“ಉಂಡವಂಗೆ ಹಶು ಹೆಚ್ಚು, ತಿಂದವಂಗೆ ಕೊದಿ ಹೆಚ್ಚು”-(ಹವ್ಯಕ ನುಡಿಗಟ್ಟು-65)

“ಉಂಡವಂಗೆ ಹಶು ಹೆಚ್ಚು,ತಿಂದವಂಗೆ ಕೊದಿ ಹೆಚ್ಚು.”-(ಹವ್ಯಕ ನುಡಿಗಟ್ಟು-65)

ಆನು ಪ್ರಾಥಮಿಕ ಶಾಲೆ ಕಲಿವಗ ಅಜ್ಜನಮನೆಲಿದ್ದೊಂಡು ಕುಂಬಳೆಸೀಮೆಯ ಇಚ್ಲಂಪಾಡಿ(ಕಳತ್ತೂರು) ಶಾಲಗೆ ಹೋದ್ದಿದ. ಮೀಶುದು, ತಲೆಬಾಚಿ ಕಟ್ಟುದು ಅಜ್ಜಿಯಾದರೆ, ಇರುಳು ಉಂಡಿಕ್ಕಿ ಕತೆ ಹೇಳುದು ಹಣ್ಣುಗೊ ಎಂತಾರಿದ್ದರೆ ಕೊರದು ಕೊಡುದೆಲ್ಲ ಅಜ್ಜನ ಕೆಲಸಾಗೆಡಿಂಕ್ಕು.  ಮನೆಲಿ ಎಷ್ಟು ಜೆನ ಇದ್ದೋ ಅಷ್ಟು ಪಾಲುಮಾಡಿ ತಟ್ಟೆಲಿ ಬೇರೆ-ಬೇರೆ ಮಡುಗುದು ಅಜ್ಜᵒ.ಇದೆಲ್ಲ ಹೆರಾಣ ವಿಶಾಲ ಚಾವಡಿಲಿ. ಅದರ ಹಂಚಲೆ ಎಂಗೊ ಮಕ್ಕಳತ್ರೆ ಏಪುಸುಗು. ಎನ್ನ ಜೆತಗೆ  ಎನ್ನ ಸೋದರಮಾವನ ಮಕ್ಕಳೂ ಇಕ್ಕು. ಅವು ಎನ್ನಂದ ಒಂದೊರುಷ,ಎರಡೂವರೆವರ್ಷ, ನಾಲ್ಕು ವರ್ಷ, ಹೀಂಗೆ ಸಣ್ಣವು, ಮೂರು ಜೆನ ಬಾವಂದ್ರು. ಈ ಹಣ್ಣುಗಳ ಹಂಚುಲೆ ಎಂಗೊ ನಾಲ್ಕೂ ಜೆನಕ್ಕೆ ಪೈಪೋಟಿ. ಎಂತಕೆ ಆಗೆಂಡಿಕ್ಕು!?.ಅದಲ್ಲಿಪ್ಪದಿದ ವಿಷಯ!!. ಅಜ್ಜᵒ-ಅಜ್ಜಿ, ಎರಡುಜೆನ ಸೋದರಮಾವಂದ್ರು, ಎರಡುಜೆನ ಅತ್ತೆಕ್ಕೊ, ಮತ್ತೆ ಎಂಗೊ ನಾಲ್ಕು ಮಕ್ಕೊ. ಹೀಂಗೆ ಹಂಚೆಕ್ಕಪ್ಪದು. ಅಜ್ಜನ ಒಟ್ಟಿಂಗೆ ಎಂಗೊ ಪುಳ್ಳಿಯಕ್ಕೊ ಚಾವಡಿಲಿದ್ದರೆ; ಮತ್ತಿದ್ದವೆಲ್ಲ ಅವರವರ ಕೆಲಸಲ್ಲಿ ಇಕ್ಕಿದ. ಅವೆಲ್ಲ ಇದ್ದಲಿಂಗೆ ಎಂಗೊ ಹೋಗಿ ಕೊಡೆಕಪ್ಪದು.

ಬೇರೆ ಆರಿಂಗೆ ಕೊಡ್ಳೆ ಸಿಕ್ಕದ್ರೂ ತೊಂದರೆ ಇಲ್ಲೆ. ಅಜ್ಜಿಗೆ ಆನು ಕೊಡ್ತೇಳಿ ಆನು ಹೇಳಿರೆ; ಆನು ಕೊಡ್ತೆ,ಆನು ಕೊಡ್ತೆ, ಹೇಳಿ ಬಾವಂದ್ರೂ ವಾದ ಮಾಡುಗು. ಈ ಗುಟ್ಟಿನ ನಿಂಗಳತ್ರೂ ಕೆಮಿಲಿ ಹೇಳೀತೆ . ಅಜ್ಜಿ, ಆರು ಹಂಚಲೆ ತೆಕ್ಕಂಡು ಬಂದವೋ .ಅವಕ್ಕೇ ಅದರ ಕೊಡುಗು. ಒಳ್ಳೆ ಹಣ್ಣುಗಾದರೆ, ಆ ಪಾಲಿಂಗೆ ಎಂಗೊಲ್ಲ ಮುಗಿ ಬೀಳುಸ್ಸೂ ಇಕ್ಕು.ಓಡಿಂಡು ಬಂದರೆ ಅಜ್ಜಿ, ಅದಲ್ಲಿದ್ದರ ಎಲ್ಲೋರಿಂಗು ಹಂಚಿಕೊಡುಗು. ಒಂದೋ ಎರಡೋ ಹೋಳು ಇಪ್ಪದಷ್ಟೇಳಿಯಾದರೆ ಎಲ್ಲೋರಿಂಗು ಸಿಕ್ಕಯಿದ.

ಹೀಂಗೆ ವಾದಾಂಟ ಮಾಡುವಗ ಒಂದಿನ ಅಜ್ಜᵒ “ತಿಂದವಂಗೆ ಕೊದಿಹೆಚ್ಚು,ಉಂಡವಂಗೆ ಹಶು ಹೆಚ್ಚು. ಹೇಳಿ ಒಂದು ಗಾದೆ ಇದ್ದು ಹಾಂಗೆ ಮಾಡ್ತೆಂತಕೆ ಮಕ್ಕಳೆ?”.

“ ಅದೇಂಗೆ ಅಜ್ಜᵒ ಹೇಳಿ?”.

“ ತಿಂದವಂಗೆ ಕೊದಿ ಹೆಚ್ಚು. ಹೇಳ್ತಕ್ಕೀಗ ನಿಂಗಳೇ ಉದಾಹರಣೆ. ಒಳ್ಳೆ ’ಅಲ್ಪನ್ಸ್’ ಮಾವಿನ ಹಣ್ಣು. ಇಂದ್ರಾಣದ್ದು. ಅದು ಇನ್ನೂ ಇನ್ನೂ ಬೇಕು ಹೇಳ್ತ ಚಪಲ ನಿಂಗೊಗೆ!. ಹಾಂಗೇ ಒಳ್ಳೆ.. ತಾಳು, ಕಾನಕಲಟೆ ಮೇಲಾರ, ಬೊಂಡಬದನೆ ಸುಟ್ಟಾಕಿದ ಬಜ್ಜಿ, ಹೀಂಗಿದ್ದೆಲ್ಲ ರುಚಿ-ರುಚಿ ಆತೂಳಿ ಆದರೆ; ಹೊಟ್ಟೆ ತುಂಬಿರೂ ಇನ್ನೊಂದು ಸೌಟು ಅಶನ ಉಂಬಲಕ್ಕೂಳಿ ಆಶೆ ಅಪ್ಪದು”. ಹೇಳಿದೊವು.

ಹೀಂಗೆ ಮತ್ತೂ ಮತ್ತೂ ಬೇಕೂಳಿ  ಆಶೆ, ಆಗ್ರಹಕ್ಕೆಲ್ಲ ಈ ನುಡಿಗಟ್ಟಿನ ಉಪಯೋಗುಸುತ್ತೊವು. ಸಣ್ಣದಿಪ್ಪಗ ಸಿಕ್ಕಿದ ಅನುಭವದ ಮಾತುಗೊ ಇದೆಲ್ಲ. ಎಂತ ಹೇಳ್ತಿ?.

—-೦—-

ವಿಜಯತ್ತೆ

   

You may also like...

12 Responses

  1. ಶಿವರಾಮಣ್ಣ, “ಕಡುದ ಕೈಗೆ ಉಪ್ಪು ಹಾಕದ್ದ ಜಾತಿ” ಆನು ಬರದ 43 ನೇ ನುಡಿಗಟ್ಟು ನೋಡಿ, ಮತ್ತೆ ಕೇಡು ಹೇದರೆ…. ಅದಕ್ಕೆ 60 ನೇ ನುಡಿಗಟ್ಟು ನೋಡಿ ಓದಿ. ಒಂದಾರಿ ನಿಂಗೊ ಆನಿಷ್ಟರವರೆಗೆ ಹಾಕಿದ ಎಲ್ಲದರನ್ನೂ ಓದಿ. ನಿಂಗಳ ಆತ್ಮೀಯತೆಗೆ ಮನತುಂಬಿದ ಧನ್ಯವಾದಂಗೊ.

  2. ವಿಜಯತ್ತೆ, ನವಗೆ ಇಷ್ಟದ್ದು ಸಿಕ್ಕಿದರೆ ಅದರ ಕೊದಿ ಯಾವಾಗಲೂ ಹೆಚ್ಚೇ ಅಲ್ಲದಾ? ಹಳೆ ನುಡಿಗಟ್ಟಿನ ವಿವರಣೆ ಲಾಯ್ಕ ಆಯಿದು.
    ಧನ್ಯವಾದಂಗೊ..

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *