Oppanna.com

ರಾಮಾಯಣ ಸಾರ

ಬರದೋರು :   ವಿಜಯತ್ತೆ    on   22/09/2012    11 ಒಪ್ಪಂಗೊ

ಕೋಸಲದೇಶದ ದಶರಥರಾಜಂಗೆ
ಹಿರಿಮಗನಾಗಿ ಜನಿಸಿದ ರಾಮ
ಕೌಸಲ್ಯಾದೇವಿಯ ಹಿರಿಮೆಯ ಪುತ್ರಂಗೆ
ಕರಮುಗಿವೊ° ಭಕ್ತಿಲಿ ನಮಿಸುತ್ತ ನಾಮ॥೧॥

ದಶಾವತಾರದ ರಾಮಾವತಾರವೆ
ಧರಣಿಲಿ ಬಾಳಿದ ಪುರುಷೋತ್ತಮ
ಲೋಕದ ಜನರ ಕಷ್ಟ ಕರಗಿಸುವ
ಲಾಲಿತ್ಯವೆನಿಪ ಲೋಕಾಭಿರಾಮ॥೨॥

ಅಪ್ಪನ ಮಾತಿನ ಶಿರಸಾವಹಿಸಿ
ತೀರ್ಪಿತ್ತ ಕೈಕೆಯ ಹಠವ ಪೂರೈಸಿ
ಕೌಸಲ್ಯೆ ಸುಮಿತ್ರೆಯರ ಕಣ್ಣೀರೊರೆಸಿ
ಹೊರಟನೆ ಹದಿನಾಕು ವರ್ಷಕ್ಕೆ ವನವಾಸಿ॥೩॥

ರಾಮನ ಹೆಂಡತಿ ರಮಣಿ ಸೀತಾಮಣಿ
ಪತಿವ್ರತೆ ಸಾಲಿಲ್ಲಿ ಮಿಂಚುವ ಮಾನಿನಿ
ಸೋದರ ವಾತ್ಸಲ್ಯಕೆ ಭರತನೆ ಪ್ರಥಮ
ಅತ್ತಿಗೆಯು ಲಕ್ಷ್ಮಣಂಗೆ ಅಬ್ಬಗೆ ಸಮ॥೪॥

ಮಾಯಮೃಗಕೆ ಮನಸೋತ ಸೀತೆ
ಮಮ್ಮಲ ಮರುಗಿರು ಲಂಕೆಲಿ ಮತ್ತೆ
ರಾವಣನ ಹಿಡಿತಕ್ಕೆ ದಕ್ಕಿದ್ದಿಲ್ಲೆ ಮಾತೆ
ಅವನಿಲಿ ಅವತರಿಸಿದ ಪುನೀತೆ ಪ್ರಖ್ಯಾತೆ॥೫॥

ರಾಮ ರಾವಣರ ಯುದ್ಧದ ತತ್ವ
ಅಡಗಿಸಿದ ಅವತಾರಿ ಅಸುರೀ ಕೃತ್ಯ
ಮನುಜಂಗೆ ರಾಮ ಲಕ್ಷ್ಮಣರ ಉಪದೇಶ
ಮಾನಿನಿಯರಿಂಗೆಲ್ಲ ಸೀತೆಯೇ ಆದರ್ಶ॥೬॥

ರಾಮಾಯಣ ಮಹಾಭಾರತ ಪುರಾಣ ಜ್ಞಾನ
ಯುಗ ಯುಗ ಕಳುದರು ನವೀನ ಕಥನ
ಬಯಸಿದ್ದವಿಲ್ಲೆ ವ್ಯಾಸ, ವಾಲ್ಮೀಕಿ ಪ್ರಶಸ್ತಿ ಸನ್ಮಾನ
ಬಯಕೆ ನಿರೀಕ್ಷೆಲಿ ಇದ್ದದೇ ಲೋಕ ಕಲ್ಯಾಣ ॥೭॥

***

ಲೇಃ ವಿಜಯತ್ತೆ (ವಿಜಯಾಸುಬ್ರಹ್ಮಣ್ಯ,ಕುಂಬಳೆ)

 

 

 

11 thoughts on “ರಾಮಾಯಣ ಸಾರ

  1. ತುಂಬ ಲಾಯ್ಕಾಯಿದು ವಿಜಯತ್ತೆ. ಅಕೇರಿಯಾಣ ಪದ್ಯ ಮತ್ತೂ ಇಷ್ಟ ಆತು.

  2. ಬರೆ ಇಪ್ಪತ್ತೆಂಟು ಸಾಲಿಲಿ ಸಂಪೂರ್ಣ ರಾಮಾಯಣ ಸಾರವ ಹವ್ಯಕ ಭಾಷೆಲಿ ಬರವದು ದೊಡ್ಡ ಸಾಹಸವೆ ಸರಿ. ವಿಜಯತ್ತೆಯ ಸಾಧನೆಯ ಮೆಚ್ಚಿ ಬರವಲೆ ಇಪ್ಪತ್ತೆಂಟು ಸಾಲು ಸಾಕಾಗ. ಅಭಿನಂದನೆಯೊಟ್ಟಿಂಗೆ ಅಭಿವಾದನೆಗೊ ವಿಜಯತ್ತೆ.

  3. ಇಡೀ ರಾಮಾಯಣದ ಸಾರವ ಕೆಲವೇ ಸಾಲಿಲ್ಲಿ ಸಾರಿದ ವಿಜಯತ್ತೆಗೆ ವಂದನೆಗೊ.

  4. ರಾಮಾಯಣ ಸಾರ ಚೆಂದಕೆ ಮೂಡಿ ಬಯಿಂದು.
    [ರಾಮಾಯಣ ಮಹಾಭಾರತ ಪುರಾಣ ಜ್ಞಾನ। ಯುಗ ಯುಗ ಕಳುದರು ನವೀನ ಕಥನ। ಬಯಸಿದ್ದವಿಲ್ಲೆ ವ್ಯಾಸ, ವಾಲ್ಮೀಕಿ ಪ್ರಶಸ್ತಿ ಸನ್ಮಾನ।ಬಯಕೆ ನಿರೀಕ್ಷೆಲಿ ಇದ್ದದೇ ಲೋಕ ಕಲ್ಯಾಣ ॥]- ಕೊಶೀ ಆತು

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×