ಬೈಲಿಲಿ ಒಂದಿನ ತಿರಿಗಿದ್ದು ..

May 18, 2012 ರ 11:50 pmಗೆ ನಮ್ಮ ಬರದ್ದು, ಇದುವರೆಗೆ 28 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಮೊನ್ನೆ ಆದಿತ್ಯವಾರ. ಶನಿವಾರ ಸಮಕ್ಕೆ ಮಳೆ ಸೊಯ್ಪಿದ ಕಾರಣ ಬೆಶಿಲ ಗಾವೂ ಇಲ್ಲೆ. ಇನ್ನು ಮಳೆ ಬತ್ತರೂ ಹೊತ್ತೋಪಗ ಗುಡುಗಿದ ಮತ್ತೆಯೇ . ಆದಿತ್ಯವಾರ ಆದ ಕಾರಣ ನವಗೆ ರಜೆ ಪುರುಸೊತ್ತುದೇ. ಅಂತೇ ಮನೇಲಿ ಕೂದೊಂಡು ಎಂತ ಮಾಡುತ್ಸು. ಎಷ್ಟು ಟಿವಿಯನ್ನೇ ನೋಡುತ್ಸು. ಒಂದು ಚಾನ್ನಲ್ಲಿಲಿ ಬಂದ ಹಾಂಗಿರ್ತ್ಸೆ ಇನ್ನೊಂದು ಚಾನೆಲಿಲಿ ಬತ್ತದುದೆ. ಬೊಡುತ್ತಪ್ಪ. ಎಲ್ಯಾರು ತಿರುಗಿಯೊಂಡು ಹೋಪ° ಹೇಳಿರೆ ಎಲ್ಲಿಗಪ್ಪ ಹೋವುಸ್ಸು.  ಒಬ್ಬನೇ ಹಾಂಗೆ ಹೋಪಲೆ ಉದಾಸನ ಆವ್ತುದೇ. ಪೆಂಗಣ್ಣ ಇಕ್ಕೋ ..ಯಾವ್ಯೂರಿಲ್ಲಿದ್ದನೋ ಇಂದು. ಏವ ವರದಿಯೋ, ಯಾವ ರೈಲೋ. ಗುಣಾಜೆ ಮಾಣಿ ಯಡ್ಡಿ ರೆಡ್ಡಿ ಹೇಳಿ ತೆರಕ್ಕಿಲ್ಲಿ ಇಪ್ಪದು ಒಂದು ನಮೂನೆ ಆದರೆ ಪೆಂಗಣ್ಣನದ್ದು ಇನ್ನೊಂದು ನಮೂನೆ. ಸರಿ, ನೋಡ್ವೋ ಹೇಳಿ ಉದಿಯಪ್ಪಗ ಎದ್ದ ಹಾಂಗೆ ಪೆಂಗಣ್ಣ ಫೋನಿಂಗಾದರೂ ಸಿಕ್ಕುತ್ತನೋ ಹೇಳಿ ಟ್ರಿನ್ ಟ್ರಿನ್ ಮಾಡಿತ್ತು.

‘ಹರೇ ರಾಮ’ ಹೇಳಿ ಆಚಿಗಂದ ಕೇಳಿತ್ತು, ‘ಹರೇ ರಾಮ’ ಹೇಳಿ ಈಚಿಗಂದಲೂ ಹೇಳಿತ್ತು. ರಾಮ ರಾಮ ಸಿಕ್ಕಿದನ್ನೇ ಹೇಳಿ ಮನಸ್ಸಿಲ್ಲಿಯೇ ಹೇಳಿಗೊಂಡತ್ತು.

‘ಓಯಿ.., ಇಂದು ಪುರುಸೊತ್ತಿದ್ದೋ ನಿನಗೆ ಭಾವ°’ ಹೇಳಿ ಭಟ್ಟಮಾವನತ್ರೆ ದಿನ ನಿಘಂಟು ಮಾಡುವಾಂಗೆ ವಿಚಾರ್ಸಿಯೊಂಡತ್ತು. ಹಾ° ಎಂತಕೆ ಹೇದು ಕೇಟ°. ಅದಪ್ಪು.., ಎಂತಕೆ ಹೇಳಿ ಗೊಂತಾಗದ್ದೆ ನಾನು ಪ್ರೀ ಉಂಟು ಹೇಳುತ್ತೆಂತಕೆ ಅಪ್ಪೋ. ಅಂತೇ ಕೂದುಗೊಂಡಿದ್ದ, ಒರಗಿಯೊಂಡಿದ್ದ ಹೇಳಿ ಆರಾರಿನ್ನು ಬರವಲಾಗನ್ನೇ. ಅಲ್ಲದ್ದೇ ನೆಗೆಮಾಣಿಗೆ ಪೆಂಗಣ್ಣನ ಮೇಗೆ ಒಂದು ಕಣ್ಣು ಇದ್ದು ಕಣ್ಣ ಕೊಡಿಯಂಗೆ ಆಂಜುತ್ತನಿಲ್ಲೇದು. ಅಪ್ಪು… ಅಂತೇ ಸಾರಡಿ ತೋಡಿಲಿ ಕಟ್ಟದ ನೀರೂ ಇಲ್ಲದ್ದಿಪ್ಪಗ ಅಂತೇ ದಾಸನ ಹೂಗು ಕೊಯ್ವಲೆ ಬಾ ಹೇಳುಗು ಅವ°.  ‘ಇಂದು ಎನಗೆ ಎಡೆ ಇದ್ದು, ನಿನಗೂ ಎಡೆ ಇದ್ದರೆ ಒಪ್ಪಣ್ಣ ಬೈಲಿನವಕ್ಕೆ ಕಲಿಶಿ ಕೊಟ್ಟಾಂಗೆ ನಿನ್ನ ಬೈಕಿನ ಕಾಲೆಡಿಲಿ ಮಡಿಕ್ಕೊಂಡು ಬೈಲಿಂಗೆ ಒಂದು ಸುತ್ತು ಹಾಕಿ ಬಪ್ಪನೋ’ ಕೇಟೆ. ‘ಹಾ° ಸಮ, ರೆಡಿ’ ಹೇಳಿದ ಪೆಂಗಣ್ಣ. ಹಾ.. ಬಚಾವ್ ದೊಡ್ಡ ಒಂದು ಕೆಲಸ ಆತು ಇಲ್ಯಂಗೆ ಹೇದು ಮಾತ್ನಾಡಿದ ಪ್ರಕಾರ ಏಳು ಗಂಟೆಗೆ ಅಬ್ಬೆ ತೆಳ್ಳವು ರೆಡಿ ಹೇಳ್ವಾಗ ನಾವೂ ಮಿಂದು ರೆಡಿ ಆಗಿತ್ತು. ಸೂತಕ ಇದ್ದ ಕಾರಣ ಅರ್ಘ್ಯಜೆಪ ಕೆಲಸ ಇತ್ತಿಲ್ಲೆ ಅದಾ ಅಂದು.

ಮುಂದಂದ ಪೆಂಗಣ್ಣನೂ ಹಿಂದಂದ ಅನೂ ಬೈಕಿನ ಕಾಲೇಡೇಲಿ ಮಡಿಕ್ಕೊಂಡು ಕೂದಪ್ಪಗ ಬೈಕಿನ  ಡುರ್ರ್ ನೆ ಹೆರಡಿಸಿದ ಪೆಂಗಣ್ಣ. ಬೈಕು ಓಡುಸುತ್ತವಂಗೆ ದಾರಿಲಿ ಅಂತೇ ವರಕ್ಕು ತೂಗುತ್ಸು ಬೇಡ ಹೇದು, ಅದು ಇದೂ ಹೇಳಿ ಲೋಕಾಭಿರಾಮ ಲೊಟ್ಟೆ ಪಟ್ಟಾಂಗ ಮಾತ್ನಾಡಿಸಿಯೊಂಡು ಹೋವ್ತಾ ಇತ್ತು. ಅಷ್ಟಪ್ಪಗ ನೀರ್ಚಾಲು ಎತ್ತಿತ್ತು.

ನೀರ್ಚಾಲು ಹೇಳಿಯಪ್ಪಗ ಪೆರ್ವದಣ್ಣನ ನೆಂಪಾತು. ‘ಓಯಿ.. ಪೆರ್ವದಣ್ಣ ದುಬಾಯಿಂದ ಬೈಂದನಡ, ಒಂದರಿ ಮೋರೆ ನೋಡಿ ಮಾತಾಡಿಸಿಗೊಂಡು ಹೋಪೋ°’ ಹೇಳಿ ಗ್ರೇಶಿತ್ತು. ಮನೆಜಾಲಿಂಗೆ ಎತ್ತಿಯಪ್ಪಗ ಪೆರ್ವದಜ್ಜಿ ಹೇಳಿದವು “ಅವ°, ಗಣೇಶ°, ನಿನ್ನೇ ಹೋಗಿಯಾತು ವಾಪಾಸು” ಹೇದು. ಛೆ! ಹೇಳಿಕ್ಕಿ ಅಲ್ಲಿಂದಲೇ ತಿರುಗಿತ್ತು. ಸೀದಾ ಎತ್ತಿತ್ತು ದೊಡ್ಡಭಾವನಲ್ಲಿಗೆ. ದೊಡ್ಡಮಾವ ತಲಗೆ ಮುಂಡಾಸು ಕಟ್ಟಿಗೊಂಡು ಕೈಲಿ ಕತ್ತಿ ಹಿಡ್ಕೊಂಡು ಜಾಲಕರೇಲಿ ಆಚ ಹೊಡೆಂಗೆ ಹೋಪದು ಕಂಡತ್ತು. ಎಂಗಳ ಬೈಕು ಶಬ್ದ ಮಾವನ ಕೆಮಿಗೆ ಬಿದ್ದಿದಿಲ್ಲೆ, ನಾವಲ್ಲೆ ಹೋದ್ದೂ ಗೊಂತಾಯ್ದಿಲ್ಲೆ. ದೊಡ್ದಭಾವನ ಬೈಕೂ ಕಂಡತ್ತಿಲ್ಲೆ ಕಾರೂ ಕಂಡತ್ತಿಲ್ಲೆ. ದೊಡ್ಡಕ್ಕ° ಜಗುಲಿಂದ ಎಕ್ಕಳ್ಸಿ ನೋಡ್ತದು ನವಗೆ ಕಂಡತ್ತು. ಈಗಷ್ಟೇ ಮುಜುಂಗರಗೆ ಹೋದ್ದು ಹೇದವು. ಸರಿ ಇನ್ನಿಲ್ಲಿ ಬೈಕ್ ನಿಲ್ಲಿಸಿ ಕಾರ್ಯ ಇಲ್ಲೆ ಹೇಳಿ ಅಲ್ಲಿಂದ ಗುಡ್ಡೆ ಹತ್ತಿತ್ತು. ಇನ್ನೆಲ್ಲಿಗೆ ಮುಜುಂಗರೆ ಶಾಲೇಲಿ ಎಂತದೋ ಇದ್ದು ಪವನಜ ಮಾವನ ಕಾರ್ಯಕ್ರಮವೂ ಇದ್ದು ಹೇಳ್ವದು ಕೇಳಿದ್ದು ಮೊನ್ನೆಯೇ. ಅಂಬಗ ನಮ್ಮ ಗುರಿಕ್ಕಾರ್ರು ಎಲ್ಲ ಅಲ್ಲಿಗೆ ಎತ್ತಿಕ್ಕೊ? ಉಮ್ಮ, ಹೇದು ಎಂಗಳಷ್ಟಕ್ಕೇ ಹೇಳಿಗೊಂಡೆಯೋ°.  ಎಂತಾರು ನವಗೆ ಅಲ್ಲಿಗೆ ಬಿಡಿ ಆ ಬಯಲಿಂಗೆ ಇಳುದು ಗುಣ ಇಲ್ಲೆ ಹೇಳಿ ಕಂಡತ್ತು. ಎಡೆಪ್ಪಾಡಿ ಭಾವನೂ ಅಲ್ಲಿ ಸುಧರಿಕೆಲಿ ಇಕ್ಕಷ್ಟೇ.

ಸೀದಾ ಶೇಡಿಗುಮ್ಮೆ ಗೋಪಾಲಣ್ಣನಲ್ಲಿಗೆ ಹೋತು. ರಜೆ ಅಲ್ಲದೋ, ಅವು ಮನೇಲಿ ಇಕ್ಕು, ಹಲವು ಕತೆ, ವಿಷಯ, ಲೆಕ್ಕ, ಒಗಟು ಅವರತ್ರಂದ ಕೇಳಿ ತಿಳ್ಕೊಂಬೊ ಹೇಳಿ ಅಲ್ಲಿಗೆ ಇಳುದ್ದದು ಮಾರಾಯ್ರೆ…ಅವ್ವೋ… ಕುಚ್ಚಿ ತೆಗುಶಲೆ ಕುಂಬಳಗೆ ಹೋಯ್ದವಡ!. ಎಲಾ.., ಇದಾಗ ಪಂಚಾತಿಗೆ ಹೇಳಿ ಅಲ್ಲಿಂದ ಚಾಂಬಿತ್ತು. ಹಳೆಮನೆ ಅಣ್ಣನಲ್ಲಿಗೆ ಹೋಪೋ°.. ಹೇಳಿ ಗ್ರೇಶಿದ್ದು ಮಾತ್ರ. ಗೊಂತಿಪ್ಪದೇ.. ಎಲ್ಲಿ ಫಟ ತೆಗವಲೆ ಹೋಯ್ದವೋ, ಎಲ್ಲಿ ವಿಡಿಯೋ ಹಿಡಿವಲೆ ಹೋಯ್ದವೋ. ಅಣ್ಣನೂ.. ತಮ್ಮನೂ… ಉಹುಮ್ಮ್ಮ್ಮ್ಮ್.  ಆತೇ ಇಲ್ಲೆ ಈ ಜಂಬ್ರ ತೆರಕ್ಕು ಮುಗಿಯದ್ದೆ. ಆತು ಜಂಬ್ರಲ್ಲಿ ಕಂಡಲ್ಲಿ ಏನು ಹೇಳಿ ಮಾತಾಡಿಸಿರೂ ಆಚಿಗೆ ನೋಡಿಯೊಂಡು ಈಚಿಗೆ ನವಗೆ ಒಳ್ಳೆದು ಹೇಳಿ ನೆಗೆ ಮಾಡುತ್ಸು ಮಾತ್ರ ಸಿಕ್ಕುಗಟ್ಟೆ. ಮತ್ತೆ ಅವರತ್ರೆ ಮಾತಾಡೆಕಾರೆ ಅವು ಪೆಟ್ಟಿಗೆ ತುಂಬುಸುತ್ತ ಹೊತ್ತು ಆಯೇಕು. ಬೇಡ ಹೇಳಿ ದಾರಿ ಬದಲಿಸಿತ್ತು.

ಸರಿ, ಅಡ್ಕತ್ತಿಮಾರು ಮಾವನ ಕಾಂಬೋ ಹೇಳಿ ಅಲ್ಲಿಗೆ ಎತ್ತಿತ್ತು. ಹೇಂಗೂ ಕಳುದ ವರ್ಷದ ಒಂದು ಕೇನ್ ತೆಂಗಿನೆಣ್ಣೆಯೂ, ಎರಡು ಕಟ್ಟು ಹಲಸಿನಕಾಯಿ ಹಪ್ಪಳ ಕಳುದ ವರ್ಷವೇ ಬಂದರೆ ಕೊಡುವೇ ಹೇಳಿದ್ದು ಬಾಕಿ ಇದ್ದತ್ತಿದಾ. ಈಗ ಹೋದರೆ ಹಲಸಿನ ಕಾಯಿ ದೋಸೆಯೂ ಸಿಕ್ಕುಗು. ಉದಿಯಪ್ಪಾಣದ್ದು ಗಟ್ಟಿ ಮಾಡಿಕೊಂಬಲಕ್ಕು ಹೇಳಿ ಅಲ್ಲಿಗೆ ಹೋದರೆ… ಅವು ಜೀಪ್ ತೆಕ್ಕೊಂಡು ಕೊಪ್ಪರ ತುಂಬ್ಸ್ಯೊಂಡು ಅಂಬಗಷ್ಟೇ ಹೋದ್ದಡ. ಅದ್ರ ಇನ್ನು ಆಡಿಸಿ, ಎಣ್ಣೆ ಡಬ್ಬಿಲಿ ತುಂಬಸಿ  ಅವು ಎಷ್ಟೋತ್ತಿನ್ಗೆ ಬತ್ಸೋ…

ಅಲ್ಲಿಂದ ಹೆರಟತ್ತು. ಇದೆಂತ್ಸು ಇದ್ದು ಪೆಂಗಣ್ಣ ಯೇವುದರ ಮೋರೆ ನೋಡಿಕ್ಕಿ ಹೆರಟದಪ್ಪಾ ಗ್ರೇಶಿಯೊಂಡೆ ಮನಸ್ಸಿನೊಳಾದಿಕ್ಕೆ. ಬಾಯಿಬಿಟ್ಟು ಹೇಳಿರೆ ಅವ° ಇನ್ನು ಎಂತ ಗ್ರೇಶುತ್ತನೋ… ಅಲ್ಲಾ.. ಮದಾಲು ಇಳಿ ಕೆಳಗೆ ಹೇಳ್ತನೋ. ತಳಿಯದ್ದೆ ಕೂದತ್ತು.

ಕೊಡೆಯಾಲಕ್ಕೆ ಎತ್ತಿತ್ತು. ಇನ್ನೆಂತ ಮಾಡೇಕು. ನಮ್ಮವು ಇದ್ದವನ್ನೇ ಹೇಳಿ ಗ್ರೇಶಿಯೊಂಡು ನಮ್ಮ ಅಜ್ಜಕಾನ ಭಾವನ ಕಾಂಬದು ಹೇಳಿ ಗ್ರೇಶಿರೆ, ಆ ಮನುಷ್ಯ ಮುಜುಂಗರಗೆ ಹೋಪಲಿದ್ದು ಹೇಳಿ ನಿನ್ನೆಯೇ ಹೇಯ್ದನಡ. ಛೆ! ತಾಜುಮಹಲೂ ತಪ್ಪಿತ್ತನ್ನೇ ಅಂದರೂ ಶೇಡಿಗುಮ್ಮೆ ಪುಳ್ಳಿ ಇದ್ದನೋ ಕೇಳಿರೆ ಅವನೂ ಲೆಕ್ಚರ್ ಅಕ್ಕನೂ ಕಾರ್ಲಿ ಉದಿಯಪ್ಪಗಳೇ ಹೆರಟಿಕ್ಕಿ ಹೋಯ್ದವಡ. ಎಲ್ಲಿ ಗಾಳಿಪಟ ಹಾರ್ಸಲಿದ್ದೋ! ಆದಿತ್ಯವಾರ ಅಲ್ಲದೋ.. ಕುಂಟಾಂಗಿಲ ಭಾವ ಗುಡಿ ತೆಗೆಕ್ಕಾರೆ ಮಧ್ಯಾಹ್ನ ಅಕ್ಕು. ಅಕ್ಷರದಣ್ಣ ಆದಿತ್ಯವಾರ ರಜೆ ಹೇಳಿ ಶನಿವಾರ ಇರುಳೇ ಹೆರಟಿಕ್ಕಿ ಹೋಯ್ದವಡ. ಎಲ್ಲಿಗೆ? ಉಮ್ಮಪ್ಪ. ನವಗೆಂತದಕೆ ಅದೆಲ್ಲ ಚೋದ್ಯ. ಮಂಗ್ಳೂರ ಮಾಣಿ… ಎಲ್ಲಿ ರುದ್ರ ಹೇಳ್ಳೆ ಹೋಯ್ದನೋ. ಬೊಳುಂಬು ಗೋಪಾಲ ಮಾವ, ಪಟದ ಶ್ಯಾಮಣ್ಣ, ಮರುವಳ ಮಾವ, ನೀರಮೂಲೆ ಅಕ್ಕ, ಭಾಗ್ಯ ಅಕ್ಕನತ್ರೆ ಶುದ್ದಿ ಮಾತಾಡ್ಳೆ ಕೂದರೆ ಮಧ್ಯಾಹ್ನ ಮುಟ್ಟ ಅಲ್ಲೇ ಆಗಿ ಹೋಕು. ಬಿಟ್ಟತ್ತು ಮಂಗಳೂರ ವಹಿವಾಟು ಆಗ ಹೇಳಿ. ಹೊಸಬೆಟ್ಟಿನವು ಡೆಲ್ಲಿಗೆ ಎತ್ತಿದ್ದವಡ ಹೇಳಿ ಮೊನ್ನೆಯೇ ಚಾವಡಿಲಿ ಪ್ರಚಾರ ಇದ್ದತ್ತು. ಇನ್ನು ಆ ಹೊಡೆ ಹೋಗಿ ಗುಣ ಇಲ್ಲೆ ಹೇಳಿ ತೀರ್ಮಾನಿಸಿತ್ತು.
ಗಾಡಿ ಪುತ್ತೂರ ಮಾರ್ಗ ಹಿಡುದತ್ತು. ಮುಳಿಯ ಭಾವ, ತೆಕ್ಕುಂಜ ಮಾವ, ಡೈಮಂಡು ಭಾವ, ಕೆಪ್ಪಣ್ಣ, ಚೆನ್ನಬೆಟ್ಟಣ್ಣ, ಚುಬ್ಬಣ್ಣ, ದೀಪಿಕಕ್ಕ, ಸುವರ್ಣಿನಿ ಅಕ್ಕ ಇವೆಲ್ಲಾ ಈಗ ಮೊನ್ನೆ ಮೊನ್ನೆಷ್ಟೇ ಎರಡೆರಡು ಸರ್ತಿ ಊರಿಂಗೆ ಬಂದಿಕ್ಕಿ ಹೋದ್ದಿದಾ. ಹಾಂಗಾಗಿ ಪ್ರತಿ ವಾರಾಂತ್ಯಲ್ಲಿ ಊರ್ಲಿ ಇಪ್ಪಲೆ ಅವ್ವೆಂತ ಸೀಸನ್ ಟಿಕೇಟು ಮಡಿಕ್ಕೊಂಡಿದವೋ!!.

ಗಂಟೆ ಹತ್ತುವರೆ. ಸರ್ಪಮಲೆ ಮಾವನ ಮನಗೆ ಎತ್ತಿತ್ತು. ದೊಡ್ಡಗ್ಲಾಸಿಲ್ಲಿ ಚಾಯವೂ, ಉಂಡ್ಳಕಾಳು ದಕ್ಕಿತ್ತು. ಮಾವನೂ ಪುರುಸೋತ್ತಿಲ್ಲಿ ಕೂದೊಂಡಿತ್ತಿದ್ದವು. ನಮ್ಮ ಆಗಮನ ಕೊಶಿ ಆತು. ಆದರೆ ಮಾವನ ಮೇಜು ಕಾಲಿ ಇಪ್ಪದು ನೋಡಿ ಎಂತಪ್ಪ ಹೇಳಿ ಆತು. ಕೇಳಿರೆ. ಪುಸ್ತಕ ಎಲ್ಲ ಈಗ ಒಳ ಕವಾಟಿಲಿ ಮಡಿಗಿದ್ದವಡ ಲೈಬ್ರರಿಲಿ ಮಡುಗುತ್ತ ಹಾಂಗೆ. ಹೆರ ತಂದು ಮಡುಗಿರೆ ಬಂದವು ಒಂದಾರಿ ಓದಿ ಕೊಡುತ್ತೆ ಹೇಳಿಕ್ಕಿ ಹೋದರೆ ಮತ್ತೆ ಅವರನ್ನೇ ಹುಡುಕೆಕ್ಕಾವ್ತಡ. ಅದಪ್ಪು. ನಮ್ಮ ಬೈಲಿಂದ ಒಬ್ಬ ಓ ಅಂದು ಹಾಂಗೆ ಮಾಡಿದ್ದು ನಾವಿನ್ನೂ ಮರದ್ದಿಲ್ಲೆ ಇದಾ.   ಸರಿ, ಸರ್ಪಮಲೆ ಮಾವನಲ್ಲಿ ಮಾತಾಡಿ ಆತು. ಅವಕ್ಕೂ ನವಗೂ ಸಂತೋಷ ಆತು.

ಇನ್ನೆಲ್ಲಿಗೆ ? ಎಲ್ಲಿಗೆ ಉಮ್ಮ? ಚೂರಿಬೈಲು ದೀಪಕ್ಕ, ಡಾಗುಟ್ರಕ್ಕ, ವೇಣಿ ಅಕ್ಕಾ, ಕಳಾಯಿ ಅತ್ತೆ.. ಒಬ್ಬೊಬ್ಬನನ್ನೇ ನೆಂಪು ಆತು. ಹೋಪಲೆ ದಾರಿ ಗೊಂತಿಲ್ಲೆ. ಒಬ್ಬೊಬ್ಬನನ್ನೇ ನೆಂಪು ಆವ್ತು. ಹೋದರೆ ಏನಾರು ತಿಂಬಲೆ ಮಾಡಿ ತಂದು ಮಡುಗುತ್ತವು. ನಮ್ಮ ಹಡಗಿಲ್ಲಿ ಜಾಗೆಯೂ ಇಲ್ಲೆ ಅಷ್ಟಕ್ಕೆ ತಕ್ಕಿತ. ಅಷ್ಟಪ್ಪಗ ನೆಂಪಾತು ಕೆದೂರು ಡಾಕುಟರ್ ಭಾವನ ಕಾಂಬಲೆ ಮರದತ್ತು ಬಪ್ಪ ದಾರಿಲಿ ಇಂದು ಹೇದು. ಛೆ! ಇನ್ನೆಂತ ಮಾಡುತ್ಸು… ಪೆಂಗಣ್ಣನತ್ರೆ ಈಗ ಹೇಳಿರೆ ಬೈಯದ್ದೇ ಉಳಿಗ. ತಳಿಯದ್ದೆ ಬಿಟ್ಟತ್ತು. ಮಾಷ್ಟ್ರುಮಾವನ ಈಗ ಮನ್ನೆಷ್ಟೇ ಕಂಡದು ಕಾನಾವಣ್ಣನ ಉಪ್ನಾನಲ್ಲಿ. ಇನ್ನೀಗ ವಾಪಾಸು ಹೋಗಿ ಅವರ ಹೊಗೆಸೊಪ್ಪಿನಂಡೆಯ ಕಾಲಿ ಮಾಡುತ್ಸು ಬೇಡ ಕಂಡತ್ತು. ಹೋದರೆ ಶಾಂತತ್ತೆ ಕೈಂದ ಹೋಮ್ ಮೇಡ್ ‘ಸಂಜೀರ’ ತಟ್ಟೆ ಕಾಪಿ ಗ್ಲಾಸಿನೊಟ್ಟಿಂಗೆ ಸಿಕ್ಕುತಿತ್ತು. ಅಂದರೂ ಇನ್ನೂ ಬಾಕಿದ್ದವರ ಕವರ್ ಮಾಡೆಕ್ಕನ್ನೆ.   ವಿದ್ಯಾಕ್ಕನನ್ನೂ ಮನ್ನೆ ಕಾನಾವಿಲ್ಲಿ ಮಾತ್ನಾಡಿಸಿ ಆಯ್ದು. ವೇಣೂರಣ್ಣ ಎಲ್ಲಿ ಮೊಕ್ಕಾಂ ಹೇಳಿ ಗೊಂತಿಲ್ಲೆ. ಕೊಳಚಿಪ್ಪು ಭಾವ ಓದುವದರ್ಲ್ಲೆ ಬೆಚ್ಚ. ಬೆಟ್ಟುಕಜೆ ಅನಂತಣ್ಣ ಯಾವುದಾರು ಜಂಬ್ರಲ್ಲಿ ಕಾಣದ್ದೇ ಇರ್ತವಿಲ್ಲೆ. ಪೆರ್ಲದಣ್ಣನ, ಎರುಂಬು ಅಪ್ಪಚಿಯ, ಆಚಕರೆ ಭಾವನ, ನೀರ್ಕಜೆ ಅಣ್ಣನ ನಂಬ್ರ ಇಲ್ಲೆ.  ಪುಟ್ಟಮಜಲ ಪುಟ್ಟ ಭಾವ, ಬಲ್ನಾಡು ಭಾವ, ವಿಷ್ಣುನಂದನ, ಹರೀಶ್ ಕೇವಳ ಊರ್ಲಿ ಇಲ್ಲೆ. ಸಂಕಹಿತ್ಲ ಸುಮನಕ್ಕನೂ ಅಷ್ಟೇ. ಮಾಡಾವು ಗಣೇಶ ಮಾವಂಗೆ ಇಂದು ಎಲ್ಲಿದ್ದೋ ಸ್ವಾಹಾ ಹೇಳ್ಳೆ. ಈಗಷ್ಟೇ ಮದುವೆ ಕಳುದ ಕಾರಣ ಒತ್ತರೆ ಮಾಡ್ತ ಲೆಕ್ಕಲ್ಲಿ ಬಂಡಾಡಿ ಅಜ್ಜಿಗೂ ಪುರುಸೊತ್ತಾಯ್ದಿಲ್ಲೆ, ಮದುವೆ ಸಮ್ಮಾನ ಲೆಕ್ಕಲ್ಲಿ ಬಂಡಾಡಿ ಪುಳ್ಳಿಗೂ ಪುರುಸೊತ್ತಿಲ್ಲೆ. ಅಂತೂ ಇಂತೂ ಮಧ್ಯಾಹ್ನ ಎತ್ತಿತ್ತು ನಾವು ಕಾನಾವು ಡಾಕುಟ್ರು ಭಾವನಲ್ಲಿಗೆ. ಅಲ್ಲಿಗೆ ಹೋದಮತ್ತೆ ಮನಗೆ ಹೋಗದ್ರೆ ‘ಹಸಿ ಹಸಿ ಬೈಗು ಶ್ರೀ ಅಕ್ಕಾ’ ಹೇಳಿದ° ಪೆಂಗಣ್ಣ. ಬೈಲಿನವು ಆರಾರು ಪುತ್ತೂರ ಹೊಡೆಂಗೆ ಹೋದರೆ ಮಾತಾಡ್ಸದ್ದೆ ಹೋದರೆ ಅವ್ವಲ್ಲಿಂದ ಹೆರಡೆಕ್ಕಾರೆ ಮದಲೇ ಅಕ್ಕಂಗೆ ರಿಜಿಸ್ಟ್ರಿ ಆವ್ತು – ‘ಇಂತವರು ಬಂದಿದ್ದಾರೆ ಸುದ್ದಿ ಇಲ್ಲದ್ದೆ ಹೋಗಿದ್ದಾರೆ’ ಹೇಳಿ. ಅಂದರೂ ಅಕ್ಕಂಗೆ ಹತ್ರಾಣ ಕೆಲವು ಜೆನ ಶುದ್ದಿಲ್ಲದೆ ಸದ್ದಿಲ್ಲದೆ ಆ ಹೊಡೆಲಿ ಅಕ್ಕಂಗೆ ಗೊಂತಾಗದ್ದಾಂಗೆ ಬಂದಿಕ್ಕಿ ಹೋದರೂ ಮತ್ತೆ ಅರ್ಚನೆಗೆ ರೆಡಿ ಇರೆಕ್ಕಾವ್ತು.  ಸರಿ., ಮಧ್ಯಾಹ್ನ ಗುಜ್ಜೆ ಮೇಲಾರವೂ ಆತು, ಕಾಟು ಮಾವಿನಮೆಡಿ ಉಪ್ಪಿನಾಯಿಲಿ ಗಟ್ಟಿ ಊಟವೂ ಆತು.

ಹೆರಟತ್ತಲ್ಲಿಂದ ಕಾಪಿಗಪ್ಪಗ ಇನ್ನೊಂದು ದಿಕ್ಕಂಗೆ ಎತ್ತೆಕು ಹೇಳಿ. ಇನ್ನು ಎತ್ತಂದಾಗಿ. ಜಾಲ್ಸೂರ ಹೊಡೆಂಗೆ ತಿರ್ಗುಸುವನೋ ಯೋಚನೆ ಆತು ಸುಬಗಣ್ಣ ಜಾಣನ ರಜೆಲಿ ಕರಕ್ಕೊಂಡು ಯಾವೂರಿಲ್ಲಿದ್ದನೋ ಉಮ್ಮ. ಪುತ್ತೂರ ಪೇಟಗೆ ಎತ್ತಿತ್ತು. ಪುಟ್ಟಕ್ಕನನ್ನೂ ನೆಂಪಾತು – ಚರುಮುರಿಯೂ ನೆಂಪಾತು. ಮುಂದೆ ಬಪ್ಪಗ ಬಲತ್ತಿಂಗೆ ತಿರುಗಿರೆ ಉಪ್ಪಿನಂಗಡಿ. ಆ ಹೊಡೆಲಿ ಗುರ್ತದ ಆರೂ ಇಲ್ಲೆ ಹಾಂಗಾಗಿ ಗಾಡಿ ಹೆರಟತ್ತು ವಿಟ್ಲಕ್ಕೆ. ಕೇಜಿ ಮಾವ° ಉಂಡಿಕ್ಕಿ ಒರಗಿಯೊಂಡಿಕ್ಕು. ಉಪದ್ರ ಮಾಡುತ್ಸು ಬೇಡ ಹೇದ ಪೆಂಗಣ್ಣ. ವಿಟ್ಲಂದ ತಿರುಗಿ ಅಡ್ಯನಡ್ಕ, ಅಡ್ಕಸ್ಥಳ, ಪೆರ್ಲ ಮಾರ್ಗಲ್ಲೆ. ಎಂತಕೆ ? ಕಾಪಿಗಪ್ಪಗ ಎತ್ತೆಕು ಏನಂಕೋಡ್ಳಣ್ಣನಲ್ಲಿಗೆ, ಹೊತ್ತೋಪಗ ಎತ್ತೆಕು ಉಡುಪುಮೂಲಗೆ. ಇರುಳು ಆಟ ಇದ್ದಡ ಎಡನೀರಿಲ್ಲಿ. ಅನುಪಮಕ್ಕನ ಮಾಣಿಯ ವೇಷ ನೋಡೇಕು ಹೇಳಿ ಪೆಂಗಣ್ಣನ ಬಲುದಿನದ ಆಸೆಯೂ. ನವಗೂ ಒಪ್ಪಿಗೆ.

ಕುಕ್ಕಿಲ ಅತ್ತೆ, ವಿನಯಕ್ಕ ಹೇಳಿ ಹೆಸರು ನೆಂಪಾತು.  ಸರಿ.. ಇನ್ನಾರಾರು ಬಿಟ್ಟು ಹೋಯ್ದೋ ಹೇಳಿ ನೋಡಿಕ್ಕುತೇಳಿ ಮೊಬೈಲಿಲಿ ಹೆಸರು ನಂಬ್ರ ಮಣ್ಣ ಇದ್ದರೆ ಆತನ್ನೇ ಹೇಳಿ ಮೊಬೈಲ್ ತೆಗದು ನೋಡಿರೆ ಬೆಟ್ರಿ ಚಾರ್ಚು ಕಾಲಿ!!. ಇಂದ್ರಾಣದ್ದು ಆತಿಲ್ಲಿಗೆ ಹೇಳಿ ಪೆಂಗಣ್ಣನ ಹೆಗಲ ಗಟ್ಟಿ ಹಿಡ್ಕೊಂಡು ಕೂದತ್ತು ನಾವೂ. ಅಂದರೂ ನಮ್ಮ ಬೋಸಬಾವ ಎಲ್ಲಿ ಇರುತ್ಸು ಹೇದು ಇನ್ನೂ ಗೊಂತಾಯ್ದಿಲ್ಲೇದಾ ಹೇಳಿ ಒಂದು ಬೇಜಾರು ಇದ್ದು. ಮಧ್ಯಾಹ್ನ ಒಂದರಿ ಮೊಬೈಲ್ ಒತ್ತಿ ನೋಡಿತ್ತಿದ್ದು. ಅಷ್ಟಪ್ಪಗ ಯಾವುದೋ ಒಂದು ಕೂಸು ತೆಗದು ಹೇಳಿತ್ತು – ‘…..ಮತ್ತೆ ಕರೆ ಮಾಡಿ’. ಬೋದಾಳ, ಅದ್ವೈತಕೀಟ, ಗೆಂಟನೂ ಅಷ್ಟೇ… ಈಗ ಇಲ್ಲಿದ್ದೆ ಹೇಳುಗು, ರಜಾ ಹೊತ್ತಪ್ಪಗ ಆನು ಆಗಳೇ ಹೆರಟಾತು ಭಾವಾ ಹೇಳುಗು ನಾವಲ್ಲಿಗೆ ಎತ್ತಿಯಪ್ಪಗ. ಎಂತದೋ ಕೆಪ್ಪಣ್ಣಂಗೆ ದುರದೃಷ್ಟ ಒಂದೊಂದರಿ ಬಡಿತ್ತಾಂಗೆ ಅದ್ರಾಣ ಲೆಕ್ಕದ್ದು ನವಗೆ ಹಿಡುದತ್ತಾಯ್ಕು ಹೇದು ಗ್ರೇಶಿದಾಯ್ಕು ಪೆಂಗಣ್ಣ.

ಚೆನ್ನೈ ವಾಣಿ : ಬೈಲಿಲಿ ಕಾಣೆಕ್ಕಾದವು ಕಾಣದ್ದೇ ಇದ್ದರೂ ಬೈಲು ನೆಂಪು ಮಾಡಿಕೊಂಡೇ ಇರ್ತು.

ಈ ಶುದ್ದಿಗೆ ಇದುವರೆಗೆ 28 ಒಪ್ಪಂಗೊ

 1. ಈಚ ಭಾವ
  ಈಚ ಭಾವ

  ಏ ಚೆನ್ನೈ ಭಾವ.. ನಿಂಗ ಹೇಳಿದ್ದು ಸರಿ.. ಕೆಲವು ಸರ್ತಿ ನಮ್ಮದು ಸೀಸನ್‌ ಟಿಕೇಟು.. 😉 ಮೊನ್ನೆ ನಾವು ಚೆನ್ನೈಗೆ ಹಾರಿತ್ತಿದ್ದು. ಕೆಲಸ ಮುಗುಶಿ ಇರುಳು ವಾಪಸ್‌. ಅಲ್ಲೇ ಇದ್ದಿದ್ದರೆ ಇರುಳಿಂಗೆ ಒಂದು ಮೇಲಾರ ಉಂಬಲಾವ್ತಿತೋ ಏನೋ..!?

  [Reply]

  VA:F [1.9.22_1171]
  Rating: +2 (from 2 votes)
 2. ಮುಳಿಯ ಭಾವ
  raghumuliya

  ಚೆನ್ನೈಭಾವನ ತಿರ್ಗಾಟ ನೋಡಿ ನೆಗೆ ಬ೦ತು,ಹು…

  [Reply]

  VA:F [1.9.22_1171]
  Rating: +1 (from 1 vote)
 3. ಜಯಲಕ್ಷ್ಮಿ ಕುಕ್ಕಿಲ
  jayalakshmi kukkila

  ಚೆನ್ನೈ ಭಾವಂಗೆ ಯಾವ ಮುಹೂರ್ತಲ್ಲಿ ಪುರುಸೊತ್ತು ಆದ್ದೋ? ಬೈಲಿನ ಆರಿಂಗೂ ಪುರುಸೊತ್ತು ಇಲ್ಲದ್ದಿಪ್ಪಗಳೇ ಚೆನ್ನೈ ಭಾವಂಗೆ ಪುರುಸೊತ್ತು ಆಯೆಕ್ಕಾತಾ? ಅಂತೂ ಬೈಲಿಲಿ ಚೆನ್ನೈ ಭಾವ ಅಂತೇ ತಿರುಗಿದ್ದಾದರೂ ಎಂಗೊಗೆ ಎಲ್ಲೋರನ್ನೂ ಕಂಡಷ್ಟು ಖುಶಿ ಆತು. ಇನ್ನೊಂದರಿ ಚೆನ್ನೈ ಭಾವಂಗೆ ಪುರುಸೊತ್ತು ಇಪ್ಪದು ಬೈಲಿನ ಎಲ್ಲೋರಿಂಗೂ ಮದಲೇ ಗೊಂತಾಯೆಕ್ಕು. ಕಾದುಗೊಂಡಿರ್ತೆಯೊ… – ಕುಕ್ಕಿಲ ಜಯತ್ತೆ

  [Reply]

  VA:F [1.9.22_1171]
  Rating: 0 (from 2 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಪವನಜಮಾವಶೀಲಾಲಕ್ಷ್ಮೀ ಕಾಸರಗೋಡುಪಟಿಕಲ್ಲಪ್ಪಚ್ಚಿಪುಣಚ ಡಾಕ್ಟ್ರುಶ್ರೀಅಕ್ಕ°ಜಯಗೌರಿ ಅಕ್ಕ°ಅನುಶ್ರೀ ಬಂಡಾಡಿದೇವಸ್ಯ ಮಾಣಿಅಡ್ಕತ್ತಿಮಾರುಮಾವ°ದೊಡ್ಮನೆ ಭಾವನೆಗೆಗಾರ°ತೆಕ್ಕುಂಜ ಕುಮಾರ ಮಾವ°ಚೆನ್ನೈ ಬಾವ°ಬಂಡಾಡಿ ಅಜ್ಜಿನೀರ್ಕಜೆ ಮಹೇಶಜಯಶ್ರೀ ನೀರಮೂಲೆಪುಟ್ಟಬಾವ°ಡೈಮಂಡು ಭಾವಗೋಪಾಲಣ್ಣಮುಳಿಯ ಭಾವಸರ್ಪಮಲೆ ಮಾವ°ದೀಪಿಕಾಯೇನಂಕೂಡ್ಳು ಅಣ್ಣಶುದ್ದಿಕ್ಕಾರ°ಮಂಗ್ಳೂರ ಮಾಣಿಕಳಾಯಿ ಗೀತತ್ತೆ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ