“ಆಟಕ್ಕಿದ್ದು, ಲೆಕ್ಕಕ್ಕಿಲ್ಲೆ”-{ಹವ್ಯಕ ನುಡಿಗಟ್ಟು-63}

ಆಟಕ್ಕಿದ್ದು, ಲೆಕ್ಕಕ್ಕಿಲ್ಲೆ-{ಹವ್ಯಕ ನುಡಿಗಟ್ಟು-63}

ಆನು ಸಣ್ಣದುಪ್ಪಗ, ಅಜ್ಜನಮನೆಲಿ ಒಂದಾರಿ; ಏವದೋ ಒಂದು ಕಾರ್ಯಕ್ರಮಕ್ಕೆ ಮನೆಂದ ಎಲ್ಲೋರು ಹೋಯೆಕ್ಕಾದ ಪ್ರಸಂಗ ಬಂತು.ಮದಲಿಂಗೆ ಈಗಾಣಾಂಗೆ ಮನಗೆ ಬೀಗ ಹಾಕಿಕ್ಕಿ ಹೋಪಕ್ರಮ ಇಲ್ಲೆ. ಹಟ್ಟಿಲಿ ದನಗೊ ಇಕ್ಕು. ನಾಯಿ,ಪುಚ್ಚೆ ಇಕ್ಕು. ಮನೆ ಕಾವಲಿಂಗೆ ಆರ ಮಾಡುದೂಳಿ ಆಲೋಚನೆ ಆತು.ನಾವು ಏವಗಳೂ ಅಡಿಗೆ ಸಕಾಯಕ್ಕೆ ದೆನಿಗೇಳ್ತ  ಅಚ್ಚುಮಕ್ಕನ ಮಾಡಿಕ್ಕಿ ಹೋಪೊᵒ. ಹೇಳಿ ಅಜ್ಜಿಯ ಸಲಹೆ ಬಂತು.

“ಅದೆಂತಕೆ!?.., ಆಟಕ್ಕಿದ್ದು ಲೆಕ್ಕಕ್ಕಿಲ್ಲೆ”. ಅಜ್ಜᵒ ಹೇಳಿದೊವು.

ಅಷ್ಟೊತ್ತಿಂಗೆ ಎನ್ನ ಬಾವᵒ ಒಬ್ಬᵒ  “ ಎಂತಜ್ಜᵒ ಅಚ್ಚುಮಜ್ಜಿ ಆಟ ಆಡ್ಳೆ ಹೋವುತ್ತೊ!?” ಕೇಳಿದᵒ.

“ಅದು ಆಡ್ಳೆ ಹೋಗ. ಹಾಂಗಲ್ಲ ವಿಷಯ. ಈಗ ನೀ ಮಾತಾಡೆಡ” .ಬೇರೆ ಆರ ಮಾಡುದೂಳಿ ಅಜ್ಜᵒ, ಮನಸ್ಸಿಲ್ಲೆ ಲೆಕ್ಕ ಹಾಕಿಯೊಂಡಿತ್ತಿದ್ದು ಕಂಡತ್ತು. ಮತ್ತೆ ಆರನ್ನೋ ಕಾವಲಿಂಗೆ ಮಾಡಿಆತು ಹೇಳುವೊᵒ.

ಅಜ್ಜᵒ ಒಳ್ಳೆ ಮೂಡಿಲ್ಲಿದ್ದ ಸಮಯ ಎಂಗಳತ್ರೆ ಮಾತಾಡ್ಸೆಂಡು ಬತ್ತ ಸಮಯ ನೋಡಿ; ಆನು. “ಅಚ್ಚುಮಜ್ಜಿಯ ಎಂತಕೆ  ’ಆಟಕ್ಕಿದ್ದು ಲೆಕ್ಕಕ್ಕಿಲ್ಲೆ’ ಹೇಳಿದ್ದು”? ಕೇಳಿದೆ

“ಅದುವೋ ನಿಂಗೊ ಮನ್ನೆ ಚೆಸ್ಸ್  ಆಡುವಾಗ ನಿಂಗಳಿಂದ ಬರೀ ಸಣ್ಣವᵒ ಒಪ್ಪಕುಞ್ಜಿ ; ಆನೂ ಆಡ್ತೆ ಹೇಳಿ ತರ್ಕ ಮಾಡುವಗ, ಅವᵒ ರೆಜ್ಜ ಹೊತ್ತು ಆಡಿಕ್ಕಿ ಹೋಗಲಿ ಅದರ ಲೆಕ್ಕಮಡಗದ್ರಾತು. ಹೇಳ್ತು ಕಂಡತ್ತು. ಹಾಂಗೇ  ಅಚ್ಚುಮಜ್ಜಿಂದ ಇಡೀ ಮನೆಕ್ಕಾವಲು ಮಾಡಿ ನೋಡಿಗೊಂಡು ಬಪ್ಪಲೆಡಿಯ. ಅದೇನಿದ್ದರೂ ಮನೆಒಳಾಣ ಅಡಿಗೆ ಸಕಾಯಕ್ಕೆ  ಅಕ್ಕಷ್ಟೆ”. ಹೇಳಿದೊವು.

ಏವದೇ ಒಂದು ಕೆಲಸವ ಜವಾಬ್ದಾರಿ ವಹಿಸಿ ನಿರ್ವಹಿಸೆಂಡು ಬಪ್ಪಲೆಡಿಯದ್ದಕ್ಕೆ  ಈ ಮಾತಿನ ಉಪಯೋಗುಸುತ್ತೊವು.

——-೦——-

ವಿಜಯತ್ತೆ

   

You may also like...

5 Responses

  1. ಬೊಳುಂಬು ಗೋಪಾಲ says:

    ನುಡಿಗಟ್ಟು ಅರ್ಥವತ್ತಾಗಿದ್ದು. ಕೆಲವೊಂದರಿ ಲೆಕ್ಕಕ್ಕಿಲ್ಲದ್ದವಕ್ಕುದೆ ಬೆಲೆ ಬತ್ತು. ಇಸ್ಪೀಟಿಲ್ಲಿ ಜೋಕರಿನ ಹಾಂಗೆ.

  2. ಹರೇರಾಮ ,ಬೊಳುಂಬು ಗೋಪಾಲಣ್ಣ , ಇಸ್ಪೀಟಾಟದ ಮಾಹಿತಿ ಎನಗೊಂತಿಲ್ಲೇಎನ್ನೇ.

  3. sheelalakshmi says:

    ವಿಜಯಕ್ಕ, ಈ ನುಡಿಗಟ್ಟು ಓದುವಾಗ ಬಾಲ್ಯಕಾಲಲ್ಲಿ ಅಣ್ಣಂದ್ರು ಮಂಕಡ್ಸಿ ಎಂಗಳ ಆಟಂದ ಹೆರಹಾಕುತ್ತದರ ನೆಂಪಾತು.

  4. ಊಟ ಅತೋ ಕೇಳಿರೆ ಮುಂಡಾಸು ಮೂವತ್ತು ಮಳ ಹೇಳಿರೆ ಎಂತರ

  5. ಪಟ್ಟಾಜೆ ಶಿವರಾಮಣ್ಣ , ನಿಂಗಳ ಹಾಂಗಿದ್ದೊವು ಬೇಕಿದ .ಹೀಂಗಿದ್ದಲ್ಲಿ ಕುತೂಹಲ ಇಪ್ಪೊವು.ಎನ ಸಂತೋಷಾವುತ್ತು. ಎಲ್ಲಾ ನುಡಿಗಟ್ಟುಗಳನ್ನೂ ಒಂದೊಂದೇ ನಮ್ಮ ಬಯಲಿಂಗೆ ಎನ ಗೊಂತಿದ್ದ ರೀತಿಲಿ ಹಾಕುತ್ತೆ. ಅದರ ಓದುತ್ತಾಇರಿ. ಅದರ ವಿವರಣೆ ಇದಲ್ಲಿ ಸಣ್ಣ ನಮುನೆಲಿ ಕೊಟ್ಟತ್ತ್ ಕಂಡ್ರೆ ಮತ್ತೆ ಹಾಕುವಗ, ನೀರಸ ಆವುತ್ತಿಲ್ಲಿಯೋ ಹೇಳಿ. ಹರೇರಾಮ|.

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *