Oppanna.com

‘ಅಡಿಗೆ ಸತ್ಯಣ್ಣ’ ಜೋಕುಗೊ – ಭಾಗ 24

ಬರದೋರು :   ಚೆನ್ನೈ ಬಾವ°    on   22/08/2013    9 ಒಪ್ಪಂಗೊ

ಚೆನ್ನೈ ಬಾವ°

1.
 ಅಡಿಗೆ ಸತ್ಯಣ್ಣ ಅಡಿಗೆ ಕೆಲಸ ಸುರುಮಾಡಿ ವೊರಿಶ ಮುವ್ವತ್ತರಿಂದ ಮೇಗೆ ನಾಲ್ಕೋ ಐದೋ ಆರೋ ಆತಡ!
ಪ್ರಪಂಚಲ್ಲಿ ಕಲರ್ ಫಟ, ಕಲರ್ ವೀಡಿಯಾ ಬಂದು ವೊರಿಶ ಎಷ್ಟಾತು ಕೇಳಿರೆ ಅಡಿಗೆ ಸತ್ಯಣ್ಣಂಗೂ ಅರಿಡಿಯಡ!!
ಎಲ್ಲಿ ನೋಡಿರೂ ಅಡಿಗೆ ಸತ್ಯಣ್ಣ ಕಪ್ಪು ಬಿಳುಪು ರೇಖಾಚಿತ್ರ ಕಾಣುತ್ತಟ್ಟೆ ಹೊರತು ಒಂದಿಕ್ಕೆಯೂ ಕಲರ್ ಫಟ ಕಾಣುತ್ತಿಲ್ಲೆ
ಅಂದೊಂದು ಬೇಂಕು ಲೋನ್ ಅರ್ಜಿ ಹಾಕಲೆ ನೀಲಿ ಅಂಗಿಲಿ ತೆಗದ ಪಟವೂ ಅಡಿಗೆ ಸತ್ಯಣ್ಣನ ಕೈಲಿ ಒಂದೂ ಇಲ್ಲೆಡ!
ಹೀಂಗೇ ಮನ್ನೆ ಒಂದು ಅನುಪ್ಪತ್ಯಲ್ಲಿ ಅಡಿಗೆ ಸತ್ಯಣ್ಣನತ್ರೆ ಮಾತ್ನಾಡಿಗೊಂಡಿದ್ದ ಭಾವಯ್ಯ ಒಬ್ಬ ಕೇಟ- “ಅಪ್ಪೋ ಸತ್ಯಣ್ಣ, ಎಲ್ಲಿ ನೋಡಿರೂ ನಿನ್ನ ಕಲರ್ ಪಟ ಏಕೆ ಇಲ್ಲದ್ದು?”
ಸತ್ಯಣ್ಣ ಹೇದ – “ಎಂಗೊ ಇದಾ ಒಲೆ ಬುಡಲ್ಲಿ ಕೆಲಸ ಮಾಡ್ತೋರು. ನಿಂಗೊ ಹೇಂಗೆ ತೆಗದರೂ, ಕೆಮರಂದ ಎಷ್ಟು ಪ್ರಕಾಶ ಹಾಕಿರೂ  ಎಂಗಳದ್ದು ಹೀಂಗೇ ಬಕ್ಕಟ್ಟೆ” 😀
~~
2.
ಅನುಪ್ಪತ್ಯ ಮಾಡ್ಸು ಹೇದರೆ, ಅನುಪ್ಪತ್ಯಕ್ಕೆ ಹೋವ್ಸು ಹೇದರೆ ಅಂತೇ ಆವ್ತಿಲ್ಲೆ. ಜವಾಬ್ದಾರಿಕೆ, ಹೆದರಿಕೆ, ಸುದರಿಕೆ ಎಲ್ಲವೂ ಆಗ್ಯೊಳ್ಳೆಕು.
ಮನೆಯೆಜಮಾನಂದ ತೊಡಗಿ ಅಡಿಗೆ ಸತ್ಯಣ್ಣನನ್ನೂ ಸೇರ್ಸಿ ಅಪರೂಪಲ್ಲಿ ಬೈಲಿಲ್ಲಿ ಕಾಂಬ ಪೆಂಗಣ್ಣನವರೇಂಗೆ ಇದು ತಲೆಬೆಶಿಯೇ..
ಚಂದಕೆ ಸುದರಿಕೆ ಅಪ್ಪದು ಇರಳಿ, ಅದರೊಟ್ಟಿಂಗೆ ಲಪಟಯಾಯ್ಸುವವೂ ಕೆಲವು ದಿಕ್ಕೆ ಬತ್ತವದ. ಆರ ಹೇಳುಸ್ಸು ಆರ ದೂರುಸ್ಸು. ಬಂದ ಮತ್ತೆ ಬರೆಡ ಹೇಳ್ಳೆಡಿಗೋ.. ನಮ್ಮ ಜಾಗ್ರತೆ ನಾವು ಮಾಡೆಕು.
ಬೇಗು ಚೀಲಂದ ಹಿಡುದು ಹಸೆ ವಸ್ತ್ರ ಬೆಲ್ಲ ಸಕ್ಕರೆ ,ಬೇಳೆ, ಕಾಲಿಂಗಾಕುತ್ತ ಚೆರ್ಪಿನವರೇಂಗೂ ಕಾಣೆ ಅಪ್ಪದಿದ್ದು..1070105_337852496346404_1008803229_n
ಮನ್ನೆ ಒಂದಿಕ್ಕೆ ಅನುಪ್ಪತ್ಯಕ್ಕೆ ಹೋದಲ್ಲಿ ಅಡಿಗೆ ಸತ್ಯಣ್ಣಂಗೂ ಇದೇ ಆದ್ದು ಕತೆ..
ಒಂದೊಲೆಲಿ ಅಶನದ ಕೊಪ್ಪರಿಗೆ, ಮತ್ತೆರಡು ಒಲೆಲಿ ಬೆಂದಿಬಾಗ, ಮತ್ತೆರಡು ಒಲೆಲಿ ತಾಳು… –  ಹೀಂಗೆ ಒಟ್ಟೊಟ್ಟಿಂಗೆ ಬೇಯ್ತಾ ಇತ್ತು. ಒಂದೊಲೆಲಿ ಬೆಶಿನೀರ ಹಂಡೆದೇ – ಆರರು ರಪಕ್ಕ ಚಾಯ ಆಗ್ಬೇಕು ಹೇಳಿರೆ ಬೇಕನ್ನೇ..
ಅಟ್ಟಪ್ಪಗ ಅದಾ.. ಅಡಿಗೆ ಸತ್ಯಣ್ಣನ ಮೊಬೈಲು ಕೂಗಿತ್ತು..
ಮಾರಾಪಿನೊಳ ಅಂಗಿಕಿಸೆಯೊಳಂದ ಕೈ ತುರ್ಕಿಸಿ ತೆಗೆದು ಮಾತಾಡಿದ ಸತ್ಯಣ್ಣ…
ಅಕೇರಿಗೆ ಸತ್ಯಣ್ಣ ಹೇಳೋದು ಕೇಳಿತ್ತು – “ಆತಾತು, ಆನು ಮನಗೆ ಹೋಯ್ಕಿ ಫೋನು ಮಾಡುತ್ತೆ, ಇದರ್ಲಿ ಈಗ 85 ರುಪಾಯಿ ಅಷ್ಟೇ ಇದ್ದು”
ಅಕೇರಿಯಾಣ ಸಣ್ಣ ಒಲೆಲಿ ಮಡಿಗಿದ ಹಾಲು ಕೊದುದು ಉಕ್ಕಲಾದ್ದು ಕಂಡತ್ತು ಸತ್ಯಣ್ಣಂಗೆ.
ಕೈಲಿ ಇದ್ದ ಮೊಬೈಲು ಅಲ್ಲೆ ಕರೇಲಿ ದೂಡಿಕ್ಕಿ ಕೈ ಕೀತಲೆ ತೆಕ್ಕೊಂಡು ಅದರ ಇಳುಗಲೆ ಅತ್ತೆ ಹೋದ ಅಡಿಗೆ ಸತ್ಯಣ್ಣ ಮತ್ತೆಂತಕೋ ಆಚ ಸೌಟು ಈಚ ಕೈಮರಿಗೆ ತೆಕ್ಕೊಂಡು ಕೆಲಸಕ್ಕೆ ಇಳುದ°
ಅಡಿಗೆ ಕೊಟ್ಟಗೆ ಕರೇಲಿ ಆಗಂದಲೇ ಓಂಗ್ಯೊಂಡಿದ್ದ, ಕಾಂಬಲೆ ಶ್ಯಾಮಣ್ಣನ ನಾಣಿ ಹಾಂಗೇ ಕಾಂಬ, ನಾಕಲ್ಲು ಹೆರ, ಗೂನಿನಾಂಗೆ ಬೆನ್ನು, ಕರಿಮಾಣಿಗೆ ಸತ್ಯಣ್ಣ ಮಾತಾಡ್ತದೆಲ್ಲ ಕೇಟಿದು..
ಸತ್ಯಣ್ಣ ಆಚಿಗೆ ಹೋಪದೆ ಈಚಿಗೆಂದ ಅದೇಂಗೆ ಬಾಕಿದ್ದೋರ ಕಣ್ಣು ತಪ್ಪಿಸಿದನೋ – ಆ ಮೊಬೈಲ್ ಅತ್ತೆ ರಟ್ಟುಸಿದ°..
ಸೀದ ತೋಟಕ್ಕೆ ಹೋಗಿ.. ಅದರ ಹಿಂದಿಕಾಣ ಮುಚ್ಚಳ ಬಲುಗಿ ತೆಗದ, ಬೆಟ್ರಿ ಪೀಂಕಿಸಿದ… “ಛೇ, ಸತ್ಯಣ್ಣ ಹೇಳಿದ ಆ 85 ರೂಪಾಯಿ ಎಲ್ಲಿ ಮಡಿಗಿದ್ದ, ಕಾಣುತ್ತೇ ಇಲ್ಲೆ!.
ಇದಾಗ ಪಂಚಾತಿಗೆ ಹೇದ ಮಾಣಿ ಮೊಬೈಲ ಅಲ್ಲಿ ನೆಲಕ್ಕಲಿ ಮಡುಗಿ ಒಂದ ಕಲ್ಲ ತೆಗದು ಡಮಾಲನೆ ಹೆಟ್ಟಿದ. ಮೊಬೈಲು ಅತ್ತೆ ಬಾಗ ಬಾಗ ಆತು. 85ರೂಪಾಯಿ ಹೇಳಿದ್ದದು ಕಂಡತ್ತೇ ಇಲ್ಲೆ ಕರಿಮಾಣಿಗೆ.
ಚೇ.. ಇದು ದಂಡ ಆತು ಅಲ್ಲೇ ಮಡಿಗಿಕ್ಕುತ್ತೆ ಹೇದು ಕಿಸೆಲಿ ತುಂಬಿಸ್ಯೊಂಡು ಅಡಿಗೆ ಕೊಟ್ಟಗ್ಗೆ ಬಪ್ಪಗ, ಸತ್ಯಣ್ಣ ಮೊಬೈಲು ಕಾಣುತ್ತಿಲ್ಲೇದು ಹುಡ್ಕುತ್ತಾ ಇದ್ದ°
ನೊಂಪಣ್ಣ ಈ ಕರಿ ಮಾಣಿ – “ಇದಾ.., ಇದುವೋ ಹೇದು ಹೊಡಿ ಹೊಡಿ ಮೊಬೈಲಿ ಕಿಸೆಂದ ಬಾಚಿ ಅಲ್ಲಿ ಮಡಿಗಿದ”  😀
~~
3
ಅಡಿಗೆ ಸತ್ಯಣ್ಣನ ಕೈಗೆ ಮೊಬೈಲು ಬಂದಮತ್ತೆ ಮಾನಡ್ಕ ಬಾವನೂ ಅಡಿಗೆ ಸತ್ಯಣ್ಣನೂ ಹತ್ರಾಣ ದೋಸ್ತಿಗೊ ಆಗಿಬಿಟ್ಟವು..
ಅದೇಂಗೆ ಕೇಳಿರೆ ಫೋನಿಲ್ಲಿ ಮಾತಾಡಿಗೊಂಡು ಅಲ್ಲ ಮೆಸೇಜು ಕಳ್ಸಿಗೊಂಡು. ಇದ್ದನ್ನೇ ಪ್ರೀ ಮೆಸೇಜು ಓ ಇಂತಿಷ್ಟು..
ಸುಪ್ರಭಾತಂದ ಹಿಡುದು ಶುಭರಾತ್ರಿ ವರೇಂಗೂ ಅವಕ್ಕೆ ಅದರ್ಲಿ ಸುದರಿಕೆ ಆಗ್ಯೊಂಡಿತ್ತಿದ್ದು..
ಮಾನಡ್ಕ ಬಾವಂಗೆ ಒಂದಿನ ಎಲ್ಯೋ ದೂರಂಗೆ ಹೋಯೇಕ್ಕಾತು, ಇರುಳಲ್ಯೇ ಬಾಕಿ..
ಮೆಸೇಜು ಕಳ್ಸಲೆ ಎಂತ ಶುದ್ದಿಯೂ ಇಲ್ಲೆ, ಅಂದರೆ ಕೈ ಸುಮ್ಮನೆ ಕೂರ್ತಿಲ್ಲೆ. ಸುರುಮಾಡಿದ-  “ಸುಕ್ರುಂಡೆ ತಿಂದೆ, ನೀರು ಕುಡುದೆ..”
ಸತ್ಯಣ್ಣಂಗೆ ಅನುಪ್ಪತ್ಯದ ತೆರಕ್ಕಿಲ್ಲಿ ನೇರ್ಪ ಒರಕ್ಕಿಲ್ಲದ್ದೆ ದಿನ ನಾಕಾತು. ಸತ್ಯಣ್ಣ ಕಳ್ಸಿದ – “ಬೇಗ ಒರಗು, ನಾಳಂಗೆ ಬೇಗ ಎದ್ದು ಸುರುಮಾಡ್ಳಕ್ಕು”    😀
~~
4.
ಅಡಿಗೆ ಸತ್ಯಣ್ಣಂಗೆ ಆಟಿ ತಿಂಗಳಲ್ಲಿ ಪುರುಸೊತ್ತು..
ಪುರುಸೊತ್ತು ಇದ್ದ ದಿನ ಮನೇಲಿ ಏನಾರು ಚಿಲ್ಲರೆ ಕೆಲಸಂಗಳ ಮಾಡಿಗೊಂಬದು.. ಮಳೆ ಆದಕಾರಣ ಪೇಟಗೆ ಬನ್ಸ್ ತಿಂಬಲೆ ಹೋಪಲೆ ಇಲ್ಲೆ
ಅನುಪ್ಪತ್ಯ ಇಲ್ಲದ್ರೂ ಫೋನು ಬಪ್ಪಲಾಗ ಹೇದು ಏನೂ ಇಲ್ಲೆನ್ನೆ. ಗುರ್ತದೋರು, ನೆಂಟ್ರು, ಇಷ್ಟರು ಹೇದು ಒಬ್ಬೊಬ್ಬ ಫೋನ್ ಮಾಡ್ತವು .., ಒಟ್ಟಿಂಗೆ ರಾಂಗ್ ಕಾಲೂ, ಮಿಸ್ ಕಾಲು
ಅಟ್ಟಪ್ಪಗ ಬಂತದಾ ಒಂದು ಫೋನು..
ಆಚಿಗಂದ ಸರವು ಬಾವ ಮಾತಾಡ್ತದು ಹೇಳಿದ° ಆದರೂ..,  ಅದು ಬೆತ್ತಸರವು ಬಾವನ ಸೊರದ ಹಾಂಗೆ ಕೇಟತ್ತು ಸತ್ಯಣ್ಣಂಗೆ
“ಉದಿಯಪ್ಪಗ ಉದ್ದಿನ ಕೊಟ್ಟಿಗೆ ಮಾಡಿದ್ದದು ಮನೇಲಿ, ಅಕ್ಕಿ ಗುಣವೋ, ಉದ್ದಿನಗುಣವೋ ಅರಡಿತ್ತಿಲ್ಲೆ ಸತ್ಯಣ್ಣ, ಗಟ್ಟಿ ಗಟ್ಟಿ ಆಯ್ದು. ಹಾಂಗೇ ತಿಂಬಲೆ ಲಾಯಕ ಆವುತ್ತಿಲ್ಲೆ. ಎಂತ ಮಾಡ್ಳಕ್ಕು ಉಳುದ್ದರ”?!
“ಕೊಟ್ಟಿಗೆ ಹೊಡಿಮಾಡಿ ನೀರುಳ್ಳಿ, ಬೇಕಾರೆ ಟೊಮೆಟೋ, ಹಸಿಮೆಣಸು, ಕೊತ್ತಂಬರಿ ಸೊಪ್ಪು, ಬೇವಿನಸೊಪ್ಪು ಹಾಕು ಒಗ್ಗರ್ಸು ಮಾರಾಯ. ಕೊದಿಲಿನೊಟ್ಟಿಂಗೂ ಆವ್ತು, ಮೊಸರು ಮಜ್ಜಿಗೆ ಒಟ್ಟಿಂಗೂ ಆವ್ತು” – ಸತ್ಯಣ್ಣ ಹೇದಪ್ಪಗ ಆಚಿಗಂದ ಆತಾತು ಹೇದು ಫೋನ ಬಿಟ್ಟವು
ಅಡಿಗೆ ಸತ್ಯಣ್ಣ ರಂಗಣ್ಣಂಗೆ ಹೇದ° – ಇದಾ ಮಾರಾಯ, ನವಗೆ ಈ ಅಡಿಗ್ಗೆ ಹೋವ್ಸರ ಬಿಟ್ಟಿಕ್ಕಿ ಪೇಟೆಲಿ ಡಾಕ್ಟ್ರು ಜೀಕೆಮಾವನ ಹಾಂಗೆ ‘ಅಡಿಗೆ ಸತ್ಯಣ್ಣ’ ಹೇದು ಒಂದು ಅಡಿಗೆ ಕ್ಲಿನಿಕ್ಕು ಮಾಡಿರೆ ಎಂತ?! , ಕೆಂಪು ಅಂಬಾಸಿಡರ ಕಾರು ಬೇಗ ತೆಗದಿಕ್ಕಲೆ ಎಡಿಯದ! 😀
~~
5.
ಅಡಿಗೆ ಸತ್ಯಣ್ಣ UKಗೆ ಹೋದ್ದು ಗುಟ್ಟಿನ ಶುದ್ದಿ ಏನೂ ಅಲ್ಲ
ಹೋದಲ್ಲಿ ಕೆಲವು ಶುದ್ದಿಗೊ ನಡದ್ದದು ಮಾತ್ರ ಗುಟ್ಟಾಗಿಯೇ ಕೆಲವು ಇದ್ದು
ಹಾಂಗೇಳಿ ಅದು ಗುಟ್ಟಾಗಿಯೇ ಇರೇಕು ಹೇದೇನೂ ಅಡಿಗೆ ಸತ್ಯಣ್ಣಂಗೂ ಇಲ್ಲೆ..
UKಗೆ ಹೋದ ಅಡಿಗೆ ಸತ್ಯಣ್ಣ ಅಲ್ಲಿ ಜಿಲೇಬಿಯನ್ನೂ ಮಾಡಿದ್ದ ಬಾಕಿ ಒಟ್ಟಿಂಗೆ
ಜಿಲೇಬಿಯ ತಿಂದ ಅಲ್ಯಾಣ ಒಂದು ಮನುಷ್ಯ° ಅಡಿಗೆ ಸತ್ಯಣ್ಣನತ್ರೆ ಬಂದು – “ನಿಂಗಳ ಜಿಲೇಬಿ ಮಾಡ್ತ ಮೆಶಿನು ಎನಗೆ ಕೊಡುವಿರೋ” ಹೇದು ಕೇಟತ್ತು.
ಅಡಿಗೆ ಸತ್ಯಣ್ಣಂಗೆ ಈ ಜಿಲೇಬಿ ಬೆಶಿನು ಕೊಟ್ರೆ ಸ್ವಂತಕ್ಕೆ ಬೇರೆ ಮೆಶಿನು ಸ್ವತಃ ಮಾಡ್ಳೆ ಎಡಿಗು, ಹೊಸತ್ತು ಪೇಟೆಂದ ಹೋಗಿ ತರೆಕ್ಕಾದ್ದೇನಿಲ್ಲೆ.
ಆದರೆ ಅಲ್ಯಾಣೋರಿಂಗೆ ಈ ನಮೂನೆದೆಲ್ಲ ಅರಡಿಯಾ ಇದಾ
ಅಡಿಗೆ ಸತ್ಯಣ್ಣ ಹೇದ° – ಇದು ಸಾಮಾನ್ಯ ಎಲ್ಲ ದಿಕ್ಕೆ ಸಿಕ್ಕ. ಇದಾನು ಊರಿಂದ ಬಪ್ಪಗ ತಂದದು. ಇದಕ್ಕೆ 80 ಪೌಂಡು ಆವ್ತು ಇಲ್ಲಿಗಂಗಪ್ಪಗ..
ಅಲ್ಯಾಣ ಮನುಷ್ಯ ಹೇಳಿತ್ತು – ಓಹ್ ಅಷ್ಟೇಯೋ, ಬರೇ 80ಪೌಂಡೋ!, ಆನು 90ಪೌಂಡು ಬೇಕಾರು ಕೊಡ್ವೆ, ಕೊಟ್ಟಿಕ್ಕಿ ಎನಗೇ.
ಸತ್ಯಣ್ಣ ಇನ್ನೆಂತರ ಹೇಳುಸ್ಸು. ಮಾರಾಪಿಲಿದ್ದ ಒಟ್ಟೆ ಕರಟ ತೆಗದು ಅದರ ಕೈಲಿ ಮಡಿಗಿದ, 90 ಪೌಂಡು ಕಿಸಕೆ ತುರ್ಕಿಸಿದ  😀
~~
6.
ಅಡಿಗೆ ಸತ್ಯಣ್ಣಂಗೆ ಬರೇ ಕುಂಬ್ಳೆ ಪಂಜ ಪುತ್ತೂರ ಹೊಡೆಲಿ ಮಾಂತ್ರ ಅಲ್ಲ ಕೆಲಸ
ಬೈಲ ನೆಂಟ್ರುಗೊ ಎಲ್ಲಿಲ್ಲಿ ಇದ್ದವೋ ಅಲ್ಲಿಂದೆಲ್ಲ ಅನುಪ್ಪತ್ಯಕ್ಕೆ ಅಡಿಗ್ಗೆ ಹೋಪಲೆ.
ಬೆಂಗ್ಳೂರ್ಲಿಪ್ಪ ಪಾರು ಅತ್ತೆ ಮನೆಗೂ ಹೋಯೇಕ್ಕಾವ್ತು, ತೆಂಕ್ಲಾಗಿಪ್ಪ ಪಾರು ಅತ್ತೆ ತಮ್ಮಂದ್ರಲ್ಲಿಗೂ ಹೋಯೇಕ್ಕಾವ್ತು ಅನುಪ್ಪತ್ಯದಡಿಗ್ಗೆ ಅಡಿಗೆ ಸತ್ಯಣ್ಣ
ಹಾಂಗೆ ಕಳುದ ಸರ್ತಿ ತೆಂಕ್ಲಾಗಿ ಹೋದ್ದರ್ಲಿ ಅಡಿಗೆ ಸತ್ಯಣ್ಣ ಪಟ್ಟಾಂಬಿಂದ ಒಂದು ತೋಟ್ರೆ ಪೀಶತ್ತಿ ತಂದಿತ್ತಿದ್ದ, ಶುಂಠಿ ಹಸಿಮೆಣಸು ಕೊರವಲೋ, ಟೊಮೆಟೋ ಕೊರವಲೋ ಆತು.,  ಅಲ್ಲದ್ರೆ, ಸುಭಗಣ್ಣನೋ, ಮಾಸ್ಟ್ರು ಮಾವನೋ ಸಿಕ್ಕಿರೆ ಅಡಕ್ಕೆ ಹೋಳುಮಾಡ್ಳೂ ಆವ್ತು.
ತೋಟ್ರೆ ಪೀಶತ್ತಿ ಹೇಳಿರೆ ಬರೇ ಸಣ್ಣದಲ್ಲ. 10 ನಂಬ್ರದ್ದು. ಈಗದಕ್ಕೆ ರುಪಾಯಿ 700ಕೊಟ್ರೂ ಸಿಕ್ಕುತ್ತೋ ಇಲ್ಯೋ!
ಅನುಪ್ಪತ್ಯಕ್ಕೆ ಬಂದ ಬಾವಯ್ಯ ಒಬ್ಬಂಗೆ ಅಡಿಗೆ ಸತ್ಯಣ್ಣನ ಪೀಶತ್ತಿ ಮೇಗೆಯೇ ಕಣ್ಣು ಬಿದ್ದತ್ತು. ಹೇಂಗಾರು ಮಾಡಿ ಇಂದದರ ತನಗೆ ಗಿಟ್ಟಿಸಿಕೊಳ್ಳೆಕು ಹೇದು ಏವ್ರ ಸುರುವಾತು ಭಾವಯ್ಯಂಗೆ..
ಜೆಂಬ್ರಕ್ಕೆ ಬಂದೋನು ಅಡಿಗೆ ಕೊಟ್ಟಗೆಲಿಯೇ ಸೊಣಕ್ಕೊಂಡಿತ್ತಿದ್ದ ಸತ್ಯಣ್ಣನತ್ರೆ ಮಾತಾಡಿಗೊಂಡು, ಬೇಡದ್ದ ಕವಂಗ, ತಪ್ಪಲೆಯನ್ನೂ ನೆಗ್ಗಿ ನೆಗ್ಗಿ ಕೊಟ್ಟು ಉಪಕಾರ ಮಾಡಿಗೊಂಡು ..
ಸತ್ಯಣ್ಣನತ್ರೇ ಕೂದು ಮಾತಾಡಿಗೊಂಡು ಊಟ ಆತು.., ಊಟಾಗಿಕ್ಕಿ ಕೈ ತೊಳದಾತು
ಸತ್ಯಣ್ಣನ ಬೆನ್ನಾರೆ ಬಂದ ಭಾವಯ್ಯ ಸತ್ಯಣ್ಣನತ್ರೆ ಹೇದಾ° – “ಭಾವಯ್ಯ ನವಗಿಷ್ಟು ಇಂದು ಪರಿಚಯ ಆತು. ನಮ್ಮ ಸ್ನೇಹಾಚಾರ ಹೀಂಗೇ ಏವತ್ತೂ ಒಳಿಯೆಕು. ಹಾಂಗಾಗಿ ನಿಂಗಳ ಆ ಪೀಶತ್ತಿ ಎನ ಕೊಡುವಿರೋ. ಆ ಪೀಶತ್ತಿ ನೋಡ್ವಾಗೆಲ್ಲ ನಿಂಗಳ ನೆಂಪಕ್ಕಿದಾ”!
ಸತ್ಯಣ್ಣ° ಹೇದಾ° – “ಅಪ್ಪು ಭಾವ, ನೆಂಪು ಇಬ್ರಿಂಗೂ ಒಳಿಯೆಕು. ಈಗ ಪೀಶತ್ತಿ ನಿಂಗಳೈಲಿ ಕೊಟ್ರೆ ನಿಂಗೊಗೆ ಮಾತ್ರ ನೆಂಪು ಒಳಿಗಷ್ಟೇ. ಎನ್ನೈಲಿ ಇಲ್ಲದ್ದ ಮತ್ತೆ ಮರದಿಕ್ಕುಗು. ಹಾಂಗಾಗಿ ಈ ಪೀಶತ್ತಿ ಎನ್ನೈಲಿಯೇ ಇರಳಿ. ಎನ ಇದ ನೋಡಿಯಪ್ಪಗೆಲ್ಲಾ ನಿಂಗಳ ನೆಂಪಕ್ಕು, ನಿಂಗೊಗೆ ಪೀಶತ್ತಿ ನೆಂಪಪ್ಪಗೆಲ್ಲ ಎನ್ನ ನೆಂಪಕ್ಕು. ಹೇಂಗೇ? !!  😀
~~
7.
ಸತ್ಯಣ್ಣಂಗೆ ಆಟದ ಮರ್ಲು ರಜ್ಜ ಕಮ್ಮಿಯೇ ಹೇಳ್ಳಕ್ಕು.
ಎಲ್ಲಿಯಾದರು ಹತ್ತರೆ ಆಟ ಇದ್ದರೆ, ರಂಗಣ್ಣ ಗಾಳಿ ಹಾಕಿರೆ ಹೋಪದಿದ್ದು, ಆದರೂ ನಡಿರ್ಳಿಂಗಪ್ಪಗ ಮನೆಗೆ ಬಂದು ಸ್ವಸ್ತ ಮನುಗುದೆ.
ಹಾಂಗೇಳಿ ಸಣ್ಣಗಿಪ್ಪಗ ಅವಂಗೆ ಒಳ್ಳೆತ ಮರ್ಳು ಇದ್ದತ್ತು ಆಟದ್ದು, ವೇಷ ಹಾಕುವ ಕ್ರಮವೂ ಇದ್ದತ್ತು ಸತ್ಯಣ್ಣಂಗೆ.
ಒಂದರಿ, ಪೆರ್ಲಲ್ಲಿ ಶಾಲೆಲಿ, ವಾರ್ಷಿಕೋತ್ಸವ. ಮಕ್ಕಳ ಯಕ್ಷಗಾನ ಮಾಡೊದು ಹೇಳಿ ಮಾಟ್ರಕ್ಕೊ ನಿಘಂಟು ಮಾಡಿದವು.
ಆತು, ಪ್ರಸಂಗ ಯೇವುದು, ಪಾತ್ರಧಾರಿಗೋ ಆರೆಲ್ಲ ಹೇಳಿ ಚರ್ಚೆಯೂ ನಡದತ್ತು. ಅಕೇರಿಗೆ ” ದುಶ್ಯಾಸನ ವಧೆ” ಪ್ರಸಂಗ ಅಕ್ಕು ಹೇಳಿ ಆತು.
ಸರಿ ಭೀಮನ ಪಾತ್ರಕ್ಕೆ ಹತ್ತನೇ ಕ್ಲಾಸಿನ ಶಂಭುವೇ ಸೂಕ್ತ ಹೇಳಿ ಒಕ್ಕೊರಲಿನ ಅಭಿಪ್ರಾಯವೂ ಬಂತು. ದುಶ್ಯಾಸನ ಆನು ಮಾಡ್ತೆ ಹೇಳಿ ನಮ್ಮ ಸತ್ಯಣ್ಣ ಉಮೇದು ತೋರ್ಸಿ ಮುಂದೆ ಬಂದ.
ಸರಿ ಹೇಳಿ ಮಾಟ್ರಕ್ಕೊ ಒಪ್ಪಿದವು. ಇನ್ನೆಂತರ, ಆಟದ ಪ್ರಾಕ್ಟೀಸು ಮುಗುಶಿ ಅಮೋಘ ಪ್ರದರ್ಶನದ ದಿನವೂ ಬಂತು..
ಶಂಭುವ ಭೀಮನ ಪಾತ್ರ ಭಯಂಕರ ರೈಸಿದ್ದತ್ತು. ದುಶ್ಯಾಸನನ ಯುದ್ದಲ್ಲಿ ಸೋಲುಸಿ ನೆಲಕ್ಕುರುಳಿಸಿ ಹೊಟ್ಟೆಲಿ ಬಜಕ್ಕನೆ ಕೂದ ಭೀಮ. ಕರುಳಿನ ಬಲುಗಿ ಬಲುಗಿ ಅದ್ಭುತ ಅಭಿನಯ ತೋರ್ಸಿದ ಶಂಭು.
ಕೆಳ ಮನಿಕ್ಕೊಂಡಿತ್ತ ದುಶ್ಯಾಸನ ರಜ್ಜ ಹೊತ್ತಿಲಿ “ಎನ್ನ ಹೊಟ್ಟೆಯ  ಅಮುಕ್ಕೆಡಾ  ಶಂಬೂ…ಅಮುಕ್ಕೆಡಾ..” ಹೇದು ಅರದ್ದಿದ ಸತ್ಯಣ್ಣ.
ಸಭೆಲಿಯೂ ಇದರ ಕೇಳಿ ಎಲ್ಲೋರ ನೆಗೆ.., ಭೀಮಂಗೆ ಇನ್ನೂ ಉಲ್ಲಾಸ ಏರಿತ್ತು…, ಮತ್ತೂ, ಮತ್ತೂ ಬಲುಗಿ ಹಾಕಿದ. ಆಟ ಭಯಂಕರ ರೈಸಿತ್ತು.
ಸತ್ಯಣ್ಣಂಗೆ ಮತ್ತೆ ಒಂದು ವಾರ ಜ್ವರ.. ಶಾಲೆಗೆ ರಜೆ. ಅಂದಿಂದ ಮುಂದೆ ಸ್ಟೇಜು ಬಿಡಿ., ಚೌಕಿ ಹತ್ರಂಗೂ ಅಣದ್ದನಿಲ್ಲೆ 😀
~~
8.
ಈ ವೊರಿಶ ನಮ್ಮ ಗುರುಗಳ ಚಾತುರ್ಮಾಸ್ಯ – ಮಾಣಿಮಠಲ್ಲಿ ,  ಸತ್ಯಣ್ಣಂಗೂ ಗೊಂತಿದ್ದು..
ಗುರುಕೃಪೆಂದ ಭಾರೀ ವಿಶೇಷ ಕೆಲಸಂಗೊ, ಅಭಿವೃದ್ಧಿಗೊ ಅಲ್ಲಿ ಆಯ್ದು – ಸತ್ಯಣ್ಣಂಗೂ ಗೊಂತಿದ್ದು..
ಹೋಪೋರು ಅವರವರ ವಲಯ ಭಿಕ್ಷೆ ದಿನವೇ ಹೋಯೇಕು ಹೇದು ಏನೂ ಇಲ್ಲೆ, ಎಲ್ಲ ದಿನವೂ ಅಲ್ಲಿಗೆ ಹೋಪಲಕ್ಕು, ಅಲ್ಲಿ ಸೇವೆ ಮಾಡ್ಳಕ್ಕು..
ಒಬ್ಬನೇ ಹೋವ್ಸು ಬೇಡ, ಮನೆಯೋರನ್ನೂ ಕರ್ಕೊಂಡು ಹೋಯೇಕು ನಮ್ಮೂರ್ಲೇ ಆದಕಾರಣ – ಸತ್ಯಣ್ಣನ ಆಲೋಚನೆ.
ಮನೆಯೋರಿಂಗೆ ದಿನ ಒದಗಿ ಸಿಕ್ಕೆಕ್ಕನ್ನೆ – ಸತ್ಯಣ್ಣ ಕಾದೊಂಡಿದ್ದ.
ದಿನಕ್ಕೊಂದು ವಿಶೇಷ ಕಾರ್ಯಕ್ರಮಂಗೊ –  ಸತ್ಯಣ್ಣನೂ ನೋಡಿಗೊಂಡಿದ್ದ ಮೋರೆಪುಟಲ್ಲಿ
ಶನಿವಾರ ‘ವೈದಿಕ ಸಮಾವೇಶ’ ಹೇಳಿ ಕಂಡತ್ತು ಒಂದಿಕ್ಕೆ
ಅಂದೊಂದರಿ … ಬೆಂಗ್ಳೂರು ಬಸ್ಸಿಲ್ಲಿ ಕಂಡೆಟ್ರನತ್ರೆ “ಅಡಿಗೆಯೋರ ಸೀಟು ಎಲ್ಲ್ಯುಂಟು?”  ಹೇದು ಕೇಟ ಸತ್ಯಣ್ಣ ಹುಡ್ಕಲೆ ಸುರುಮಾಡಿದ° –  ಗುರಿಕ್ಕಾರಕ್ಕಳ ಸಮಾವೇಶ, ವೈದಿಕ ಸಮಾವೇಶ ಹೇದೆಲ್ಲ ಇದ್ದನ್ನೇ…, ‘ಅಡಿಗೆಯೋರ ಸಮಾವೇಶ’ ಹೇದೂ ಕೆಳ ಎಲ್ಯಾರು ಇಕ್ಕೋ?!   😀
~~ 
9.
ಕೋಳ್ಯೂರು ಬಾವಂಗೂ ಅಡಿಗೆ ಸತ್ಯಣ್ಣಂಗೂ ಮದಲಿಂದಲೇ ಚಂಙಾಯಿಪ್ಪಾಡು..
ಬರೇ ಎದುರೆ ಕಂಡಿಪ್ಪಗ ಮಾತ್ರ ಅಲ್ಲ , ಮೋರೆಪುಟಲ್ಲಿಯೂ ಇದ್ದು, ಫೋನಿಲ್ಲಿಯೂ ಇದ್ದು, ಮೆಸೇಜಿಲ್ಲಿಯೂ ಇದ್ದು
ಸತ್ಯಣ್ಣ ಇರುಳು ಒರಗುದು ಎಟ್ಟೆಟ್ಟೋ ಹೊತ್ತಿಂಗೆ, ಕೋಳ್ಯೂರು ಬಾವ ಒರಗುತ್ತದೂ ನೆಡು ಇರುಳು ಕಳುದ ಮತ್ತೆಯೇ
ಒಂದಿನ ಕೋಳ್ಯೂರ ಬಾವ ನೆಡು ಇರುಳು ಕಳುದು ಎರಡು ಗಂಟೆ ಕಳುದಪ್ಪಗ ಬಚ್ಚಂಗಾಯಿ ಕೊರದು ತಿಂದಿಕ್ಕಿ, ಸತ್ಯಣ್ಣ ಹೇಂಗೂ ಒರಗಿಕ್ಕು ಈಗ ಹೇದು ಗ್ರೇಶ್ಯೊಂಡು, ಸತ್ಯಣ್ಣನ ಕೆಣಕ್ಕಲೆ ಹೇದು ಮೊಬೈಲಿಲಿ ಮೆಸೇಜು ಕಳ್ಸಿದ – “ನಿಂಗೊ ಎಂತ ಬೇಕಾರು ಮಾಡ್ಯೊಂಡಿರಿ, ಆನಿಲ್ಲಿ ಬಚ್ಚಂಗಾಯಿ ಕೊರದು ತಿಂತಾ ಇದ್ದೆ”
ಸತ್ಯಣ್ಣ ಎಂತ ಚಿಲ್ಲರೆಯೋ, ಇನ್ನೂ ಹೋಳಿಗೆ ಬೇಶಿ ಮುಗುದ್ದಿಲ್ಲೆ… , ಕೂಡ್ಳೆ ಉತ್ತರ ಕೊಟ್ಟ°“ಇರುಳು ಬಚ್ಚಂಗಾಯಿ ತಿಂದು ಮನಿಗಿದವ ಇರುಳೆದ್ದು ಉಚ್ಚು ಹೊಯ್ಯಲೇ ಬೇಕು” 😀 
~~
 

 ***  😀 😀 😀  ***

9 thoughts on “‘ಅಡಿಗೆ ಸತ್ಯಣ್ಣ’ ಜೋಕುಗೊ – ಭಾಗ 24

  1. ಹಹ್ಹಹ್ಹಾ.. ಎನಗೆ ಓದಿ ನೆಗೆ ತಡೆಯಪ್ಪಾ…

  2. {ಮಾರಾಪಿಲಿದ್ದ ಒಟ್ಟೆ ಕರಟ ತೆಗದು ಅದರ ಕೈಲಿ ಮಡಿಗಿದ, 90 ಪೌಂಡು ಕಿಸಕೆ ತುರ್ಕಿಸಿದ…}
    ಅದು ಸೂ…..ಪರು ಆಯಿದು…. 😀 ಸತ್ಯಣ್ಣ ನಿಜವಾಗಿ business man ಆಗಿರೆಕ್ಕಿತ್ತು… 😉

  3. ಯಾವತ್ತಿನಂತೆ ಬಾರಿ ರೈಸಿದ್ದು ಬೈಲಿಲಿ .ನವಗೆ ಉದಿಯಪ್ಪಂದ ಸತ್ಯಣ್ಣನ ಕಾವದೆ ಕೆಲಸ ಯಾವಗ ಬತ್ತವಪ್ಪ ಹೇಳಿ…………

  4. ಜಿಲೇಬಿ ತಿ೦ದ ಅಲ್ಯಾಣವನ ಮತ್ತು ಸತ್ಯಣ್ಣನ್ನ ಒಟ್ಟಿ೦ಗೆ ನಿ೦ದು ತೆಗೆದ,
    ಚಾ”ಯಚಿತ್ರ ಬ್ಲಾಕ್ ಅ೦ಡ್ ವೈ2 ಕಲರ್ಲಿ ಇದ್ದಿದ್ದರೆ
    ಇನ್ನು ಚೊಕ್ಕ ಆವುತ್ತಿತು.
    ಶ೦ಕರನ ಮಹಾಭಕ್ತ ಭೀಮಣ್ಣನ ರುದ್ರತೆಗೆ ,
    ಕೊನೇಲಿ ಅರೆದ್ದಿದ,
    ಶ೦ಭೋವೋ ಅಲ್ಲಾ ಶ೦ಕರನೋ
    ಆರೂ ಅಕ್ಕೂ, ಕಾಪಾಡೂ, ರೈಸಿದ್ದು.

  5. ಹಾಳೆದು ತಟ್ಟೆ,ಬಟ್ಳು ಮಾಡಿ ಎಕ್ಸ್ ಪೋರ್ಟ್ ಮಾಡ್ತವು, ಹಾಂಗೆ ಒಟ್ಟೆ ಕರಟಕ್ಕೂ ಡಿಮಾಂಡು ಇಕ್ಕೋ ಸತ್ಯಣ್ಣ.

  6. 1] ಒಲೆ ಬುಡಲ್ಲಿ ಕೆಲಸ ಮಾಡುವ ಸತ್ಯಣ್ನ ಇದ್ದಿಲು ಬಣ್ನ ಬಕ್ಕಸ್ಟೆ.
    ೨] ಅಡಿಗೆ ಕ್ಲಿನಿಕ್ ಯೋಜನೆ ಚ೦ದ ಇದ್ದು. ಕಾ೦ಪೌ೦ಡರ್ ಬೇಕಾಕ್ಕಾ>>??
    ೩] ಜಿಲೇಬಿ ಮಶೀನು ಒ೦ದು ಪೌ೦ಡು ಇದ್ದಿಕ್ಕಾ? [ ತೂಕ] ೯೦ ಪೌ೦ಡ್ ಪೀಕಿಸಿದ್ದಾ ಸತ್ಯಣ್ನ..
    ೪] ಅದೇ ಪೀಶತ್ತಿ ಲಿ ಭಾವಯ್ಯ೦ಗೆ ಒ೦ದು ಮಾರ್ಕು ಮಾಡಿ ಇಟ್ಟಿದ್ರೆ ನೆ೦ಪು ಸದಾ ಇರ್ತಿತ್ತು..
    ೫] ಭೀಮನ ಅಡಿಯಲ್ಲಿ ಬಿದ್ದ ಸತ್ಯಣ್ಣ ಭೀಮ೦ಗೆ ಕಚಗುಳಿ ಇಡಕ್ಕಿತ್ತು..
    ೬] ಮು೦ದಾಣ ಚಾತುರ್ಮಾಸ್ಯಕ್ಕೆ ಅಡುಗೆ ಸಮಾವೇಶ ಮಾಡುಲೆ ಎಡಿಗು ಸತ್ಯಣ್ಣ ಅಧ್ಯಕ್ಶ ಆಯೆಕ್ಕು ಅಸ್ಟೆ..

  7. ಸತ್ಯಣ್ಣ ಭಾರೀ ಉಶಾರಿದ್ದವು.. ಆ ಬೆಳಿ ಹೆಬಗನ ಹತ್ರಂದ ೯೦ ರೂಪಾಯಿ ಪೀ೦ಕ್ಸಿದ್ದು ಪಷ್ಟಾಯ್ದು.. ಅವು ಇಲ್ಲಿಂದಲೇ ಬಾಚಿದ್ದಲ್ದೋ..

    1. ಅದು ೯೦ ರೂಪಾಯಿ ಅಲ್ಲ ! ಒಂದು ಪೌಂಡ್ = ೧೦೨ ರುಪಾಯಿ. ಹಾಂಗಾಗಿ ೯೦ ಪೌಂಡ್ ಹೇಳಿರೆ ೯೦೦೦ ಚಿಲ್ಲರೆ ರೂಪಾಯಿ ಬೆಲೆ ಆ ಜಿಲೇಬಿ ಕರಟಕ್ಕೆ !!! ಸತ್ಯಣ್ಣ ಭಾರಿ ಉಶಾರು !

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×