- ಬಲೀಂದ್ರಪೂಜೆ – (ಸರಳ ಸಂಕ್ಷಿಪ್ತ ವಿಧಾನ) - October 30, 2020
- ಗೋಪೂಜೆ – (ಸರಳ ಸಂಕ್ಷಿಪ್ತ ವಿಧಾನ) - October 30, 2020
- ತೊಳಶಿ ಪೂಜೆ – ಸರಳ ಸಂಕ್ಷಿಪ್ತ ವಿಧಾನ - October 30, 2020
1.
ಸರಳಿ ಪಟದಣ್ಣನಲ್ಲಿ ಬಾಬೆ ಹುಟ್ಟಿದ ಬಾಬ್ತು ಪುಣ್ಯಾಯ
ಬಟ್ಟಮಾವಂಗೆ ಬೇಸಗೆಲಿ ವೇದಪಾಠವೂ ಇಪ್ಪಕಾರಣ ಉದಿಯಪ್ಪಗಳೇ ಬಂದಿಕ್ಕಿ ಓಂ ಪುಣ್ಯಾಹಂ ಹೇದಿಕ್ಕಿ ಹೋಗಿ ಆಯಿದು.
ಆದರೆ ಅಡಿಗೆ ಸತ್ಯಣ್ಣಂಗೆ ಹಾಂಗೆ ಮಾಡ್ಳೆ ಎಡಿತ್ತಿಲ್ಲೆ ಇದಾ. ಒಂದೊಂದೇ ಬೇಶಿ ಕಡದು ಕೂಡಿ ಇಳುಗಿ ಒಗ್ಗರಣೆ ಹಾಕಿ ಹಪ್ಪಳ ಹೊರಿವಲಪ್ಪಗ ಬಾಳೆ ಹಾಕಲೆ ಹಾಳಿತ ಆವುತ್ತು.
ಬಗೆ ದಣಿಯ ಇಲ್ಲದ್ದರೂ ಕಟ್ಟುಗಟ್ಳೆ ತಾಳು ಅವಿಲು ಕೋಸಂಬರಿ ಸಾರು ಕೊದಿಲು ಚಿತ್ರಾನ್ನ ಪಾಯಸ ರಸಾಯನ ಜಿಲೇಬಿ ಹೇದು ಒಂದೊಂದೇ ಅಪ್ಪಗ ಲೆಕ್ಕಕ್ಕೆ ಸುಮಾರು ಆವುತ್ತಿದಾ
ಹಪ್ಪಳ ಹೊರುದಾತು, ಹಂತಿ ಹಾಕಿ ಆತು, ಕೃಷ್ಣಾರ್ಪಣ ಹೇಳಿ ಆತು. ಹಂತಿಲಿ ಕೂದ ಓ.. ಆಚಕರೆ ಮಾವನೂ ಊಟ ಸುರುಮಾಡಿ ಆತು.
ಆರು ಎಂತ ಬಳುಸಲೆ ಬಂದರೂ ಬಳುಸಲೆ ಸುರುಮಾಡುವಾಗಳೇ… “ಸಾಕು ಸಾಕು., ದಣಿಯ ಬಳ್ಸೆಡ, ಅಲ್ಪ ಬಳ್ಸಿ ಹಾಳು ಮಾಡೆಡ” ಹೇದು ಬಳ್ಸುವವರನ್ನೇ ಹೆದರುತ್ತಾಂಗೆ ಮಾಡುತ್ತದು ಆಚಕರೆ ಮಾವಯ್ಯನ ಅಭ್ಯಾಸ.
ಹಾಂಗಾಗಿ ಆಚಕರೆ ಮಾಂವ ಹಂತಿಲಿ ಕೂದರೆ ಬಳ್ಸಲೆ ಹೋಪವ° ರಜಾ ಒಳ್ಳೆತ ಜಾಗ್ರತೆ ಮಾಡೇಕ್ಕಾವ್ತು. ಇಲ್ಲದ್ದರೆ ಆಚಕರೆ ಮಾವ° ಸಣ್ಣಕೆ ಹೇಳಿರೂ ಹಂತಿ ಕೊಡಿವರೇಂಗೆ ದೊಡ್ಡಕೆ ಕೇಳ್ತು.
ಸಣ್ಣ ಸಣ್ಣ ಜೆಂಬ್ರಂಗಳಲ್ಲಿ ಅಡಿಗೆ ಸತ್ಯಣ್ಣನೂ ಬಳ್ಸಲೆ ಬತ್ಸು ಹೊಸತ್ತೇನಲ್ಲ. ಅದೂ ಸರಳಿಯಣ್ಣನಾಂಗಿರ್ತ ಆತ್ಮೀಯರಲ್ಲಿ ಒಂದರಿ ಅಂತೇ ಆದರೂ ಅಡಿಗೆ ಸತ್ಯಣ್ಣ° ಉದ್ದಾಕೆ ಹಂತಿಲಿ ಬಾರದ್ದರೆ ಭೋಜನಾಂತೇ ಗೋವಿಂದ ಹೇಳ್ಳೆ ಹಿಂದೆ ಮುಂದೆ ನೋಡುಗು.
ಹಾಂಗೆ ಅಡಿಗೆ ಸತ್ಯಣ್ಣ°ಆಚಕರೆ ಮಾಂವ ಕೂದ ಹಂತಿಲಿ ಮಾಯಿನಣ್ಣು ರಸಾಯನ ಬಳ್ಸ್ಯೊಂಡು ಬಂದು ಮಾವನ ಬಾಳಗೆತ್ತುವಾಗ ಕೈಲಿಲಿ ಅರ್ಧ ಕೈಲು ರಸಾಯನ ಕವಂಗಂದ ತೋಡಿ – ಇದಾ…ಮಾಂವ, ಮಾಯಿನಣ್ಣು ರಸಾಯನ. ಸಾಕನ್ನೇ.ಹೇದವನೇ ಕೈಲ ಕವಂಗಕ್ಕದ್ದಿ ಪೂರ್ತಿಕೈಲು ರಸಾಯನ ಮತ್ತಾಣ ಭಾವಯ್ಯನ ಬಾಳಗೆ ಬಡುಸಿದನಡ!! 😀
ಈ ಮಾವಯ್ಯನ ಅಶನವ ಕರೇಂಗೆ ದೂಡಿ ಮಾಯಿನಣ್ಣು ರಸಾಯನ ಬಾಳಗೆ ಬೀಳ್ತೋ ನೋಡಿದಲ್ಲೇ ಬಾಕಿ. 😀 😀
~~
2.
ಪದ್ಯಾಣ ಮನೆ ಒಕ್ಕಲು
ಉದಿಯಪ್ಪಾಣದ್ದು ಆಗಿ ಮಜ್ಜಾನಕ್ಕೆ ಇಪ್ಪದು ತಯಾರಿ ಆವ್ತಾ ಇದ್ದು ಅಡಿಗೆ ಸತ್ಯಣ್ಣಂಗೆ
ರಂಗಣ್ಣನ ಕಡವಕಲ್ಲಗುಂಡ ತಿರುಗುಸಾಣ ಆವ್ತಾ ಇದ್ದು.
ಬೈಲಿನೋರು ಆರೋ ಬಂದೋರು ಸುಭಗಣ್ಣನತ್ರೆ ಮನ್ನೆ ತಮಿಳುನಾಡಿಲ್ಲಿ ಬ್ರಾಹ್ಮರ ಹಿಡುದು ಬಡುದು ಜೆನಿವಾರ ಬಲುಗಿ ತುಂಡಿಸಿ ಇಡ್ಕಿದ್ದರ ವಿಷಯವಾಗಿ ಮಾತಾಡ್ಯೊಂತ್ತವು.
ಕುಂಟಾಂಗಿಲ ಬಾವ° ಬಂದೋನೇ ನೆಕ್ಕರೆ ಮೂಲೆಲಿ ನಾಡದ್ದಿಂಗೆ ತಾಳಮದ್ದಳೆ ಇದ್ದಡೋ ಸತ್ಯಣ್ಣ° ಹೇದು ಶುದ್ದಿ ಹೇದ°
ಅಂತೇ ಅರಡಿವಲೆ ಅಡಿಗೆ ಸತ್ಯಣ್ಣ° ಎಂತಡ ಪ್ರಸಂಗ ಅಂಬಗ ಹೇದು ಕೇಟ°
ಪಂಚವಟಿ – ಹೇದ ಕುಂಟಾಂಗಿಲ ಭಾವ°
ಪಂಚವಟಿ ಹೇದಪ್ಪದ್ದೆ ರಂಗಣ್ಣನ ಕೆಮಿಗೆ ಗಾಳಿ ಹೊಕ್ಕಿತ್ತು
ಅಂಬಗ ಪಂಚವಟಿ ಪ್ರಸಂಗಲ್ಲಿ ಸುರುವಿಂಗೆ ಬ್ರಾಹ್ಮರು ಆಯೇಕ್ಕಲ್ಲದ, ಆ ತಮಿಳುನಾಡಿನವರನ್ನೇ ಬಪ್ಪಲೆ ಹೇದರಾತು. ಅವಕ್ಕೀಗ ನೈಜತೆಲಿ ಅರ್ಥ ಹೇಳ್ಳೆ ಎಡಿಗಕ್ಕು – ರಂಗಣ್ಣ ಸೂಚನೆ ಕೊಟ್ಟ° 😀
“ಅವರ ಬರ್ಸಿರೆ ಅವಕ್ಕೆ ಕನ್ನಡಲ್ಲಿ ಅರ್ಥ ಹೇಳ್ಳೆ ಎಡಿಗೋ° ?!, ನಿನ್ನನ್ನೇ ಒಂದರಿ ತಮಿಳುನಾಡಿಂಗೆ ಕಳ್ಸಿರೆಂತ?!! 😀
ಅಡಿಗೆ ಸತ್ಯಣ್ಣ° ನಿಂದಲ್ಯಂಗೆ ಹೆಗಲ ಶಾಲು ಕುಡಿಗಿಯಪ್ಪಗ ರಂಗಣ್ಣ° ಕಾಯಾಲು ಹಿಂಡ್ಳೆ ವಸ್ತ್ರ ಎಲ್ಲಿ ಮಡಿಗಿದ್ಸಪ್ಪ ಹೇದು ಹುಡ್ಕಲೆ ಹೆರಟ° 😀
~~
3.
ಕಲ್ಲುಗುಂಡಿ ಡಾಕುಟ್ರಣ್ಣನ ನೆರೆಕರೆಲಿ ತಿಥಿಪಾಚ
ಡಾಕುಟ್ರಣ್ಣಂಗೆ ಮಜ್ಜಾನ ಎತ್ತಿಯೊಂಡ್ರೆ ಸಾಕಾವ್ತು. ಅಡಿಗೆ ಸತ್ಯಣ್ಣಂಗೆ ಮುನ್ನಾಣ ದಿನವೇ ಹೋಗದ್ದೆ ನಿವೃತ್ತಿ ಇಲ್ಲೆ.
ಪರಾಧೀನಕ್ಕೆ ಬೇರೆಯೇ ಜೆನ ಇಪ್ಪ ಕಾರಣ ಅಡಿಗೆ ಆಯಿಕ್ಕಿ ಅಡಿಗೆ ಸತ್ಯಣ್ಣಂಗೆ ಕಡವಕಲ್ಲಿಂಗೆ ಸಾಂಚಿ ಕೂಬಲೆ ಪುರುಸೊತ್ತಿದ್ದತ್ತು.
ಈಗೆಲ್ಲ ಪುರುಸೊತ್ತಿಲ್ಲದ್ದರೂ ಪುರುಸೊತ್ತು ಮಾಡಿ ಮೊಬೈಲು ಗುರುಟುವವ್ವೇ ಹೆಚ್ಚಾದಿಪ್ಪಗ ಅಡಿಗೆ ಸತ್ಯಣ್ಣ ಪುರುಸೊತ್ತಿಪ್ಪಗ ಮೊಬೈಲು ಗುರುಟಿರೆ ಎಂತ ತಪ್ಪು . ಅಡಿಗೆ ಸತ್ಯಣ್ಣ ಮೊಬೈಲು ಹಿಡ್ಕೊಂಡು ಗುರುಟುದೋ ಅರಟುದೋ ಮಾಡಿಯೊಂಡಿತ್ತಿದ್ದ°
ಆಚೊಡಿಲಿ ಕಂಬಕ್ಕೆ ಸಾಂಚಿಯೊಂಡು ರಂಗಣ್ಣ.
ರಂಗಣ್ಣಂಗೊಂದು ಸಮೋಸ ಬಂದಿತ್ತು – ಇಂದಿರುಳು ಹನ್ನೆರಡುವರೆಂದ ಮೂರುವರೆ ಒಳ ಅಪಾಯಕಾರಿ ಕಿರಣ ಒಂದು ಭೂಮಿಯ ಹತ್ತರೆ ಆಗಿ ಹಾದು ಹೋವ್ತು. ಎಲ್ಲೋರು ಮೊಬೈಲು ಆ ಹೊತ್ತಿಲ್ಲಿ ನಂದುಸಿ ಮಡುಗೆಕು
ರಂಗಣ್ಣ° ಸತ್ಯಣ್ಣಂಗೆ ಆ ಎಚ್ಚರಿಕೆಯ ಓದಿ ಹೇದ°
ಸತ್ಯಣ್ಣ° ಹೇದ° – ಕಳದ ಎರಡು ವೊರಿಷಂದ ಆ ಕಿರಣ ಹಲವು ಸರ್ತಿ ಹಾದು ಹೋವ್ತಾ ಇದ್ದು., ಆರದರ ಬಿಡುದು?!, ಹಿಡುದು ಕಟ್ಟಿ ಹಾಕೆಕ್ಕವನ!! 😀
~~
4.
ಗೋಳಿತ್ತಡ್ಕ ರಾಮಜ್ಜನ ಪುಳ್ಳಿಯ ಉಪ್ನಾನ ಕಳಿಶಿಕ್ಕಿ ಮನೆಗೆತ್ತಿಯಪ್ಪದ್ದೆ ಬೆಂಗುಳೂರಿಲ್ಲಿ ಕಂಡಾವಟ್ಟೆ ಮಳೆ.
ಈ ಸರ್ತಿಯಾಣ ಶೆಡ್ಳು ಗಾಳಿ ಮಳೆ ಕಂಡಾವಟ್ಟೆ ಹೇಂಗಿರ್ಸು ಹೇದರೆ ಮನ್ನೆ ಕೊಕ್ಕಡಲ್ಲಿ ಫೋನಿನ ವಯರಿಲ್ಲಿಯೂ ಕಿಚ್ಚು ಬಯಿಂದಡ – ಅಡಿಗೆ ಸತ್ಯಣ್ಣಂಗೂ ಗೊಂತಿದ್ದು.
“…ಕಂಡಾವಟ್ಟೆ ಹೇದರೆ..ಇದಾ ಅಪ್ಪ° ಆಲಿಕಲ್ಲು ಮಳೆ” – ಆಲಿಕಲ್ಲು ಪಟ ಸಹಿತ ಅಡಿಗೆ ಸತ್ಯಣ್ಣಂಗೆ ಅಡಿಗೆ ಸತ್ಯಣ್ಣನ ದೊಡ್ಡ ಮಗಳ ಮೆಸೇಜು ವಾಟ್ಸಪ್ಪಿಲ್ಲಿ.
ಸತ್ಯಣ್ಣ° ಕೂಡ್ಳೆ ಉತ್ತರ ಕೊಟ್ಟ° – ಆತಾತು, ಆಲಿಕಲ್ಲು ಪ್ರಿಜ್ಜಿಲಿ ತೆಗದು ಮಡುಗು. ಇನ್ನಾಣ ಸರ್ತಿ ಬಂದಿಪ್ಪಗ ನೋಡ್ತೆ. ಈಗ ಫೋನು ಬೆಟ್ರಿ ಎಲ್ಲ ಕಳಚಿ ಮಡುಗು ಮೋಳೆ 😀
ಸತ್ಯಣ್ಣನ ಮೊಬೈಲು ಚಾರ್ಚಿಂಗೆ ಕುತ್ತಿಯಾತು 😀
~~
5.
ಬೆಂಗುಳೂರಿಲ್ಲಿ ಮಳೆ ಬಂದ್ಸು ಅಪ್ಪು, ಬತ್ತಾ ಇಪ್ಪದು ಅಪ್ಪು
ಸುಳ್ಯ ಪುತ್ತೂರು ವಿಟ್ಳ ಮಂಗಳೂರು.. ಅಲ್ಲಿಯೂ ಮಳೆ ಬಂದ್ಸು ಅಪ್ಪು ಬತ್ತಾ ಇಪ್ಪದು ಅಪ್ಪು
ಆದರೆ ಅಡಿಗೆ ಸತ್ಯಣ್ಣ ಇಪ್ಪದು ಪೆರ್ಲಲ್ಲಿ. ಬೆಶಿಲು ದಿನಂದ ದಿನಕ್ಕೆ ಕಾವದು ಅಲ್ಲದ್ದೆ ಮಳೆ ಬಪ್ಪ ಏವ ಲಕ್ಷಣವೂ ಇಲ್ಲೆ.
ಇಪ್ಪತ್ತಾಲ್ಕು ಕೋಲು ಅಡಿ ಬಾವಿಂದ ಸಿಕ್ಕುವ ನಾಕು ಕೊಡಪ್ಪಾನ ನೀರು ಮೂರೊತ್ತ ಎಳದು ತೆಗೆತ್ತ ಏರ್ಪಾಡು ಅಡಿಗೆ ಸತ್ಯಣ್ಣನಲ್ಲಿ.
ಸಂಗತಿ ಹೀಂಗಿಪ್ಪ ಎಡಕ್ಕಿಲಿ ಕೋಳಾರಿ ಗೋವಿಂದ ಭಾವ ಅಡಿಗೆ ಸತ್ಯಣ್ಣನತ್ರೆ ಮಾತಾಡ್ಯೊಂಡಿಪ್ಪಗ ಹೇದವು – ನವಗಿನ್ನು ಏವಾಗ ಮಳೆ ಬತ್ತೋ, ತೋಟಕ್ಕೆ ಬಿಡಿ ತೊಳಶಿ ಸೆಸಿಗೆ ನೀರಾಕಲೇ ನೀರಿರದೋಳಿ ಇನ್ನೊಂದು ವಾರ ಹೋದರೆ
ಅಡಿಗೆ ಸತ್ಯಣ್ಣನ ಅವಸ್ಥೆ ಇನ್ನೂ ಮೋಸ. – ಎನ ಸುಣ್ಣದಂಡಗೆ ಹಾಕುಲೇ ನೀರಿಲ್ಲೆ ಭಾವ ಇಲ್ಲಿ! 😀
~~
6.
ಈ ವೊರಿಶದ ವಿಷು ಓ ಮನ್ನೆ ಕಳಾತು
ಬೈಲ ವಿಷು ಪ್ರಯುಕ್ತ ಕಾರ್ಯಕ್ರಮವೂ ಅದರಿಂದ ಮತ್ತೆ ಓ ಮನ್ನೆ ಕಳಾತು.
ವಿಷು ದಿನಕ್ಕೆ ಅಡಿಗೆ ಸತ್ಯಣ್ಣನಲ್ಲಿ ಉದ್ದಿನ ಕೊಟ್ಟಿಗೆ.
ಕಡದ್ದದು ರಂಗ°, ಬೇಶಿದ್ಸು ಸತ್ಯಣ್ಣ°
ಅಡಿಗೆ ಸತ್ಯಣ್ಣನಲ್ಲಿ ವಿಷು ಕೊಟ್ಟಿಗೆ ಹೇದರೆ ನಿಂಗ ಮಾಡ್ತಾಂಗೆ ಬಾಳೆಲೆಲಿ ಸುರುಟಿ ಮಡುಗುತ್ಸಲ್ಲ.
ಹಲಸಿನ ಸೊಪ್ಪು ಮೂಡೆ ಹೇಳ್ತವದಕ್ಕೆ.
ಕಡದಾತು, ಮೂಡಗೆ ಎರದಾತು, ಅಟ್ಟಿನಳಗೆ ಒಲಗೆ ಏರಿಯಾತು.
ಅಡಿಗೆ ಸತ್ಯಣ್ಣ ಒಲೆಂದ ಕೊಳ್ಳಿ ಒಂದ ಬಲುಗಿ ಅದರ ಕೆಂಡ ಒಂದರ ಅಟ್ಟಿನಳಗೆ ಮೇಗೆ ಮಡುಗಿ ಮತ್ತೆ ಒಲಗೆರಡ ಕೊದಂಟಿ ಹಾಕಿದ.
ಅದರ ನೋಡಿದ ರಮ್ಯ ಕೇಟತ್ತು ಅದೆಂಸಕೆ ಕೆಂಡ ಅಟ್ಟಿನಳಗೆ ಮೇಗ ಮಡಿಗಿದ್ಸು?!
ಅಡಿಗೆ ಸತ್ಯಣ್ಣ° ಹೇದ° – ಕೊಟ್ಟಿಗ್ಗೆ ನೋಡ್ತವರ ಕಣ್ಣು ತಾಗಲಾಗ, ಕೊಟ್ಟಿಗೆ ಬೆಂತೋ ಹೇದು ಅಂಬೇರ್ಪಿಲ್ಲಿ ನಿನ್ನಾಂಗಿರ್ತೋರು ಕೈಹಾಕಿ ಮುಚ್ಚಳ ನೆಗ್ಗಲಾಗ ಹೇದು ಕೂಸೆ 😀
ಪುಣ್ಯ, ರಂಗಣ್ಣ ಆಚಿಗೆ ಕೊದಿಲಿಂಗೆ ಚಟ್ನಿಗೆ ರಸಾಯನಕ್ಕೆ ಕಡಕ್ಕೊಂಡಿತ್ತಿದ್ದ° 😀
~~
7.
ಅಡಿಗೆ ಸತ್ಯಣ್ಣಂಗೆ ಅನುಪ್ಪತ್ಯ ಅಡಿಗೆ , ಅಡಿಗೆ ಸತ್ಯಣ್ಣನ ಎಜಮಾಂತಿ ಶಾರದಕ್ಕಂಗೆ ಮನೆಲಿ ನಿತ್ಯಾಣ ಅಡಿಗೆ
ಮನೆ ಅಡಿಗೆ ಹೇದರೆ ಸುಮ್ಮನೆ ಆವುತ್ತೋ. ಅಲ್ಲಿಗೂ ನೆಟ್ಟಿಕ್ಕಾಯಿ, ತೆಂಗಿನಕಾಯಿ ಹೆರಾಂದ ತಂದೇ ಆಗೆಡದೋ.
ತೆಂಗಿನಕ್ಕಾಯಿ ಆದರೆ ದಿನಕ್ಕೊಂದು ಅಡಿಗೆ ಸತ್ಯಣ್ಣಂಗೆ ಸಿಕ್ಕುತ್ತರ್ಲಿ ಸುಧರಿಕೆ ಅಕ್ಕು. ನೆಟ್ಟಿಕ್ಕಾಯಿಗೆ ಪೆರ್ಲದಂಗುಡಿಂದ ತಂದೇ ಆಗೆಡದ
ಪೆರಡಂಜಿ ಪುಳ್ಳಿ ಬಾರ್ಸ ಅನುಪ್ಪತ್ಯದ ಅಡಿಗೆ ಮುಗಿಶಿಕ್ಕಿ ಮನಗೆ ಬಂದಪ್ಪಗ ಅಡಿಗೆ ಸತ್ಯಣ್ಣನ ಎಜಮಾಂತಿ ಹೇತು – ನೆಟ್ಟಿಕ್ಕಾಯಿಗೆ ರೇಟು ವಿಪರೀತ ಏರಿದ್ದು, ಬೀನ್ಸಿಂಗೆ ಕಿಲೋ 105/ ಆಯಿದು.
ಅಡಿಗೆ ಸತ್ಯಣ್ಣ° ಹೇದ° – ಇನ್ನಂಬಗ ನೀನೂ ಎನ್ನೊಟ್ಟಿಂಗೆ ಬತ್ಸು ಒಳ್ಳೆದು ಈ ನೆಟ್ಟಿಕ್ಕಾಯಿ ಕ್ರಯ ಕಮ್ಮಿ ಅಪ್ಪನ್ನಾರ 😀
~~
8.
ಅರ್ತಿಕಜೆ ಮಾವನ ಮಗನ ಸಟ್ಟುಮುಡಿ ದಿನ ರಂಗಣ್ಣನ ಕಣ್ಣಿಂಗೆ ಕಂಡದು ಅರ್ತಿಕಜೆ ಮಾವನ ಹವ್ಯಕ ಗಾದೆ ಪುಸ್ತಕ – ಹವಿಗನ್ನಡ ಗಾದೆಗಳು
ಪುರುಸೊತ್ತಿಪ್ಪಗ ಅಂತೆ ನಾಕು ಪುಟ ಮೊಗಚ್ಚಿ ನೋಡಿಯಪ್ಪದ್ದೆ ರಂಗಣ್ಣ ಸತ್ಯಣ್ಣನತ್ರೆ ಕೇಟ° – ನಿಂಗಳದ್ದೆಂತಾರು ಈಗ ಹೊಸ ಗಾದೆ ಇದ್ದೋ ಮಾಂವ?
ಅಡಿಗೆ ಸತ್ಯಣ್ಣ° ಹೇದ° – ಇದ್ದಿದ್ದು… – ಕಾವಲಿಗೆ ಇಪ್ಪಟ್ಟೆ ದೋಸೆ ಎರೆ, ಗ್ಲಾಸಿಲಿ ಹಿಡಿತ್ತಟ್ಟೆ ನೀರು ಎರೆ 😀
~~
9
ಜೋಯಿಶಪ್ಪಚ್ಚಿಯ ಮನೆ ಒಕ್ಕಲ ಮುನ್ನಾಣ ದಿನ ಎಡೆ ಹೊತ್ತಿಲ್ಲಿ ಮೊಬೈಲಿಲಿ ಬೈಲ ಅರಟಿಯೊಂಡಿಪ್ಪಗ ರಂಗಣ್ಣಂಗೆ ಕಂಡದು ಒಪ್ಪಣ್ಣನ ಎರಡೆರಡು ಗೆರೆಯ ಇಪ್ಪತ್ತೆರಡು ಶುದ್ದಿಗೊ!
ಒಂದಂದನ್ನೇ ಲೆಕ್ಕ ಹಾಕಿ ಓದಿ ಪುನಃ ಲೆಕ್ಕ ಹಾಕಿರು ಲೆಕ್ಕ ಇಪ್ಪತ್ತೆರಡೇ. ಗೆರೆ ಎರಡೇ!
ನಿಂಗಗೊಡಿಗೊ ಮಾಂವ ಹೀಂಗೇ ಎರಡೇ ವಾಕ್ಯಲ್ಲಿ ಕತೆ ಹೇಳ್ಳೆ?! – ರಂಗಣ್ಣಂದು ಅಡಿಗೆ ಸತ್ಯಣ್ಣಂಗೆ ಸವಾಲು
ಹಾ° ಹೇಳ್ತೆ, ಕೇಳು . ಅಡಿಗೆ ಸತ್ಯಣ್ಣ ಎರಡು ವಾಕ್ಯದ ಕತೆ ಹೇಳ್ಳೆ ಸುರುಮಾಡಿದ° –
- ಗೋಳಿತ್ತಡ್ಕ ರಾಮಜ್ಜನ ಪುಳ್ಳಿಯ ಉಪ್ನಾನಲ್ಲಿ ಎರಡು ಕೆರುಶಿ ಹೋಳಿಗೆ ಉಳುದಿದ್ದತ್ತು. ಮರದಿನ ಹೋಪೋರಿಂಗೆ ನಾಕು ನಾಕು ಕಟ್ಟಿ ಕೊಟ್ಟಪ್ಪದ್ದೆ ಹೋಳಿಗೆ ಕತೆ ಮುಗುದತ್ತು.
- ಬೇಟುಂಙಾನಲ್ಲೊಂದು ವೊರ್ಷಾಂತಕ್ಕೆ ಸುಭಗಣ್ಣಂಗೆ ಹೇಳಿಕೆ ಇದ್ದತು. ಕೇರಳ ಹರತಾಳು ಕಾರಣಂದಾಗಿ ಸುಭಗಣ್ಣ ಹೋಪ ಕತೆ ನಿಂದತ್ತು.
- ಸೂರ್ಯವಂಶಲ್ಲಿ ದಿಲೀಪ ಹೇಳ್ವ ರಾಜ° ಒಬ್ಬ° ಇತ್ತಿದ್ದ°. ಅವಂಗೆ ಮಗ ರಘು ಹುಟ್ಟಿ ದೊಡ್ಡಂವಾಗಿ ಯುವರಾಜ° ಆದಮತ್ತೆ ದಿಲೀಪನ ಕತೆ ಮುಗುದತ್ತು.
- ಭಾಗವತ° ಒರೆವೆನೀ ಕಥಾಮೃತವ ಹೇದಪ್ಪದ್ದೆ ಆಟದ ಕತೆ ಸುರುವಾತು. ಉದಿಯಪ್ಪಗ ಜಯ ಮಂಗಳಂ ಹೇದಪ್ಪದ್ದೆ ಆಟ ಮುಗುದತ್ತು.
- ತೊಡಿಕ್ಕಾನ ಶಾಲಗೊಂದು ಚೆಂದದ ಟೀಚರು ಬಂದೊಂಡಿತ್ತಿದ್ದು, ಅದು ರಿಟೈರ್ಡು ಆದಮತ್ತೆ ಶಾಲಗೆ ಬಪ್ಪದು ನಿಲ್ಸಿತ್ತು.
- ಬಂಟಮಲೆ ಬಂಟೆತ್ತಿ ಮನೆಗೊಂದು ಕೋಳಿ ತಂದಿತ್ತು. ಮರದಿನ ನೆಂಟ್ರು ಬಂದವು ಹೇದು ಆ ಕೋಳಿಯ ಕಜಿಪ್ಪು ಮಾಡಿದ್ದರ್ಲಿ ಆ ಕೋಳಿ ಕತೆ ಮುಗುದತ್ತು.
ಅಷ್ಟಪ್ಪಗ ಬಟ್ಟಮಾವಂದ್ರು ವಾಸ್ತುಬಲಿ ಮುಗಿಶಿ ಮಡಿಮಾತಿಯೊಂಡು ಬಂದವು. ಅಲ್ಲಿಗೆ ಅಡಿಗೆ ಸತ್ಯಣ್ಣನ ಕತೆಯೂ ಮುಗುದತ್ತು. ಬಟ್ಟಮಾವಂದ್ರಿಂಗೆ ಮನೆಯವಕ್ಕೆ ಬೆಶಿ ಬೆಶಿ ಹಪ್ಪಳ ಹೊರಿಯೆಕ್ಕಲ್ಲದ ಇನ್ನು. 😀
😀 😀 : D
ಸರಳಿ ಪದ್ಯಾಣ ಕಲ್ಲುಗುಂಡಿ ಅರ್ತಿಕಜೆ ಹೇದು ಬೈಲಿಲಿ ಒಂದರಿ ತಿರುಗಿದ ಹಾಂಗಾತು. ನೆಗೆಮಾಡಿ ನೆಗೆಮಾಡಿ ಬಂಟೆತ್ತಿಯ ಕೋಳಿಯ ಸ್ವರದ ಹಾಂಗಾಗಿ ನಮ್ಮ ಕತೆಯೂ ಮುಗುದತ್ತು. 🙂
ಊಟ ಆಗಿಕ್ಕಿ ರಸಗವಳ ಹಾಕಿದ ಹಾಂಗೆ ಆತಿದ , ಇದರ ಓದಿ ಅಪ್ಪಗ.
ಧನ್ಯವಾದಂಗೊ ಚೆನ್ನೈ ಭಾವಂಗೆ
ಸತ್ಯಣ್ಣ ,ಈ ವರ್ಷ ಸುಣ್ಣದ ಅಂಡೆಗೆ ನೀರು ಬೇಕಾದಷ್ಟು ಇದ್ದು, ಮಳೆ ಬೈಂದು.
*ಅಡಿಗೆ ಸತ್ಯಣ್ನನ ಸುದ್ದಿ ಸಂಗ್ರಹವಿಭಾಗವ ನೋಡಿಗೊಂಬ ಭಾವಯ್ಯಂಗೆ ದೊಡ್ದ ನಮಸ್ಕಾರ. ನಾಕು ಹೊಡೆಂದಲು ಸುದ್ದಿ ಸಂಗ್ರಹ ಮಾಡಿ ನವಗೆಲ್ಲಾ ಎತ್ತುಸುದಕ್ಕೆ ಧನ್ಯವಾದಂಗೊ.
*ಲಾಯಕ ಆಯಿದು ಭಾವಾ..
ನಿಂಗಳ ‘ಒಗ್ಗರಣೆ’ ಭಾರೀ ಘಮಘಮ ಬತ್ತಾ ಇದ್ದು ಸತ್ಯಣ್ಣ….