- ಅಬ್ಬಿ ಗೀತೆ – ಶರಲ್ಲಿ - October 11, 2012
- ಸತ್ಯ – ಇ(೦)ದು - April 17, 2012
- ಅವಿಲಿನ ಹಾಂಗೇ – ಒಂದು ಪ್ರಯೋಗ - April 10, 2012
ಎಲ್ಲೋರಿಂಗೂ ನಮಸ್ಕಾರ..
ಹೆ! ಇದೆಂತ ಹಲ್ಲಿನ ಡಾಕ್ಟ್ರು ಕಣ್ಣು ಓಪರೇಶನ್ನು ಮಾಡುಲೆ ಹೆರಟದು ಹೇಳಿ ಗ್ರೇಶೆಡಿ.
ನಾವು ಅಂತೇ ಒಂದು ರೌಂಡಿಂಗೆ ಬಂದದ್ದು. ನವಗೂ ಎಡಿಗೋ ನೋಡುಲೆ ಎಂತಾರು ಹೆಚ್ಚು ಕಮ್ಮಿ ಆದರೆ ಆರೂ ಬೈದಿಕ್ಕೆಡಿ.
ಮೊನ್ನೆ ಕೊಡೆಯಾಲಲ್ಲಿ ಯುವಜನೋತ್ಸವದ ಗೌಜಿ. ನಾವು ಹೋಗದ್ದರಕ್ಕೋ, ಅಭಾವನ ಒಟ್ಟಿಂಗೆ ನಾವುದೇ ಹೋತು.
ಬಯಲಿನವು ಯಾರೆಲ್ಲಾ ಬೈಂದವು ಹೇಳಿ ಗೊಂತಿಲ್ಲೆ ಕಂಡಾಪಟ್ಟೆ ಜೆನ ಸೇರಿತ್ತಿದಾ ಹಾಂಗಾಗಿ, ಅಲ್ಲಾ ಕಂಬ್ಳಹೇಳಿಕ್ಕಿ ಈ ಯುವಜನೋತ್ಸವ ಹೇಳಿ ಗ್ರೇಶೆಡಿ; ನಾವು ಅಲ್ಲಿಗೇ ಬತ್ತು.
ಯಾವಾಗಲೂ ಪೆಬ್ರವರಿಲಿ ಅಪ್ಪ ಪಿಲಿಕುಳ ಕಂಬಳ ಈ ಸರ್ತಿ ಯುವಜನೋತ್ಸವದ ಲೆಕ್ಕಲ್ಲಿ ಜನವರಿ ೧೫ಕ್ಕೆ ಹೆರಂದ ಬಂದವಕ್ಕೆಲ್ಲಾ ತೋರುಸುಲೆ ಒಂದು ಅವಕಾಶವುದೇ ಆತು ಹೇಳಿ ಬೇಗ ಮಾಡಿತ್ತಿದ್ದವು.
ನಮ್ಮದು ಮೊದಲೇ ಪ್ಲೇನು ಮಾಡಿ ಆಗಿತ್ತಿದಾ ಆದಿತ್ಯವಾರ ಉದಿಯಪ್ಪಗ ಎದ್ದು ಕಾಪಿಕುಡುದು ವಸ್ತ್ರ ಒಗದಿಕ್ಕಿ ಹೆರಡುದು ಹೇಳಿ, ಹಾಂಗೇ ಕೆಲಸ ಎಲ್ಲಾ ಆಗೀ ಹೆರಡುವಗ ಹೊತ್ತು ಮದ್ಯಾಹ್ನಾಅತು ಹು!
ಕಂಬಳವುದೇ ಉದಿಯಪ್ಪಗಲೇ ನೋಡುಲೆ ಹೆಚ್ಚೆಂತದೂ ಇರ್ತಿಲ್ಲೆ ಇದಾ ಹಾಂಗೆ, ನಾವಿಪ್ಪಲ್ಲಿಂದ ಹೋಪಲೆ ಹೆಚ್ಚುದೂರ ಇಲ್ಲೆ ಕಂಬಳ ನಡೆತ್ತಲ್ಲಿಂಗೆ ಬೇಗ ಎತ್ತಿತ್ತು ನಮ್ಮ ಐರಾವತಲ್ಲಿ , ಪಿಲಿಕುಳಲ್ಲಿ ಗುತ್ತಿನ ಮನೆ ಎದುರು ಗತ್ತಿನ ಕಂಬಳ ,ನೋಡೀರೆಂತಾ ಜೆನ.
ಗೋಣಂಗೊ, ಗೋಣಂಗೊ, ಗೋಂಣಂಗೊ ಎಲ್ಲಿ ನೋಡೀರೂ ಗೋಣಂಗಳೇ, ಕೆಲವು ಎಮ್ಮಗಳೂ ಇತ್ತವು ಅದುಬೇರೆ ಪ್ರಶ್ನೆ, ವೀಡ್ಯ ಮಾಡ್ತವು ಪಟತೆಗೆತ್ತವು ದೊಡ್ಡ ಮುಂಡಾಸಿನವು ಸಣ್ಣಮುಂಡಾಸಿನವು ,ಬೆತ್ತ ಹಿಡುದವು, ಬೆತ್ತಹಿಡಿಯದ್ದವು, ಪ್ರಾಯದವು, ಸಣ್ಣ ಪ್ರಾಯದವು ಹೀಂಗೆ ಕೂಸುಗೊ ಮಾಣಿಯಂಗೊಹೇಳಿ ಜೆನ ಸುಮಾರು ನಾಕೈದುಸಾವಿರ ಅಕ್ಕು ಹೋಗಿಂಡು ಬಂದೊಂಡು ಇತ್ತವು.
ಹೋಪದೆಲ್ಲಾ ಸಮ, ಆದರೆ ಮೈ ಎಲ್ಲಾ ಕಣ್ಣಾಗಿರೆಕ್ಕು ಎಂತಕೇಳೀರೆ “ಫಟ್” ಹೇಳಿ ಬೆನ್ನಿಂಗೆ ಬೀಳುವಗ ಪಾಪ ಆಗೋಣಂಗೊ ಎಲ್ಲೆಲ್ಲಾ ಓಡುಗು ಹೇಳಿ ಹೇಳುಲೆ ಎಡಿಯ ಇದಾ..
ಹಾಂಗೇ ಹೋಪ ದಾರಿಲಿ ಸಗಣ ಹಾಕಿದ್ದದೂ ಇಕ್ಕು ಮೆಟ್ಟಿರೆ “ಅಂಬಿಟ್ ಕಾರು” ಹೇಳಿ ಅಕ್ಕು, ಕೆಮಿಗೆ ಕೇಳ್ತದು “ಫಟ್ ಫಟ್ ಫಟ್” ಹೇಳ್ತ ಪೆಟ್ಟಿನ ಶಬ್ಧ ಮಾತ್ರಾ ಅದೇ ಬೇಜಾರು.
ಕಂಬಳಲ್ಲಿ ಇನ್ನೊಂದು ಕೊಶಿ ಅಪ್ಪ ಸಂಗತಿ ಕಮೆಂಟ್ರಿ ಹೇಳ್ತದು ಅದೂ ತುಳುವಿಲಿ, ಕಂಬಳಲ್ಲಿ ಪೆಟ್ಟೊಂದು ಬಿಟ್ರೆ ಬಾಕಿ ಎಲ್ಲವೂ ನೋಡುಲೆ ಕೊಶಿಯೇ, ಹೀಂಗೊಂದು ಬಡಿತ್ತದೆಂತಕೆ ಆ ಬಾಯಿ ಬಾರದ್ದ ಗೋಣಂಗೊಕ್ಕೆ ಹೇಳಿ ಕೇಳೀರೆ ಅದರ ಯಜಮಾನ ಹೇಳುಗೆ ಎಂಗೊಬಡಿವದು ಗೋಣಂಗಲ್ಲ ಕುಡುವಿನ ಗೋಣಿಗೆ ಹೇಳಿ…!
ಅಪ್ಪು ಈ ಕಂಬಳ ಹೇಳೀರೆಂತರ ಹೇಳಿ ಯಾರಾರು ಕೇಳೀರೆ ನಾವೆಲ್ಲಾ ಸುಲಾಭಲ್ಲಿ ಹೇಳ್ತದು ಗೋಣಂಗಳ ಓಡ್ಸುದು ಹೇಳಿ, ಆದರೆ ಇದರ ನಮ್ಮ ಸಂಸ್ಕೃತಿ, ಅಲ್ಲದ್ದರೆ ನಮ್ಮ ಊರಿನ ಜನಪದ ಕ್ರೀಡೆಹೇಳಿಯೂ ಹೇಳುಲಕ್ಕು, ಹಾಂಗೇ ಬೆತ್ತಕ್ಕೆ ಗೊಂಡೆ ಕಟ್ಟುತ್ತದು, ದುಡಿಬಳ್ಳಿಯ ನೇಯ್ಗೆ,ನೊಗಲ್ಲಿಪ್ಪ ಕುಸುರಿ ಕೆತ್ತನಗೊ ಕರಕುಶಲತೆಯ ಪ್ರದರ್ಶವೂ ಆವುತ್ತು. ಕಂಬಳ ಸ್ಪರ್ದೆಲಿ ಗೆದ್ದು ಹೇಳಿಯೂ, ಛಾಯಾ ಚಿತ್ರ ಸ್ಪರ್ದೆಗಳಲ್ಲಿ ಅದೆಷ್ಟೋ ಜೆನಕ್ಕೆ ಹೆಸರು ತಂದುಕೊಟ್ಟ ಅವಿಭಜಿತ ದಕ್ಷಿಣಕನ್ನಡ ಜಿಲ್ಲೆಯ ಈ ಒಂದು ಜನಪದ ಕ್ರೀಡೆಯ ಬಗ್ಗೆ ಎನಗೆ ಗೊಂತಿಪ್ಪದರ ನಿಂಗೊಗೆ ಹೇಳ್ತೆ, ಎಂತಾರು ಇದರಲ್ಲಿ ಬಿಟ್ಟು ಹೋದ್ದದು ನಿಂಗೊಗೆ ಗೊಂತಿದ್ದರೆ ತಿಳುಶಿಕ್ಕಿ ಆತೋ.
ಈ ಕಂಬಳದ ಇತಿಹಾಸ ಎಷ್ಟು ವರುಶ ಹಳೆದು ಹೇಳಿ ಕೇಳಿದರೆ ನವಗೆ ಗೊಂತಿಲ್ಲೆ ಆದರೆ ರಾಜ ಮಹಾರಾಜರಕಾಲಲ್ಲಿಯೂ ಇದು ನಡಕ್ಕೊಂಡಿತ್ತು ಹೇಳಿ ಹೇಳ್ತವು.
ನಮ್ಮ ಊರಿನ ಪ್ರಸಿದ್ದ ಕಂಬಳಂಗೊ:
- ಬಜಗೋಳಿ – ಈಗ ಅಲ್ಲೇ ಹತ್ತರೆ ಮೀಯಾರು ಹೇಳ್ತಲ್ಲಿ ಆವುತ್ತು.
- ಬಾರಾಡಿ ಬೀಡು,
- ಮೂಡಬಿದಿರೆ,
- ಕದ್ರಿ,
- ವೇಣೂರು,
- ಬಂಗಾಡಿ,
- ಮೂಲ್ಕಿ – ಸೀಮೆ ಅರಸು ಕಂಬಳ,
- ಉಪ್ಪಿನಂಗಡಿ,
- ಪುತ್ತೂರು,
- ನಾರಾವಿ,
- ಹೊಸ್ಮಾರು,
- ಕೆರ್ವಾಶೆ
- ಮಿಜಾರು,
- ಕಟ್ಪಾಡಿ ಬೀಡು,
- ಈದು,
- ಅಳದಂಗಡಿ,
- ಪಿಲಿಕುಳ – ಈಗ ಹೊಸತ್ತಾಗಿ ಕಳುದ ಐದು ವರ್ಶಂದ
-ಹೀಂಗೆ ಇನ್ನೂ ಸುಮಾರಿದ್ದು..
ಹೆಚ್ಚಾಗಿ ಗೋಣಂಗಳ ಸಾಂಕುವವು ಜೈನಂಗೊ, ಪೂಜಾರಿಗೊ ಬಂಟಕ್ಕೊ ಅಲ್ಲದಾ ಹೇಳಿ ಕೇಳೀರೆ ಅಪ್ಪು.
ಆದರೆ ಈಗ ಎಲ್ಲಾ ಜಾತಿಯವುದೇ ಸಾಂಕಲೆ ಸುರುಮಾಡಿದ್ದವು, ಹಾಂಗೇ ಕೆಲವು ಸಂಘ ಸಂಸ್ಥೆಗಳುದೇ ಗೋಣಂಗಳ ಸಾಂಕುತ್ತಾ ಇದ್ದವು, ಇದರಿಂದ ಲಾಭ ಎಂತದು ಹೇಳಿ ಕೇಳೀರೆ – ಎಂತದೂ ಇಲ್ಲೆ ಕೇವಲ ಸ್ಪರ್ಧಾ ಮನೊಭಾವ ಅಷ್ಟೇ.
ಹಾಂಗೇ ಕಂಬಳದ ಗೋಣಂಗಳ ಪ್ರಮುಖ ಆಹಾರ ಕುಡು,ಬೆಳೂಲು.
ಕಂಬಳದ ಕರೆ –
ಸುಮಾರು 100 ರಿಂದ 150 ಮೀಟರಿನ ಎರಡು ಸಾಲು ಪ್ರತಿಸಾಲೂ 5 ರಿಂದ 6 ಮೀಟರು ಅಗಲ ಅದ್ರಲ್ಲಿ ಸುಮಾರು ಆರಿಂಚಿನಷ್ಟು ನೀರು ಎರ್ಕುಸುತ್ತವು ಪ್ರತಿ ಸಾಲಿಂಗೂ ಒಂದು ಹೆಸರು ಮಡುಗುತ್ತವು. (ನಾಮಕರಣ ಹೇಳಿ ಮನುಶ್ಯರಿಂಗೆ ಮಾಡ್ತ ಹಾಂಗೆ ಮಾಡುಲೆ ಇಲ್ಲೆ )
ಮತ್ತೆ ಆ ಸಾಲಿನ ಆ ಹೆಸರಿಲಿ ದಿನಿಗೇಳ್ತವು, ಒಂದುತಲೇಲಿ ಗೋಣಂಗಳ ತಿರುಗುಸುಲೆ ರಜಾದೊಡ್ಡ ಚೌಕ ಅಥವಾ ಆಯತಾಕಾರಲ್ಲಿ ಮಾಡಿರ್ತವು ಇದು ಸ್ಟಾರ‍್ಟಿಂಗು ಪೋಯಿಂಟು, ಇನ್ನೊಂದುತಲೆ ಮಂಜೊಟ್ಟಿ ಹೇಳಿ ಹೇಳ್ತವು, ಅದು ಎಂಡಿಂಗು ಪೋಯಿಂಟು.
ಈ ಎರಡರ ಮದ್ಯಲ್ಲಿ ಎರಡೆರಡು ಸುಮಾರು ಒಂದು ಫೀಟು ಅಗಲದ ಬೆಳೀ ವಸ್ತ್ರವ ಕ್ರಮವಾಗಿ ಆರೂವರೆಯುದೇ ಏಳೂವರೆ ಕೋಲು ಎತ್ತರಲ್ಲಿ ಎರಡೂಕರಗೆ ಅಡ್ಡಕ್ಕೆ ಕಟ್ಟಿರ್ತವು ಇದರ ಉಪಯೋಗ ಕನೆಹಲಗೆ ವಿಭಾಗಕ್ಕೆ ಮಾತ್ರಾ.
ಗೋಣಂಗಳ ತಿರುಗುಸಿ ಬಿಡುವವು, ಓಡುಸುವವು, ದಿನಿಗೇಳುವವು, ಹಿಡಿವವು, ತೀರ್ಪುಗಾರರು ಕೊಂಬುಉರುಗುವವು, ಗೊಣಂಗೊ ಕಂಬಳದ ಪ್ರಮುಖ ಆಕರ್ಶಣೆ.
ಸ್ಪರ್ಧಾ ವಿಭಾಗಂಗೊ–
- ನೇಗಿಲು-ಹಿರಿಯ,
- ನೇಗಿಲು -ಕಿರಿಯ
- ಬಳ್ಳಿ -ಹಿರಿಯ,
- ಬಳ್ಳಿ-ಕಿರಿಯ,
- ಕನೆ ಹಲಗೆ
- ಅಡ್ಡ ಹಲಗೆ
ನೇಗಿಲು – ಹೇಳಿರೆ ಓಡುಸುವವಂಗೆ ಹಿಡುಕ್ಕೊಂಬಲೆ ಇಪ್ಪದು ಗೆದ್ದೆ ಹೂಡ್ತ ನೇಗಿಲಿಂದ ಸುಮಾರು ಸಣ್ಣದು ಆದರೆ ನೊಗ ಮಾತ್ರಾ ಅದೇ,
ಬಳ್ಳಿ – ಹೆಳೀರೆ ನೇಗಿಲಿನ ಬದಲು ಬಳ್ಳಿ,
ಕನೆ ಹಲಗೆ – ಹೇಳೀರೆ ಒಂದು ಸಣ್ಣ ಹಲಗೆಗೆ ಮದ್ಯಲ್ಲಿ ಒಂದು ಒಟ್ಟೆ ಮಾಡಿ ಅದರ ಒಂದು ರೀಪಿನ ತುಂಡಿನ ಸಹಾಯಂದ ನೊಗಕ್ಕೆ ಕಟ್ಟಿರ್ತವು.
ಗೋಣಂಗೊ ಓಡ್ತ ಸ್ಪೀಡಿಂಗೆ ಆ ಒಟ್ಟೆಮೂಲಕ ನೀರು ಮೇಲೆ ಹಾರುತ್ತು, ಸುರುವಾಣ ಎರಡು ವಿಭಾಗಲ್ಲಿ ಓಟದ ವೇಗ ಪ್ರಧಾನ ಆದರೆ, ಇಲ್ಲಿ ಮೇಲೆಕಟ್ಟಿದ ನಿಶಾನೆಗೆ ನೀರು ಬೀಳೆಕ್ಕು,
ಅಡ್ಡ ಹಲಗೆ – ಹೇಳೀರೆ ಗೆದ್ದೆ ಹೂಡಿ ಆದಿಕ್ಕಿ ಅಕೇರಿಗೆ ಸಮತಟ್ಟು ಮಾಡ್ತ ಹಲಗೆಯ ಹಾಂಗೇ, ರಜಾ ಸಣ್ಣದು ಅಷ್ಟೇ.
ಈ ಹಲಗೆ ವಿಭಾಗಲ್ಲಿ ಓಡುಸುತ್ತವು ಆ ಹಲಗೆಯ ಮೆಲೇ ನಿಂದುಗೊಂಬದು ಅವು ಓಡುಲೆ ಇಲ್ಲೆ ಕೆಳ ಬೀಳದ್ದ ಹಾಂಗೆ ಹಿಡುಕ್ಕೊಂಬಲೆ ಗೋಣಂಗಳ ಬೀಲ ಮಾತ್ರಾ.
ಹಿರಿಯ ಕಿರಿಯ ವಿಂಗಡಣೆ–
ಗೋಣಂಗೊಕ್ಕೆ ಪ್ರಾಯ ಲೆಕ್ಕ ಅಲ್ಲ ಏಕೇಳೀರೆ ಗೋಣಂಗೊಕ್ಕೆ “ಬರ್ತು ಸರ್ಟಿಫಿಕೇಟು” ಇಲ್ಲೆ ಇದಾ, ಹಾಂಗಾಗಿ ಹಲ್ಲು ಲೆಕ್ಕ.
ಹುಟ್ಟುವಗಳೇ ಹಲ್ಲಿರ್ತನ್ನೆ ಹೇಳಿ ಕೇಳೆಡಿ.
ಅದು ಹೋಗಿ ಹೊಸ ಹಲ್ಲು ಬಂದ ಲೆಕ್ಕ. ಎರಡಾದರೆ ಕಿರಿಯ ಅದರಿಂದ ಹೆಚ್ಚಿದ್ದರೆ ಹಿರಿಯ ವಿಭಾಗ.
ಅದರ ಗೋಣಂಗಳ ಕರಗೆ ಇಳುಶುವಂದ ಮೊದಲೇ ನೋಡಿ ನಿರ್ಧಾರ ಮಾಡ್ತವು.
ಸ್ಪರ್ದೆ ಹೇಂಗೆ–
ಮೊದಾಲು ಯಾವ ಯಾವ ವಿಭಾಗಲ್ಲಿ ಹೆಚ್ಚುಗೋಣಂಗೊ ಇದ್ದವು ಹೇಳಿ ನೋಡ್ತವು.
ಮತ್ತೆ ಚೀಟಿ ಎತ್ತುವಮೂಲಕ ಯಾವುದರ ಎದುರು ಯಾವುದು ಹೇಳಿ ನಿರ್ಧಾರ ಮಾಡ್ತವು.
ಇನ್ನೂಹೆಚ್ಚಿಗೆ ಗೊಣಂಗೊ ಇದ್ದರೆ ಒಂದೊಂದೇ ಜೊತೆಯ ಓಡುಸಿ ಕಡಿಮೆ ಸಮಯಲ್ಲಿ ಓಡಿದ ಗೋಣಂಗಳ ಎದುರೆದುರು ಓಡುಸುತ್ತವು ಅದಕ್ಕೆ ಕಂಬಳದ ಭಾಶೆಲಿ ಸಾಲು ಹೇಳಿ ಹೇಳ್ತವು, ಅದರಲ್ಲಿ ಗೆದ್ದರೆ ಬಾಕಿ ಆಟಂಗಳ ಹಾಂಗೇ ಕ್ವಾಟರ್ ಫೈನಲ್ಲು, ಸೆಮಿ ಪ್ಫೈನಲ್ಲು, ಫೈನಲ್ಲು ಹೇಳಿ ನಡೆತ್ತು.
ಯಾವ ಜೊತೆ ಗೋಣಂಗೊ ಯಾವ ಕರೆಲಿ ಓಡ್ತದು ಹೇಳಿಯೂ ಚೀಟಿ ಎತ್ತುವ ಮೂಲಕವೇ ನಿರ್ಧಾರ ಅಪ್ಪದು,ಅದು ಯಜಮಾನರುಗಳ ಸಮ್ಮುಖಲ್ಲಿ.
ಗೆದ್ದ ಗೋಣಂಗೊಕ್ಕೆ ಬಹುಮಾನ ಪವನು, ಅರ್ದಪವನು.
ಓಡುಸಿದವಕ್ಕುದೇ ಏನಾರು ಕೊಡ್ತವು, ಆದರೆ ಸಾಂಕುವ ಖರ್ಚು ವೆಚ್ಚ ನೋಡೀರೆ ಇದು ತುಂಬಾ ಸಣ್ಣ ಮೊತ್ತ, ಆದರೆ “ಸ್ಪರ್ದೆಲಿ ಬಹುಮಾನ ಮುಖ್ಯ ಅದು ಎಂತರ ಹೇಳ್ತದಲ್ಲಾನ್ನೇ“.
ಇದರೆಡಕ್ಕಿಲಿ ಬೆಟ್ಟಿಂಗುದೇ ನಡೆತ್ತು ನೂದೆಟುಂಡಾ, ಐವಟುಂಡಾ, ಸಮಟ್ಟುಂಡಾ ಹೇಳಿ ಕೇಳ್ತದರ ಕೇಳಿ ಗೊಂತಿದ್ದಷ್ಟೇ.
ಇದರ ಬಗ್ಗೆ ಹೆಚ್ಚಿನ ಮಾಹಿತಿ ಬೇಕಾರೆ “ಚೆನ್ನೈ ಭಾವನತ್ರೇ” ಕೇಳೆ ಕಷ್ಟೇ. ನೋಡುಲೆ ಹೋದವಕ್ಕೆ ತಿಂಬಲೆ ಬಚ್ಚಂಗಾಯಿ, ಬೊಂಡ ಇಕ್ಕು, “ಅಪ್ಪವಕ್ಕೆ” ಐಸುಕ್ರೀಮುದೆ ಸಿಕ್ಕುಗು ಪೈಸೆ ಕೊಟ್ರೆ,
ಮೊದಲಿಂಗೆ ಈ ಕಂಬಳ ಹೇಳ್ತದು ಪ್ರತೀ ಊರಿನ ದೊಡ್ಡ ಗೆದ್ದೆಗಳಲ್ಲಿ ಹೂಟೆ ಸಮಯಲ್ಲಿ ನಡಕ್ಕೊಂಡಿತ್ತಡ ಆದರೆ ಅದರಲ್ಲಿ ಪ್ರೈಸು, ಬೆಟ್ಟು ಇಲ್ಲೆ.
ಹಾಂಗೇ ಕೆಲವು ಟಿಕೇಟು ಮಡುಗಿದ ಕಂಬಳಂಗಳೂ ಆಗಿಯೊಂಡಿತ್ತು,ಎರಡೆರಡು ಮೂರುಮೂರು ದಿನನಡಗು.
ಅವಕಾಶ ಸಿಕ್ಕಿಪ್ಪಗ ಎಲ್ಲಿಯಾರು ಒಂದಾರಿ ನೋಡಿ ಎಲ್ಲೋರುದೇ, ಇಲ್ಲಿ ಹೇಳದ್ದ ಅಲ್ಲಿ ಹೋದರೆ ಮಾತ್ರಾ ಅನುಭವಿಸಲೆಡಿಗಪ್ಪ ಹಾಂಗಿದ್ದ ಕೊಶಿಯ ಸಂಗತಿಗೊ ಸುಮಾರಿರ್ತು.
ಬಡಿಯದ್ದರೆ ಗೋಣಂಗೊ ಓಡವು. ಹಾಂಗಾರೆ ಯಾರಿಂಗೆಲ್ಲಾ ಬಡಿಯೆಕ್ಕು?
ಮೊನ್ನೆ ನೆಡದ ಕಂಬುಳದ ಕೆಲವು ಪಟಂಗೊ:
photo ಲಾಯಕ ಬೈಂದು ಭಾವಾ…
ಧನ್ಯವಾದಂಗೊ……
ಗೋಣಂಗಳ ಶುದ್ದಿ ಒಳ್ಳೆ “ಶೇಪಿಲಿ” ಬಯಿಂದು. ಒಂದರಿ ಕಂಬಳ ನೋಡಿ ಬಂದ ಹಾಂಗೆ ಆತು.
ಮಾವಂಗೆ ಧನ್ಯವಾದಂಗೊ……
“ಕಂಬಳಲ್ಲಿ ಪೆಟ್ಟೊಂದು ಬಿಟ್ರೆ ಬಾಕಿ ಎಲ್ಲವೂ ನೋಡುಲೆ ಕೊಶಿಯೇ… ಹೀಂಗೊಂದು ಬಡಿತ್ತದೆಂತಕೆ ಆ ಬಾಯಿ ಬಾರದ್ದ ಗೋಣಂಗೊಕ್ಕೆ ಹೇಳಿ ಕೇಳೀರೆ ಅದರ ಯಜಮಾನ ಹೇಳುಗೆ ಎಂಗೊಬಡಿವದು ಗೋಣಂಗಲ್ಲ ಕುಡುವಿನ ಗೋಣಿಗೆ ಹೇಳಿ…!”
ಕೆಲವು ಸರ್ತಿ ಯಜಮಾನಂಗೆ ಬಡಿಯೆಕ್ಕಾದ ಅನಿವಾರ್ಯ ಪರಿಸ್ಥಿತಿ ಆದಿಪ್ಪಲೂ ಸಾಕು… ಬೋಚ ಹೇಳಿದ ಹಾಂಗೆ ಕೆಲವು ಸರ್ತಿ ಕುದುರೆಗಳ ಓಡುಸುಲೆ ಗೊಣನ್ಗೊಕ್ಕೆ ಫಟ್ ಫಟ್ ಫಟ್ ಬಡುದ ಶಬ್ದ ಮಾಡುತ್ತವಪ್ಪ? ಅದೂ ಗೊಂತಿಲ್ಲೇ… ಅಮ್ಮ ಮಕ್ಕೊಗೆ ಶಿಕ್ಷೆ ಕೊಟ್ಟಿಕ್ಕಿ ತಾನೂ ಮಕ್ಕಳ ಜೊತೆ ಸೇರಿ ವೇದನೆ ಅನುಭವಿಸುವ ಹಾಂಗೆ ಆ ಯಜಮಾನಂಗೂ ಅನ್ನಿಸುಲೂ ಸಾಕು… ಭಾವನಾತ್ಮಕವಾಗಿ ನೋಡಿರೆ ಅಲ್ಲಿ ವೇದನೆಯೂ ಇದ್ದು… ಆನಂದವೂ ಇದ್ದು… ಕಂಬಳ ನಡೆಕಾರೆ ಅದು ಅನಿವಾರ್ಯ…
ಕಂಬಳದ ಸರಿಯಾದ ಶೇಪು ಕೊಟ್ಟಿದಿ ಹೇಳಿ ಒಂದೊಪ್ಪ…
ಏ ಶೇಡಿಗುಮ್ಮೆ ಪುಳ್ಳಿ…
ಈ ಗೋಣ೦ಗಳ ಹೀ೦ಗೊ೦ದು ಜಾತಿ ಎ೦ತ್ಸಗಪ್ಪ ಓಡುಸುದು.. ಪೋ..!! 😛
ಗೋಣ೦ಗ ಎ೦ತ್ಸರ ಕುದುರೆಯೋ?? ಹು..!! 😉
ಏ ಬೋಚ ಭಾವಾ ,ಅದಕ್ಕೇ ಹೇಳ್ತದದಾ ಕುಚ್ಚಿತೆಗಶೆಕ್ಕೂದು ಇಲ್ಲದ್ದರೆ ಕಣ್ಣಿಂಗೆ ಅಡ್ಡಡ್ಡ ಅಪ್ಪಗ ಕೊಡೆಯಾಲದ ಗೋಣಂಗಳೂ ಬೆಂಗ್ಳೂರಿನ ಕುದುರಗಳ ಹಾಂಗೇ ಕಾಂಬದು…..;)
ಶುದ್ಧಿ ಬಾರೀ ಲಾಯಿಕ ಆಯಿದು …ಆನು ಸಣ್ಣಾದಿಪ್ಪಗ ನೋಡಿದ ಕಂಬಳದ ನೆನಪಾತು …ಕಂಬಳದ ಕಾಮೆಂಟ್ರಿಕೆಳುಲೇ ಇನ್ನೂ ಕೊಶಿ …ಪಟ ಅಂತೂ ಸೂಪರ್ ….ಒಂದು ಒಪ್ಪ …
ಮಾವಾ ಧನ್ಯವಾದಂಗೊ,
ಈಗ ವಾಪಾಸು ಒಂದಾರಿ ಕಂಬಳ(ಓದಿದಿರನ್ನೇ) ನೋಡಿದಿರನ್ನೇ ಕೊಶೀ ಆತು…..
{ ಹಲ್ಲು ಲೆಕ್ಕ – ಎರಡಾದರೆ ಕಿರಿಯ ಅದರಿಂದ ಹೆಚ್ಚಿದ್ದರೆ ಹಿರಿಯ }
ಅಂಬಗ ಮೂವತ್ತೆರಡು ಹಲ್ಲು ಬಿಡ್ತ ಪೆಂಗಣ್ಣ ಯೇವ ವಿಭಾಗಕ್ಕೆ? 😉
ಏ ಮಾಣಿ, ಇದಾ ಅಲ್ಲಿ ಲೆಕ್ಕ ಹಿರಿಯ ಕಿರಿಯ ಹೇಳ್ತದು ಬರೇ ಬೀಲ ಇಪ್ಪೋರದ್ದು ಮಾತ್ರಾ ಬೀಲ ಇಲ್ಲದ್ದ ನಿನ್ನ ಹಾಂಗಿಪ್ಪವರ ಬಡಿಗೆ ಹಿಡುದು ಓಡ್ಸುತ್ತು ಮಾತ್ರಾ …… ಲೆಕ್ಕ ಎಂತ ಮಣ್ಣೂ ಇಲ್ಲೆ. ಬೆನ್ನಿಂಗೆ ಬಿದ್ದದರ ಲೆಕ್ಕ ಹಾಕಿಯೊಂಡ್ರೆ ಆತು ಇಲ್ಲದ್ದರೆ ಮನೆಗೆ ಬಂದಮೇಲೆ ಬರೆ ಲೆಕ್ಕ ಮಾಡೀರುದೇ ಅಕ್ಕು….
ಬೋಚ ಭಾವ ಗೋಣ೦ಗಳ ಮು೦ದೆ ಓಡೊದೋ ಅಲ್ಲ ಹಿ೦ದೆಯೋ?
ಅವನ ಹಲ್ಲು ಈಗ ಎಷ್ಟು ಒಳುದ್ದು?
ಏ ಭಾವಾ, ಅವನೋ ಅವನ ಸಂಗತಿ ಕೇಳೀರೆ ಸುಮಾರಿದ್ದು. ಅವ ಓಡ್ತ ಗೋಣಂಗಳ ಹಿಂದೆ ಓಡುದಡಾ, ಓಡುಸುತ್ತ ಗೋಣಂಗಳ ಮುಂದಂದ ಓಡುದಡಾ ಒಟ್ಟೀಂಗೇ ಓಡಿ ಓಡಿ ನೆಗೆಗಾರಂಗೂ ಪೆಂಗಣ್ಣಂಗೂ ಬಚ್ಚಿದ್ದಡಾ…………
ಕಂಬಳದ ಬಗ್ಗೆ ಸುಮಾರು ಮಾಹಿತಿಗಳ ಕೊಟ್ಟಿದೆ ಭಾವಯ್ಯ.ಇಲ್ಲಿ ಹೊಸಬೆಟ್ಟಿಲ್ಲಿ ಕೆಲವು ವರ್ಷ ಮೊದಲು ಕಂಬಳ ಆಗಿಂಡು ಇತ್ತಿದ್ದು. ಒಂದು ದಿನ ಉದಿಯಪ್ಪಗ ಸುರು ಆದರೆ ಮರುದಿನ ಉದಿವರೆಗೆ, ಕೆಲವು ಸರ್ತಿ ಮರುದಿನ ಮಧ್ಯಾಹ್ನ ವರೆಗೆ ಆದ್ದೂ ಇದ್ದು.
ಹಾಂಗಾಗಿ ನೋಡಿ ಗೊಂತಿದ್ದು. ಆದರೆ ಇಷ್ಟೊಂದು ವಿವರ ಗೊಂತಿತ್ತಿಲ್ಲೆ. ಧನ್ಯವಾದಂಗೊ.
ನೋಡ್ಲೆ ಕೊಶೀ ಇರ್ತು. ಆದರೆ ಹಾಂಗೊಂದು ಬಡಿವದು ಕಾಂಬಗ ಬೇಜಾರು ಆವ್ತು.
ರಘು ಮಾವ ಹೇಳ್ತ ಹಾಂಗೆ ಗೋಣಂಗಳ ದನಿಗಳ ಪೆರೇಡ್ ಇರ್ತು. ಕೈಗೆ ಚಿನ್ನದ ಬ್ರೇಸ್ ಲೆಟ್, ಎಲ್ಲ ಬೆರಳುಗೊಕ್ಕೆ ಉಂಗಿಲು, ಕೊರಳಿಲ್ಲಿ ಗೋಣಂಗಳ ಕಟ್ಟುತ್ತಷ್ಟೇ ದಪ್ಪದ ಚೈನ್ ಹಾಕಿಂಡು ಮೇಲುಸ್ತುವಾರಿ ಮಾದ್ತಾ ಇರ್ತವು.
[ಕೆಲವು ಎಮ್ಮಗಳೂ ಇತ್ತವು ಅದುಬೇರೆ ಪ್ರಶ್ನೆ]- ಇದು ಲಾಯಿಕ ಆಯಿದು.
ಪಟಂಗಳೂ ಸೂಪರ್
ಹೊಸಬೆಟ್ಟು ಭಾವಂಗೆ ಧನ್ಯವಾದಂಗೊ….
ಲಾಯ್ಕಾಯಿದು ಮಾಣಿ ಶುದ್ದಿ.
[ಕಂಬಳಲ್ಲಿ ಪೆಟ್ಟೊಂದು ಬಿಟ್ರೆ ಬಾಕಿ ಎಲ್ಲವೂ ನೋಡುಲೆ ಕೊಶಿಯೇ]
ಇದೊಂದು ಮಾತ್ರ ಸತ್ಯವೇ!! ಪೆಟ್ಟು ಬೀಳುದು ಕಾಂಬಗ ಬೇಜಾರಾವುತ್ತು. ಆದರೆ ಆ ಕ್ರೀಡೆಗೆ ಅದು ಅನಿವಾರ್ಯ ಅಂಗ, ಕೋಳಿ ಕಟ್ಟಲ್ಲಿ ಕೋಳಿಯ ಕಾಲಿಂಗೆ ಬಾಳು ಕಟ್ಟುವ ಹಾಂಗೆ ಅಲ್ಲದಾ?
ಕಂಬ್ಳದ ಬಗ್ಗೆ ಪೂರ್ಣ ಮಾಹಿತಿ ಕೊಟ್ಟಿದೆ. ಎಲ್ಲಿ ಆವುತ್ತು, ಹೇಂಗೆ ಆವುತ್ತು ಹೇಳಿ ಕೂಡಾ!!
ಪಟ ಸಮೇತ ಶುದ್ದಿ ಬಂದದು ಲಾಯ್ಕಾಯಿದು. ಇನ್ನಾಣ ಸರ್ತಿ ಒಂದು ವೀಡ್ಯವೂ ಮಾಡಿಕ್ಕು ಮಿನಿಯಾ!
ಪುತ್ತೂರಿಲಿ ಕೋಟಿ-ಚೆನ್ನಯ ಕಂಬ್ಳ ಅಪ್ಪಗ ಜಾತ್ರೆ ಗೆದ್ದೆ ತುಂಬಾ ಜೆನವುದೇ, ಗಣೇಶ್ ಪ್ರಸಾದ್ ಹೋಟ್ಳಿನ ವರೆಗೆಯೂ ಕಂಬ್ಳದ ಕರೆಯಾ ಹೇಳಿ ಗ್ರೇಶುವ ಹಾಂಗೆ ಇರ್ತು 😉
ಅದಾ….. ಶ್ರೀ ಅಕ್ಕನೂ ಬಂತದಾ ಕಂಬಳನೋಡುಲೆ ಕೊಶೀ ಆತಕ್ಕೋ……..
ಶುದ್ದಿ ಭಾರಿ ಲಾಯ್ಕ ಆಯಿದು. ಕಂಬಳದ ಬಗ್ಗೆ ಕೇಳಿ ಗೊಂತಿತ್ತು.ಈಗ ನೋಡಿದ ಹಾಂಗೆ ಆತು. ಅಷ್ಟು ಲಾಯ್ಕ ಆಯಿದು ವಿವರಣೆ.
ಅಕ್ಕೋ ಧನ್ಯವಾದಂಗೊ……
ಈಗ ನೋಡಿದ ಹಾಂಗೆ ಆತು – ಹಾಂಗಾರೆ ಇನ್ನೊಂದಾರಿ ಎಲ್ಲಿಯಾರು ಹೋಗಿಯೇ ನೋಡಿಕ್ಕಿ ಆತೋ….
ಒಳ್ಳೆ ಸ್ವಾರಸ್ಯ ಇತ್ತು ಕಂಬಳದ ಬಗೆಯ ಲೇಖನ. ಕೆಲಾವು ಹೊಸ ವಿಷಯಂಗಳನ್ನು ಕಲ್ತ ಹಾಂಗಾತದ. ಶೇಡಿಗುಮ್ಮೆ ಪುಳ್ಳಿ ಗೋಣಂಗಳ ಹತ್ರೆ ಇಂಟರ್ ವ್ಯೂ ಮಾಡಿ ಬೈಲಿಂಗೆ ಒಳ್ಳೆ ಮಾಹಿತಿ ಕೊಟ್ಟಿದ°. ಧನ್ಯವಾದಂಗೊ. ಫೊಟೋಂಗಳುದೆ ಲಾಯಕ್ ಬಯಿಂದು. ನಾರಾಯಣಣ್ಣ ಪಟ ತೆಗೆತ್ತರನ್ನುದೆ ಪಟ ತೆಗದ್ದದು ಚೆಂದ ಆಯಿದು.
ಅಂಬಗ ಕಂಬಳಕ್ಕೆ ಎಮ್ಮಗಳನ್ನುದೆ ಕರಕ್ಕೊಂಡು ಬತ್ತವೊ ? ಓಡ್ಳೊ ? ನೋಡ್ಳೋ ?
ಮಾವಾ ಒಪ್ಪ ಕೊಟ್ಟದ್ದಕ್ಕುದೇ ಧನ್ಯವಾದಂಗೊ,
(ಕಂಬಳಕ್ಕೆ ಎಮ್ಮಗಳನ್ನುದೆ ಕರಕ್ಕೊಂಡು ಬತ್ತವೊ ? ಓಡ್ಳೊ ? ನೋಡ್ಳೋ ?)
– ಎಮ್ಮಗೊ ಇಲ್ಲದ್ದರೆ ಓಡ್ತವಿಲ್ಲೆಡಾ ……. ಗೋಣಂಗೊ
ಹಗ್ಗ ಜಗ್ಗಾಟಕ್ಕೆ ಕೂಸುಗಳ team ಮಾಡಿದ ಹಾಂಗೆ ಹೇಳುಗು ಆಚಕರೆ ಮಾಣಿ 😉
ಬಚ್ಚಾವು……. ಆ ಐಪೀಎಲ್ಲಿನ ಶುದ್ದಿ ನೆನಪ್ಪಾಯಿದಿಲ್ಲೆನ್ನೇ.
ಹ… ನೆಂಪಾತು.. ನೆಂಪಾತು..
ಒಳ್ಳೆ ಮಾಹಿತಿ ಭಾವಾ.
ಕ೦ಬಳ ಶುರು ಅಪ್ಪದರ ಮದಲು ಎಲ್ಲಾ ಗಿಡ್ದೆರುಗಳೂ ( ಗೋಣ೦ಗಳ ಜತೆ), ಅವರ ಧನಿಗಳೂ, ೮-೧೦ ತೈನಾತಿಗಳೂ ಗೆದ್ದೆಲಿ ಸಾಲಾಗಿ ಪಥಸ೦ಚಲನದ ಹಾ೦ಗೆ ಬಕ್ಕು.ಆವಗ ಧನಿಗಳ ನೋಡೆಕ್ಕು,ಸಿಲ್ಕು ಅ೦ಗಿ,ಸಿಲ್ಕು ಮು೦ಡು,ಬಣ್ಣದ ಮು೦ಡಾಸು,ಕೈಲಿ ಒ೦ದು ಚಾಟಿ ( ಆಚ ಕೈಲಿ ಪಳ ಪಳ ಹೊಳವ ಉ೦ಗಿಲವೂ,ಥಳ ಥಳ ಹೊಳವ ವಾಚೂ ಇಕ್ಕು !),ಆ ಕೆಸರಿಲಿ ತೆಗಲೆ ಉಬ್ಬುಸಿ ಸುತ್ತಲೂ ನೋಡ್ಯೊ೦ಡು ಹೋಪ ಪೋಕು ನೋಡುಲೇ ಕೊಶಿ.
ಹಾ೦ಗೆಯೇ ಕ೦ಬಳದ ಗೆದ್ದೆಯ ಕಡೆ ಕೊಡಿಲಿ ಮೈಕು ಹಿಡುಕ್ಕೊ೦ಡು ಗೋಣ೦ಗಳ ಧನಿಗಳ ಹೆಸರು ಹೇಳುವ ರೀತಿ,ಎಡಕ್ಕಿಲಿ ಕುಶಾಲು ಕೇಳುಲೇ ಗಮ್ಮತ್ತು.
ಭಾವಾ ಧನ್ಯವಾದಂಗೊ,
ಗಿಡ್ದೆರುಗಳೂ – ಹೆಳೀರೆ “ಗಿಡಪ್ಪುನ ಎರುಗೊ” ಹೇಳಿ ಅಲ್ಲದೋ. ಅಲ್ಲ ಅದು ಆದರೂ ಜೊತೆಯೇ
ಕೈಲಿ ಒ೦ದು ಚಾಟಿ – ಬೆತ್ತ ಅಲ್ಲದೋ. ಚಾಟಿ ಹೇಳೆಕ್ಕಾರೆ ಕೊಡೀಂಗೆ ಉದಾಕೆ ಬಳ್ಳಿಯೋ,ಚರ್ಮವೋಮಣ್ಣ ಇರೆಡದೋ….
ಎಡಕ್ಕಿಲಿ ಕುಶಾಲು ಕೇಳುಲೇ ಗಮ್ಮತ್ತು.- ಅಪ್ಪಪ್ಪು
॒@ ರಘು,
ಕಂಬಳ- ಭಾಮಿನಿಲಿ ಕೇಳೆಕ್ಕು ಹೇಳಿ ಒಂದು ಆಸೆ ಇದ್ದು.
ಏ ಭಾವ,
ಆಚ ಕೈಲಿ ಪಳ ಪಳ ಹೊಳವ ಉ೦ಗಿಲವೂ,ಥಳ ಥಳ ಹೊಳವ ವಾಚೂ ಇಕ್ಕು !- ನಿಂಗೊ ಹೀಂಗೆಲ್ಲಾ ಹೇಳಿರೆ ಇಲ್ಲಿ ಕೆಲವು ಜೆನರ ಮೋರೆ , ಗೋಣ ಬೀಲ ಆಡುಸುವಗ ಅದರಿಂದ ಎಂತದೋ ಮೋರಗೇ ರಟ್ಟಿಯಪ್ಪಗ ಆವುತ್ತ ಹಾಂಗೆ ಆವುತ್ತನ್ನೇ…… 😉
ಕಂಬಳದ ಬಗ್ಗೆ ಲೇಖನ ಲಾಯಕ ಆಯಿದು… ಪುಟ್ಟಕ್ಕನ ಪ್ರಭಾವಂದ ಪುಲ್ಳಿಗುದೆ ಐಸ್ಕ್ರೀಂ ‘ಆಗದ್ದ’ ಹಾಂಗೆ ಕಾಣುತ್ತು …
ಧನ್ಯವಾದಂಗೊ…
ಆಪ್ಪಪ್ಪು. ಎನಗೆ ಅದರ ಕಣ್ಣಿಲ್ಲಿ ಕಂಡ್ರೇ ಆವ್ತಿಲ್ಲೆ .
ಯಾವುದು ಕಣ್ಣಿಲ್ಲಿ ಕಂಡರೆ ಆಗದ್ದು?
ಏ ಭಾವಯ್ಯಾ, ಕಣ್ಣಿಲ್ಲಿ ಕಂಡರೆ ಆಗದ್ದು ” ಐಸ್ಕ್ರೀಂ” ನ ಬೇರೆ ಯಾರನ್ನೋ ಹೇಳಿ ಗ್ರೇಶುತ್ತು ಬೇಡ ಆತೋ…
ಅದೆಂತ ‘ಅದು’ ಆಗ ಹೇಳಿ?
ಯೋಪ!!! ವಿಷಯ ಅಲ್ಪ ಇದ್ದು ಇದರ್ಲಿ.
[“ಫಟ್ ಫಟ್ ಫಟ್”] – ಇದರ್ಲಿ ಒಂದು ಅದರ ಬೆನ್ನಿಂಗೇ ಬೀಳೆಕ್ಕಾತು ರುಚಿ ನೋಡ್ಳೆ. ಅಕೇರಿಗಾದರೂ ಆವ್ತಿತ್ತು!
ಹಲ್ಲಿನ ಲೆಕ್ಕ ! …… ಉಮ್ಮಾ ನವಗೆ ದೂರಂದ ನೋಡಿಯೇ ಗೊಂತು. ಹತ್ತರೆ ಹೋದರೆ ತಾಡಿರೋ°! ಬೀಲ ಹಿಡುದು ಓಡುಸುತ್ತದು…. ವಿಷಯ ಅಪ್ಪು. ವಿನೋದ ನೋಡ್ಳೆ. ಪಾಪ ಗೋಣನ ಬೇನೆ ಆಚ ಗೋಣಂಗೆ ಗೊಂತಕ್ಕೋ ! ಹೀಂಗೇ ಇನ್ನೊಂದು ತಮಿಳುನಾಡಿನ ವಿನೋದ ಜಲ್ಲಿಕಟ್ಟು ಹೇಳಿ ಗೂಳಿಯ ಛೇಡಿಸಿ ಓಡಿಸಿ ಅದರ ಕೊಂಬಿನ್ಗೆ ತಾಗಿಸಿ ಗಾಯಮಾಡಿಗೊಂಬದು. ಅಕೇರಿಗೆ ಅದಕ್ಕೂ ಗಾಯ ಇದಕ್ಕೂ ಗಾಯ !
ಹೋಗ್ಲಿ, ಅನೇಕ ವರ್ಷಂದ ಸಾಗಿ ಬಂದ ಹೀಂಗಿಪ್ಪ ವಿಷಯಂಗಳ ವಿಮರ್ಶೆ ಮಾಡ್ಳೆ ನಮ್ಮಂದಾಗ. ಆದರೆ, ಓಡುತ್ತ ಗೋಣಂಗಳನ್ನೂ ನಿಂದೊಂಡಿಪ್ಪ ಗೋಣಂಗಳನ್ನೂ ನೋಡಿಕ್ಕಿ ಬಂದು ಸ್ವಾರಸ್ಯವಾಗಿ ಬೈಲಿಂಗೆ ಹಂಚಿದ್ದು ಲಾಯಕ ಆಯ್ದು ಹೇಳಿ ಹೇಳುವುದೀಗ -‘ಚೆನ್ನೈವಾಣಿ”
ಓದಿ ಒಪ್ಪ ಕೊಟ್ಟದ್ದಕ್ಕೆ ಧನ್ಯವಾದಂಗೊ, ಇದಾ ಭಾವಾ ಇದರಲ್ಲಿಪ್ಪದು ಅಲ್ಪ ವಿಶಯಂಗೊ ಮಾತ್ರಾ ಅಲ್ಲಿ ಹೋಗಿ ನೋಡುವಂತಾದ್ದು ಇನ್ನೂ ಅಲ್ಪ ಇದ್ದು ಆತೋ….
ತಾಡ್ತಗೋಣಂಗೊ ಆದರೂ ಹತ್ತರೆ ಹೋಗಿ ಕೊಂಗಾಟಲ್ಲಿ ಮಾತಾಡುಸೀರೆ ಕೈಯೋಮಣ್ಣ ನಕ್ಕುಗೇಹೊರತು ತಾಡವು ಆತೋ….
ಬೇಡಪ್ಪ ಬೇಡ. ನಿಂಗೊ ಹೇಳಿದಿ ಹೇಳಿ ಅದರ ಎದುರು ನಿಂದು ಕೊಂಗಾಟ ಮಾಡ್ಳೆ ಸುರುಮಾಡಿಯಪ್ಪಗ ನಿಂಗೊ ಆಚಿಗಂದ ಬೀಲ ಜಗ್ಗಿರೆ ಅದಾತದು ಬಗೆ !! ಇಲ್ಲಿ ಕಾಲೆಳವವು ಅಲ್ಲಿ ಬೀಲ ಎಳೆಯವು ಹೇಳಿ ಎಂತ ಗ್ಯಾರಂಟಿ!!
ಎಂತ ಮಾಡ್ಸು ಭಾವಾ ಕಾಲೆಳವವಕ್ಕೆ ಒಂದು ಕಾಲ ಆದರೆ ಬೀಲ ಎಳವವಕ್ಕೆ ಒಂದು ಕಾಲ ಬಾರದ್ದೇ ಇಕ್ಕೋ ………..?