- 2022 ನೇ ಸಾಲಿನ ಕೊಡಗಿನಗೌರಮ್ಮ ಪ್ರಶಸ್ತಿ - July 23, 2022
- ‘ಮುದುಡಿದ ತಾವರೆ ಅರಳಿತ್ತು’- 2021ರ ಕೊಡಗಿನಗೌರಮ್ಮ ಕಥಾಸ್ಪರ್ಧೆ – ತೃತೀಯ - September 18, 2021
- ಕಾಪಿ ಕುಡುದ ಜರ್ನಲಿಸ್ಟ್ – 2021ನೇ ಸಾಲಿನ ಕೊಡಗಿನಗೌರಮ್ಮ ಕಥಾಸ್ಪರ್ಧೆ – ದ್ವಿತೀಯ - September 1, 2021
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಕೊಡಗಿನಗೌರಮ್ಮನೆಂಬ ಸಾಹಿತ್ಯ ಸರಸ್ವತಿಯ ಕುವರಿ,ಈ ಧೀರೋದಾತ್ತ ನಾಯಕಿಯ ಕುವರ, ಕೊಡಗಿನಗೌರಮ್ಮ ಕಥಾಸ್ಪರ್ಧೆಯ ದತ್ತಿನಿಧಿ ಪ್ರಾಯೋಜಕರೂ ಸಾಹಿತ್ಯ ಬಂಧುವೂ ಆದ ಮಡಿಕೇರಿಯ ಬಿ.ಜಿ.ವಸಂತನವರು 8-7-17ರಂದು ಅಸ್ತಂಗತರಾದರೆಂದು ತಿಳಿದು ಅತೀವ ದುಃಖವಾಯಿತು.ಸಾಹಿತ್ಯ ಸನ್ಮನಸಿನ ಒರತೆಯೊಂದು ಬತ್ತಿಹೋಯಿತು.
1996 ರಿಂದ ಪ್ರಾರಂಭಗೊಂಡ ಈ ಸ್ಪರ್ಧಾವೇದಿಕೆಯನ್ನು ಪೋಶಿಸಿಕೊಂಡು ಬರುತ್ತಿರುವ, ನಮ್ಮನ್ನಗಲಿದ ಈ ದಿವ್ಯ ಪುರುಷನ ಆತ್ಮಕ್ಕೆ ಚಿರಶಾಂತಿ ಲಭಿಸಿ,ಸಾಯುಜ್ಯ ದೊರಕಲೆಂದಾಶಿಸುವ ಗೌರಮ್ಮಕಥಾಸ್ಪರ್ಧಾ ಸಮಿತಿಯ ಅಧ್ಯಕ್ಷೆ ಶ್ರೀಮತಿ ಈಶ್ವರೀ ಶ್ಯಾಂಭಟ್ ಬೇರ್ಕಡವು, ಸಂಚಾಲಕಿ ವಿಜಯಾಸುಬ್ರಹ್ಮಣ್ಯ ಕುಂಬಳೆ ಹಾಗೂ ಸದಸ್ಯರುಗಳು ಶ್ರೀಮತಿಯರಾದ ಶ್ರೀ ದೇವಿ ಕಾನಾವು,ಶೀಲಾಲಕ್ಷ್ಮಿ ವರ್ಮುಡಿ ,ಕನಕವಲ್ಲಿ ಬಡಗಮೂಲೆ, ಕಿರಣಾಮೂರ್ತಿ ಏತಡ್ಕ, ಕುಸುಮಾ ಪೆರುಮುಖ, ಗಾಯತ್ರಿ ಬೇರ್ಕಡವು, ಸಾವಿತ್ರಿ ಏತಡ್ಕ, ವಿದ್ಯಾ ಪತ್ತಡ್ಕ(ವಿಜಯಾಸುಪಾರಿ),ಲಲಿತಾ ಲಕ್ಷ್ಮಿ ಸಿದ್ದಾಪುರ ಹಾಗೂ ಈ ತನಕ ಪ್ರಶಸ್ತಿ ಲಭಿಸಿದ 22ಮಂದಿ ಮಾತೆಯರು.
~~***~~
ಶ್ರದ್ಧಾಂಜಲಿ.
ಇಂದು ಕೊಡಗಿನಗೌರಮ್ಮ ಕಥಾಸ್ಪರ್ಧಾವೇದಿಕೆ ಬಳಗಂದ ; ಆನು,ಬೇರ್ಕಡವು ಈಶ್ವರಿ,ಬೇ.ಸಿ.ಗೋಪಾಲಕೃಷ್ಣ, ಡಾ| ಕೃಷ್ಣಮೂರ್ತಿ, ಇಷ್ಟು ಜೆನ ಮಡಿಕೇರಿ, ಗೌರಮ್ಮನ ಮನಗೆ ಹೋಗಿ. ಅವರ ಸೊಸೆಯ (ಮಗನ ಹೆಂಡತಿ) ಕಂಡು ಮಾತಾಡಿಕ್ಕಿ ಬಂದಿಯೊಂ
ಹೆರಿ ಜೀವಕ್ಕೆ ಮೋಕ್ಷ ಸಿಕ್ಕಲಿ ಹೆಳಿ ಪ್ರಾರ್ಥನೆ
ತುಂಬಾ ಬೇಜಾರಾತು. ಅವರ ಆತ್ಮಕ್ಕೆ ಸದ್ಗತಿ ಸಿಕ್ಕಲಿ ಹೇಳುವ ಪ್ರಾರ್ಥನೆ.
ಅವರ ಆತ್ಮಕ್ಕೆ ಚಿರ ಶಾಂತಿ ಸಿಕ್ಕಲಿ ಹೇದು ಪ್ರಾರ್ಥನೆ.
ಕಾಯ,ವಾಚಾ,ಮನಸಾ ಮತ್ತೂ ಹಲವಾರು ಸರ್ತಿ ನಮನಂಗೊ ,ನಮ್ಮ ಕೊಡಗಿನಗೌರಮ್ಮನ ಮಡಿಲು ಸೇರಿದ ಅವರ, ವರ ಪುತ್ರಂಗೆ.ಅವಕ್ಕೆ ಶಾಶ್ವತ ಸಾಯುಜ್ಯ ಸಿಕ್ಕಲಿ ಹೇಳಿ ನಾವೆಲ್ಲರೂ(ಬಯಲಿನವೂ) ಮನಸಾ ಸಮೂಹ ಪ್ರಾರ್ಥಿಸುವೊಂ ..