- 2022 ನೇ ಸಾಲಿನ ಕೊಡಗಿನಗೌರಮ್ಮ ಪ್ರಶಸ್ತಿ - July 23, 2022
- ‘ಮುದುಡಿದ ತಾವರೆ ಅರಳಿತ್ತು’- 2021ರ ಕೊಡಗಿನಗೌರಮ್ಮ ಕಥಾಸ್ಪರ್ಧೆ – ತೃತೀಯ - September 18, 2021
- ಕಾಪಿ ಕುಡುದ ಜರ್ನಲಿಸ್ಟ್ – 2021ನೇ ಸಾಲಿನ ಕೊಡಗಿನಗೌರಮ್ಮ ಕಥಾಸ್ಪರ್ಧೆ – ದ್ವಿತೀಯ - September 1, 2021
ಆನು ಕಂಡುಂಡ ಕಾಶಿಯಾತ್ರೆ-(ತೀರ್ಥಯಾತ್ರಾ ಕತೆ)
ನಾಲ್ಕಾರು ದಶಕಂಗಳ ಹಿಂದೆ ಕಾಶಿಗೆ ಹೋಪೊವು ೬೫-೭೦ ವರ್ಷಂಗಳ ಮೇಲ್ಪಟ್ಟೊವು ಹೇಳಿ ಮಾತಿದ್ದತ್ತು. ಎಂತಕೇಳಿರೆ, ಆ ಕಾಲಕ್ಕೆ ಪ್ರಯಾಣ ಸೌಲಭ್ಯ ಈಗಾಣಾಂಗಿಲ್ಲೆ. ಅದಕ್ಕೂ ಮೊದಲೇ ನೆಡಕ್ಕೊಂಡು ಹೋಪದೇ ಅನಿವಾರ್ಯತೆ!!.ಹೋದೊವು ತಿರುಗಿ ಮನಗೆತ್ತುವ ಭರವಸೆ ಇಲ್ಲೆ. “ಎನಗೀಗ ಮಧ್ಯಾಹ್ನ ತಿರುಗಿತ್ತು.ಇನ್ನು ಕಾಶಿಯೋ ರಾಮೇಶ್ವರವೋ ಹೆರಡುದು”.ಹೇಳುವ ಮಾತು ಅಜ್ಜಂದ್ರ ಬಾಯಿಲಿ ಬಳಕೆಲಿತ್ತು. ಇರಳಿ. ಕಾಲಾಯ ತಸ್ಮೆಯ್ ನಮಃ. (ಈಗ ಕಾಶಿಗೆ ಹೋಗಿ ಬಪ್ಪದು ಸುಲಭವೋ ಕೇಳಿರೆ,ಸುಲಭ. ಕಷ್ಟವೋ ಕೇಳಿರೆ.., ಅಪ್ಪು ಕಷ್ಟ. ಸುಲಭ ಅಲ್ಲ. ಏವದರಲ್ಲಿ?. ವಾಹನ ಸೌಲಭ್ಯಲ್ಲಿ ಸುಲಭಾದಿಕ್ಕು. ಅಲ್ಲಿಗೆ ಹೋಗಿ ತಲಪುದು ಸುಲಭಾದಿಕ್ಕು. ಆದರೆ.., ನವಗೆ ಪುಣ್ಯಕ್ಷೇತ್ರಲ್ಲಿ ದೇವರ ದರ್ಶನ ಮಾಡಿ ಹೆರ ಬಪ್ಪದು ಗ್ರೇಶಿದಷ್ಟು ಸುಲಭ ಅಲ್ಲವೇ ಅಲ್ಲ.. ಪ್ರತಿಯೊಂದು ಮೆಟ್ಟಿಂಗೂ ಒಳ ಹೊಗುವವರ ತಪಾಸಣೆ,ಬರಿ ಕೈಲಿ ಹೋಯೆಕ್ಕು.ಮೊಬೈಲು ಮಾತ್ರ ಕೊಂಡೋಪಲಾಗದ್ದೊ?. ಹಾಂಗೆ ಜಾನ್ಸಿಕ್ಕೆಡಿ!. ನೀರಿನಬಾಟ್ಳಿ ಸಮೇತ ಕೊಂಡೋಪಲೆಡಿಯ!. ಪೈಸೆ –ನೋಟು ಮಾಂತ್ರ ಓಕೆ.. ತಪಾಸಣೆ, ಬಾಹ್ಯಪರೀಕ್ಷೆ!.ನಾಲ್ಕಾರು ದಿಕ್ಕೆ!. ಆ ಕಾಲ ಹಾಂಗಿತ್ತು.ಈ ಕಾಲ ಹೀಂಗೆ!! .)
ತಯಾರಿಃ–ದಕ್ಷಿಣ ಭಾರತದ ಹೆಚ್ಚಿನ ಪುಣ್ಯಕ್ಷೇತ್ರ ತಿರುಗಿ ಆಯಿದು. ಉತ್ತರಭಾರತಕ್ಕೆ ಎಲ್ಲಿಯೂ ಹೋಯಿದಿಲ್ಲೆ. ಕಾಶಿಗಾದರೂ ಒಂದರಿ ಹೋಯೆಕ್ಕಾತು. ಹೇಳಿ ಮನಸ್ಸಿಲ್ಲಿ ಮಂಡಿಗೆ ಹಾಕೆಂಡಿದ್ದಿದ್ದೆ. ಹೋದವರ್ಷ ಹೀಂಗೇ ಮಾತಾಡುತ್ತಿಪ್ಪಗ; ಎಂಗಳ ಪುರೋಹಿತಭಟ್ರು “ಒಟ್ಟಿಂಗೆ ಹೋಪೋ°, ವಿಜಯಕ್ಕ. ಎನಗೂ ಹೋಪ ಅಂದಾಜಿದ್ದು”. ಹೇಳಿ ಬೇರೆ ನಾಲ್ಕುಜೆನ ಶಿಷ್ಯ ವರ್ಗದವೂ ಬತ್ತೆ ಹೇಳಿದ ಪ್ರಕಾರ.., ಭಟ್ರು ರೈಲಿಂಗೆ ಟಿಕೆಟ್ ಬುಕ್ ಮಾಡಿದವು ಪಾಪ ಎರಡು ಸರ್ತಿ!. ಆದ್ರೆ ಮೇಲಂದ ಮೇಲೆ, ಎರಡು ಸರ್ತಿಯೂ ಅನಿವಾರ್ಯ ಕಾರಣಂದ ಹೋಪಲೆಡಿಯದ್ದೆ ಟಿಕೆಟ್ ಕ್ಯಾನ್ಸಲಾತು. ಅಂದು ನೆನೆಗುದಿಗೆ ಬಿದ್ದದು ಇದೀಗ ಕಾಲಕೂಡಿಬಯಿಂದು.ಆದರೆ ಪುರೋಹಿತ ವೇ|ಮೂರ್ತಿ ಕೋಣಮ್ಮೆ ಮಹಾದೇವಭಟ್ರಿಂಗೆ ಹಾರ್ಟಿನ ತೊಂದರೆಂದಾಗಿ ಈಗಲೂ ಹೋಪಲಾವುತ್ತಿಲ್ಲೆನ್ನೆ! ಹೇಳುವಗ “ಆನು ಮೊದಲೇ ಎರಡು ಸರ್ತಿ ಕಾಶಿ, ಗಯಾ ಎಲ್ಲಾ ಹೋಗಿ ಬಯಿಂದೆ ನಿಂಗೊ ನಿಶ್ಚಿಂತೆಲಿ ಹೋಗಿ ಬನ್ನಿ” ಹೇಳಿ ಸಮಾಧಾನ ಮಾಡಿದ್ದವು ಆಶೀರ್ವಾದ ಪೂರ್ವಕ.
ದಿನ ನಿಗದಿಃ-ಕಾಸರಗೋಡಿನ ಶ್ರೀವಿನಾಯಕ ಟೂರ್ + ಟ್ರಾವೆಲ್ಸ್ ನವರೊಟ್ಟಿಂಗೆ; ಕಾಶಿ-ಅಯೋಧ್ಯಾ-ಋಷಿಕೇಶ-ಹರಿದ್ವಾರ-ಡೆಲ್ಲಿ ಯಾತ್ರೆ, ದಿನ ನಿಗದಿ ಆತು. ಆಯೋಜಿಸಿದಾಂಗೆ, ೨೦೧೭ ಒಕ್ಟೋಬರ ೬ಕ್ಕೆ ಅಪರಾಹ್ನ ೪-೩೦ಕ್ಕೆ ಕಾಸರಗೋಡು ಸ್ಟೇಶನಿಂದ ಹೊಸ ಹುರುಪಿಲ್ಲಿ ರೈಲು ಹತ್ತಿದಿಯೊ°. ಮಾರಣೆ ದಿನ ಉದಿಯಪ್ಪಗ ೮-೩೦ ಚೆನ್ನೈ ರೈಲು ನಿಲ್ದಾಣ. ಮತ್ತೆ ಅಲ್ಲಿಂದ ಗಂಗಾ ಕಾವೇರಿ ಎಕ್ಸ್ ಪ್ರೆಸ್ಸಿಲ್ಲಿ ವಾರಣಾಸಿಗೆ, ೯ನೇತಾರೀಕು. ಹೋಗಿ ಅಲ್ಲಿ ರೂಮು ಮಾಡಿ ಉಳಕ್ಕೊಂಬ ವ್ಯವಸ್ಥೆ. ತಿಂಡಿ-ಕಾಫಿ ಆಗಿಯಪ್ಪಗ ೧೧ am. ಮೀಯಾಣ,ಎಲ್ಲ ಆಗಿಯಪ್ಪಗ ಮಧ್ಯಾಹ್ನ. ಯಾತ್ರೆಯ ಕಂಡೆಕ್ಟರ್ ಅಡಿಗೆಯವರ ಕರಕ್ಕೊಂಡೋಯಿದಾಗಿ; ಅವು (ಎರಡು ಜೆನ ಇತ್ತವು) ರೂಮು ಮಾಡಿದಲ್ಲಿ ಅಡಿಗೆ ಮಾಡಿ ಹಾಕುತ್ತಿದ್ದೊವು. ಊಟಾಗಿಯಪ್ಪಗ ಕಾಶಿಲಿ ಪುರೋಹಿತ ಭಟ್ಟಕ್ಕಳಲ್ಲಿಗೆ ಮೊದಲೇ ಮಾತಾಡಿದವರಲ್ಲಿಗೆ ಕೇಳಿಯಪ್ಪಗ ಎಂಗೊಗೆ ಮಾರಣೆದಿನ ಪಿತೃಕಾರ್ಯ ಮಾಡ್ಳೆ ನಿಗದಿಯಾಗಿ,10-10-2017, 9 amಗೆ ಬಪ್ಪಲೆ ಟೈಮ್ ಕೊಟ್ಟೊವು. ೯ ನೇದಿನಾಂಕದ ಸಂಜೆ ಅಲ್ಲೇ ಹತ್ತ್ರೆ ಕೆಲವು ದೇವಸ್ಥಾನ ಸುತ್ತಿದಿಯೊ°.
ಕಾಶಿಲಿ ಪಿತೃಕಾರ್ಯಃ- ಮದಲೇ ಮಾತಾಡಿದಂತೆ ವೇ|ಮೂ ಶ್ರೀ ವಿಶ್ವೇಶ್ವರ ಶಾಸ್ತ್ರಿಗಳು. ಸೋಮೇಶ್ವರ ಶಾಸ್ತ್ರಿಗಳ ಮಗ. ಅವರಲ್ಲಿಗೆ ಹೋದಿಯೊ°.(ಆಂದ್ರದ ಮೂಲದವಾಡ. ಕಾಶಿಗೆ ಬಂದು ನೆಲೆಸಿ ತುಂಬಾವರ್ಷಾತು ಹೇಳಿದೊವು.ಕನ್ನಡ ಸರಿಯಾಗಿ ಬತ್ತು.) ಎಂಗೊ ಐದು ಜೆನ ಹವ್ಯಕರು-ದೊಡ್ಡಮಾಣಿ ಕೃಷ್ಣ ಅಣ್ಣ+ಸಾವಿತ್ರಿ ಅತ್ತಿಗೆ, ಒಡಂಕಲ್ಲು ಶಾಮಣ್ಣ+ಜಯಕುಮಾರಿ ಅತ್ತಿಗೆ . ಪಿತೃಕಾರ್ಯ ಹೆಚ್ಚಿನವು ಮಾಡಿತ್ತವು. ಮಾಡ್ತವರ ಹೆಸರು,ಎಲ್ಲರದ್ದೂ ತೆಕ್ಕಂಡವು. ಹೊಳೆಲಿ ಮಿಂದೊಂಡು ಬಪ್ಪಲೆ ಹೇಳಿದೊವು. ಆ ಪ್ರಕಾರ ಎಂಗೊ ಗಂಗಾನದಿ ನೀರಿಂಗಿಳುದು ಮುಳುಗು ಹಾಕಿದಿಯೊ°.ತೀರ್ಥಸ್ನಾನ ಒಂದು ಹಿತ ಅನುಭವ.ಅಲ್ಲಿ ಚಳಿಯ ಸುಳಿವಿಲ್ಲೆ.ಇದು ಮಣಿಕರ್ಣಿಕಾ ಘಾಟ್.(ತಿಥಿ ಮಾಡುವ ಜಾಗೆ). ಶೀಟ್ ಹಾಕಿದ ಪರ್ಮನೆಂಟ್ ಚೆಪ್ಪರಲ್ಲಿ ಪಿತೃಕಾರ್ಯ ಮಾಡ್ತವರ ಎಲ್ಲ ಸಾಲಾಗಿ ಕೂರ್ಸಿ;ಒಂದೊಂದು ಪತ್ರಾವಳಿ ಕೊಟ್ಟು ಅದಲ್ಲಿ, ಗೋದಿ ಹಿಟ್ಟಿನ ದೊಡ್ಡ ಉಂಡೆ.,ಎಳ್ಳು, ದರ್ಭೆ,ಅಕ್ಕಿಕಾಳು, ಗೋದಿಕಾಳು,ಅರಿಶಿನ,ಕುಂಕುಮ, ಬಾಳೆಹಣ್ಣು,ಗ್ಲಾಸಿಲ್ಲಿ ನೀರು. ಇವಿಷ್ಟು ಪತ್ರಾವಳಿಲಿ ಮಡಗಿ ನಾವು ಕೂದಲ್ಲಿ ಎದುರು ತಂದು ಮಡಗಿದ ಮೇಲೆ ಸುರುಮಾಡ್ಸಿದವು. ಸಮಷ್ಟಿಲಿ ಲೈನಿಲ್ಲಿ ಕೂರ್ಸಿ ಬೇರೆಬೇರೆ ಮಾಡುಸುದು,ದರ್ಭೆಯ ಪವಿತ್ರವ ಕೈಬೆರಳಿಂಗೆ ಹಾಕಲೆ ಕೊಟ್ಟವು. ಮದಾಲು ಗೋದಿ ಹಿಟ್ಟಿನ ಸಣ್ಣ-ಸಣ್ಣ ಇಪ್ಪತ್ತೊಂದು ಉಂಡೆ, ಮತ್ತೆ ಒಂದು ದೊಡ್ಡ ಉಂಡೆ ಮಾಡ್ಳೆ ಹೇಳಿದವು.ಮತ್ತೆ..,ದರ್ಭೆಕೊಚ್ಚು ಮೂರು ಭಾಗಮಾಡಿ ನೆಲಲ್ಲಿ ಮಡಗಿದ ಮೇಲೆ; ಗತಿಸಿದ ಹಿರಿಯರ ಸಂಬಂಧ,ಹೆಸರು, ಗೋತ್ರ ಕೇಳಿ ಒಂದೊಂದು ಉಂಡೆ ಮಡಗಿಯೊಂಡು ಬಪ್ಪದು; ಆಮೇಲೆ ತರ್ಪಣ ಬಿಡ್ಳೆ ಹೇಳ್ತವು.ಭಟ್ರು ಮಂತ್ರ ಹೇಳ್ತಾ ಇಪ್ಪಾಂಗೆ ನಾವು ಅದದು ನಿಗದಿಯಾದ ಹಿರಿಯರ ನಮೂದಿಸಿದ ಪಿಂಡಕ್ಕೆ ಅಕ್ಕಿ, ಎಳ್ಳಕಾಳು ಸೇರ್ಸಿ ತರ್ಪಣ.(ನಮ್ಮಲ್ಲಿ ಅಷ್ಟಗೆ ಮಾಡುವಾಂಗೆ).ಎಂಗಳ ಗ್ರೂಪಿನ ಸಾದಾರಣ ಮೂವತ್ತ್ರಿಂದ ಮೇಲೆ ಜೆನ ಈ ಕಾರ್ಯಕ್ಕೆ ಕೂಯಿದವು!!!!!!!!.
ಮಾಡಿ ಮುಗುಶಿದ ಮುಲೆ ಪಿಂಡವ ನೀರಿಂಗೆ ಬಿಟ್ಟಿಕ್ಕಿ , ಪತ್ರಾವಳಿ,ದರ್ಭೆ ವಗೈರೆ ನೀರಿಂಗೆ ಹಾಕಲೆಡಿಯ. ಅದಕ್ಕೆ ಬೇರೆ ವ್ಯವಸ್ಥೆ. ಮತ್ತೆ ಕೈಕಾಲು ತೊಳಕ್ಕೊಂಡು ವಿಶ್ವನಾಥ+ ಅನ್ನಪೂರ್ಣೇಶ್ವರಿಯ ದರ್ಶನ.
ಅನ್ನಪೂರ್ಣೇಶ್ವರಿಯ ಕೃಪೆಃ- ಪಿತೃಕಾರ್ಯ ಮಾಡಿಕ್ಕಿ ದೇವಸ್ಥಾನಕ್ಕೆ ಒಳ ಹೋಪ ಮೊದಲೆ ಗ್ರೂಪಿನ ಲೀಡರು ಎರಡನೇ ಗೇಟಿನ ಒಳ ಕೊಂಪೌಂಡಿಲ್ಲಿ ಮೀಟಿಂಗ್ ಮಾಡಿ ಅಲ್ಲಿ ಎಂಗಳ ಬ್ಯಾಗು,ಇತರ ಸಾಮಾಗ್ರಿಗಳ ಮಡುಗಲೆ ಹೇಳಿಕ್ಕಿ; “ಯಾರಾದರೂ ತಪ್ಪಿ ಹೋದ ಪಕ್ಷದಲ್ಲಿ ಇಲ್ಲಿಗೆ ಬಂದು ಸೇರಿಕೊಳ್ಳಬೇಕು ಊಟಕ್ಕೆ ನಮ್ಮ ರೂಮಿಗೇ”. ಹೇಳಿಕ್ಕಿ ಬಹುಶಃ.ಆ ಮನುಷ್ಯ ಅಲ್ಲಿ ನಿಂದಿದು. ಎಂಗೊ ಹವ್ಯಕರು( ಆನು,ದೊಡ್ಡಮಾಣಿ ದಂಪತಿಗೊ, ಒಡಂಕಲ್ಲು ದಂಪತಿಗೊ ಐದು ಜೆನ ಒಟ್ಟಿಂಗೆ ಇತ್ತೆಯೊಂ).ಸಾದಾರಣ ಎರಡು ಗಂಟಗೆ ಹತ್ರಾಯಿದು.ಪೂಜೆ ಕಳುದ್ದು. ವಿಶ್ವನಾಥನ+ಅನ್ನಪೂರ್ಣೇಶ್ವರಿಯ ಗುಡಿ ಹತ್ರೆಲ್ಲ ಸರಿಯಾಗಿ ಹೋಪಲೆಡಿಗಾಯಿದು. ಶಿವಲಿಂಗ ಮುಟ್ಟಿ ಹೊಡಾಡಿಕ್ಕಿ; ಅಭಿಶೇಖಂದ ಹರಿವ ತೀರ್ಥ,ಕುಡುದು, ಬಿಲ್ವಪತ್ರೆ ಎಸಳು ತೆಕ್ಕಂಬಲೆಡಿಗಾತು. ಆಚಿಕೆ ಇನ್ನೆರಡು ಗುಡಿಯ ಎದುರೆಲ್ಲ ಹೋಪಗ ಉಂಡಿಕ್ಕಿಯೇ ಹೋಗಿ, ಈ ಟಿಕೆಟ್ ತೋರ್ಸಿರೆ ಸಾಕು ದುಡ್ಡು ಬೇಡಾಳಿ ಹೇಳಿಕೆ ಬಂತು ಹಿಂದಿಲಿ. ಬೇಡ ಉಣುತ್ತಿಲ್ಲೇಳಿ ಬಿಟ್ಟಿಕ್ಕಿ ಹೆರ ಹೆರಡುತ್ತ ಜಾಗೆಲಿ ಮತ್ತೊಬ್ಬ ಊಟ ಆತೊ?ಕೇಳಿಕ್ಕಿ ಉಣ್ಣದ್ರೆ ಉಂಡಿಕ್ಕಿಯೇ ಹೋಗಿ ಹೇಳಿ;ಊಟದ ಹಾಲ್ ಗೆ ದಾರಿಹೇಳಿ ಬಲವಂತ ಮಾಡಿದವು. “ಎಂತ ಮಾಡುದು?”. ದೊಡ್ಡಮಾಣಿ ಅಣ್ಣ ಕೇಳುವಗ; ಆನು, “ನಮ್ಮ ಸಂಸ್ಕೃತಿ ಪ್ರಕಾರ ಪಿತೃಕಾರ್ಯ ಮಾಡಿಕ್ಕಿ ಹಸು ಹೊಟ್ಟೆಲಿ ಹೋಪಲಾಗಾಳಿ ಇದ್ದಲ್ಲೊ!. ಈ ಅನ್ನಪೂರ್ಣೇಶರಿಗೂ ಸಮ್ಮತ ಆಯೆಕ್ಕಾರೆ, ನಮ್ಮ ಪಿತೃಗೊಕ್ಕೂ ತೃಪ್ತಿ ಆಯೆಕ್ಕಾರೆ ನಾವು ಉಂಡಿಕ್ಕಿಯೇ ಹೋಯೆಕ್ಕಣ್ಣ ನಮ್ಮ ಹೊಟ್ಟೆಯೂ ಚುರುಗುಟ್ಟುತ್ತಿದ!” ಹೇಳಿದೆ. ಹಾಂಗೆ ಎಂಗೊ ಐದು ಜೆನ ಊಟದ ಭವನಕ್ಕೋಪಗ ಎಂಗಳ ಸೆಟ್ಟಿನವೂ ನಾಲ್ಕಾರು ಜೆನ(ಕರಾಡಸ್ತರು,ಶಿವಳ್ಳಿಯವು) ಜೆನ ಉಣ್ತವು.
ಊಟಃ– ಟೇಬಲ್ ಸಿಸ್ಟಮ್ ಊಟ. ಉಂಡಾದಾಂಗೆ ಅದರ ತೆಗದು ಕ್ಲೀನ್ ಮಾಡ್ಳೂ ಜೆನ . ಅಲ್ಲಿ ಖಾಲಿ ಆದಾಂಗೆ ಬಾಗಿಲಿಲ್ಲಿ ಒಳಬಿಡುವದು. ಊಟಕ್ಕೆ ಪತ್ರಾವಳಿ ಎಲೆ. ಪಿತೃಕಾರ್ಯಕ್ಕೆ ಕೊಟ್ಟ ಪತ್ರಾವಳಿಂದ ನೀಟಾಗಿ ಒಳ್ಳೆಯ ಕ್ವಾಲಿಟಿ!.ಊಟಕ್ಕೆ ಐಟಮ್ಸ್ ಭರ್ಜರಿ!!. ಎರಡು ತಾಳು,ಅವಿಲಿನಾಂಗಿಪ್ಪ ಮುದ್ದೆ ಬೆಂದಿ,ಚಿತ್ರಾನ್ನ, ಮೆಣಸುಕಾಯಿ, ಸಾರು,ಹಪ್ಪಳ(ಮದಾಲು ಕಣ್ಣಿಲ್ಲಿ ನೋಡುವಗ ನಮ್ಮ ಹಲಸಿನಕಾಯಿ ಹಪ್ಪಳ!!.ಆದರೆ ಅದು ಅಕ್ಕಿ ಹಪ್ಪಳ) ಲಾಯಿಕಿತ್ತು. ಸಾಂಬಾರು,ಮೇಲಾರ, ಪಾಯಸ, ರಸಗುಲ್ಲ(ಸ್ವೀಟು), ಮೊಸರು,ಮಜ್ಜಿಗೆ, ಮೆಡಿ(ಅಪ್ಪೆಮೆಡಿ)ಉಪ್ಪಿನಕಾಯಿ,ನಮ್ಮ ಊರಿನ ಮದುವೆ ಊಟ!!!. ಉಂಬಲೆ ಪ್ರಚೋದನೆ ಕೊಟ್ಟದು ಅನ್ನಪೂರ್ಣೇಶ್ವರಿಯೆ. ಅದಲ್ಲಿ ಸಂಶಯ ಇಲ್ಲೆ ಹೇಳೆಂಡು ಉಂಡ ತೃಪ್ತಿಲಿ ಹೆರ ಬಂದಿಯೊ°
ಊಟದ ಪೇಚಾಟಃ- ಎರಡ್ನೇ ಗೇಟಿನತ್ರಂಗೆ ಬಪ್ಪಾಗ ಎಂಗಳ ಆರದ್ದೂ ಬ್ಯಾಗುಗೊ ಮಡಗಿದ ಶೆಲ್ಫಿಲ್ಲಿ ಇಲ್ಲೆ!!. ಅಲ್ಲಿ ಕೇಳ್ಲಕ್ಕೂಳಿರೆ ಆರನ್ನೂ ಕಾಣುತ್ತಿಲ್ಲೆ. ಛೇ….ಎಂತ ಮಾಡುದು!ಕೈ ಕುಡುಗುವದೇ ಕೆಲಸ!!. ಮೊಬೈಲು, ಒಂದು ಪ್ರತಿ ಡ್ರೆಸ್ಸು,ತೀರ್ಥಬಾಟ್ಳಿ, ಹೀಂಗೆಲ್ಲ ಇತ್ತು. ಎನ್ನ ಚಪ್ಪಲಿಯೂ ಕಾಣ್ತಿಲ್ಲೆ!. ಏವದು ಹೋದರೂ ಅಕ್ಕು, ಮೊಬೈಲು ಕಾಣದ್ದೆ ಮಾಡೆಡ ವಿಶ್ವನಾಥಾ…, ಹೇಳಿ ಆ ದೇವರಿಂಗೆ ಮನಸ್ಸಿಲ್ಲೆ ಮೊರೆಹೋದೆ. ಗ್ರೂಪು ಕಂಡೆಕ್ಟರಿಂಗೆ ಫೋನಾರು ಮಾಡ್ಳೆ ಫೋನೆಲ್ಲಿದ್ದು!?.ಈ ಸರ್ತಿ ಚಾತುರ್ಮಾಸ್ಯಕ್ಕೆ ಹೋದಿಪ್ಪಾಗ ಶ್ರೀಗುರುಗಳತ್ರೆ ಕಾಶಿಯಾತ್ರೆಗೆ ಹೋಪ ಶುದ್ದಿ ಹೇಳಿ ಆಶೀರ್ವಾದ ತೆಕ್ಕಂಡಿತ್ತಿದ್ದೆ. “ಎಂತದೂ ತೊಂದರೆ ಆಗ ವಿಜಯ, ಹೋಗಿ ಬಾ..” ಹೇಳಿ ಹರಸಿದ್ದೊವು ಶ್ರೀ ಸಂಸ್ಥಾನ!.ಮತ್ತೇಕೆ ಹೀಂಗಾವುತ್ತು!!?.ಎಲ್ಲಿ ತಪ್ಪಿದೆ ಆನು!!!?.ಮನಸ್ಸು ಮಥನ ಮಾಡೆಂಡು; ಹೀಂಗೇ ನೆಡಕ್ಕೊಂಡು ಬಪ್ಪಾಗ ಗ್ರೂಪಿನ ಕೆಲವು ಜೆನರ ಕಾಂಬಲೆ ಸಿಕ್ಕಿ ಆಚವೆಲ್ಲ ರೂಮಿಂಗೆ ಹೋಯಿದೊವೂಳಿ ಗೊಂತಾತು. ಎನಗೆ ಎನ್ನ ಮೊಬೈಲಿನದ್ದೇ ಚಿಂತೆ!.ಜಗನ್ಮಾತೆ.. ಮೊಬೈಲು ಎಲ್ಲಿದ್ದರೂ ಎನಗೆ ದಕ್ಕುವಾಂಗೆ ಮಾಡಮ್ಮಾ. ದಿನ ಬೆಳಗಾದರೆ ಮೊಬೈಲು ಬೇಕನ್ನೆಪ್ಪಾ!!.ಎನ್ನ ಎಲ್ಲಾ ಖಾತೆಗೊ ಅದರಲ್ಲಿದ್ದು! ಹೀಂಗೆ ಯೋಚಿಸಿ ಎಂತದೂ ಕೆಮಿಕೇಳ್ತ ಸ್ಥಿತಿಲಿ ಆನಿಲ್ಲೆ.ರಿಕ್ಷಾ ಮಾಡಿಯೊಂಡು ಬಂದಿಯೊ°. ಸೀತ ದಡಬಡನೆ ಮೇಲೆ ಮಾಳಿಗ್ಗೆ ಹತ್ತಿ ರೂಮು ನೋಡಿದರೆ..,ಎಂಗಳೆಲ್ಲರ ಬ್ಯಾಗುಗೊ ರೂಮಿಲ್ಲಿ ಮಡಗೆಂಡಿದ್ದು!!. ಮೊಬೈಲಿದ್ದೋಳಿ ಮದಾಲು ನೋಡಿದೆ!.ಬಚಾವು.ಇದ್ದು. ಮನಸಾ ದೇವರಿಂಗೆ ಕೈಮುಗುದೆ! ಹೆರ ಬಂದು ನೋಡಿದೆ. ಊಟದ ಲೈನಿಲ್ಲಿ ಬಾಕಿದ್ದವು ಉಣುತ್ತವು. ಲೀಡರಿನ ಮೋರೆಯೋ ಒಂದು ಬತ್ತ ಹಾಕಿರೆ ಹೊಟ್ಟಿಹಾರಿ ಒಂಭತ್ತು ಹೊದಳಾವುತ್ತಾಂಗಿದ್ದು. ದೇವಳಲ್ಲಿ ಉಂಬಲೆ ನಿಂದದಕ್ಕೆ ಕೋಪ!. “ಎಂಗೊಗೆ ಕ್ಷೇತ್ರಲ್ಲಿ ತಿಥಿ ಮಾಡಿದಲ್ಲಿ ಉಂಡಿಕ್ಕಿ ಬರೆಕು,ಇಲ್ಲದ್ರೆ ಅದರ ಫಲ ಸಿಕ್ಕಾಳಿದ್ದು.ಆ ಅನ್ನಪೂರ್ಣೇಶ್ವರಿ ಹೇಳ್ಸಿದ ನಮುನೆಲಿ ಅಲ್ಲಿಯವು ಉಣ್ಣದ್ದೆ ಹೋಗೆಡಿ ಹೇಳಿದವು” ದೊಡ್ಡಮಾಣಿ ಕೃಷ್ಣಣ್ಣ ಒಪ್ಪುಸಿಯಪ್ಪಗ ಯಥಾಸ್ಥಿತಿಗೆ ಬಂತು.ಬ್ರಾಹ್ಮರು ಎಂತ ಬಿಟ್ಟರೂ ಊಟ ಬಿಡವು ಹೇಳಿತ್ತಾಡ ಎಲ್ಲರತ್ರೂ.
ಗಂಗಾರತಿಃ- ಮತ್ತೆ ರಜ ರೆಸ್ಟ್ ತೆಗದು ೫ ಗಂಟಗೆ ಗಂಗಾರತಿಗೆ ಹೋಪಲಿದ್ದೂಳಿ ಗೊಂತಾತು.ಅಲ್ಲಿಗೆ ಮೊಬೈಲು ಕೊಂಡೋಪಲಾಗದ್ದ ನಿರ್ಬಂಧ ಇಲ್ಲೆ. ೪-೩೦ಕ್ಕೆ ಚಾಯ, ಚಾಯಾ ಹೇಳ್ವದು ಹೆರಾಂದ ಕೇಳಿಯಪ್ಪಗ ಎಂಗೊ ದಡಬಡನೆ ಎದ್ದಿಯೊ°.ಚಾಯ ಕುಡಿವಲೆ ವೆರಾಂಡಕ್ಕೆ ಹೋಪಗ ಈಗಲೇ ಹೋಗುವುದೂಳಿ ಆತು. ಆನು ಐದು ನಿಮಿಷಲ್ಲಿ ಹೆರಟೆ. ಆಚವಕ್ಕೆ ರಜ್ಜ ತಡವಾತು. ಬೇಗ ಹೆರಡ್ಸಿಕ್ಕಿ ಕೆಳ ಇಳುದು ನೋಡುವಗ ಎಲ್ಲೋರು ಹೋಯಿದವು. ಎಂಗೊ ಐದು ಜನ ಬಾಕಿ. ರಜ ಮುಂದೆ ಬೇಗ ಹೋದರೆ ಆ ಸೆಟ್ಟಿನವು ಸಿಕ್ಕುಗೊ ಹೇಳಿ ಬೇಗ ಬೇಗ ಹೋದರು ಸಿಕ್ಕದ್ದೆ ಇಪ್ಪಾಗ ದಾರಿ ತಪ್ಪಿತ್ತೋ ಹೇಳಿ ವಿಚಾರ್ಸಿರೆ ; ತಪ್ಪಿದ್ದಿಲ್ಲೆ. ರಿಕ್ಷದವು ಅಲ್ಲಿಗೆ ರಿಕ್ಷ ಹೋವುತ್ತಿಲ್ಲೆ ಹೇಳ್ತವು. ಅತ್ತಿಗೆಕ್ಕೊ ಇಬ್ರೂ ನಾವು ವಾಪಾಸು ರೂಮಿಂಗೇ ಹೋಪೊ° ಹೇಳ್ಲೆ ಸುರುಮಾಡಿದವು. “ಬೇಡ, ಎನಗೆ ಗಂಗಾರತಿಗೆ ಹೋಪಲೇ ಬೇಕು. ರೂಮಿಂಗೆ ಹೋಪದು ಬೇಡ” ಹೇಳಿದೆ. ಒಡಂಕಲ್ಲು ಶಾಮಣ್ಣನೂ ಎನ್ನ ಮಾತಿಂಗೆ ಸಪೋರ್ಟು ಕೊಟ್ಟವು. ಮತ್ತೆ ದಾರಿಕೇಳಿಂಡು ಹೋಗಿ ಅಲ್ಲಿಗೆತ್ತಿದಿಯೊ°. ಗಂಗಾರತಿ ನೋಡಿಯಪ್ಪಗ ಹೋದ್ದು ಸಾರ್ಥಕಾತೂಳಿ ಆತು.
ಅಯೋದ್ಯೆಃ- ಸರಯೂ ನದಿತೀರಕ್ಕೆ ಹೋಗಿ ತೀರ್ಥಪ್ರೋಕ್ಷಣೆ ಮಾಡಿಕ್ಕಿ ,(ಕೆಲವು ಜೆನ ಮಿಂದವು).ಇಲ್ಲಿ ನದೀ ತೀರಲ್ಲಿ ದನಗೊ ಇದ್ದವು. ಗೋಪೂಜೆ ಮಾಡ್ಸುತ್ತವು.ಈ ನದಿ ಹತ್ರೆ ಕಂಡಾಬಟ್ಟೆ ಭಿಕ್ಷುಕರು.ಬರೀ ಪೊಡಿಪುಳ್ಳರುಗೊ ದಾರಿ ನೆಡವಲೆಡಿಯದ್ದಾಂಗೆ ಅಡ್ಡತಳ್ಪಿ ಹಾಕುತ್ತ ಪುಳ್ಳರುಗೊ!.ಅಲ್ಲಿಂದ ಅಯೋಧ್ಯೆ ಮಂದಿರದ ಜಾಗಗೆ ಹೋದಿಯೊ°. ಕರಸೇವೆಲಿ ಜೋಡಿಸಿ ಮಡಗಿದ ಇಟ್ಟಿಗೆಗಳ ರಾಶಿ ಕಾಂಬಗ “ಈ ಇಟ್ಟಿಗೆಗೊಕ್ಕೆ ಮಂದಿರಲ್ಲಿ ಖಾಯಂ ನಿಂಬ ಭಾಗ್ಯ ಏವಗಳೋ ಬೇಗನೆ ಆಗಲಿ ಶ್ರೀರಾಮ” ಹೇಳಿ ಮನಸ್ಸಿಲ್ಲಿ ಹೇಳಿದಿಯೊಂ.
ರಾಮ ಮಂದಿರ ಪುನಃ ಪ್ರತಿಷ್ಟೆ ಅಪ್ಪನ್ನಾರ ನಿಷ್ಟೆ-ನಿಯಮಲ್ಲಿ; ೧೫ ವರ್ಷಂದ ಕೇವಲ ಹಣ್ಣು ಸೇವನೆಲಿಪ್ಪ ಶ್ರೀ ರಾಮದಾಸ್ ಸ್ವಾಮೀಜಿ ಆಶ್ರಮಕ್ಕೆ ಹೋಗಿ ಒಂದಷ್ಟು ಹೊತ್ತು ಅಲ್ಲಿದ್ದು ಸ್ವಾಮೀಜಿ ಸ್ವತಃ ಕೊಟ್ಟ ಪ್ರಸಾದವ ಸ್ವೀಕರಿಸಿಕ್ಕಿ; ಅವರವರ ಕಾಣಿಕೆಯ ಸಮರ್ಪಿಸಿ ಮತ್ತೆ ದೊಡ್ಡ ಆಂಜನೇಯನ ಗುಡಿಗೆ ಹೋಗೆಂಡು ರೂಮಿಂಗೆ.
ಹರಿದ್ವಾರ+ ಋಷಿಕೇಷ – ಇವೆರಡು ಹತ್ತರತ್ತರೆ. ಹರಿದ್ವಾರಲ್ಲಿ ಶಂಕರಾಚಾರ್ಯಪೀಠ ಕಂಚಿ ಕಾಮಕೋಟಿಮಠಲ್ಲಿ ಇಂದು(೧೩-೧೦-೨೦೧೭) ಉಳಕ್ಕೊಂಬಲೆ. ಈ ವರೆಗೆ ಒಂದು ರೂಮಿಲ್ಲಿ ಉಳಕ್ಕೊಂಡದು ನಾಲ್ಕು ಜೆನ; ಆದರೆ ಇಲ್ಲಿ ಐದು ಜೆನ ಉಳಕ್ಕೊಳೆಕ್ಕಾಗಿ ಬಂತು. ಈ ಜಾಗ ಕೂಲ್ ಆಗಿ ಶಾಂತಿಧಾಮದ ಅನುಭವ!.(ಶಂಕರಾಚಾರ್ಯರ ಪೀಠ ಹೇಳ್ವದ್ದೆ ನಮ್ಮದು ಹೇಳುವ ಭಾವನೆ!!).ಮಾರಣೆದಿನ ಹರಿದ್ವಾರಲ್ಲಿ ತ್ರಿವೇಣಿ ಸಂಗಮಲ್ಲಿ ತೀರ್ಥಸ್ನಾನ. ಇದು ಒಂದು ವಿಶೇಷ!. ಮಿಶನಿನ ದೋಣಿಲಿ ಸಂಗಮಕ್ಕೆ ಕರಕ್ಕೊಂಡೋಪ ನಾವಿಕರು ಇದ್ದವು. ಎರಡು ದೋಣಿಗಳ ಸೇರ್ಸಿ,ಅಡಿಲಿ ಹಲಗೆ ಮಡಗಿ ಮುಳುಗಲೆ ತಯಾರಿ ಮಾಡಿಕೊಡ್ತವು. ಎಂಗೊಲ್ಲ ಒಟ್ಟಿಂಗೆ ಹೋಗಿ ಅಲ್ಲಿ ಒಬ್ಬೊಬ್ಬನೇ ಮುಳುಗುಹಾಕಿ;ನೀರಿಂಗೆ ಪೂಜೆಮಾಡಿಕ್ಕಿ, ದೊಡ್ಡದೊಡ್ಡ ಬಾಟ್ಳಿಲಿ ತೀರ್ಥ ತುಂಬುಸಿಗೊಂಡೆಯೊ°. ನದೀ ತೀರಕ್ಕೆ ವಾಪಾಸು ಬಂದು ಅಲ್ಲಿಯ ಪುರೋಹಿತರ ಮುಖಾಂತರ (ಇಲ್ಲಿ ಗಂಗಾರಾಮ ಶಾಸ್ತ್ರಿ ಎಂಗಳ ಪುರೋಹಿತರು) ಪಿತೃಕಾರ್ಯ ಮಾಡಿದಿಯೊ°. ಕಾಶಿಲಿ ಮಾಡಿದ ರೀತಿಲಿಯೇ ಇಲ್ಲಿಯೂ ಮಾಡಿದೊವು. ಬೆಟ್ಟದ ಮೇಲೆ ಶಿವಾನಂದ ಮಂದಿರ. ಸಣ್ಣ ಸ್ವರಲ್ಲಿ ಹಾರ್ಮೋನಿಯಂ ಸಹಿತ ತಂಪು ಇಂಪಾದ ಮೆಲುದನಿಯ ಭಜನೆ. ಅದರ ಕೇಳೆಂಡು ಕೂಬ್ಬ ತ್ವರಿತಲ್ಲಿ ತುಸುಹೊತ್ತು ಕೂದಿಯೊ°.ಮತ್ತೆ ಕೆಲವು ಪುಟ್ಟ,ಪುಟ್ಟ ದೇವಸ್ಥಾನಕ್ಕೆ ಪ್ರದಕ್ಷಿಣೆ ಹಾಕಿಕ್ಕಿ.ಆಚ ಬೆಟ್ಟ, ಮಾನಸ ದೇವಿ ದೇವಸ್ಥಾನಕ್ಕೆ ಟ್ರೋಲಿಲಿ ಹೋದಿಯೊ°. ಅದು ತುಂಬಾ ಕೊಶಿಯಾತು. ಇಲ್ಲಿಯೂ ಯಾತ್ರಿಕರ ತಪಾಸಣೆ ಇದ್ದತ್ತು. ಅಲ್ಲಿ ಅಷ್ಟಲಕ್ಷ್ಮಿಯರ ಗುಡಿ, ದಶಾವತಾರದ ಗುಡಿಗಳೂ ಇದ್ದತ್ತು.ಆ ಗುಡಿಲಿ ಒಂದ್ನಾಲ್ಕು ಮೀಟರು ದೂರಕ್ಕೆ ಸುರಂಗಲ್ಲಿ ಹೋಯೆಕ್ಕಾಗಿತ್ತು ಇದೆಲ್ಲಾ ಆಪ್ಯಾಯಮಾನ ಆತು. ನಿಸರ್ಗದ ದೈವದತ್ತವಾದ ನೋಟ. ಋಷಿಕೇಶಲ್ಲಿ ರಾಮಝೂಲ,ಲಕ್ಷ್ಮಝೂಲ,ಹೇಳಿ ಎರಡು ಸೇತುವೆ ಇದ್ದು. ಅದಲ್ಲಿ ಲಕ್ಷ್ಮಣ ಝೂಲಲ್ಲಿ ದಾಟಿ ಹೋಯಿದಿಯೊಂ. ಪಾತಾಳಾಂಜನೇಯಗುಡಿ, ದೇವಿ ದೇವಸ್ಥಾನಕ್ಕೆ ಹೋದಿಯೊಂ.ಸಪ್ತ ಋಷಿ ಆಶ್ರಮ ದೂರಂದ ನೋಡಿದಿಯೊಂ ,
ಡೆಲ್ಲಿ–ಅಕೇರಿಗೆ ಡೆಲ್ಲಿಗೆ ಎಂಗಳ ಯಾತ್ರೆ. ತೀರ್ಥಕ್ಷೇತ್ರ ದರ್ಶನ ಮುಗಾತು, ಇನ್ನಾಣ ಪ್ರಯಾಣವ ಪ್ರವಾಸ ಹೇಳ್ಲಕ್ಕು. ಇಲ್ಲಿ ಒಂದು ಕಡೆ ರೂಮು ಮಾಡಿದ ಜಾಗೆ ಐದನೇ ಮಾಳಿಗೆ. ಲಿಫ್ಟ್ ಇಲ್ಲೆ. ಹತ್ತಿ –ಇಳುದು ಮಾಡ್ಳೆ ಪ್ರಯಾಸಾಯಿದು.ಒಂದೊಂದು ರೂಮಿಲ್ಲಿ ಐದೈದು ಜೆನ ಇರೆಕಾಗಿ ಬಯಿಂದು. ಇಷ್ಟರ ತನಕ ಮಾಡಿದ ರೂಮುಗಳಷ್ಟು ಕೊಶಿ ಆಯಿದಿಲ್ಲೆ. ಇಲ್ಲಿ ಒಂದಿರುಳು,ಒಂದು ಹಗಲು.,ಸುತ್ತಾಡ್ಳೆ ಎರಡು ಮಿನಿಬಸ್ಸು ಮಾಡಿದ್ದು. ಅವರವರ ಬಸ್ಸಿನ ನಂಬರು ನೆಂಪು ಮಡಗಿ ಅಲ್ಲಲ್ಲಿ ಸುತ್ತಾಡಿ, ವಾಪಾಸು ಅದಲ್ಲೇ ಹತ್ತೆಕ್ಕು.ಕೆಲವು ಸರ್ತಿ ಅವೆರಡು ಬೇರೆ ಬೇರೆ ಕಡೆ ಇದ್ದು ರಜ ಗೊಂದಲ ಆದ್ದೂ ಇದ್ದು!. ತೀನ್ ಮೂರ್ತಿ ಭವನ, ಇಂದಿರಾಗಾಂಧಿ ಮೆಮೊರಿಯಲ್, ಇಂದಿರಾ ಬಲಿದಾನ ಸ್ಥಳ, ಕುತುಬ್ ಮಿನಾರ್ ,ಇವುಗಳ ಟಿಕೇಟು ತೆಗದು ಸರಿಯಾಗಿ ನೋಡಿರೆ;ಕೆಂಪುಕೋಟೆ, ರಾಷ್ಟ್ರಪತಿ ಭವನ, ಉಪ್ಪಿನಸತ್ಯಾಗ್ರಹ ಮಾಡಿದ ಮೆಮೊರಿಯಲ್ ಮೊದಲಾದ ಕೆಲವು ಜಾಗಗಳ ಬಸ್ಸಿಲ್ಲೇ ಸುತ್ತಾಡೆಂಡು ನೋಡಿದ್ದು.
ಮರಳಿ ಮನಗೆ– ಯಾತ್ರೆಯ ಪಟ್ಟಿಲಿದ್ದ ಜಾಗ ನೋಡಿ ಆದಮೇಲೆ ಮನಗೆ ಹಿಂತಿರುಗುವ ತವಕ. ೧೬-೧೦-೨೦೧೭ ರಂದು ಉದಿಕಾಲಕ್ಕೇ ನಾಲ್ಕು ಗಂಟಗೇ ಎದ್ದು ಖಾಲಿ ಚಾ ಕುಡುದು ೬ ಗಂಟಗೆ ರೂಮು ಬಿಟ್ಟು ಹೆರಟು ೭-೩೦ ಗಂಟಗೆ ರೈಲ್ವೇಸ್ಟೇಶನ್ ತಲಪಿ ೯ಗಂಟೆವರೆಗೆ(೭ ಗಂಟಗೆ ರೂಮು ಬಿಟ್ಟುಕೊಡೆಕಾಡ). ಸ್ಟೇಶನಿಲ್ಲಿ ಹಾಳ ಬಿದ್ದಿಯೊ°.ಅಂತೂ ೯-೧೫ಕ್ಕೆ ರೈಲು ಹತ್ತಿದಿಯೊ°. ಈಗ ಹತ್ತಿದ್ದು ಡೆಲ್ಲಿಂದ ಎರ್ನಾಕುಲಮ್ ಗೆ ಹೋಪ ನಿಜಾಮುದ್ದೀನ್ ಗಾಡಿ.ಕುಂಬಳೆಲಿ ಸ್ಟಾಪ್ ಇಲ್ಲೆ. ಕಾಸರಗೋಡಿಲ್ಲಿ ಇಳಿಯೆಕ್ಕು. ಎರಡು ಹಗಲು,ಎರಡು ಇರುಳು ಬಂಡಿಲಿ ಕೂದು ೧೮-೧೦-೨೦೧೭ ರಂದು ಕಾಶಿಯಾತ್ರೆ ಮುಗಿಸಿ ಮನೆ ಸೇರಿದೆ.
ಅನಿಸಿಕೆಃ– ವ್ಯಕ್ತಿತ್ವ ಗಟ್ಟಿಯಪ್ಪಲೆ, ಸಂಘಟನೆ ವೃದ್ಧಿಗೆ, ಲೋಕದ ಪುಣ್ಯಕ್ಷೇತ್ರ ಪರಿಚಯಕ್ಕೆ ಬೇಕು ಯಾತ್ರೆ. ಎಂಗೊ ೬೮ ಜೆನ ಜೊತೆಲಿದ್ದರೂ ಐದು ಜೆನ ಹವ್ಯಕರು ಮತ್ತೂ ನಿಕಟವಾಗಿ ಹನ್ನೆರಡು ದಿನ ಒಟ್ಟಿಂಗೇ ಒಡನಾಡಿದ್ದದು ತುಂಬಾ ಕೊಶಿಯಾಯಿದು. ಜಯಕುಮಾರಿ ಅತ್ತಿಗೆಯಂತೂ “ಆನಿನ್ನು ನಿನ್ನ ಲಿಸ್ಟಿಲ್ಲಿ ಸೇರಿದೆ ವಿಜಯತ್ತಿಗೆ” ಹೇಳಿತ್ತಾಗಿ ಎನಗೂ ಸಂಭ್ರಮ ಆತು. ಆತ್ಮೀಯ ಬಳಗದವಕ್ಕೆ.., ಕಾಶಿಗೆ ಹೋಗೆಂಡು ಬಪ್ಪದು ಕಷ್ಟ ಇಲ್ಲೆ ಈ ದಿನಂಗಳಲ್ಲಿ.ಆ ಜನ ಸಂದಣಿಲಿ ನೂಕು ನುಗ್ಗಲಿಲ್ಲಿ ಓಡಾಡುದು ಸುಲಭಲ್ಲ. ಕಾಶಿ,ಹರಿದ್ವಾರ ಓಣಿಗಳಲ್ಲಿ ನೆಡಕ್ಕೊಂಡು ಹೋಪಲೆಡಿಯದ್ದಾಂಗೆ ದ್ವಿಚಕ್ರ ವಾಹನಂಗೊ, ಎಷ್ಟೋ ಕಾಲದ ಹಿಂದೆ ಇದ್ದ ಆ ಓಣಿಯ ದೊಡ್ಡಮಾಡ್ಳೆ ಸಂಬಂಧಪಟ್ಟ ಮನೆವು ಬಿಡ್ತವಿಲ್ಲೇಡ.
ಎನ್ನ ಜೀವಿತಲ್ಲಿ ತಿಳುದೋ ತಿಳಿಯದ್ದೆಯೋ ಶೇಖರವಾದ ಮಾನಸಿಕ ಮಲಿನವ ತೊಳದು,ಒಗದು ಹಾಕಿ;ಶಿವಸಾನ್ನಿದ್ಧ್ಯಲ್ಲಿ ಶರಣುಹೋಗಿ ಪ್ರಾರ್ಥನೆ ಮಾಡಿ ಬಂದ ಮನಶ್ಶಾಂತಿ ಸಿಕ್ಕಿತ್ತು. ಶ್ರೀಗುರುದೇವತಾನುಗ್ರಹಂದ ಯಾತ್ರೆ ಸಮಯಲ್ಲಿ ಆರೋಗ್ಯಕ್ಕೆ ಕೊರತೆ ಆಯಿದಿಲ್ಲೆ. ವಿಶೇಷವಾಗಿ ಹೇಳ್ತರೆ; ಕಾಶಿವಿಶ್ವನಾಥನತ್ರೆ ನಮ್ಮ ಶ್ರೀಸಂಸ್ಥಾನ ಕೈಗೊಂಡ ಗೋ ಸಂಜೀವಿನಿ,ಲೋಕಕಲ್ಯಾಣ ಕಾರ್ಯಂಗೊಕ್ಕೆ ಆದಷ್ಟು ಬೇಗ ಸತ್ಫಲ ಸಿಕ್ಕಲಿ ಹೇಳಿ ಪ್ರಾರ್ಥಿಸಿಕ್ಕಿಯೇ ಎನ್ನ ವೈಯಕ್ತಿಕಕ್ಕೆ ಪ್ರಾರ್ಥಿಸಿದೆ. ಗಯಕ್ಕೆ ಹೋಪ ಚಾನ್ಸು ಇದಲ್ಲಿ ಇತ್ತಿಲ್ಲೆ. ಆ ಭಾಗ್ಯವ ದೇವರು ಏವಗ ಒದಗುಸುತ್ತನೋ ಆ ನಿರೀಕ್ಷೆ ಸಣ್ಣಕೆ ಇದ್ದು. ಒಟ್ಟಿಲ್ಲಿ ಭಾರತದ ಪ್ರಸಿದ್ಧ ತೀರ್ಥಕ್ಷೇತ್ರಂಗಳಲ್ಲಿ ಪ್ರಮುಖವಾದ ಕಾಶೀ ಕ್ಷೇತ್ರಕ್ಕೆ ,ಗ್ರೂಪಿಲ್ಲಿ ಹೋದ ಒಂದು ಆನಂದಾನುಭೂತಿ ಆದ್ದಂತೂ ನಿಜ.
——–೦——–
ಅಕ್ಕ ಈಗ ಓದಿದೆ ಓದಿ ಅಪ್ಪಗ kàಶಿ ವಿಶ್ವನಾಥ್ಸ್ನ ನ ನೋಡಿದ ಹಂಗೆ athu
ಒಳ್ಳೆಯ ಭಾವನಗೆ ಧನ್ಯವಾದ
ವಿಜಯತ್ತೇ,
ಕಾಶಿಯ ಪುಣ್ಯಕ್ಷೇತ್ರಕ್ಕೆ ಹೋಪಲೆ ಸಿಕ್ಕಿದ್ದದೇ ನಿಂಗಳ ಪುಣ್ಯ!
ಆತ್ಮಸಾಕ್ಷಿ ಅಪ್ಪಲೆ ಇಪ್ಪ ಗಂಗಾಸ್ನಾನ ಮಾಡಿ ಜೀವನದ ಪುಣ್ಯವೂ, ಕಾಶಿಯ ದೇವರುಗಳ ದರ್ಶನ ಮಾಡಿ ಕಣ್ಣುಗಳನ್ನೂ ಪಾವನ ಮಾಡಿಗೊಂಡಿ. ಪ್ರಯಾಣದ ಅನುಭವ ಸಂಕ್ಷಿಪ್ತವಾಗಿ ಆದರೂ ಕಣ್ಣಿಂಗೆ ಕಟ್ಟುವ ಹಾಂಗೆ ಬಯಿಂದು. ಅಕ್ಷರರೂಪಲ್ಲಿ ಅನುಭವವ ಬರದ್ದದು ಶೋಕಾಯಿದು.
ಧನ್ಯವಾದ ವಿಜಯತ್ತೆ..
ಶ್ರೀದೇವಿ,ಶ್ರೀಗುರುಗಳ ಅಹುಗ್ರಹ, ನಿಂಗಳೆಲ್ಲರ ಶುಭಹಾರೈಕೆ, ಬೆನ್ನು ಕಾವಲೆ ಇದ್ದತ್ತು. ಇನ್ನೇತರ ಚಿಂತೆ!.ಸಾವಕಾಶ ಹೋಗಿ ಬಂದೆ.
ಅತ್ತಿಗೆ, ಲೇಖನ ಓದಿದೆ. ಚೆನ್ನಾಗಿ ಬರದ್ದಿ. ಅಲ್ಲಿಗೆಲ್ಲಾ ಹೋದಾಂಗೆ ಆತ್ತು.
ಧನ್ಯವಾದ ಭಾವಯ್ಯ. ಬರದ್ದರ ಓದಿದವಕ್ಕೆ ಅಲ್ಲಿಗೆ ಹೋದಾಂಗೆ ಆದ್ದದು, ಕಾಂಬಲೆ ಸಿಕ್ಕಿ, ಆ ಶುದ್ದಿ ಮಾತಾಡ್ಸಿದವಕ್ಕೆ , ಕಾಶಿತೀರ್ಥ ಕೊಟ್ಟದು, ಇದುವೇ ಆನು ಮಾಡಿದ ಕಾಶಿ ಸಮಾರಾಧನೆ ಹೇಳಿ ಎನಗೆ ತೃಪ್ತಿ.
ಲಾಯಕ್ಕಾಯ್ದು ವಿಜಯತ್ತೆ ಬರದದ್ದು..
ಹರೇರಾಮ ಶುಭಾ,
ಯಾತ್ರೆಯ ವಿಷಯ ಬರೆದ್ದು ಲಾಯಕ ಆಯಿದು ಚಿಕ್ಕಮ್ಮ
ಧನ್ಯವಾದ ಗೋಪಾಲ
ನಿಂಗಳ ಆತ್ಮೀಯ ಮನೋಭೂಮಿಕಗೆ ವಂದನೆ ಬಾಲಣ್ಣ
ಚೆನ್ನೈ ಭಾವಂಗು,ಬಾಲಣ್ಣಂಗು ಧನ್ಯವಾದ. ಬಾಲಣ್ಣ ನಿಂಗಳ ಆತ್ಮೀಯ ಮನೋಭೂಮಿಕಗೆ ಹಾರ್ಧಿಕ ವಂದನೆ
ವಿಜಯಕ್ಕನ ಕಾಶಿಯಾತ್ರೆ ಓದಿದೆ
ಅಂದೊಂದರಿ ತ್ರಿವೇಣಿ ಬರದ ಕಾಶಿಯಾತ್ರೆ ಓದಿದ್ದೆ
ಎಂಗಳನ್ನು ಕರಕ್ಕೊ0ಡು. ಹೋಗಿ ತಂದು ಬಿಟ್ಟಂ ಗಾತು
ಸಚಿತ್ರ ಕಾಶೀದರ್ಶನಕ್ಕೊಂದೊಪ್ಪ. ಹರೇ ರಾಮ.
enage kaashige hogi banda hange aatu vijayakka.
ಮಾಲಕ್ಕಾ…, ತುಂಬಾ ಧನ್ಯವಾದಂಗೊ. ಈಗ ಓದಿದ ಅನುಭವ!.ಇನ್ನು ಹೋದ ಅನುಭವ ಆಗಲಿ, ಹೇಳಿ ಹಾರೈಕೆ. (ಗಂಗಾನದಿ ಕೊಳಚೆ ಹೇಳ್ತು ಕೇಳಿದ್ದೆ. ಖಂಡಿತ ಅಲ್ಲ. ಕ್ಲೀನಿದ್ದು. ಪ್ಲಾಸ್ಟಿಕ್ ವಸ್ತುವಾಗಲೀ ಅಸಹ್ಯದ ವಾತಾವರಣ ಅಲ್ಲಿ ನದೀ ತೀರಲ್ಲಿಯಾಗಲೀ ನೀರಿಲ್ಲಿಯಾಗಲೀ ಕಾಂಬಲೆ ಸಿಕ್ಕಿದ್ದಿಲ್ಲೆ. ಭಟ್ಟಕ್ಕಳ ಮನೆ ಓಣಿಯ ಕರೆಲಿ ರಜ ಕ್ಲೀನ್ ಕಡಮ್ಮೆ. ದೇವಸ್ಥಾನದ ಸುತ್ತವೂ ಸ್ವಚ್ಚ!. ಮೋದಿಯ ಸರಕಾರ ಮುಂದುವರುದರೆ; ನಿಂಗೊಲ್ಲ ಹೋಪ ಸಮಯಕ್ಕೆ ಇನ್ನೂ ಅಭಿವೃದ್ಧಿ ಅಕ್ಕು. ಆಗಲಿ ಹೇಳಿ ಪ್ರಾರ್ಥಿಸುವೊಂ.
ಒಪ್ಪ ಲೇಖನ. ಹಲವಾರು ವಿವರಂಗೊ ಸಿಕ್ಕಿತ್ತು.
ಏವತ್ತಿನಂತೆ ಫೊಟೋ ಸಹಿತ ಲೇಖನವ ಬಯಲಿಂಗೆ ಹಾಕಲೆ (ಫೊಟೊ ಬೇಕಾದಲ್ಲಿ ಕೂರ್ಸಲೆ)ಶರ್ಮಭಾವನ ಸಹಕಾರಕ್ಕೆ ಧನ್ಯವಾದಂಗೊ.
ಲಾಯಕ ಆಯಿದು . ಕಾಶಿಗೆ ೧೫ ವರ್ಷ ಮೊದಲು ಒಂದರಿ ಹೋಗಿದ್ದಿತ್ತೆ.
ಕಂಬಾರು ಭಾವ ನಿನ್ನ ಅಣ್ಣ ಡೆಲ್ಲಿಲಿ ಇದ್ದಾಲ್ಲೊ. ಸುಲಭ.
ಆ ಹೆಸರಿನವು ಇಬ್ರು ಇದ್ದವು ಹೇಳಿ ಗೊಂತಾತು. ಆನು ಕಂಡ krishnannana ದೊಡ್ಡಪ್ಪನ ಮಗ ಅಣ್ಣ ನಿಂಗಳೊಟ್ಟಿಂಗೆ ಬಂದದು.
ಲೇಖನ 0dutta ಹಾಂಗೆ ಓದುಗ ಯಾತ್ರಿಕರ ಒಟ್ಟಿಂಗೆ ಇದ್ದ ಅನುಭವ ಆತು ವಿಜಯಕ್ಕ.ದೊಡ್ಡಮಾಣಿ ಕೃಷ್ಣಣ್ಣನ ಒಕ್ಟ್ ೧೦ಕ್ಕೆ ಆನು ಕಂಡಿದೆ.
ಧನ್ಯವಾದ ಶಿವರಾಮಣ್ಣ. ಅಂದಹಾಂಗೆ ದೊಡ್ಡಮಾಣಿ ಕೃಷ್ಷ್ಣ ಅಣ್ಣನ ಓಕ್ಟಾಬರ ೧೦ಕ್ಕೆ ನಿಂಗೊ ಎಲ್ಲಿ ಕಾಂಬದು ಶಿವರಾಮಣ್ಣ? ಅಂಬಗ ಎಂಗೊ ಯಾತ್ರೇಲಿ ಇತ್ತಿದ್ದಿಯೊಂ.
ಓದಿಯಪ್ಪಗ ಹೋದ ಹಾಂಗೆ ಆತು ದೊಡ್ಡಮ್ಮ…
ಧನ್ಯವಾದ ಶಾಮಣ್ಣ , ಬಯಲಿಂಗೆ ಅಪರೂಪ!. ಬಂದದು ಸಂತೋಷಾತು.