ಸಮಸ್ಯೆ 12 : ”ನೆತ್ತರ ಹಾರುಸಿ ಸುತ್ತಲು ನೆರದವು ಶಾಂತಿಯ ಸಾರಿದವು”

December 29, 2012 ರ 6:00 amಗೆ ನಮ್ಮ ಬರದ್ದು, ಇದುವರೆಗೆ 22 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಈ ವಾರದ ಸಮಸ್ಯೆ:

 

”ನೆತ್ತರ ಹಾರುಸಿ ಸುತ್ತಲು ನೆರದವು ಶಾಂತಿಯ ಸಾರಿದವು ||”

 

ಎಲ್ಲೋರುದೇ ಸಮಸ್ಯೆ ಬಿಡುಸುವಿರಲ್ಲದೋ?

– ಈ ಸಮಸ್ಯೆ “ಪರಿವರ್ಧಿನೀ” ಷಟ್ಪದಿಲಿ ಇದ್ದು.
ನಾಕು ನಾಕರ ನಾಕು ಗುಚ್ಛ, ಮೊದಲೆರಡು ಸಾಲಿಲಿ.
ನಾಕು ಮಾತ್ರೆಯ ಆರು ಗುಚ್ಛ, ಕೊನೆಗೊಂದು ಗುರು – ಮೂರು ಮತ್ತು ಆರ್ನೇ ಸಾಲಿಲಿ.

ಹೆಚ್ಚಿನ ಮಾಹಿತಿಗೆ:
http://oppanna.com/oppa/shara-kusuma-bhoga-bhamini-shatpadi
http://padyapaana.com

ಇದುವರೆಗೆ ಪ್ರಕಟ ಆದ ಸಮಸ್ಯಾಪೂರಣಂಗೊ:

 1. ಭಾಮಿನೀ: “ಗುರುಗೊ ಚಾತುರ್ಮಾಸ್ಯ ದೀಕ್ಷೆಯ ಪೀಠವೇರಿದವು”
 2. ಭೋಗ: “ನಾಕು ಲಾಡು ಬಳುಸಿ ಎನ್ನ ಮೋರೆ ನೋಡಿದಾ”
 3. ಕುಸುಮ: “ಹೂಗಿನೊಳ ಕುಸುಮವೇ ಇಪ್ಪ ಹಾಂಗೆ”
 4. ಶರ: “ಆಟಿಯ ತಿಂಗಳ ಮಳೆಗಾಲ”
 5. ಪರಿವರ್ಧಿನೀ: “ಸಣ್ಣಾದಿಪ್ಪಗ ಮಾಡಿದ ಕೀಟಲೆ ನೆಂಪುಗೊ ಹಸಿಯಿಕ್ಕು”
 6. ವಾರ್ಧಕ: “ಉರಿಬೆಶಿಲು ಬಂತಲ್ಲ ಸುಗ್ಗಿಮಳೆಗಾಲಲ್ಲಿ ಹೇಂಗಪ್ಪ ಬೆಳೆ ಬೆಳೆಶುದು”
 7. ಶರ: “ಕೆಸವಿನ ಪತ್ರೊಡೆ ರುಚಿಯಕ್ಕು”
 8. ಕುಸುಮ: “ನೆರೆಕರೆಯ ಹರಸಿದವು ನಮ್ಮ ಗುರುಗೊ”
 9. ಭೋಗ ; “ಯೋಗವೊಲುದು ಬಪ್ಪ ಹಾ೦ಗೆ ಬದುಕು ನೆಡೆಶುವೊ”
 10.  ಭೋಗ:  “ಹಾರಿತುತ್ತರಕ್ಕೆ ನೆಲವ ಬಿಟ್ಟು ಬೇಗನೆ”
 11. ಭಾಮಿನಿ : “ಹಸಿಯ ತರಕಾರಿಗಳ ತಿ೦ದರೆ ತು೦ಬಿದಾರೋಗ್ಯ”
ಶುದ್ದಿಶಬ್ದಂಗೊ (tags): , , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 22 ಒಪ್ಪಂಗೊ

 1. ಶೇಡಿಗುಮ್ಮೆ ಪುಳ್ಳಿ
  ಶೇಡಿಗುಮ್ಮೆ ಪುಳ್ಳಿ

  ಹತ್ತರೆ ಬಪ್ಪಗ ಹುಳಿ ಹುಳಿ ನೆಗೆಯೇ
  ಹುತ್ತಲ್ಲಿಪ್ಪಾ ಹಾವಿನ ಹಾಂಗೇ
  ಕತ್ತಲೆ ಹೊತ್ತಿಲಿ ಮಾಟೆಯ ಮಾಡೀ ಗಡಿಯೊಳ ನುಸುಳಿದವೂ
  ಹೊತ್ತಿನ ಕೂಳಿಗೆ ತಟ್ಟೆಯ ಹಿಡುದೂ
  ಸುತ್ತಲು ಹಾಕಿದ ಬೇಲಿಯ ಕರೆಲೀ
  ನೆತ್ತರ ಹಾರುಸಿ ಸುತ್ತಲು ನೆರೆದವು ಶಾಂತಿಯ ಸಾರಿದವೂ

  [Reply]

  VA:F [1.9.22_1171]
  Rating: +3 (from 3 votes)
 2. ಶೇಡಿಗುಮ್ಮೆ ಪುಳ್ಳಿ
  ಶೇಡಿಗುಮ್ಮೆ ಪುಳ್ಳಿ

  ಕಿತ್ತಳೆ ಹಣ್ಣಿನ ಬೆಳವಾ ನಾಡಿಲಿ
  ಹುತ್ತರಿ ಹಬ್ಬದ ಗೌಜಿಯ ಕಾಲದಿ
  ಹೊತ್ತಾರೆದ್ದು ಮನೆಯ ಮಕ್ಕೊ ಹಿತ್ತಲುಡುಗಿದವೂ
  ಮತ್ತಿನ ಮದ್ದಿನ ಮನೆಲೇ ಮಾಡೀ
  ಉತ್ತರ ಭಾಗದ ಗಡಿಗೇ ಹೋಗೀ
  ನೆತ್ತರ ಹಾರುಸಿ ಸುತ್ತಲು ನೆರದವು ಶಾಂತಿಯ ಸಾರಿದವೂ

  [Reply]

  ತೆಕ್ಕುಂಜ ಕುಮಾರ ಮಾವ°

  ತೆಕ್ಕುಂಜ ಕುಮಾರ ಮಾವ° Reply:

  ಎರಡೂ ಪೂರಣಂಗೊ ತುಂಬ ಲಾಯಕ.
  ಎರಡ್ನೆ ಪದ್ಯಲ್ಲಿ ” ಮನೆಯ ಮಕ್ಕೋ” ಮತ್ತೆ ” ಹಿತ್ತಲುಡುಗಿದವೂ” ಹೇಳುವಲ್ಲಿ ಮಾತ್ರೆ ತಪ್ಪಿದ್ದು.

  [Reply]

  VN:F [1.9.22_1171]
  Rating: 0 (from 0 votes)
 3. ಗಣೇಶ ಪೆರ್ವ
  ಗಣೇಶ ಪೆರ್ವ

  ಮುತ್ತಿನ ಹೋಲುವ ಚಿಣ್ಣರು ಪುಳ್ಳರು
  ಹತ್ತರೆ ಜೊತೆಲಿಯೆ ಸೇರಿದವೆಲ್ಲರು
  ಗತ್ತಿಲಿ ನೆಟ್ಟವು ಚೆ೦ದದ ಬಣ್ಣದ ತೋರದ ಕೊಡಿಮರವಾ
  ನೆತ್ತರು ಹರುದರು ಬಿಡದಿರು ಬಾವುಟ
  ಎತ್ತರ ಹಾರಲಿ ಹೇಳುತಲರೆ! ಬಾ-
  ನೆತ್ತರ ಹಾರುಸಿ ಸುತ್ತಲು ನೆರದವು ಶಾ೦ತಿಯ ಸಾರಿದವೂ.

  [Reply]

  ತೆಕ್ಕುಂಜ ಕುಮಾರ ಮಾವ°

  ತೆಕ್ಕುಂಜ ಕುಮಾರ ಮಾವ° Reply:

  ರೈಸಿತ್ತೋ ರೈಸಿತ್ತು…ಪೆರ್ವದಣ್ಣ. ತುಂಬ ಚೆಂದದ ಪರಿಹಾರ.
  ಷಡ್ಪದಿಲಿ ಮೂರನೆ ಮತ್ತೆ ಆರನೆ ಸಾಲಿನ ಅಕೆರಿಯಾಣ ಪದ ಲಘುವಾದರೂ ಗುರು ಹೇಳಿಯೇ ತೆಕ್ಕೊಂಬಲಾವುತ್ತು. ಹಾಂಗಾಗಿ “ಕೊಡಿಮರವ” ಹೇಳಿ ಬರದರೂ ತಪ್ಪಿಲ್ಲೆ.
  “ಬಾವುಟ ಎತ್ತರ….” ಹೇಳುವಲ್ಲಿ ಸಂಧಿ ಮಾಡಿ ಬಾವುಟ ವೆತ್ತರ” ಮಾಡುದು ಒಳ್ಳೆದು.

  [Reply]

  ಗಣೇಶ ಪೆರ್ವ

  ಗಣೇಶ ಪೆರ್ವ Reply:

  ಧನ್ಯವಾದ೦ಗೊ ಕುಮಾರ ಮಾವಾ..
  ಬಾವುಟ ಎತ್ತರ ಹೇಳುವ ವಿಸ೦ಧಿ ದೋಷವೂ, ಬಾವುಟವೆತ್ತರ ಹೇಳುವ ಪರಿಹಾರವೂ, ಎನಗೆ ಪೋಸ್ಟ್ ಮಾಡಿದ ಮತ್ತೆ ಅ೦ದಾಜಿ ಆಗಿದ್ದತ್ತು, ಪುನಃ ಒ೦ದು ಖಾಲಿ ಒಪ್ಪ ಮಾಡುವದು ಬೇಡ ಹೇಳಿ ಅದರ ತಿದ್ದಲೆ ಹೋಗದ್ದು.
  ಸುರುವಾಣ ಪ್ರಯತ್ನವೇ ‘ಪ್ರಥಮ ಚು೦ಬನ೦ ದ೦ತಭಗ್ನ೦’ ಹೇಳಿದ ಹಾ೦ಗೆ ಆಗದ್ದು ಭಾಗ್ಯ.. 😉

  [Reply]

  VA:F [1.9.22_1171]
  Rating: 0 (from 0 votes)
  ಬಾಲಣ್ಣ (ಬಾಲಮಧುರಕಾನನ)

  ಬಾಲಣ್ಣ (ಬಾಲಮಧುರಕಾನನ) Reply:

  ಗಣೇಶಾ, ಲಾಯಕ್ಕಾಯಿದು ಮಿನಿಯಾ.ಇನ್ನೂ ಬರವಲಕ್ಕನ್ನೆ , ” ಪಿಡಿ ಕಿಟ್ಟಿ , ಅಲ್ಲೇ?”

  [Reply]

  ಗಣೇಶ ಪೆರ್ವ

  ಗಣೇಶ ಪೆರ್ವ Reply:

  ಮೆಚ್ಹುಗೆ ಮಾತುಗೊಕ್ಕೆ ಧನ್ಯವಾದ೦ಗೊ ಗುರುಗಳೇ..
  ಪಿಡಿತ್ತ೦ ಶರಿಕ್ಕುಮ್ ಅ೦ಗಟ್ಟ್ ಇನಿಯುಮ್ ಕಿಟ್ಟೀಟ್ಟಿಲ್ಯ.. :-)

  [Reply]

  VA:F [1.9.22_1171]
  Rating: 0 (from 0 votes)
  ಬಾಲಣ್ಣ (ಬಾಲಮಧುರಕಾನನ)

  ಬಾಲಣ್ಣ (ಬಾಲಮಧುರಕಾನನ) Reply:

  ಗಣೇಶಾ, ಲಾಯಕ್ಕಾಯಿದು ಮಿನಿಯಾ.ಇನ್ನೂ ಬರವಲಕ್ಕನ್ನೆ , ” ಪಿಡಿ ಕಿಟ್ಟಿ , ಅಲ್ಲೇ?”

  ‘ ಮುತ್ತನು ಹೋಲುವ ಚಿಣ್ಣರು ಎಲ್ಲರು ‘ ಮಾಡಲಾಗದೋ? ಚಿಣ್ಣರು ಪುೞರು ಅರ್ಥ ಒಂದೇ ಅಲ್ಲದೋ

  [Reply]

  ತೆಕ್ಕುಂಜ ಕುಮಾರ ಮಾವ°

  ತೆಕ್ಕುಂಜ ಕುಮಾರ ಮಾವ° Reply:

  ಬಾಲಣ್ಣ,
  “ಚಿಣ್ಣರು ಎಲ್ಲರು” ಹೇಳಿ ಬರವಗ ವಿಸಂಧಿ ದೋಷ ಬತ್ತು. “ಚಿಣ್ಣರೆಲ್ಲರು ” ಹೇಳಿ ತಿದ್ದುವಾಗ ಮಾತ್ರೆ ತಪ್ಪುತ್ತು. ಅದರಂದ “ಚಿಣ್ಣರು ಪುಳ್ಳರು” ಹೇಳಿ ಇಪ್ಪದೇ ಒಳ್ಳೆದು. ಪದ್ಯ ಬರವಾಗ ದ್ವಿರುಕ್ತಿ ಬಂದರೆ ಚೆಂದವೇ, ಎಂತ ಹೇಳ್ತಿ..?

  [Reply]

  VN:F [1.9.22_1171]
  Rating: 0 (from 0 votes)
  ಡಾಮಹೇಶಣ್ಣ

  ಡಾಮಹೇಶಣ್ಣ Reply:

  ವ್ಹಾ!
  ಗಣೇಶಣ್ಣೋ!
  ಭಾರೀ ಲಾಯಕ ಆಯಿದು!
  `ಡ್ರಾಯಿಂಗ್ ಮಾಷ್ಟ್ರು’ ಭೇಶ್ ಹೇಳಿದ ಮತ್ತೆ ಇನ್ನು ಕೇಳೆಕೊ! ಮತ್ತಷ್ಟು ಬರೆಕದ!

  [Reply]

  VN:F [1.9.22_1171]
  Rating: +1 (from 1 vote)
  ಮುಳಿಯ ಭಾವ

  ರಘು ಮುಳಿಯ Reply:

  ಗರ್ವವೊ?ಹೆಮ್ಮೆಯೊ?ಮನಸ೦ತೋಷವೊ?
  ಸರ್ವ ಸದಸ್ಯರ ಬೈಲಿನ ಕೃಷಿಲೀ
  ಚರ್ವಿತಚರ್ವಣವಲ್ಲದ ನವರಸ ಪರಿವರ್ಧಿನಿ ಬ೦ತು।
  ಪೂರ್ವದ ಛಂದಸ್ಸಿನ ಪೂಜೆಗೆ ಹೊಸ
  ಪರ್ವವೆ ಶುರುವಾತನುಸಿದ್ದದು ನಿಜ
  ಪೆರ್ವದ ಗಣೇಶಭಾವನ ಕಲ್ಪನೆ ಹೊಸ ರ೦ಗಿನ ತ೦ತು॥

  ಶೇಪು ಭಾವ,ನೀರಮೂಲೆ ಅಕ್ಕ,ತೆಕ್ಕು೦ಜ ಮಾವ,ಪೆರ್ವದಣ್ಣ ಬರದ ಪೂರಣ೦ಗೊ ವಿಭಿನ್ನ ಕಲ್ಪನೆಗಳಾಗ್ಯೊ೦ಡು ಓದುಲೆ ಕಲ್ಪನೆಗೆ ಮೀರಿದ ಅನುಭವ ಕೊಟ್ಟವು.” ಬಾ-ನೆತ್ತರ”ಈ ಜೋಡಣೆ ಕವಿತೆಗೆ ಮೆರುಗು ಕೊಟ್ಟಿದು.
  ಬರಳಿ ಹೊಸ ಪ್ರಯತ್ನ೦ಗೊ.

  [Reply]

  VA:F [1.9.22_1171]
  Rating: +2 (from 2 votes)
 4. ತೆಕ್ಕುಂಜ ಕುಮಾರ ಮಾವ°
  ತೆಕ್ಕುಂಜ ಕುಮಾರ ಮಾವ°

  ಹತ್ತೂರಿನ ಜೆನ ಕೂಡಿಯೆ ಕೈ ಹಾ
  ಕುತ್ತವು, ಕರಸೇವೆಯ ಹೆಸರಿಲಿ ಸೇ
  ರುತ್ತವು, ಒಗ್ಗಟ್ಟಿಲಿಯೆಲ್ಲೊರು ಪೂರೈಸಿದವಾ ಕೆಲಸ ।
  ಪುತ್ತೂರಿನ ಪರಮೇಶ್ವರ ಸನ್ನಿಧಿ
  ಗೆತ್ತಿದ ಭಕ್ತರು ಹರುಷ ಪತಾಕೆಯ
  ನೆತ್ತರ ಹಾರುಸಿ ಸುತ್ತಲು ನೆರೆದವು ಶಾಂತಿಯ ಸಾರಿದವು ॥

  [Reply]

  VN:F [1.9.22_1171]
  Rating: +2 (from 2 votes)
 5. ಗಣೇಶ ಪೆರ್ವ
  ಗಣೇಶ ಪೆರ್ವ

  ಉತ್ತಮ ಜಾತಕ ಹೊ೦ದಿದ ಕೂಡಲೆ
  ಸುತ್ತಲು ಚೆಪ್ಪರ ಹಾಕಿದ ನೆರೆಕರೆ-
  ಯತ್ತಿಗೆ ಮದುವೆಲಿ ಭಾರೀ ಗವುಜಿಯ ನೆಳಗಿಸಿ ಬಿಟ್ಟವಿದ..
  ಕತ್ತಲೆ ಯಪ್ಪಗ ಗೇಸಿನ ಲೈಟಿನ
  ಹೊತ್ತಿಸಿ ನೆ೦ಟರು ಕೂದವು ನೆಗೆ ಬಾ-
  ನೆತ್ತರ ಹಾರಿಸಿ ಸುತ್ತಲು ನೆರದವು ಶಾ೦ತಿಯ ಸಾರಿದವು.

  [Reply]

  ತೆಕ್ಕುಂಜ ಕುಮಾರ ಮಾವ°

  ತೆಕ್ಕುಂಜ ಕುಮಾರ ಮಾವ° Reply:

  ಪಷ್ಟಾಯಿದು. ಈಗ “ಪಿಡಿ ಕಿಟ್ಟಿ”ದ್ದು ಗೊಂತಾವುತ್ತು, ಭಾವ.

  [Reply]

  VN:F [1.9.22_1171]
  Rating: 0 (from 0 votes)
  ಬಾಲಣ್ಣ (ಬಾಲಮಧುರಕಾನನ)

  ಬಾಲಣ್ಣ (ಬಾಲಮಧುರಕಾನನ) Reply:

  ವಾಹ್.. ಲಾಯಕ್ಕಾಯಿದು ಗಣೇಶಾ…

  [Reply]

  VN:F [1.9.22_1171]
  Rating: +1 (from 1 vote)
 6. ಜಯಶ್ರೀ ನೀರಮೂಲೆ
  jayashree.neeramoole

  ಸುತ್ತಲು ಗೋಭಕ್ತರು ಗುಂಪಾಗಿಯೆ
  ಮುತ್ತಲು, ಮಾತೆಗೆಯಾರತಿಯಬೆಳಗಿ
  ಮುತ್ತಿನ ಸಂದೇಶವ ಸಾರುವ ಹಿತನುಡಿಗಳ ಹೇಳಿದವು|
  ಹತ್ತು ಮತದವುದೆ ವೇದಿಕೆಲಿಪ್ಪಾ
  ಹೊತ್ತಿಗೆ ಗುರುಗೋ ಗೋವು ಪತಾಕೆಯ-
  ನೆತ್ತರ ಹಾರುಸಿ ಸುತ್ತಲು ನೆರೆದವು ಶಾಂತಿಯ ಸಾರಿದವು ॥

  ಎಲ್ಲಾ ಮತದವು ಹೇಳುವ ಅರ್ಥಲ್ಲಿ ‘ಹತ್ತು ಮತದವು’ ಹೇಳಿ ಉಪಯೋಗಿಸಿದ್ದೆ.

  [Reply]

  ತೆಕ್ಕುಂಜ ಕುಮಾರ ಮಾವ°

  ತೆಕ್ಕುಂಜ ಕುಮಾರ ಮಾವ° Reply:

  ‘ಮಾತೆಗೆಯಾರತಿಯಬೆಳಗಿ” – ಇಲ್ಲಿ ವ್ಯಾಕರಣ ತಪ್ಪು ಕಾಣುತ್ತು. ( ಮಾತೆಗೆ + ಆರತಿ = ಮಾತೆಗಾರತಿ ಅಪ್ಪದನ್ನೆ) ಅದರ ಬದಲು “ಮುತ್ತಲು,ಗೋಮಾತೆಗೆ ಕೈ ಜೋಡುಸಿ। ಮುತ್ತಿನ ಸಂದೇಶವ..” ಹೇಳಿ ಬರದರೆ ಸರಿಯಕ್ಕು.

  [Reply]

  ಜಯಶ್ರೀ ನೀರಮೂಲೆ

  jayashree.neeramoole Reply:

  ‘ಗೋಮಾತೆ’ ಶಬ್ದವೇ ಬರೆಕು ಹೇಳಿ ತುಂಬಾ ಪ್ರಯತ್ನಿಸಿದೆ… ‘ಆರತಿ’ ಬಿಡುಲೂ ಮನಸಾಯಿದಿಲ್ಲೇ… ಈಗ ಸರಿ ಆತು…

  ಸುತ್ತಲು ಗೋಭಕ್ತರು ಗುಂಪಾಗಿಯೆ
  ಮುತ್ತಲು,ಗೋಮಾತೆಗೆ ಕೈ ಜೋಡುಸಿ
  ಮುತ್ತಿನ ಸಂದೇಶವ ಸಾರುವ ಹಿತನುಡಿಗಳ ಹೇಳಿದವು|
  ಹತ್ತು ಮತದವುದೆ ವೇದಿಕೆಲಿಪ್ಪಾ
  ಹೊತ್ತಿಗೆ ಗುರುಗೋ ಗೋವು ಪತಾಕೆಯ-
  ನೆತ್ತರ ಹಾರುಸಿ ಸುತ್ತಲು ನೆರೆದವು ಶಾಂತಿಯ ಸಾರಿದವು ॥

  ಇನ್ನೊಂದು ಪರಿಹಾರ…

  ಹತ್ತು ದಿನಂಗಳ ರಾಮಕಥೆಲಿಯುದೆ
  ಚಿತ್ತಲಿ ಸಂತಸ ತುಂಬಿಸಿ ತಾಳದ
  ಹೊತ್ತಿಗೆ ಜೈ ಜೈಕಾರವ ಮಾಡುತಲೆಲ್ಲರು ಹಾರಿದವು|
  ಹತ್ತರೆ ಮಕ್ಕಳ ಸೇರುಸಿಗೊಂಡವು
  ಮುತ್ತಿನ ಹೋಲುವ ಹೂದಳಗಳ ಬಾ-
  ನೆತ್ತರ ಹಾರುಸಿ ಸುತ್ತಲು ನೆರೆದವು ಶಾಂತಿಯ ಸಾರಿದವು ॥

  [Reply]

  VA:F [1.9.22_1171]
  Rating: +2 (from 2 votes)
 7. ಮುಳಿಯ ಭಾವ
  ರಘು ಮುಳಿಯ

  ಎತ್ತರದಾ ಗುಡ್ದೆಯ ಕೊಡಿ ನೋಡಿರೆ
  ಕತ್ತರಿ ಹಾಕದ ತಲೆಗೂದಲಿನಾ
  ಕೆತ್ತದ ಗೆಡ್ಡದ ಜವ್ವನಿಗರದಾ ಗುಟ್ಟಿಲಿ ಸೇರಿದವು|
  ಕತ್ತಿಲಿ ಕಡಿ ಬೆಡಿಮದ್ದಿಲಿ ಬಡಿಬಡಿ
  ದೊತ್ತರೆ ಮಾಡುತ ಪೈಸೆಕ್ಕಾರರ
  ನೆತ್ತರ ಹಾರುಸಿ ಸುತ್ತಲು ನೆರೆದವು ಶಾಂತಿಯ ಸಾರಿದವು ॥

  (ಕ್ರಾ೦ತಿಯ ಸಾರಿದವು॥ ಆಯೆಕ್ಕಾತೋ ಏನೋ-ನಕ್ಸಲರಲ್ಲದೋ!)

  [Reply]

  VA:F [1.9.22_1171]
  Rating: +3 (from 3 votes)
 8. ಮುಳಿಯ ಭಾವ
  ರಘು ಮುಳಿಯ

  ಸುತ್ತಣ ದೇಶದ ಗುಟ್ಟಿನ ತಿಳುದೂ
  ಬಿತ್ತರುಸುಲೆ ದೊಡ್ಡಣ್ಣನ ಮನೆಗೇ
  ಸುತ್ತುಸುಗೀ ಭೂಮಾತೆಗೆ ಗೂಢಾಚಾರಿಯುಪಗ್ರಹವಾ|
  ಹೊತ್ತುಸಿ ಬೀಲಕೆ ಕಿಚ್ಚಿನ ಕೊಟ್ಟೂ
  ನೆತ್ತಿಯ ಮೇಲಾಕಾಶಕ್ಕೆ ಮುಗಿಲಿ
  ನೆತ್ತರ ಹಾರುಸಿ ಸುತ್ತಲು ನೆರೆದವು ಶಾಂತಿಯ ಸಾರಿದವು ॥

  [Reply]

  VA:F [1.9.22_1171]
  Rating: +1 (from 1 vote)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಸುಭಗಗೋಪಾಲಣ್ಣವಿದ್ವಾನಣ್ಣದೊಡ್ಡಭಾವಮಂಗ್ಳೂರ ಮಾಣಿಡೈಮಂಡು ಭಾವಎರುಂಬು ಅಪ್ಪಚ್ಚಿವೇಣಿಯಕ್ಕ°ಕೆದೂರು ಡಾಕ್ಟ್ರುಬಾವ°ಶಾ...ರೀಒಪ್ಪಕ್ಕಪೆಂಗಣ್ಣ°ಪಟಿಕಲ್ಲಪ್ಪಚ್ಚಿಪೆರ್ಲದಣ್ಣಮಾಷ್ಟ್ರುಮಾವ°ಶಾಂತತ್ತೆvreddhiಅಕ್ಷರದಣ್ಣದೊಡ್ಮನೆ ಭಾವಜಯಶ್ರೀ ನೀರಮೂಲೆಅನು ಉಡುಪುಮೂಲೆಪುಟ್ಟಬಾವ°ತೆಕ್ಕುಂಜ ಕುಮಾರ ಮಾವ°ಶೀಲಾಲಕ್ಷ್ಮೀ ಕಾಸರಗೋಡುನೀರ್ಕಜೆ ಮಹೇಶಬೋಸ ಬಾವ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
"ಆನು ಕಂಡುಂಡ ಕಾಶೀಯಾತ್ರೆ"
ಮನೆಯೊಳಗೆ ಮನೆಯೊಡೆಯ ಇದ್ದಾನೋ ಇಲ್ಲವೋ?

ಬೆಣಚ್ಚಿಪ್ಪಲ್ಲಿ ಹುಡ್ಕಲೆ