Oppanna.com

ಈಶಾವಾಸ್ಯೋಪನಿಷತ್ತು – ಶ್ಲೋಕ ಎರಡು

ಬರದೋರು :   ಬೊಳುಂಬು ಕೃಷ್ಣಭಾವ°    on   25/11/2013    8 ಒಪ್ಪಂಗೊ

ಈಶಾವಾಸ್ಯೋಪನಿಷತ್ತು – ಶ್ಲೋಕ ಎರಡು
ಕುರ್ವನ್ನೇವೇಹ ಕರ್ಮಾಣಿ ಜಿಜೀವಿಷೇಚ್ಪತಗ್‍ಂ ಸಮಾಃ |
ಏವಂ ತ್ವಯಿ ನಾನ್ಯಥೇತೋSಸ್ತಿ ನ ಕರ್ಮ ಲಿಪ್ಯತೇ ನರೇ ||೨||
ಬಾಳು ಈ ತೆರ ಕರ್ಮಗೈಯುತ ನೂರು ವರುಷದ ಜೀವನ
ಬೇರೆ ದಾರಿಯೆ ಇಲ್ಲ ಮನುಜನೆ; ಇರದು ಕರ್ಮದ ಲೇಪನ ||೨||
– ಇದು ಡಾ| ಶಾಮ ಭಟ್ಟ, ಮಡ್ವ ಇವರ ಅನುವಾದ.
ಏವೊತ್ತೂ ಚಲಿಸಿಗೊಂಡಿಪ್ಪ ಈ ಜಗತ್ತಿಲಿ, ಮಾಡೆಕ್ಕಾದ ಕರ್ಮಂಗಳ ತಪ್ಪುಸಲೆ ಕ್ಷಣಕಾಲಕ್ಕೂ ಆರಿಂಗೂ ಎಡಿಯ. ಗೀತೆಲಿ ಭಗವಾನ್ ಹೇಳುವದೂ ಇದನ್ನೇ. ಮೂಲೋಕಂಗಳಲ್ಲಿ ಎನಗೆ ಸಾಧನೀಯವಾದ್ದದು ಏವದೂ ಇಲ್ಲದ್ದರುದೇ ಆನು ನಿರಂತರ ಪರಿಶ್ರಮಲ್ಲಿರುತ್ತೆ. ಇದರ ಭಗವಾನ್ ವೇದವ್ಯಾಸರು ಹೇಳಿದ್ದದು ಎಂಬ ದೃಷ್ಟಿಂದಲೂ ನೋಡುಲಾವುತ್ತು. ಕರ್ಮಂಗಳ ಮಾಡಿಗೊಂಡೇ ಇರೆಕ್ಕಾವುತ್ತು. ಹಾಂಗೆ ಮಾಡಿದ ಕರ್ಮಂಗಳ ಗುಣಾವಗುಣಂಗೊವಕ್ಕೆ ಹೊಂದಿಗೊಂಡು ಅದಕ್ಕೆ ತಕ್ಕ ಫಲವೂ ಇರುತ್ತು. ಆ ಫಲಕ್ಕೆ ತಕ್ಕ ಹಾಂಗೆ ಕರ್ಮಬಂಧನಂಗಳೂ ಇರುತ್ತು.
ಎಲ್ಲವನ್ನೂ ಒಳಗೊಂಡ ಜಗದೀಶ್ವರನಾದ ಪರಮ ಚೈತನ್ಯವ ಮನಸ್ಸಿಲಿ ಕಂಡಂಡು ಮಾಡುವ ಕರ್ಮಂಗೊವಕ್ಕೆ ಬಂಧನಂಗೊ ಇರುತ್ತಿಲ್ಲೆ.
ಋಷಿವಾಣಿಯ ತಾತ್ಪರ್ಯ, ನವಗೆ ಜಗತ್ತಿಲಿ ಕರ್ಮಂಗಳ ಮಾಡಿಗೊಂಡೂ ನೂರು ವರುಷ ಬದುಕ್ಕುವ ಇಚ್ಛೆ ಇರೆಕ್ಕು ಹೇಳಿ ಆವುತ್ತು. ವೈರಾಗ್ಯಶೀಲನಾದವಂಗೆ ನೂರು ವರುಷ ಬದುಕ್ಕುವ ಇಚ್ಛೆ ಎಂತಕೆ ಎಂಬ ಸಂಶಯವೂ ಬಕ್ಕು. ವೈರಾಗ್ಯದ ಚರಮ ಉದ್ದೇಶವೇ ಮೋಕ್ಷ, ಹಾಂಗಾಗಿ ‘ನೂರು ವರುಷ ಫಲಾಭಿಸಂಧಿ ಇಲ್ಲದ್ದೆ ಮಾಡುವ ಕರ್ಮ’ ಹೇಳ್ತ ಆದರ್ಶವ ಮಡಿಗಿಗೊಂಡದು. ವೈರಾಗ್ಯ ಹೇಳಿರೆ ಇಹಲೋಕದ ನಿರಾಕರಣವಲ್ಲ ಹೇಳ್ತದರ ನೆಂಪು ಮಾಡಿಗೊಳೆಕ್ಕು. ನಾವು ಮಾಡೆಕ್ಕಾದ್ದರ ಮಾಡಿ ತೀರ್ಮಾನವ ಅವಂಗೆ ಬಿಡೆಕ್ಕು. ಗುಣವಿವೇಚನವೂ ನವಗಿರೆಕ್ಕು, ಎಂತಕೆ ಹೇಳಿರೆ ನಾವು ಮಾಡುವ ಎಲ್ಲಾ ಕರ್ಮಂಗಳನ್ನೂ ಗುಣಂಗು ಬಾಧಿಸುತ್ತು.
ಆ ಚೈತನ್ಯದ ಒಂದಂಶ ಮಾಂತ್ರ ನಾವು. ಮಾಡುವವು ನಾವಲ್ಲ, ಮಾಡುಸುವವ° ಅವ°. ಹಾಂಗಾಗಿ ನಮ್ಮ ಎಲ್ಲ ಕರ್ಮಂಗಳನ್ನೂ ಅವಂಗೆ ಅರ್ಪಿಸುವೊ°.
(ಇನ್ನೂ ಇದ್ದು)

8 thoughts on “ಈಶಾವಾಸ್ಯೋಪನಿಷತ್ತು – ಶ್ಲೋಕ ಎರಡು

  1. ಧನ್ಯವಾದ ಲಕ್ಷ್ಮಿ ಅಕ್ಕ. ನಿಂಗಳ ಭಾಷಣಲ್ಲಿ ಹೀಂಗಿಪ್ಪ ಸಂಗತಿಗಳ ಸೇರುಸಿಗೊಂಬದು ಕಂಡು ಕೊಶಿ ಆತು.

  2. ಆನು ಭಾಷಣ ಮಾಡುವಾಗ ಸುಮಾರು ಸರ್ತಿ ಈ ಶ್ಲೋಕವ ಉದಾಹರ್ಸಿತ್ತಿದೆ ಆದರೆ ಇದು ಎಲ್ಲಿ ಇಪ್ಪ ಶ್ಲೋಕ ಮೂಲ ಯಾವುದು ಹೇಳಿ ಎನಗೆ ಗೊಂತಿತಿಲ್ಲೇ ,ಒಳ್ಳೆ ಮಾಹಿತಿ ಕೊತ್ತದಕ್ಕೆ ಧನ್ಯವಾದಂಗ ಬೊಳುಂಬು ಕೃಷ್ಣಭಾವ°
    ನಿಷ್ಕಾಮಂದ ಹೇಳ್ರೆ ಯಾವುದೇ ಪ್ರತಿಫಲದ ಅಪೇಕ್ಷೆ ಇಲ್ಲದ್ದೆ ಕರ್ಮವ ಮಾಡಿದವಂಗೆ ಕರ್ಮದ ಲೇಪ ಇಲ್ಲೇ ,ಅದು ಅಂಟುತಿಲ್ಲೇ ಹೇಳುವ ಈ ಶ್ಲೋಕ ತುಂಬಾ ಮನನೀಯವಾದ್ದು

  3. ಕರ್ಮ ಮಾಡ್ವಾಗ ಗೊಣಗದ್ದೆ, ಕರ್ತವ್ಯದೃಷ್ಟಿ೦ದ ಮಾಡೆಕ್ಕು- ಹೇಳ್ವದು ಇದರ ತಾತ್ಪರ್ಯ ಅಲ್ಲದಾ?

    1. ನಿಂಗೊ ಹೇಳಿದ್ದು ಸರಿ, ‘ನಮ್ಮ ಕರ್ಮಂಗಳ ನಾವು ಸಮರ್ಪಣೆಯ ದೃಷ್ಟಿಂದ ಮಾಡೆಕ್ಕು’ ಹೇಳ್ತು ಋಷಿವಾಣಿ. ಭಗವದ್ಗೀತೆಯ ಮೂರನೆಯ ಅಧ್ಯಾಯದ ಐದನೆಯ ಶ್ಲೋಕಲ್ಲಿ ಭಗವಾನ್ ಹೇಳಿದ್ದದೂ ಇದನ್ನೇ.
      ನ ಹಿ ಕಶ್ಚಿತ್ ಕ್ಷಣಮಪಿ ಜಾತು ತಿಷ್ಠತ್ಯಕರ್ಮಕೃತ್ ।
      ಕಾರ್ಯತೇ ಹ್ಯವಶಃ ಕರ್ಮ ಸರ್ವಃ ಪ್ರಕೃತಿಜೈರ್ಗುಣೈಃ ॥

  4. ಉಪಯುಕ್ತ ಕಾರ್ಯ. ಹರೇ ರಾಮ ಬೊಳುಂಬು ಭಾವ

    1. ಕೃತಜ್ಞತೆಗೊ ಚೆನ್ನೈ ಭಾವಾ. ನಿಂಗೊ ಒದಗುಸಿಕೊಟ್ಟ ಭಗವದ್ಗೀತೆಯ ವಿವರಂಗಳ ಋಣ ಎನಗಿದ್ದು.

    1. ಕೃತಜ್ಞತೆಗೊ ವೆಂಕಟರಮಣ ಭಾವಾ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×