- ಬಲೀಂದ್ರಪೂಜೆ – (ಸರಳ ಸಂಕ್ಷಿಪ್ತ ವಿಧಾನ) - October 30, 2020
- ಗೋಪೂಜೆ – (ಸರಳ ಸಂಕ್ಷಿಪ್ತ ವಿಧಾನ) - October 30, 2020
- ತೊಳಶಿ ಪೂಜೆ – ಸರಳ ಸಂಕ್ಷಿಪ್ತ ವಿಧಾನ - October 30, 2020
ಬೈಲಿಲಿ ನಾವು ಈ ಮದಲೆ ಬಟ್ಟಮಾವ° ಹೇಳಿಕೊಟ್ಟ ಜನಿವಾರ ಕಟ್ಟುದು, ದರ್ಭೆ ಕಟ್ಟುದು ನೋಡಿದ್ದು.
ಹಾಂಗೆ ಕಚ್ಚೆ ಮುಂಡಾಸುದೆ ನಮ್ಮ ಒಂದು ಅತ್ಯಮೂಲ್ಯ ಸಂಪ್ರಾದಯಂಗಳಲ್ಲಿ ಒಂದು.
ಕಚ್ಚೆ ಕಟ್ಟುದೋ ಕಚ್ಚೆ ಸುತ್ತೊದೋ ಹೇದೂ ನೆಗೆಮಾಡ್ಳೆ ಇದ್ದು ಬೋಚಬಾವ° ಕೆಲವೊಂದರಿ. ಕಚ್ಚೆ ಸುರಿವದು, ಮುಂಡಾಸು ಬಿಗವದು ಹೇದು ನೆಗೆಗಾರ°!
ಕಚ್ಚೆ ಮುಂಡಾಸು ಚೆಂದಕ್ಕೆ ಆದರೆ ಸುತ್ತುದು, ಅಂತೆ ಸುರುಟಿ ತುರ್ಕಿಸಿರೆ ಕಟ್ಟುದು / ಬಿಗಿವದು ಹೇಳ್ತದಿದ್ದು ಕೆಪ್ಪಣ್ಣ°!
ಏನೇ ಆಗಲಿ, ನಮ್ಮ ಸಂಪ್ರದಾಯದ ಕಚ್ಚೆ ಮುಂಡಾಸು ಹೇಂಗೆ ಹೇಳ್ಸರ ಬಟ್ಟಮಾವ ವಿವರುಸಿ ನವಗೆ ತೋರಿಸಿದ್ದರ ಈ ಚಲಚ್ಚಿತ್ರಲ್ಲಿ ನಾವಿಲ್ಲಿ ನೋಡುವೊ°.
ಬೈಲಿಂಗೆ ಕಚ್ಚೆ ಮುಂಡಾಸಿನ ವಿವರ ತಿಳಿಶಿಕೊಡೆಕ್ಕಾತು ಹೇದಪ್ಪದ್ದೆ ಸಂತೋಷಂದಲೇ ಆತು ಅದಕ್ಕೆಂತಾಯೇಕು ಮಾಡಿಕೊಡುವೊ ಹೇದು ಕೂಡ್ಳೆ ಮುಂಡಾಸು ಭಾವನ ಕಡುಮನೆ ಬಾವನ ಬರುಸಿ ಹಳೆಮದಿಮ್ಮಾಯ° ಎರ್ಮರೆ ಭಾವನ ಕೂರುಸಿ ಕಚ್ಚೆ ಮುಂಡಾಸು ವೀಡಿಯೊ ಒದಗಿಸಿಕೊಟ್ಟ ಮೂಲಡ್ಕ ಭಾವಂಗೆ ಬೈಲ ಪರವಾಗಿ ಧನ್ಯವಾದಂಗೊ.
ಮದಿಮ್ಮಾಯನ ಮುಂಡಾಸು ಕಟ್ಳೆ ಸ್ವತಃ ಆನಿಪ್ಪಗ ಅಪ್ಪಂಗೆ ಮುಂಡಾಸು ಕಟ್ಟಿದ್ದೆಂತಕೇದು ಎರ್ಮರೆ ಭಾವನ ಮಗ° ಗೌಜಿ ಮಾಡುಗೋ ಹೇದು ಈಗ ನಮ್ಮದೊಂದು ಪಿಟ್ಕಾಯಣ ಇದರೆಡೆಲಿ.
ವೀಡಿಯೋ ಕೃಪೆ : ಮೂಲಡ್ಕ ಗೋಪಾಲಕೃಷ್ಣ ಭಾವ°, ಕಡುಮನೆ ರವಿ ಭಾವ°, ಮುಂಡಾಸು ರಾಮಚಂದ್ರ ಭಾವ°, ಎರ್ಮರೆ ಉದಯ ಭಾವ°.
ವೀಡಿಯೋ ಬೈಲಿಂಗೆ ತಪ್ಪಲೆ ಸಹಕರಿಸಿದ : ಸರಳಿ ಪ್ರಸಾದ ಭಾವ°, ಹೆಚ್.ಎಮ್. ಶಿವಶಂಕರ ಭಾವ°
ಇವಕ್ಕೆಲ್ಲೊರಿಂಗೂ ಧನ್ಯವಾದಂಗೊ
ಹರೇ ರಾಮ.
ಬಾರೀ ಲಾಯಕದ ವಿವರಣೆ. ಪ್ರಾಯಶ: ಈ ಮಾಹಿತಿ ಈ ರೀತಿ ಬೇರೆ ಎಲ್ಲಿಯೂ ಇಲ್ಲೆ
ಪ್ರಾತ್ಯಕ್ಷಿಕೆ ಬಹಳ ಲಾಯಕಾಯಿದು. ಉತ್ತಮ ನಿರೂಪಣೆ. ಉದಯಣ್ಣಂಗೆ ಹಾಕಿದ ಕಚ್ಚೆ ಮುಂಡಾಸುಗೊ ಭರ್ಜರಿಯಾಯಿದು.
ಈ ಕಿರುಚಿತ್ರ ಬೈಲಿನವಕ್ಕೆ ಒಳ್ಳೆ ಉಪಯೋಗಕ್ಕೆ ಸಿಕ್ಕುವುದರಲ್ಲಿ ಸಂಶಯ ಇಲ್ಲೆ.
ತುಂಬಾ ಲಾಯಿಕ ಪ್ರಾತ್ಯಕ್ಷಿಕತೆ ಮತ್ತೆ ಒಳ್ಳೆ ನಿರೂಪಣೆ. ಇದು ಇಂದಿನ ಅಗತ್ಯಕ್ಕೆ ಸರಿಯಾಗಿ ಇದ್ದು.
ಇದರಲ್ಲಿ ಭಾಗವಹಿಸಿದವಕ್ಕೆ, ನಿರೂಪಣೆ ಮಾಡಿದವಕ್ಕೆ ಧನ್ಯವಾದಂಗೋ
ಒಳ್ಳೆ ಶುದ್ದಿ ಎಷ್ಟೋ ಜೆನಕ್ಕೆ ಕಚ್ಚೆ ,ಮುಂಡಾಸು ಕಟ್ಟೆಕ್ಕಪ್ಪಗ ಸರಿ ಅರಡಿತ್ತಿಲ್ಲೇಳಿ ಪೇಚಾಡ್ತವು. ಈ ಮಾಹಿತಿಂದ ತುಂಬಾ ಜೆನಕ್ಕೆ ಉಪಕಾರ ಅಕ್ಕು.
ಮದಲಿಂಗೆ ಬಡಗಮೂಲೆ ಮಾವ° ಕೆಲವು ಕಚ್ಚೆಮುಂಡಾಸು ಶಿಬಿರಂಗಳ ನಡೆಶಿದ್ದವು, ಹಾಂಗೊಂದು ಪುಸ್ತಕ ಬಯಿಂದು ಹೇದು ಹೇಳ್ಸು ಕೇಟಿದೆ. ಕಂಡಿದಿಲ್ಲೆ. ಪುಸ್ತಕದ ಪ್ರತಿ ಎಲ್ಯಾರು ಲಭ್ಯ ಇದ್ದರೆ ಎನಗೊಂದು ಬೇಕಾತು ಕೊಂಡುಗೊಂಬಲೆ. ಬಾಲಣ್ಣನತ್ತರೆ ಇಕ್ಕೋ ಕೊಡ್ತಾಂಗಿಪ್ಪದು ಉಮ್ಮ
ಭಾವಾ… ಒಂದೇ ಒಂದು ಪ್ರತಿ ನಮ್ಮ ಹತ್ತರೆ ಇಪ್ಪದು. ಅದರ ಪಟ ತೆಗದು ಕಳುಸಲೆ ಎಡಿಗೋ ನೋಡ್ತೆ .
ಹರೇ ರಾಮ
ಆ ಪುಸ್ತಕವನ್ನೇ ಕೊಡಿ ಭಾವ., ನೋಡಿಕ್ಕಿ ವಾಪಾಸು ಕೊಡುವೆ ಹೇದರೆ ನಂಬಾಣಿಕೆ ಬಾರ ಆಯ್ಕು ಅಲ್ಲದ. ಅಲ್ಲ., ಅಂತೇ ಕೇಟದಪ್ಪ!! 😛
ಅಂದು ಕೆಲವು ವರುಶ ಹಿಂದೆ ತಲೆಂಗಳ ಮಾವ,ಬಡಗಮೂಲೆ ಮಾವ ಸೇರಿಗೊಂಡು “ಕಚ್ಚೆ – ಮುಂಡಾಸು “ಹೇಳ್ತ ಪುಸ್ತಕ ಬರದ್ದವು.ಅದಕ್ಕೆ ಒಂದು ತರಬೇತಿ ಶಿಬಿರವುದೇ ನೀರ್ಚಾಲು ಶಾಲೆಲಿ ಆಯಿದು.ಆ ಪುಸ್ತಕಕ್ಕೆ ಬಾಲಣ್ಣ ಚಿತ್ರ ಬರದ್ದದು .