Oppanna.com

ಚೈನು – ಭಾಗ ಒಂದು

ಬರದೋರು :   ಶ್ಯಾಮಣ್ಣ    on   22/07/2013    20 ಒಪ್ಪಂಗೊ

ಶ್ಯಾಮಣ್ಣ

(ಈ ಕತೆಲಿ ಬಪ್ಪ ಎಲ್ಲ ವ್ಯಕ್ತಿಗಳುದೇ, ಸ್ಥಳ, ಘಟನೆಗಳುದೇ ಕೇವಲ ಕಾಲ್ಪನಿಕ, ಯಾವದೇ ವ್ಯಕ್ತಿ ಅತವಾ ಘಟನೆಗೆ ಸಾಜ ಕಂಡತ್ತು ಹೇಳಿ ಆದರೆ ಅದು ಕೇವಲ ಕಾಕತಾಳೀಯ. ಈ ಕತೆ ಐವತ್ತು ವರ್ಷದ ಮೊದಲು ನಡದ್ದು ಹೇಳಿ ತಿಳ್ಕೊಳ್ಳೆಕ್ಕು.)
————————————————————————————————-
ನೆಕ್ಕರೆ ಮೂಲೆ ಹೇಳಿರೆ ನಿಂಗೊಗೆ ಪಕ್ಕನೆ ಗೊಂತಾಗ. ಆದರೆ ನಮ್ಮ ನಾಣಿ ಇದ್ದ°ಲ್ಲದಾ? ನಾಣಿಯ ಮನೆ ಹಿಂದಾಣ ತೋಡಿನ ಆಚ ಕರೆಲಿ, ಕೆಳಾಣ ಹೊಡೇಲಿ ಅಡಕ್ಕೆ ತೋಟ, ತೋಟಂದ ಆಚಿಗೆ ಇಪ್ಪ ಮನೆಯೇ ಕೆಳಾಣ ಮನೆ. ಈ ಕೆಳಾಣ ಮನೆಯ ಜಾಗೆಗೇ ನೆಕ್ಕರೆ ಮೂಲೆ ಹೇಳಿ ಹೆಸರು. ಅಲ್ಲಿ ಒಂದು ಸಣ್ಣ ಪದವಿನ ಹಾಂಗೆ ಇದ್ದು. ಅಲ್ಲಿ ಕಮ್ಮಿಲಿ ಒಂದು ಹದಿನೈದು -ಇಪ್ಪತ್ತು ಮಾವಿನ ಮರಂಗ ಇದ್ದು, ಒಂದು ರೀತಿಲಿ ಮಾವಿನ ತೋಟ ಹೇಳಿ ಹೇಳ್ಲಕ್ಕು. ಮಾವಿನ ಮರಂಗ ಹೇಳಿರೆ ಎಲ್ಲ ನೆಕ್ಕರೆ ಮಾವಿನ ಮರಂಗಳೇ ಇಪ್ಪದು ಅಲ್ಲಿ. ಈ ತೋಟದ ಹಾಂಗಿಪ್ಪ ನೆಕ್ಕರೆ ಮಾವಿನ ಮರಂದಾಗಿ ಇಲ್ಲಿಗೆ ನೆಕ್ಕರೆ ಮೂಲೆ ಹೇಳಿ ಹೆಸರು ಬಂದದು.
ಬೇಸಗೆಲಿ ಮಕ್ಕೊಗೆ ರಜೆ ಸಿಕ್ಕಿತ್ತು ಹೇಳಿ ಆದರೆ ಎಲ್ಲ ಮಕ್ಕೊ ಈ ನೆಕ್ಕರೆ ತೋಟಲ್ಲೇ ಇಪ್ಪದು. ಮಕ್ಕಳ ನಡುವಿಲಿ ಮಾವಿನಹಣ್ಣಿಂಗೆ ಕಲ್ಲು ಇಡ್ಕುವ ಸ್ಪರ್ಧೆ ಅಪ್ಪದುದೆ ಇದ್ದು. ನೆಕ್ಕರೆ ಮಾವಿನ ಹಣ್ಣೇ ಬಹುಮಾನ. ನಾಣಿದೆ, ತೋಡಕರೆ ಬಾಬುದೆ ಯಾವಾಗಳು ಇಲ್ಲೆ ಇಪ್ಪದು. ಯಕ್ಷಗಾನ ಆಟಕ್ಕೆ ಹೋದ ಮಾರ್ಣೆ ದಿನ ಈ ಎಲ್ಲ ಮಕ್ಕಳ ಆಟ, ಚೆಂಡೆ, ಮದ್ದಳೆ, ಬಾಗವತಿಕೆ, ಕೊಣಿತ ಎಲ್ಲದಕ್ಕೂ ರಂಗಸ್ತಳ ಈ ನೆಕ್ಕರೆ ತೋಟ.
ಕೇಳಾಣ ಮನೆ ಎಂಕಣ್ಣ ಹೇಳಿರೆ ಕಿಟ್ಟಣ್ಣನ ಅಪ್ಪ°. ಎಂಕಣ್ಣನ ಪೂರ್ತ ಹೆಸರು ವೆಂಕಟ್ರಮಣ ಬಟ್ಟ ಹೇಳಿ. ಅವ° ಸಣ್ಣ ಇಪ್ಪಗಳೇ ಎಲ್ಲೋರು ‘ಎಂಕಣ್ಣ ಎಂಕಣ್ಣ’ ಹೇಳಿ ದಿನಿಗಿ ಈಗ ಎಂಕಣ್ಣ ಹೇಳಿಯೇ ಹೆಸರು ಆಗಿಹೋಯಿದು. ಈ ನೆಕ್ಕರೆ ಮೂಲೆಯ ಅಡ್ಕ, ತೋಟ ಎಲ್ಲ ಎಂಕಣ್ಣಂಗೆ ಪಾಲಿಲಿ ಸಿಕ್ಕಿದ್ದು. ಈ ಎಂಕಣ್ಣಂಗೆ ಎರಡು ಜೆನ ಅಣ್ಣಂದ್ರು ಇದ್ದವು. ಸುರುವಾಣ ಅಣ್ಣನ ಹೆಸರು ನರಸಿಂಹ ಬಟ್ಟ ಹೇಳಿ. ಅವಕ್ಕೆ ಬೈಲಿಲಿ ಕೇಳಾಣ ಹೊಡೆಂಗೆ ಹೋಪಗ ಸಿಕ್ಕುವ ಮೂರೆಕ್ರೆ ಗೆದ್ದೆದೆ, ಒಂದೂವರೆ ಎಕ್ರೆ ಅಡಕ್ಕೆ ತೋಟದೆ ಇದ್ದು, ಪಾಲಿಲಿ ಸಿಕ್ಕಿದ್ದು.
ಎರಡ್ನೆ ಅಣ್ಣನ ಹೆಸರು ಶಂಕರ ಬಟ್ಟ ಹೇಳಿ. ಅವು ಅವರ ಪಾಲಿಂಗೆ ಬಂದ ತೋಟವ ಮಾರಿಕ್ಕಿ, ಕೋಡೆಯಾಲಕ್ಕೆ ಹೋಗಿ ಹೋಟ್ಲು ಮಡುಗಿದ್ದವು. ಅವರ ತೋಟ ಮಾರಿದ ಪೈಶೆಯ ಬೇಂಕಿಲಿ ಕಟ್ಟಿ ಮಡುಗಿದ್ದವು. ಅವಕ್ಕೆ ಹೋಟ್ಳು ಮಡುಗುಲೆ ಪೈಶೆ ಕೊಟ್ಟದು ಅವರ ಭಾವ ಹೇಳಿರೆ ಹೆಂಡತ್ತಿಯ ಅಣ್ಣ. ಭಾವನ ಪೈಶೆಲಿ ಮಡುಗಿದ ಹೋಟ್ಳು ಅಲ್ಲದಾ, ಹಾಂಗಾಗಿ ಹೋಟ್ಳಿಂಗೆ ‘ಹೋಟೇಲು ಭಾವನ’ ಹೇಳಿ ಹೆಸರು ಮಡುಗಿದ್ದವು. ಶಂಕರಣ್ಣಂಗೆ ಇಬ್ರು ಮಾಣಿಯಂಗೊ. ಸುರುವಾಣೋನು ರಮೇಶ°, ಎರಡ್ನೆಯೋನು ಕಿಶೋರ°.
ಎಂಕಣ್ಣಂಗೂ ಎರಡು ಜೆನ ಮಕ್ಕ. ಸುರೂವಾಣದ್ದು ಕೂಸು. ಹೆಸರು ಸವಿತಾ ವೆಂಕಟ ಲಕ್ಷ್ಮಿ ಹೇಳಿ. ಕೂಸು ತುಂಬ ಓದಿದ್ದು, ಹೇಳಿರೆ ಒಂಬತ್ತನೇ ಕ್ಲಾಸುವರೆಗೆ ಓದಿದ್ದು. ಇನ್ನು ಜಾಸ್ತಿ ಓದಿರೆ ಕಷ್ಟ ಅಕ್ಕು ಹೇಳಿ ಎಂಕಣ್ಣ ಅದರ ಶಾಲೆ ಬಿಡಿಸಿ ಮನೆಲಿ ಕೂರ್ಸಿದ್ದ°. ಈಗ ಅದಕ್ಕೆ ಮದುವೆ ಮಾಡುವ ಯೋಚನೆಲಿ ಇದ್ದ°. ಒಂದು ಮೂರ್ನಾಲ್ಕು ಪೊದು ಬೈಂದು. ಒಂದು ನಿಜ ಅಪ್ಪ ಅಂದಾಜಿದೆ ಇದ್ದು.
ಸವಿತಂಗೆ ಅದರ ಹೆಸರಿನ ಮೇಲೆ ತುಂಬ ಪಿಸುರು ಇದ್ದು. ಅದೆಂತಕೆ ‘ಸವಿತಾ ವೆಂಕಟಲಕ್ಷ್ಮಿ’ ಹೇಳಿ? ‘ಸವಿತಾ’ ಹೇಳಿ ಸಾಕಿತ್ತಲ್ಲದಾ? ವೆಂಕಟಲಕ್ಷ್ಮಿ ಎಂತಕೆ? ಸಂಕಟಲಕ್ಷ್ಮಿ ಹೇಳಿದಾಂಗೆ ಕೇಳ್ತದು. ಸವಿತ ಚೆಂದದ ಕೂಸು. ಪಿಸುರು ಬಪ್ಪಗ ಅದರ ಮೂಗು ಕೆಂಪಾವ್ತು. ಆವಾಗ ಅದು ಇನ್ನು ಇನ್ನುದೆ ಚೆಂದ ಕಾಣ್ತು. ಹಾಂಗಾಗಿ ಶಾಲೆಗೆ ಹೋಯ್ಕೊಂಡಿಪ್ಪಗ ಮಾಷ್ಟಕ್ಕ ಅದಕ್ಕೆ ಬೇಕೂಳಿ ಹಾಜರಿ ದಿನಿಗುವಗ “ಸವಿತಾಆಆಅ ವೆಂಕಟ ಲಕ್ಷ್ಮಿಇಇಇಇಇ” ಹೇಳಿ ದಿನಿಗುದು, ಇದಕೆ ಪಿಸುರು ಬಪ್ಪದು, ಮೂಗು ಕೆಂಪಾಗಿ ಇನ್ನುದೆ ಚೆಂದ ಕಾಂಬದು, ಮಾಷ್ಟಕ್ಕ ನೋಡಿ ಕುಷಿ ಪಡುದು…ಈ ಮಾಷ್ಟಕ್ಕಳದ್ದು ಬರೀ ಹುಳಿ ರಗಳೆ….
ಸವಿತಂದ ಕಿಟ್ಟಣ್ಣ ಆರು ವರ್ಷ ಸಣ್ಣೋನು. ಈಗ ಹತ್ತನೇ ಕ್ಲಾಸಿಲಿ ಕಲಿವ ಮಾಣಿ. ಬಾರೀ ಉಷಾರಿಯ ಮಾಣಿ. ಕಲಿವದರಲ್ಲಿ ಮಾಂತ್ರ ಅಲ್ಲ, ಮನೆ ಕೆಲಸಲ್ಲಿಯೂ. ತೋಟಕ್ಕೆ ಹೋಗಿ ಅಡಕ್ಕೆ ಹೆರ್ಕುಗು, ಅಪ್ಪನೊಟ್ಟಿಂಗೆ ಅಡಕ್ಕೆಗೆ ನೀರು ಚೇಪುಲೆ ಹೋಕು, ಸೊಪ್ಪು, ಹುಲ್ಲು ಹೆರದು ತಕ್ಕು, ಬೇಕಾರೆ ಗೊಬ್ಬರದೆ ಹೊರುಗು. ಒಟ್ಟಿಂಗೆ ಮಂತ್ರದ ಕ್ಲಾಸಿಂಗೆ ಹೋಗಿ ಮಂತ್ರದೆ ಕಲ್ತಿದ°. ಬಾರಿ ಚೆಂದಕ್ಕೆ ರುದ್ರವುದೆ ಹೇಳುಗು.ಆದರೆ ಒಂದೆ ತಾಪತ್ರಯ ಎಂತದು ಹೇಳಿರೆ, ಎಲ್ಲಿಯಾದರೂ ಪಿಸುರು ಬಂದರೆ ಮಾಂತ್ರ ಎದುರು ಇಪ್ಪವಕ್ಕೆ ಸರೀ ಬೈಗು. ಆರು ಹೇಳಿ ನೋಡ°.
————————————————————————————————–
ಎಂಕಣ್ಣನಲ್ಲಿ ಹಾಲು ಕರವಲೆ ಒಂದು ದನವುದೆ ಒಂದು ಎಮ್ಮೆದೆ ಇಪ್ಪದು. ದನ ಜಾಸ್ತಿ ಹಾಲುಕೊಡ್ತಿಲ್ಲೆ. ದಿನಕ್ಕೆ ಉದಿಯಪ್ಪಗ ಎರಡು ಕುಡ್ತೆ ಹಾಲು, ಹೊತ್ತೋಪಗ ಎರಡು ಕುಡ್ತೆ ಹಾಲು. ಅದು ಎಲ್ಲಿಗೂ ಸಾಕಾವುತ್ತಿಲ್ಲೆ. ಹಾಂಗಾಗಿ ಒಂದು ಎಮ್ಮೆದೇ ಸಾಂಕಿದ್ದ°.’ಞೋಣಿ’ ಹೇಳಿ ಅದರ ಹೆಸರು. ಅದೊಂದು ಎಮ್ಮೆ ಹೇಳಿರೆ ಎಮ್ಮೆಯೇ. ಹಾಲು ಕರವಲೆ ಕೂದರೆ ಎಂತ ಮಾಡಿರೂ ಹಾಲು ಇಳಿಶ. ಆದಕ್ಕೆ ಬೆನ್ನಿಂಗೆ ನಾಲ್ಕು ಬಿದ್ದರೆ ಮಾತ್ರ ಹಾಲು ಇಳಿಶಿ ಅಬ್ಯಾಸ.chainu1 ಆದರೆ ಅದಕ್ಕೆ ಬಡಿವಲೆ ಎಂಕಣ್ಣಂಗೆ ಮನಸ್ಸಿಲ್ಲೆ. ಬಾಯಿ ಬಾರದ್ದ ಪ್ರಾಣಿ. ಆದರೆ ಹಾಲು ಇಳಿಶುವಾಂಗೆ ಮಾಡುದು ಹೇಂಗೆ? ಅದಕ್ಕೆ ಕೆದೆಲಿ ಎಂಕಣ್ಣ ಒಂದು ಕಂಬಕ್ಕೆ ಒಂದು ಹಾಳೆ ಕಟ್ಟಿದ್ದ°. ಮೊದಲು ಎಮ್ಮೆಗೆ ಬೆನ್ನಿಂಗೆ ರಪ್ಪನೆ ಒಂದು ಬಿಡುದು, ಅಷ್ಟಪ್ಪಗ ಎಮ್ಮೆಗೆ ಪೆಟ್ಟು ಬೀಳುಲೆ ಸುರು ಆತು ಹೇಳಿ ಅಂದಾಜು ಆವುತ್ತು. ಮತ್ತೆ ಪಟ ಪಟಾ ಹೇಳಿ ಆ ಕಂಬಕ್ಕೆ ಕಟ್ಟಿದ ಹಾಳೆಗೆ ಬಡಿವದು. ಅದರ ಶಬ್ದ ಕೇಳಿದಾಂಗೆ ಎಮ್ಮೆ ಅದರ ಬೆನ್ನಿಂಗೇ ಪೆಟ್ಟು ಬೀಳ್ತಾ ಇದ್ದು ಹೇಳಿ ಗ್ರೇಶುತ್ತು. ರಜಾ ಹೊತ್ತಾದ ಮೇಲೆ ಹಾಲು ಇಳುಶುತ್ತು. ಮತ್ತೆ ಪಾರ್ವತಿ ಅಕ್ಕ ಕೆದೆಗೆ ಹೋಗಿ ಹಾಲು ಕರಕ್ಕೊಂಡು ಬಪ್ಪದು. ಇದು ಯಾವಾಗ್ಳಾಣ ಅಬ್ಯಾಸ ಆಗಿಹೋಯಿದು.
ಹೊತ್ತೋಪಗ ಐದು ಗಂಟೆ ಆಯಿದು. ಕಿಟ್ಟಣ್ಣ ಶಾಲೆಂದ ಬಂದ ಮತ್ತೆ “ಒಂದು ಸರ್ತಿ ತೋಟಕ್ಕೆ ಹೊವುತ್ತೆ” ಹೇಳಿಕ್ಕಿ ಹೋಯಿದ°. ಇಂದುದೆ ಯಾವಗ್ಳಾಣ ಹಾಂಗೆ ಎಂಕಣ್ಣ ಹಾಳೆಗೆ ಬಡುದು ಹೆರ ಬಂದು ಕೂಯಿದ°. ಮೈ ಇಡೀ ಬೆಗರಿದ್ದು. ಪಾರ್ವತಿ ಅಕ್ಕ ಕೆದೆಯೊಳ ಹೋಯಿದು ಎಮ್ಮೆ ಕರವಲೆ. ಅಲ್ಲಿಂದಲೇ ಎಂಕಣ್ಣನ “ಇದಾ” ಹೇಳಿ ದಿನಿಗಿತ್ತು. ಮನೆಲಿ ಎಂಕಣ್ಣಂಗೆ ‘ಇದಾ’ ಹೇಳಿ ಹೆಸರು (ಹೆಂಡತಿ ಮಡುಗಿದ ಹೆಸರು, ಬೇರೆ ಆರೂ ಹಾಂಗೆ ದಿನಿಗುಲೆ ಇಲ್ಲೆ) ಇನ್ನೆಂತ? ಇನ್ನುದೆ ಈ ಎಮ್ಮೆ ಹಾಲು ಇಳಿಶಿದ್ದಿಲ್ಲೆಯ? ಎಂಕಣ್ಣ ಕೆದೆಯ ಒಳ ಹೋದ°.
“ನೋಡಿ, ಟುಪ್ಪ ಒಂದು ನಮೂನೆ ಇದ್ದು” ಪಾರ್ವತಿ ಅಕ್ಕ ಹೇಳಿತ್ತು. ‘ಟುಪ್ಪ’ ಹೇಳಿರೆ ಎಮ್ಮೆಯ ಕಂಜಿ. ಗೋಣ ಕಂಜಿ. ಅದಕ್ಕೆ ಸುರೂವಿಂಗೆ ಹೆಸರು ಮಡುಗಿದ್ದು ‘ಪುಟ್ಟ’ ಹೇಳಿ. ಕೊಂಡಾಟ ಜಾಸ್ತಿ ಆಗಿ ದಿನಿಗಿದ್ದು ‘ಟುಪ್ಪ’ ಹೇಳಿ ಆಗಿ, ಈಗ ಟುಪ್ಪ ಹೇಳಿಯೇ ದಿನಿಗುದು.
” ಹುಂ ಹುಳು ಮೊಗಚ್ಚುಲೆ ಸುರು ಆಯಿದಾ ಹೇಳಿ ಕಾಣ್ತದ” ಎಂಕಣ್ಣ ಹೇಳಿದ°. ಟುಪ್ಪ ಒಂದು ನಮೂನೆ ಇಪ್ಪದು ಅಪ್ಪು. ಹಾಲು ಕುಡಿವಲೆ ಎಮ್ಮೆಯ ಕೆಚ್ಚಲಿಂಗೆ ಬಾಯಿ ಹಾಕುತ್ತು, ಬಾಯಿ ತೆಗೆತ್ತು. ಒಂತರಾ ಒರಕ್ಕು ಬಂದೋರ ಹಾಂಗೆ ಮಾಡ್ತಾ ಇದ್ದು.
” ಸರಿ. ಇದಕ್ಕಿನ್ನು ಹುಳುವಿನ ಮದ್ದು ಕೊಡೆಕ್ಕಷ್ಟೆ” ಎಂಕಣ್ಣ ಹೇಳಿಕ್ಕಿ ಹೆರ ಬಂದ°. ಈ ಎಮ್ಮೆ ಕಂಜಿಗಳ ಸಾಂಕುದೇ ಕಷ್ಟದ ಕೆಲಸ. ದನದ ಕಂಜಿಯ ಹಾಂಗಲ್ಲ ಅವು. ಹಾಲು ಕಮ್ಮಿ ಆದರೆ ಒಣಕ್ಕಟೆ ಕಟ್ಟುತ್ತವು. ಜಾಸ್ತಿ ಆದರೆ ಹುಳುವಿನ ಉಪದ್ರ….
ಈ ಎಮ್ಮೆ ಕಂಜಿಯ ಮೇಲೆ ಕಿಟ್ಟಣ್ಣಂಗೆ ತುಂಬ ಕೋಂಡಾಟ. ಅವನೇ ಇದರ ಹೆಸರಿನ ಟುಪ್ಪ ಹೇಳಿ ಚೇಂಜು ಮಾಡಿದ್ದು. ಬೆಳಿ ಕಲರಿನ ಕಂಜಿ ಇದು. ಸಣ್ಣಕ್ಕೆ ಕೊಂಬು ಬತ್ತಾ ಇದ್ದು. ಪಾರ್ವತಿ ಅಕ್ಕ ಹಾಲು ಕರದಿಕ್ಕಿ ಕೆದೆಂದ ಹೆರ ಬಂತು.
“ಇದಾ… ಆ ಟುಪ್ಪನ ಹೆರ ತಂದು ಕಟ್ಟಿಕ್ಕಿ ಆತಾ” ಹೇಳಿತ್ತು. ಎಂಕಣ್ಣ ಕಂಜಿಯ ಕೆದೆಂದ ಹೆರತಂದು ಜೆಗಿಲಿ ಕರೆಯಾಣ ಗುಂಟಕ್ಕೆ ಕಟ್ಟಿದ°.
ಕಂಜಿ ಒಂದು ತರಾ ಮಾಡ್ತಾ ಇದ್ದು. ನಿಂದು ಕೊಂಡಿತ್ತ ಕಂಜಿ ಮನುಗಿತ್ತು. ಅಲ್ಲಿಯೇ ಅಡ್ಡ ತಲೆ ಹಾಕಿತ್ತು. ಪುನ ಎದ್ದತ್ತು, ಪುನಾ ಮನುಗಿತ್ತು. ಎಂಕಣ್ಣಂಗೆ ಅಂದಾಜಿ ಆತು ಇದಕ್ಕೆ ಹೊಟ್ಟೆ ಬೇನೆ ಆವುತ್ತ ಇದ್ದು. ಇದು ಕಂಡಿತಾ ಹುಳುವಿನ ಉಪದ್ರವೇ.
ಗೋಡಾಕ್ಟ್ರ° ಕೊಟ್ಟದು ಒಂದು ಮಾತ್ರೆ ಇದ್ದತ್ತು ಎಂಕಣ್ಣನ ಹತ್ತರೆ. ಹುಳುವಿಂಗೆ ಹೇಳಿ ದನಕ್ಕೆ ಕೊಡ್ಲೆ. ಒಳ ಗೋಡೆ ಕಪಾಟಿಲಿ ಕಟ್ಟಿ ಮಡುಗಿದ್ದರ ಎಂಕಣ್ಣ ಹುಡುಕ್ಕಿ ತೆಗದ°. ಅದರ ಗುದ್ದಿ ಹೊಡಿ ಮಾಡಿ ಅರ್ಧ ಗ್ಲಾಸು ನೀರಿಲಿ ಕರಡಿಸಿದ°. ತಂದು ಹೊಡಚ್ಚಿಕೊಂಡು ಇತ್ತಿದ್ದ ಗೋಣ ಕಂಜಿಯ ಬಾಯಿಗೆ ಕುಡುಶುಲೆ ನೋಡಿದ°. ಅದು ಬಾಯಿ ತೆಗೆಯಕ್ಕನ್ನೆ? ಹೇಂಗೆ ಕುಡುಶುದು? ಅದಕ್ಕೆ ಒಂದು ಬೆದುರಿನ ಅಂಡೆ ಇದ್ದು. ಒಂದು ಹೊಡೆಲಿ ಅದರ ಗೆಂಟು ಇಪ್ಪಲ್ಲಿ ಅದು ಒಟ್ಟೆ ಇರ್ತಿಲ್ಲೆ. ಇನ್ನೊಂದು ಹೊಡೆಲಿ ಅದರ ಓರೆಗೆ ತುಂಡು ಮಾಡಿರ್ತು. ಅದರ ಒಳ ಈ ಮದ್ದಿನ ಹಾಕಿದ°. ಕಂಜಿಯ ಬಾಯಿ ಒಳಂಗೆ ತುರ್ಕಿ ಎತ್ತಿದರಾತು… ಮದ್ದು ಗುಟು ಗುಟು ಕುಡಿತ್ತು ಕಂಜಿ.
ಒಂದು ಅರ್ಧ ಗಂಟೆ ಕಳುತ್ತು. ಕಂಜಿಗೆ ಕಮ್ಮಿ ಆಯೆಕ್ಕಿತ್ತು ಇಷ್ಟೊತ್ತಿಲಿ. ಆದರೆ ಅಪ್ಪ ಅಂದಾಜಿ ಕಾಣ್ತಿಲ್ಲೆ. ಬದಲಿಂಗೆ ಜಾಸ್ತಿ ಅಪ್ಪಾಂಗೆ ಕಾಂಬಲೆ ಸುರು ಆತು. ಇದ್ದಕ್ಕಿದ್ದ ಹಾಂಗೆ ಕಂಜಿ ಕೈಕ್ಕಾಲು ಬಡಿವಲೆ ಸುರು ಮಾಡಿತ್ತು, ಒಟ್ಟಿಂಗೆ “ಬೇಂ…” ಹೇಳಿ ಅರೆಬ್ಬಾಯಿದೆ ಕೊಡ್ಲೆ ಸುರುಮಾಡಿತ್ತು.
ಅದು ಅರೆಬ್ಬಾಯಿ ಕೊಟ್ಟು ಹೊಡಚ್ಚುವಗ ಕಿಟ್ಟಣ್ಣ ತೋಟಂದ ಬಂದು ಜಾಲಿಂಗೆ ಎತ್ತಿದ°.
ಕಿಟ್ಟಣ್ಣಂಗೆ ಒಂದು ಸಲ ಮೈಮೇಲೆ ಬೆಶಿನೀರು ಬಿದ್ದಾಂಗೆ ಆತು, ಕಂಜಿ ಅರೆದ್ದೆದು ಕೇಳುವಗ.
“ಟುಪ್ಪಂಗೆ ಎಂತಾತು?” ಕಿಟ್ಟಣ್ಣನ ಸ್ವರ ಮೈಲು ದೂರಕ್ಕೂ ಕೇಳಿಕ್ಕು. ಕೊಂಡಾಟದ ಕಂಜಿ ಬಿದ್ದು ಹೊಡಚ್ಚುವಗ ಬೆಶಿ ಆಗದ್ದೆ ಇಕ್ಕ ಕಿಟ್ಟಣ್ಣಂಗೆ?
“ನಿನ್ನದೆಂತ ಬೊಬ್ಬೆ? ಅದಕ್ಕೆ ಹುಳು ಮೊಗಚ್ಚಿದ್ದು” ಎಂಕಣ್ಣ ಹೇಳಿದ°.
“ಹುಳು ಮೊಗಚ್ಚಿದ್ದಾ? ಅದಕ್ಕೆ ಹೀಂಗೆ ಹೊಡಚ್ಚುದೆಂತಕೆ ಅದು?”
“ಹೊಟ್ಟೆ ಬೇನೆ… ಅದಕ್ಕೆ ಹೊಡಚ್ಚುದು… ಮದ್ದು ಕೊಟ್ಟಿದೆ, ರಜ ಹೊತ್ತಿಲಿ ಕಮ್ಮಿ ಅಕ್ಕು”
“ಎಂತರ ಮದ್ದು ಕೊಟ್ಟದು?”
“ಅದೇ ಆ ಡಾಕ್ಟ್ರ ಕೊಟ್ಟದು ಮಾತ್ರೆ ಇತ್ತಲ್ಲದ ಅದರ ಕರಡಿಸಿ ಕೊಟ್ಟಿದೆ.”
“ಯಾವ ಮಾತ್ರೆ ? ಆ ಕಪಾಟಿಲಿ ಇತ್ತದ?”
“ಅಪ್ಪು”
“ನಿಂಗೊಗೆ ತಲೆ ಸರಿ ಇಲ್ಲೆಯ? ಆ ಮಾತ್ರೆ ತಂದು ಮಡುಗಿ ಒಂದೂವರೆ ವರ್ಷ ಕಳುತ್ತು. ಅದರ ಈಗ ಕೊಡುದಾ?” ಕಿಟ್ಟಂಗೆ ಪಿಸುರು ಎಳಗುಲೆ ಸುರು ಆತು. ಕೆಲವು ಸರ್ತಿ ಈ ಅಪ್ಪ° ಹೀಂಗೇ. ಯೋಚನೆ ಮಾಡ್ಲೆ ಇಲ್ಲೆ. ಆ ಹಳತ್ತು ಮಾತ್ರೆಯ ಈಗ ಕೊಡುದಾ? ಎಂತಕ್ಕು ಹೇಳಿ ಯೋಚನೆ ಮಾಡಿಕೊಂಬಲೆ ಇಲ್ಲೆಯಾ?
ಗೋಣ ಕಂಜಿ ಇನ್ನುದೆ ಜೋರಾಗಿ ಕೈಕಾಲು ಬಡಿವಲೆ ಸುರು ಮಾಡಿತ್ತು. ಒಟ್ಟಿಂಗೆ ಜೋರು ಅರೆದ್ದುತ್ತಾ ಇದ್ದು.
ಬಹುಷ ಮದ್ದು ತಿರುಗಿ ಮೆಟ್ಟಿತ್ತಾ ಹೇಳಿ ಕಾಣ್ತು. ಕಂಜಿಗೆ ಕಮ್ಮಿ ಅಪ್ಪ ಹಾಂಗೆ ಕಾಣ್ತಾ ಇಲ್ಲೆ. ಕಿಟ್ಟಣ್ಣಂಗೆ ಯಾವಾಗಳು ಪಿಸುರು ಬಪ್ಪದು ಹೇಳಿ ಇಲ್ಲೆ. ಆದರೆ ಕೆಲವು ಸರ್ತಿ ಬಂದರೆ ಮಾತ್ರ ತಡವಲೆ ಸಾಧ್ಯ ಇಲ್ಲೆ. ಈಗ ಅಪ್ಪನ ಮೇಲೆ ಪಿಸುರು. ಹೇಳದ್ದೆ ಕೇಳದ್ದೆ ಆ ಹಳತ್ತು ಮಾತ್ರೆ ಕೊಟ್ಟದೆಂತಕೆ? ಈಗ ಕಂಜಿಗೆ ಕಮ್ಮಿ ಅಪ್ಪ ಬದಲಿಂಗೆ ಜಾಸ್ತಿ ಅವುತ್ತ ಇದ್ದಲ್ಲ? ಕಂಜಿ ಅರೆದ್ದುದರ, ಹೊಡಚ್ಚುದರ ಅವಂಗೆ ನೋಡ್ಲೆ ಆವುತ್ತಿಲ್ಲೆ.
“ನಿಂಗ ಬೇಕೂಳಿ ಅದಕ್ಕೆ ಆ ಮಾತ್ರೆ ಕೊಟ್ಟದು” ಕಿಟ್ಟಣ್ಣನ ಪಿಸುರು ಜೋರಾವ್ತಾ ಇದ್ದು.
“ಹಾಂಗಾರೆ ನೀನು ಹೋಗಿ ದನದ ಡಾಟ್ರನ ಕರಕ್ಕೊಂಡು ಬಾ” ಎಂಕಣ್ಣ ಹೇಳಿದ°.
“ಅಪ್ಪು, ಈಗ ಡಾಟ್ರ° ಎಲ್ಲಿ ಸಿಕ್ಕುತ್ತು?”
ಗೋಡಾಟ್ರ° ಬಪ್ಪದು ಕಲ್ಲಡ್ಕಂದ. ಉದಿಯಪ್ಪಗ ಬಂದರೆ ಹೊತ್ತೋಪಗ ಆರು ಗಂಟೆಗೆ ಅದು ಮನೆಗೆ ಹೋಗಿ ಆವುತ್ತು.
“ನೋಡಿ ಅದು ಹೊಡಚ್ಚುದು. ಎಂತಕೆ ಆ ಮಾತ್ರ್ತೆ ಕೊಟ್ಟದು. ಅದರಂದಲೇ ಜಾಸ್ತಿ ಆದ್ದು ಅದಕ್ಕೆ.”
“ಎಂತ ಮಾಡ್ಲಾವುತ್ತು? ಕಮ್ಮಿ ಆಗದ್ರೆ ಸಾಯ್ಗು… ಸತ್ತರೆ, ಗುಂಡಿ ತೆಗದು ಹುಗಿವದು”
“ಅಪ್ಪಪ್ಪು…. ಗುಂಡಿ ತೆಗದು ಹುಗಿವದು. ಅದು ಸಾಯ್ಲಿ ಹೇಳಿ ಇದ್ದ ನಿಂಗೊಗೆ? ಸತ್ತರೆ ಅದು ಕುಡಿವ ಹಾಲುದೆ ಒಳಿತ್ತಲ್ಲದ?”
“ಎಂತರ ಹೇಳುದಾ ನೀನು? ಈಗ ಎಂತ ಮಾಡೆಕ್ಕು?”
“ಅದಕ್ಕೆ ಸರಿಯಾದ ಮದ್ದು ಕೊಡಿ. ಅದಕ್ಕೆ ಕಮ್ಮಿ ಆಯೆಕ್ಕು.”
“ಇನ್ನೆಂತರ ಕೊಡುದು? ಇನ್ನು ರಕ್ತ ಬಾಳ ಕೊಟ್ಟು ನೋಡೆಕ್ಕು. ಅಷ್ಟೆ”
ಒಟ್ಟಾರೆ ಅಪ್ಪಂಗೂ ಮಗಂಗೂ ಜಗಳ ಅವ್ತಾ ಇಪ್ಪಗ ಜಾಲ ಕೊಡೀಲಿ ತಡಮ್ಮೆ ದಾಂಟಿ ನಾಣಿಯೂ, ಅವನ ಅಬ್ಬೆ ಪರಮೇಶ್ವರಿ ಅಕ್ಕನೂ ಒಳಬಂದವು
ಪರಮೇಶ್ವರಿ ಅಕ್ಕ ಜಾಲಿಲಿ ಹೊಡಚ್ಚಿಕೊಂಡು ಇತ್ತಿದ್ದ ಗೋಣ ಕಂಜಿಯ ನೋಡಿತ್ತು.
“ಎಂತಾತು ಕಂಜಿಗೆ” ಕೇಳಿತ್ತು.
“ನೋಡಿ ಅತ್ತೆ, ಕಂಜಿಗೆ ಹುಳು ಮೊಗಚ್ಚಿದ್ದಡ. ಅದಕ್ಕೆ ಬೇಕೂಳಿ ಹಳತ್ತು ಮಾತ್ರೆ ಕೊಟ್ಟಿದವು ಈ ಅಪ್ಪ.. ರಜಾ ಬೆಶಿ ನೀರು ಕುಡುಶಿದ್ದರೆ ಆವುತಿತ್ತಿಲೆಯಾ?..” ಕಿಟ್ಟಣ್ಣನ ದೂರು.
ಕಿಟ್ಟಣ್ಣ ‘ಪರಮೇಶ್ವರಿ ಅತ್ತೆ’ ಹೇಳಿ ದಿನಿಗುದು.ಒಂದು ಲೆಕ್ಕಲ್ಲಿ ಪರಮೇಶ್ವರಿ ಅಕ್ಕ ಅವಂಗೆ ಅತ್ತೆ ಆಯೆಕ್ಕಾವ್ತು. ಹೇಂಗೆ ಹೇಳಿರೆ, ಲೆಕ್ಕಲ್ಲಿ ಎಂಕಣ್ಣನ ದೊಡ್ಡಪ್ಪನ ಹೆಂಡತ್ತಿಯ ಅಣ್ಣನ ಮಾವಗಳ ತಂಗೆಯ ಮಗಳು ಗೀತಾಲಕ್ಷ್ಮಿಯ ಕೊಟ್ಟದು ಮೂಲೆ ಮನೆ ಗೋವಿಂದಣ್ಣಂಗೆ. ಗೋವಿಂದಣ್ಣನ ತಮ್ಮನ ಹೆಂಡತ್ತಿಯ ಸೋದರಳಿಯನ ನಾದಿನಿ ನಾಗವೇಣಿಯ ತಂದದು ಪರಮೇಶ್ವರಿ ಅಕ್ಕನ, ಸೋದರಭಾವನ ಹೆಂಡತ್ತಿಯ ಅಮ್ಮನ ಅಣ್ಣನ ಹೆಂಡತ್ತಿಯ ಅಪ್ಪಚ್ಚಿಯ ಮಗನ ಮಾವಗಳ ಮೂರ್ನೇ ಮಗ ಸುಬ್ರಾಯಂಗೆ. ಹಾಂಗೆ ಆ ಲೆಕ್ಕಾಚಾರಲ್ಲಿ ಪರಮೇಶ್ವರಿ ಅಕ್ಕ ಎಂಕಣ್ಣಂಗೆ ತಂಗೆ ಆವುತ್ತು. ಹಾಂಗೆ ಕಿಟ್ಟಣ್ಣಂಗೆ ಅತ್ತೆ ಆತಲ್ದ? ಕಿಟ್ಟಣ್ಣ್ಣಂಗೆ ಹತ್ತರಾಣ ಅತ್ತೆ. ತುಂಬ ಹತ್ತರೆ ಹೇಳಿರೆ, ಇದ, ನಾಲ್ಕು ಬಕ್ಕಾರು ಹಾಕಿ ತೋಟ ದಾಂಟಿರೆ ಆತು ಈ ಅತ್ತೆ ಮನೆ ಸಿಕ್ಕುತ್ತು, ಅಷ್ಟು ಹತ್ತರೆ.
“ಮತ್ತೆಂತ ಮದ್ದು ಕೊಡದ್ದೆ ಕೂರೆಕ್ಕಿತ್ತ?” ಎಂಕಣ್ಣನ ಉತ್ತರ.
ಪುನ ಅಪ್ಪಂಗು ಮಗಂಗು ಜಗಳ ಸುರುವಾತು. ಕಿಟ್ಟಣ್ಣಂಗೆ ಜೋರು ಪಿಸುರು ಎಳಗಿತ್ತು.
“ಅಪ್ಪಪ್ಪು, ಕೈಗೆ ಸಿಕ್ಕಿದ ಮದ್ದು ಕೊಡೆಕ್ಕು, ಕಂಜಿ ಸತ್ತರೆ? ಅದರೆ ಅಬ್ಬಗೆ ಕಂಜಿ ಇಲ್ಲದ್ರೆ ಹೇಂಗಾವುತ್ತು? ಆನು ಸತ್ತರೆ ನಿಂಗೊಗೆ ಹೇಂಗಕ್ಕು?” (ಪಿಸುರು ಸರೀ ಏರಿದ್ದು)
ಕಿಟ್ಟಣ್ಣ ಎದ್ದಿಕ್ಕಿ, ಜೆಗಿಲಿ ಹತ್ತಿಕ್ಕಿ, ಒಳ ಚಾವಡಿಲಿ ತೆಂಕ ಹೊಡೇಲಿ ಇಪ್ಪ ಮರದ ಮೆಟ್ಳು ದಡ ದಡ ಹತ್ತಿಕ್ಕಿ, ಅಟ್ಟಕ್ಕೆ ಹೋದ°. ಅಟ್ಟ ಹೇಳಿರೆ ಮರಮುಚ್ಚಿಗೆಯ ಮೇಲೆ ಮಣ್ಣು ಹಾಕಿ ಮಾಡಿದ ಅಟ್ಟ. ಮನೆಯ ಸ್ಟೋರು ರೂಮುದೆ ಈ ಅಟ್ಟವೇ. ಪೂಂಕೆ ಬಾರದ್ದಾಂಗೆ ಭರಣಿಲಿ ತುಂಬಿಸಿದ ಮಾವಿನ ಮೆಡಿ ಉಪ್ಪಿನ ಕಾಯಿ,ಸೊಳೆ ನೀರಿಂಗೆ ಹಾಕಿದ್ದು, ನೀರಡಕ್ಕೆ ಹಾಕಿದ್ದು ಎಲ್ಲ ಈ ಅಟ್ಟಲ್ಲಿಯೇ ಇಪ್ಪದು.ಅಲ್ಲೆ ಒಂದು ಕರೇಲಿ ಸೊಂಟದ ಎತ್ತರಕ್ಕೆ ಒಂದು ಸಣ್ಣ ಗಿಳುಬಾಗಿಲು ಇದ್ದು. ಈ ಗಿಳುಬಾಗಿಲಿನ ಕರೇಲಿ ಕಿಟ್ಟಣ್ಣ ಅವನ ಪುಸ್ತಕ, ಹಾಸಿಗೆ ಎಲ್ಲ ಮಡಿಕ್ಕೊಂಡು ಅವನ ಬೆಡ್ಡುರೂಮಿನ ಹಾಂಗೆ ಮಾಡಿಕೊಂಡಿದ°. ಪಿಸುರಿಲಿ ಹೊತ್ತೋಪಗಾಣ ಹೊತ್ತಿಂಗೆ ಅವ ಹೀಂಗೆ ಹತ್ತಿಕ್ಕಿ ಹೋದ ಹೇಳಿ ಆದರೆ, ಮತ್ತೆ ಅವ ಕೆಳ ಬಾರ°. ಕಸ್ತಲೆಗೆ ಉಂಬಲೂ ಬಾರ°. ಮತ್ತೆ ಮಾರ್ಣೇ ದಿನವೇ ಆತಷ್ಟೆ ಅವ° ಕೆಳ ಬಪ್ಪದು.
” ಹೂಂ… ನೋಡುವ ಎಂತಾಯ್ದು ಹೇಳಿ”
ಪರಮೇಶ್ವರಿ ಅಕ್ಕಂಗೆ ರಜಾ ಮನೆ ಮದ್ದುಗೋ ಗೊಂತಿದ್ದು. ಗೋಣ ಕಂಜಿಯ ನೋಡಿತ್ತು. ಕಂಜಿ ಗಡಿ ಗಡಿ ಅರ್ಬಾಯಿ ಕೊಟ್ಟುಕೊಂಡು ಕೂಗಿ ಹೊಡಚ್ಚುತ್ತು. ಪರಮೇಶ್ವರಿ ಅಕ್ಕ ಸೀದಾ ಒಳ ಹೋತು. “ಅತ್ತಿಗೆ ಎರಡು ತೆಂಗಿನಕಾಯಿ ಇದ್ದಾ?” ಹೇಳಿ ಪಾರ್ವತಿ ಅಕ್ಕನ ಹತ್ತರೆ ಕೇಳಿತ್ತು. ಪಾರ್ವತಿ ಅಕ್ಕ ಮಾತಾಡದ್ದೆ ಎರಡು ತೆಂಗಿನ ಕಾಯಿ ಕೊಟ್ಟತ್ತು. ಪರಮೇಶ್ವರಿ ಅಕ್ಕ ಅದರ ಒಂದು ಕತ್ತಿಲಿ ಒಡದು, ಕಾಯಿನೀರಿನ ಒಂದು ಚೆಂಬಿಲಿ ತುಂಬಿಸಿತ್ತು.
ನಾಣಿಗೆ ನೋಡುವಗ ರಜಾ ಆಶೆ ಅಶೆ ಆತು…. ಅಬ್ಬೆ ಅವಂಗೆ ಕುಡಿವಲೆ ಕೊಡುಗಾ ಹೇಳಿ. ಆದರೆ ಪರಮೇಶ್ವರಿ ಅಕ್ಕ ಅದರ ಸೀದಾ ಗೋಣ ಕಂಜಿ ಹತ್ತರಂಗೆ ಕೊಂಡೋತು. ಒಂದು ಗ್ಲಾಸಿಂಗೆ ಹಾಕಿ, ಆಮೇಲೆ ಬೆದುರು ಅಂಡೆಲಿ ತುಂಬುಸಿ, ಗೋಣ ಕಂಜಿಗೆ ಕುಡುಶಿತ್ತು. ಅಷ್ಟು ಕಾಯಿನೀರನ್ನುದೆ ಗೋಣ ಕಂಜಿಗೆ ಕುಡುಶಿ ಬಿಟ್ಟತ್ತು.
ಮತ್ತೆ ಕಂಜಿಯ ಅಲ್ಲೆ ಬಿಟ್ಟಿಕ್ಕಿ ಒಳ ಹೋದ ಪರಮೇಶ್ವರಿ ಅಕ್ಕ, ಪಾರ್ವತಿ ಅಕ್ಕನೊಟ್ಟಿಂಗೆ ಎಂತದೋ ಪಂಚಾತಿಗೆ ಮಾಡ್ಲೆ ಸುರು ಮಾಡಿತ್ತು. ಹೆರ ಜಾಲಿಲಿ ಈಗ ಮೌನ. ಎಂಕಣ್ಣ ಸುಮ್ಮನೆ ಚಾವಡಿಲಿ ಮರದ ಕುರ್ಶಿಲಿ ಕೂದ°.
ರಜಾ ಹೊತ್ತಪ್ಪಗ ಕಂಜಿಯ ಅರ್ಬಾಯಿ ನಿಂದತ್ತು. ಅಡ್ಡ ಹಾಕಿದ ತಲೆಯ ನೆಗ್ಗಿತ್ತು. ಮತ್ತೆ ಎರಡು ನಿಮಿಷ ಆಯೆಕ್ಕಾರೆ ಕಂಜಿ ಕಾಯಿ ಕಡವಲೆ ಸುರು ಮಾಡಿತ್ತು.
ಕಾಯಿ ಕಡವದಾ? ಎಮ್ಮೆಕಂಜಿ ಕಾಯಿ ಕಡವಲೆ ಅದೆಂತ ಅಡಿಗೆ ಸತ್ಯಣ್ಣನ ಅಶಿಶ್ಟೆಂಟು ರಂಗಣ್ಣನಾ? ಹೇಳಿ ನಮ್ಮ ಚೆನ್ನೈ ಭಾವ° ಕೇಳುಗು. ಕಾಯಿಕಡವದು ಹೇಳಿರೆ ಮೇಲಾರದ ಅರಪ್ಪಿಂಗೆ ಕಾಯಿ ಕಡವದಲ್ಲ. ದನಂಗ ಎಮ್ಮೆಗ ಎಲ್ಲ ಹುಲ್ಲು ಮೇವಗ, ತಿಂಬಗ ಎಲ್ಲ ಸುರೂವಿಂಗೆ ಒಂದೇಸಲ, ಬೋಚ ಬಾವನ ಹಾಂಗೆ, ಹೊಟ್ಟೆಗೆ ತುಂಬಿಸಿಕೊಂಬದು. ಈ ದನ, ಎಮ್ಮೆಗೊಕ್ಕೆ ನಾಲ್ಕು ಹೊಟ್ಟೆ ಇರ್ತು. ಅದಲ್ಲಿ ಸುರೂವಿಂಗೆ ತಿಂದದರ ಒಂದನೇ ಹೊಟ್ಟೆಲಿ ತುಂಬುಸಿ ಮಡುಗಿ ಕೊಳ್ತವು. ಮತ್ತೆ ಪುರುಸೋತಿಲಿ, ಆರಾಮಲ್ಲಿ ಮನಿಕ್ಕೊಂಡು ತಿಂದದರ ಪುನಾ ಬಾಯಿಗೆ ತಂದು ಅದರ ಸರೀ ಅಗುದು ಆಗುದು ನುಂಗುತ್ತವು. ಅದಕ್ಕೆ ಕಾಯಿ ಕಡವದು ಹೇಳಿ ಹೆಸರು. ಎಂತದೇ ರೋಗ ಇಲ್ಲದ್ರೆ ಅವು ಆರಾಮಲ್ಲಿ ಕಾಯಿ ಕಡಕ್ಕೊಂಡು ಇರ್ತವು. ಕನ್ನಡಲ್ಲಿ ಅದಕ್ಕೆ “ಮೆಲುಕು ಹಾಕುದು” ಹೇಳ್ತವು. ಇನ್ನು ಜಾಸ್ತಿ ಕೇಳೆಡಿ. ‘ಕನ್ನಡ ಪ್ರಬೋದಿನಿ’ ಹಿಡ್ಕೊಂಡು ನಿಂಗೊಗೆ ಕನ್ನಡ ಪಾಟ ಮಾಡ್ಳೆ ಎನ್ನಂದೆಡಿಯ. ಇನ್ನೂ ತಿಳ್ಕೊಳ್ಳೆಕ್ಕು ಹೇಳಿ ಇದ್ದರೆ, ಉದಿಯಪ್ಪಗ ಒಂಬತ್ತು ಗಂಟೆಗೆ ಕಲ್ಲಡ್ಕಂದ ಗೋಡಾಟ್ರ° ಬತ್ತು. ಅದರ ಹತ್ತರೆ ಕೇಳಿ.
—————————————————————————————————
ಉದಿಯಪ್ಪಗ ದನಂಗೊಕ್ಕೆ ಹುಲ್ಲು ಹಾಕಿಕ್ಕಿ,ಅಕ್ಕಚ್ಚು ಕೊಟ್ಟು, ಹಾಲು ಕರವಲೆ ಕಂಜಿ ಬಿಟ್ಟಿಕ್ಕಿ, ಜಾಲಿಂಗೆ ಕಾಲು ಮಡುಗುವಗ, ಲಿಂಗಪ್ಪ ಮೇಸ್ತ್ರಿ ಸೇಂಕಿಕೊಂಡು, ಓಡಿಗೊಂಡು ತೋಟದ ಹೊಡೆಂದ ಬಪ್ಪದು ಎಂಕಣ್ಣಂಗೆ ಕಂಡತ್ತು. ಲಿಂಗಪ್ಪ° ಹೇಳಿರೆ ಆರು ಗೊಂತಿದ್ದಲ್ಲ? ನಾಣಿಯ ಫ್ರೆಂಡು ತೋಡಕರೆ ಬಾಬುವಿನ ಅಪ್ಪ°.
“ಆಣ್ಣೇರೆ… ಅಣ್ಣೇರೆ… ಈರ್ ತೋಟಗ್ ಪೋತುಜ್ಜಾರ?” ಲಿಂಗಪ್ಪ° ಬಾರೀ ಮಂಡೆ ಬೆಶಿಲಿ ಇಪ್ಪಾಂಗೆ ಕಾಣ್ತಾ ಇದ್ದು.
ಎಂಕಣ್ಣ ಒಂದಾರಿಯಾಣ ಮನೆ ಕೆಲಸ ಆದ ಮೇಲೆ ತೋಟಕ್ಕೆ ಹೋಪದು.
“ಇಜ್ಜಿ ಮಾರಾಯಾ. ದಾಯೆಗ್?”
“ಛೇ, ಈರ್ ಪೋವೋಡಿತ್ತುಂಡ್”
“ಎಂಚಿನ ವಿಷಯೋ?”
“ಅಪಗ ಈರೆಗ್ ನನಲಾ ವಿಷಯ ಗೊತ್ತುಜ್ಜ?”
“ಈ ಪಂಡ ಅತ್ತ ಗೊತ್ತಾಪಿನೆ? ದಾಯಿತ ಪಣು”
“ಅತ್ತ್…..ಈರ್ ಎಂಕ್ ನೆರಿಯಾರ ಬಲ್ಲಿ”
“ಇಜ್ಜಿ… ನೆರ್ಪುಜ್ಜಿ ಪಣು….”
“ಸುದ್ದಿ ಕೇಂಡ ಇರೆಗ್ ಬಯಂಕರ ಬೆಚ್ಚ ಆವು…”
“ಬೆಚ್ಚ ಆಪಿ ಲೆಕ್ಕಂದಿನ ಸುದ್ದಿ ಎಂಚಿನ ಮಾರಾಯ ಅವು?”
“ಏಪಲಾ ಪೋಪಿನಾರು, ಇನಿ ದಾನೆ ತೋಟಗ್ ಪೋತುಜ್ಜಾರು?”
ಎಲ ಕತೆಯೇ? ಇದಕ್ಕೆಂತರ ಬೆಶಿ? ತೋಟಕ್ಕೆ ಹೋಗದ್ದರೆ?
“ಇಂದೆ… ತೂಲೆ.. ಏಪದ ಲೆಕ್ಕ ಇನಿಲಾ ಯಾನು ರಡ್ಡ್ ಬಜ್ಜೆಯಿ ಪೆಜುಗ ಪಂಡುದ್ ಈರೆನ ತೋಟಗ್ ಪೋದಿತ್ತೆ.”
“ಅಂದಂದ್… ರಡ್ಡ್ ಪಂಡುದ್ ….ಇರ್ವ ಪೆಜೊಂಡು ಪೋಪ……”
ಎಂಚಿನ ಆಣ್ಣೇರೆ… ಎನ್ನನ್ ದಾನೆ ಕಳುವೆ ಪಣ್ಪುನ ಈರ್…? ಯಾನ್ ಬಚ್ಚಿರೆ ತಿನ್ಯಾರ ರಡ್ಡ್ ಬಜ್ಜೆಯಿ ಪೆಜ್ಜಿನೆ…”
“ಇಪ್ಪಡ್.. ಇತ್ತೆ ವಿಷಯ ಪಣ್”
“ಅವೆ ಪಂಡೋಂದು ಉಳ್ಳೆ…. ಈರ್ ಅಡ್ಡ ಬತ್ತ್ ನೆ..”
“ಪಣ್ ಮಾರಾಯಾ…”
“ಅವೆ ಯಾನ್ ರಡ್ಡ್ ಬಜ್ಜೆಯಿ ಪೆಜಿಯಾರ ಪಂಡುದು ಈರೆನ ತೋಟಗ್ ಪೋದಿತ್ತೆ…”
“………………………………………..”
“ದಾನೆ ಪಾತೆರುಜ್ಜಾರ್?”
“…………………………………………….”
“ಇರೆಗ್ ಬೋಡ್ಚಾಂಡ ಪಣ್ಪುಜ್ಜಿ……”
“ಎಂಚಿನ? ಬಜ್ಜೆಯಿಯಾ…?
“ಅತ್ತ್ ಅಣ್ಣೇರೆ….. ವಿಶಯೋ ಬೋಡ್ಚಾಂಡ ಪಣ್ಪುಜ್ಜಿ ಪಂಡೆ…..”
“ವಾ ಕರ್ ಕರಿ ಮಾರಾಯ ನಿನ್ನ….. ಕುಟ್ಟೆ…. ಪಣ್ಪುಂಡ ಬೇಕ ಪಣು… ಇಜ್ಜಾಂಡ ಪೋ….” ಎಂಕಣ್ಣಂಗೆ ಪಿಸುರು ಎಳಗುಲೆ ಸುರು ಆತು.
ಎಂಕಣ್ಣಂಗೆ ಮಾಂತ್ರ ಅಲ್ಲ ನಿಂಗೊಗೂ ಪಿಸುರು ಎಳಗುತ್ತ ಇದ್ದು ಹೇಳಿ ಎನಗುದೆ ಗೊಂತಿದ್ದು…….. ಇವ° ಸುಮ್ಮನೆ ಕತೆ ಎಳೆತ್ತ ಇದ್ದ° ಹೇಳಿ. ಆದರೆ ಎಂತ ಮಾಡುದು… ಈ ಲಿಂಗಪ್ಪನ ವ್ಯೆಗ್ತಿತ್ವವೇ ಹಾಂಗಿಪ್ಪದು. ಎಂತದೇ ವಿಶಯವ ನೇರಕ್ಕೆ ಹೇಳ. ಒಂತರ ಸಸ್ಪೆನ್ಸು ಕ್ರಿಯೇಟು ಮಾಡಿ ತಾನೆಂತದೋ ಬಯಂಕರ ಹೇಳ್ತಾ ಇದ್ದೆ ಹೇಳಿ ತೋರ್ಸಿಕೊಂಬದು….. ಇಂತ ಜೆನಂಗ ಕತೆಯೊಳ ಪ್ರವೇಶ ಆದರೆ ಕತೆ ಬರವೋರ ಅವಸ್ತೆ ಎಷ್ಟು ಕಷ್ಟದ್ದು ಹೇಳಿ ನಿಂಗೊಗೆ ಎಲ್ಲಿ ಅರ್ತ ಆಯೆಕ್ಕು?
“ತೂಲೆ ಈರ್ ಬೆಚ್ಚ ಮಾಲ್ಪೆರೆ ಬಲ್ಲಿ…..”
“ಇಂದಾ…… ಈ ಪಣ್ಪುಂಡ ಪಣ್. ನಿನ್ನ ಪಂಡುದು ಮುಗಿಪ್ಪುನೆಟ ಯಾನ್ ದಾಲಾ ಪಾತೆರುಜ್ಜಿ ಗೊತ್ತಾಂಡತ್ತಾ…?”
“ಆವು…. ತೂಲೆ ಯಾನ್ ಬಚ್ಚಿರೆ ತಿನ್ಯಾರ ಪಂಡುದ್ ರಡ್ಡ್ ಬಜ್ಜೆಯಿ ಪೆಜಿಯಾರ ಇರೆನ ತೋಟಗ್ ಪೋದಿತ್ತೆ. ಅಲ್ಪ ತೋಟೊದ ಬರಿಟ್ ತೋಡು ಉಂಡತ್ತಾ…… ಮಲ್ಲ ಬರೆತ್ತ ಬುಡೊಟ್…? ಅಲ್ಪ ಒಂಜಿ ಗುಂಡಿ ಉಂಡು ತೂಲೆ, ಗುರ್ಮೆ?… ಆ ಗುಂಡಿದ ಉಳಯಿ ಯೇರೋ ಒಂಜಿ ನರಮಾನಿ ಬೂರ್ದುಂಡು.”
ಒಂದು ನಿಮಿಷ ಈ ಲಿಂಗಪ್ಪ° ಎಂತ ಹೇಳ್ತಾ ಇದ್ದು ಹೇಳಿ ಎಂಕಣ್ಣಂಗೆ ತಲಗೆ ಹೊಕ್ಕಿದ್ದಿಲ್ಲೆ.
“ಎಂಚಿನ?”
“ತೋಟದ ಬರಿತ್ತ ತೋಡುದ ಗುಂಡಿಗ್ ಏರೋ ಬೂರ್ದೇರ್…..”
ನಾಣಿಯ ಮನೆ ಹಿಂದಾಣ ತೋಡು, ಎಂಕಣ್ಣನ ತೋಟದ ಕರೇಲಿ ಹೋವುತ್ತು. ಅದರ ಆಚ ಹೊಡೇಲಿ ಇಪ್ಪದು ಸಾಧಾರಣ ಎಂಟಾಳು ಎತ್ತರದ ಬರೆ. ಈ ಬರೆಲಿ ಪೂರ್ತಿ ಕೇಪ್ಳೆ, ಮುಳ್ಳು ಹೊದರಿನ ಬಲ್ಲೆ ತುಂಬಿದ್ದು. ಬುಡಲ್ಲಿ ಈ ತೋಡು ಇಪ್ಪದು. ಅದಲ್ಲಿ ಮಳೆ ಬೆಳ್ಳ ಹರುದು ಹರುದು ಗುಂಡಿಗ, ಗುರ್ಮೆಗ ಇದ್ದು. ಲಿಂಗಪ್ಪ° ಹೇಳ್ತಾ ಇಪ್ಪದು ಆ ಗುರ್ಮೆಗೆ ಆರೋ ಬಿದ್ದಿದವು ಹೇಳಿ.
“ಬೂರ್ದೆರಾ? ಏರು ಅವು?” ಎಂಕಣ್ಣಂಗೆ ರಜಾ ತಲೆ ತಿರುಗಿದ ಹಾಂಗೆ ಅಪ್ಪಲೆ ಸುರು ಆತು.
“ಏರು ಪಂಡುದ್ ಗೊತ್ತುಜ್ಜಿ. ಯಾನ್ ಮಿತ್ತುಡುದು ತೂಯಿನೆ. ಬೂರ್ನ ಜೆನ ಮೆದ್ಕುಜ್ಜಿ”
ಎಂಕಣ್ಣ ಸೀದಾ ಮನೆ ಮೆಟ್ಳು ಹತ್ತಿದ°.
“ಕಿಟ್ಟೋ… ಏ ಕಿಟ್ಟಣ್ಣ…” ಕಿಟ್ಟಣ್ಣನ ದಿನಿಗಿದ°. ಕಿಟ್ಟಣ್ಣನ ಸುದ್ದಿ ಇಲ್ಲೆ.
“ಇದಾ ಕಿಟ್ಟಣ್ಣ ಎಲ್ಲಿದ್ದಾ…?” ಹೆಂಡತ್ತಿಗೆ ಕೇಳುವಾಂಗೆ ಬೊಬ್ಬೆ ಹೊಡದ°. ಎಂತಾಯಿದು ಹೇಳಿ ನೋಡ್ಲೆ ಕಿಟ್ಟಣ್ಣನ ತೋಟಕ್ಕೆ ಕಳುಸುಲಕ್ಕಲ್ಲದ?
“ಎನಗೆ ಗೊಂತಿಲ್ಲೆ… ಉದಿಯಾಂದಲೆ ಆನು ಅವನ ನೋಡಿದ್ದಿಲ್ಲೆ.”
“ಎಂಕಣ್ಣ ಅಟ್ಟದ ಮೆಟ್ಳು ಹತ್ತಿ ನೋಡಿದ°. ಕಿಟ್ಟಣ್ಣ ಅವನ ಜಾಗೆಲಿ ಕಂಡಿದಾಯಿಲ್ಲೆ. ಕಿಟ್ಟಣ್ಣನ ಹಸೆ ಮಡಿಸಿ ಮಡಿಕ್ಕೊಂಡಿದ್ದು.
“ಚೆ… ಈ ಕಿಟ್ಟಣ್ಣ ಎಲ್ಲಿಗೆ ಹೋಯಿದ°?…… ಏ ಸವಿತಾ…. ಕಿಟ್ಟಣ್ಣ ಎಲ್ಲಿದ್ದ…?”
ಮಗಳು ಸವಿತನ ದಿನಿಗಿದ°… ಅದರದ್ದೂ ಸುದ್ದಿ ಇಲ್ಲೆ.
“ಸವಿತ ಮನುಗಿದ್ದು….. ಇನ್ನೂ ಎದ್ದಿದಿಲ್ಲೆ” ಒಳಂದ ಯೆಜಮಾಂತಿಯ ಉತ್ತರ ಬಂತು.
“ಇನ್ನೂ ಎದ್ದಿದಿಲ್ಲೆಯ? ಎಂತಾ ಕೂಸು ಇದು? ಮದುವೆ ಪ್ರಾಯ ಆತು, ಇನ್ನೂ ಏಳ್ಲೆ ಆವುತ್ತಿಲ್ಲೆಯ? ಗಂಟೆ ಏಳಾತು, ಯಾವಗಳೂ ಐದು ಗಂಟೆಗೆ ಏಳ್ಲೆ ಎಂತಾವುತ್ತು ಅದಕ್ಕೆ” ಎಂಕಣ್ಣ ಪರಂಚಿದ°.
“ನಿಂಗ ಅದರ ಬೈಯೆಡಿ, ಅದು ಯಾವಗಳೂ ಐದು ಗಂಟೆಗೇ ಏಳ್ತು” ಹೆಂಡತ್ತಿ ಯಾವಾಗಳೂ ಮಗಳ ಕಡೆಂಗೆ.
“ಹೂಂ… ಏಳ್ತು… ಏಳ್ತು…ಎದ್ದು ಎಂತ ಮಾಡ್ತು?”
“ಉಚ್ಚೊಯ್ದಿಕ್ಕಿ ಪುನ ಮನುಗುತ್ತು, ಅದು ಸಣ್ಣಂದಲೂ ಹಾಂಗೇ ಅಲ್ಲದಾ?” ಹೆಂಡತ್ತಿಯ ಉತ್ತರ.
ಕಿಟ್ಟಣ್ಣ ಕಾಣ್ತಾಯಿಲ್ಲೆ… ಎಂತ ನಿನ್ನೆ ಹೊತ್ತೋಪಗಾಣ ಪಿಸುರು ಇನ್ನೂ ಇಳುದ್ದಿಲ್ಲೆಯಾ? ಎಲ್ಲಿ ಹೋಯಿದ ಇವ°?
ಇವನ ಹುಡ್ಕಿರಾಗ. ಎಂಕಣ್ಣ ತೋಟದ ಹೊಡೇಂಗೆ ಹೆರಟ°. ಒಟ್ಟಿಂಗೆ ಬೀಲದ ಹಾಂಗೆ ಲಿಂಗಪ್ಪನೂ ಬಂತು.
ತೋಟದ ಕರೆಂಗೆ, ತೋಡಿನ ಹತ್ತರಂಗೆ ಎತ್ತುವಗ ಲಿಂಗಪ್ಪ ಮುಂದೆ ಎತ್ತಿತ್ತು……. ಸೀದ ಗುರ್ಮೆ ಹತ್ತರಂಗೆ.
“ಅಣ್ಣೆರೆ ಮೂಲು… ಮೂಲು…. ತೂಲೆ….” ಗುರ್ಮೆಯ ಮೇಲಾಣ ಹೊಡೆಲಿ ಒಂದು ಪೇರಳೆ ಮರ ಇದ್ದು. ಅದರ ಕೈಲಿ ಹಿಡುದು ರಜಾ ಬಗ್ಗಿ ಗುರ್ಮೆಯ ಒಳಾಣ ಹೂಡೆಂಗೆ ಬಗ್ಗಿ ನೋಡೆಕ್ಕು.
ಎಂಕಣ್ಣ ಬಗ್ಗಿ ನೋಡಿದ°. ಗುರ್ಮೆಯ ಒಳದಿಕ್ಕೆ ಲಿಂಗಪ್ಪ ಹೇಳಿದಾಂಗೆ ಒಂದು ಮನುಷ್ಯ ಬಿದ್ದು ಕೊಂಡಿಪ್ಪದು ಅಪ್ಪು. ಆರು ಹೇಳಿ ಸ್ಪಷ್ಟ ಆವುತ್ತಾ ಇಲ್ಲೆ. ಬಿದ್ದಜೆನ ಆರು ಹೇಳಿ ಮೇಲಂದಲೆ ಹೇಳ್ಲೆ ಸಾಧ್ಯ ಇಲ್ಲೆ. ಮೋರೆ ಅಡಿಯಾಗಿ ಬಿದ್ದಿದು. ಮನುಷ್ಯ ಹಂದುದು ಕಾಣ್ತಿಲ್ಲೆ. ಬಹುಶ ಸತ್ತಿದು. ಅರೋ ಈ ಗುಂಡಿಯೊಳ ಹೋಗಿ ಆತ್ಮಹತ್ಯೆ ಮಾಡಿಕೊಂಡಿದವು, ಅಲ್ಲದ್ರೆ ಬೇರೆ ಆರೋ ಕೊಂದು ತಂದು ಹಾಕಿದ್ದವು….. ಏ ದೇವರೆ ಇದೆಂತ ತಾಪತ್ರಯ ಬಂತು ತಲೆ ಮೇಲೆ? ಎಂಕಣ್ಣಂಗೆ ತಲೆಲಿ ಗಿರ್ಮಿಟ್ಟು ಆದಾಂಗೆ ಅಪ್ಪಲೆ ಸುರು ಆತು.
ಎಂಕಣ್ಣ ಇನ್ನೊಂದರಿ ಪೇರಳೆ ಮರ ಹಿಡುದು ಬಗ್ಗಿ ನೋಡಿದ°. ಜೆನ ಆರು ಹೇಳಿ ಗೊಂತಾಗದ್ರುದೆ ಬಿದ್ದ ಮನುಷ್ಯ° ಕಾಕಿ ಚಡ್ಡಿದೆ ಬೆಳಿ ಅಂಗಿದೆ ಹಾಕಿದ್ದು ಗೊಂತಾವುತ್ತು.
‘ಆರಿಕ್ಕು, ಕೆಳ ಇಳುದೇ ನೋಡೆಕ್ಕಷ್ಟೆ…’ ಎಂಕಣ್ಣ ಮನಸ್ಸಿಲೇ ಗ್ರೇಶಿಕೊಂಡು, ಇತ್ಲಾಗಿ ತಿರುಗುವಗ ಬಲ್ಬು ಹೊತ್ತಿದಾಂಗೆ ರಪಕ್ಕ ತಲೆಯೊಳ ನೆಂಪಾತು….. ಕಿಟ್ಟಣ್ಣಂದೇ ಕಾಕಿ ಚಡ್ಡಿ ಬೆಳೀ ಅಂಗಿ ಹಾಕುದು.
ನಿನ್ನೆ ಹೋತ್ತೋಪಗ ಜಗಳ ಮಾಡಿ “ಅಪ್ಪಪ್ಪು, ಕೈಗೆ ಸಿಕ್ಕಿದ ಮದ್ದು ಕೊಡೆಕ್ಕು, ಕಂಜಿ ಸತ್ತರೆ? ಅದರೆ ಅಬ್ಬಗೆ ಕಂಜಿ ಇಲ್ಲದ್ರೆ ಹೇಂಗಾವುತ್ತು? ಆನು ಸತ್ತರೆ ನಿಂಗೊಗೆ ಹೇಂಗಕ್ಕು?” ಹೇಳಿ ಅಟ್ಟ ಹತ್ತಿಕ್ಕಿ ಹೋದ ಕಿಟ್ಟಣ್ಣನ ನೆಂಪಾತು. ಅಷ್ಟಪ್ಪಗ ಅವ° ಹಾಕಿಕೊಂಡಿತ್ತದು ಕಾಕಿ ಚಡ್ಡಿ ಬೆಳಿ ಅಂಗಿ.
————————————————————————————————————–
ಕತೆಯ ಇನ್ನಾಣ ಭಾಗ ಬಪ್ಪ ವಾರ….

20 thoughts on “ಚೈನು – ಭಾಗ ಒಂದು

  1. * ಶಾಮಣ್ಣಾ, ಈ ಕಿಟ್ಟಣ್ಣಂಗೆ ಪರಮೇಶ್ವರಿ- ಅತ್ತೆ ಹೇಂಗೆ ಹೇಳಿ ತಲಗೆ ಹೋವುತ್ತಿಲ್ಲೇನ್ನೆ.ಮುಖತ ಕಾಂಬಗ ಹೇಳೆಕಾತೋ.
    * ಒಂದಾರಿ ಹೀಂಗೆ ಬೆದುರ ಓಟೆಲಿ ಆರೋ ದನಕ್ಕೆ ಮದ್ದು ಕುಡುಶಲೆ ನೋಡಿಯಪ್ಪಾಗ, ದನ ಕುಡುದತ್ತಿಲ್ಲೆ ಹೇಳಿ ಈ ಕರೆಂದ ಊದಿದವಾಡ,ದನಕ್ಕೆ ಪಿಸುರು ಬಂದು ಅದು ಜೋರು ಅತ್ಲಾಗಿ ಊದಿತ್ತಾಡ ಮತ್ತೆ ಕೇಳೆಕೋ..ಕತೆ! ಪುಣ್ಯಕ್ಕೆ ಈ ಕತೆಲಿ ಹಾಂಗಾಯಿದಿಲ್ಲೆ ..
    * ಮುಂದಾಣ part ಂಗೆ ಕಾದಂಡಿದ್ದೆ.
    ( ಕತೆ ಲಾಯಕಾಯಿದು ಮಿನಿಯಾ)

  2. ಥ್ಯಾಂಕು….
    ಆನಗೆ ಇನ್ನೊಂದು ಹೆದು ಬಿಡೀ……
    ಈ ಒಪ್ಪಣ್ಣನ ಬೈಲಿನ ಒಪ್ಪಂಗೊ ಅಂದರೆ ಎಂತ?
    ಒಪ್ಪ ಎಂದರೆ ಎಂತ?

    1. (ಆನಗೆ ಇನ್ನೊಂದು ಹೆದು ಬಿಡೀ……) – ಎನಗೆ ಇನ್ನೊ೦ದು ಹೇಳಿ ಬಿಡಿ – ಹೇಳಿ ತಿದ್ದುಲಕ್ಕು .
      ಒಪ್ಪ = ಪ್ರೀತಿ,ಮುತ್ತು,ಒಳ್ಳೆಯ .
      ಒಪ್ಪಣ್ಣನ ಬೈಲಿನ ಒಪ್ಪ೦ಗೊ ಹೇಳಿರೆ ಮುತ್ತಿನ೦ಥಾ ಮಾತುಗೊ- ಹೇಳುಲಕ್ಕು ಅಕ್ಕ.

  3. kate thumba chennagidhe, aadre nange lingappa matte yenkannana mathugalu artha agallilla

    1. ಸರಿ, ಆ ಸ೦ಭಾಷಣೆ ತುಳು ಭಾಷೆಲಿ ಇಪ್ಪ ಕಾರಣ ಈ ಸಮಸ್ಯೆ.
      ಸುಲಾಭಲ್ಲಿ ಹೇಳ್ತರೆ ತೋಟಲ್ಲಿ ನೀರಿನ ಗು೦ಡಿಗೆ ಆರೋ ಬಿದ್ದಿದವು ಹೇಳಿ ಕೆಲಸದ ಆಳು ಲಿ೦ಗಪ್ಪ , ಎ೦ಕಣ್ಣ೦ಗೆ ಹೇಳಿತ್ತು.

  4. ಶಾಮಣ್ಣ ಬರದ ಕಥೆ ಬೈಲಿಂಗೆ ಬಪ್ಪಗ ಕೊಶಿಯೋ ಕೊಶಿ. ಇನ್ನುದೆ ಪೆನ್ಸಿಲಿನ ದಾಸಪ್ಪ ಮಾಷ್ಟ್ರ ಪೆಟ್ಟಿನ ಬೆಶಿ ಮನಸ್ಸಿಲ್ಲೇ ತಿರುಗುತ್ತಇದ್ದು. ಈಗ ಚೈನು. ವಾಹ್ ! ಅದೆಂತ ಶೈಲಿ, ಅದೆಂತ ಸಸ್ಪೆನ್ಸು, ಅದೆಂತ ಚಿತ್ರ ಪಟಂಗೊ, ಅದೆಂತ ತಿರುಗಾಸುಗೊ. ಎಲ್ಲವೂದೆ ಓದುತ್ತವಂಗೆ ರಸಗವಳ. ಕತೆಯ ಓದಲೆ ನಿನ್ನೆಯೇ ಓದಿದ್ದೆ ಶಾಮಣ್ಣ , ಒಪ್ಪ ಕೊಡ್ಳೆ ತಡವಾತು. ಚೆನ್ನೈ ಭಾವಯ್ಯ ಹೇಳಿದ ಹಾಂಗೆ, ಪ್ರತಿ ಗೆರೆಯುದೆ ಓದುಸೆಂಡು ಹೋವ್ತು. ಲಿಂಗಪ್ಪ ಮೇಸ್ತ್ರಿ ವಿಷಯವ ಚ್ಯೂಯಿಂಗ್ ಗಮ್ಮು ಆಗಿ ಮಾಡಿದ್ದುದೆ ಲಾಯಕಾಯಿದು. ಗಂಡಿಲಿ ಕಂಡ ಕಾಕಿ ಚಡ್ಡಿ ಬೆಳಿ ಅಂಗಿ ಕಿಟ್ಟಣ್ಣನದ್ದು ಆಗಿರದ್ದೇ ಇರಳಿ ಹೇಳುವ ಅಭಿಲಾಶೆ. ಇದೀಗ
    ಇನ್ನಾಣ ವಾರಕ್ಕೆ ಕಾಯೆಕಾಯಿದು, ಶ್ಯಾಮಣ್ಣನ ಅಮೋಘ ಸಸ್ಪೆನ್ಸ್ ಥ್ರಿಲ್ಲರ್ ಕತೆಗೆ. . . . . !

  5. ಈ ಕೊ೦ಡಿಗಳಿ೦ದ ಮಾಡಿದ ಸರಪಳಿಯ(ಚೈನು),ಜೋಡು ಕರೆಗೆ ಬಪ್ಪದಕ್ಕೂ ಕೂಡ ೧೦ ವರುಶ ಆದರೂ” ತಾಡಿ” ಬಿಡ್ ಸುಲೆ ಎಡಿಯಾ?.ಹರ !ಹರಾ… ಲಿ೦ಗಪ್ಪಾ………ತರೆಕ್ಕ್ ಪೋಯಾರ ಕಮ್ಮಿಟ್ಲಾ ಆಟಿ ಕರಿವು.ಒರ ಓದಿಯರೆನೆ ಈತ್ ಪೊರ್ತಾ೦ಡ್.

  6. ಕತೆಯ ಓಟ ಅಮೋಘ. ಪ್ರತಿಯೊಂದು ಎಳೆಯನ್ನೂ ಬಿಡುಸಿ ಬಿಡುಸಿ ಹೇಳಿ, ಅಕೇರಿಲಿ ಕುತೂಹಲ ಘಟ್ಟಲ್ಲಿ ನಿಲ್ಲಿಸಿದ್ದು ಸೂಪರ್.
    ಹವ್ಯಕ ಭಾಶೆಲಿ ಬಪ್ಪ ಎಷ್ಟೋ ಹಳೆ ಶಬ್ದಂಗೊ, ಅದಕ್ಕೆ ವಿವರಣೆ ಲಾಯಿಕಕೆ ಸಿಕ್ಕಿತ್ತು.
    ಹಳ್ಳಿ ಬದುಕಿನ ನೈಜ ಚಿತ್ರಣ.
    ಇನ್ನಾಣ ಕಂತಿಂಗೆ ಕಾದು ಕೂಯಿದೆಯೊ

  7. ”ಭಾವನ ಪೈಶೆಲಿ ಮಡುಗಿದ ಹೋಟ್ಳು ಅಲ್ಲದಾ, ಹಾಂಗಾಗಿ ಹೋಟ್ಳಿಂಗೆ ‘ಹೋಟೇಲು ಭಾವನ’ ಹೇಳಿ ಹೆಸರು ಮಡುಗಿದ್ದವು.” ಹೆಸರು ಭಾರೀ ಲಾಯಿಕಿದ್ದು.
    ಎಮ್ಮೆ ಕ೦ಜಿ ನರಕ್ಕುವ ಚಿತ್ರಣ ನೈಜವಾಗಿದ್ದು. ಎಮ್ಮೆ, ೩ ಕ೦ಜಿ ಹಾಕಿದರೆ ಒ೦ದು ಬದುಕ್ಕುದೆ ಹೆಚ್ಹು. ಹಾ೦ಗಿಪ್ಪಗ ಹಿ೦ದೆ ೫೦ ವರ್ಶದ ಮೊದಲು ಹೂಡುಲೆ ಬೆಕಪ್ಪ ಗೋಣ ಕ೦ಜಿ ಸತ್ತರೆ ಎಶ್ಟು ನಸ್ಟ ಆವುತಿತೋ ಏನೋ! ಮರಣ ಕಾಲಕ್ಕೆ ಮಡ್ಡಿಲ್ಲೆಡ; ಕೆಡುವ ಕಾಲಕ್ಕೆ ಬುದ್ದಿಲ್ಲೆಡ.ಪುಣ್ಯ ಎಮ್ಮೆ ಕ೦ಜಿಗೆ ಆ ನಾಣಿಯ ಅಮ್ಮ೦ದ ಆಗಿ ಮದ್ದು ಸಿಕ್ಕಿತ್ತು.

  8. (“ಹಾಳೆ ಮರ್ಯಾದಿ, ಬೆದುರ ಓಟೆ…. ಪ್ಫ್ಹ್… ಈಗಳೂ ಇದ್ದೋ ಅಂಬಗ ಇದು!”) – ಭಾವ, ಈ ಕತೆ ನಡದ್ದು ೫೦ ವರ್ಷದ ಕೆಳ ಅಡ.

  9. ಅವೆಲ್ಲ ಹೇಂಗೆ ಅಷ್ಟು ಪಕ್ಕ ಓದಿ ಮುಗಿಶಿದವೋ ಈ ಕತೆಯ ?! ಎನಗೆ ಇಷ್ಟು ಹೊತ್ತಾತಿದಾ ಓದಿ ಮುಗುಶಲೆ!! ಏವ ನೆಣಪ್ಪಿಲ್ಲದ್ದೆ ಬಿಡುಸಿ ಬಿಡುಸಿ ಬರದ್ದವಪ್ಪ ಶ್ಯಾಮಣ್ಣ.
    ಶ್ಯಾಮಣ್ಣನ ಪೆನ್ಸಿಲು ನಾಣಿಯೂ ಒಟ್ಟಿಂಗೆ ಇತ್ತಿದ್ದ ಕಾರಣ ಎರಡ್ನೇ ಅಡ್ಡಗೀಟಿನವರೇಂಗೆ ಎರೆಡೆರಡು ಸರ್ತಿ ಓದಿ ಎಂಕಣ್ಣನಲ್ಲಿಂದ ಕಿಟ್ಟಣ್ಣನವರೇಂಗೆ ಆರೆಲ್ಲ ಇದ್ದವು ಹೇದು ಸರಿಯಾಗಿ ಮನದಟ್ಟುಮಾಡಿಗೊಂಬದು ಬಹುಮುಖ್ಯ ಕೆಲಸ ಆಗಿಹೋತೆನಗೆ ಈ ಕತೆಲಿ.
    ಹಾಳೆ ಮರ್ಯಾದಿ, ಬೆದುರ ಓಟೆ…. ಪ್ಫ್ಹ್… ಈಗಳೂ ಇದ್ದೋ ಅಂಬಗ ಇದು!
    ಕಾಯಿಕಡವ ರಂಗಣ್ಣ ಕಾಯಿ ಒಡದ ನೀರ ಎತ್ತಮಾಡುತ್ತನೋ. ಈಗಷ್ಟೇ ನವಗೂ ಏಚನೆ ಸುರುವಾತಿದ !
    ಗೋಣಕಂಜಿ ಹೊಡಚ್ಚಿ ಹೊಡಚ್ಚಿ ಹೊಡಚ್ಚಿ… – ಉಮ್ಮ ಎಷ್ಟು ಸರ್ತಿ ಹೊಡಚ್ಚಿತ್ತೋ ಎನ್ನ ಲೆಕ್ಕ ತಪ್ಪಿತ್ತು.
    ಹಾ°.. ‘ಕಾಯಿಕಡವಲೆ ಸುರುಮಾಡಿತ್ತು’ ಹೇದಪ್ಪಗ ಸಮಧಾನ ಆತಿದ.
    ಮತ್ತೆ…. ಮತ್ತೆ…. ಬುಕ್ಕೋ…. ಈಗ… ಆ ಕಾಕಿ ಚಡ್ಡಿ ಬೆಳಿ ಅಂಗಿ…. ಛೇ!! ಆಗಿರಪ್ಪ 🙁 ಈ ಶ್ಯಾಮಣ್ಣನ ನಂಬಲೆಡಿಯ . ಬಪ್ಪವಾರವೇ ನೋಡ್ವೋ°
    ಶ್ಯಾಮಣ್ಣ… ರೈಸಿದ್ದಾತೊ.

  10. ”ಆಟಿದ ದೊ೦ಬುಗು ಆನೆತ ಬೆರಿಲ ಪುಡಾವುಗೆ”

  11. ಅಯ್ಯೋ ದೇವರೇ…. ಕತೆ ಎಂತಾ ಸಂದರ್ಭಲ್ಲಿ ನಿಂದಿದು ಹೇಳಿರೆ, ದಿನಾ ಮುಂದಾಣ ಭಾಗಕ್ಕೆ ಕಾವ ಹಾಂಗೆ ಆಯಿದು.

  12. ಅಹ್…. ಎಮ್ಮೆಗೆ ಬಡಿವ ಉಪಾಯ ಸೂಪರಾಯ್ದಣ್ಣಾ… 🙂 🙂

  13. ಶ್ಯಾಮಣ್ಣ, ನಿಂಗಳ ಸಂಬಂಧದ [ ನಿಂಗಳ ಅಲ್ಲ ನಿಂಗ ಜೋಡಿಸಿದ] ಚೈನು ಭಾರೀ ಗಟ್ಟಿಯಾಗಿದ್ದು- ಆರಿಂಗೂ ಅದರ ತುಂಡುಸುಲೂ ಎಡಿಯ, ಕದ್ದೊಂಡು ಹೋಪಲೂ ಎಡಿಯ. ಕತೆ ಎಲ್ಲಿ ಕೊಡಿಎತ್ತುಗು ಹೇಳಿ ಗೊಂತೇ ಆವುತ್ತಿಲ್ಲೆ- ರೈಸಿದ್ದು. ಮುಂದೆಂತಕ್ಕು ಹೇಳುವ ಉಮೇದಿಲಿ ಕೂಪಲೆ ನಿಂಬಲೆ ಎಡಿತ್ತಿಲ್ಲೆ- ಬೇಗ ಬರಲಿ ಮುಂದಾಣ ಕಂತು.

  14. ಕತೆ ಮುಂದುವರಿಯಲಿ, ಆರಂಭ ಪಷ್ಟಾತು.
    ಪರಮೇಶ್ವರಿ ಅತ್ತೆ ಎಂಕಣ್ಣಂಗೆ ತಂಗೆ ಹೇಳಿ ಗೊಂತಾತು. ಆದರೆ, ಹೇಂಗೆ ಹೇದು ಇನ್ನೂ ಅರ್ಥ ಆಯಿದಿಲ್ಲೆ, ಟೋಟಲ್ ಕನ್ಫ್ಯೂಶನ್.

  15. ಹು,ಕತೆ ಸುರು ಮಾಡಿದ ಶ್ಯಾಮಣ್ಣ ಸರೀ ತಲೆಬೆಶಿ ಅಪ್ಪಲ್ಲಿ ತ೦ದು ನಿಲ್ಸಿಕ್ಕಿದವು !
    ಆ ಸ೦ಬ೦ಧ೦ಗಳ ಓದಿ ಮ೦ಡೆ ಗಿರ್ ಗಿರ್ ತಿರ್ಗಿತ್ತು .. ನೆಕ್ಕರೆ ಮಾವಿನ ತೋಟ,ಅಲ್ಲಿ ಮಕ್ಕಳ ಆಟ – ಕಣ್ಣಿ೦ಗೆ ಕಟ್ಟಿತ್ತು.ಲಾಯ್ಕ ಆಯಿದು ಶ್ಯಾಮಣ್ಣ.ಇನ್ನು ಕಾವ ಕೆಲಸ !

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×