- ಬಲೀಂದ್ರಪೂಜೆ – (ಸರಳ ಸಂಕ್ಷಿಪ್ತ ವಿಧಾನ) - October 30, 2020
- ಗೋಪೂಜೆ – (ಸರಳ ಸಂಕ್ಷಿಪ್ತ ವಿಧಾನ) - October 30, 2020
- ತೊಳಶಿ ಪೂಜೆ – ಸರಳ ಸಂಕ್ಷಿಪ್ತ ವಿಧಾನ - October 30, 2020
(ಹೊತ್ತೋಪಗಂಗೆ ಸಾಯಂ ಅಗ್ನಿಕಾರ್ಯಂ ಹೇದು ಹೇದುಗೊಳ್ಳೆಕು, ಉದಿಯಪ್ಪಂಗೆ ಪ್ರಾತರಗ್ನಿಕಾರ್ಯಂ ಹೇದು ಹೇದುಗೊಳ್ಳೆಕು. ಮಿಂದು ಶುಚಿರ್ಭೂತನಾಗಿ ಸಂಧ್ಯಾವಂದನೆ ಮಾಡಿಕ್ಕಿ ಅಗ್ನಿಕಾರ್ಯ ಮಾಡೆಕು. ಮಂತ್ರ ಹೇಳ್ಳೆ ಬಾರದ್ದವು ಇಟಾಲಿಕ್ಸಿಲ್ಲಿ ಇಪ್ಪದರ ಹೇಳದ್ದೆ ತಂತ್ರವ ಮಾಡಿಗೊಂಡು ಮುಂದುವರುಸಲಕ್ಕು ಮಂತ್ರ ಕಲ್ತಪ್ಪನ್ನಾರಿಕಂಗೆ. ಹೀಂಗೆ ಮಾಡಿರೆ ಅಕ್ಕೋದು ಕುಲಪುರೋಹಿತರತ್ತರಂದ ಒಪ್ಪಿಗೆ ಪಡಕ್ಕೊಳ್ಳೆಕು. ಅವರ ಸೂಚನೆಯಂತೆ ನಡಕ್ಕೊಳ್ಳೆಕು )
ಆಚಮ್ಯ
ಶ್ರೀ ಗುರುಭ್ಯೋ ನಮಃ | ಶ್ರೀ ಮಹಾಗಣಪತಯೇ ನಮಃ
ಕವುಳಿಗ್ಗೆ ತುಳಸಿಹೂಗಂಧಾಕ್ಷತೆಯ ಹಾಕೆಕು –
ಗಂಗೇ ಚ ಯಮುನೇ ಚೈವ ಗೋದಾವರಿ ಸರಸ್ವತಿ |
ನರ್ಮದೇ ಸಿಂಧು ಕಾವೇರಿ ಜಲೇಸ್ಮಿನ್ ಸನ್ನಿಧಿಂ ಕುರು ||
ಉಗ್ನಿ ಪ್ರತಿಷ್ಠಾಪನೆ –
ಓಂ ಉಪಾವರೋಹ ಜಾತವೇದಃ ಪುನಸ್ತ್ವಂ
ದೇವೇಭ್ಯೋ ಹವ್ಯಂ ವಹನಃ ಪ್ರಜಾನನ್ |
ಆಯುಃ ಪ್ರಜಾಗ್ಂ ರಯಿಮಸ್ಮಾಸುಧೇ
ಹ್ಯಜಸ್ರೋ ದೀದಿಹಿ ನೋ ದುರೋಣೇ ||
ಓಂ ಭೂರ್ಭುವಸ್ಸುವರೋಂ ಅಗ್ನಿಂ ಪ್ರತಿಷ್ಠಾಪಯಾಮಿ | (ಅಗ್ನಿ ಪ್ರತಿಷ್ಠಾಪನೆ ಮಾಡಿ ಹೊತ್ತುಸೆಕು)
ಸಂಕಲ್ಪ – ಎಡದಕೈಲಿ ಅಕ್ಷತೆ ನೀರು ಹಾಕಿ ಬಲದಕೈ ಮುಚ್ಚಿ ಬಲದ ತೊಡೆಯ ಮೇಗೆ ಮಡಿಕ್ಕೊಂಡು ಮುಂದಾಣ ಸಂಕಲ್ಪ ಮಾಡುವದು.
ಮಮೋಪಾತ್ತದುರಿತಕ್ಷಯದ್ವಾರಾ ಶ್ರೀಪರಮೇಶ್ವರಪ್ರೀತ್ಯರ್ಥಂ (ಸಾಯಂ) ಪ್ರಾತಃ ಅಗ್ನಿಕಾರ್ಯಹೋಮಂ ಕರಿಷ್ಯೇ || (ಎರಡು ಅಕ್ಕಿಕಾಳು ಹೋಮಕ್ಕೆ ಹಾಕುವದು, ಕೈಮುಕ್ಕುಂಬದು)
ಓಂ ಸ್ವಾಹಾ – ಹೇಳ್ಯೊಂಡು ಒಂದು ಶಾಕೋಲು/ಸಮಿತ್ತು ಅಗ್ನಿಗೆ ಹಾಕಿ ಕೈಮುಕ್ಕೊಂಬದು –
ಓಂ ಜುಷಸ್ವನಃ ಸಮಿಧಮಗ್ನೇ ಅದ್ಯಶೋಚಾ ಬೃಹದ್ಯಜತಂ ಧೂಮ ಮೃಣ್ವನ್ನ್ | ಉಪಸ್ಪೃಶ ದಿವ್ಯಗ್ಂ ಸಾನುಸ್ತೂಪೈಃ ಸಗ್ಂ ರಶ್ಮಿಭಿಸ್ತತನಃ ಸೂರ್ಯಸ್ಯ || (ಕೈಮುಕ್ಕೊಂಡು ಹೇಳಿಕ್ಕಿ,)
ನೀರು ಹಾರ್ಸೆಕು –
ಅದಿತೇsನುಮನ್ಯಸ್ವ (ಹೋಮದ (ತನ್ನ) ಬಲದೊಡೆಲಿ ಪಶ್ಚಿಮಂದ ಪೂರ್ವಕ್ಕೆ)
ಅನುಮತೇsನುಮನ್ಯಸ್ವ (ಹೋಮದ ಪಶ್ಚಿಮಲ್ಲಿ – ತನ್ನ ಎದುರೆ ಬಲತ್ತಿಂದ ಎಡತ್ತಿಂಗೆ)
ಸರಸ್ವತೇsನುಮನ್ಯಸ್ವ ( ಹೋಮದ (ತನ್ನ) ಎಡದೊಡೆಲಿ ಪಶ್ಚಿಮಂದ ಪೂರ್ವಕ್ಕೆ)
ದೇವ ಸವಿತಃ ಪ್ರಸುವ ( ಹೋಮದ ಎದುರೆ ಪೂರ್ವಭಾಗಲ್ಲಿ ಎಡತ್ತಿಂದ ಬಲತ್ತಿಂಗೆ)
ಹೋಮದ ಪೂರ್ವಭಾಗಂದ ತೊಡಗಿ ಎಂಟು ಹೊಡೆಂಗೆ ಗಂಧಾಕ್ಷತೆಪುಷ್ಪಂಗಳ ಹಾಕಿ ಅಲಂಕರುಸುದು-
ಓಂ ಅಗ್ನಯೇ ನಮಃ || (ಪೂರ್ವಲ್ಲಿ)
ಓಂ ಜಾತವೇದಸೇ ನಮಃ || (ಆಗ್ನೇಯಲ್ಲಿ)
ಓಂ ಸಹೋಜಸೇ ನಮಃ || (ದಕ್ಷಿಣಲ್ಲಿ)
ಓಂ ಅಜಿರಾಪ್ರಭವೇ ನಮಃ || (ನೈಋತ್ಯಲ್ಲಿ)
ಓಂ ವೈಶ್ವಾನರಾಯ ನಮಃ || (ಪಶ್ಚಿಮಲ್ಲಿ)
ಓಂ ನರ್ಯಾಪಸೇ ನಮಃ || (ವಾಯವ್ಯಲ್ಲಿ)
ಓಂ ಪಂಕ್ತಿರಾಧಸೇ ನಮಃ || (ಉತ್ತರಲ್ಲಿ)
ಓಂ ವಿಸರ್ಪಿಣೇ ನಮಃ || (ಈಶಾನ್ಯಲ್ಲಿ)
ಯಜ್ಞೇಶ್ವರಾಯ ನಮಃ | ಗಂಧಪುಷ್ಪಾಕ್ಷತಾನ್ ಸಮರ್ಪಯಾಮಿ ||
ಕೈಮುಕ್ಕೊಂಬದು –
ಅಗ್ನಿಂ ಪ್ರಜ್ವಲಿತಂ ವಂದೇ ಜಾತವೇದಂ ಹುತಾಶನಂ
ಸುವರ್ಣವರ್ಣಮನಲಂ ಸಮಿದ್ಧಂ ವಿಶ್ವತೋಮುಖಂ ||
ನಾಕು ಶಾಕೋಲು (ದರ್ಭೆ) ತೆಕ್ಕೊಂಡು ಒಂದೊಂದೇ ಮಂತ್ರ ಹೇಳಿ ಒಂದೊಂದಾಗಿ ಹಾಕುವದು –
ಓಂ ಭೂಃ ಸ್ವಾಹಾ , ಅಗ್ನಯ ಇದಂ ನ ಮಮ |
ಓಂ ಭುವಃ ಸ್ವಾಹಾ , ವಾಯವ ಇದಂ ನ ಮಮ |
ಓಗ್ಂ ಸುವಃ ಸ್ವಾಹಾ, ಸೂರ್ಯಾಯ ಇದಂ ನ ಮಮ |
ಓಂ ಭೂರ್ಭುವಃ ಸುವಃ ಸ್ವಾಹಾ , ಪ್ರಜಾಪತಯ ಇದಂ ನ ಮಮ ||
ಓಂ ಸ್ವಾಹಾ – ಹೇಳ್ಯೊಂಡು ಒಂದು ಶಾಕೋಲು/ಸಮಿತ್ತು ಅಗ್ನಿಗೆ ಹಾಕಿ ಕೈಮುಕ್ಕೊಂಬದು-
ಓಂ ಜುಷಸ್ವನಃ ಸಮಿಧಮಗ್ನೇ ಅದ್ಯಶೋಚಾ ಬೃಹದ್ಯಜತಂ ಧೂಮ ಮೃಣ್ವನ್ನ್ | ಉಪಸ್ಪೃಶ ದಿವ್ಯಗ್ಂ ಸಾನುಸ್ತೂಪೈಃ ಸಗ್ಂ ರಶ್ಮಿಭಿಸ್ತತನಃ ಸೂರ್ಯಸ್ಯ || (ಕೈಮುಕ್ಕೊಂಡು ಹೇಳಿಕ್ಕಿ,)
ಆಗಾಣಾಂಗೆ ನೀರು ಹಾರ್ಸುದು –
ಅದಿತೇsನ್ವ ಮಗ್ಗ್ ಸ್ಥಾಃ (ಹೋಮದ (ತನ್ನ) ಬಲದೊಡೆಲಿ ಪಶ್ಚಿಮಂದ ಪೂರ್ವಕ್ಕೆ)
ಅನುಮತೇsನ್ವ ಮಗ್ಗ್ ಸ್ಥಾಃ (ಹೋಮದ ಪಶ್ಚಿಮಲ್ಲಿ – ತನ್ನ ಎದುರೆ ಬಲತ್ತಿಂದ ಎಡತ್ತಿಂಗೆ)
ಸರಸ್ವತೇsನ್ವ ಮಗ್ಗ್ ಸ್ಥಾಃ ( ಹೋಮದ (ತನ್ನ) ಎಡದೊಡೆಲಿ ಪಶ್ಚಿಮಂದ ಪೂರ್ವಕ್ಕೆ)
ದೇವ ಸವಿತಃ ಪ್ರಾಸಾವೀಃ ( ಹೋಮದ ಎದುರೆ ಪೂರ್ವಭಾಗಲ್ಲಿ ಎಡತ್ತಿಂದ ಬಲತ್ತಿಂಗೆ)
ಎದ್ದು ನಿಂದು ಕೈ ಮುಕ್ಕೊಂಬದು –
ಓಂ ಯತ್ತೇ ಅಗ್ನೇ ತೇಜಸ್ತೇನಾಹಂ ತೇಜಸ್ವೀ ಭೂಯಾಸಂ
ಯತ್ತೇ ಅಗ್ನೇ ವರ್ಚಸ್ತೇನಾಹಂ ವರ್ಚಸ್ವೀ ಭೂಯಾಸಂ
ಯತ್ತೇ ಅಗ್ನೇ ಹರಸ್ತೇನಾಹಗ್ಂ ಹರಸ್ವೀ ಭೂಯಾಸಂ
ಹೋಮಕ್ಕೆ ಕೈ ತೋರ್ಸಿ ಎದಗೆ ಮುಟ್ಟಿಸಿಗೊಂಬದು –
ಮಯಿ ಮೇಧಾಂ ಮಯಿ ಪ್ರಜಾಂ ಮಯ್ಯಗ್ನಿಸ್ತೇಜೋ ದಧಾತು
ಮಯಿ ಮೇಧಾಂ ಮಯಿ ಪ್ರಜಾಂ ಮಯೀಂದ್ರ ಇಂದ್ರಿಯಂ ದಧಾತು
ಮಯಿ ಮೇಧಾಂ ಮಯಿ ಪ್ರಜಾಂ ಮಯಿ ಸೂರ್ಯೋ ಭ್ರಾಜೋ ದಧಾತು ||
ಕೂದುಗೊಂಡು ಹೋಮದ ಮೂಡೊಡೆಂದ ರಜ ಹುತ ಭಸ್ಮವ ತೆಕ್ಕೊಂಡು –
ಓಂ ಮಾನಸ್ತೋಕೇ ತನಯೇ ಮಾನ ಆಯುಷಿ ಮಾನೋ ಗೋಷು ಮಾನೋ ಅಶ್ವೇಷು ರೀರಿಷಃ | ವೀರಾನ್ಮಾನೋ ರುದ್ರ ಭಾಮಿತೋsವಧೀರ್ಹವಿಷ್ಮಂತೋ ನಮಸಾ ವಿಧೇಮ ತೇ ||
ಓಜೋಸಿ (ಲಲಾಟೆಗೆ ಬೊಟ್ಟು ಹಚ್ಚಿಗೊಂಬದು)
ಸಹೋಸಿ (ಕಂಠಕ್ಕೆ)
ಬಲಮಸಿ (ದಕ್ಷಿಣಬಾಹುಮೂಲಗೆ)
ಭ್ರಾಜೋಸಿ (ಕಂಠಹಿಂದೊಡೆಂಗೆ)
ದೇವಾನಾಂ ಧಾಮ ನಾಮಾಸಿ (ಹೊಕ್ಳಿಂಗೆ)
ವಿಶ್ವಮಸಿ ವಿಶ್ವಾಯುಃ (ಎದಗೆ)
ಸರ್ವಮಸಿ ಸರ್ವಾಯುಃ (ತಲಗೆ)
ಅಭಿಭೂರೋಂ (ಜೊಟ್ಟಿಂಗೆ)
ಕೈ ಮುಕ್ಕೊಂಬದು –
ಮಂತ್ರಹೀನಂ ಕ್ರಿಯಾಹೀನಂ ಭಕ್ತಿಹೀನಂ ಹುತಾಶನ
ಯದ್ದುತಂ ತು ಮಯಾ ದೇವ ಪರಿಪೂರ್ಣಂ ತದಸ್ತು ತೇ ||
ಅಜ್ಞಾನಾದ್ವಾ ಪ್ರಮಾದಾದ್ವಾ ವೈಕಲ್ಯಾತ್ಸಾಧನಸ್ಯ ವಾ
ಯನ್ಯೂನಮತಿರಿಕ್ತಂ ಚ ತತ್ಸರ್ವಂ ಕ್ಷಂತುಮರ್ಹಸಿ ||
ಶ್ರದ್ಧಾಂ ಮೇಧಾಂ ಯಶಃ ಪ್ರಜ್ಞಾಂ ವಿದ್ಯಾಂ ಬುದ್ಧಿಂ ಶ್ರಿಯಂ ಬಲಂ
ಆಯುಷ್ಯಂ ತೇಜ ಆರೋಗ್ಯಂ ದೇಹಿ ಮೇ ಹವ್ಯವಾಹನ ||
ಅನ್ಯಥಾ ಶರಣಂ ನಾಸ್ತಿ ತ್ವಮೇವ ಶರಣಂ ಮಮ
ತಸ್ಮಾತ್ಕಾರುಣ್ಯ ಭಾವೇನ ರಕ್ಷ ರಕ್ಷ ಹುತಾಶನ ||
ಗೋತ್ರಪ್ರವರ ಹೇಳಿ ಅಭಿವಾದನೆ ಮಾಡಿಗೊಂಬದು –
ಶ್ರೀಮದ್ಯಜುಶ್ಶಾಖಾ ಬೋಧಾಯನ ಸೂತ್ರಾನ್ವಿತ ………… ……………….. ಗೋತ್ರೋತ್ಪನ್ನಃ ………… ಶರ್ಮಾsಹಮಸ್ಮಿ , ಭೋ ಅಭಿವಾದಯೇ ||
ಬ್ರಹ್ಮಾರ್ಪಣ –
ಅನೇನ (ಸಾಯಂ) ಪ್ರಾತಃ ಅಗ್ನಿಕಾರ್ಯಹೋಮಕರ್ಮಣಾ ಶ್ರೀ ಪರಮೇಶ್ವರಃ ಪ್ರೀಯತಾಂ | ಓಂ ತತ್ಸತ್ || (ಅಕ್ಕಿಕಾಳು ನೀರು ಬಿಟ್ಟು ತಟ್ಟಗೆ ಬಿಡುವದು )
ಅಗ್ನಿಯ ಆತ್ಮಲ್ಲಿ ಆರೋಪಿಸಿಗೊಂಬದು – ಅಗ್ನಿಗೆ ಅಂಜಲಿಕರವ ತೋರ್ಸಿ ಅಗ್ನಿಯ ತನ್ನಲ್ಲಿ ಆರೋಪಿಸಿಗೊಂಬದು –
ಓಂ ಯಾ ತೇ ಅಗ್ನೇ ಯಜ್ಞಿಯಾ ತನೂಸ್ತಯೇ
ಹ್ಯಾರೋಹಾssತ್ಮಾssತ್ಮಾನಂ |
ಅಚ್ಛಾ ವಸೂನಿ ಕೃಣ್ವನ್ನಸ್ಮೇ ನರ್ಯಾ ಪುರೂಣಿ
ಯಜ್ಞೋ ಭೂತ್ವಾ ಯಜ್ಞಮಾಸೀದ ಸ್ವಾಂ ಯೋನಿಂ |
ಜಾತವೇದೋ ಭುವ ಆ ಜಾಯಮಾನಃ ಸಕ್ಷಯ ಏಹಿ |
ಉದ್ವಾಸನೆ – ಎರಡು ಅಕ್ಕಿಕಾಳು ಹೋಮಕ್ಕೆ ಹಾಕಿ ಹೋಮಕುಂಡವ ಸಣ್ಣಕೆ ಹಂದ್ಸುವದು –
ಯಜ್ಞಪುರುಷಂ ಓಂ ಭೂರ್ಭುವಸ್ಸುವರೋಂ ಯಥಾಸ್ಥಾನಂ ಉದ್ವಾಸಯಾಮಿ |
ದ್ವಿರಾಚಮ್ಯ |
ಹರಿಃ ಓಮ್ ||