- 2022 ನೇ ಸಾಲಿನ ಕೊಡಗಿನಗೌರಮ್ಮ ಪ್ರಶಸ್ತಿ - July 23, 2022
- ‘ಮುದುಡಿದ ತಾವರೆ ಅರಳಿತ್ತು’- 2021ರ ಕೊಡಗಿನಗೌರಮ್ಮ ಕಥಾಸ್ಪರ್ಧೆ – ತೃತೀಯ - September 18, 2021
- ಕಾಪಿ ಕುಡುದ ಜರ್ನಲಿಸ್ಟ್ – 2021ನೇ ಸಾಲಿನ ಕೊಡಗಿನಗೌರಮ್ಮ ಕಥಾಸ್ಪರ್ಧೆ – ದ್ವಿತೀಯ - September 1, 2021
ಶ್ರೀರಾಮಚಂದ್ರಾಪುರಮಠದ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಸೇವಾಯೋಜನೆಯಲ್ಲೊಂದಾದ ಮಾತೃವಿಭಾಗದ ಮಾಸಿಕ ಸಭೆ ಹಾಂಗೂ ಕುಂಕುಮಾರ್ಚನೆ ಕಾರ್ಯಕ್ರಮ ಕುಂಬಳೆಯ ಡಾ||ಡಿ.ಪಿ.ಭಟ್ಟರ “ಅಶ್ವಿನಿ” ಮನೆಲಿ ದಶಂಬರ ೧೫ ರಂದು ನೆಡದತ್ತು. ಲಲಿತಾಸಹಸ್ರನಾಮಪೂರ್ವಕ ಕುಂಕುಮಾರ್ಚನೆ, ಶ್ರೀರಾಮ ಭಜನೆ, ರಾಮನಾಮ ಸ್ಮರಣೆಗೊ ನಡೆದ ಈ ಕಾರ್ಯಕ್ರಮಲ್ಲಿ 25ಕ್ಕೂ ಹೆಚ್ಚು ಮಾತೆಯರು ಭಾಗವಹಿಸಿದವು.
ಸಭಾಕಾರ್ಯಕ್ರಮಲ್ಲಿ ಶ್ರೀಶ್ರೀಗಳವರ ಬಿಂದು-ಸಿಂಧು, ಮುಷ್ಟಿ ಭಿಕ್ಷೆ ಯೋಜನೆಗಳ ಬಗ್ಗೆ, ಸಮಾಜ-ಸುಕ್ಷೇಮದ ಬಗೆಗೆ ಮಾತೃವಿಭಾಗದ ವಲಯ ಅಧ್ಯಕ್ಷೆ ಶ್ರೀಮತಿ ಪದ್ಮಾವತಿ ಡಿ.ಪಿ.ಭಟ್ ಮಾತನಾಡಿದವು.ಅದಲ್ಲದ್ದೆ, ಡಿಸೆಂಬರ್ 25 ರಿಂದ ಐದು ದಿನಗಳ ಕಾಲ ಶ್ರೀ ಲಕ್ಷ್ಮೀನಾರಾಯಣ ಸಂಗೀತ ಕಲಾಶಾಲೆ, ಕಾಂಚನ ಇಲ್ಲಿ ಪರಮಪೂಜ್ಯ ಶ್ರೀಶ್ರೀರಾಘವೇಶ್ವರ ಭಾರತಿಯವರಿಂದ ಪ್ರಸ್ತುತಿ ಅಪ್ಪಲಿಪ್ಪ “ಸಮರ ಸನ್ನಾಹ” – ಮಕ್ಕಳಿಗಾಗಿ ರಾಮಕಥೆ – ಕಾರ್ಯಕ್ರಮದ ಹೇಳಿಕೆ ಕಾಗದವ ಎಲ್ಲರಿಂಗೂ ವಿತರಿಸಿದವು.
ಕಾರ್ಯಕ್ರಮಲ್ಲಿ ನಿವೃತ್ತ ಅಧ್ಯಾಪಕರಾದ ಕೋಡಿಮೂಲೆ ಮಹಾಲಿಂಗಭಟ್, ಕೋಂಗೋಟ್ ಗಣಪತಿಭಟ್, ಡಾ||ಡಿ.ಪಿ.ಭಟ್, ಮೊದಲಾದ ಮಹನೀಯರು ಉಪಸ್ಥಿತರಿತ್ತಿದ್ದವು.
ರಾಮಮಂಗಲ ಹಾಡಿ ಕಾರ್ಯಕ್ರಮ ಮುಕ್ತಾಯ ಮಾಡಿದವು.
~~~~
ಒಪ್ಪ ಆತು ಕಾರ್ಯಕ್ರಮ. ಹರೇ ರಾಮ
ಹರೇ ರಾಮ.