Oppanna.com

ಮುಜುಂಗಾವು ವಿದ್ಯಾಸಂಸ್ಥೆಲಿ ಸಂಪನ್ನಗೊಂಡ ಸ್ವಾತಂತ್ರ್ಯ ದಿನಾಚರಣೆ

ಬರದೋರು :   ವಿಜಯತ್ತೆ    on   19/08/2013    3 ಒಪ್ಪಂಗೊ

ಮುಜುಂಗಾವು ವಿದ್ಯಾಸಂಸ್ಥೆಲಿ ಸಂಪನ್ನಗೊಂಡ ಸ್ವಾತಂತ್ರ್ಯ ದಿನಾಚರಣೆ

 

ಸ್ವಾತಂತ್ರ್ಯ ದಿನಾಚರಣೆ ದಿನ ಮುಜುಂಗಾವು ವಿದ್ಯಾಸಂಸ್ಥೆಲಿ ಧ್ವಜವಂದನೆ, ಸಭಾಕಾರ್ಯಕ್ರಮ, ಸಾಂಸ್ಕೃತಿಕ ಕಾರ್ಯಕ್ರಮಂಗೊ ಬಹು ಅಚ್ಚುಕಟ್ಟಾಗಿ ಚೆಂದಕೆ ಕಳಾತು. ಮುಖ್ಯ ಆಹ್ವಾನಿತರಾಗಿ ಬಂದ ಕುಂಬಳೆ ಗ್ರಾಮ ಪಂಚಾಯತು ಸದಸ್ಯೆ ಶ್ರೀಮತಿ ಅಶ್ವಿನಿ ನಾಣಿತ್ತಿಲು, ಇವಕ್ಕೆ ಶಾಲಾ ನಾಯಕಿ ಕು| ಶ್ವೇತಾ ಶಿಷ್ಟಾಚಾರಲ್ಲಿ ವಂದನೆ ಹೇಳಿಗೊಂಡು ಕ್ರಮದಾಂಗೆ ನಮ್ಮ ರಾಷ್ಟ್ರಧ್ವಜ ಏರುಸಿದವು. ಕು| ಶ್ವೇತನ ಮುಖಂಡತ್ವಲ್ಲಿ ಎಲ್ಲೋರು ರಾಷ್ಟಗೀತೆ, ರಾಷ್ಟ್ರಧರ್ಮದ ಸತ್ಯ ಪ್ರತಿಜ್ಞೆ ಮಾಡಿದೊವು.
ಸಭಾ ಕಾರ್ಯಕ್ರಮಲ್ಲಿ ಪ್ರಥಮವಾಗಿ ೩ನೇ ತರಗತಿ ವಿದ್ಯಾರ್ಥಿ ವಸಿಷ್ಠನಿಂದ ದೇಶಭಕ್ತಿಗೀತೆ ಚೆಂದಕೆ ಬಂತು. ಮತ್ತೆ ಎಲ್ಲಾ ತರಗತಿ ಮಕ್ಕಳೂ ಸಮೂಹ ಗೀತೆ ಹಾಡಿದವು. ಆ ಮೇಲೆ ಭಾಷಣಂಗೊ. ೪ನೇಲಿ ಕಲಿತ್ತ ಮಕ್ಕೊ ಕೃಷ್ಣ ಶೌರಿ ಹಾಂಗೂ ಚೈತನ್ಯ, ೫ನೆಯ ಜ್ಞಾನೇಶ, ೭ನೆಯ ಕಿಶೋರಕೃಷ್ಣ, ೧೦ನೆಲಿ ಕಲಿವ ದೀಪಕ್ ಶ್ರೀವತ್ಸ, ಕಾಲೇಜು ವಿದ್ಯಾರ್ಥಿನಿ ಕು| ಶುಭಲಕ್ಷ್ಮೀ ಯಾಜಿ ಮೊದಲಾದವರ ಭಾಷಣ ಮಕ್ಕಳ ವೇದಿಕೆಗೊಂದು ಸ್ಫೂರ್ತಿ ತುಂಬಿದ ಕಳೆ ಬಂದಾಂಗಾತು! ಆ ಮೇಲೆ ಶ್ರೀಮತಿ ಅಶ್ವಿನಿಯಕ್ಕ ಭಾಷಣ ಮಾಡುತ್ತಾ “ಇಂದಿನ ಮಕ್ಕಳೇ ಮುಂದಿನ ಜನಾಂಗ. ಸ್ವಾತಂತ್ರ್ಯ ಹೇಳಿಗೊಂಡು ಸ್ವೇಚ್ಛಾಚಾರಕ್ಕೆ ಹೋಪಲಾಗ. ನಮ್ಮ ಧರ್ಮ ಸಂಸ್ಕೃತಿ ಒಳಿಶಿ, ಬೆಳೆಶುಲೆ ನಿಂಗಳ ಪಾತ್ರ ದೊಡ್ಡದು. ಎಲ್ಲಾರೂ ಡಾಕ್ಟ್ರು, ಇಂಜಿನಿಯರು ಆಯೆಕ್ಕು ಹೇಳ್ವ ದೃಷ್ಟಿ ಮಡುಗೆಂಡಿ ಕಲಿಯೆಡಿ. ಕೃಷಿ, ಗ್ರಾಮೀಣ ಕೈಗಾರಿಕೆ ಬಗ್ಗೆಯೂ ಆಸಕ್ತಿ ವಹಿಸಿ ಹೇಳಿದವು. ಇನ್ನೋರ್ವ ಆಹ್ವಾನಿತರಾದ ಎಡನಾಡು, ಮರಿಮನೆ ಶಂಕರ ಭಟ್ಟರು ತಮ್ಮ ಭಾಷಣಲ್ಲಿ “ನಾವೆಲ್ಲರೂ ನಮ್ಮ ಪೂಜನೀಯ ಭಾರತಮಾತೆಯ ‘ಇಂಡಿಯಾ’ ಹೇಳ್ಲಾಗ. “ಭಾರತ” ಹೇಳಿಯೇ ಹೇಳೆಕ್ಕು. ಹಾಂಗೇ ನಮ್ಮ ದೇಶವ ಹರಿಹಂಚು ಮಾಡದ್ದೆ ಅಖಂಡತೆಯ ಕಾಪಾಡೆಕ್ಕು ಹೇಳ್ತಾ, ಈ ಶಾಲೆಲಿ ಕಲಿತ್ತ ಮಕ್ಕೊಗೆ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳ ಅನುಗ್ರಹ, ಮುಖ್ಯೋಪಾಧ್ಯಾಯರಾದ ಶ್ಯಾಮ್ ಭಟ್ ರವರ ನೇತೃತ್ವದಲ್ಲಿ ಎಲ್ಲಾ ಮಾತಾಶ್ರೀಯವರ ಪ್ರೋತ್ಸಾಹ, ಸಹಕಾರಲ್ಲಿ ಉತ್ತಮ ಸಂಸ್ಕಾರ ಸಿಕ್ಕುತ್ತಾ ವಿದ್ಯಾರ್ಜನೆ ಮಾಡುವ ಸದವಕಾಶ ಒದಗಿ ಬಂದದರ ಸದುಪಯೋಗ ಪಡಿಸಿಕೊಳ್ಳಿ” ಹೇಳಿದವು. ಆಡಳಿತ ಮಂಡಳಿ ಸದಸ್ಯರಾದ ಶ್ಯಾಮರಾಜ ದೊಡ್ಡಮಾಣಿಯವು; ಸ್ವತಂತ್ರ ಭಾರತಲ್ಲಿ ವಿದ್ಯಾರ್ಥಿಗೊ ಹೇಂಗೆ ಜಾಗೃತರಾಯೆಕ್ಕು ನಮ್ಮತನವ ಹೇಂಗೆ ಕಾಪಾಡೆಕ್ಕು ಹೇಳುವ ಕಿವಿಮಾತು ಹೇಳಿದವು. ಕಾವೇರಿಯಮ್ಮ ಮಾತಾಶ್ರೀಯ ಭಾಷಣ, ವದ್ಯಾಮಾತಾಶ್ರೀಯ ದೇಶಭಕ್ತಿಗೀತೆ ಇತ್ತು.
ಕಾಲೇಜು ವಿದ್ಯಾರ್ಥಿನಿ ಕು| ಸ್ವಾತಿ ಘಾಟೆ ನಿರೂಪಣೆ ಮಾಡಿ ವಿದ್ಯಾರ್ಥಿ ಗೌರೀಶನ ಧನ್ಯವಾದದಟ್ಟಿಂಗೆ ಸಭೆ ಮುಗಾತು. ಬಂದವಕ್ಕೆಲ್ಲ ಸಿಹಿಭಕ್ಷ್ಯ(ಲಡ್ಡು) ವೇ| ಮೂ| ಮಹಾದೇವ ಭಟ್ಟರ ಕೊಡುಗೆ. ಹಾಂಗೇ ಎಲ್ಲಾ ತರಗತಿಲಿಯೂ ಕಲಿವಲೆ ಹುಶಾರಿದ್ದವಕ್ಕೆ ಪ್ರಶಸ್ತಿ ಪತ್ರದೊಟ್ಟಿಂಗೆ ಬಹುಮಾನವೂ ವಿತರಣೆ ಆತು. ವೇದಿಕೆಲಿ ಹೆಡ್ ಮಾಷ್ಟ್ರು ಶ್ರೀಯುತ ಶ್ಯಾಮ್ ಭಟ್ ಉಪಸ್ಥಿತರಿದ್ದಿದ್ದವು.
~~~
ಕಾರ್ಯಕ್ರಮದ ಪಟಂಗೊ:-

ಎಡನಾಡು, ಮರಿಮನೆ ಶಂಕರ ಭಟ್ಟರಿಂದ ಹಿತವಚನ
ಎಡನಾಡು, ಮರಿಮನೆ ಶಂಕರ ಭಟ್ಟರಿಂದ ಹಿತವಚನ

ಸಮ್ಮಿಲನ
ಸಮ್ಮಿಲನ

ಕೃಷ್ಣ ಶೌರಿಯ ಭಾಷಣ
ಕೃಷ್ಣ ಶೌರಿಯ ಭಾಷಣ

ಧ್ವಜ ವಂದನೆ
ಧ್ವಜ ವಂದನೆ

3 thoughts on “ಮುಜುಂಗಾವು ವಿದ್ಯಾಸಂಸ್ಥೆಲಿ ಸಂಪನ್ನಗೊಂಡ ಸ್ವಾತಂತ್ರ್ಯ ದಿನಾಚರಣೆ

  1. ಒಳ್ಳೆ ಸುದ್ದಿ ವಿಜಯಕ್ಕ

  2. ಹರೇ ರಾಮ . ಒಳ್ಳೆ ವರ್ತಮಾನಕ್ಕೆ ಧನ್ಯವಾದ

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×