ಆಚಾರಿ ಕಿಟ್ಟಪ್ಪು ಮರ ತಟ್ಟಿರೆ ‘ಕೊಟ್ಟಂವ್ ಕೊಟ್ಟಂವ್’ ಕೇಳುಗಡ!

ಮಧ್ಯಾಹ್ನ ಉಂಡುಗಿಂಡು ಮಾಡಿಕ್ಕಿ ಅಂತೇ ಕೂದೊಂಡಿಪ್ಪ ಒಪ್ಪಣ್ಣನ “ಚ ವೈ ಹಿ ತು ಏವ” ಮನಸ್ಸಿಲ್ಲಿ ನೆಂಪಾತು. ಚಳಿ ಚಳಿ ಚಳಿಗಾಲ ಇದಾದರೂ ಮಧ್ಯಾಹ್ನ ಉರಿ ಉರಿ ಬೆಶಿಲು ಇದ್ದೇ ಇದ್ದು. ಹಾಂಗೆ ಮನೆಯೊಳದಿಕ್ಕೇ ಕುತ್ತ ಕೂದೊಂಡಿತ್ತಿದ್ದು. ಬೆಶಿಲಿಂಗೆ ಮನುಗಲೆ ನಾವೆಂತ ಪರಾಧೀನ ಊಟ ಉಂಡದೋ?!. “ಚ ವೈ ಹಿ ತು ಏವ” ಶುದ್ದಿ ನೆಂಪಪ್ಪಗ ಕೆಲವು ಸರ್ತಿ ಉರುಳಿ ಉರುಳಿ ನೆಗೆ ಮಾಡಿಕ್ಕಿ ಉಸ್ಸಪ್ಪಾ ಉಸ್ಸಪ್ಪಾ ಹೇಳಿ ಸಾವರಿಸಿಗೊಂಬದೂ ಇದ್ದು. ಹಾಂಗೇ ಇಂದು ಇನ್ನೆಂತ ಇನ್ನಾಣ ಕಾರ್ಯಕ್ರಮ ಹೇಳಿ ಗ್ರೇಶಿ ಗ್ರೇಶಿಯೊಂಡಿಪ್ಪಗ ಬೆಶಿ ಬೆಶಿ ಕಾಪಿ ಬಂತು. ಕೊದಿಪ್ಪ ಕೊದಿಪ್ಪ ಕುಡಿವಲೆ ನಮ್ಮಂದಾಗ ಹೇದು ಊಪಿ ಊಪಿ ಕುಡಿವಾಗ ಕಟುಕುಟುನೆ ತಿಂಬಲೆಂತಿದ್ದು ಹೇದು ಅಬ್ಬೆ ಹತ್ರೆ ಕೇಟೆ. ಎಂತಿಲ್ಲೆ ಹೇಳಿರೆ ಇವ° ಕಂಯ್ಯಾ ಪಂಯ್ಯಾ ಹೇಳದ್ದಿರಾ° ಹೇದು ಗ್ರೇಶಿದವೋ ಗೊಂತಿಲ್ಲೆ, ಕಟ ಕಟನೆ ಹಲ್ಲು ಕಿಸಿಯದ್ದೆ ಅಟ್ಟುಂಬಳಂದ ಕಟ ಕಟ ಡಬ್ಬಿ ಆಡಿಸ್ಯೋಂಡು ತಂದು ಮಡುಗಿದವು ನಾಕು ಕರಡಿಗೆಗಳ – ‘ನೋಡಿದಾ ಇದರ್ಲಿಪ್ಪದೇನಾರು ಅಕ್ಕೋ ನಿನಗೆ’ ಹೇದೊಂಡು. ಕರ್ರುಕುರ್ರು ಅಗಿವಲೆ ಚಕ್ಕುಲಿ, ಉಂಡ್ಳಕಾಳು ಏನಾರು ಇದ್ದೋ ನೋಡಿರೆ ಓ ಮನ್ನೆ ಮಾಡಿದ ಕರ್ರ ಕರ್ರನೆ ಕಾದ ಸುಟ್ಟವು ನಾಕು ಇದ್ದತ್ತು. ಕಸಂಟು ಕಸಂಟು ನಾರ್ಲೆ ಸುರುವಾದಿಕ್ಕೋದು ಮೂಸಿ ಮೂಸಿ ನೋಡಿಗೊಂಡೇ ಕೈ ಹಾಕಿದೆ. ನಮ್ಮ ಕರಿ ಕರಿ ಕರಡಿಗೆ ಕಿಟಿಕಿಯ ಮೂಲಕ ಹೆರ ಮರಲ್ಲಿದ್ದ ಕಾಕೆಗೊಕ್ಕೆ ಕಂಡತ್ತೋ ಗೊಂತಿಲ್ಲೆ ಕಾಂವ್ ಕಾಂವ್ ಕೂಗಲೆ ಸುರುಮಾಡಿದವಯ್ಯ.

ಅಷ್ಟಪ್ಪಗ ಆಚ ಮನೆಂದ ಕಿಟಾರನೆ ಅರಚುವ ಶಬ್ದ ಕೇಳಿತ್ತು . ಎಂತರ ನೋಡಿರೆ ನಾಕು ಕುಂಞಿ ಮಕ್ಕೊ ಒಂದು ಕಿಣಿ ಕಿಣಿ ಮಣಿಯ ಹಿಡ್ಕೊಂಡು ‘ಆನಾಡುಸೋದು ಆನಾಡುಸೋದು’ ಹೇದು ಆಟ ಆಡ್ಯೋಂಡಿಪ್ಪಗ ಒಬ್ಬ° ದಢಾರನೆ ದಡಬಡಾನೆ ಕುರ್ಚಿಂದ ಕೆಳ ಬಿದ್ದನಡಾ. ಹೋಗಲಿ, ಕಿಟಿ ಕಿಟಿ ಮಕ್ಕೊ ಏನಾರು ಆಡಿಗೊಂಡು ಇಕ್ಕು ಹೇಳಿ ನಾವು ನಮ್ಮ ನಮ್ಮ ವಿಚಾರಲ್ಲಿ ಮಗ್ನ ಆತು.

 

“`

ಓ ಅಂದು ಒಪ್ಪಣ್ಣ° ಹೇಳಿದ “ಚ ವೈ ಹಿ ತು ಏವ” ಶುದ್ಧಿ ವಾಪಾಸು ಮನಸ್ಸಿಲ್ಲಿ ಮೂಡಿತ್ತು. ಪ್ರತ್ಯೇಕವಾಗಿ ಈ ಶಬ್ದಂಗೊಕ್ಕೆ ಒಂದು ಅರ್ಥ ಇದ್ದರೂ ಶ್ಲೋಕಲ್ಲಿ ಬಪ್ಪಗ ವಿಶೇಷ ಅರ್ಥ ದೊಡ್ಡಕ್ಕೆ ಎಂತ ಮಣ್ಣೂ ಇಲ್ಲೆಡ. ಅಂದರೂ ಅದಿಲ್ಲದ್ದೆ ಇಪ್ಪ ಶ್ಲೋಕಂಗೊ ಕಮ್ಮಿಯೇ ಹೇಳಿರೂ ತಪ್ಪಾಗ. ಮತ್ತೆ ಎಂತಕೆ ಅದರ ಉಪಯೋಗುಸುತ್ತು?! ಅದು ಅಂತೇ ಒಂದು ಲೆಕ್ಕಾಚಾರ ಭರ್ತಿ ಮಾಡಿ ಶ್ಲೋಕವ ಚಂದಮಾಡ್ಳೆ. ಬೈಲ ಭಾಷೆಲಿ ಹೇಳ್ತರೆ ಆಯ್ತ ಮಾಡ್ಳೆ ಬೇಕಾವ್ತಡ. ಹಾಂಗೆ ನೋಡಿರೆ ನಮ್ಮ ನಿತ್ಯ ಜೀವನಲ್ಲಿಯೂ ನಾವು ಅಲ್ಪ ಶಬ್ದಂಗಳ ನಮ್ಮ ಮಾತಿಲ್ಲಿ ಬಳಸುತ್ತು. ಮಾಷ್ಟ್ರುಮಾವನ ಮನೇಲಿ ಅಂದು ಎದುರು ಇಳುಶಿಕಟ್ಟಿ ಮಾಡು ಮಡುಗವ ಸಮಯಲ್ಲಿ ಆಚಾರಿ ಕಿಟ್ಟಪ್ಪು ಕೂಡ ಮರ ಕೆಲಸಕ್ಕೆ ಬಂದಿತ್ತಡ. ಆಚಾರಿ ಲಟಪಟನೆ ತಟ್ಟಿರೆ ನೆಗೆಮಾಣಿಗೆ ಅದು ಕೊಟ್ಟಂವ್ ಕೊಟ್ಟಂವ್ ಹೇಳಿ ಕೇಳುಗಡ!. ತೋಟಕ್ಕೆ ಮದ್ದು ಬಿಡ್ಳೆ ಅಡಕ್ಕೆ ಕೊಯ್ವಲೆ ಅಪ್ಪಗ ಸುಭಗಣ್ಣ ಸುಂದರನೋ ಗಿಂದರನೋ ಇದ್ದೋ ಹೇಳಿ ಹುಡ್ಕುತ್ತವಡ!.   india_corp_jayabal_has_learnt_new_skills_and_has_become_a_carpenter_photo_sciaf_large

ನಮ್ಮ ನಿತ್ಯಜೀವನಲ್ಲಿ ನಮ್ಮ ಭಾಷೆಲಿ ನಾವರ್ತೋ ಅರಡಿಯದ್ದೆಯೋ ಹೀಂಗೆ ನಾವು ಉಪಯೋಗುಸುವ ಕೆಲವು ಶಬ್ದಂಗೊ ಏವುದೆಲ್ಲ ಹೇಳಿ ಒಂದಾರಿ ನೋಡುವೊ°. ಅದಕ್ಕೆ ದೊಡ್ಡ ಅರ್ಥ ಇಲ್ಲದ್ರೂ ಅದು ಬೇಕಾವ್ತು ತೂಕ ಭರ್ತಿ ಮಾಡ್ಳೆ. ಅದು ಸೇರಿಬಂದರೇ ಮಾತಿಂಗೆ ಒಂದು ಓಘೆ, ತೂಕ, ಸ್ವಾರಸ್ಯ, ಎಲ್ಲ ಆವ್ತು. ಅದೆಂಗಿಪ್ಪದು ಹೇಳಿರೆ –

 

ಅಮರ್ಸಿ ಗಿಮರ್ಸಿ ಒಡೆಡ ಇನ್ನು ಅದರ ಢಣ ಢಣ ಘಂಟೆ
ಅಯ್ಯಪ್ಪ ಉಳ್ಳಪ್ಪ ಹೇಳದ್ದೆ ತಳಿಯದ್ದೆ ಮನಿಕ್ಕೊಂಬದು ತಕತಕ ಹಾರೋದು / ಕುಣಿವದು
ಉಂಡುಗಿಂಡು ಮಾಡುವದು ತಚಿ ಪಿಚಿ ಕೆಸರು
ಉರಿ ಉರಿ ಬೆಶಿಲಿಂಗೆ ಎಲ್ಲಿಗೆ ಹೋವ್ಸು ತಟಪಟ ಬಡಿವದು
ಉರುಳಿ ಉರುಳಿ ನೆಗೆ ಮಾಡೋದು ತಟುಪುಟುನೆ ನಡತ್ತ° ಕುಂಞಿಮಾಣಿ
ಉಸ್ಸಪ್ಪಾ ಹೇದು ಶ್ವಾಸ ಬಿಟ್ಟೆ ತಟ್ಟಿಮೆಟ್ಟಿ ಕೊಣಿಯೇಡ
ಊಪಿ ಊಪಿ ಆರ್ಸುವದು ತಳಂಪಳಂ ಆಡೋದು
ಎಂತಮಣ್ಣೋ° ಏನೋ ತುರುತುರುನೆ ಓಡುವದು
ಎಂತರದು ದದಿಗಿಣತೋ ದದಿಗಿಣತೋ ಮಾಡ್ತದು ತೆಚೆಪೆಚೆ ಮಾತಾಡೊದು
ಒತ್ತಿಗಿತ್ತಿ ಮಾಡಿರೆ ಹಾಳಕ್ಕು ತೋಡಿತೋಡಿ ಮೀವದು
ಕಂಯ್ಯಾ ಪಂಯ್ಯಾ ಎಂತ ಮಾಡ್ತವಪ್ಪ ದಡುಬುಡು ಓಡುವದು
ಕಚ್ಚಿ ಕಚ್ಚಿ ತಿಂಬದು ದರದರನೆ ಎಳಕ್ಕೊಂಡು ಹೋಪದು
ಕಟ ಕಟ ಹಲ್ಕಟ್ ಕಡಿವದು ದಸ ಬಸ ಓಡಾಡುವದು
ಕಟಕಟನೆ ನೆಗೆಮಾಡ್ತದು ದಸಕ್ಕನೆ ಬೀಳುವದು
ಕಟಕಟನೆ ಹಲ್ಲು ಕಿಸಿವದು ದಿಢೀರ್ ದಿಢೀರ್ ಕಾರ್ಯಂಗೊ
ಕಟುಕುಟುನೆ ತಿಂಬದು ದುರುದುರು ದುರುಗುಟ್ಟುವದು
ಕರಿ ಕರಿ ಕಪ್ಪು ಕಾಕೆ ದುರುದುರು ನೋಡುವದು
ಕರ್ರ ಕರ್ರ ಕಾದ ಮುರ್ಕು ದುರ್ರುಬುರ್ರು ಹೊಟ್ಟೆ೦ದ ಹೋಪದು
ಕರ್ರಕರ್ರನೆ ಅಗಿವದು ಧಡ ಧಡನೆ ಬೀಳುವುದು
ಕಸೆಂಟು ಕಸೆಂಟು ಪರಿಮ್ಮಳ ಧಾ೦ಯ್ ಧಾ೦ಯ್ .. ಶಾಲೆ ಬ್ಯಾ೦ಡ್ ಸೆಟ್ಟು
ಕಾಂವ್ ಕಾಂವ್ ಹೇದು ಕಾಕೆ ಕೂಗುವದು ಧಿಮಿ ಧಿಮಿ ಕೊಣಿವದು
ಕಿಟಾರನೆ ಕಿರುಚುವದು ಧೊಪ್ಪನೆ ಬೀಳುವದು
ಕಿಟಿ ಕಿಟಿ ನೆಗೆ ಮಾಡ್ತ ಮಾಣಿ ಪಚಪಚ ನೀರಿಲ್ಲಿ ಆಡೋದು
ಕಿಣಿ ಕಿಣಿ ಮಣಿ ಶಬ್ದ ಪಚಪಚನೆ ತಿಂಬದು
ಕಿಣಿಕಿಣಿ ಆಡುಸುವದು ಪಟ ಪಟ ಕೆಲಸ ಆಯೇಕು
ಕಿಲಕಿಲನೆ ನೆಗೆಮಾಡ್ತ° ಮಾಣಿ ಪಟಪಟ ಕೆಲಸ
ಕಿಸಕ್ಕನೆ ನೆಗೆ ಮಾಡುವದು ಪಟಾರ್ ಬಾರುಸುವದು
ಕಿಳಿಕಿಳಿ ಕಿಕ್ಕಿಳಿ ಪರ ಪರ ಕೆರವದು
ಕುಜ್ಜೆಗಿಜ್ಜೆ ಆಯ್ದೋ ಭಾವ ಈ ವಾರಿ ಪರ ಪರನೆ ಹರಿವದು
ಕುರು ಕುರು ಚಕ್ಕುಲಿ ಪಳ ಪಳ ಹೇಳಿ ಹೊಳವದು
ಕುರ್ರು ಕುರ್ರು ತಿಂಬದು ಪಿಚಕ್ಕ್ ಪಿಚಕ್ಕನೆ ತುಪ್ಪುವದು
ಕುಳು ಕುಳು ಮೆತ್ತಂಗೆ ಪಿಚಿ ಪಿಚಿ ಇಡ್ಲಿ
ಕೊಟ೦ಗನೆ ಸಾರು ಪಿಟಿಪಿಟಿ ನೋಟು
ಕೊಟ್ಟಂವ್ ಕೊಟ್ಟಂವ್ ಹೇದು ಆಚಾರಿ ಕುಟ್ಟುವದು ಪಿರಿ ಪಿರಿ ಮಾತು
ಕೊತ ಕೊತ ಕೊದಿವದು ಪಿರಿ ಪಿರಿ ಹಲುಬುದು
ಕ್ಕೊ ಕ್ಕೊ ಕ್ಕೋ ಹೇದು ಕೋಳಿ ಕೂಗೋದು ಪುರ್ ಪುರ್ ಪಾರಿವಾಳ
ಖಾರ ಖಾರ ಮೆಣಸು ಪುರ್ರು ಪುರ್ರು ಬಿಡುವದು
ಗಜಿಬಿಜಿ ಚೆಟ್ನಿ ಪುಸು ಪುಸು ಹೂಸು
ಗಟಗಟನೆ ಕುಡಿವದು ಪುಳುಂಕ ಮುಂಗುವದು
ಗಡ ಗಡ ನಡುಗುದು ಬಂಙಾನುಬಂಙ ಕಷ್ಟ ಕೆಲಸ
ಗಡ ಗಡ ನಡುಗುವುದು ಬಕ ಬಕನೆ ಉಂಬದು / ತಿಂಬದು
ಗಬಗಬ ಉಂಬದು ಬಜಕ್ಕನೆ ಬೀಳುದು /ಕೂಬದು
ಗಬಗಬಕ್ಕನೆ ತಿಂಬದು ಬಳ ಬಳನೆ ಕೂಗುದು
ಗರ ಗರ ಸಿಗಿವದು ಬಿರ ಬಿರನೆ ನಡೆಯುವುದು
ಗರಗರನೆ ಗೀಸೋದು ಬಿರಬಿರನೆ ನಡವದು
ಗರಮ್ಮನೆ ಚಾಯ /ಸಾರು ಬುಳಂಕನೆ ಮುಂಗುವದು
ಗಸ ಗಸ ತಿಕ್ಕುವುದು ಬೆರ್ರೇನೆ ಕೂಗುವದು
ಗಿಜಿ ಗಿಜಿ ಗೆಜ್ಜೆ ಬೆಳಿ ಬೆಳಿ ಪುಚ್ಚೆ
ಗಿರಗಿರನೆ ತಿರುಗುಸುವದು ಭಗಭಗನೆ ಹೊತ್ತೊದು
ಗಿಲಿ ಗಿಲಿ ರಾಟೆ ಭೌ ಭೌ ಕೊರಪ್ಪೋದು
ಗಿಸಿ ಗಿಸಿ ನೆಗೆಮಾಡುವದು ಮಟ ಮಟ ಮಧ್ಯಾಹ್ನ
ಗುಡು ಗುಡು ಗುಡುಗುದು ಮಣಮಣ ಮಂತರುಸುವದು
ಗುಡುಗುಡು ಗುಡುಗುತ್ತೋದು ಮಳ್ ಮಳ್ ಎಂತ ಮಾತಾಡ್ತ್ಯಾ ಹೇಳಿ ಉತ್ತರಕನ್ನಡದವು
ಗುಣು ಗುಣು ಗುಣುಗುಟ್ಟುವದು ಮಿಣಿ ಮಿಣಿ ಮಿಂಚು
ಗುರ್ರ್ ಗುರ್ರ್ ಗುರುಗುಟ್ಟುವದು ಮಿಣಿಮಿಣಿ ದೀಪ
ಗೊಜ್ ಗೊಜ್ ಬೀಸುವದು ಮಿರಿಮಿರಿ ಮೀನು
ಗೊಳಗೊಳನೆ ಕೂಗುವದು ಮ್ಯಾಂವ್ ಮ್ಯಾಂವ್ ಪುಚ್ಚೆ
ಘಮ ಘಮ ಪರಿಮಳ ರಟರಟ ಹಲ್ಲು ರಟ್ಟಿದರೆ
ಚಂಗನೆ ಚಂಗನೆ ನೆಗವದು ರಪ ರಪ ಬಡಿವದು
ಚಕ ಚಕ ಹೇದು ಕೆಲಸ ಮುಗುಶೆಕಿನ್ನು ರಪ ರಪ ಹೋಪದು / ಬಾರ್ಸೋದು
ಚಟ ಚಟನೆ ಹೊತ್ತುದು ರಪಕ್ಕನೆ ಎಳ್ಸೋದು / ಏಳುವದು
ಚಳಿ ಚಳಿ ಶೀತ ರಪರಪ ಬಾರ್ಸುವದು
ಚಿಂವ್ ಚಿಂವ್ ಅಳಿಲು ರೊಂಯ್ ರೊಂಯ್ ಬೀಸುವ ಗಾಳಿ
ಚಿಟಿ ಚಿಟಿ ಚಿಟಿಕಿ ಲಕ ಲಕ ಹೊಳವದು
ಚಿಟಿಪಿಟಿ ಮಳೆ ಲಟ ಲಟ ಲಟ್ಟುಸುವದು
ಚಿರಿಪಿರಿ ಮಳೆ ಲಟಕ್ ಲಟಕ್ ಮುರಿವದು
ಚಿಲಿಪಿಲಿ ಹಕ್ಕಿ ಲಟ್ಟು ಲೊಸ್ಕು ಮಾತಾಡುವದು
ಚೀಪಿ ಚೀಪಿ ತಿಂಬದು ಲಬಕ್ಕೇಳಿ ಹಿಡಿಯುವದು
ಚೀಪೆ ಚೀಪೆ ಜೇನ ಲೊಚಲೊಚ ನಕ್ಕುವದು
ಚುಂಯ್ ಚುಂಯ್ ಚುಟ್ಟಿ ಕಿಟ್ಟೋದು / ದೋಸೆ ಎರವದು ಲೊಚಲೊಚ ಹಲ್ಲಿ
ಚುಮು ಚುಮು ಛಳಿ ಲೊಟ ಲೊಟ ಅಜ್ಜಿ
ಚೆರೆ ಚೆರೆ ನಿಂಗಳದ್ದು ಲೊಟ ಲೊಟ ಕುಡಿವದು
ಚೆರೆಪೆರೆ ನಿಂಗಳದ್ದು ವಟವಟ ಮಾತಾಡುವದು
ಜಟ್ ಪಟ್ ಕೆಲಸ ಶತಪತ ಸುತ್ತುವದು
ಜಿಮ್ ಜಿಮ್ ಮಿಡಿವದು ಶೀತಲ್ಲಿ ಮೂಗು ಸೊಂಯ್ ಸೊಂಯ್
ಜೊಳಜೊಳನೆ ಮೀವದು / ನೀರು ಹರಿವದು / ಸುರಿವದು ಸರಸರ ಮಾತಾಡುವದು
ಝಣ ಝಣ ಬಳೆ ಸಿಡಿಮಿಡಿ ಸಿಟ್ಟು / ಕೋಪ
ಝಳ ಝಳ ಲಂಗ ಸುಂಯ್ ಸುಂಯ್ ಸುಂಟರಗಾಳಿ
ಝುಳುಝುಳುನೆ ಹರಿವದು ಸುರು ಸುರು ಪಾಯಸ ಸುರಿವದು
ಟಕಟಕ ಲೈಕ್ ಒತ್ತೋದು ಸೊಂಯ್ಯನೆ ಬೀಸುವದು
ಟುಂಯ್ ಟುಂಯ್ ಸೊಳ್ಳೆ ರಾಗ ಸೊರ ಸೊರ ಮೂಗಿಂದ ಸುರಿವದು
ಟ್ರಿನ್ ಟ್ರಿನ್ ಕಾಲಿಂಗ್ ಬೆಲ್ / ಸೈಕಲ್ ಬೆಲ್ ಹಪ್ಪ ಹಪ್ಪ ಮಾಡುವದು
ಠುಯ್ಯ್°  ಠುಯ್ಯನೆ ಹೆಟ್ಟುವದು ಹರ್ಕಟೆ ಪರ್ಕಟೆ ವಸ್ತ್ರ
ಡಂ ಡಂ ಬಾರ್ಸೋದು ಹಾರಿ ಹಾರಿ ಬೀಳೋದು
ಡೈ° ಡೈ° ಘಂಟೆ ಹೊಟ್ಟೆ ಚುರು ಚುರು ಆವ್ತೀಗ


ಇನ್ನೆಂತಾರು ಬಾಕಿಗೀಕಿ ಇದ್ದರೆ ಹೇಳಿಕ್ಕಿ. ಭರ್ತಿ ಮಾಡುವೋ° ಆಗದಾ.

 

ಚೆನ್ನೈ ಬಾವ°

   

You may also like...

16 Responses

 1. ಕುಮಾರ ಭಾವ says:

  ನಿಂಗಳ ಶ್ರಮ ಮೆಚ್ಚುತ್ತೆ,ಹವ್ಯಕ ಭಾಷೆಯ ಒಂದು Dictionary ಮಾಡಿದರೆ ಹೇಂಗೆ?

 2. Raja Kunjathody says:

  bhavayyana shrama mechekaddu.good luk bhava ningige

 3. ಇಂದಿರತ್ತೆ says:

  ಅಬ್ಬಬ್ಬಾ। ನಿಂಗಳ ಸಂಗ್ರಹ ನೋಡಿ ಪಿಳಿಪಿಳಿ ಕಣ್ನು ಬಿಟ್ಟಲ್ಲೇ ಬಾಕಿ.ರೆಜರೆಜವೇ ನೋಡುವಗ ಪಕಪಕನೇ ನೆಗೆ ಬಂದದು ಸತ್ಯ.
  ಮಳೆಗಾಲಲ್ಲಿ ಚಳಿಚಳಿ ಅಪ್ಪಾಗ ಕರುಕುರನೆ ಚಕ್ಕುಲಿ ಅಗುದಷ್ತು ಖುಷಿ ಆತು

 4. ಯಭೋ….ಎಡಿಯಪ್ಪಾ ಭಾವ ನಿಂಗಳತ್ರೆ… ತಲೆ ಗಿರ‍್ರನೆ ತಿರುಗಿತ್ತದಾ… ಹು ಹು ಹು ..!
  ~
  ಸಂಗ್ರಹ ಯೋಗ್ಯ ಶಬ್ದಂಗೊ ಭಾವ ಕೊಶೀ ಆತು…

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *