ಗೆಂದೆಯ ನೊರೆಹಾಲು- (ಹವ್ಯಕ ಕವನ)

November 30, 2016 ರ 11:36 amಗೆ ನಮ್ಮ ಬರದ್ದು, ಇದುವರೆಗೆ 6 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಗೆಂದೆಯ ನೊರೆಹಾಲು-(ಹವ್ಯಕ ಕವನ)

ಕ್ಷೀರಾಸ್ವಾದನೆ

ಮಲೆನಾಡ ಗೆಂದೆ ದನ ಹಟ್ಟಿಲಿಪ್ಪಾಗ|
ನೋಡೆಕ್ಕದರ ಎನ್ನಬ್ಬೆ ಕಂಜಿ ಬಿಡುವಾಗ||
ಜಿಗಿಜಿಗಿದು ಓಡಿಯೊಂಡು ಬಂದಬ್ಬೆ ಹತ್ರಂಗೆ|
ಹಾಕಿತ್ತದರ ಪುಟ್ಟುಬಾಯಿ ಅಬ್ಬೆ ಕೆಚ್ಚಲಿಂಗೆ||೧||

ಗುದ್ದಿಯೊಂಡು ಎಳದೆಳದು ಸೊರೆಶಿತ್ತು ಹಾಲು|
ಕರದತ್ತೆನ್ನಬ್ಬೆ ಎರಡು ಮಲೆ  ಪಾಲು||
ದೊಡ್ಡಚೆಂಬು ತುಂಬ ನೊರೆಹಾಲು ತುಂಬಿತ್ತು|
ಬೆಶಿಹಾಲು ಕುಡಿವಾಶೆ ಎನ್ನೊಳಾಂದ ಬಂತು||೨||

ನೋಡಿತ್ತಬ್ಬೆ ಎನ್ನ ಮೋರೆ,ಹೇಳಿತ್ತೆನಗೆ|
ಒಂದಿಷ್ಟು ಸುರಿತ್ತೆ ಒಡೆ ದೊಡ್ಡ ಬಾಯಿ||
ಕುಡಿಶಿಕ್ಕಿ ಹೇಳಿತ್ತಬ್ಬೆ ಎನ್ನ ಕೆಮಿಲಿ|
ನೋಡು, ನಿನ್ನಾ ಹೊಟ್ಟೆ ಬೇನೆ ನಾಳೆ ಖಾಲಿ||೩||

ಹೊಟ್ಟೆಬೇನೆ ಕಮ್ಮಿಯಾತು ರಜ ಹೊತ್ತಿಲ್ಲಿ|
ಅಂದಿರುಳು ಬಂತು ಒಳ್ಳೇತ ಒರಕ್ಕಲ್ಲಿ||
ರಕ್ತ  ಭೇದಿಗೆ  ಹಿಡುದತ್ತದ ಅಬ್ಬೆಯ ಸೂತ್ರ|
ಇದಕ್ಕೆ ನಮ್ಮ ಗೆಂದೆ ದನದ್ದೆ ದೊಡ್ಡ ಪಾತ್ರ||೪||

——-೦——-

ಫೋಟೋ: ಅಂತರ್ಜಾಲಂದ

ಈ ಶುದ್ದಿಗೆ ಇದುವರೆಗೆ 6 ಒಪ್ಪಂಗೊ

 1. K.Narasimha Bhat Yethadka

  ಸೂಪರ್ ವಿಜಯಕ್ಕ.

  [Reply]

  VA:F [1.9.22_1171]
  Rating: 0 (from 0 votes)
 2. ವಿಜಯತ್ತೆ

  ದನ ಕಂಜಿಯ ಪಟ ಹಾಕಿ ಸೆಟ್ ಮಾಡಿದ ಶರ್ಮಭಾವಂಗೂ ಒಪ್ಪಕೊಟ್ಟ ಏತಡ್ಕ ನರಸಿಂಹಣ್ಣಂಗೂ ಧನ್ಯವಾದಂಗೊ.

  [Reply]

  VN:F [1.9.22_1171]
  Rating: 0 (from 0 votes)
 3. Venugopal Kambaru

  ಲಾಯಕ ಆಯಿದು

  [Reply]

  VA:F [1.9.22_1171]
  Rating: 0 (from 0 votes)
 4. ಗೋಪಾಲಣ್ಣ
  S.K.Gopalakrishna Bhat

  ಒಳ್ಳೆ ಪದ

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಕೇಜಿಮಾವ°ವಾಣಿ ಚಿಕ್ಕಮ್ಮಶಾ...ರೀಅಜ್ಜಕಾನ ಭಾವಸಂಪಾದಕ°ಬೋಸ ಬಾವವೆಂಕಟ್ ಕೋಟೂರುಚೆನ್ನಬೆಟ್ಟಣ್ಣವಿನಯ ಶಂಕರ, ಚೆಕ್ಕೆಮನೆಸರ್ಪಮಲೆ ಮಾವ°ಬಂಡಾಡಿ ಅಜ್ಜಿಅನುಶ್ರೀ ಬಂಡಾಡಿದೊಡ್ಡಭಾವಚೂರಿಬೈಲು ದೀಪಕ್ಕಪುತ್ತೂರಿನ ಪುಟ್ಟಕ್ಕವಿದ್ವಾನಣ್ಣಶರ್ಮಪ್ಪಚ್ಚಿಪವನಜಮಾವಮಾಲಕ್ಕ°ಬೊಳುಂಬು ಮಾವ°ಶಾಂತತ್ತೆಗಣೇಶ ಮಾವ°ಡಾಗುಟ್ರಕ್ಕ°ಚುಬ್ಬಣ್ಣದೇವಸ್ಯ ಮಾಣಿಹಳೆಮನೆ ಅಣ್ಣ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ