Oppanna.com

ಆನಡ್ಕ ಜಲಪಾತ – ಧಾರೆ 2

ಬರದೋರು :   ರಾಮಚಂದ್ರ ಮಾವ°    on   18/02/2013    8 ಒಪ್ಪಂಗೊ

ರಾಮಚಂದ್ರ ಮಾವ°
Latest posts by ರಾಮಚಂದ್ರ ಮಾವ° (see all)

ಅಡ್ಯನಡ್ಕ ರಾಮಚಂದ್ರಮಾವನ ಜಲಪಾತದ ಶುದ್ದಿ ಕಳುದವಾರಂದ ಮುಂದುವರುದ್ದು.
ಕಳುದವಾರದ ಶುದ್ದಿ: ಆನಡ್ಕ ಜಲಪಾತ – ಧಾರೆ 1
ಮುಂದೆ ಓದಿ…

ಆನಡ್ಕ ಜಲಪಾತ – ಭಾಗ 2:

‘ಪಡುವಣ ತೀರದ ಕನ್ನಡ ನಾಡಿನ ಕಾರ್ಗಾಲದ ವೈಭವ ’ ಮೆಲ್ಲಂಗೆ ಕಳ್ದು ದೀಪಾವಾಳಿ ಶುರು ಅಪ್ಪಾಗ ಶಂಕರಣ್ಣಂದು ಸಣ್ಣಕ್ಕೆ ಮತ್ತೊಂದು ನೆನಪ್ಪು.
ಈ ಸರ್ತಿ ಶಂಕರಣ್ಣನ ಭೇಟಿ ಮಾಡುದೇ ಹೇಳಿ ಗಟ್ಟಿ ಮಾಡಿ ಫೋನು ಮಾಡಿಯೇ ಬಿಟ್ಟೆ. ಶಂಕರಣ್ಣನ ಕುಶಿ ಅವನ ದೆನಿಲೇ ಗೊಂತಾಯಿಕೊಂಡು ಇತ್ತು.
‘ನೋಡಿ, ಬಸ್ಸು ಹತ್ತಿದ ಕೂಡ್ಲೆ ಎನಗೊಂದು ಫೋನು ಮಾಡಿ. ಬೆಳ್ತಂಗಡಿಗೆ ಮುಟ್ಟಿಯಪ್ಪಾಗ ಮತ್ತೊಂಸರ್ತಿ ಮಾಡಿ. ಉಜಿರೆಲಿ ಆನು ಇರ್ತೆ’ ಬೇರೆ ಹೆಚ್ಚು ಪಟ್ಟಾಂಗವೆ ಇಲ್ಲೆ.
ಎನಗೆ ಅಂದಾಜಾದ್ದು ದಿಡುಪೆಗೂ ಮೊಬೈಲು ಮುಟ್ಟಿದ್ದು ಹೇಳಿ! ಅಂತೂ ಉಡುಪಿಲಿ ಬಸ್ಸು ಹತ್ತಿ ಉಜಿರೆಲಿ ಇಳ್ದಾಗ ಬಸ್ಸಿನ ಬಾಗ್ಲಿಂಗೇ ಶಂಕರಣ್ಣ ಹಾಜಿರು!

‘ಬೈಕಿಲಿ ಕೂಪಲೆಡಿಗನ್ನೆ ’ ಹೇಳಿ “ಎನ್ನ ಬೆನ್ನ ಹಿಂದೆ ಹತ್ತಿ, ಹಾಂಗೇ ಕಾಲಿನ ಚೂರು ಅತ್ಲಾಗಿ ಎತ್ತಿ’ ಹೇಳಿಕೊಂಡೇ ಬೈಕು ಎಬ್ಬುಲೆ ಶುರು ಮಾಡಿದ.
ಉಜಿರೆಂದ ಚಾರ್ಮಾಡಿ ಹೊಡೆಂಗೆ ಹೋಗಿ ಸೋಮಂತಡ್ಕ- ಮುಂಡಾಜೆಲಿ ಎಡಕ್ಕೆ ದಿಡುಪೆ ಹೊಡೆಂಗೆ ಬೈಕು ತಿರುಗ್ಸ್ದ.
ದಾಮಾರು ಮಾರ್ಗ, ಕೆಮಿಗೆ ಗಾಳಿ ಹೊಕ್ಕಾಂಗೆ ಜೋರಿಲೆಬಿಟ್ಟ.
ಘಾಟೀ ಬುಡದ ಕಾಡಿಂಗೇ ಸೀದ ನುಗ್ಗುವ ಅಂಬೆರ್ಪೊ ಏನೋ ಹೇಳಿ ಗ್ರೇಂಶಿಕೊಂಡಿದ್ದಾಂಗೆ ‘ಎನ್ನ ಮನೆ ಬಂತು ನೋಡಿ.’ ಹೇಳಿ ಮಾರ್ಗದ ಕರೆಯ ಗೇಟಿನ ಹತ್ತರೆ ನಿಲ್ಸಿದ.
‘ಏಳು ವ‌ರ್ಷ ಹಿಂದೆ ಆನು ಇಲ್ಲಿ ಬಂದಿಪ್ಪಾಗ ಇಲ್ಲಿದ್ದದು ಕಾಡು, ಈಗ ನೋಡಿ ಎನ್ನ ಮನೆ. ’ ಹೇಳಿ ಮಾತಾಡಿಗೊಂಡು ಮನೆಯ ಬುಡಕ್ಕೆ ಬಂದೆಯೊ.

ಸೂರ್ಯ ಕಂತುತಿದ್ದ. ಮನೆಯ ಜಾಲ್ಲೇ ನಿಂದು ಸುತ್ತ ಒಂದ್ಸತ್ತಿ ನೋಡಿದೆ. ದಟ್ಟ ಕಾಡು. ದೃಷ್ಟಿಯ ಇನ್ನೂ ಮೇಲೆ ಹಾಯ್ಸಿದಾಗ ಕಂಡದು ಬೊಂಡಾಜೆ ಗುಡ್ಡೆ.
ಅದರ ಹತ್ತರೆಯೇ ‘ಪೊಲಿಗೆ ಬೆಟ್ಟ ’.
‘ಬೊಂಡಾಜೆ ಗುಡ್ಡೆಯ ಜನಿವಾರ ಕಂಡಿದಿರಾ? ’ ಶಂಕರಣ್ಣನ ಪ್ರಶ್ನೆಗೆ ಎನ್ನದೂ ಕಣ್ಣಿಲೇ ಪ್ರಶ್ನೆ.
‘ಅತ್ಲಾಗಿ ನೋಡಿ, ಅಲ್ಲಿ ಬೆಳಿ ಗೆರೆ ಹಾಂಗೆ ಕಾಣುತ್ತಲ್ಲದಾ ಅದುವೇ . ಅದೇ ಬೊಂಡಾಜೆ ಜಲಪಾತ. ಮಳೆಗಾಲಲ್ಲಿ ಮೋಡ, ಮೈಂದು ಎಲ್ಲ ಮುಚ್ಚಿ ಏನೂ ಕಾಣದ್ದರೂ ಬಾಕಿ ದಿನ ಮನೆ ಜೆಗಿಲಿಂದಲೇ ಚೆಂದಕ್ಕೆ ಕಾಣುತ್ತು.  ಎಂಗೊಗೆ ನಿತ್ಯ ಟಿ ವಿಲಿ ಕಾಂಬ ಹಾಂಗೆ.
ನಾವು ನಾಳಂಗೆ ನೋಡುವ, ಜಲಪಾತ ಮಾತ್ರ ಬೇರೆ. ಕಡಮೆ, ಆನಡ್ಕ, ದಿಡುಪೆ ಹೇಳಿ ಬೇರೆ ಬೇರೆ ಹೆಸರಿಲಿ ಹೇಳುತ್ತವು. ನಾಳಂಗೆ ಉದಿಯಪ್ಪಗ ಬೇಗ ಹೆರಡುವ. ’

~

‘ನಾವು ಬೈಕಿಲಿಯೂ ಕೈಕಾಲ್ಲಿಯೂ ಬೆಟ್ಟ ಹತ್ತಕ್ಕು. ಹೊಟ್ಟೆ ಗಟ್ಟಿ ಮಾಡಿಕೊಳ್ಳಿ’ ಹೇಳಿಕೊಂಡು ಶಂಕರಣ್ಣ ಬೆಶಿ ಬೆಶಿ ಅಕ್ಕಿ ರೊಟ್ಟಿ ಎರಡೆರಡು ಅಕ್ಕನ ಕೈಲಿ ಹಾಕ್ಸಿ ಕೊಂಡ.
ಅಕ್ಕ ಎನಗೆ ಬಳ್ಸುವಾಗ ಹೇಳಿದವು ‘ಗುಡ್ಡೆ ಹತ್ಲೆ ಸುರುಮಾಡಿದರೆ ಊಟ ಇನ್ನು ಎ‌ಷ್ಟೊತ್ತಿಂಗೊ. ಇನ್ನೆರಡು ರೊಟ್ಟಿ ಹಾಕ್ಕೊಳ್ಳಿ, ಮೊಸರೂ ಹಾಕ್ಕೊಳ್ಳಿ. ’ ಹೇಳಿಕೊಂಡು ಜಲಪಾತ ನೋಡ್ಲೆ ಹೋಪೋರ ಹೊಟ್ಟೆ ಗಟ್ಟಿ ಮಾಡಿದವು.
ಹೊಟ್ಟೆ ಗಟ್ಟಿ ಆವುತ್ತಿದ್ದ ಹಾಂಗೆ ಎರಡು ಕುಪ್ಪಿಲಿ ನೀರು, ನಿಂಬೆ ಹಣ್ಣು ಪಾನಕ ತುಂಬಿ ಚೀಲಲ್ಲಿ ತಯಾರಿ!
ಅದೇ ಚೀಲಕ್ಕೆ ಒಂದೆರಡು ತುಂಡು ಹೊಗೆಸೊಪ್ಪು ಪೇಪರಿಲಿ ಸುತ್ತಿ ಹಾಕಿದವು. ‘ಎಂಗೊಗೆಂತ ಎಲೆ ತಿಂಬ ಸಾಹಿತ್ಯ ಬೇಡ, ಇದೆಂತಕೆ? ’ ಹೇಳಿದ್ದಕ್ಕೆ ‘ ಇದು ನಿಂಗೊಗಲ್ಲ, ನಿಂಗಳ ಎದುರ್ಗೊಂಬಲೆ ಕಾದುಗೊಂಡಿಪ್ಪ ಉಮ್ರುಗೊಕ್ಕೆ ’ ಹೇಳಿ ಅಕ್ಕ ನೆಗೆಮಾಡಿದವು!

ಎಂಗೊ ಹೊರಟೆಯೊ. ಎಂಗೊ ಹೇಳಿದರೆ ಆನು, ಶಂಕರಣ್ಣ ಮತ್ತೆ ಅವನ ಬೈಕು!
ಶಂಕರಣ್ಣನ ಮನೆಯ ಆಸುಪಾಸು ‘ಹೇಡಿಯ’. ಮುಂದೆ ಮಾರ್ಗಲ್ಲಿ ಕಡಿರುದ್ಯಾವರ, ಕಾಜೂರು, ಮಿತ್ತಬೈಲು ದಾಂಟಿ ದಿಡುಪೆಯ ಕೊಡಿ ಮುಟ್ಟುದಕ್ಕಿಂತ ಮೊದಲು ಬಲತ್ತಿಂಗೆ ಕಾಡ ಮಾರ್ಗಕ್ಕೆ ಶಂಕರಣ್ಣ ಬೈಕಿನ ತಿರುಗಿಸಿದ.
ಬೈಕು ತಿರುಗ್ಸಿದ್ದಾಂಗೆ ‘ಬೈಕು ಗಟ್ಟಿ ಹಿಡ್ಕೊಂಡು ಕೂರಿ, ಮಾರ್ಗ ಲಾಯಿಕ್ಕಿಲ್ಲೆ ’ ಹೇಳಿ ಎಚ್ಚರಿಗೆ ಕೊಟ್ಟ.
ಎ‌ಷ್ಟು ಪಡ್ಪೋಶಿ ಹೇಳಿ ಮತ್ತೆಯೇ ಗೊಂತಾದ್ದು. ಎತ್ತರಕ್ಕೆ ಗಯಮೆ ದಾರಿ, ಉರುಟುರಟು ಸಡಿಲ ಕಲ್ಲುಗೊ.
ಬೈಕು ದಮ್ಮುಕಟ್ಟಿ ಮೇಲೆ ಏರುವಾಗ ದಗ ದಗ ಕೊಣ್ಕೊಂಡೇ ಮುಂದೆ ಹೋದ್ದು.
ಎನಗೆ ಆನು ಬೈಕಿಲಿದೆಯೋ ಅಲ್ಲ ಮರ್‍ಳು ಕುದುರೆಯ ಮೇಲಿದ್ದೆಯಾ ಹೇಳಿ ಅಳ್ಳೆಲೇ ಹೆದರಿಕೆ.

ಹಿಂದೆ ಸಣ್ಣ ಸಣ್ಣ ಕಲ್ಲುಗೆಲ್ಲ ಬೆಡಿಂದ ಗುಂಡು ರಟ್ಟಿದ ಹಾಂಗೆ ಚಕ್ರದ ಹಿಂದೆ ರಟ್ಟಿ ಕೊಂಡಿತ್ತವು..
ರಜಾ ಜೀವ ಭಯಂದಲೇ ಕೇಳಿದೆ ‘ ಶಂಕರಣ್ಣ, ಬೈಕಿಂದ ಇಳ್ದೇ ನಡವ ಆಗದ!? ’. ‘ಛೆ ಛೆ ಎನಗಿದೆಲ್ಲಾ ಮಾಮೂಲಿ. ನಿಂಗೊ ಸುಮ್ಮನೆ ಕೂರಿ ನೋಡೋ’ ಹೇಳಿಗೊಂಡೇ ಎಕ್ಸಲೇಟರ್ ಮತ್ತುದೆ ತಿರುಗಿಸಿದ.
ಎದೆ ಒಳ ಅವಲಕ್ಕಿ ಕುಟ್ಟಿಕೊಂಡಿದ್ದಾಂಗೆ ಆನು ಮಾರ್ಗ ನೋಡುದರ ಬಿಟ್ಟು ಮೇಲೆ ನೋಡುಲೆ ಸುರುಮಾಡಿದೆ. ಅರೆ ಅದೆಂತ ದೃಶ್ಯ!
ಕರೆಲಿ ದಟ್ಟ ಕಾಡು, ಎದುರು ಕೈಗೇ ಮುಟ್ಟುಲಪ್ಪಾಂಗೆ ಕಾಂಬ ಗುಡ್ಡೆಗೊ! ಆದರೆ ಮೂಲೆ ಮುಡುಂಕಿನ ದಿಡುಪೆಯ ಜನಂಗೊ ಇಲ್ಲಿದೆ ಅಡಕ್ಕೆ, ತೆಂಗು ಬೆಳೆಸುತ್ತವು !
ಬಲ ಬದಿಂಗೆ ಕರ್ಗಾಣ ಕಾಡಾದರೆ ಎಡತ್ತಿಂಗೆ ಅಡಕ್ಕೆ ತೆಂಗಿನ ತೋಟಂಗೊ! ಅಡಕ್ಕೆ ತೆಂಗಿನ ಹೇಂಗಾದರೂ ಕೊಯ್ದು ಸಾಗ್ಸ್ತವೊ? ತೆಂಗಿನ ಕೊಯ್ವ ಅಗತ್ಯವೆ ಇಲ್ಲೆ ಹೇಳಿ ಕಾಣ್ತು. ತೆಂಗಿನ ಬುಡಲ್ಲಿ ಬೊಂಡದ ತೊಟ್ಟೆ ರಾಶಿ ಕಾಂಬಾಗ ಆ ಕೆಲಸ ಮಂಗಂಗೊ ಮೊದಲೇ ಮಾಡಿ ಮುಗ್ಸಿದ ಹಾಂಗೆ ಕಾಣು!
ಈ ಎಲ್ಲ ಯೋಚನೆಲಿಯೇ ಇಪ್ಪಾಗ ಹೆದರಿಕೆಯಾಗಲೀ, ಬೈಕಿನ ಕೊಣ್ದಾಟಾಗಲೀ ಗೊಂತೇ ಆಯಿದಿಲ್ಲೆ.

ಬೈಕು ನಿಂದಾಗಲೇ ಬಚಾವ್ ಹೇಳಿ ಆದ್ದು. ನಿಂದಲ್ಲೇ ಸುತ್ತಮುತ್ತ ಎರಡು ಮೂರು ಮನೆಗೊ. ಶಂಕರಣ್ಣ ಹೇಳಿದ ಬ್ರಿಟಿ‌ಷರ ಕಾಲಲ್ಲೇ ಬಂದು ಕೂದ ಚಿತ್ಪಾವನರಡೊ.
ಎಲ್ಲೆಲ್ಲೋ ಮುಡುಂಕಿಲಿ ಜಾಗೆ ಮಾಡಿಕೊಂಡಿಪ್ಪ ಹವ್ಯಕರಿಂದಲೂ ಬಲದೋರು ಹೇಳಿ ಕಂಡತ್ತು.
ಮುಂದೆ ಒಂದು ಮನೆಯ ಜಾಲು ದಾಂಟಿ ಹೋಯಕ್ಕು, ಅವರ ಒಪ್ಪಿಗೆ ಇಲ್ಲದ್ದೆ ಅತ್ಲಾಗಿ ಹೋಪಲೇ ಎಡಿಯ.
ಶಂಕರಣ್ಣ ಬಾರೀ ಕುಶಾಲಿನ ಜನ. ಹಾಂಗೇ ಆ ಮನೆಯ ಜಾಲು ದಾಂಟ್ತಾ ಇಪ್ಪಾಗ ಪಿಸಿ ಪಿಸಿ ಹೇಳಿದ “ನೋಡಣ್ಣ, ಈ ಮನೆಯ ಮಾಣಿಗೆ ಈಗ ವ‌ರ್ಷ ಮೂವತ್ತೈದು. ಮದುವೆ ಇನ್ನೂ ಆಯಿದಿಲ್ಲೆ.
ಈ ಗಸಣಿ ಜಾಗೆ ನೋಡಿದರೆ ಅವಂಗೆ ಆರಾದರೂ ಕೂಸು ಕೊಡುಗು ಹೇಳಿ ಕಾಣ್ತ?’ ‘ ಅಪ್ಪು, ಎಲ್ಲರಿಂಗೂ ಬೆಂಗ್ಳೂರಿನ ಮಾಣಿಯೇ ಆಯಕ್ಕು, ಕಂಪ್ಯೂಟರಿನೋನೇ ಆಯಕ್ಕು ಹೇಳಿ ಇಪ್ಪಾಗ ಈ ಮೂಲೆಗೆ ಆರು ಬತ್ತವು’ ಹೇಳಿ ಹೂಂ ಕುಟ್ಟಿದೆ.

ತೋಟ ಹಾಂಗು ಕಾಡಿನ ಮದ್ಯೆ ನಡಕ್ಕೊಂಡು ಹೋಪಾಗ ಎರಡು ಮೂರು ತಡಮ್ಮೆ ದಾಂಟಿ ಹೋಯಕ್ಕಾತು.
ಕರೆಲೇ ಅಡಕ್ಕೆ ಮರದ ದಂಬೆಲಿ ಕೆಳ ಮನೆಗೊಕ್ಕೆ ನೀರು ಧಾರಾಳ ಹರ್‍ಕೊಂಡಿತ್ತು. ಮುಂದೆ ಹೋಯ್ಕೊಂಡಿದ್ದ ಹಾಂಗೆ ನೆಲ ಎಲ್ಲ ಪಿಚಿ ಪಿಚಿ ಮಲಂಪು.
ಊರಿನ ಸುದ್ದಿ ಎಲ್ಲ ಮಾತಾಡಿಗೊಂಡು ಹೋಯ್ಕೊಂಡಿಪ್ಪಾಗ ಶಂಕರಣ್ಣ ಒಂದ್ಸತ್ತಿ ನಿಂದು “ಅದೆಂತ, ನಿಂಗಳ ಕಾಲಿಂಗೆ ಉಮ್ರು ಕಚ್ಚಿಕೊಂಡಿದ್ದಲ್ಲದ ’ ಹೇಳಿದ.
ಬಗ್ಗಿ ನೋಡುವಗ, ಕಾಲ್ಲಿ ನೆತ್ತರು ಸುರಿವದು ಕಂಡತ್ತು. ಕಪ್ಪಿಂದೆಂತದೋ ಒಂದು ಕಚ್ಚಿ ಗೊಂಡಿತ್ತು. ಎಳದ್ದು ಇಡ್ಕಿದೆ.

ಒಯ್ಲು ಇಪ್ಪ ನೀರಿಲೇ ನಡಕ್ಕೊಂಡು, ಕಲ್ಲು ಚಪ್ಡಿಲಿ ಹಾರಿಗೊಂಡು ಕಾಡಿಲೇ ಮುಂದೆ ಮುಂದೆ ಹೋದೆಯ.
ಹೋವುತ್ತಾ ಇಪ್ಪಾಗ ಹತ್ತರಂದೆಲ್ಲೋ ಸೊರ್ರರ್ರರ್ರ ಹೇಳಿ ಕೇಳ್ತಿತ್ತು. ಹಾಂಗೆ ಬಚ್ಚಿ ಉಸ್ಸಪ್ಪ ಹೇಳಿ ನಿಂದಾಗಳೇ ಕಂಡದು ಎದುರೇ ಆನಡ್ಕ – ಕಡಮೆ – ದಿಡುಪೆ ಜಲಪಾತ!

~

ಹಾಲು ಸುರಿವಾಂಗಿಪ್ಪ ಧಾರೆ. ಜಲಪಾತದ ಬುಡಕ್ಕೆ ಬೆಶಿಲು ಬೀಳುವಾಗ ಇಡೀ ನೀರಿನ ಧಾರೆ ಮಾಣಿಕ್ಯ ಧಾರೆಯೇ. ಮೇಲೆ ಜಲಪಾತದ ಬುಡಲ್ಲಿ ಕಲ್ಲೆಲ್ಲ ಚೆಂದಕ್ಕೆ ಒಯ್ಶಿ ಮಡಿಗಿದಾಂಗೆ.
ಮತ್ತೆ ಅಲ್ಯಾಣ ಆ ಬಂಡೆಗೊಲ್ಲ ರೇಖಾ ಗಣಿತದ ಒಳ್ಳೆ ಅಕಾರಂಗೊ. ಚೆಂದದ ಜಾಗೆ. ಹಾಂಗೆ ಕೂದುಗೊಂಡು ನಿಂಬೆ ಹಣ್ಣ ಪಾನಕ ಕುಡಿವಗಳೇ ಕಣ್ಣಿಂಗೆ ಬಿದ್ದದು ಪುದೆ ಎಡೆಯ ಗಂಗಸರದ ಕುಪ್ಪಿ!
ಎಂತಾದುರುದೇ, ಎ‌ಷ್ಟು ಚಂದ ಜಾಗೆ ಆಗಿರಲಿ ತಲೆಗೇರದ್ದೆ ನೋಡ್ಳೇ ಎಡಿಯದೊ ಈ ಜನಂಗೊಕ್ಕೆ!?
ಜಲಪಾತದ ಜೋಗ್ಳ ಕೇಳ್ತಾ, ಹನುಕ್ಕುವ ನೀರಿಲಿ ನೆನಕ್ಕೊಂಡು ಕುಶಿಂದ ಒಂದರ್ದ ಗಂಟೆ ಕಳೆದೆಯೊ°.
ಮತ್ತೆ ವಾಪಾಸು ಬಂದುಕೊಂಡಿದ್ದಾಂಗೆ ಮತ್ತೆರಡು ಉಮ್ರುಗೊ ಎನ್ನ ಕಾಲ ಕಚ್ಚಿದವು. ‘ಎಂತ ಶಂಕರಣ್ಣ, ಇಲ್ಲಿಯಾಣ ಉಮ್ರುಗೊಕ್ಕೆ ನಿಂಗಳ ಸರೀ ಗುರ್‍ತ ಇರಕ್ಕು. ಅದಕ್ಕೆ ನಿಂಗೊಗೆ ರಿಯಾಯಿತಿ. ಎನ್ನ ಅವಸ್ಥೆ ನೋಡಿ! ’ ಹೇಳಿಯಪ್ಪಾಗ ಅವನ ನೆಗೆ ನೋಡಕ್ಕು! ಇ‌ಷ್ಟಾದರುದೆ ಕಿಸೆಂದ ಹೊಗೆಸೊಪ್ಪು ತೆಗವಲೆ ನೆನಪ್ಪೇ ಇಲ್ಲೆ.
ನಿಂಗೊ ಎರಡು ಉಮ್ರುಗೊಕ್ಕೇ ಹೆದರಿದಿ. ಇಲ್ಲಿಯಾಣೋರ ಕತೆಗೊಂತಿದ್ದಾ? ಬೇಸಗೆಲಿ ಮೇಲೆ ಮುಳಿ ಗುಡ್ಡೆಗೆ ಕಿಚ್ಚು ಬಿದ್ದಾಗ ಕಾಡಿನ ಕೃಷ್ಣ ಸರ್ಪಂಗೆಲ್ಲ ಕೆಳ ಇಳಿದು ಇವರ ತೋಟ, ಮನೆ, ಕೆದೆಗೆ ನುಗ್ಗುತ್ತವು. ಇವೆಲ್ಲಾ ಎ‌ಷ್ಟು ಜಾಗ್ರತೆಲಿ ಇರಕ್ಕು? ’ ಮೈ ಜುಂ ಆತು.

ವಾಪಾಸು ಬಪ್ಪಗಳುದೆ ಮರ್‍ಳು ಕುದುರೆಯ ಸವಾರಿಯೇ ಆದರೂ ದಮ್ಮು ಕಟ್ಟಿಗೊಂಡು ಧೈರ್ಯವಾಗಿತ್ತಿದ್ದೆ.
ಹಾಂಗೆ ದೊಡ್ಡ ಮಾರ್ಗ ಮುಟ್ಟಿಯಪ್ಪಾಗ ‘ ಅಣ್ಣ, ದಿಡುಪೆಯ ಎಂಡ್ ಪಾಯಿಟ್ ನೋಡುವ ಆಗದ’ ಹೇಳಿಗೊಂಡೇ ಬೈಕಿನ ಬಲಕ್ಕೆ ತಿರ್ಗಿಸಿದ ಶಂಕರಣ್ಣ.

ಎರಡು ಗುಡ್ಡೆಗಳ ಮದ್ಯೆ ಇದ್ದು ದಿಡುಪೆ. ಬುಡಲ್ಲಿ ಅತ್ಲಾಗಿ ಇತ್ಲಾಗಿ ಕೊಳಕ್ಕೆ ಗೆದ್ದೆ.
ಮೂರನೇ ಬೆಳೆಗೆ ನೇಜಿ ನೆಟ್ಟುಗೊಂಡಿತ್ತದ್ದವು. ‘ಇಲ್ಲಿ ದೇವರಾಯ ಹೇಳಿ ಒಬ್ಬ ಇದ್ದ. ಅವನತ್ರೆ ಎಷ್ಟು ನಮುನೆಯ ಬಿತ್ತಿನ ಭತ್ತ ಇದ್ದು ಹೇಳಿ ಅಂದಾಜಿದ್ದ? ’. ಎಲ್ಲಿಯೋ ತಲೆ ಇದ್ದ ಆನು ‘ಇಲ್ಲೆ’ ಹೇಳಿ ತಲೆ ಆಡಿಸಿದೆ.
ಶಂಕರಣ್ಣ ಹೇಳಿದ ’ ನೂರರ ಮೇಲೆ!! ’
~~

ಮನೆಗೆ ಮುಟ್ಟಿ ಮಿಂದು ಉಂಡಪ್ಪಗ ಬಚ್ಚೆಲೆಲ್ಲ ಕಮ್ಮಿ ಆಗಿ ಶಂಕರಣ್ಣ ಒಳ್ಳೆ ಕುಶಿಲೇ. ಒತ್ತಾಯಕ್ಕೆ ಪರಮಾನ್ನ ರಜ ಜಾಸ್ತಿಯೇ ಹೊಡದ ಕಾರಣ ಎನಗೆ ಕಣ್ಣು ಕೂರ್‍ತ ಹಾಂಗೆ ಆಯ್ಕೊಂಡಿತ್ತು.
ಆದರೆ ಎಂದೋ ಹುಟ್ಟೂರು ಬಿಟ್ಟು ಕಾಡಿನ ಮದ್ಯೆ ಬಿಡಾರ ಮಾಡಿದ್ದ ಶಂಕರಣ್ಣಂಗೆ ಅವನ ಕಷ್ಟ ಸುಖ ಹೇಳಿಕೊಳ್ಳೆಕ್ಕು ಹೇಳುವ ಉಮೇದು ಇತ್ತು.
ಹೇಳ್ಲೆ ಸುರುಮಾಡಿದ, ಕೆಮಿ ಕೊಟ್ಟೆ.

‘ಏಳು ವ‌ರ್ಷ ಹಿಂದೆ ಎಲ್ಲಾ ಬಿಟ್ಟು ಕೃಷಿ ಒಪ್ಪಿ ಇಲ್ಲಿಗೆ ಬಂದೆ. ಸಣ್ಣ ಗೆದ್ದೆ, ಒಂದು ಐವತ್ತು ಅಡಕ್ಕೆ ಮರಂಗೊ ಇತ್ತಿದ್ದವಷ್ಟೆ.
ಅಲ್ಲೇ ಕೆಳ, ಯಾವ ಕಾಲದ್ದೊ ಗೊಂತಿಲ್ಲೆ ಒಂದು ಬಸವನ ಮೂರ್ತಿ ಇದ್ದು. ಪಾಡ್ಯಕ್ಕೆ ಊರಿನ ಜನ ಬಂದು ಅರಶಿನ ಕುಂಕುಮ ಹಾಕಿ ದೀಪ ಹೊತ್ಸಿ ಆರತಿ ಮಾಡಿ ಹೋವುತ್ತವು.
ಬಸವನ ಕಾರಣಿಕವೋ, ಎನ್ನ ಒದ್ದಾಟವೋ ಅಂತು ಒಬ್ಬನೆ ಗೆಯ್ದು ತೋಟ ದೊಡ್ಡದು ಮಾಡಿದೆ.
ಎತೆಂತ ಮರಂಗೊ, ಕಡಿಸಿದೆ ರಬ್ಬರು ತೋಟ ಹಾಕಿದೆ. ನಿಧಾನಕ್ಕೆ ಫಲ ಬತ್ತು. ಇನ್ನು ಎನ್ನ ತೋಟದ ಕೆಲಸಕ್ಕೆ ಬಂದ ಆಳುಗಳದ್ದೂ ಒಂದು ಕತೆ.
ಅವು ದಿಡುಪೆಗೆ ಹತ್ತರ ಬೊಂಡಾಜೆಯವು. ಅವುಗಳ ಮನೆಹತ್ರವೇ ಸ್ಪೈನಿನ ಜವ್ವನ ಸಸ್ಯ ಸಂಶೋಧನೆಗೆ ಬಂದೋನೊಬ್ಬ ಟೆಂಟು ಹಾಕಿ ಬಿಡಾರ ಹಾಕಿದ್ದ.
ಕಾಡಿಲಿ ಸಂಶೋಧನೆಗೆ ತಿರ್‍ಗಾಡುವಾಗ ಸಹಾಯ ಮಾಡಿದೋರಿಂಗೆಲ್ಲಾ ಕೈ ತುಂಬ ಪೈಸೆ ಕೊಟ್ಟಿತ್ತಿದ್ದ.
ಕೆಲವೆಲ್ಲ ಉಡ್ಗೊರೆ ಕೊಟ್ಟು ಅವರೊಟ್ಟಿಂಗೆ ಅನ್ಯೋನ್ಯಲ್ಲೇ ಇತ್ತಿದ್ದ. ಆದರೆ ಈ ಆಳುಗೊ ಅವನತ್ತರೆ ಇಪ್ಪದೆಲ್ಲಾ ಒಂದೇ ಪೆಟ್ಟಿಂಗೆ ಹೊಡೆಯುಕ್ಕು ಹೇಳಿ ಅವನ ಕೊಂದೇ ಬಿಟ್ಟವು!
ಅವಕ್ಕೆ ಸಿಕ್ಕಿದ್ದು ಏಳೇ ರುಪಾಯಿ. ಇವರ ಸುದ್ದಿ ಗೊಂತಿಲ್ಲದ್ದ ಎನ್ನ ಸುಲಿಗೆ ಮಾಡದ್ದದು ಎನ್ನ ನಶೀಬು! ’

‘ಆಸ್ಪಾಸಿನೋರೆಲ್ಲಾ ಒಳ್ಳೇರು, ಆತ್ಮೀಯರು. ಇಪ್ಪದೇ ಕೆಲವು ಮನೆ ಹೇಳಿ‌ಅಪ್ಪಾಗ ಎಲ್ಲರೂ ಹತ್ತಿರದೋರೆ, ವಿಶಿ‌ಷ್ಟರೇ.
ಆಗ ಹೇಳಿದ ದೇವರಾಯನನ್ನೇ ತೆಗೊಳ್ಳಿ. ಬಿತ್ತಿನ ಭತ್ತದ ನಮುನೆಗಳ ಪಟ್ಟಿ ಮಾಡುಲೆ ಶುರು ಮಾಡಿದರೆ ಹೇಳ್ತ – ಅದೇನ್ ಕೇಳ್ತೆ ! ಇದೂ ಒಂದು ತಳಿಯ ಭತ್ತದ ಬಿತ್ತು!’

‘ನೇತ್ರಾವತಿ ಇಲ್ಲೇ ಹುಟ್ಟಿದ್ದು. ಬೆತ್ತದ ಬಳ್ಳಿಯ ನದಿಯ ಅತ್ಲಾಗಿ ಇತ್ಲಾಗಿ ಕಟ್ಟಿ ಮದ್ಯ ಒಂದು ರಾಟೆ ಸಿಕ್ಕಿಸಿ ಮಳೆಗಾಲಲ್ಲಿ ಓಡಲ್ಲಿ ದಾಂಟುತ್ತವು. ನೇತ್ರಾವತಿ ಇಲ್ಲಿ ಬಾರಿ ನಿದಾನ ಹರಿವದು, ಇಲ್ಲಿಯಾಣ ಜೀವನವೂ ನಿದಾನ. ’

ಶಂಕರಣ್ಣನ ಮಾತು ಸಾಗ್ತಾ ಇದ್ದ ಹಾಂಗೆ ಜಾಲ್ಲಿ ಬೆಶಿಲಿದ್ದರೂ ಮಳೆ ಸುರಿವಲೆ ಸುರಾತು. ಎಲ್ಲಾ ಓಡಿ ಒಣಗುಲೆ ಹಾಕಿದ್ದ ಅಡಕ್ಕೆಯ ರಾಶಿ ಮಾಡಿ ಒಳ ಸಾಗ್ಸುವಷ್ಟರಲ್ಲಿ ನಿಂದೂ ಆತು!
ಇನ್ನೂ ಎಂತೆಲ್ಲಾ ಮಾತಾಡಕ್ಕು ಹೇಳಿಪ್ಪಾಗ ದೂರಲ್ಲಿ ಬೊಂಡಾಜೆ ಜಲಪಾತಕ್ಕೆ ಕಾಮನ ಬಿಲ್ಲಿನ ತೋರಣ ಆಯಿಕ್ಕೊಂಡಿತ್ತು.
ಮನೆಲಿ ಕೂದಲ್ಲೆ ಕಾಂಬಾಂಗಾತು!

~
ಮರದಿನ ಉದಿಯಪ್ಪಗ ಶಂಕರಣ್ಣನ ಮನೆ ಹತ್ರಾಣ ಗೇಟಿನ ಮುಂದೆ ಬಸ್ಸಿಂಗೆ ಕಾದೆ. ಗಾಡಿಯ ಸೌಕರ್ಯ ಇರದ್ದ ದಿಡುಪೆಂದ ಬಂದ ಬಸ್ಸು ಹತ್ತಿದೆ.
ಶಂಕರಣ್ಣ ಕೈ ಬೀಸ್ತಾ ಇದ್ದ ಹಾಂಗೆ ಬಸ್ಸು ಹೆರಟತ್ತು. ಬರೇ ಅಂಗಿ ಚಡ್ಡಿ ಅಲ್ಲ, ಸಮವಸ್ತ್ರ ಹಾಕಿದ ಶಾಲೆ ಮಕ್ಕಳ ಹೊತ್ತುಕೊಂಡು ಮುಂದೆ ಹೋತು.
ಜಲಪಾತ ಹಾಂಗೇ ಅಲ್ಲೆ ಇದ್ದರು ದಿಡುಪೆ ಕುಗ್ರಾಮಂದ ಸುಗ್ರಾಮ ಆಗಿ ಮುಂದುವರಿದಿರಕ್ಕು.
~
ರಾಮಚಂದ್ರಮಾವ°

ಆ ಸಂದರ್ಭಲ್ಲಿ ತೆಗದ ಕೆಲವು ಪಟಂಗೊ:

~
ರಾಮಚಂದ್ರ ಮಾವನ ವಿಳಾಸ:
ಎ ರಾಮಚಂದ್ರ ಭಟ್,
‘ದಿವ್ಯಾ’ ೫-೧೦೭ ಡಿ,
ಕಿದಿಯೂರು-೫೭೬೧೦೩
ಉಡುಪಿ

8 thoughts on “ಆನಡ್ಕ ಜಲಪಾತ – ಧಾರೆ 2

  1. ಅಲ್ಲಿಗೆ ಬೈಲಿನೋರಿನ ಒಂದು ಪಿಕ್ಕುನಿಕ್ಕು ಮಡುಗಿರೆಂತ?

    1. ಅಪ್ಪು ಶಾಮಣ್ಣ. ಬೈಲಿನೋರ ಪಿಕ್ಕುನಿಕ್ಕು ಒಂದು ಆಯೆಕ್ಕು. ವಿಷಯವ ಒಂದರಿ ಗುರಿಕ್ಕಾರ್ರ ಕೆಮಿಗೆ ಹಾಕುವೊ.

  2. ಜಲಪಾತ ನೋಡಿದಷ್ಟೆ ಖುಷಿ ಆತು…. ನಿಂಗಳ ಬರವಣಿಗೆ ಶೈಲಿ ಲಾಯಿಕಿದ್ದು ಮಾವಾ… ಹೀಂಗೇ ಬರೆತ್ತಾ ಇರಿ….

  3. ಲಾಯ್ಕ ಆಯಿದು ಯಾತ್ರಾವಿವರಣೆ.

  4. ಹಾ° ದಿಡುಪೆಗೆ ದಾರಿ ಗೊಂತಾತು. ಏ ಡೈಮಂಡು ಭಾವೋ.. ಬೈಕು ಹೋವ್ತಾಡ ಅಲ್ಲಿಗೆ. ಹೇಂಗೇ… ಕೆಪ್ಪಣ್ಣನ ಹಿಂದೆ ಕೂರ್ಸಿ ಬೈಕು ಎಬ್ಬುವನೋ ಅತ್ಲಾಗಿ ಒಂದರಿ!. ಮತ್ತೆ .. ದೊಡ್ಡಭಾವ ಬೈಕು ಎಬ್ಬುತ್ತದು ಬಿಟ್ಟಮತ್ತೆ ಒಪ್ಪಣ್ಣನೂ ಬೈಕಿನ ಹಿಂದೆ ಕೂಬದು ಬಿಟ್ಟಿದನಡ!!
    ರಾಮಚಂದ್ರ ಮಾಂವ.., ಶುದ್ದಿ ಪಷ್ಟಾಯ್ದು. ಪಟವೂ ಲಾಯ್ಕ ಆಯ್ದು. ಚರಿತ್ರೆ ಓದಿ ಕೊಶಿಯಾತು.

  5. ಜಲಪಾತದವರೆಗೆ ಕರ್ಕೊ೦ಡು ಹೋದ ರೀತಿ ಲಾಯ್ಕಾಯ್ದು ಮಾವಾ. 🙂
    ಕಾಡಿನ ನಡುವೆ ತೋಟ ಮಾಡಿಕೊ೦ಡು, ಕೃಷ್ಣಸರ್ಪ೦ಗಳ ಗುರ್ತ ಮಾಡಿಕೊ೦ಡು ಬದುಕುವ ಅವರ ಧೈರ್ಯಕ್ಕೆ ಮೆಚ್ಚೆಕ್ಕು!!!
    ನೂರು ನಮೂನೆಯ ಭತ್ತದ ಜಾತಿ ಒಳಿಶಿಕೊ೦ಡ ದೇವರಾಯ ಅಬ್ಬಾ!!! ಅವರದ್ದೂ ಒ೦ದು ಪಟ ತೆಕ್ಕೊ೦ಡು ಬರೆಕ್ಕಿತ್ತು 😉
    ಸಸ್ಯ ಸ೦ಶೋಧಕನಿಗಾದ ಘಟನೆ ವಿಶಾದನೀಯ 🙁
    ಪಟ೦ಗೋ ಎಲ್ಲಾ ಚೆ೦ದ ಬೈ೦ದು. ಶ೦ಕರಣ್ಣ ಸ್ವರ್ಗದಲ್ಲೇ ಇಪ್ಪದು ಹೌದು ಹೇಳಿ ಇಲ್ಲಿ೦ದ ಮುದ್ರೆ ಒತ್ತಿಯಾತು.
    ಹೀ೦ಗೇ ಬರೆತ್ತಾ ಇರಿ ಮಾವಾ…

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×