“ಅತ್ತಾಳ ಅಟ್ಟುಣ್ಣದ್ದಲ್ಲಿ ತಣ್ಣನೆ ಎಲ್ಲಿಂದ?”-{ಹವ್ಯಕ ನುಡಿಗಟ್ಟು-40}

November 2, 2015 ರ 6:03 amಗೆ ನಮ್ಮ ಬರದ್ದು, ಇದುವರೆಗೆ 3 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

“ಅತ್ತಾಳ ಅಟ್ಟುಣ್ಣದ್ದಲ್ಲಿ ತಣ್ಣನೆ ಎಲ್ಲಿಂದ?”-{ಹವ್ಯಕ ನುಡಿಗಟ್ಟು-40}

ಒಂದಿನ ಅಡಿಗೆ ಕೇಚಣ್ಣನಲ್ಲಿಗೆ ಅವನ  ಚಙಾಯಿ ಚುಬ್ಬಣ್ಣ ಉದಿ-ಉದಿಯಪ್ಪಗ ಬಂದು “ಕೇಚಣ್ಣಾ, ಒಂದಿನ್ನೂರು ರೂಪಾಯಿ ಕಡಗಟ್ಟು ಬೇಕಾತನ್ನೆ! ಬೇಂಕಿನ ಲೋನಿಂಗೆ ಬಡ್ಡಿ ಕಟ್ಳೆ. ಇಂದು ಕಟ್ಟದ್ರೆ ಮತ್ತೆ ಜಪ್ತಿಗೆ ಬಕ್ಕು. ನೀನೇ ತಾಂಗೆಕ್ಕು.ಒಂದು ವಾರಲ್ಲಿ ರಜ ಅಡಕ್ಕೆ ಸೊಲುದು ಮಾರಿ ಕೊಡುವೆ. ಇದು ನಿನ್ನ ಕೈ ಅಲ್ಲ ಕಾಲು ಹೇದು ತಿಳ್ಕೊ”. ಹೇದು ಕೇಚಣ್ಣನ ಬಲದ ಕೈಯ ತನ್ನೆರಡು ಕೈಲಿ ಭದ್ರವಾಗಿ ಹಿಡ್ಕೊಂಡು  ಕೇಟಂ. “ಎನ್ನತ್ರೆ ಇಲ್ಲೆಪನೇ” ಕೇಚಣ್ಣ ಹೇದಪ್ಪಗ “ಅಷ್ಟಿಕ್ಕು ನಿನ್ನತ್ರೆ. ಮೊನ್ನೆ ಖಂಡಿಗದ ಮದುವೆ ಅಡಿಗೆ ಸಿಕ್ಕಿತ್ತಲ್ಲೊ ನಿನಗೆ!. ಇಲ್ಲೆ ಹೇಳೆಡ”.

“ಅಯ್ಯೋ ಮಾರಾಯ ಅತ್ತಾಳ ಅಟ್ಟುಣ್ಣದ್ದವನಲ್ಲಿ ತಣ್ಣನೆ ಎಲ್ಲಿಂದ ಹೇಳು?! ಅಡಿಗ್ಗೆ ಸಿಕ್ಕಿದ ಪೈಸವ ಹಾಂಗೆ ಅಂಗ್ಡಿ ಅದ್ದುಲ್ಲಂಗೆ ಕೊಟ್ಟೆ. ಅದರ ಸಾಲ ಇನ್ನೂ ತೀರಿದ್ದಿಲ್ಲೆ  ಮಿನಿಯ.” ಕೇಚಣ್ಣ ಉವಾಚ.

ನಮ್ಮ ಕೇಚಣ್ಣ ಹೇಳ್ತು ಸರಿ. ಅವ ಸ್ವಭಾವಲ್ಲಿ ಮಾಂತ್ರ ಪಾಪ ಅಲ್ಲ, ಸ್ಥಿತಿ-ಗತಿಲಿಯೂ ಅಷ್ಟೆ. ಅಡಿಗ್ಗೆ ಹೋಗಿ,ಅಬ್ಬೆ-ಅಪ್ಪನ, ಹೆಂಡತ್ತಿಯ ನಾಲ್ಕು ಮಕ್ಕಳ ಸಾಂಕುತ್ತ  ಪ್ರಾಮಾಣಿಕ ಜೆನ. ಈಗಾಣ ಕಾಲಲ್ಲಿ ಅಡಿಗೆ ಮಾಡ್ತವಕ್ಕೆ ತೊಂದರೆ ಇಲ್ಲೆ ಹೇಳುವೊಂ.ಇದು ಕೆಲವು ವರ್ಷ ಹಿಂದಾಣ ಕತೆ. ಕೇಚಣ್ಣನಲ್ಲಿ ಹೆಚ್ಚಿಗೆಯೂ ಮಜ್ಜಾನಕ್ಕೆ ಒಂದೊತ್ತ ಹೆಜ್ಜೆ ಮಡಗೀರಾತು ಇರುಳಿಂಗೆ ಒಳುದ್ದಿದ್ದರೆ ಮಕ್ಕೊಗೆ ಬಳುಸೀರಾತು. ಕೇಚಣ್ಣ ಹೇಳಿದ ಮಾತು ಅವನ ಮನೆ ಆಚರಣೆಗೂ ಆತು. ಅವನ ಆರ್ಥಿಕ ಸ್ಥಿತಿಗೂ ಆತು.ಮುನ್ನಾಣ ದಿನ ಅಡಿಗೆ ಮಾಡದ್ದಲ್ಲಿ ತಣ್ಣನೆ ಇಕ್ಕೊ?.ತೊಟ್ಟು ಮುರುದು ಮೇಣ ನಕ್ಕುತ್ತವರತ್ರೆ ಕಡಗಟ್ಟಿಂಗೆ ಪೈಸ ಕೇಳೀರಕ್ಕೊ?.

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 3 ಒಪ್ಪಂಗೊ

 1. ಶ್ಯಾಮಣ್ಣ
  ಶ್ಯಾಮಣ್ಣ

  (ತೊಟ್ಟು ಮುರುದು ಮೇಣ ನಕ್ಕುತ್ತವರತ್ರೆ ಕಡಗಟ್ಟಿಂಗೆ ಪೈಸ ಕೇಳೀರಕ್ಕೊ?) ಇದುದೆ ಒಂದು ನುಡಿಕಟ್ಟು ಅಲ್ಲದೋ?

  [Reply]

  VA:F [1.9.22_1171]
  Rating: 0 (from 0 votes)
 2. ಬೊಳುಂಬು ಮಾವ°
  ಬೊಳುಂಬು ಗೋಪಾಲ

  ಈ ನುಡಿಗಟ್ಟು ಕೇಳಿದ್ದಿಲ್ಲೆ ಆನು. ಒಳ್ಳೆ ಅರ್ಥವತ್ತಾಗಿದ್ದು ವಿಜಯಕ್ಕ.

  [Reply]

  VA:F [1.9.22_1171]
  Rating: 0 (from 0 votes)
 3. ವಿಜಯತ್ತೆ

  ಶ್ಯಾಮಣ್ಣ ಹೇಳಿದ್ದು ಸರಿ . ಒಂದರ ಬರವಾಗ ಮತ್ತೊಂದು ಹೊಳೆತ್ತಿದ. ಅದು ನೆಂಪಪ್ಪಗಳೇ ಜಾನ್ಸಿದ್ದೆ. ಬೊಳುಂಬು ಗೋಪಾಲಂಗುದೆ ಧನ್ಯವಾದಂಗೊ

  [Reply]

  VN:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಶೇಡಿಗುಮ್ಮೆ ಪುಳ್ಳಿಶರ್ಮಪ್ಪಚ್ಚಿಶ್ಯಾಮಣ್ಣಪ್ರಕಾಶಪ್ಪಚ್ಚಿದೇವಸ್ಯ ಮಾಣಿಬೋಸ ಬಾವಪೆಂಗಣ್ಣ°ಪಟಿಕಲ್ಲಪ್ಪಚ್ಚಿಸುಭಗಜಯಶ್ರೀ ನೀರಮೂಲೆದೀಪಿಕಾತೆಕ್ಕುಂಜ ಕುಮಾರ ಮಾವ°ವಾಣಿ ಚಿಕ್ಕಮ್ಮಗಣೇಶ ಮಾವ°ನೆಗೆಗಾರ°ಡಾಮಹೇಶಣ್ಣಅಕ್ಷರದಣ್ಣವಿದ್ವಾನಣ್ಣಶಾಂತತ್ತೆವಿನಯ ಶಂಕರ, ಚೆಕ್ಕೆಮನೆದೊಡ್ಮನೆ ಭಾವಚೂರಿಬೈಲು ದೀಪಕ್ಕಪೆರ್ಲದಣ್ಣಚೆನ್ನೈ ಬಾವ°ಕಳಾಯಿ ಗೀತತ್ತೆಪವನಜಮಾವ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಮನೆಯೊಳಗೆ ಮನೆಯೊಡೆಯ ಇದ್ದಾನೋ ಇಲ್ಲವೋ?
ಹಸ್ತೋದಕ ಕೊಟ್ಟಪ್ಪದ್ದೆ ಸಾರಿನ ಕವಂಗ ನೆಗ್ಗಿ ಆತು
ಊದು ವನಮಾಲಿ ಮುರಳಿಯಾ

ಬೆಣಚ್ಚಿಪ್ಪಲ್ಲಿ ಹುಡ್ಕಲೆ