Oppanna.com

ಚಿನ್ನದಂತಾ ದನಗೊ ಚಿನ್ನವನ್ನೇ ಕೊಡ್ತವಡ..!

ಬರದೋರು :   ಒಪ್ಪಣ್ಣ    on   01/07/2016    4 ಒಪ್ಪಂಗೊ

ತರವಾಡು ಮನೆಲಿ ಲಕ್ಷ್ಮೀ – ಹೇದು ಒಂದು ಗಡಸು ಇದ್ದತ್ತು.
ಆ ದನುವಿನ ರಂಗಮಾವ ಯೇವತ್ತೂ ಹೇಳುಗು. ಅದು ಹಟ್ಟಿಗೆ ಬಂದ ಮತ್ತೆಯೇ ಆ ಮನೆಲಿ ಸಂಪತ್ತು ತುಂಬಲೆ ಸುರು ಆದ್ಸಡ.
ಅದಕ್ಕೆ ಲಕ್ಷ್ಮಿ ಹೇದು ಹೆಸರು ಮಡಗಿದ್ದು ಸರೀ ಅನ್ವರ್ಥ ಆತು – ಹೇದು ಅಭಿಮಾನಲ್ಲಿ ಯೇವತ್ತೂ ಹೇಳುಗು.
~
ಯೇವ ದನುವೇ ಆದರೂ – ಮಾತೃಸ್ವರೂಪವೂ, ಲಕ್ಷ್ಮೀ ಸ್ವರೂಪವೂ ಆಗಿರ್ತು.
ಅದರ ಕೊಂಡಾಟ, ಪ್ರೀತಿ ನೋಡಿರೆ ಅಮ್ಮನೇ ಆಗಿರ್ತು.
ಹಾಂಗೇ – ಅದರಿಂದಪ್ಪ ವ್ಯಾವಹಾರಿಕ ಲಾಭವ ನೋಡಿರೆ ಅದು ಲಕ್ಷ್ಮಿಯೇ.

ಅಬ್ಬೆ ಹಾಲು ಕುಡಿಸ್ಸು ನಿಲ್ಲುಸಿದ ಮನುಶ್ಯರು ಮತ್ತೆ ಕುಡಿಸ್ಸು ಉಂಬೆ ಜಾಯಿಯೇ.
ಹಾಲು ಹೆಪ್ಪಾಕಿ ಮೊಸರು, ಮೊಸರು ಕಡದು ಮಜ್ಜಿಗೆ, ಅದರ ಮೇಗೆ ಬೆಣ್ಣೆ, ಬೆಣ್ಣೆ ಕಾಸಿರೆ ತುಪ್ಪ; ಇಷ್ಟೇ ಅಲ್ಲ – ಉತ್ತರ ಭಾರತದ ಹೊಡೆಲಿ ಗಿಣ್ಣು, ರಬ್ಡಿ – ಹೀಂಗಿರ್ಸು ಇನ್ನೂ ಹಲವು ಹಾಲಿನ ಉಪಯೋಗಂಗೊ ಇರ್ತು.
ಹಾಲು ಕೊಡುವಗ ಹಿಂಡಿ ಹಾಕೆಕ್ಕಾವುತ್ತು. ಆದರೆ ಹಿಂಡಿ ಕ್ರಯಂದ ಹೆಚ್ಚಿಗೆ ಬರೇ ತುಪ್ಪಲ್ಲಿಯೇ ಸಿಕ್ಕುಗು.
ಇದು ಕಂಜಿ ಹಾಕಿಪ್ಪಾಗ ಮಾಂತ್ರ ಹೇಳಿ ಆತು, ಅಂಬಗ ಬಾಕಿದ್ದ ಹೊತ್ತಿಂಗೆ?

ಬಾಕಿದ್ದ ಹೊತ್ತಿಂಗೂ ಸದಾ ಲಕ್ಷ್ಮಿ ಆಗಿರ್ತು. ಗೋಮೂತ್ರ-ಗೋಮಯ-ಗೊಬ್ಬರಲ್ಲಿ.
ಒಂದು ಕೃಶಿಭೂಮಿಯ ಫಲವತ್ತಾಗಿ ಒಳಿಶುವಲ್ಲಿ ಆ ಮನೆಯ ಹಟ್ಟಿದು ಪ್ರಧಾನ ಪಾತ್ರ.
ಮಕ್ಕೊಗೆ ಹಾಲು ಕುಡಿಶಿರೆ ಎಷ್ಟೂ ಸಂತೋಶ ಆವುತ್ತೋ – ಸೆಸಿಗೊಕ್ಕೆ ಗೊಬ್ಬರ ತಿನ್ನುಸಿರೆ ಅಷ್ಟೇ ಕೊಶಿ ಆವುತ್ತು.
ಸೆಸಿಗೊಕ್ಕೆ ಅತ್ಯಂತ ಪೌಷ್ಟಿಕ ಆಹಾರ ಸಗಣವುದೇ ಗೋಮೂತ್ರವುದೇ. ಯೇವ ಸೆಸಿಯೇ ಆಗಿರಲಿ, ಒಂದು ರಜ್ಜ ಈ ಅಮೃತ ಬಿದ್ದರೆ – ಮತ್ತೆ ಹೇಂಗೆ ನೆಗೆಮಾಡಿಗೊಂಡು ಚಿಗುರುತ್ತು ನೋಡಿ ಬೇಕಾರೆ?
ಮೊದಲು ಗುಡ್ಡೆಲಿ ಸೊಪ್ಪು ಧಾರಾಳ ಇಪ್ಪಗ ಸೊಪ್ಪಿನ ಹಟ್ಟಿಲಿ ಗೊಬ್ಬರ ಆಗಿಂಡು ಇತ್ತು.
ಈಗ ಬಾಚಟ್ಟಿ ಆದ ಮತ್ತೆ ರಜಾ ವಿತ್ಯಾಸ ಆದರೂ – ಗೊಬ್ಬರ ಗೊಬ್ಬರವೇ.

ಒಂದು ವೇಳೆ ಇದಲ್ಲದ್ರೆ, ಈಟಿಂಗೆ ಹೇದು ಲಕ್ಷಾಂತರ ಕರ್ಚು ಮಾಡೇಕು ನಮ್ಮ ಭಾವಯ್ಯಂದ್ರು!
ಅದಷ್ಟೇ ಅಲ್ಲ, ಗುಡ್ಡೆಲಿರ್ತ ಹುಲ್ಲು ಪೊದೆಗಳ ಎಲ್ಲ ಒತ್ತರೆ ತಿಂದು ಮನಾರ ಮಾಡ್ತಲ್ದೋ ದನಗೊ – ಅಲ್ಲದ್ದರೆ ಪೊದೆ ಕೆರಸುತ್ತ ಮಿಶನು ತರುಸೆಕ್ಕು ಈಗಾಣೋರು. ಅವಕ್ಕೆ ಕೊಡ್ತದೂ ಒಳುತ್ತು.
ಒಟ್ಟಿಲಿ ಹಟ್ಟಿಲಿ ಇಪ್ಪದು ದನರೂಪದ ಲಕ್ಷ್ಮಿ – ಹೇಳ್ತದರ ಎಲ್ಲೋರುದೇ ಒಪ್ಪುಗು.
~
ನಿನ್ನೆಲ್ಲ ಮೊನ್ನೆ ಪೇಪರು-ಟೀವಿ ಎಲ್ಲಿ ನೋಡಿರೂ ಒಂದೇ ಶುದ್ದಿ – ಗೀರ್ ತಳಿಯ ಗೋ ಮೂತ್ರಲ್ಲಿ ಚಿನ್ನ ಇದ್ದಾಡ ಹೇದು.
ಗುಜರಾತು ಹೊಡೆಲಿ ಆರೋ ವಿಜ್ಞಾನಿಗೊ ಕಂಡು ಹುಡ್ಕಿದ್ದವಾಡ, ಸುಮಾರು ನೂರಾರು ದನುವಿನ ಗೋಮೂತ್ರ ಸೇಂಪುಲು ತೆಗದು, ಅದರ್ಲಿ ಚಿನ್ನದ ಪರಿಷ್ಕೃತ ರೂಪ ಇದ್ದು – ಹೇಳ್ತದರ ಸಂಶೋಧನೆ ಮಾಡಿ ಮೊನ್ನೆ ಪ್ರಕಟಿಸಿದ್ದವಡ.

ಸಂಶೋಧನೆ ಮೂಲರೂಪಲ್ಲಿ ಇದ್ದಾಡ. ಇನ್ನೂ ದೀರ್ಘ ಪರಿಶ್ಕರಣೆ ಆಯೇಕಡ.
ಇರಳಿ, ಅಂತೂ – ರಜ ಸಂಶೋಧನೆ ಆ ವಿಚಾರಲ್ಲಿ ಆವುತ್ತಾ ಇದ್ದು – ಹೇಳಿ ಆತು.
~
ಗಟ್ಟಿ ಚಿನ್ನವೇ ಸಿಕ್ಕದ್ರೂ, ಚಿನ್ನದ ಸತ್ವಾಂಶೈಪ್ಪದು ನಿಜವೇ.
ಗೋ ಮೂತ್ರಲ್ಲಿ ಚಿನ್ನದ ಸತ್ವ ಇದ್ದು – ಹೇದು ನಮ್ಮ ಅಜ್ಜಂದ್ರಿಂಗೆ ಅಂದೇ ಗೊಂತಿತ್ತು.
ಹಾಂಗಾಗಿಯೇ ಅರ್ಕ ತೆಗದು ಮದ್ದಿಂಗೆ, ಅರ್ಕ ತೆಗೆಯದ್ದೆ ಕೃಷಿಗೆ, ಇತ್ಯಾದಿ ಬಳಸಿಗೊಂಡು ಇತ್ತಿದ್ದದು.
ಈಗ ಸಂಶೋಧನೆ ಆದಪ್ಪಗ ಎಲ್ಲೋರ ಕೆಮಿಯೂ ಕುತ್ತ ಆತು ಒಂದರಿ!
~
ವಿಜ್ಞಾನಿಗಳ ಹತ್ರೆ ಇಪ್ಪ ಆಧುನಿಕ ಸಾಧನೆಗೊ ಇಲ್ಲದ್ದೆಯೇ,
ವಿಜ್ಞಾನಿಗಳ ಹಾಂಗೆ ಪೇಂಟಂಗಿ ಹಾಕದ್ದೆಯೇ,
ವಿಜ್ಞಾನಿಗಳ ಹಾಂಗೆ ಲಕ್ಷಗಟ್ಳೆ ಪೈಸೆಯ ಪ್ರಯೋಗ ಮಾಡದ್ದೆಯೇ –
ನಮ್ಮ ಹೆರಿಯೋರು ಕೆಲವೆಲ್ಲ ಕಂಡುಗೊಂಡಿದವು.

ಅದು ಆರೋಗ್ಯದ ವಿಷಯ ಆಗಿಕ್ಕು, ಕೃಶಿ ವಿಶಯ ಆಗಿಕ್ಕು, ಬಾಹ್ಯಾಕಾಶ ವಿಜ್ಞಾನ ಆಗಿಕ್ಕು ಅಥವಾ ಗಣಿತ ವಿಜ್ಞಾನ ಆಗಿಕ್ಕು.
ಅದೆಲ್ಲವೂ ನಮ್ಮ ಅಜ್ಜಂದ್ರ ಬರಿಗಣ್ಣಿನ, ಬರಿ ಮೆದುಳಿನ ಕೆಲಸಂಗೊ.
ಅದರ ಹಿಂದೆ ಮಾಡಿದ ಅತ್ಯಂತ ಹಿರಿದಾದ ಚಿಂತನಾ ಮಟ್ಟವ ನಾವು ನೋಡಿರೆ –
ಈಗಾಣ ಉಪಕರಣೆಗೊಕ್ಕೂ ಆಶ್ಚರ್ಯ ಅಕ್ಕು.

ಆ ನಮುನೆ ಇದ್ದಪ್ಪೋ!

ಹಾಂಗಾರೆ, ಎತಾರ್ತಕ್ಕೂ ಯೋಚನೆ ಮಾಡೇಕು – ವಿಜ್ಞಾನಿಗೊ ಆರು?
ವಿಶೇಷ ಜ್ಞಾನ ಹೊಂದಿದ ವಿಜ್ಞಾನಿಗೊ ನಮ್ಮ ಹೆರಿಯೋರೇ ಅಲ್ದೋ?

ಒಂದೊಪ್ಪ: ದನವೇ ಒಂದು ಚಿನ್ನ; ಅದರ ಸಾಂಕಾಣವೇ ಚಿನ್ನದ ಕೆಲಸ.

4 thoughts on “ಚಿನ್ನದಂತಾ ದನಗೊ ಚಿನ್ನವನ್ನೇ ಕೊಡ್ತವಡ..!

  1. ಈಗಾಣವು ಎಂತ ಮಾಡ್ತರು ಅದು ರಿ-ಸರ್ಚ್ ಅಷ್ಟೇ ಅಲ್ಲದೋ? ಸರ್ಚ್ ಮೊದಲಾಣವು ಮಾಡಿ ಆಯಿದು ಹೇಳಿ ಶ್ರೀಗಳು ಅಂದೊಂದರಿ ಹೇಳಿತ್ತಿದ್ದವು. ಹರೇ ರಾಮ.

  2. ಹರೇರಾಮ. ಒಳ್ಳೆ ಶುದ್ದಿ.

  3. ನಮ್ಮ ಹೆರಿಯೋವು ದನಗೊ ಇದ್ದರೆ ಪುಲುಸು ಹೇಳುಗು.ಅದೇ ಸಂಸ್ಕೃತಿ ನಾವು ಕಟ್ಟಿದ ಹೊಸಮನಗೆ ಮದಾಲು ಕಂಜಿಸಹಿತ ಕರವದನ ಪ್ರವೇಶ, ಯಾವದೇ ದೇವತಾ ಕಾರ್ಯಕ್ಕೆ ಭ್ರಾಹ್ಮಣ ಹಸ್ತೋದಕಕ್ಕೆ ಮದಲು ಗೋಗ್ರಾಸ , ಹಬ್ಬಕ್ಕೆ ಗೋಪೂಜೆ ,ದೇಹ ಶುದ್ದಿ ಆಯೆಕ್ಕಾರೆ ಪಂಚಗವ್ಯ ಹಿಂಗೇ ನಮ್ಮ ಬದುಕಿನ ಪ್ರತಿಯೊಂದು ಕ್ಷೇತ್ರಲ್ಲೂ ಗೋವಿಂಗೆ ಪ್ರಾಧಾನ್ಯತೆ ಕೊಟ್ಟು ನವಗೆ ಕಲುಶಿದ್ದು ಕಂಡ್ರೆ ದನದ ದೇಹದೊಳ ಚಿನ್ನದಂಶ ಇಪ್ಪದರ ಮದಲನವು ಕಂಡುಕೊಂಡಿಕ್ಕು.[ಶರೀರಕ್ಕೆ ಚಿನ್ನದಂಶ ಹೋಯೆಕ್ಕಾಡ]

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×