- 2022 ನೇ ಸಾಲಿನ ಕೊಡಗಿನಗೌರಮ್ಮ ಪ್ರಶಸ್ತಿ - July 23, 2022
- ‘ಮುದುಡಿದ ತಾವರೆ ಅರಳಿತ್ತು’- 2021ರ ಕೊಡಗಿನಗೌರಮ್ಮ ಕಥಾಸ್ಪರ್ಧೆ – ತೃತೀಯ - September 18, 2021
- ಕಾಪಿ ಕುಡುದ ಜರ್ನಲಿಸ್ಟ್ – 2021ನೇ ಸಾಲಿನ ಕೊಡಗಿನಗೌರಮ್ಮ ಕಥಾಸ್ಪರ್ಧೆ – ದ್ವಿತೀಯ - September 1, 2021
ಮಕ್ಕಳಿಂದ ಅಬ್ಬೆ-ಅಪ್ಪನ ಪೂಜೆ ಮುಜುಂಗಾವು ವಿದ್ಯಾಪೀಠಲ್ಲಿ
ಪ್ರತಿ ವರ್ಷ ನವಂಬರ ೧೪ಕ್ಕೆ ಮಕ್ಕಳ ದಿನಾಚರಣೆ ನಮ್ಮ ದೇಶಲ್ಲಿ. ಅದು ನಮ್ಮ ದೇಶ ಸ್ವಾತಂತ್ರ್ಯ ಕಂಡ ಮೊದಲ ಪ್ರಧಾನಿಯ ಹುಟ್ಟುಹಬ್ಬ ನೆಂಪು ಮಾಡ್ಳಿಪ್ಪ ಹೇಳಿಕೆ ಸರಕಾರಂದ!.
ಆದರೆ ನಮ್ಮ ಮುಜುಂಗಾವು ಶ್ರೀಭಾರತೀ ವಿದ್ಯಾಪೀಠಕ್ಕೆ ನೆಂಪಾದ್ದು |ಜಗತಃ ಪಿತರೌ ವಂದೇ ಪಾರ್ವತೀ ಪರಮೇಶ್ವರೌ|. ನಮ್ಮ ಇಡೀ ಜಗತ್ತಿನ ಮಾತಾ ಪಿತರುಗೊ ಆದ ಪಾರ್ವತೀ ಪರಮೇಶ್ವರರ ಸ್ಮರಣೆ ಮಾಡೆಕ್ಕು. |ಮಾತೃದೇವೋ ಭವ| ಪಿತೃದೇವೋ ಭವ| ಹೇಳಿ, ಅಬ್ಬೆ-ಅಪ್ಪನ ಸ್ಮರಣೆ ಮಾಡೆಂಡೇ ಏವದೇ ಕಾರ್ಯಕ್ಕೆ ತೊಡಗಿಯೊಳೆಕ್ಕು. ಈ ಸೂಕ್ಷ್ಮ ಸಂಸ್ಕಾರವ ಮಕ್ಕೊಗೆ ಎಳೆ ಪ್ರಾಯಲ್ಲೇ ಮನದಟ್ಟು ಮಾಡ್ಳೆ ಹೇಳಿಕೊಡೆಕಾದ್ದು ನಮ್ಮ ಕರ್ತವ್ಯ. ಹಾಂಗೇ ಶ್ರೀ ಮಠದ ನಿರ್ದೇಶನಾನುಸಾರ ರೂಪುಗೊಂಡದು ಮಾತಾ-ಪಿತರ ಪೂಜೆ. ಮಕ್ಕಳ ದಿನಾಚರಣೆ ದಿನವೇ ಅದರ ಹಮ್ಮಿಗೊಂಡದು!.ನಮ್ಮ ಹಿಂದೂ ಸಂಸ್ಕೃತಿಲಿ ಅಬ್ಬೆ-ಅಪ್ಪಂಗೆ ಮಹತ್ವದ ಸ್ಥಾನ ಕೊಟ್ಟಿದೊವು. ಅಬ್ಬೆಯ ಭೂಮಿಗೂ ಅಪ್ಪನ ಆಕಾಶಕ್ಕೂ ಹೋಲ್ಸಿದ್ದೊವು ನಮ್ಮ ಪೂರ್ವಿಕರು!.
ಕಾರ್ಯಕ್ರಮ ಆಯೋಜಿಸಿದಾಂಗೆ ಉದಿಯಪ್ಪಗ ನಿತ್ಯದ ಪ್ರಾರ್ಥನೆ ಹೊತ್ತು ೯-೩೦ಗಂಟಗೆ ಮಕ್ಕಳ ಅಬ್ಬೆ-ಅಪ್ಪᵒ{ಕೆಲವು ಮಕ್ಕಳ ಅಬ್ಬೆ ಮಾತ್ರ}ಸಭಾಂಗಣಲ್ಲಿ ಸೇರಿದೊವು ಹೊಸಹುರುಪಿಲ್ಲಿ!.
ಪ್ರಾರ್ಥನಾ ಸಭಾಂಗಣಲ್ಲಿ ಸೇರಿದ ಎಲ್ಲಾ ಪೂಜನೀಯರನ್ನೂ ಉಚಿತಾಸನಲ್ಲಿ ಕೂರ್ಸಿ, ಅವರಿಂದ ಕೆಳ ಅವರವರ ಮಕ್ಕಳತ್ರೆ ಅಕ್ಷತೆ, ಹೂಗು, ಕುಂಕುಮ ಇಪ್ಪ ಹರಿವಾಣ ಕೊಟ್ಟು ಹಸೆ ಹಾಸಿ ಸಾಲಾಗಿ ಕೂರ್ಸಿಕ್ಕಿ ಕಾರ್ಯಕ್ರಮ ಶುಭಾರಂಭ.
ದೀಪ ಪ್ರಜ್ವಲನೆಃ- ಶಾಲೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಚಿತ್ರಾಸರಸ್ವತಿ ನಮ್ಮ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ಫೊಟೋಕ್ಕೆ,ಗಣಪತಿ ದೇವರಿಂಗೆ ಆರತಿ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ.
ಪ್ರಾರ್ಥನೆಃ- ಸಾಮೂಹಿಕವಾಗಿ ಗುರುವಂದನೆ,ಪ್ರಾರ್ಥನೆ ಆದ ಮತ್ತೆ;
ವಾಗಾರ್ಥಾವಿವಸಂಪೃಕ್ತೌ ವಾಗಾರ್ಥಪ್ರತಿಪತ್ತಯೇ|
ಜಗತಃಪಿತರೌ ವಂದೇ ಪಾರ್ವತೀಪರಮೇಶ್ವರೌ||
ಇಡೀ ಜಗತ್ತಿನ ಮಾತಾ-ಪಿತರರಾದ ಪಾರ್ವತೀ ಪರಮೇಶ್ವರರ ವಂದಿಸುವ ಶ್ಲೋಕ ಇಡೀ ಸಭಗೆ ಹೇಳಿಕೊಟ್ಟವು ಶಾಲೆಯ ಆಡಳಿತಾಧಿಕಾರಿ ಶ್ಯಾಂಭಟ್ ದರ್ಭೆಮಾರ್ಗ.
ಮುಂದೆ, ಎಲ್ಲಾ ಮಕ್ಕಳತ್ರೆ ಅವರವರ ಮಾತಾ-ಪಿತೃಗಳ ಮೋರಗೆ ಕುಂಕುಮ ಹಚ್ಚಿ ಕೈಲಿ ಹೂ ಅಕ್ಷತೆ ತೆಕ್ಕೊಂಡು ಅಬ್ಬೆ-ಅಪ್ಪನ ಪಾದಕ್ಕೆ; ಶೋಡಷೋಪಾಚಾರ ಪೂರ್ವಕ ಅರ್ಚನೆ ಮಾಡ್ಸಿದವು ಶಾಮಣ್ಣ.
ಈ ರೀತಿ ಮಾತಾ- ಪಿತೃ ಪೂಜೆ ಮಾಡ್ಸಿದ ಮತ್ತೆ ಮಕ್ಕಳಿಂದ
ಪ್ರತಿಜ್ಞಾ ವಿಧಿ ಸ್ವೀಕಾರಃ– “ನನ್ನನ್ನು ಈ ಭುವಿಗೆ ತಂದ ತಂದೆ-ತಾಯಿಯರನ್ನು ಸದಾ ಗೌರವದಿಂದ ಕಾಣುತ್ತೇನೆ.ಅವರ ಬದುಕಿನಲ್ಲಿ ಸದಾ ನೆಮ್ಮದಿ ನೆಲಸುವಂತೆ ನೋಡಿಕೊಳ್ಳುವುದು ನನ್ನ ಕರ್ತವ್ಯವೆಂದು ಪಾಲಿಸುತ್ತೇನೆ.ಸಂಸ್ಕಾರದ ಬೆಳಕಿನಲ್ಲಿ ಸಾಧನೆಯ ಹೆಜ್ಜೆಗಳನ್ನಿಡುತ್ತಾ ಹೆತ್ತವರ ಹೆಮ್ಮೆಗೆ ಕಾರಣವಾಗುತ್ತೇನೆ.ಅವರ ವೃದ್ಧಾಪ್ಯದಲ್ಲಿ ಅವರಿಗೆ ಆಸರೆಯಾಗುವುದು ನನ್ನ ಬದುಕಿನ ಭಾಗ್ಯವೆಂದು ಭಾವಿಸಿ ಸೇವೆ ಮಾಡುತ್ತೇನೆ”.
ಮಂಗಳಾರತಿಃ- ಶ್ರೀದೇವರಿಂಗೂ ಶ್ರೀಸಂಸ್ಥಾನದವರ ಫೊಟೋಕ್ಕೂ ಮಂಗಳಾರತಿ ಮಾಡಿದೊವು.
ಪ್ರವಚನಃ- ಮಾತಾ-ಪಿತರ ನೋಡೆಕ್ಕಾದ ಕರ್ತವ್ಯವ ಸಾರುವ ಧರ್ಮವ್ಯಾಧನ ಕತೆ ಹೇಳಿ ಮಕ್ಕೊಗೆ ಮನದಟ್ಟು ಮಾಡಿದೊವು ಸಂಸ್ಕೃತ ವಿದ್ವಾನ್ ಶ್ರೀಮಾನ್ ಡಾ|ಸದಾಶಿವಭಟ್ .
ವಂದಾರ್ಪಣೆಃ- ಕಾರ್ಯಕ್ರಮ ನಿರ್ವಹಣೆ ಹಾಂಗೂ ವಂದನಾರ್ಪಣೆ ಶ್ಯಾಂಭಟ್ ದರ್ಭೆಮಾರ್ಗ ನಿರ್ವಹಿಸಿದೊವು. ೧೮೦ಕ್ಕೂ ಮಿಕ್ಕಿ ಪೂಜನೀಯ ಮಾತಾ-ಪಿತರು ಆಗಮಿಸಿ ಕಾರ್ಯಕ್ರಮವ ಚಂದಗಾಣಿಸಿ ಕೊಟ್ಟೊವು.
ಕಾರ್ಯಕ್ರಮದ ಪಟಂಗೊ:-
——೦——-
ಶರ್ಮಭಾವಂಗೆ ಧನ್ಯವಾದಂಗೊ
ಮಕ್ಕೊಗೆ ಸಂಸ್ಕಾರ ಕೊಡುವಲ್ಲಿ ಮುಜುಂಗಾವು ವಿದ್ಯಾಪೀಠ ಅಗ್ರಸ್ಥಾನಲ್ಲಿದ್ದು. ಶಾಲಾ ಆಡಳಿತ ಮುಖ್ಯಸ್ಥರಿಂಗೂ, ಶಿಕ್ಷಕ ವರ್ಗದವರಿಂಗೂ, ಭಾಗವಹಿಸಿದ ಮಕ್ಕೊ ಮತ್ತೆ ಅವರ ಹೆತ್ತವರಿಂಗೂ, ಕಾರ್ಯಕ್ರಮ ಆಯೋಜಿಸಿದ ಎಲ್ಲೋರಿಂಗೂ ಧನ್ಯವಾದಂಗೊ
ಒಳ್ಳೆ ಸಂಸ್ಕಾರವ ಕೊಡುವ ಪ್ರಯತ್ನ.
ಧನ್ಯವಾದ ಗೋಪಾಲ. ಇತ್ತೀಚೆಗೆ ಬಯಲಿಲ್ಲಿ ನಿನ್ನ ಕಂಡಿದೇ ಇಲ್ಲೆ.
Olledayidu ,Vijaya
ಧನ್ಯವಾದ ಪಟ್ಟಾಜೆ ಶಿವರಾಮ ಣ್ಣ
ಓದಿ ಅಭಿಪ್ರಾಯ ಹೇಳಿದ ಶಾಮಣ್ಣಂಗೆ ಹಾಂಗೂ ಫೊಟೋ ವಗೇರೆ ನೆರೆಕರೆ ಪ್ರತಿಷ್ಠಾನಕ್ಕೆ ಹಾಕಿ ಸಹಾಯ ಮಾಡಿದ ಶರ್ಮಭಾವಂಗೆ ಮನದಾಳದ ಧನ್ಯವಾದಂಗೊ
” ಮಕ್ಕಳೇ ದೇವರು”ಹೇಳುವದು ನಮ್ಮ ನಂಬಿಕೆ ಮಾತ್ರವಲ್ಲ “ಮಕ್ಕಳ ಸಾಹಿತ್ಯ ಸಂಗಮ” ಹೇಳಿ ಹೆಸರಿಪ್ಪ ದೊಡ್ದ ಸಂಸ್ಥೆಯ ಧ್ಯೇಯ ವಾಕ್ಯ. ಹಾಂಗಿಪ್ಪ ಮುದ್ದು ಮಕ್ಕಳಿಂದಲೇ ಅಬ್ಬೆಅಪ್ಪಂಗೆ ಪೂಜೆ ಮಾಡ್ಸಿದ್ದದು ನೋಡಿ ಸಂತೋಷಾತು.ಇದು ನಮ್ಮ ಸಂಸ್ಕಾರವೂ ಅಪ್ಪು.ಇಲ್ಲಿ ಪೂಜೆ ಮಾಡ್ಸಿಯೊಂಬಲೆ ಬಪ್ಪಾಗ ಅಪ್ಪಂದ್ರೆಲ್ಲೋರೂ ವಸ್ತ್ರ(ಮುಂಡು ಅಥವಾ ವೇಷ್ಟಿ) ವನ್ನು ಸುತ್ತಿಂಡು ಬಂದಿದ್ದರೆ ಇನ್ನಷ್ಟು ಮಹತ್ವಪೂರ್ಣ ಆವುತ್ತಿತ್ತು ಹೇಳಿ ಎನ್ನ ಅಭಿಪ್ರಾಯ. ಸರಿಯೊ ತಪ್ಪೊ ಎನ ಗೊಂತಿಲ್ಲೆ. ಅಂತೂ ಉದ್ದೇಶ ಒಳ್ಳೆದು.ನಮಸ್ಕಾರ.
ವಿ.ಬಿ. ಭಾವಯ್ಯನ ಒಪ್ಪ ಅನಿಸಿಕೆ ನೂರಕ್ಕೆ ನೂರು ಸರಿ. ಆದರೆ ದೋಷಲ್ಲಿಯೂ ಗುಣ ಹೇಳ್ತಾಂಗೆ ಕಾಂಬದು;.. ಹೇಳಿದ್ದಕ್ಕೆ ಹೆಚ್ಚಿನ ಸಂಖ್ಯೆಲಿ ಬಂದವನ್ನೆ!. ಅದಲ್ಲದ್ದೆ… ಇಲ್ಲಿ ಇಪ್ಪದು ಹೆಚ್ಚಿನವೂ ಇತರರು. ಸಂಸ್ಕಾರ ಪಾಲುಸಿಗೊಳ್ತು ಹೇಳುವ ಮನಗಳಲ್ಲೇ ಪೂಜೆ, ಪುರಸ್ಕಾರಾದಿಗಳಿಗೆ ಪೇಂಟು ಹಾಕೆಂಡು ಕೂದು , ವಸ್ತ್ರ ಸೊಂಟಲ್ಲಿ ನಿಲ್ಲುತ್ತಿಲ್ಲೆ ಹೇಳ್ತವನ್ನೆ!!. ನಿಂಗಳ ಸಲಹೆಯ ತೆಕ್ಕೊಂಡು ಮುಂದಿನ ಸರ್ತಿಗೆ ಸೂಚನೆ ಕೊಡುವೊಂ.
ವರದಿ ಲಾಯಿಕಾಯಿದು. ಹೀಂಗಿಪ್ಪ ಕಾರ್ಯಕ್ರಮ mujumgavilli ಆದ್ದು ಕೇಳಿ/ಓದಿ ಸಂತೋಷ ಆತು. ಬಹುಶ ಹೀಂಗಿಪ್ಪ ಕಾರ್ಯಕ್ರಮ ಆನು ಸುರು ಕೇಳುದು. ವಿಜಯಕ್ಕಂಗೆ ತುಂಬಾ ಥ್ಯಾಂಕ್ಸ್.
ಸಂಸ್ಕಾರ-ಸಂಸ್ಕೃತಿ ಉಳಿಯೆಕ್ಕಾರೆ ಹೀಂಗಿಪ್ಪ ಕಾರ್ಯಕ್ರಮ ಬೇಕಲ್ಲದಾ ದೊಡ್ಡಮ್ಮ.. ಬರದ್ದದು ಲಾಯಿಕಾಯಿದು. ಓದುಸೆಂಡು ಹೋಪಾಂಗಿದ್ದು…