸ್ತಿಕರ ಅನುಭವಕ್ಕೆ ಬತ್ತು.
ಆದರೆ ನಮ್ಮಲ್ಲಿಪ್ಪಒಳ್ಳೆಯ ವಿಷಯಂಗೊ ಒಳ್ಳೆದು ಹೇಳಿ ನವಗೇ ಗೊಂತಿಲ್ಲದ್ದ ಹಾಂಗೆ ಆಯಿದು.
ಹಾಂಗಿಪ್ಪಗ ನಾವು ಇನ್ನೊಬ್ಬರ ಹಿಡುದು ಮಡುಗುದು ಹೇಂಗೆ?
ಬೇರೆ ಜಾತಿಯ ಮಾಣಿಯಂಗಳಷ್ಟು ನಮ್ಮವ್ವು ಎಲ್ಲರೆದುರು ಚುರ್ಕು ಇಲ್ಲೆ! 🙁
-ಉದಾಹರಣೆಗೆ, ನಮ್ಮವ್ವು ಹೆಚ್ಚಾಗಿ ಚುರ್ಕು ಇಪ್ಪದು ಇನ್ನೊಬ್ಬನ ಡೋಂಗಿ ಮಾಡುದರಲ್ಲಿ, ಕಾಲು ಎಳವದರಲ್ಲಿ ಮತ್ತೆ ಹಿಂದಂದ ಮಾತಾಡುದರಲ್ಲಿ. ಆದರೆ ಎಲ್ಲರೆದುರು ನಮ್ಮತವನ, ಅದರಲ್ಲಿಪ್ಪ ಒಳ್ಳೆದರ ಹೇಳುದಾಗಲೀ, ಸಭೆಲಿ ಮುಂದೆ ಹೋಗಿ ನಿಂದು ಮಾತಾಡುವ ಧೈರ್ಯ ಆಗಲೀ, ಜ್ನಾನ ಆಗಲೀ, ವಿದ್ವತ್ತು ಆಗಲೀ ಈಗಾಣ ಮಾಣಿಯಂಗೊಕ್ಕೆ ಒಳುದ ಜಾತಿಯೋರಿಂಗೆ ಹೋಲುಸಿರೆ ಕಮ್ಮಿಯೇ.
ಇನ್ನೊಂದು ಕೂಸಿನ ಮಾತಾಡ್ಸುದರಲ್ಲಿ, ಎಲ್ಲರೆದುರು ಜಿಗ್ಗ ಆಗಿ ಕೆಲಸ ತೆಗವದರಲ್ಲಿ ನಮ್ಮವ್ವು ಹುಶಾರಿ ಸಾಲ ಹೇಳಿಯೇ ಹೇಳೆಕಷ್ಟೇ!
ಹಾಂಗಿಪ್ಪಗ ನಮ್ಮ ಕೂಸುಗೊಕ್ಕೆ ನಮ್ಮ ಮಾಣಿಯಂಗ ಕಾಂಬದು ಎಲ್ಲಿಂದ?
ಕೂಸುಗೊಕ್ಕೆ ತಕ್ಕಕೆ ಮಾಣಿಯಂಗ update ಆಯಿದವಿಲ್ಲೆ! 🙁
-ಉದಾಹರಣೆಗೆ, ಒಂದೊಂದೇ ಮಕ್ಕ್ಕೊ ಇಪ್ಪ ಕಾಲ ಈಗ, ಒಂದೇ ಕೂಸು ಇಪ್ಪಲ್ಲಿ ಅಥವಾ ಹೆಚ್ಚಾಗಿ ಎಲ್ಲಾ ಕಡೆಯೂ – ಕೂಸುಗೊಕ್ಕೆ ‘ಮಾಣಿಯಂಗೊ ಮಾಡಿಂಡಿದ್ದ’ ಎಲ್ಲಾ ಕೆಲಸವನ್ನೂ ಹೇಳಿಕೊಡ್ತವು ಅಪ್ಪಂದ್ರು. ಬೈಕು ಬಿಡುದು, ಕಾರು ಓಡ್ಸುದು, ಬೇಂಕಿಂಗೆ ಹೋಪದು… ಎಲ್ಲ ಒಳ್ಳೆದೇ… ಮಾಡೆಕಾದ್ದೇ.. ಆದರೆ ಅದರೊಟ್ಟಿಂಗೇ, ಮಾಣಿಯಂಗೊಕ್ಕೆ ಒಸ್ತ್ರ ಒಗವಲೆ, ಪಾತ್ರೆ ತೊಳವಲೆ ಅಡಿಗೆ ಮಾಡ್ಲೆ ಹೇಳಿಕೊಟ್ಟಿದೋ? ಇವ° ಮಾಣಿ ಕೋಲೇಜಿಂದ ಬಂದು, ಸೋಪಲ್ಲಿ ಎರಾಗಿ ಬಿದ್ದುಗೊಂಡು “ಅಬ್ಬೇ ನೀಈಈಈರೂಊಊಊಊ” ಹೇಳಿರೆ ಎಲ್ಲ ಕೈಗೆ ಹಿಡಿಶಿ ಆಯೆಕಾವುತ್ತು. ಕುಡುದ ಗ್ಲಾಸನ್ನೂ ಅಲ್ಲೇ ಮಡುಗಿ ಹೋಕು ಪುಣ್ಯಾತ್ಮ!
ಹೀಂಗಿಪ್ಪ ಎರಡು “ಗಂಡು ತಲೆ” ಒಂದಕ್ಕೊಂದು ಆಕರ್ಶಿತ ಅಪ್ಪಲಿದ್ದೋ ಏವತ್ತಿಂಗಾರು?
ನಮ್ಮ ಮಾಣಿಯಂಗಳ ಸರಿ ಮಾಡಿರೇ, ಅವಕ್ಕೆ ಸಂಸ್ಕಾರ ಕೊಟ್ಟರೇ ನಮ್ಮ ಸಮಾಜ ಒಳಿಗಷ್ಟೇ ಹೇಳಿ ಮಾಣಿಗೆ ಕಾಂಬದು.
—
ಮಾಣಿಗೆ ಕಂಡದರಲ್ಲಿ ತಪ್ಪಿಕ್ಕು. ತಪ್ಪಿದರೆ ‘ನಮ್ಮ ಮಾಣಿ’ ಹೇಳಿ ಪ್ರೀತಿಂದ ತಿದ್ದಿ.
ಸರಿ ಇಪ್ಪಲೂ ಸಾಕು ಕಂಡ್ರೆ, ಬೈಲಿಲ್ಲಿ ವಿದ್ವಜ್ಜನರು ಇದ್ದವು, ಇದರ ಬಗ್ಗೆ ನೋಡಿಗೊಂಗು ಹೇಳುವ ನಂಬಿಕೆ ಎನಗೆ.
ಹರೇ ರಾಮ.
ಕೊಠೆಂಙನೆ ಆಯ್ದನ್ನೇ !
ಶುದ್ದಿ ವಿವರ ಕೊಟ್ಟ ಬೊಳುಂಬು ಮಾವಂಗೆ ಹರೇ ರಾಮ. ಪಟಂಗೆ ಲಾಯಕ ಬೈಂದು.
ಒಪ್ಪ ಲೇಖನ.ಆದರೆ ತಿಂಗಳು ಮಾಂತ್ರ ಬದಲಿದ್ದನ್ನೆ?ನವಂಬರ್ ೨೭ ಹೇದು ಆಯಿದನ್ನೆ?
ಮಂಗಳೂರಿಲ್ಲಿ ಪ್ರತಿ ವರ್ಷ ಸತ್ಯನಾರಾಯಣ ಪೂಜೆ, ಮತ್ತೆ ವೈದಿಕ ಸನ್ಮಾನ ಕಾರ್ಯಕ್ರಮವ ಹವ್ಯಕ ಸಮಾಜ ನಡೆಶಿಗೊಂಡು ಬತ್ತಾ ಇದ್ದು. ನಮ್ಮ ಸಮಾಜ ದ ಹೆಚ್ಚಿನವು ಭಾಗವಹಿಸುವ ಈ ಕಾರ್ಯಕ್ರಮ ತುಂಬಾ ಅಚ್ಚುಕಟ್ಟಾಗಿ ಮೂಡಿ ಬತ್ತಾ ಇಪ್ಪದು ಸಂತೋಷದ ವಿಶಯ.
ಈ ಸರ್ತಿ ಪಳ್ಳತ್ತಡ್ಕ ವೇ।ಮೂ ವಿಶ್ವೇಶ್ವರ ಭಟ್ಟರ ಮಾತು ಕೇಳೆಕ್ಕು ಹೇಳ್ತ ಆಶೆ ಇತ್ತಿದ್ದು. ಕಾರಣಾಂತರಂದ ಭಾಗವಹಿಸಲೆ ಎಡಿಗಾಯಿದಿಲ್ಲೆ. ವಿವರ ಒದಗಿಸಿದ ಬೊಳುಂಬು ಮಾವಂಗೆ ಧನ್ಯವಾದಂಗೊ.
ಇವು ಮಾತಾಡಿದ್ದರ ಧ್ವನಿಮುದ್ರಿಕೆ ಇದ್ದರೆ ಒದಗುಸೆಕ್ಕು ಹೇಳಿ ವಿನಂತಿ