“ಅಕ್ಕ ಬಂದರೂ ಅಕ್ಕಿ ಹಾಕದ್ದೆ ಅಶನ ಆಗ”-(ಹವ್ಯಕ ನುಡಿಗಟ್ಟು-84)

-“ಅಕ್ಕ  ಬಂದರೂ ಅಕ್ಕಿ ಹಾಕದ್ದೆ ಅಶನ ಆಗ”-(ಹವ್ಯಕ ನುಡಿಗಟ್ಟು-84)

ಮದಲಿಂಗೆ ಎಲ್ಲಾ ಮನೆಗಳಲ್ಲೂ ಅಶನದ, ತಿಂಡಿಯ ಅಕ್ಕಿ, ಹಾಲು-ಮಜ್ಜಿಗೆ ವ್ಯವಹಾರ, ಉಪ್ಪಿನಕಾಯಿ ವ್ಯವಸ್ಥೆ, ಇದೆಲ್ಲ ಅತ್ಯೋರಕ್ಕಳ ಮೇಲ್ತನಿಕೆಲಿಪ್ಪದು(ಈಗಳೂ ಕೆಲವುದಿಕೆ ಇದ್ದು).ಹೀಂಗಿಪ್ಪಗ ಆದ ಪ್ರಸಂಗ ಇದು.

ಸೊಸೆಃ-“ಇಂದು ಅಶನಕ್ಕೆ ಅಕ್ಕಿಎಷ್ಟು ಮಡಗೆಕ್ಕತ್ತೆ?”

ಅತ್ತೆಃ-ನಿನ್ನೆಯಾಣಷ್ಟೇ  ಸಾಕು ಕೂಸೆ…, ಹಾಂ, ನಿನ್ನ ಅಕ್ಕ ಬತ್ತೂ ಹೇಳಿದ್ದೆಲ್ಲೊ, ಒಂದು ಪಾವು ಹೆಚ್ಚಿಗೆ ಹಾಕಿಕ್ಕು ಕೂಸೇ

ಸೊಸೆಃ-ಎನ್ನ ಅಕ್ಕ ಬತ್ತೂಳಿ ಹೆಚ್ಚಿಗೆ ಹಾಕೆಕ್ಕೂಳಿಲ್ಲೆ ಅತ್ತೆ. ಅದಕ್ಕೆ ದಣಿಯ ಬೇಡತ್ತೆ!

ಅತ್ತೆಃ-ಅಕ್ಕ ಬಂದರೂ ಅಕ್ಕಿ ಹಾಕದ್ದೆ ಅಶನ ಆಗ ಕೂಸೇ.

ಆರು ಬಂದರೂ ಅಕ್ಕಿ ಹಾಕಲೇ ಬೇಕನ್ನೆ ಅಶನ ಆಯೆಕ್ಕಾರೆ!. ಮತ್ತೆ ಇಲ್ಲಿ ಅಕ್ಕನ ಪ್ರಸ್ತಾಪ ಎಂತಕಪ್ಪ ಕೇಳುತ್ತೀರೊ?. ನಮ್ಮಲ್ಲಿ ದಿನನಿತ್ಯದ ಅಶನಕ್ಕೆ  ಅಕ್ಕಿ ಹಾಕುದು ಹೆಮ್ಮಕ್ಕೊ. ಅವಕ್ಕೆ ಅಕ್ಕ ಹೇಳಿರೆ; ಬಹು ಪ್ರೀತಿಪಾತ್ರದ ಜೆನ.ಅದು ಬಂದರೆ ಖರ್ಚಾಗ,ಮುಗಿಯ ಹೇಳುವ ಭಾವನೆ.ಈ ಭಾವನೆ ಅವಕ್ಕಿದ್ದರೆ….,ಅವರ ಮನೆವಕ್ಕೆ, ಅತ್ಯೋರಿಂಗೆ,  ಇರೆಕನ್ನೇ!.  ಹಾಂಗಾಗಿ ಈ  ಗಾದೆ ಉಂಟಾತು. ಎಂತ ಹೇಳ್ತಿ?

            ————೦————

ವಿಜಯತ್ತೆ

   

You may also like...

9 Responses

 1. ಬೊಳುಂಬು ಗೋಪಾಲ says:

  ವಿಜಯಕ್ಕ ಚೆಂದಕೆ ವಿವರಿಸಿದ್ದವು. ಎನ್ನ ಅಂದಾಜಗೆ ಅಕ್ಕನ ಇಲ್ಲಿ ಪ್ರಾಸಕ್ಕೆ ಬೇಕಾಗಿ ತೆಕ್ಕೊಂಡದಾಯ್ಕು. ಅಕ್ಕಿ ಇಲ್ಲದ್ದೆ ಅನ್ನ ಆಗ ಹೇಳುವ ಉದ್ದೇಶಲ್ಲಿ ಈ ಮಾತು ಬಂದದಾಯಿಕ್ಕು. ಬೇರೆ ಯಾವ ಸಾಮಾನು ಬೇಯಲೆ ಹಾಕಿರೂ ಅಶನ ಆಗ ಹೇಳುವ ಅಭಿಪ್ರಾಯ ಆಯಿಕ್ಕೊ ವಿಜಯಕ್ಕ ?

 2. ಬೊಳುಂಬು ಗೋಪಾಲಣ್ಣನ ಚಿಂತನೆಯ ಅಲ್ಲ ಹೇಳಿ ತಟ್ಟಿಕಳವಲೆಡಿಯ, ಆದರೆ ಎನ್ನಬ್ಬೆ, ಅತ್ತೆ ಎಲ್ಲೋರು ನೆಂಟ್ರು ಆರಾರು ಬಪ್ಪಲಿದ್ದರೆ; ಅಕ್ಕಿ ಅಳವಗ “ದಣಿಯ ಬೇಡದಾಯಿಕ್ಕು” ಹೇಳಿಯೊಂಡು; ಅಕ್ಕಿ ಮಡುಗದ್ದೆ ಅಶನಕ್ಕೋ ಹೇಳುಸ್ಸು ಕೇಳಿದ್ದೆ. ಇಲ್ಯಾಣ ವಿವರಣೆ, ಸಂದರ್ಭ ಎನ್ನದು.

 3. Keshava Prakash alias pakacha says:

  Gade hange vevechane ollediduu.

 4. sheelalakshmi says:

  ಹರೇ ರಾಮ ವಿಜಯಕ್ಕಾ, ಬೈಲಿಂಗೆ ಬಾರದ್ದೆ ಹಸಕ್ಕವೆ ಹಿಡಿದು ಹೋಗಿತ್ತಿದ್ದು. ನಿಂಗಳ ಗಾದೆ ಮಾತು ಓದಿಯಪ್ಪಗ ಖುಷಿ ಆತು. ಆನು ಈ ಗಾದೆ ಸುರೂ ಕೇಳಿದ್ದದು. ಅಂತೂ ನಿಂಗಳ ಬರವಣಿಗೆಂದ ಎನ್ನ ತಿಳುವಳಿಕೆ ಹೆಚ್ಚಾದ ಹಾಂಗಾತು.

 5. ಶೀಲಾ ನಿನ್ನಾಂಗಿದ್ದ ತಂಗೆಕ್ಕೊ ಎತ್ತಿಕೊಡುವ ಪ್ರೋತ್ಸಾಹಂದಲೇ ಆನು ಇಷ್ಟಾದರೂ ಬರವಲೆಡಿಗಪ್ಪದು.ಆಸ್ವಾದಿಸುವ ಓದುಗರು ಸಿಕ್ಕೀರೆ ತಾನೇ ಬರವವಕ್ಕೆ ಬರವಲೆ ಉಮೇದು ಬಪ್ಪದಲ್ಲೊ ಶೀಲಾ?

 6. ಶರ್ಮಪ್ಪಚ್ಚಿ says:

  ಮಾಡೆಕ್ಕಾದ ಕಾರ್ಯ ಮಾಡದ್ದರೆ ಫಲ ಸಿಕ್ಕ ಹೇಳಿಯೂ ಅರ್ಥೈಸಲೆ ಅಕ್ಕು ಅಲ್ಲದಾ

 7. S.K.Gopalakrishna Bhat says:

  ೧.ಆರು ಬಂದರೂ ಮಾಡೆಕಾದ್ದರ ಮಾಡಿರೆ ಮಾತ್ರ ಕೆಲಸ ಅಕ್ಕಷ್ಟೆ.
  ೨.ಬಪ್ಪದು ಯಾರಾದರೂ ಮನೆಯವಕ್ಕೆ ಕರ್ಚಿ ಇದ್ದೇ ಇದ್ದು. ಧರ್ಮಕ್ಕೆ ಏವದೂ ಆಗ.
  ೩.ಮನೆಗೆ ಊಟಕ್ಕೆ ಬೇರೆಯವು ಬಂದರೆ ಕರ್ಚಿ ಆವುತ್ತು,ಅಕ್ಕ ಬಂದರೆ ಸಾರ ಇಲ್ಲೇ ಹೇಳುವ ಜನಂಗೊಕ್ಕೆ ಭೇದ ಭಾವ ತಪ್ಪು ಹೇಳಿ ಗೊಂತಾಯೆಕ್ಕು.
  —ಹೀಂಗೆ ಅರ್ಥ ಮಾಡಿರೆ ಹೆಂಗೆ ಚಿಕ್ಕಮ್ಮ ?

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *