ಸಮಸ್ಯೆ- 09: “ಯೋಗವೊಲುದು ಬಪ್ಪ ಹಾಂಗೆ ಬದುಕು ನೆಡೆಶುವೊ°”

November 10, 2012 ರ 8:00 amಗೆ ನಮ್ಮ ಬರದ್ದು, ಇದುವರೆಗೆ 7 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಸಮಸ್ಯಾಪೂರಣ ರಜ್ಜ ಅಪುರೂಪ ಆತು- ಗ್ರೇಶಿದಿರೋ?
ಇದಾ, ಇಲ್ಲಿದ್ದು ಈ ವಾರದ್ದು!
ಒಂಭತ್ತನೇ ಕಂತು – ಭೋಗ ಷಟ್ಪದಿಲಿ.

ಈ ವಾರದ ಸಮಸ್ಯೆ:

ಯೋಗವೊಲುದು ಬಪ್ಪ ಹಾಂಗೆ ಬದುಕು ನೆಡೆಶುವೊ°

ಸಾರ್ಥಕವಾಗಿ ಬದ್ಕುತ್ತ ಯೋಗ ಎಲ್ಲೋರಿಂಗೂ ಸಿಕ್ಕಲಿ.

ಭೋಗ ಷಟ್ಪದಿ
ಭೋಗ ಷಟ್ಪದಿ

ಸೂ:

ಇದುವರೆಗೆ ಪ್ರಕಟ ಆದ ಸಮಸ್ಯಾಪೂರಣಂಗೊ:

 1. ಭಾಮಿನೀ: “ಗುರುಗೊ ಚಾತುರ್ಮಾಸ್ಯ ದೀಕ್ಷೆಯ ಪೀಠವೇರಿದವು”
 2. ಭೋಗ: “ನಾಕು ಲಾಡು ಬಳುಸಿ ಎನ್ನ ಮೋರೆ ನೋಡಿದಾ”
 3. ಕುಸುಮ: “ಹೂಗಿನೊಳ ಕುಸುಮವೇ ಇಪ್ಪ ಹಾಂಗೆ”
 4. ಶರ: “ಆಟಿಯ ತಿಂಗಳ ಮಳೆಗಾಲ”
 5. ಪರಿವರ್ಧಿನೀ: “ಸಣ್ಣಾದಿಪ್ಪಗ ಮಾಡಿದ ಕೀಟಲೆ ನೆಂಪುಗೊ ಹಸಿಯಿಕ್ಕು”
 6. ವಾರ್ಧಕ: “ಉರಿಬೆಶಿಲು ಬಂತಲ್ಲ ಸುಗ್ಗಿಮಳೆಗಾಲಲ್ಲಿ ಹೇಂಗಪ್ಪ ಬೆಳೆ ಬೆಳೆಶುದು”
 7. ಶರ: “ಕೆಸವಿನ ಪತ್ರೊಡೆ ರುಚಿಯಕ್ಕು”
 8. ಕುಸುಮ: “ನೆರೆಕರೆಯ ಹರಸಿದವು ನಮ್ಮ ಗುರುಗೊ”
ಶುದ್ದಿಶಬ್ದಂಗೊ (tags): , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 7 ಒಪ್ಪಂಗೊ

 1. ಪ್ರಸನ್ನತ್ತೆ
  ಪ್ರಸನ್ನತ್ತೆ

  ಜಾಗೆ ಕಮ್ಮಿ ಇದ್ದರೂದೆ
  ಬೇಗ ಬೇಗ ದುಡುದು ಬುವಿಲಿ
  ಯೋಗವೊಲುದು ಬಪ್ಪ ಹಾಂಗೆ ಬದುಕು ನಡೆಶುವೋ ।
  ಸೋಗು ಹಾಕಲಾಗ ನಾವು
  ಹೂಗು ಕುಸುಮ ಸೇರಿದಾಂಗೆ
  ಸಾಗುವಳಿಯ ಮಾಡಿಗೊಂಡು ರಥವ ನಡೆಶುವೊ॥

  ಯೇನಾರು ತಪ್ಪಿದ್ದರೆ ನಿಂಗೊ ಟೀಕೆ ಮಾಡ್ಲಕ್ಕು.

  [Reply]

  VN:F [1.9.22_1171]
  Rating: +2 (from 2 votes)
 2. ತೆಕ್ಕುಂಜ ಕುಮಾರ ಮಾವ°
  ತೆಕ್ಕುಂಜ ಕುಮಾರ ಮಾವ°

  ಸೋಗೆ ಮಾಡಿನಡಿಲಿ ಕೂದು
  ಸಾಗುವಳಿಯ ಮಾಡಿಗೊಂಡು
  ರೋಗರುಜಿನ ಬಾರದಾಂಗೆ ಗೇಯ್ಮೆ ಮಾಡುವೊ ।
  ಜಾಗೆಲಿಪ್ಪ ಸಮಯವೆಲ್ಲ
  ಭಾಗ್ಯವಕ್ಕು ಮುಂದೆ ನವಗೆ
  ಯೋಗವೊಲುದು ಬಪ್ಪ ಹಾಂಗೆ ಬದುಕು ನಡೆಶುವೊ ॥

  [Reply]

  VN:F [1.9.22_1171]
  Rating: +2 (from 2 votes)
 3. ಬಾಲಣ್ಣ (ಬಾಲಮಧುರಕಾನನ)
  ಬಾಲಣ್ಣ (ಬಾಲಮಧುರಕಾನನ)

  ಆಗ ಎನ್ನ ಕೆಲಸ ಬೇಗ
  ಸಾಗ ಹೇಳಿ ಮನಸು ಮುರುಟಿ
  -ರಾಗ ಗಟ್ಟಿಯಾಗಿ ನಿಂಬ ಛಲವು ಬೇಕದ
  ನೀಗಲೆಲ್ಲ ಬೇಗೆ, ನಮ್ಮ
  -ದಾಗಲೆಲ್ಲ ಎಂದು ಶುಭದ
  -ಯೋಗ ಒಲುದು ಬಪ್ಪ ಹಾಂಗೆ ಬದುಕು ನೆಡಶುವೊ

  [Reply]

  VN:F [1.9.22_1171]
  Rating: 0 (from 0 votes)
 4. ಜಯಶ್ರೀ ನೀರಮೂಲೆ
  jayashree.neeramoole

  ನೇಗಿಲಿಂದ ಹುಟ್ಟಿ ಬಂದು
  ತ್ಯಾಗ ಪ್ರೀತಿಯೊಡನೆ ನಿಂದು
  ನೀಗಿ ಜಗದ ಸಕಲ ಬವಣೆ ಪ್ರಾಣ ಕಳೆದೆ ನೀ|
  ತೇಗಿ ನಲಿವ ಅಸುರರೆಡೆಲಿ
  ಕೂಗಿ ಕೂಗಿ ‘ರಾಮ’ ಕರೆವ
  ಯೋಗವೊಲುದು ಬಪ್ಪ ಹಾಂಗೆ ಬದುಕು ನಡೆಶುವೊ||

  ಭೋಗಭಾಗ್ಯ ತ್ಯಾಗ ಮಾಡಿ
  ಯೋಗಿಯಾಗಿ ನಾರು ಮಡಿಲಿ
  ಹೋಗಿ ದಿವ್ಯ ರಾಮ ಪಾದುಕೆಯನು ಪಡೆದೆ ನೀ|
  ಬೇಗ ಹೋಗಿ ಚರಣಕೆರಗಿ
  ಸಾಗಿ ದೂರ ಗುರುವಿನೊಡನೆ
  ಯೋಗವೊಲುದು ಬಪ್ಪ ಹಾಂಗೆ ಬದುಕು ನಡೆಶುವೊ||

  ಬಾಗಿ ಶಿರವ ನಿತ್ಯ ನಮಿಸಿ
  ಹೋಗಿ ಹಾರಿ ಸೀತೆ ಕಂಡು
  ಹೇಂಗೆ ರಾಮನನ್ನೆ ಕೊಡುಗೆಯಾಗಿ ಪಡದೆ ನೀ?
  ಆಗಿಯಾಳು ದುಡಿದರಿಂದು
  ಬಾಗಿ ನಿಂಗು ಮೂರು ಲೋಕ
  ಯೋಗವೊಲುದು ಬಪ್ಪ ಹಾಂಗೆ ಬದುಕು ನಡೆಶುವೊ||

  ಹೂಗಿನಂಥ ಮನಸು ಹೊಂದಿ
  ಬೇಗೆಯಿಂದ ನೊಂದು ಬೆಂದು
  ಬಾಗಿ ಶರಣು ಶರಣು ಬಂದೆ ನೀವಿಭೀಷಣ |
  ಕಾಗೆ ಜನ್ಮವೇಯಿರಾಲಿ
  ಹೋಗಿ ಶರಣು ಶರಣು ಹೇಳಿ
  ಯೋಗವೊಲುದು ಬಪ್ಪ ಹಾಂಗೆ ಬದುಕು ನಡೆಶುವೊ||

  [Reply]

  ಬೊಳುಂಬು ಮಾವ°

  ಗೋಪಾಲ ಬೊಳುಂಬು Reply:

  ರಾಮಾಯಣವ ಕಥೆಯ ಮೇಳೈಸಿ ಕಟ್ಟಿದ ಪದ್ಯ ಸೊಗಸಾಯಿದು. ಒಂದಲ್ಲ, ಎರಡಲ್ಲ, ನಾಲ್ಕು ವಾಹ್, ಲಾಯಕಾಯಿದು. ಅಭಿನಂದನೆಗೊ ಜಯಶ್ರೀಗೆ.

  [Reply]

  VA:F [1.9.22_1171]
  Rating: 0 (from 0 votes)
 5. ಬೊಳುಂಬು ಮಾವ°
  ಗೋಪಾಲ ಬೊಳುಂಬು

  “ಬೂಗಿವೂಗಿ” ಟೀವಿ ಬೇಡ
  ಗೂಗುಲಲ್ಲಿ ಹೊಡಚ ಬೇಡ
  ಬೇಗ ನಿಲ್ಸಿ ಮೋಬೈಲಿಲಿ ಕಾಟು ಮಾತುಗಳ ।

  ಹೋಗಿ ನಿನ್ನ ಕೆಲಸ ಮಾಡು
  ಬಾಗಿ ಬದುಕಿ ನೆಡವ ಒಳ್ಳೆ
  ಯೋಗವೊಲುದು ಬಪ್ಪ ಹಾಂಗೆ ಬದುಕು ನಡೆಶುವೊ||

  [Reply]

  ಬಾಲಣ್ಣ (ಬಾಲಮಧುರಕಾನನ)

  ಬಾಲಣ್ಣ (ಬಾಲಮಧುರಕಾನನ) Reply:

  ಗೋಪಾಲಣ್ನ ,ಲಾಯಕಾಯಿದು. “ಬೇಗ ನಿಲ್ಸಿ ಮೋಬೈಲ್ಲಿ ಕಾಟು ಮಾತಿನ ” ಮಾಡಿರೆ ಅಕ್ಕೊ?

  [Reply]

  VN:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಚುಬ್ಬಣ್ಣಹಳೆಮನೆ ಅಣ್ಣಮುಳಿಯ ಭಾವಎರುಂಬು ಅಪ್ಪಚ್ಚಿಅಜ್ಜಕಾನ ಭಾವಪುಣಚ ಡಾಕ್ಟ್ರುವಿನಯ ಶಂಕರ, ಚೆಕ್ಕೆಮನೆದೀಪಿಕಾಗಣೇಶ ಮಾವ°ಪುಟ್ಟಬಾವ°ಕಾವಿನಮೂಲೆ ಮಾಣಿಶಾಂತತ್ತೆಜಯಶ್ರೀ ನೀರಮೂಲೆಪಟಿಕಲ್ಲಪ್ಪಚ್ಚಿಬೊಳುಂಬು ಮಾವ°ದೊಡ್ಡಮಾವ°ಶರ್ಮಪ್ಪಚ್ಚಿಕೇಜಿಮಾವ°ಅಕ್ಷರ°ವೇಣೂರಣ್ಣಪವನಜಮಾವಕಜೆವಸಂತ°ಮಾಲಕ್ಕ°ವಿಜಯತ್ತೆಅಕ್ಷರದಣ್ಣಡಾಮಹೇಶಣ್ಣ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ