ನಮ್ಮ ಚರಿತ್ರೆಲಿ ನಾವು ಕಂಡ ಹಾಂಗೆ ಬಹಳ ಪ್ರಾಕಿಂದಲೂ ಆಯಾ ರಾಜನ ಕಾಲಕ್ಕೆ, ಆಯಾ ಸಮಯಕ್ಕೆ ತಕ್ಕ ಹಾಂಗೆ ರಾಜಮುದ್ರೆಗೊ ಜಾರಿಲಿ ಇತ್ತು.
ಅದು ಆಯಾ ಸಮಯದ, ಆಯಾ ಕಾಲಘಟ್ಟದ ಬಗ್ಗೆ ಸೂಕ್ಷ್ಮವಾಗಿ ವಿವರ ಕೊಟ್ಟುಗೊಂಡು ಇತ್ತು. ರಾಜಮುದ್ರೆ ಅಥವಾ ರಾಜಟಂಕೆಲಿಪ್ಪ ಸಣ್ಣ ಚಿತ್ರಣಲ್ಲಿ ನವಗೆ ಅಂಬಗಾಣ ಸಮಾಜದ ಪೂರ್ಣ ಕಲ್ಪನೆ ಸಿಕ್ಕುತ್ತು.ನಮ್ಮ ಬೈಲುದೆ ಹಾಂಗೆ, ಈಗಾಣ ಸಮಾಜದ ಒಂದು ಪ್ರಾತಿನಿಧಿತ್ವ ಹೊಂದಿದ ಜಾಗೆ.
ಬೈಲು ಹುಟ್ಟಿ, ಚಿಗುರೊಡದು ಬೆಳೆತ್ತಾ ಇಪ್ಪ ಪ್ರತಿ ಕಾಲಘಟ್ಟಲ್ಲಿಯೂ ಕೂಡಾ ಬೈಲಿಂಗೆ ಒಂದು ಬೈಲಮುದ್ರೆ ಬೇಕು ಹೇಳಿ ಚಿಂತನೆ ಮಾಡಿಗೊಂಡೇ ಇತ್ತು.
ಆದರೆ ಅದು ಕಾರಣಾಂತರಗಳಿಂದ ಮುಂದೆ ಹೋಗಿ ಈಗ ಬೈಲಿನ ಪುಸ್ತಕಂಗ ಹೆರ ಬತ್ತಾ ಇಪ್ಪ ಸುಸಂದರ್ಭಲ್ಲಿ ಮೂರ್ತ ರೂಪ ಪಡಕ್ಕೊಂಡತ್ತು.
ನಮ್ಮ ಬೈಲಿನ ಧ್ಯೇಯೋದ್ದೇಶಂಗಳ, ಆಶಯಂಗಳ, ಚಿಂತನೆಗಳ ಎಲ್ಲವನ್ನೂ ಸಾಂಕೇತಿಕವಾಗಿ ತೋರ್ಸುವ ಒಂದು ವೆವಸ್ತೆ ಆಯೆಕ್ಕು ಹೇಳಿ ಹಲವು ರೀತಿಲಿ ಯೋಚನೆ ಮಾಡಿ, ಮನಸ್ಸಿಂದ ರೂಪುಗೊಂಡು ಚಿತ್ರಲ್ಲಿ ಪ್ರಕಟ ಆಗಿ ಬೈಲಿಂಗೆ ಒಂದು ಮುಖವಾಣಿ ಅಪ್ಪ ಹಾಂಗೆ ರೂಪುಗೊಂಡದು ಒಪ್ಪಣ್ಣನ ‘ಬೈಲಮುದ್ರೆ’
ಇನ್ನು ಮುಂದಂಗೆ ಇದುವೇ ನಮ್ಮ ಬೈಲಿನ ಪ್ರತಿರೂಪ.ಕಲ್ಪನೆಲಿ ಇದ್ದದರ ಚಿತ್ರ ರೂಪಕ್ಕೆ ಇಳುಸುದರ್ಲಿ ಶ್ರೀಅಕ್ಕನ ಕೊಡುಗೆ ಅಪಾರ. ಗುರುಗೊ ಈ ಮುದ್ರೆಯ “ಶ್ರೀ-ಮುದ್ರೆ” ಹೇಳಿಯೂ ಹೇಳಿದ್ದವು.
ಹಾಂಗಾಗಿ, ಬೈಲಮುದ್ರೆಯ ವಿವರವ ಬೈಲಿಂಗೆ ಅವ್ವೇ ವಿವರುಸುತ್ತವು.~
ಗುರಿಕ್ಕಾರ°
ಬೈಲಿಂಗೊಂದು “ಬೈಲಮುದ್ರೆ”:
ನಮ್ಮ ಬೈಲು ಹವ್ಯಕ ಭಾಶೆಗಾಗಿ ಇಪ್ಪ ಒಂದು ಜಾಗೆ.
ಹವ್ಯಕ ಭಾಶೆ ಅರಡಿವವ°, ಭಾಶೆಯ ಗೌರವಿಸುವವ° ಆರೇ ಆಗಿರಲಿ, ಲೋಕದ ಎಲ್ಲೇ ಇರಲಿ, ಯಾವ ಹೊತ್ತಿಂಗೇ ಆಗಲಿ ಬೈಲಿಂಗೆ ಬಂದು ಶುದ್ದಿಗಳ ಓದುಲಕ್ಕು-ಬರವಲಕ್ಕು, ಒಪ್ಪ ಬರವಲಕ್ಕು-ತೆಕ್ಕೊಂಬಲಕ್ಕು. ನಮ್ಮ ಆಶಯಂಗಳೂ ನಮ್ಮ ಮೂಲಕ್ಕೆ ಹೋಪ ಹಾಂಗೆ ಇದ್ದು. ಈಗಾಣ ಕಾಲಘಟ್ಟಲ್ಲಿ ಮರೆಯಾದ ನಮ್ಮತನವ ನೆಂಪು ಮಾಡಿಗೊಂಬ ಹಾಂಗೆ, ನಮ್ಮ ಮುಂದಾಣವಕ್ಕೆ ಒಂದು ಮಾರ್ಗದರ್ಶನಕ್ಕೂ ಅಪ್ಪ ಹಾಂಗೆ ಬೈಲು ರೂಪಗೊಂಡಿದು. ತಿಳುದ್ದದರ ಹೇಳ್ತ ವೆಗ್ತಿಗೆ ಪ್ರಾಯ ಆಗಿರೆಕ್ಕು ಹೇಳಿ ಏನಿಲ್ಲೆ, ‘ಜ್ಞಾನವೃದ್ಧ’ ಹೇಳಿ ಹೇಳ್ತ ಹಾಂಗೆ ನಮ್ಮ ಬೈಲಿಂಗೆ ಹೊಂದುತ್ತ ವಿಶಯ ಆರು ಹೇಳಿದರೂ ಆವುತ್ತು. ನಮ್ಮ ಬೈಲಿಂಗೆ ಎಲ್ಲೋರಿಂಗೂ ಸ್ವಾಗತ ಇದ್ದು ಹೇಳಿ ಅರಡಿಗನ್ನೆ?
ನಮ್ಮ ಬೈಲಿಲಿ ವಿಷಯಂಗ ಹಲವಿದ್ದು. ಅದರ ಎಲ್ಲವನ್ನೂ ಒಟ್ಟು ಸೇರ್ಸಿ, ಒಂದು ಮುದ್ರೆಯ ರೂಪ ಕೊಡ್ಲೆ ಸುಲಾಬ ಇಲ್ಲೆ. ಎಲ್ಲ ಚಿತ್ರಂಗಳೂ ಕೂಡಾ ಸಮುದ್ರಲ್ಲಿ ತೇಲುತ್ತಾ ಇಪ್ಪ ಹಿಮಗಡ್ಡೆಯ ಹಾಂಗೆ ಇಪ್ಪದು. ನವಗೆ ಹಿಮಗಡ್ಡೆಯ ತುದಿ ಮಾಂತ್ರ ಕಾಣುತ್ತಷ್ಟೇ,ನೀರಿನ ಅಡಿಲಿ ಇಪ್ಪ ಅದರ ಅಗಾಧತೆ, ವೈಶಾಲ್ಯತೆ ನವಗೆ ಕಾಣುತ್ತಿಲ್ಲೆ. ಬೈಲ ಮುದ್ರೆಲಿ ಇಪ್ಪದೂ ಮೇಲಂದ ಕಾಂಬಲೆ ಒಂದು ಚಿತ್ರ- ಅದರ ಒಳಾಣ ಮರ್ಮ ಅಗಾಧ! ನಮ್ಮ ಬೈಲಿನ ಎಲ್ಲಾ ಆಶಯಂಗಳ ಹೊತ್ತ ಚಿತ್ರವ ನಮ್ಮ ಮನಸ್ಸಿಲಿ ಇದ್ದ ಹಾಂಗೆ ರೂಪಿಸಿ ಕೊಟ್ಟದು ಮಂಚಿ ಕೊಳ್ನಾಡು ಶಾಲೆಯ ಡ್ರಾಯಿಂಗ್ ಮಾಷ್ಟ್ರ° ತಾರಾನಾಥ ಕೈರಂಗಳ. ನಮ್ಮ ಮನಸ್ಸಿನ ಭಾವನೆಯ ಗವುರವಿಸಿ ಚಿತ್ರ ಬರದು ಕೊಟ್ಟದಕ್ಕೆ ಅವಕ್ಕೆ ಬೈಲ ಕಡೆಂದ ಧನ್ಯವಾದಂಗಳ ಹೇಳುತ್ತು. ಯೋಚನೆಯ ವಿಸ್ತಾರವ ಅಳವಲೆ ಎಡಿಯ, ಆದರೂ ಅದಕ್ಕೊಂದು ಮಾರ್ಗ ಕೊಡ್ಲಕ್ಕು.ಹಾಂಗೆ ನಮ್ಮ ಬೈಲಮುದ್ರೆಯ ಸಣ್ಣರೂಪದ ವಿವರಣೆ ಇಲ್ಲಿದ್ದು.
ಶ್ರೀಗುರುಗಳ ಪೂರ್ಣ ಆಶೀರ್ವಾದಲ್ಲಿ ನೆಡೆತ್ತಾ ಇಪ್ಪ ಈ ಬೈಲಿಲಿ ಅವರ ಉಪಸ್ಥಿತಿಯ ಸದಾ ನೆನೆಸುಲೆ ಬೇಕಾಗಿ, ಉದಯ ಸೂರ್ಯನ ಬಣ್ಣಲ್ಲಿ, ಪೂರ್ಣವಾಗಿ ಬೆಳಗುತ್ತಾ, ಮೂಲಲ್ಲಿ ಇಪ್ಪದು ಕೇಸರಿಯ ವರ್ತುಲ. ಶ್ರೀಗುರುಗ ಕಾಲಕಾಲಕ್ಕೆ ಬೈಲಿಂಗೆ ಬಂದು ಎಲ್ಲೋರಿಂಗೂ ಒಪ್ಪ ಆಶೀರ್ವಾದ ಕೊಡ್ತವು. ಬೈಲಿನ ಬೆಳವಣಿಗೆಯ ನೋಡಿ ಸಂತೋಷ ಪಡ್ತವು. ಹರಸುತ್ತವು.
ಶ್ರೀಪೀಠದ ಶ್ರೀರಕ್ಷೆ ಬೈಲಿನ ಮೇಲೆ ಸದಾ ಇರಲಿ.. ಅಕ್ಷರ ಸೇವೆ ಮಾಡ್ತಾ ಇಪ್ಪ ಬೈಲಿನ ಒಪ್ಪಣ್ಣ, ಒಪ್ಪಕ್ಕಂದ್ರ ಸೇವೆ ಮಾತೃಸ್ವರೂಪಿಯಾದ ಶ್ರೀಗುರುಗಳ ಮೂಲಕ ಸರಸ್ವತೀ ದೇವಿಗೆ ಸಮರ್ಪಣೆ ಆಗಲಿ.ಅರಳಿಂದರಳಿದ ಜೀವನ :
ನಾವು ಉಸಿರಾಡುಲೆ ಗಾಳಿ ಬೇಕು, ಅದರಲ್ಲಿಯೂ ಗಾಳಿಲಿ ಆಮ್ಲಜನಕ ಬೇಕೇ ಬೇಕು. ಭೂಮಿ, ನಮ್ಮ ಎಲ್ಲಾ ಭಾರವನ್ನೂ ತಾಂಗಿ ಬೆಳೆಶುವ ಅಬ್ಬೆ ಆದರೆ ಭೂಮಿಯ ಮೇಲೆ ಇಪ್ಪ ಎಲ್ಲಾ ಹಸುರು ಗೆಡುಗೊ, ಮರಂಗೊ ನವಗೆ ಉಸಿರಾಟ ಕೊಡುವ ಕಿರಿಅಬ್ಬೆಗೊ.
ಎಲ್ಲಾ ಮರ ಗಿಡಂಗಳೂ ನಮ್ಮ ಹೃದಯಕ್ಕೆ ಚೇತನ ಕೊಡ್ತಾರೂ, ನವಗೆ ದಿನದ ಪ್ರತಿನಿಮಿಷವೂ, ಇಪತ್ತನಾಲ್ಕು ಗಂಟೆಯೂ, ಮುನ್ನೂರ ಅರುವತ್ತೈದು ದಿನವೂ ಪ್ರಾಣವಾಯು ಕೊಡುದು ಅಶ್ವತ್ಥವೃಕ್ಷ ಅಥವಾ ಅರಳೀಮರ. ನಮ್ಮ ಹೆರಿಯೋರು ಅಶ್ವತ್ಥವೃಕ್ಷಲ್ಲಿ ತ್ರಿಮೂರ್ತಿಗಳನ್ನೂ, ಸಕಲ ದೇವರುಗಳ ಇರುವಿಕೆಯನ್ನೂ ನಂಬಿಗೊಂಡು, ಈ ವೃಕ್ಷಕ್ಕೆ ಪವಿತ್ರವೃಕ್ಷ ಹೇಳ್ತ ಸ್ಥಾನವ ನಮ್ಮ ಜೀವನಲ್ಲಿ ಕೊಟ್ಟಿದವು.
ಒಪ್ಪಣ್ಣನ ಬೈಲಿಲಿಯುದೆ ಅಶ್ವತ್ಥ ಮರ ಎಲ್ಲಾ ಸಸ್ಯ ಸಂಪದದ ಪ್ರತಿನಿಧಿ. ಬೈಲಮುದ್ರೆಲಿ ಮರವೂ, ಎಲೆಗಳೂ ಹಸಿರು ಭಂಡಾರದ ಸಂಕೇತ.ಕಲಶ :
ನಮ್ಮ ಪ್ರಾಕಿಂದ ಬಂದ ಸಂಪ್ರದಾಯಂಗಳ, ಆಚಾರ ವಿಚಾರಂಗಳ ಪ್ರತಿಬಿಂಬಿಸುಲೆ ಕಲಶ ರೂಪ ಕೊಟ್ಟಿದು. ನಮ್ಮ ಎಲ್ಲಾ ಕಾರ್ಯಂಗಳಲ್ಲಿಯೂ ಕಲಶ ಪ್ರಧಾನ. ಗವುರವದ ಸಂಕೇತವಾಗಿಯೂ ಕಲಶ ಪೂರ್ಣಕುಂಭದ ರೂಪಲ್ಲಿ ನಾವು ಉಪಯೋಗ ಮಾಡ್ತು. ದೇವಸ್ಥಾನಂಗಳಲ್ಲಿ ತುತ್ತ ತುದಿಲಿ ಕಲಶ ಇದ್ದೇ ಇರ್ತು. ಕಲಶ ತೆಗವ ಕಾರ್ಯಂದ ದೇವಸ್ಥಾನದ ಜೀರ್ಣೋದ್ಧಾರ ಸುರು ಆಗಿ, ಕಲಶ ದೇವಸ್ಥಾನದ ಶಿಖರಲ್ಲಿ ಪುನಃ ಸ್ಥಾಪನೆ ಮಾಡುವಾಗ ದೇವಸ್ಥಾನವೂ ಚೈತನ್ಯ ಪಡಕೊಳ್ತು. ನಮ್ಮ ಪುಣ್ಯಕಾರ್ಯಂಗೋಕ್ಕೆ ಕಲಶ ರೂಪಲ್ಲಿ ದೇವರ ಆವಾಹನೆ ಮಾಡ್ತು. ದೋಷ ನಿವಾರಣೆಗೂ ಕಲಶ ಪೂಜೆ-ಸ್ನಾನ ಮಾಡ್ತು. ನಮ್ಮ ಸಕಲ ಪುಣ್ಯಕಾರ್ಯ ಕಲಶ ಮೂಲಕ ಅಪ್ಪ ಕಾರಣ ಒಪ್ಪಣ್ಣನ ಬೈಲಿಂಗೂ ಕಲಶವೂ ಒಂದು ಮುದ್ರೆ ಆತು.ಉಂಬೆ-ಪುಟ್ಟುಂಬೆ:
ಉಂಬೆ ನೆಮ್ಮದಿಲಿ ನಮ್ಮಲ್ಲಿ ಇದ್ದರೆ ನಾವು ನೆಮ್ಮದಿಲಿ ಅಶನ ಉಂಬಲಕ್ಕು. ಹೆತ್ತಬ್ಬೆಂದ ಮತ್ತೆ ಜೀವನಪೂರ್ತಿ ನಮ್ಮ ಜೀವನಕ್ಕೆ ಅಮೃತ ಕೊಟ್ಟು ನಮ್ಮ ಸಾಂಕುವ ನಮ್ಮ ಗೋಮಾತೆಗೆ ಒಪ್ಪಣ್ಣನ ಬೈಲಿಲಿ ತುಂಬಾ ಮಹತ್ವ ಇದ್ದು. ಮೋಳಮ್ಮನ ರೂಪಲ್ಲಿ ಶುದ್ದಿಗಳಲ್ಲಿ ಉಂಬೆಯ ವಿಷಯಂಗ ಬಂದು ಅದರ ಜೀವನ ತತ್ವವ, ಅದರ ಪ್ರೀತಿಯ, ಅದರ ನಿಸ್ವಾರ್ಥ ಸೇವೆಯ ನಾವು ನೋಡಿ ಗೋವಿಂಗೆ ಕೃತಜ್ಞರಾಗಿಪ್ಪ ಹಾಂಗೆ ಮಾಡುತ್ತು. ನಮ್ಮ ಊರಿಲಿ ದೇಶೀತಳಿ ಕಡಮ್ಮೆ ಆಗಿ, ವಿದೇಶೀತಳಿಯ ಹಾಲಿನ ಕುಡುದು ನಮ್ಮ ಮತ್ತೆ ನಮ್ಮ ಮಕ್ಕಳ ಆರೋಗ್ಯ ಹಾಳಾವುತ್ತಾ ಇದ್ದು. ನಮ್ಮ ದೇಶೀ ಗೋವಂಶವ ಒಳಿಶಿ ನಮ್ಮ ವಂಶವ, ನಮ್ಮ ಮುಂದಾಣ ಪೀಳಿಗೆಯ ರೋಗಮುಕ್ತ ಮಾಡೆಕ್ಕು. ದನು ಮಾಂತ್ರ ಅಲ್ಲದ್ದೆ ಹೋರಿಗಳ ಸಂತತಿ ನಾಶ ಮಾಡದ್ದೆ ಬೆಳೆಶಿ ನಮ್ಮ ಭೂಮಿಯ ಫಲವತ್ತು ಮಾಡಿ ಆ ಮೂಲಕ ಭೂಮಿ ಸಾವಯವ ಅಪ್ಪ ಹಾಂಗೆ ಮಾಡೆಕ್ಕು. ಭೂಮಿ ಗೋಮೂತ್ರ, ಗೋಮಯಲ್ಲಿ ಶುದ್ಧ ಆದರೆ ಮಾಂತ್ರ ನಾವು ಉಂಬ ಆಹಾರವೂ ಶುದ್ಧ ಅಕ್ಕು. ಶ್ರೀಗುರುಗಳ ಗೋಸಂತತಿಯ ಒಳಿಶುವಲ್ಲಿ ಒಪ್ಪಣ್ಣನ ಬೈಲುದೆ ತನ್ನ ಅಳಿಲಸೇವೆಯಂತಹ ಪ್ರಯತ್ನ ಮಾಡ್ತು.ನೀರೊರತೆ:
ನಮ್ಮ ಹೆರಿಯೋರು ನವಗೆ ಬಳುವಳಿಯಾಗಿ ಕೊಟ್ಟು ಹರಸಿದ್ದು – ನೀರಿನ ಒರತೆ. ಕಟ್ಟ, ಕೆರೆ, ಉಜಿರುಕಣಿಗಳ ಮಾಡಿ ಮಳೆ ಬಪ್ಪಗ ನೀರು ಆದಷ್ಟು ಭೂಮಿಲಿ ಇಂಗುವ ಹಾಂಗೆ ಮಾಡಿದವು. ಮದಲಾಣವ್ವು ಅಗತ್ಯಕ್ಕೆ ತಕ್ಕವೇ ಸಾಗುವಳಿ, ಕೃಷಿ ಮಾಡಿದವು. ಬೇಕಾದಷ್ಟೇ ನೀರು ಉಪಯೋಗ ಮಾಡಿದವು. ನಾವು ಹಾಂಗಲ್ಲ, ಜಾಗೆ ಇದ್ದಲ್ಲಿ ಎಲ್ಲಾ ಕೃಷಿ ಮಾಡ್ಲೆ ನೋಡಿತ್ತು, ಕಂಡಲ್ಲಿ ಎಲ್ಲಾ ಭೂಮಿ ಕೊರದತ್ತು ನೀರಿಂಗೆ! ಎಲ್ಲೋರೂ ತೆಗದ್ದದೆ ಆತು, ಇರುವಾರ ತುಂಬುಸುಲೆ ಮರದವು. ಪರಿಣಾಮ- ಭೂಮಿಯ ಅಂತರ್ಜಲ ಮಟ್ಟ ಕೆಳ ಹೋತು. ನಮ್ಮ ಕಾಲಕ್ಕೆ ಕೆಳ ಇಳುದ ಒರತೆಯ ನಾವು ಹನಿ ಹನಿ ಆದರೂ ಸೇರುಸುವ ಯೋಚನೆ ಮಾಡದ್ದರೆ ನಮ್ಮ ಮಕ್ಕಳ ಕಾಲಕ್ಕೆ ನೀರು ಇಲ್ಲದ್ದೆ ಆಗಿ ಭೂಮಿ ನೀರಿಲ್ಲದ್ದೆ ಪ್ರಳಯದ- ಲಯದ ಕಾಲ ಎದುರಿಸಿದ ಹಾಂಗೆ ಅಕ್ಕು. ಒಪ್ಪಣ್ಣನ ಬೈಲಿನ ಮೂಲಕ ನೀರಿನ ಉಳಿತಾಯವೂ, ಸಂಗ್ರಹವೂ ಮಾಡಿ ಈ ಸಂಪತ್ತಿನ ನಮ್ಮ ಮುಂದಾಣ ಸಂತತಿಗೆ ‘ಶಾಶ್ವತನಿಧಿ’ಯ ರೂಪಲ್ಲಿ ಮಡುಗೆಕ್ಕು ಹೇಳ್ತ ಯೋಚನೆಲಿ ಬೈಲಿನ ಮುದ್ರೆಲಿ ನೀರಿಂಗೂ ಒಂದು ಪ್ರಮುಖ ಸ್ಥಾನ ಮಾಡಿ ಕೊಟ್ಟತ್ತು. ನಮ್ಮ ನೀರಿನ ಬಳಕೆಲಿ ಉಳಿತಾಯ ಮಾಡಿದರೆ ನಮ್ಮ ಮಕ್ಕಳೇ ನಾವು ಒಳಿಶಿದ್ದದರ ಉಪಯೋಗಿಸಿ, ಒಳಿಶಿ ಬೆಳೆಶುಗು.ಜ್ಞಾನ ಭಂಡಾರ :
ಮುದ್ರಣ ಅಸ್ತಿತ್ವಕ್ಕೆ ಬರೆಕಾರೆ ಮದಲೇ ನಮ್ಮ ಹಿಂದಾಣ ಮಹಾಗುರುಗೋ ಹಲವು ಗ್ರಂಥಂಗಳ , ವೇದಾದಿ ಪುರಾಣಂಗಳ ಬರದು ನಮ್ಮ ಬದುಕ್ಕಿಂಗೆ ಒಂದು ಮಾರ್ಗದರ್ಶನ ಕೊಟ್ಟಿದವು. ಹಾಂಗಿಪ್ಪ ಭಂಡಾರಂಗ ನಮ್ಮ ಮನೆಗಳಲ್ಲಿ, ಸಮಾಜಲ್ಲಿ ಇಪ್ಪ ಜ್ಞಾನ ಸಾಗರಕ್ಕೆ ವ್ಯಾಸಪೀಠಲ್ಲಿಪ್ಪ ಪುಸ್ತಕ ಒಂದು ಮುದ್ರೆ ಆತು. ಬಾಯಿಂದ ಕೆಮಿಯ ಮೂಲಕ ನಮ್ಮ ಮದಲಾಣ ಹೆರಿಯೋರ ಪ್ರತಿಯೊಬ್ಬನ ದೇಹಲ್ಲಿ ಹರುದು ಪಾವನ ಆಗಿ ಎಷ್ಟು ಕಾಲ ಕಳುದರೂ ರಜವೋ ವೆತ್ಯಾಸ ಇಲ್ಲದ್ದೆ ಇಂದಿನವರೆಗೆ ಹರುದು ಬಂದ ಈ ಜ್ಞಾನ ಭಂಡಾರಂಗ ನಮ್ಮ ಸನಾತನತೆಗೆ, ನಮ್ಮ ಹೆರಿಯೋರ ಜ್ಞಾನ ಸಾಮರ್ಥ್ಯಕ್ಕೆ ಇಪ್ಪ ಒಂದು ನಿದರ್ಶನ . ಈಗಾಗಲೇ ಹಲವು ಗ್ರಂಥಂಗ ಕಾಲದ ರಭಸಲ್ಲಿ ಮರೆ ಆಯಿದು. ಆದರೂ ನಮ್ಮ ನಮ್ಮ ಮನೆಗಳಲ್ಲಿ ಇಪ್ಪ ಈ ಸಂಪತ್ತಿನ ಒಳಿಶಿ ನಮ್ಮ ಮುಂದಾಣೋರಿಂಗೆ ಸಮರ್ಪಿಸೆಕ್ಕಪ್ಪದು ನಮ್ಮ ಕರ್ತವ್ಯ. ನಮ್ಮ ತರವಾಡುಮನೆಗಳೂ ಕೂಡಾ ಜ್ಞಾನದ ಭಂಡಾರಕ್ಕೆ ಸೇರುತ್ತು. ಹಾಂಗಾಗಿ ನಮ್ಮ ಸಮಾಜದ ಈ ಆಸ್ತಿಯಾದ ತರವಾಡುಮನೆ, ಪುಸ್ತಕ ಸಂಪತ್ತು ಎಲ್ಲಾ ಮನೆಲಿಯೂ, ಮನಸ್ಸಿಲಿಯೂ ಸಂರಕ್ಷಿಸಲ್ಪದಲಿ, ಇದು ಒಪಣ್ಣನ ಬೈಲಿನ ಆಶಯ.ನೆರೆಕರೆ ಒಳಿಶಿ…
ನಮ್ಮ ಈಗಾಣ ವಿದ್ಯಾಭ್ಯಾಸ ಪದ್ಧತಿಂದಾಗಿ ಮಕ್ಕೋ ಎಲ್ಲಾ ತಂತ್ರಜ್ಞಾನ ಕಲ್ತು ಪೇಟೇಲಿ ಇರೆಕ್ಕಾಗಿ ಬಂದ ಸಂದರ್ಭಲ್ಲಿ ಊರಿನ ಕೃಷಿ ಜಾಗೆಯ ಅಬ್ಬೆ ಅಪ್ಪಂಗೆ ನೋಡಿಗೊಂಬಲೆ ಎಡಿಯದ್ದೆ, ಮಕ್ಕೋ ಆ ಜಾಗೆಯ ಬಗ್ಗೆ ಆಸಕ್ತಿ ವಹಿಸದ್ದೆ ಇಪ್ಪ ಕಾರಣ ನಮ್ಮ ಅನೇಕಾನೇಕ ಮನೆಗೋ, ಮನೆತನಂಗೋ ಕಾಣೆ ಆವುತ್ತಾ ಇದ್ದು. ನಮ್ಮ ಎಷ್ಟೋ ಹೆರಿಯರ ಬೆಗರಧಾರೆ ಹರುದ ನಮ್ಮ ಭೂಮಿ, ನಮ್ಮ ದೈವ ದೇವರುಗಳ ಅನುಗ್ರಹದ ಭೂಮಿ, ನಮ್ಮ ಪಿತೃಗೊ ಆಶೀರ್ವಾದ ಮಾಡ್ತ ಭೂಮಿ ಇಂದು ಬೇರೆಯೋರ ಪಾಲಾವುತ್ತಾ ಇದ್ದು. ಈಗಾಣ ಕಾಲದ ಎಲ್ಲಾ ಕಷ್ಟಂಗಳನ್ನೂ ಹೇಳಿ , ಅದನ್ನೇ ದೊಡ್ಡ ಕಷ್ಟ ಹೇಳಿ ಮಾಡಿ ಸಣ್ಣ ಮೊತ್ತಕ್ಕೆ ಬೆಲೆ ಕಟ್ಟುಲಾಗದ್ದ ಭೂಮಿಯ ನಾವು ಕಳಕ್ಕೊಳ್ತಾ ಇದ್ದು. ಭೂಮಿಯ ನಾವು ಕೈ ಬಿಟ್ಟರೆ ಮತ್ತೆ ನಮ್ಮ ಆರು ಕೈ ಹಿಡುದು ನೆಡೆಶುಗು? ಅದೂ ಅಲ್ಲದ್ದೆ, ನಮ್ಮ ಭೂಮಿಲಿ ರಬ್ಬರ್ ನ ಹಾಂಗಿಪ್ಪ ಬೆಳೆಗಳ ಬೆಳೆಶಿ ಪ್ರಕೃತಿ ನವಗೆ ಕೊಟ್ಟ ಸ್ವಾಭಾವಿಕ ಮದ್ದುಗಳ ನಾವು ನಮ್ಮ ಕೈಯ್ಯಾರೆ ನಾಶ ಮಾಡ್ತಾ ಇದ್ದು. ಹಳೆಯ ಕಾಲದ ಮದ್ದಿನ ಗೆಡುಗಳ ನೆನಪ್ಪು ಮಾಡ್ತ, ಅದರ ಪರಿಚಯ ಇಪ್ಪ ವನಸಾಕ್ಷರರು ನಮ್ಮಲ್ಲಿ ಕಡಮ್ಮೆ ಆಯಿದವು . ನಮ್ಮ ಹಿತ್ಲಿಲಿಯೇ ಇಪ್ಪ ಹಲವು ಗೆಡುಗಳ ನವಗೆ ಅರಡಿಯ. ಅದರ ಗುಣದೋಷಂಗ ಅರಡಿಯ. ಪ್ರಕೃತಿ ಕೊಟ್ಟದರ ನಾಶ ಮಾಡಿದರೆ ನಾಳೆ ನಮ್ಮ ಸಾಂಕುದು ಆರು?
ನಮ್ಮ ಬಹುಮೂಲ್ಯವಾದ ಭೂಮಿ, ಭೂಮಿಲಿ ಅದರಷ್ಟಕ್ಕೆ ಬೆಳವ ಅಮೃತಸಸ್ಯಂಗಳ, ಸಂಜೀವಿನಿಗಳ ಸಂತತಿ ಒಳುದು ಬೆಳೆಯಲಿ, ನಮ್ಮ ಮಕ್ಕೊಗೆ ಅವರ ನಂತರಾಣವಕ್ಕೆ ಅದು ಜೀವನ ಕೊಡಲಿ ಹೇಳ್ತ ಒಂದು ಕನಸು ಒಪಣ್ಣನ ಬೈಲಿಂದು. ಹಾಂಗೆ ದಾಸನದ ಗೆಡುವಿನ ರೂಪಲ್ಲಿ ಭೂಮಿಯೂ, ಭೂಮಿಯ ನೈಸರ್ಗಿಕ ಬೆಳೆಗಳೂ ಮುದ್ರೆಯಾಕಾರ ಪಡಕ್ಕೊಂಡವು.
ನಮ್ಮ ಜೀವನ ಚಕ್ರಲ್ಲಿ ನಾವು ಗಳುಸುದು ಮಾಂತ್ರ ಅಲ್ಲ, ನಮ್ಮ ಮುಂದಾಣೋರಿಂಗೆ ಒಳಿಶಿ ಹೋಯೆಕ್ಕು ಹೇಳ್ತದು ನಮ್ಮ ಹೆರಿಯೋರ ತತ್ತ್ವ.
ನಮ್ಮ ಜೀವನಕ್ಕೆ ಬೇಕಾದ್ದದರ ನಾವು ಗಳುಸಿ, ಕೆಲವು ಸಂಪಾಲುಸಿ, ನಮ್ಮ ಮತ್ತಾಣ ತಲೆಮಾರಿಂಗೆ ಒಳಿಶಿ ಎತ್ತುಸೆಕ್ಕು.
ನಮ್ಮ ಮುಕ್ತಿಯ ಮಾರ್ಗಲ್ಲಿ ಇದು ಕೂಡಾ ನವಗೆ ಒಂದು ಮಾರ್ಗ ಆಗಿರಲಿ..
ನಮ್ಮ ಹೆರಿಯೋರು ಆಯಾ ಕಾಲದ ಕಷ್ಟಂಗಳ ಮೆಟ್ಟಿ ನಿಂದು ಭೂಮಿಯ, ಭೂಮಿಲಿ ಇಪ್ಪ ಮರ ಗೆಡುಗಳ, ನೀರಿನ, ಗೋವಿನ ಎಲ್ಲಾ ಒಳಿಶಿ ಬೆಳೆಶಿದ ಹಾಂಗೆ ನಾವುದೇ ನಮ್ಮ ಸರ್ವ ಪ್ರಯತ್ನ ಮಾಡೆಕ್ಕು.
ಹನಿ ಹನಿ ಸೇರಿದರೆ ಸಾಗರವೂ ತುಂಬುಗು ಹೇಳ್ತವು ಅಜ್ಜಂದ್ರು. ಅವರ ಮಾರ್ಗಲ್ಲಿ ನಾವುದೇ ನೆಡದು ನಮ್ಮ ನಮ್ಮ ಜಾಗೆಯ ಪ್ರಕೃತಿಯ ಉಡಿ ತುಂಬುವ°..
ಎಲ್ಲಾ ಜಾಗೆಗ ಹಸುರಾದರೆ ಅಬ್ಬೆಮಣ್ಣು ನಮ್ಮ ರಕ್ಷಣೆ ಮಾಡಿ ನಮ್ಮ ಉಡಿ ತುಂಬುಗು..
ಒಪ್ಪಣ್ಣನ ಬೈಲು ನೆರೆಕರೆಯೋರು ತುಂಬಿ ಹಸುರಾದ ಹಾಂಗೆ ಎಲ್ಲಾ ಬೈಲುಗಳೂ ಹಸುರಾಗಲಿ..
ಸಮಾಜದ ಸಮಸ್ತ ಬಂಧುಗಳೂ ಜಲ, ವನ, ಗೋ ಸಂಪದ್ಭಾರಿತರಾಗಲಿ.
~*~*~
- ಬದುಕ್ಕಿನ ಬೆಲೆ ತಿಳಿಶಿದ ಕೊರೊನಾ! - April 4, 2020
- ನಮ್ಮ ಬೈಲದಾರಿಲಿ ಅವು ಮೂಲಕ್ಕೆತ್ತಿದವು!!!! - January 29, 2018
- ಸುಭಗಣ್ಣನ ತಂಪು ಪುರಾಣ ಮತ್ತೆ ಬೈಲಿನ ಮಾತುಕತೆಗೊ.. - June 2, 2016
ಬೈಲ ಮುದ್ರೆ ಅದರ ಕುರಿತಾದ ವಿಚಾರ ಚಿ೦ತನಗೊ ಅರ್ಥಗರ್ಭಿತ ಕ೦ದು ಮನಸ್ಸು ತು೦ಬಿತ್ತು ಶ್ರೀ .. ಧನ್ಯವಾದ೦ಗೊ
ಶ್ರೀ ಗುರುಗಳ ಕೈಯಾರೆ ಬಿಡುಗಡೆ ಆದ ಈ ಮುದ್ರೆ ಸಮಾಜದ ಎಲ್ಲೋರ ಮನಸಿಲಿ ಮುದ್ರೆ ಆಗಿ ಬೈಲಿನ ಬೆಳಗಲಿ
ಬೈಲ ತೇರು -ಮು೦ದೆ ಸಾಗಲಿ ಅನವರತ.
ಬೈಲ ತೇರಿಲಿ ಕೂದ ಒಪ್ಪಣ್ಣ ನೂ,ಗೀತಾಲ೦ಕಾರ ಮಾಡುತ್ತಿಪ್ಪ , ಚೆನ್ನೈ ಭಾವನು ಇಪ್ಪಗ,
ಬೈಲ ಸಾಗುವಳೀ ನಿರ೦ತರ.
ಶ್ರೇಯಸ್ಸಾಗಲಿ.
ನಮ್ಮ ಹಿರಿಯರಿಂಗೆ, ಪ್ರಕೃತಿಗೆ, ಗೋವಿಂಗೆ ಎಲ್ಲ ಕೃತಜ್ಞರಾಗಿರೆಕ್ಕಾದ್ದನ್ನೂ, ಮುಂದಾಣ ತಲೆಮಾರಿನ ಕುರಿತು ನಮ್ಮ ಜವಾಬ್ದಾರಿಯನ್ನೂ ತಿಳಿಶುವ ಮತ್ತೆ ನಮ್ಮ ಪರಂಪರೆಯ ಪ್ರತಿಬಿಂಬಿಸುವ ಒಪ್ಪಣ್ಣನ ‘ಬೈಲಮುದ್ರೆ’ಯ ಮೇಳೈಕೆಯೇ ಅದ್ಭುತವಾಗಿದ್ದು. ಮಾತ್ರ ಅಲ್ಲದ್ದೆ ಈ “ಶ್ರೀಮುದ್ರೆ”ಯ ತಿರುಳಿನ ಎಳೆ ಎಳೆಯಾಗಿ ಉಣಿಸಿದ “ಶ್ರೀ ಅಕ್ಕ ನ” ನಿರೂಪಣೆಯಂತೂ ಎಲ್ಲೋರನ್ನೂ ಜಾಗೃತಗೊಳಿಸುವಾಂಗಿದ್ದು.
ನಮ್ಮ ಬೈಲಿನ ಧ್ಯೇಯೋದ್ದೇಶಂಗಳ, ಆಶಯಂಗಳ, ಚಿಂತನೆಗಳ ಎಲ್ಲವನ್ನೂ ಸಾಂಕೇತಿಕವಾಗಿ ತೋರ್ಸುವ ಈ ಒಪ್ಪಣ್ಣನ ‘ಬೈಲಮುದ್ರೆ’ಯ ವಿನ್ಯಾಸ ಮಾಡಿದ ಎಲ್ಲೋರಿಂಗೂ ಅಭಿನಂದನೆಗೊ.
– ಕುಕ್ಕಿಲ ಜಯತ್ತೆ.
ಹರೇ ರಾಮ . ಗುರುದೇವತಾನುಗ್ರಹಂದ ಬೈಲು ಬೆಳೆಯಲಿ, ಶ್ರೇಯಸ್ಸಾಗಲಿ, ಜನಪ್ರಿಯವಾಗಲಿ.
ನಮ್ಮ ಧ್ಯೇಯೋದ್ದೇಶಗಳ ಈ ಬೈಲಮುದ್ರೆ ಸಮರ್ಪಕವಾಗಿ ತೋರ್ಸಿಕೊಡ್ತಾ ಇದ್ದು.
ಇದರ ವಿನ್ಯಾಸ ಮಾಡಿದವಕ್ಕೆ ಎನ್ನ ಧನ್ಯವಾದಂಗೊ.