ಸಮಸ್ಯೆ ೧೪ : “ಚಳಿಗಾಲಕ್ಕಿದು ಬೇಕಕ್ಕೋ”

ಈ ವಾರದ ಸಮಸ್ಯೆ:

“ಚಳಿಗಾಲಕ್ಕಿದು ಬೇಕಕ್ಕೋ?”

ಚಳಿ ಇಲ್ಲದ್ರೂ ಕಾಲದ ನೆ೦ಪು ಮಾಡೆಕ್ಕಲ್ಲದೋ?

ಶರ ಷಟ್ಪದಿ

ಸೂ:

 • ಈ ಸಮಸ್ಯೆ “ಶರ” ಷಟ್ಪದಿಲಿ ಇದ್ದು.
  ನಾಕು ನಾಕರ ಎರಡು ಗುಚ್ಛ – ಮೊದಲೆರಡು ಸಾಲಿಲಿ.
  ನಾಕರ ಮೂರು ಗುಂಪು, ಕೊನೆಗೊಂದು ಗುರು – ಮೂರ್ನೇ ಸಾಲಿಲಿ.
 • ಹೆಚ್ಚಿನ ಮಾಹಿತಿಗೆ:
  http://oppanna.com/oppa/shara-kusuma-bhoga-bhamini-shatpadi
  http://padyapaana.com

ಇದುವರೆಗೆ ಪ್ರಕಟ ಆದ ಸಮಸ್ಯಾಪೂರಣಂಗೊ:

 1. ಭಾಮಿನೀ: “ಗುರುಗೊ ಚಾತುರ್ಮಾಸ್ಯ ದೀಕ್ಷೆಯ ಪೀಠವೇರಿದವು”
 2. ಭೋಗ: “ನಾಕು ಲಾಡು ಬಳುಸಿ ಎನ್ನ ಮೋರೆ ನೋಡಿದಾ”
 3. ಕುಸುಮ: “ಹೂಗಿನೊಳ ಕುಸುಮವೇ ಇಪ್ಪ ಹಾಂಗೆ”
 4. ಶರ: “ಆಟಿಯ ತಿಂಗಳ ಮಳೆಗಾಲ”
 5. ಪರಿವರ್ಧಿನೀ: “ಸಣ್ಣಾದಿಪ್ಪಗ ಮಾಡಿದ ಕೀಟಲೆ ನೆಂಪುಗೊ ಹಸಿಯಿಕ್ಕು”
 6. ವಾರ್ಧಕ: “ಉರಿಬೆಶಿಲು ಬಂತಲ್ಲ ಸುಗ್ಗಿಮಳೆಗಾಲಲ್ಲಿ ಹೇಂಗಪ್ಪ ಬೆಳೆ ಬೆಳೆಶುದು”
 7. ಶರ: “ಕೆಸವಿನ ಪತ್ರೊಡೆ ರುಚಿಯಕ್ಕು”
 8. ಕುಸುಮ: “ನೆರೆಕರೆಯ ಹರಸಿದವು ನಮ್ಮ ಗುರುಗೊ”
 9. ಭೋಗ: “ಯೋಗವೊಲುದು ಬಪ್ಪ ಹಾ೦ಗೆ ಬದುಕು ನೆಡೆಶುವೊ”
 10.  ಭೋಗ: “ಹಾರಿತುತ್ತರಕ್ಕೆ ನೆಲವ ಬಿಟ್ಟು ಬೇಗನೆ”
 11. ಭಾಮಿನಿ : “ಹಸಿಯ ತರಕಾರಿಗಳ ತಿ೦ದರೆ ತು೦ಬಿದಾರೋಗ್ಯ”
 12. ಪರಿವರ್ಧಿನಿ: ” ನೆತ್ತರು ಹಾರಿಸಿ ಸುತ್ತಲಿ ನೆರದವು ಶಾ೦ತಿಯ ಸಾರಿದವು”
 13. ವಾರ್ಧಕ : ” ಕೋಲು ತೆಕ್ಕೊ೦ಡಬ್ಬೆ ಬಪ್ಪಗಳೆ ಹುಳಿಮೋರೆ ಮಾಡ್ಯೊ೦ಡು ಓಡೋಡಿದ°”

ಸಂಪಾದಕ°

   

You may also like...

40 Responses

 1. ತೆಕ್ಕುಂಜ ಕುಮಾರ ಮಾವ° says:

  ಎರಡೂ ಪೂರಣಂಗೊ ತುಂಬ ಲಾಯಕ ಆಯಿದು. ಶುರುವಾಣ ಸರ್ತಿಲಿ ಒಂದೆರಡು ಸಣ್ಣ ತಪ್ಪುಗೊ ಬಂದರೂ, ಎರಡೂ ಅರ್ಥ ಪೂರ್ಣವಾಗಿದ್ದು. ನಿಂಗಳ ಪ್ರಯತ್ನ ಮುಂದುವರಿಸಿ.

 2. jayashree.neeramoole says:

  ಗುಳಿಗೆಯ ತಂದವ
  ಫಳಫಳ ತೊಟ್ಟೆಲಿ
  ಘಳಿಗೆಲಿ ತಿಂದಾ ಮೂರ್ನಾಕು|
  ಒಳಬಂದಪ್ಪನು
  ನಳಿನಿಗೆ ಹೇದವು
  ಚಳಿಗಾಲಕ್ಕಿದು ಬೇಕಕ್ಕೋ° ||

  ಸಂದರ್ಭ :ಮಿಂಟ್ ಚಾಕಲೇಟ್ ತಿಂದ ಮಾಣಿಯ ಅಬ್ಬೆ ನಳಿನಿಗೆ ಮಾಣಿಯ ಅಪ್ಪ ಹೇಳುದು ‘ಚಳಿಗಾಲಕ್ಕಿದು ಬೇಕಕ್ಕೋ°’

 3. jayashree.neeramoole says:

  ತಳಿ ಸಂಕರ ವಿಷ-
  ಯಲಿ ಕಾಳಜಿಗೆ ಹೊ-
  ಗಳಿಕೆ ಪಡದ ಗೋ ಡಾಗುಟ್ರು|
  ಕಳಕಳಿಲಿಯೆನಗೆ
  ತಿಳಿಯಪಡಿಸಿದವು
  ಚಳಿಗಾಲಕ್ಕಿದು ಬೇಕಕ್ಕೋ?

  ಸಂದರ್ಭ: ಅಪರೂಪದ ದೇಶೀಯ ಗೋತಳಿ ಹಸುವಿಂಗೆ ಇಂಜೆಕ್ಷನ್ ಕೊಡುಲೆ ಬಂದ ಗೋ ಡಾಗುಟ್ರು ದನವ ನೋಡಿಗೊಂಡು ತಳಿಸಂಕರಕ್ಕೆ ಒತ್ತಾಯ ಮಾಡುತ್ತಾ ಇಪ್ಪ ಎನ್ನ ಹತ್ತರೆ ಹೇಳುದು.
  ದೇಶೀಯ ಗೋತಳಿ ನಾಶ ಅಪ್ಪಂತಹ ಭೀತಿಯ ಕಾಲವ ‘ಚಳಿಗಾಲ’ ಹೇಳಿ ಕಲ್ಪಿಸಿಗೊಂಡಿದೆ.

  ಕೊನೆಯ ಎರಡು ಸಾಲು ಸಮಾಧಾನಕರ ಆಯಿದಿಲ್ಲೇ. ಇನ್ನೂ ಉತ್ತಮ ರೀತಿಲ್ಲಿ ಗೊಂತಾದರೆ ತಿಳಿಸಿ…

  • ರಘು ಮುಳಿಯ says:

   ಅಕ್ಕಾ,
   ಹೊಸ ಕಲ್ಪನೆ. ಆ ಸಾಲುಗಳಲ್ಲಿ ಲಘು ಹೆಚ್ಚಾಗಿ ರಜಾ ತೊ೦ದರೆ,ಅಷ್ಟೆ.

 4. Adithi says:

  ಹಳಿಯಿತು ಮನಸದು
  ಬಳಿಗೇ ಬಂತಿದು
  ಸುಳಿಯುವ ಗಾಳಿಯು ಎಂತಕ್ಕೋ
  ಮಳಿಗೆಲಿ ನೋಡಿದೆ
  ಬಿಳಿ ಕುರಿ ಕಂಬಳಿ
  ಚಳಿಗಾಲಕ್ಕಿದು ಬೇಕಕ್ಕೋ

  • ರಘು ಮುಳಿಯ says:

   ಒಳ್ಳೆ ಪ್ರಯತ್ನ ಅದಿತಿ ಅಕ್ಕ.
   “ಸುಳಿಯುವ ಗಾಳಿಯು ಎಂತಕ್ಕೋ” – ಈ ಸಾಲಿನ –“ಸುಳಿವಾ ಗಾಳಿಯಿದೆ೦ತಕ್ಕೋ” ಹೇಳಿ ಸಣ್ಣ ಮಾರ್ಪಾಡು ಮಾಡಿರೆ ವಿಸ೦ಧಿ ದೋಷ ನಿವಾರಣೆ ಅಕ್ಕು.

 5. ಗೋಪಾಲ್ ಬೊಳುಂಬು says:

  ಮಳೆಗಾಲದಿ ಅದ
  ಜಳಜಳ ಬೆಶಿಲೂ
  ಇಳೆಯಲಿ ಎಲ್ಲದು ಅಯೋಮಯಾ ।
  ಹುಳಿಯಾ ಬಿತ್ತುದೆ
  ಸುಳಿಚಕ್ಕುಲಿಯುದೆ
  ಚಳಿಗಾಲಕ್ಕಿದು ಬೇಕಕ್ಕೊ ?

  ಒಳಿವಲೆ ಬಿಡವೂ
  ತಳಿಯದೆ ಕೂದರೆ
  ನಳನಳಿಸುವ ಈ ಭುವಿಯನ್ನು ।
  ಸಳಕೆಯ ಬೆತ್ತದ
  ಪೊಳಿಯದು ಬೀಳೆಕು
  ಇಳೆಯನು ನಾಶವ ಮಾಡುವಗೇ ।

  • ರಘು ಮುಳಿಯ says:

   ಬೊಳು೦ಬು ಮಾವಾ,
   ಲಾಯ್ಕ ಆಯಿದು.ಎರಡ್ನೆ ಚರಣ ಪೂರಕವಾಗಿದ್ದು. ಆದರೆ
   “ಹುಳಿಯಾ ಬಿತ್ತುದೆ
   ಸುಳಿಚಕ್ಕುಲಿಯುದೆ”
   ಈ ಸಾಲುಗೊ ಒಳುದ ಒಟ್ಟು ಭಾವದ ಒಟ್ಟಿ೦ಗೆ ಚೇರ್ಚೆ ಆವುತ್ತಿಲ್ಲೆಯೋ ಹೇದು.
   “ಅಯೋಮ”ಯ -ಇದು ಜಗಣ ಹೇಳ್ತದು ಒ೦ದು ದೋಷ.
   ಶರ-ಲ್ಲಿ ಕಮ್ಮಿ ಶಬ್ದಲ್ಲಿ ಹೆಚ್ಚು ವಿವರುಸುಲೆ ಕಷ್ಟವೇ..

  • ಬಾಲಣ್ಣ (ಬಾಲಮಧುರಕಾನನ) says:

   ಲಾಯಕಾಯಿದು .ಗೋಪಾಲಣ್ನಾ ಭುವಿ ಅಲ್ಲ,” ಬುವಿ “ಹೇಳಿ ಆಯೆಕ್ಕು.

 6. ನಳಿನಾಕ್ಷಿಯೆ ನೀ
  ಸುಳಿಯುತಲಿಲ್ಲದೆ
  ಮಳೆಗಾಲಕ್ಕೆಯೆ ನೋವಕ್ಕು
  ಸುಳಿಕಣ್ಣಿನ ಇಳೆ
  ನಳಿನಾಕ್ಷಿಯ ನೆಗೆ
  ಚಳಿಗಾಲಲ್ಲಿಯು ಬೇಕಕ್ಕೋ

  • ರಘು ಮುಳಿಯ says:

   ಮಾತ್ರೆಗೊ ಸರಿ ಇದ್ದು ಭಾವ.
   ನಳಿನಾಕ್ಷಿ ಹೇಳಿರೆ ಭೂಮಿಯೊ ಅಲ್ಲ ಗಾಳಿಯೊ ಹೇಳಿ ಸ್ಪಷ್ಟ ಆತಿಲ್ಲೆ.

  • ತೆಕ್ಕುಂಜ ಕುಮಾರ ಮಾವ° says:

   ಮೋರೆಪುಟಲ್ಲಿ ಭಾವನ ಕೆಲವು ಕವನಂಗಳ ಓದಿದ್ದೆ.ಲಾಯಕ ಬರೆತ್ತಿ. ಈ ಪೂರಣವ ಕಾಂಬಗ ಛಂದೋಬದ್ಧವಾದ ಪದ್ಯವನ್ನೂ ಲಾಯಕ ಬರೆತ್ತಿ ಹೇಳುದು ಸ್ಪಷ್ಟ ಆವುತ್ತು.
   ಆದಿಪ್ರಾಸ,ಮಾತ್ರೆ,ಜಗಣ,ವಿಸಂಧಿ ಇತ್ಯಾದಿ ದೋಷಂಗೊ ಇಲ್ಲದ್ದೆ ಬರವದೇ ಛಂದೋಬದ್ಧ ಪದ್ಯದ ಸವಾಲು.ಅದೂ ಹವಿಕನ್ನಡಲ್ಲಿ ಬರವದು ಇನ್ನೂ ಕಷ್ಟದ ಕೆಲಸ.
   ಸುಳಿಗಣ್ಣಿನ+ಇಳೆ -> ಇಲ್ಲಿ ವಿಸಂಧಿ ಆಯಿದು ಭಾವ.
   ವಿಸಂಧಿ – ವ್ಯಂಜನಾಕ್ಷರದ ಮತ್ತೆ ಸ್ವರ ಬಂದಪ್ಪಗ ಅಲ್ಲಿ ಸಂಧಿ ಮಾಡದ್ದೆ ಇದ್ದರೆ ಅದರ ವಿಸಂಧಿ ದೋಷ ಹೇಳುದು.
   ಪ್ರಯತ್ನ ನಿಲ್ಲುಸೆಡಿ. ಪ್ರತೀ ವಾರವೂ “ಸಮಸ್ಯಾ ಪೂರಣ”ಕ್ಕೆ ಪರಿಹಾರ ಪದ್ಯ ಬರಕ್ಕೊಂಡಿರಿ.

   • raghumuliya says:

    ನಮ್ಮ ಭಾಷೆಲಿ ವಿಸ೦ಧಿ ದೋಷವ ತಪ್ಪುಸಲೆ ಭಾರೀ ಸಮಸ್ಯೆ ಆವುತ್ತು.ಸ೦ಧಿ ಮಾಡಿಯಪ್ಪಗ ಆ ಶಬ್ದ ಕನ್ನಡದ ಹಾ೦ಗೆ ಕಾಣುತ್ತು. ಉದಾಹರಣೆಗೆ ಸುಳಿಗಣ್ಣಿನ ಇಳೆ – ಈ ಶಬ್ದವ ಸುಳಿಗಣ್ಣಿನದಿಳೆ ( ಸುಳಿಗಣ್ಣಿನದು+ಇಳೆ) ಹೇಳಿ ಮಾಡೆಕ್ಕಷ್ಟೆ,ಅಲ್ಲದೋ ಮಾವ?

 7. ರಘು ಮುಳಿಯ says:

  ತೆಳಿ ಕುಡುದಿಕ್ಕಿಯೆ
  ತಳೆ ಕಟ್ಟಿತ್ತದ
  ಹಳೆ ತಲೆ ಬಟ್ಯನು ತೋಟಲ್ಲಿ।
  ಕಳಿ ಮ೦ಡೆಯ ಕೊ
  ತ್ತಳಿಗೆ೦ದಿಳುಶುಗು
  ಚಳಿಗಾಲಕ್ಕಿದು ಬೇಕಕ್ಕೊ ??।।

  • ಗೋಪಾಲ್ ಬೊಳುಂಬು says:

   ಅದಾ, ಈಗ ರಂಗೇರಿತ್ತದ ಪದ್ಯ ಪೂರಣಕ್ಕೆ. ರಘು ಭಾವಾ, ಹವ್ಯಕ ವಾರ್ತೆಲಿ ನಿಂಗಳ ಮದುಮಗಳ ಮನದಾಳದ ಮಾತುಗೊ ಮನಸ್ಸಿಂಗೆ ಮುದ ಕೊಟ್ಟತ್ತು. ಧನ್ಯವಾದಂಗೊ.

 8. ರಘು ಮುಳಿಯ says:

  ಇಳಿವಯಸಿಲಿಯುದೆ
  ಬೆಳಿತಲೆಯಜ್ಜ°ನು
  ಇಳಿಗುದೆಗಾಲಕೆ ಮಾರ್ಗಕ್ಕೆ।
  ಹಳೆ ಶಾಲಿನ ಹಿಡು
  ದಳಿಯನು ಕೇಳಿದ°
  ಚಳಿಗಾಲಕ್ಕಿದು ಬೇಕಕ್ಕೊ।।

  • ತೆಕ್ಕುಂಜ ಕುಮಾರ ಮಾವ° says:

   ಪಷ್ಟಾಯಿದು,ಇದು.

   • ಬಾಲಣ್ಣ (ಬಾಲಮಧುರಕಾನನ) says:

    ಆಹ! ಪುಂಖಾನುಪುಂಖ “ಶರ” ಸಂಧಾನ, ಭಾರೀ ಲಾಯಕ್ಕಾಯಿದು,

 9. ಗೋಪಾಲ್ ಬೊಳುಂಬು says:

  ಬೆಳಿಯಂಗಿಯ ಜೆನ
  ಚಳಿಕೋಣೆಯ ಒಳ
  “ಗಿಳಿಬಾಗಿಲಿ”ನೊಳ ಅರಟಿತ್ತು ।
  ಜುಳುಜುಳು ಮೊರೆತದ
  ಹಳತೇಸಿಯ ದನಿ
  ಚಳಿಗಾಲಕ್ಕಿದು ಬೇಕಕ್ಕೊ ?।

  ಗಿಳಿಬಾಗಿಲು = ವಿಂಡೋಸ್
  ಹಳತೇಸಿ = ಹಳತು + “ಏಸಿ”

  • ತೆಕ್ಕುಂಜ ಕುಮಾರ ಮಾವ° says:

   ಒಳ್ಳೆ ಪರಿಹಾರ.
   ಕೋಣೆಯ + ಒಳ -> ವಿಸಂಧಿ ಆಯಿದು.
   “ಚಳಿಕೋಣೆಲಿಯೇ” ಹೇಳಿ ಸರಿ ಮಾಡ್ಲಕ್ಕು.

 10. ರೈಸಿದ್ದಪ್ಪಾ ರೈಸಿದ್ದು..

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *