Oppanna.com

ವಿಭೂತಿ ಮಾಡುವ ರೀತಿ

ಬರದೋರು :   ವಿಜಯತ್ತೆ    on   25/02/2013    14 ಒಪ್ಪಂಗೊ

ಶಿವರಾತ್ರಿ  ಸಂದರ್ಭಕ್ಕಾಗಿ  ವಿಭೂತಿ  ಮಾಡುವ  ರೀತಿ

ಎನ್ನ ಪುಟ್ಟು ಅಳಿಯಂಗೆ  ಒಂದು ದಿನ ಮೋರಗೆ ಭಸ್ಮ ಹಾಕುವಾಗ ಒಂದು ಕುತೂಹಲ ಮೂಡಿತ್ತು. ದೊಡ್ಡತ್ತೆ ಇದರ  ಹೇಂಗೆ ಮಾಡುವದು?  ಒಲೆಂದ ಬೂದಿ ಬಾಚಿ ಉಂಡೆ ಮಾಡುವದಾ? ಕೇಳಿದ°.
‘ಅಲ್ಲ ಪುಟ್ಟಾ, ಆದರ ವಿಧಿವತ್ತಾಗಿ ಮಾಡುವ ಕ್ರಮ ಇದ್ದು. ನಮ್ಮ ಅಜ್ಜನತ್ರೆ ಕೇಳುವೊ°’,  ಹೇಳಿದೆ.  ಹಾಂಗೆ ಎನ್ನ ಅಪ್ಪ° ಇದ್ದಲ್ಲಿಂಗೆ ಚಾವಡಿಗೆ ಇಬ್ರೂ ಹೋದಿಯೊ°.
‘ಅಪ್ಪಾ,  ನಿಂಗಳ ಪುಳ್ಳಿಗೆ ವಿಭೂತಿ ಮಾಡುವದೇಂಗೆ ಹೇಳಿ ಅರಡಿಯೆಕ್ಕಡ ಇದ.  ಹೇಳಿರೆ ಎನಗೂ ಗೊಂತಕ್ಕು ಕೇಳಿಗೊಂಡೆ’.
‘ಅದಕ್ಕೆಂತ ಹೇಳುವೊ°’, ಹೇಳಿದವು.

ಎನ್ನಪ್ಪ°(ನಿಡುಗಳ ಶಂಭುಭಟ್ಟ, ಶಂಕರಮೂಲೆ) ಹೇಳಿದ ಕ್ರಮ. ಅವು  ವರ್ಷವು ಮಾಡಿಗೊಂಡಿತ್ತಿದ್ದವು.

ವಿಭೂತಿ ಮಾಡುವ ಕ್ರಮ:

ಬೇಕಪ್ಪ ಸಾಮಾನುಗೊ:-
ಕರವ ದನದ ಮೂತ್ರ(ಊರ ದನ ಆಯೆಕ್ಕು, ಕಪಿಲೆ ಆದರೆ ಒಳ್ಳೆದು), ಸಗಣ, ಅರಿಶುವ ವಸ್ತ್ರ (ಬಿಳಿ ವಸ್ತ್ರ- ಹತ್ತಿ ನೂಲಿಂದಾಯೆಕ್ಕು)

ಮಾಡುವ ವಿಧಾನ:
ಮಣ್ಣು ಕಸವು ಇಲ್ಲದ್ದ ಸಗಣವ ಬೆರಟಿ ತಟ್ಟಿ ಸರಿಯಾಗಿ ಒಣಗಿಸೆಕ್ಕು.  ಒಣಗಿದ ಬೆರಟಿಯ ಶಿವರಾತ್ರಿ ದಿನವೇ ಹೊತ್ತುಸೆಕ್ಕು. ಇದು ಒಳ್ಳೆ ಜಾಗೆಲಿ ಆಯೆಕ್ಕು.
ಹೊತ್ತಿ ಬೂದಿಯಾಗಿ ತಣುದ ಮತ್ತೆ ಅದರ ನೀರಿಲ್ಲಿ ಕರಡಿಸಿ ಮೇಲಿ ಹೇಳಿದ ವಸ್ತ್ರಲ್ಲಿ ಅರಿಶೆಕ್ಕು. ಅರಿಶಿ ಅಪ್ಪಗ  ಬೂದಿ ಅಡಿಲಿ ಕೂರುತ್ತು. ಮತ್ತೆ ಅದರ ಮೇಲಣ ನೀರಿನ ಅರಿಶಿ ವಾಪಾಸು ಕರಡಿಸಿ ಅರಿಶೆಕು.
ಹೀಂಗೆ ಏಳು ಸರ್ತಿ ಅರಿಶೆಕು. ಅರಿಶಿದ ಬೂದಿಯ ನೀರಿನ ಪಸೆ ಆರುವನ್ನಾರ ಒಣಗಿಸೆಕ್ಕು.
ಮತ್ತೆ ಕಪಿಲೆ ದನದ ಮೂತ್ರ 7 ಸರ್ತಿ ಅರಿಶೆಕು. ಈ ಗೋಮೂತ್ರಲ್ಲಿ ಬೂದಿಯ ಗಟ್ಟಿಯಾಗಿ ಕಲಿಸಿ ಸಾಧಾರಣ ನಿಂಬೆ ಗಾತ್ರದ ಉಂಡೆ ಮಾಡೆಕ್ಕು. ಈ ಉಂಡೆಯ ಸರಿಯಾಗಿ ಒಣಗಿಸೆಕ್ಕು.
ವಾಪಾಸ್ ಅದರ ಬೆರಟಿಲೇ ಹೊತ್ತಿಸೆಕ್ಕು. ಅದು ಹೊತ್ತಿ ಕೆಂಪು ಬಣ್ಣಕ್ಕೆ ಬಂದ ಮೇಲೆ ಅದರ ಬೇರೆ ಬೇರೆ ಹರಗಿ ತಣಿಶೆಕು. ಇದೀಗ ಹೊಡಿ ಹೊಡಿ ಆವುತಿಲ್ಲೆ. ಗಟ್ಟಿಯಾದ ಬಿಳಿ ಬಣ್ಣದ ಉಂಡೆ.
ಇದು ಎಷ್ಟು ವರ್ಷಕ್ಕು ಹಾಳಾವುತಿಲ್ಲೆ. ಸಾಧಾರಣ ಇಪ್ಪತ್ತು ಬೆರಟಿ ಇದ್ದರೆ ಇಪ್ಪತ್ತು ಉಂಡೆ ವಿಭೂತಿ ಆವುತ್ತು.

(ಇಲ್ಲಿ ಬೆರಟಿಯ ಹೊತ್ತಿಸುವ ಧಾರ್ಮಿಕ ವಿಧಿ ಮಾತ್ರ ಶಿವರಾತ್ರಿಯ ದಿನವೇ ಆಯೆಕು. ಮುಂದಿನ ಕೆಲಸಂಗ ಮತ್ತೆ ನಾಲ್ಕಾರು ದಿನ ಹಿಡಿತ್ತು. ಅದಕ್ಕೆ ಮುಹೂರ್ತ ಇಲ್ಲೆ.)

~*~

14 thoughts on “ವಿಭೂತಿ ಮಾಡುವ ರೀತಿ

  1. ಹರೇ ರಾಮ. ಶ್ಯಾಮ ಸುಂದರ್ ವಿ.ಎನ್ . ಇವು ಆರೂಳಿ ಅಷ್ಟು ನೆಂಪಾವುತ್ತಿಲ್ಲೆ!!. ಅಂತೂ ಆನು ೨೦೧೩ ನೇ ಶಿವರಾತ್ರಿ ಸಂದರ್ಭಲ್ಲಿ ಬರದ ವಿಭೂತಿ ಮಾಡುವ ಕ್ರಮವ ಓದಿ ಮೆಚ್ಚಿದ್ದು ಎನಗೆ ತುಂಬಾ ತುಂಬಾ ಕುಶಿ ಆತು. ಧನ್ಯವಾದ ಅಣ್ಣ.

  2. ಒಳ್ಳೆ ಮಾಹಿತಿ.
    ಕ್ರಮ ಪ್ರಕಾರ ಮಾಡುವ ವಿಧಾನ ತಿಳುಶಿ ಕೊಟ್ಟದಕ್ಕೆ ಧನ್ಯವಾದಂಗೊ

  3. ಎನ್ನ ಅಜ್ಜಿ ಹೀಂಗೆ ವಿಭೂತಿ ಮಾಡಿಕೊಂಡು ಇದ್ದಿದ್ದವು. ಶಿವರಾತ್ರಿ ದಿನ ಹೊತ್ತೋಪಗಳೆ ಹೊತ್ತಿಸುದು.
    ಧನ್ಯವಾದ ವಿಜಯ ಚಿಕ್ಕಮ್ಮ.

  4. ಉತ್ತಮ ಮಾಹಿತಿಗೆ ಧನ್ಯವಾದ೦ಗೊ ಅಕ್ಕ.

  5. ಒಳ್ಳೆ ಶುದ್ದಿ. ಮದಲಿಂಗೆ ಅಜ್ಜ° ಇಪ್ಪಗ ಹೀಂಗೇ ಮಾಡುಸ್ಸರ ಕಂಡ ನೆಂಪು ಇದ್ದು. ಈಗ ಉಂಡೆ ಮಾಡಿ ಮಡಿಗ್ಯೊಂಡಿಪ್ಪದರ ಮಾಂತ್ರ ಕಾಂಬಲೆ ಸಿಕ್ಕುತ್ತಷ್ಟೆ. ಶುದ್ದಿಗೆ ಒಂದು ಒಪ್ಪ ಹೇಳೆಕ್ಕೆ.

  6. ಒಳ್ಳೆ ಮಾಹಿತಿ. ಇನ್ನೂ ಬರಲಿ ಹೀಂಗಿರ್ತ ಒಳ್ಳೊಳ್ಳೆ ಮಾಹಿತಿಗೊ ಅತ್ತೆ.

  7. ಜಯಗೌರಿ, ಹರೆರಾಮ. ಕಾಡಿಗೆ ಮಾಡುವ ಕ್ರಮ ಗೊಂತಿದ್ದು ಮುಂದಾಣ ವಾರ ಬರೆತ್ತೆ

    ಒಪ್ಪಕೊಟ್ಟ ಜಯಗೌರಿಗೆ ಅದಿತಿಗೆ ಮಾಲಕ್ಕಂಗೆ ಧನ್ಯವಾದಂಗೊ

  8. ವಿಭೂತಿ ಮಾಡುವ ಕ್ರಮ ಮತ್ತು ಮಾಡ್ಲೂ ಮುಹೂರ್ತ ಇದ್ದು ಹೇಳಿ ಗೊಂತಾತು. ಮಾಹಿತಿಗಾಗಿ ಧನ್ಯವಾದ ಅತ್ತೆ. ಕಾಡಿಗೆಯೂ ಮನೆಲಿಯೆ ತಯಾರು ಮಾಡ್ಲಕ್ಕಡ. ಅದರ ಕ್ರಮ ಗೊಂತಿದ್ದರೆ ತಿಳಿಶಿ ವಿಜಯತ್ತೆ…

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×