Oppanna.com

ಶ್ರೀ ಸತ್ಯನಾರಾಯಣಪೂಜಾವ್ರತಕಥಾ – ತೃತೀಯೋಧ್ಯಾಯಃ

ಬರದೋರು :   ಚೆನ್ನೈ ಬಾವ°    on   12/01/2012    11 ಒಪ್ಪಂಗೊ

ಚೆನ್ನೈ ಬಾವ°

ಸತ್ಯನಾರಾಯಣ ವ್ರತ ಕಥೆಯ ಭಾವಾರ್ಥ, ಸರಳ ಹವ್ಯಕ ಭಾಶೆಲಿ..
ಕಳುದವಾರ – ದ್ವಿತೀಯೋಧ್ಯಾಯಃ

ಶ್ರೀಸತ್ಯನಾರಾಯಣಪೂಜಾವ್ರತಕಥಾ – ತೃತೀಯೋಧ್ಯಾಯಃ

ಕಥಾಶ್ಲೋಕ ಶ್ರವಣಕ್ಕೆ:
[audio:audio/SNP_KATHA_CHAPTER_03.mp3]
ಧ್ವನಿ ಕೃಪೆ : www.sangeethamusic.com

|| ಸೂತ ಉವಾಚ ||

ಪುನರಗ್ರೇ ಪ್ರವಕ್ಷ್ಯಾಮಿ ಶೃಣುಧ್ವಂ ಮುನಿಸತ್ತಮಾಃ ।
ಪುರಾಚೋಲ್ಕಾಮುಖೋ ನಾಮ ನೃಪಶ್ಚಾಸೀನ್ಮಹೀಪತಿಃ ॥೧॥
ಜಿತೆಂದ್ರಿಯಃ ಸತ್ಯವಾದೀ ಯಯೌ ದೇವಾಲಯಂ ಪ್ರತಿ ।
ದಿನೇ ದಿನೇ ಧನಂ ದತ್ವಾ ದ್ವಿಜಾನ್ ಸಂತೋಷಯನ್ ಸುಧೀಃ ॥೨॥

ಭಾರ್ಯಾ ತಸ್ಯ ಪ್ರಮುಗ್ಧಾ ಚ ಸರೋಜವದನಾ ಸತೀ ।
ಭದ್ರಶೀಲಾ ನದೀತೀರೇ ಸತ್ಯಸ್ಯ ವ್ರತಮಾಚರತ್ ॥೩॥
ಏತಸ್ಮಿನ್ನಂತರೇ ಕಾಲೇ ಸಾಧುರೇಕಃ ಸಮಾಗತಃ ।
ವಾಣಿಜ್ಯಾರ್ಥಂ ಬಹುಧನೈರನೇಕೈಃ ಪರಿಪೂರಿತಃ ॥೪॥

ನಾವಂ ಸಂಸ್ಥಾಪ್ಯ ತತ್ತೀರೇ ಜಗಾಮ ನೃಪತಿಂ ಪ್ರತಿ ।
ದೃಷ್ಟ್ವಾ ಸ ವ್ರತಿನಂ ಭೂಪಂ ಪಪ್ರಚ್ಛ ವಿನಯಾನ್ವಿತಃ ॥೫॥

|| ಸಾಧುರುವಾಚ ॥

ಕಿಮಿದಂ ಕುರುಷೇ ರಾಜನ್ ಭಕ್ತಿಯುಕ್ತೇನ ಚೇತಸಾ ।
ಪ್ರಕಾಶಂ ಕುರು ತತ್ಸರ್ವಂ ಶ್ರೋತುಮಿಚ್ಛಾಮಿ ಸಾಂಪ್ರತಂ ॥೬॥

|| ರಾಜೋವಾಚ ॥

ಪೂಜನಂ ಕ್ರಿಯತೇ ಸಾಧೋ ವಿಷ್ಣೋರತುಲತೇಜಸಃ ।
ವ್ರತಂ ಚ ಸ್ವಜನೈಃ ಸಾರ್ಧಂ ಪುತ್ರಾದ್ಯಾವಾಪ್ತಿಕಾಮ್ಯಯಾ ॥೭॥
ಭೂಪಸ್ಯ ವಚನಂ ಶ್ರುತ್ವಾ ಸಾಧುಃ ಪ್ರೋವಾಚ ಸಾದರಂ ।
ಸರ್ವಂ ಕಥಯ ಮೇ ರಾಜನ್ ಕರಿಷ್ಯೇsಹಂ ತವೋದಿತಂ ॥೮॥

ಮಮಾಪಿ ಸಂತತಿರ್ನಾಸ್ತಿ ಏತಸ್ಮಾಜ್ಜಾಯತೇ ಧ್ರುವಂ ।
ತತೋ ನಿವೃತ್ಯ ವಾಣಿಜ್ಯಾತ್ಸಾನಂದೋ ಗೃಹಮಾಗತಃ ॥೯॥
ಭಾರ್ಯಾಯೈ ಕಥಿತಂ ಸರ್ವಂ ವ್ರತಂ ಸತತಿದಾಯಕಂ ।
ತದಾ ವ್ರತಂ ಕರಿಷ್ಯಾಮಿ ಯದಾ ಮೇ ಸತತಿರ್ಭವೇತ್ ॥೧೦॥

ಇತಿ ಲೀಲಾವತೀಂ ಪ್ರಾಹ ಪತ್ನೀಂ ಸಾಧುಃ ಸ ಸತ್ತಮಃ ।
ಏಕಸ್ಮಿನ್ ದಿವಸೇ ತಸ್ಯ ಭಾರ್ಯಾಲೀಲಾವತೀ ಸತೀ ।।೧೧॥
ಭಕ್ತಿಯುಕ್ತಾನಂದಚಿತ್ತಾsಭವದ್ಧರ್ಮಪರಾಯಣಾ ।
ಗರ್ಭಿಣೀ ಸಾsಭವತ್ತಸ್ಯ ಭಾರ್ಯಾ ಸತ್ಯಪ್ರಸಾದತಃ ॥೧೨॥

ದಶಮೇ ಮಾಸಿ ತಸ್ಯಾಃ ಕನ್ಯಾರತ್ನಮಜಾಯತ ।
ದಿನೇ ದಿನೇ ಸಾ ವವೃಧೇ ಶುಕ್ಲಪಕ್ಷೇ ಯಥಾ ಶಶೀ ॥೧೩॥
ನಾಮ್ನಾ ಕಲಾವತೀ ಚೇತಿ ತನ್ನಾಮಕರಣಂ ಕೃತಂ ।
ತತೋ ಲೀಲಾವತೀ ಪ್ರಾಹ ಸ್ವಾಮಿನಂ ಮಧುರಂ ವಚಃ ॥೧೪॥
ನ ಕರೋಷಿ ಕಿಮರ್ಥಂ ವೈ ಪುರಾ ಸಂಕಲ್ಪಿತಂ ವ್ರತಂ ।

|| ಸಾಧುರುವಾಚ ॥

ವಿವಾಹಸಮಯೇ ತಸ್ಯಾಃ ಕರಿಷ್ಯಾಮಿ ವ್ರತಂ ಪ್ರಿಯೇ ॥ ೧೫॥
ಇತಿ ಭಾರ್ಯಾಂ ಸಮಾಶ್ವಾಸ್ಯ ಜಗಾಮ ನಗರಂ ಪ್ರತಿ ।
ತತಃ ಕಲಾವತೀ ಕನ್ಯಾ ವವೃಧೇ ಪಿತೃವೇಶ್ಮನಿ ॥೧೬॥
ದೃಷ್ಟ್ವಾ ಕನ್ಯಾಂ ತತಃ ಸಾಧುರ್ನಗರೇ ಸಖಿಭಿಃ ಸಹ ।
ಮಂತ್ರಯಿತ್ವಾ ದ್ರುತಂ ದೂತಂ ಪ್ರೇಷಯಾಮಾಸ ಧರ್ಮವಿತ್ ।।೧೭॥

ವಿವಾಹಾರ್ಥಂ ಚ ಕನ್ಯಾಯಾಃ ವರಂ ಶ್ರೇಷ್ಠಂ ವಿಚಾರಯ ।
ತೇನಾಜ್ಞಪ್ತಶ್ಚದೂತೋsಸೌ ಕಾಂಚನಂ ನಗರಂ ಯಯೌ ॥೧೮॥
ತಸ್ಮಾದೇಕಂ ವಣಿಕ್ಪುತ್ರಂ ಸಮಾದಾಯಾಗತೋ ಹಿ ಸಃ ।
ದೃಷ್ಟ್ವಾ ತು ಸುಂದರಂ ಬಾಲಂ ವಣಿಕ್ಪುತ್ರಂ ಗುಣಾನ್ವಿತಂ ॥೧೯॥

ಜ್ಞಾತಿಭಿರ್ಬಂಧುಭಿಸ್ಸಾರ್ಧಂ ಪರಿತುಷ್ಟೇನ ಚೇತಸಾ ।
ದತ್ತವಾನ್ ಸಾಧುಃ ಪುತ್ರಾಯ ಕನ್ಯಾಂ ವಿಧಿವಿಧಾನತಃ ॥೨೦॥
ತತೋsಭಾಗ್ಯವಶಾತ್ತೇನ ವಿಸ್ಮೃತಂ ವ್ರತಮುತ್ತಮಂ ।
ವಿವಾಹಸಮಯೇ ತಸ್ಯಾಸ್ತೇನ ರುಷ್ಟೋsಭವತ್ಪ್ರಭುಃ ॥೨೧॥

ತತಃ ಕಾಲೇನ ನಿಯತೋ ನಿಜಕರ್ಮವಿಶಾರದಃ ।
ವಾಣಿಜ್ಯಾರ್ಥಂ ಗತಃ ಶೀಘ್ರಂ ಜಾಮಾತೃಸಹಿತೋ ವಣಿಕ್ ॥೨೨॥
ರತ್ನಸಾರಪುರೇ ರಮ್ಯೇ ಸ್ಥಿತ್ವಾ ಸಿಂಧುಸಮೀಪತಃ ।
ವಾಣಿಜ್ಯಮಕರೋತ್ ಸಾಧುಃ ಜಾಮಾತ್ರಾ ಶ್ರೀಮತಾ ಸಹ ॥೨೩॥

ತೌ ಗತೌ ನಗರೇ ರಮ್ಯೇ ಚಂದ್ರಕೇತೋರ್ನೃಪಸ್ಯ ಚ ।
ಏತಸ್ಮಿನ್ನೇವ ಕಾಲೇ ತು ಸತ್ಯನಾರಾಯಣಃ ಪ್ರಭುಃ ॥೨೪॥
ಭ್ರಷ್ಠಪ್ರತಿಜ್ಞಮಾಲೋಕ್ಯ ಶಾಪಂ ತಸ್ಮೈ ಪ್ರದತ್ತವಾನ್ ।
ದಾರುಣಂ ಕಠಿಣಂ ಚಾಸ್ಯ ಮಹದುಃಖಂ ಭವಿಷ್ಯತಿ ॥೨೫॥

ಏಕಸ್ಮಿನ್ ದಿವಸೇ ರಾಜ್ಞೋ ಧನಮಾದಾಯ ತಸ್ಕರಃ ।
ತತ್ರೈವ ಚಾಗತಶ್ಚೋರೋ ವಣಿಜೌ ಯತ್ರ ಸಂಸ್ಥಿತೌ ॥೨೬॥
ತತ್ಪಶ್ಚಾತ್ ಧಾವಕಾನ್ ದೂತಾನ್ ದೃಷ್ಟ್ವಾ ಭೀತೇನ ಚೇತಸಾ |
ಧನಂ ಸಂಸ್ಥಾಪ್ಯ ತತ್ರೈವ ಸ ತು ಶೀಘ್ರಮಲಕ್ಷಿತಃ ॥೨೭॥

ತತೋ ದೂತಾಃ ಸಮಾಯಾತಾಃ ಯತ್ರಾಸ್ತೇ ಸಜ್ಜನೋವಣಿಕ್ ।
ದೃಷ್ಟ್ವಾ ನೃಪಧನಂ ತತ್ರ ಬದ್ದ್ವಾ ದೂತೈರ್ವಣಿಕ್ಷುತೌ ॥೨೮॥
ಹರ್ಷೇಣ ಧಾವಮಾನಾಶ್ಚ ಊಚುರ್ನೃಪಸಮೀಪತಃ ।
ತಸ್ಕರೌ ದ್ವೌ ಸಮಾನೀತೌ ವಿಲೋಕ್ಯಾಜ್ಞಾಪಯ ಪ್ರಭೋ ॥೨೯॥

ರಾಜ್ಞಾಜ್ಞಪ್ತಾಸ್ತತಃ ಶೀಘ್ರಂ ದೃಢಂ ಬದ್ದ್ವಾತು ತಾವುಭೌ ।
ಸ್ಥಾಪಿತೌ ದ್ವೌ ಮಹಾದುರ್ಗೇ ಕಾರಾಗಾರೇs ವಿಚಾರತಃ ॥೩೦॥
ಮಾಯಯಾ ಸತ್ಯದೇವಸ್ಯ ನ ಶ್ರುತಂ ಕೈಸ್ತಯೋರ್ವಚಃ ।
ಅತಸ್ತಯೋರ್ಧನಂ ರಾಜ್ಞಾ ಗೃಹೀತಂ ಚಂದ್ರಕೇತುನಾ ॥೩೧॥

ತಚ್ಛಾಪಾಚ್ಛಗೃಹೇ ತಸ್ಯ ಭಾರ್ಯಾ ಚೈವಾತಿದುಃಖಿತಾ ।
ಚೋರೇಣಾಪಹೃತಂ ಸರ್ವಂ ಗೃಹೇ ಯಚ್ಚ ಸ್ಥಿತಂ ಧನಂ ॥೩೨॥
ಆಧಿವ್ಯಾಧಿಸಮಾಯುಕ್ತಾ ಕ್ಷುತ್ಪಿಪಾಸಾತಿದುಃಖಿತಾ ।
ಅನ್ನಚಿಂತಾಪರಾ ಭೂತ್ವಾ ಬಭ್ರಾಮ ಚ ಗೃಹೇ ಗೃಹೇ ॥೩೩॥

ಕಲಾವತೀ ತು ಕನ್ಯಾಪಿ ಬಭ್ರಾಮ ಪ್ರತಿವಾಸರಂ ।
ಏಕಸ್ಮಿನ್ ದಿವಸೇ ಜಾತಾ ಕ್ಷುಧಾರ್ತಾದ್ವಿಜಮಂದಿರಂ ॥೩೪॥
ಗತ್ವಾಪಶ್ಯದ್ವ್ರತಂ ತತ್ರ ಸತ್ಯನಾರಾಯಣಸ್ಯ ಚ ।
ಉಪವಿಷ್ಯ ಕಥಾಂ ಶ್ರುತ್ವಾ ವರಂ ಪ್ರಾರ್ಥಿತವತ್ಯಪಿ ॥೩೫।।

ಪ್ರಸಾದಭಕ್ಷಣಂ ಕೃತ್ವಾ ಯಯೌ ರಾತ್ರೌ ಗೃಹಂ ಪ್ರತಿ।
ಮಾತಾ ಕಲಾವತೀಂ ಕನ್ಯಾ ಪೃಚ್ಛಯಾಮಾಸ ಪ್ರೇಮತಃ ।।೩೬॥
ಪುತ್ರಿ ರಾತ್ರೌ ಸ್ಥಿತಾ ಕುತ್ರ ಕಿಂತೇ ಮನಸಿ ವರ್ತತೇ ।
ಕನ್ಯಾ ಕಲಾವತೀ ಪ್ರಾಹ ಮಾತರಂ ಪ್ರತಿ ಸತ್ವರಂ ।।೩೭॥

ದ್ವಿಜಾಲಯೇ ವ್ರತಂ ಮಾತರ್ದೃಷ್ಟಂ ವಾಂಛಿತಸಿದ್ಧಿದಂ ।
ತಚ್ಛೃತ್ವಾ ಕನ್ಯಕಾವಾಕ್ಯಂ ವ್ರತಂಕರ್ತುಂ ಸಮುದ್ಯತಾ ॥೩೮॥
ಸಾ ಮುದಾ ತು ವಣಿಗ್ಭಾರ್ಯಾ ಸತ್ಯನಾರಾಯಣಸ್ಯ ಚ ।
ವ್ರತಂ ಚಕ್ರೇಸೈವ ಸಾಧ್ವೀ ಬಂಧುಭಿಃ ಸ್ವಜನೈಃ ಸಹ ॥೩೯॥

ಭರ್ತೃಜಾಮಾತರೌ ಕ್ಷಿಪ್ರಮಾಚ್ಛೇತಾಂ ಸ್ವಮಾಶ್ರಮಂ ।
ಅಪರಾಧಂ ಚ ಮೇ ಭರ್ತುರ್ಜಾಮಾತುಃ ಕ್ಷಂತುಮರ್ಹಸಿ ॥೪೦॥
ಇತಿ ದಿವ್ಯಂ ವರಂ ವವ್ರೇ ಸತ್ಯದೇವಂ ಪುನಃ ಪುನಃ ।
ವ್ರತೇನಾನೇನ ತುಷ್ಟೋಸೌ ಸತ್ಯನಾರಾಯಣಃ ಪ್ರಭುಃ ॥೪೧॥

ದರ್ಶಯಾಮಾಸ ಸ್ವಪ್ನಂ ಹಿ ಚಂದ್ರಕೇತುಂ ನೃಪೋತ್ತಮಂ ।
ಬಂಧಿನೌ ಮೋಚಯ ಪ್ರಾತರ್ವಣಿಜೌ ನೃಪಸತ್ತಮ ॥೪೨॥
ದೇಯಂ ಧನಂ ಚ ತಸ್ಸರ್ವಂ ಗೃಹೀತಂ ಯತ್ತ್ವಯಾಧುನಾ ।
ನೋಚೇತ್ವಾಂ ನಾಶಯಿಷ್ಯಾಮಿ ಸರಾಜ್ಯಧನಪುತ್ರಕಂ ॥೪೩॥

ಏವಮಾಭಾಷ್ಯ ರಾಜಾನಂ ಧ್ಯಾನಗಮ್ಯೋ ಭವತ್ಪ್ರಭುಃ ।
ತತಃ ಪ್ರಭಾತಸಮಯೇ ರಾಜಾ ಚ ಸ್ವಜನೈಃ ಸಹ ॥೪೪॥
ಉಪವಿಶ್ಯ ಸಭಾಮಧ್ಯೇ ಪ್ರಾಹ ಸ್ವಪ್ನಂ ಜನಂ ಪ್ರತಿ ।
ಬದ್ಧೌ ಮಹಾಜನೌ ಶೀಘ್ರಂ ಮೋಚಯಧ್ವಂ ವಣಿಕ್ಸುತೌ ॥೪೫॥

ಇತಿ ರಾಜ್ಞೋ ವಚಃ ಶ್ರುತ್ವಾ ಮೋಚಯಿತ್ವಾ ಮಹಾಜನೌ ।
ಸಮಾನೀಯ ನೃಪಾಸ್ಯಾಗ್ರೇ ಪ್ರಾಹುಸ್ತೇ ವಿನಯಾನ್ವಿತಾಃ ॥೪೬॥
ಆನೀತೌ ದ್ವೌವಣಿಕ್ಪುತ್ರೌಮುಕ್ತೌ ನಿಗಡ ಬಂಧನಾತ್ ।
ತತೋ ಮಹಾಜನೌ ನತ್ವಾ ಚಂದ್ರಕೇತುಂ ನೃಪೋತ್ತಮಂ ॥೪೭॥

ಸ್ಮರಂತೌ ಪೂರ್ವವೃತ್ತಾಂತಂ ನೋಚತುರ್ಭಯವಿಹ್ವಲೌ ।
ರಾಜಾ ವಣಿಕ್ಷುತೌ ವೀಕ್ಷ್ಯ ವಚಃ ಪ್ರೋವಾಚ ಸಾದರಂ ॥೪೮॥
ದೈವಾತ್ಪ್ರಾಪ್ತಂ ಮಹದ್ದುಃಖಮಿದಾನೀಂ ನಾಸ್ತಿ ವೈ ಭಯಂ ।
ತದಾ ನಿಗಡಸಂತ್ಯಾಗಂ ಕ್ಷೌರಕರ್ಮಾದ್ಯಕಾರಯತ್ ।।೪೯॥

ವಸ್ತ್ರಾಲಂಕಾರಕಂ ದತ್ವಾಪರಿತೋಷ್ಯ ನೃಪಶ್ಚ ತೌ ।
ಪುರಸ್ಕೃತ್ಯ ವಣಿಕ್ಪುತ್ರೌ ವಚಸಾ ತೋಷಯದ್ಭ್ರಶಂ॥ ೫೦॥
ಪುರಾ ಹೃತಂ ತು ಯದ್ದ್ರವ್ಯಂ ದ್ವಿಗುಣೀಕೃತ್ಯ ದತ್ತವಾನ್ ।
ಪ್ರೋವಾಚ ತೌ ತತೋ ರಾಜಾ ಗಚ್ಛ ಸಾಧೋ ನಿಜಾಶ್ರಮಂ ।
ರಾಜಾನಾಂ ಪ್ರಣಿಪತ್ಯಾಹ ಗಂತವ್ಯಂ ತ್ವತ್ಪ್ರಸಾದತಃ ॥ ೫೧॥

|| ಇತಿ ಶ್ರೀ ಸ್ಕಂದಪುರಾಣೇ ರೇವಾಖಂಡೇ ಸತ್ಯನಾರಾಯಣವ್ರತಕಥಾಯಾಂ ತೃತೀಯೋಧ್ಯಾಯಃ ॥

ಭಾವಾರ್ಥ:

ಸೂತಪುರಾಣಿಕ ಕತೆಯ ಮುಂದುವರಿಸಿದ°.
ಶೌನಕಾದಿ ಮುನಿಗಳೇ, ಇನ್ನು ಮುಂದಾಣ ಕತೆಯ ಕೇಳಿ- “ಪುರಾಚೋಲ್ಕಾಮುಖೋ ನಾಮ ನೃಪಶ್ಚಾಸೀನ್ಮಹೀಪತಿಃ …”- ಮದಲಿಂಗೆ ಜಿತೇಂದ್ರಿಯನೂ ಸತ್ಯವಾದಿಯೂ ಆದ ಉಲ್ಕಾಮುಖ ಎಂಬ ಹೆಸರಿನ ಮಹಾರಾಜ ಒಬ್ಬ° ಇತ್ತಿದ್ದ. ಅವ° ಪ್ರತಿದಿನವೂ ದೇವಾಲಯಕ್ಕೆ ಹೋಗಿ ಅಲ್ಲಿ ಭಕ್ತಿಂದ ದೇವರ ಆರಾಧಿಸಿಗೊಂಡು, ಬ್ರಾಹ್ಮಣೋತ್ತಮರಿಂಗೆ ದಾನದಕ್ಷಿಣೆಗಳ ಕೊಟ್ಟು ಸಂತೋಷಪಡಿಸಿಗೊಂಡಿತ್ತಿದ್ದ°. ಅವಂಗೆ ಸುಶೀಲೆಯೂ, ಮುಗ್ಧೆಯೂ, ಸುಂದರಿಯೂ ಆಗಿದ್ದ ಹೆಂಡತಿ ಇತ್ತಿದ್ದು. ಒಂದಿನ ಅದು ಭದ್ರಶೀಲಾ ನದೀ ದಂಡೆಲಿ ಸತ್ಯನಾರಾಯಣ ಪೂಜೆ ಮಾಡಿಗೊಂಡಿಪ್ಪಗ ಅಲ್ಲಿಗೆ ಒಬ್ಬ° ವ್ಯಾಪಾರಿ ಅನೇಕ ಧನಧಾನ್ಯ ತುಂಬಿದ ಹಡಗಿಲ್ಲಿ ಬಂದ°. ನದೀ ತೀರಲ್ಲಿ ಹಡಗು ಲಂಗರು ಹಾಕಿ ಪೂಜೆ ನಡಕ್ಕೊಂಡಿದ್ದಲ್ಯಂಗೆ ಬಂದು ಅತೀ ವಿನಯಪೂರ್ವಕ ಕೇಳಿದ°- “ಮಹಾಪ್ರಭೋ, ನಿಂಗೊ ಮಾಡಿಗೊಂಡಿಪ್ಪ ಈ ಪೂಜೆ ಯಾವುದು? ಇದರ ವಿಶೇಷ ಎಂತ್ಸರ ಇತ್ಯಾದಿ ತಿಳಿವ ಹಂಬಲ ಇದ್ದು. ದಯವಿಟ್ಟು ಹೇಳುವಿರೋ” ಹೇಳಿ ಬಿನ್ನವಿಸಿಗೊಂಡ°.  ಅದಕ್ಕೆ ಮಹಾರಾಜ ಹೇಳುತ್ತ°- ಪೂಜನಂ ಕ್ರಿಯತೇ ಸಾಧೋ ವಿಷ್ಣೋರತುಲತೇಜಸಃ...”- ಅಯ್ಯಾ ವ್ಯಾಪಾರಿಯೇ, ಅಪ್ರತಿಮತೇಜಪೂರ್ಣನಾದ ಭಗವಾನ್ ಮಹಾವಿಷ್ಣುವ ಉದ್ದೇಶಿಸಿ ಸಂತಾನಧನಧಾನ್ಯಾದಿ ಇಷ್ಟಾರ್ಥಸಿದ್ಧಿಗಾಗಿ ಸತ್ಯನಾರಾಯಣ ವ್ರತ ಹೇಳ್ವ ವಿಶಿಷ್ಟ ಪೂಜೆ ಒಂದರ ಎಂಗ ಮಾಡುತ್ತಿದ್ದೆಯೊ°

ಮಾಸ್ಟ್ರುಮಾವನಲ್ಲಿ ಎಸ್. ಎನ್. ಪಿ.

ಮಹಾರಾಜನ ಮಾತಿನ ಕೇಳಿ ವ್ಯಾಪಾರಿ, “ರಾಜೇಂದ್ರ, ಈ ವ್ರತವ ಆಚರುಸುವ ವಿಧಿವಿಧಾನಂಗಳ ಎನಗೂ ಹೇಳು. ಸಂತಾನಭಾಗ್ಯ ಇಲ್ಲದ್ದ ಎನಗೆ ಈ ವ್ರತಾಚರಣೆಯ ಮೂಲಕ ಸಂತತಿ ಪಡೆಯೆಕ್ಕು ಹೇಳಿ ಬಯಕೆ ಇದ್ದು” ಹೇಳಿ ಹೇಳಿದ°. ರಾಜನಿಂದ ಸತ್ಯನಾರಾಯಣ ಪೂಜೆಯ ಎಲ್ಲಾ ಕ್ರಮ ತಿಳ್ಕೊಂಡು ಆ ವ್ಯಾಪಾರಿ ತನ್ನ ವ್ಯಾಪಾರ ವಹಿವಾಟು ಮುಗುಸು ಮನಗೆ ಹಿಂತುರಿಗಿದ°. ತನ್ನ ಹೆಂಡತಿ ಲೀಲಾವತಿಯತ್ರೆ ಸತ್ಯನಾರಾಯಣ ವ್ರತದ ಮಹಾತ್ಮೆ, ಪ್ರಭಾವವ ವಿವರಿಸಿ “ನಾವು ಈ ವ್ರತವ ಮಾಡಿ ಸಂತಾನ ಭಾಗ್ಯ ಪಡವೋ°” ಹೇಳಿ ಹೇಳಿದ.   ಅಂತೆಯೇ, ‘ತನಗೆ ಸಂತಾನಪ್ರಾಪ್ತಿಯಾದರೆ ಶ್ರೀ ಸತ್ಯನಾರಾಯಣ ಪೂಜೆ ಮಾಡುಸುತ್ತೆ’ ಹೇಳಿ ಹರಕ್ಕೆ ಹೇಳಿಗೊಂಡ°. ಏಕಸ್ಮಿನ್ ದಿವಸೇ ತಸ್ಯ ಭಾರ್ಯಾಲೀಲಾವತೀ ಸತೀ….ಮುಂದೆ ಕಾಲಾಂತರಲ್ಲಿ ಅವನ ಹೆಂಡತಿ ಲೀಲಾವತಿ ಗರ್ಭಿಣಿಯಾಗಿ ಹೆಣ್ಣು ಮಗುವಿಂಗೆ ಜನ್ಮಕೊಟ್ಟತ್ತು. ಆ ಮಗುವಿಂಗೆ ‘ಕಲಾವತೀ’ ಹೇಳಿ  ಹೆಸರು ಮಡುಗಿದವು. ಅತೀ ರೂಪವತಿಯಾದ ಕಲಾವತಿ ಶುಕ್ಲಪಕ್ಷದ ಚಂದ್ರನ ಹಾಂಗೆ ಕಲಾಪೂರ್ಣವಾಗಿ ಬೆಳದತ್ತು. ವ್ಯಾಪಾರಿಯ ಹೆಂಡತಿ ಲೀಲಾವತಿ ತನ್ನ ಗಂಡನತ್ರೆ ಹೇಳಿತ್ತು – “ಮದಲೇ ಹರಕ್ಕೆ ಹೇಳಿದ ಸತ್ಯನಾರಾಯಣ ಪೂಜೆ ಇನ್ನೂ ಏಕೆ ಮಾಡಿದ್ದಿಲ್ಲ್ಲೆ?”.

ಈ ಮಾತಿಂಗೆ ವ್ಯಾಪಾರಿ – ವಿವಾಹಸಮಯೇ ತಸ್ಯಾಃ ಕರಿಷ್ಯಾಮಿ ವ್ರತಂ ಪ್ರಿಯೇ…”, “ಅದಕ್ಕೆಂತಾಯೇಕು, ಮಾಡುತ್ತಿಲ್ಲೇದು ಆರು ಹೇಳಿದ್ದವು. ಮತ್ತೆ ಮಾಡುವೋ., ಈ ಕೂಸಿನ ಮದುವೆ ಸಮಯಲ್ಲಿ ಅತೀ ವೈಭವಂದ ಸತ್ಯನಾರಾಯಣ ಪೂಜೆ ಮಾಡುವೋ°” ಹೇಳಿ ಹೆಂಡತಿಯ ಸಮಾಧಾನ ಮಾಡಿ ತನ್ನ ವ್ಯಾಪರಲ್ಲಿ ಮಗ್ನನಾಗಿ ವ್ಯಾಪಾರಕ್ಕೆ ಪಟ್ಟಣಕ್ಕೆ ಹೋದ°, ದಿನಕಳುದಾಂಗೆ ಕೂಸು ಕಲಾವತಿ ಬೆಳದು ಪ್ರಾಯಪ್ರಬುದ್ಧೆ ಆತು. ಮದುವೆಪ್ರಾಯಕ್ಕೆ ಬಂದು ನಿಂದ ಕೂಸಿನ ನೋಡಿ ತನ್ನ ಮಿತ್ರರೊಂದಿಂಗೆ ಸಮಾಲೋಚಿಸಿ ದೂತನೊಬ್ಬನ ಕರೆಸಿ “ತನ್ನ ಮಗಳ ಮದುವೆ ಅಪ್ಪಲೆ ಯೋಗ್ಯ ಮಾಣಿಯ ಹುಡ್ಕಿ ನೋಡಿ ವಿಚಾರಿಸಿ ಕರಕ್ಕೊಂಡು ಬಾ” ಹೇಳಿ ಆಜ್ಞೆ ಮಾಡಿದ°. ದೂತ° ವರಾನ್ವೇಷಣೆ ಮಾಡಿಗೊಂಡು ಅಲ್ಲಿಲ್ಲಿ ಹುಡ್ಕಿಯೊಂಡು ಕಾಂಚನ ಪಟ್ಟಣಕ್ಕೆ ಎತ್ತಿತ್ತು. ಆ ಕಾಂಚನ ಪಟ್ಟಲ್ಲಿ ವಾಸಿಸುತ್ತಿಪ್ಪ ಒಬ್ಬ ಸ್ಫುರದ್ರೂಪಿ ವೈಶ್ಯ ಮಾಣಿಯ ಕಂಡು ಸಂತೋಷಗೊಂಡು ವ್ಯಾಪಾರಿ ಹತ್ರೆ ಕರಕ್ಕೊಂಡು ಬಂದವು. ಮಾಣಿಯ ನೋಡಿ ಆನಂದಗೊಂಡ ವ್ಯಾಪಾರಿ, ತನ್ನ ಬಂಧುಬಾಂಧವರ ಬರಮಾಡಿ ಅತ್ಯಂತ ವಿಜೃಂಭಣೆಲಿ ಮದುವೆಯನ್ನೂ ನೆರವೇರಿಸಿತ್ತು. ಆದರೆ ದುರಾದೃಷ್ಟ, ಈ ಸಮಯಲ್ಲಿಯೂ ಸತ್ಯನಾರಾಯಣ ಪೂಜೆ ಮಾಡ್ಳೆ ನಿರ್ಲಕ್ಷ್ಯಲ್ಲಿ ಮರ್ತು ಬಿಟ್ಟ. ಆ ಬಗ್ಗೆ ಯಾವ ಗೊಡವೆಯೂ ಇಲ್ಲದ್ದೆ ಅಳಿಯನ ಕೂಡಿಗೊಂಡು ಪಟ್ಟಣಕ್ಕೆ ವ್ಯಾಪಾರಕ್ಕೆ ತೆರಳಿತ್ತು. ರತ್ನಸಾರ ಎಂಬ ಪಟ್ಟಣವ ಸೇರಿ ಅಲ್ಲಿ ಸಮುದ್ರ ತೀರಲ್ಲಿ ಹಡಗು ಲಂಗರು ಹಾಕಿ ವ್ಯಾಪಾರ ಮಗ್ನರಾಗಿತ್ತವು. ದೇವರಿಂಗೆ ಅವನ ಈ ವರ್ತನೆಂದ ಕೋಪ ಬಂತು. ಶ್ರೀ ಸತ್ಯನಾರಾಯಣ ಸ್ವಾಮಿಯು “ಇವಂಗೆ ದಾರುಣ ಕಷ್ಟ ಒದಗಲಿ” ಹೇಳಿ ಶಾಪ ಕೊಟ್ಟ°.

ಹೀಂಗಿಪ್ಪಗ, ಒಂದಿನ, ಈ ವ್ಯಾಪಾರಿಗೊ ಆ ರಾಜ್ಯದ ಚಂದ್ರಕೇತು ಮಹಾರಾಜನ ರಾಜಧಾನಿಯ ಬೀದೀಲಿ ಹೋಗಿಯೊಂಡಿತ್ತಿದ್ದವು. ಅದೇ ಹೊತ್ತಿಂಗೆ ಸರಿಯಾಗಿ ಅರಮನೆಂದ ಆಭರಣಗಳ ಕದ್ದು ಅದೇ ಮಾರ್ಗಲ್ಲಿ ಓಡಿಯೊಂಡು ಹೋವ್ತ ಕಳ್ಳನ ಅಟ್ಟಿಗೊಂಡು ಬಂದವು. ಹಿಂದೆ ಅಟ್ಟಿಸಿಗೊಂಡು ಬಪ್ಪ ರಾಜಭಟರ ಕಂಡ ಕಳ್ಳಂಗೊ ಹೆದರಿ ಈ ವ್ಯಾಪಾರಿಗಳ ಕಾಲಬುಡಲ್ಲಿ ಇಡ್ಕಿಕ್ಕಿ ಓಡಿದವು. ಅಟ್ಟಿಸಿಗೊಂಡು ಬಂದ ರಾಜಭಟರು ಈ ವ್ಯಾಪಾರಿಗಳ ಹತ್ತರಯೇ ಆಭರಣಗಂಟು ಕಂಡು ಇವ್ವೇ ಕಳ್ಳಂಗೊ ಇವಿಬ್ರ ಹಿಡುದು ಕಟ್ಟಿ ಕರ್ಕೊಂಡು ಹೋಗಿ ರಾಜನ ಮುಂದೆ ನಿಲ್ಲಿಸಿದವು.
ರಾಜನಾದರೋ, ಹಿಂದೆಮುಂದೆ ವಿಚಾರ್ಸದ್ದೇ ಇವ್ವೇ ಕಳ್ಳಂಗೊ ಹೇಳಿ ತೀರ್ಮಾನಿಸಿ, ಕೈಕಾಲುಗೊಕ್ಕೆ ಸಂಕೊಲೆ ತೊಡುಸಿ ಕಾರಾಗೃಹಕ್ಕೆ ತಳ್ಳಿದ°. ಸತ್ಯನಾರಾಯಣ ದೇವರ ಶಾಪದ ಪ್ರಭಾವಕ್ಕೆ ಒಳಗಾಗಿ ಇವರ ಮಾತ ಆರುದೇ ಕೇಳ್ಳೆ ತಯಾರಿಲ್ಲೆ. ಇವರ ಹತ್ರೆ ಇದ್ದ ಅವರ ಸಂಪತ್ತುಗಳನ್ನೂ ರಾಜ° ತನ್ನ ಸ್ವಾಧೀನಪಡಿಸಿಗೊಂಡ°.

ಸತ್ಯನಾರಾಯಣ ದೇವರ ಶಾಪಂದ ಇತ್ತ ಊರಿಲ್ಲಿದ್ದ ಆ ವರ್ತಕನ ಹೆಂಡತಿ ಮಗಳೂ ಕಷ್ಟಗಳ ಸರಣಿಲಿ ಸಿಲುಕಿಯೊಂಡವು. ವ್ಯಾಪಾರಕ್ಕೆ ಹೋಗಿ ಬೇಗ ಬತ್ತೆ ಹೇಳಿಕ್ಕಿ ಹೋದ ತನ್ನ ಗಂಡ, ಅಳಿಯ ಇನ್ನೂ ಬಾರದ್ದರಿಂದ ಚಿಂತಾಕ್ರಾಂತರಾದವು.
ಮನೇಲಿದ್ದ ಐಶ್ವರ್ಯ ಪೂರ್ತಿ ಕಳ್ಳಂಗೊ ಸೂರೆಮಾಡಿ ಹೋದವು. ಉಂಬಲೆ ತಿಂಬಲೆ ಕುಡಿವಲೆ ಮನೇಲಿ ಗತಿ ಇಲ್ಲದ್ದೆ, ಹಸಿವು ಬಾಯಾರಿಕೆಂದ ತೊಳಲಿ, ರೋಗ ರುಜಿನಂಗಳಿಂದ ಬಳಲಿ, ತುತ್ತಿಂಗೆ ಮನೆಮನೆ ಭಿಕ್ಷೆ ಬೇಡಿ ಕಾಲಕಳಿಯೇಕ್ಕಾದ ಪರಸ್ಥಿತಿ ಉಂಟಾತು.
ಒಂದಿನ, ಮಗಳು ಕಲಾವತಿ, ಹೀಂಗೆ ಭಿಕ್ಷೆ ಬೇಡಿಗೊಂಡು ಒಬ್ಬ ಬ್ರಾಹ್ಮಣನ ಮನೆ ಬಾಗಿಲಿಲಿ ಬಂದು ನಿಂದಪ್ಪಗ ಆ ಬ್ರಾಹ್ಮಣನ ಮನೇಲಿ ಸತ್ಯನಾರಾಯಣ ಪೂಜೆ ನಡಕ್ಕೊಂಡಿತ್ತಿದ್ದು. ಕಲಾವತಿ ಅಲ್ಲೇ ನಿಂದು ಪೂಜೆಯ ಶ್ರದ್ಧಾಭಕ್ತಿಂದ ನೋಡಿ ಕತೆ ಕೇಳಿ ಪ್ರಸಾದ ಸ್ವೀಕರಿಸಿ ರಾತ್ರಿ ಬಹು ತಡವಾಗಿ ಮನಗೆ ತಲಪಿತ್ತು. ಅಲ್ಲಿ, ಅಮ್ಮ ಲೀಲಾವತಿ ಇರುಳು ಅಷ್ಟು ಹೊತ್ತಾಗಿಯೂ ಮಗಳು ಬಾರದ್ದಿಪ್ಪದ್ದು ಕಂಡು ಗಾಬರಿ ಆತು. ತಡವಾಗಿ ಬಂದ ಮಗಳ, ಲೀಲಾವತಿ ಕೇಳಿತ್ತುಪುತ್ರಿ ರಾತ್ರೌ ಸ್ಥಿತಾ ಕುತ್ರ ಕಿಂತೇ ಮನಸಿ ವರ್ತತೇ.. ಮಗಳೇ ಇರುಳು ಹೀಂಗೆ ನೀ ಎಲ್ಲಿ ಹೋದೆ, ಎಂತ ಆತು ಏನು ಚಿಂತೆ? ಇತ್ಯಾದಿ. ಅದಕ್ಕೆ ಮಗಳು ಕಲಾವತಿ, ತಾನು ಕಂಡ ಸತ್ಯನಾರಾಯಣ ವ್ರತ ಪೂಜೆಯ ವಿವರ ಹೇಳಿತ್ತು. ತಚ್ಛೃತ್ವಾ ಕನ್ಯಕಾವಾಕ್ಯಂ ವ್ರತಂಕರ್ತುಂ ಸಮುದ್ಯತಾ… ಇದರ ಕೇಳಿದ ಅಬ್ಬೆ- ಲೀಲಾವತಿ, ತಾನೂ ಈ ಪೂಜೆಯ ಮಾಡುತ್ತೆ ಹೇಳಿ ಸಂಕಲ್ಪಿಸಿ ತನ್ನ ಬಂಧುಬಾಂಧವರ ಬರಮಾಡಿ ತನ್ನಿಂದ ಸಾಧ್ಯವಪ್ಪ ಉತ್ತಮ ರೀತಿಲಿ ಶ್ರೀ ಸತ್ಯನಾರಾಯಣ ವ್ರತ ಪೂಜೆಯ ನೆರೆವೇರಿಸಿ, ಅಪರಾಧಂ ಚ ಮೇ ಭರ್ತುರ್ಜಾಮಾತುಃ ಕ್ಷಂತುಮರ್ಹಸಿ.. ತನ್ನ ಗಂಡ ಅಳಿಯ ಮಾಡಿದ ಅಪರಾಧವವೆಲ್ಲವ ಕ್ಷಮಿಸಿ ಅವಿಬ್ರೂ ಮನಗೆ ವಾಪಸು ಬಪ್ಪ ಹಾಂಗೆ ಮಾಡೆಕು ಹೇಳಿ ಪುನಃ ಪುನಃ ದೇವರತ್ರೆ ಪ್ರಾರ್ಥಿಸಿಗೊಂಡತ್ತು.

ವ್ಯಾಪಾರಿಯ ಹೆಂಡತಿ ಆಚರಿಸಿದ ಈ ವ್ರತಂದ ಸಂತುಷ್ಟನಾದ ಸತ್ಯನಾರಾಯಣ ಸ್ವಾಮಿಯು ಇರುಳು ಚಂದ್ರಕೇತು ಮಹಾರಾಜನ ಸ್ವಪ್ನಲ್ಲಿ ಕಾಣಿಸಿಗೊಂಡು “ಎಲೈ ರಾಜನೇ, ವಿಚಾರಣೆ ಇಲ್ಲದ್ದೆ ಕಳ್ಳಂಗೊ ಹೇಳಿ ಭಾವಿಸಿ ಯಾವ  ಇಬ್ರು ವರ್ತಕಂಗಳ ಕಾರಾಗೃಹಲ್ಲಿ ಬಂಧಿಸಿದ್ದೆಯೊ ಅವರ ಕೂಡಲೇ ಬಿಟ್ಟುಬಿಡು. ಅವರಿಂದ ಸ್ವಾಧೀನಪಡಿಸಿಗೊಂಡ ಅವರ ಸಂಪತ್ತುಗಳ ಅವಕ್ಕೇ ಹಿಂತಿರುಗಿ ಕೊಡು., ಇಲ್ಲದ್ರೆ, ದೇಶ, ಕೋಶ, ಸಂತಾನ ಸಮೇತ ನಿನ್ನ ನಾಶಮಾಡುತ್ತೆ’’ ಹೇಳಿ ಎಚ್ಚರಿಸಿ ಅಂತರ್ಧಾನ ಆದ°.

ಮರುದಿನ ಉದಿಯಪ್ಪಗಳೇ ರಾಜ° ಆಸ್ಥಾನಕ್ಕೆ ಬಂದು ಎಲ್ಲೋರ ಮುಂದೆ ತನ್ನ ಸ್ವಪ್ನ ವೃತ್ತಾಂತವ ಹೇಳಿ, ‘‘ಕಾರಾಗೃಹಲ್ಲಿ ಬಂಧಿಸಿ ಮಡಿಗಿದ ಇಬ್ರು ವ್ಯಾಪಾರಿಗಳ ಕೂಡ್ಳೆ ಬಿಡುಗಡೆ ಮಾಡಿ ಇಲ್ಲಿಗೆ ಕರಕ್ಕೊಂಡು ಬನ್ನಿ’’ ಹೇಳಿ ತನ್ನ ಸೇವಕಂಗೊಕ್ಕೆ ಹೇಳಿದ°.  ಸೇವಕಂಗೊ ರಾಜಾಜ್ಞೆ ಪ್ರಕಾರ ಅವರ ಕರಕೊಂಡು ಬಂದು ರಾಜನ ಮುಂದೆ ತಂದು ನಿಲ್ಲಿಸಿದವು. ರಾಜ°, ತನ್ನ ಹಿಂದಾಣ ಕಠೋರ ವರ್ತನೆಯ ಸ್ಮರಿಸಿ ವಿವರ ಹೇಳಿದ ವರ್ತಕಂಗೊಕ್ಕೆ. ಈ ವರ್ತಕಂಗ ಏನೂ ಮಾತಾಡದ್ದೇ ಕೈ ಕಟ್ಟಿ ರಾಜಂಗೆ ನಮಸ್ಕಾರ ಮಾಡಿ ನಿಂದುಗೊಂಡವು. ಆವಾಗ, ರಾಜ° ಇವರತ್ರೆ ಗೌರವಂದ, “ಅಯ್ಯ ವರ್ತಕರೇ, ಯಾವುದೋ ಅಜ್ಞಾತ ದೈವಯೋಗಂದ ನಿಂಗೊಗೆ ಇಂತಹ ಕಷ್ಟಸ್ಥಿತಿಯೂ ದುಃಖವೂ ಉಂಟಾದ್ದು. ಇನ್ನು ನಿಂಗೊ ಎಂತಕ್ಕೂ ಹೆದರೆಕ್ಕಾದ್ದಿಲ್ಲೆ” ಹೇಳಿ ಅವರ ಕೈ ಕಾಲುಗೊಕ್ಕೆ ಕಟ್ಟಿದ ಸಂಕೊಲೆಗಳ ಬಿಡಿಸಿ ಮುಕ್ತಮಾಡಿದ°.
ಅವಕ್ಕೆ ಬೇಕಪ್ಪ ಕ್ಷೌರ ಕರ್ಮಾದಿಗಳ ಮಾಡುಸಿ, ವಸ್ತ್ರಾಲಂಕಾರವನ್ನೂ ಕೊಟ್ಟು ಸತ್ಕರಿಸಿ, ಅವರಿಂದ ಸ್ವಾಧೀನಮಾಡಿಗೊಂಡ ದ್ರವ್ಯವ ಮತ್ತು ಅದಕ್ಕೆ ಎರಡು ಪಾಲು ಕೂಡಿಸಿ ಕೊಟ್ಟು ಉಪಚರಿಸಿ “ಇನ್ನು ನಿಂಗೊ ನಿರಾತಂಕವಾಗಿ ನಿಂಗಳ ದೇಶಕ್ಕೆ ಹೋಪಲಕ್ಕು” ಹೇಳಿ ಹೇಳಿದ°. ಅದಕ್ಕೆ ವರ್ತಕರಿಬ್ರೂ ರಾಜಂಗೆ ನಮಸ್ಕರಿಸಿ, “ನಿನ್ನ ಅನುಗ್ರಹ ಇದ್ದರೆ ಸಾಕು, ಎಂಗೋ ಹೋಗಿ ಬತ್ತೆಯೊ” ಹೇಳಿ ಹೇಳಿಕ್ಕಿ ಅಲ್ಲಿಂದ ಹೆರಟವು, ಎಂಬಲ್ಯಂಗೆ..

ಶ್ರೀ ಲಕ್ಷ್ಮೀಸಹಿತ ಶ್ರೀ ಸತ್ಯನಾರಾಯಣಸ್ವಾಮಿ ಪೂಜಾಕಥೆಯ ಮೂರನೇ ಅಧ್ಯಾಯ ಮುಗುದತ್ತು.

ಓಂ ನಮೋ ನಾರಾಯಣಾಯ ॥ ಶ್ರೀ ಕೃಷ್ಣಾರ್ಪಣಮಸ್ತು ॥

ಶ್ರೀ ದೇವರ ಮನಸಾ ಧ್ಯಾನಿಸಿಗೊಂಡು ಷೋಡಶೋಪಚಾರಪೂಜೆಯ ಪರಿಕಲ್ಪಿಸಿಗೊಂಬದು. ಅದಾ..
ಈಗ ಶೇಡಿಗುಮ್ಮೆ ಪುಳ್ಳಿ ಮಣಿ ಆಡುಸುತ್ತನಡ, ಶಂಖ ಊದುದು, ಜಾಗಟೆ ಬಡಿವದು, ತಾಳ ಹೆಟ್ಟುವದು ಕೇಳಿತ್ತೋ..
ನಿಂಗೊ ಒಂದು ಮಂಗಳಾರತಿಯ ಮನಸ್ಸಿಲ್ಲೇ ಮಾಡಿಕ್ಕಿ..

ಶ್ರೀ ಲಕ್ಷ್ಮೀಸಹಿತ ಶ್ರೀ ಸತ್ಯನಾರಾಯಣ ದೇವರಪಾದಾರವಿಂದಕ್ಕೆ ಗೋವಿಂದ ಅನ್ನಿ ಗೋವಿಂದ ….., ಗೋ..ವಿಂದ ॥

ಹರಿಕಥಾ ಶ್ರವಣಕ್ಕೆ:
[audio:audio/KATHA_CHAPTER_03.mp3]
ಧ್ವನಿ ಕೃಪೆ : www.sangeethamusic.com

~*~*~

ಓದುಗರ ಅವಗಾಹನೆಗೆ: ಸ್ಥಳಂದ ಸ್ಥಳಕ್ಕೆ ಪಾಠಾಂತರ ವ್ಯತ್ಯಾಸ ಇಪ್ಪಲೂ ಸಾಕು.

11 thoughts on “ಶ್ರೀ ಸತ್ಯನಾರಾಯಣಪೂಜಾವ್ರತಕಥಾ – ತೃತೀಯೋಧ್ಯಾಯಃ

  1. ಎಲ್ಲೋರ ಪ್ರೀತಿ ಪ್ರೋತ್ಸಾಹಕ್ಕೆ ಧನ್ಯವಾದ.

    @ಉಂಡೆಮನೆ ಕುಮಾರಣ್ಣ , ಒಳ್ಳೆ ಸಲಹೆ. ಸಂಗ್ರಹ ಮಾಡಿ ಬೈಲಿಂಗೆ ತಪ್ಪೋ ಶೀಘ್ರಲ್ಲಿ..

  2. ಚೆನ್ನೈ ಭಾವನ ಶ್ರಮಕ್ಕೆ ಎಂತ ಹೇಳಿದರೂ ಕಡಮ್ಮೆಯೇ… ಹಾಂಗಾಗಿ ಭಕ್ತಿಲ್ಲಿ ಆ ಸತ್ಯನಾರಾಯಣ೦ಗೆ ಇನ್ನೊಂದರಿ ಕೈ ಮುಗುದೆ… ವ್ಯಾಪಾರಿಯ ಕಥೆ ನಮ್ಮ ಮನಸ್ಸಿಲ್ಲಿ ಭಕ್ತಿ ಭಾವವ ಉಂಟುಮಾಡುತ್ತು… ಇಂದಾದರೂ ಭಕ್ತಿ ಭಾವಲ್ಲಿ ದೇವರ ಹತ್ತರೆ ಮಾಡಿದ ಪ್ರಾರ್ಥನೆ ಫಲಿಸಿದ ಎಷ್ಟೋ ಉದಾಹರಣೆಗ ಇದ್ದು… ಭಕ್ತಿ ಭಾವಲ್ಲಿ “ಸರ್ವೇ ಜನಾ: ಸುಖಿನೋ ಭವಂತು” ಹೇಳಿ ಪ್ರಾರ್ಥಿಸುಲೇ ಯಾವತ್ತು ಹವ್ಯಕರೆಲ್ಲ ಕಲಿತ್ತವೋ ಆವತ್ತು ಹವ್ಯಕರ ಇಡೀ ಜಗತ್ತೇ ಆರಾಧಿಸುಗು…

  3. ಭಕ್ತಿ ಭಾವದ ಕತೆಯ ಧ್ವನಿ ಸಮೇತ ಒದಗಿಸಿದ ಚೆನ್ನೈ ಭಾವಂಗೆ, ಅವರ ಶ್ರಮಕ್ಕೆ ನಮೋ ನಮಃ

  4. ತೃತೀಯಾಧ್ಯಾಯವ someಪೂರ್ಣ ಓದಿದೆ. ಕಥೆಯ ಬೈಲಿಂಗಿಳಿಸುತ್ತಾ ಇಪ್ಪ ನಿಂಗಳ ಶ್ರಮ ಮೆಚ್ಚೆಕಾದ್ದೆ. ಧನ್ಯವಾದಂಗೊ ಭಾವಯ್ಯ.

  5. ನಿಂಗಳ ಎಲ್ಲ ಶುದ್ದಿಗಳ ಹಾಂಗೆ ಇದುದೇ ಒೞೆ ಮೌಲ್ಯಯುತವಾಗಿದ್ದು, ಪರಿಪೂರ್ಣವಾಗಿದ್ದು ಹೇಳಿ ಒಪ್ಪ..
    ಪೂಜಗೆ ಬೇಕಾದ ದ್ರವ್ಯಂಗಳ ಪಟ್ಟಿಯೂ ಬೈಲಿಂಗೆ ಕೊಡಿ ಹೇಳಿ ಎನ್ನ ಕೇಳಿಕೆ ಭಾವ..

  6. ಧನ್ಯವಾದಂಗೊ ಭಾವ..
    ಇದರ ನಾವು ಒ೦ದು ಕೋಪಿ, ಪ್ರಿ೦ಟು ತೆಗದು ಮಡುಗುತ್ತು. 😉

  7. ನಾವು ಮಾಡುತ್ತ ಒಳ್ಳೇ / ಕೆಟ್ಟ ಕೆಲಸ೦ಗಳ ಪ್ರಭಾವ ನಮ್ಮ ಮೇಲೆ ಮಾ೦ತ್ರ ಅಲ್ಲ, ಕುಟು೦ಬದ ಮೇಲೂ ಪ್ರಭಾವ ಬೀರುತ್ತಲ್ಲದಾ…
    ಒಪ್ಪ೦ಗೊ ಚೆನೈ ಭಾವಾ..

  8. ಧನ್ಯವಾದಂಗೊ ಭಾವಯ್ಯಂಗೆ. ನಿರೀಕ್ಶೆಯಂತೆ ಒಳ್ಲೆದಾಯಿದು.

  9. ಭಾವಾ ಧನ್ಯವಾದಂಗೊ,
    ಶ್ರೀ ಲಕ್ಷ್ಮೀಸಹಿತ ಶ್ರೀ ಸತ್ಯನಾರಾಯಣ ದೇವರಪಾದಾರವಿಂದಕ್ಕೆ ಗೋವಿಂದ ಅನ್ನಿ ಗೋವಿಂದ …..ಗೋಓಓಓಓಓಓಓಓಓಓಓಓಓಓಓಓಓಓಓಓಓಓಓಓಓವಿಂದ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×