“ಒತ್ತಾಯಕ್ಕೆ ಶಂಭಟ್ಟನ ರುಜು”-(ಹವ್ಯಕ ನುಡಿಗಟ್ಟು-103)

“ಒತ್ತಾಯಕ್ಕೆ ಶಂಭಟ್ಟನ ರುಜು”-(ಹವ್ಯಕ ನುಡಿಗಟ್ಟು-103)

ಈ ಗಾದೆ ಓದುವಗ ನಿಂಗೊಗೆ ಹೆಚ್ಚಿನವಕ್ಕೂ ಅರ್ಥ ಅಕ್ಕು.ಅಪ್ಪು ಒತ್ತಾಯಕ್ಕೆ ಒಪ್ಪು ಕೊಡುವದಪ್ಪು.ಅದೇಂಗೆ ಈ ಮಾತು ಬಳಕೆಲಿ ಬಂತು ನೋಡುವೊಂ. ಮದಲಿಂಗೆ ಬೇಂಕೂ ಕಮ್ಮಿ. ಅಲ್ಲಿ ಹೋಗಿ ಸಾಲ ಕಡಗಟ್ಟು ಮಾಡುದೂ ಕಮ್ಮಿ. ಏನಿದ್ದರೂ ನೆಂಟರಿಷ್ಟರು ಅಥವಾ ಊರೊಳ ಇದ್ದ ಗಟ್ಟಿ ಕುಳವಾರುಗಳತ್ರೆ.ಅವು ಸಾಲ ಕೊಡೆಕಾರೆ, ಅವಕ್ಕೆ ರುಜುವಾತಿಂಗೆ ಪ್ರಾಮಿಸರಿನೋಟ್ ಬೇಕು. ದಸ್ತಾವೇಜು ಬರಹಗಾರಂಗೊ ಬರದು ನಂಬಿಗಸ್ಥನ ದಸ್ಕತ್ತು(ಮದಲಿಂಗೆ ಓದು ಬರಹ ಇಲ್ಲದ್ದವು ಹೆಬ್ಬೆಟ್ಟು,ಕೆಲವು ಸಾಕ್ಷಿಗೆ ದಸ್ಕತ್ತು ಹೆಬ್ಬೆಟ್ಟು ಎರಡೂ ಬೇಕು)ಬರವಣಿಗೆಯವರ ಮುಂದೆ ಹಾಕೆಕ್ಕು.ಸಾಲ ತೆಗದವ ಕೊಡದ್ರೆ, ಸಾಕ್ಷಿ ಹಾಕಿದವನೇ ಅದಕ್ಕೆ ಹೊಣೆ.

ಹೀಂಗಿಪ್ಪಾಗ ಒಬ್ಬ ಮಾವಂಗೆ ಮಗಳ ಮದುವಗೆ ಸಾಲ ಬೇಕಾತು. ಅವನ  ಊರಿನ ದೊಡ್ಡ ಪೈಸೆಕ್ಕಾರನಲ್ಲಿಗೆ; ನೋಟು ಬರೆತ್ತ ಬರವಣಿಗೆವನನ್ನೂ ನೆರೆಕರೆ ಶಂಭಟ್ಟ ಭಾವನನ್ನೂ ಕರಕ್ಕೊಂಡು ಹೋದ.ನೆರೆಕರೆ ಶಂಭಟ್ಟ ಸುರುವಿಂಗೆ ಬತ್ತಿಲ್ಲೇಳಿ ಉದಾಸೀನ ಮಾಡಿದ. ಅಷ್ಟೊತ್ತಿಂಗೆ “ನೀನೊಂದು ಉಪಕಾರ ಮಾಡದ್ರೆ,ಆನು ಕೆಡಗಿದ್ದದೆ”, ಹೇದು ಒತ್ತಾಯ ಮಾಡುವಗ ;ಒಂದು ಕೂಸಿನ ಮದುವಗಲ್ಲೊ! ಮನಸ್ಸು ಕರಗಿತ್ತು.  ಒತ್ತಾಯಕ್ಕೆ ಹೋದ.

ಅಷ್ಟು ಮಾತ್ರ ಅಲ್ಲ!!.ಹೆಬ್ಬೆಟ್ಟು ಒತ್ತಿದಲ್ಲಿ ಕೆಳ;  ಆ ಮನುಷ್ಯ “ಒತ್ತಾಯಕ್ಕೆ ಶಂಭಟ್ಟನ ರುಜು”.ಹೇಳಿ ಹಾಕಿದ

ಹಾಂಗೆ ಹಾಕಿರೆ ಹೇಂಗಕ್ಕೂಳಿ ನಿಂಗಳೇ ಹೇಳಿ.

ಅದರಿಂದ ಮತ್ತೆ ಮನಸ್ಸಿಲ್ಲದ್ದ ಕಾರ್ಯ ಒತ್ತಾಯಕ್ಕೆ ಮಾಡುವಗ ಈ ನುಡಿಗಟ್ಟು ಬಳಕೆಲಿ ಬಂತು.

                  ——–೦——

 

 

 

 

ವಿಜಯತ್ತೆ

   

You may also like...

7 Responses

 1. ಯಮ್.ಕೆ. says:

  “ಒತ್ತಾಯಕ್ಕೆ ಶಂಭಟ್ಟನ ರುಜು”.ಹೇಳಿ ಹಾಕಿದᵒ——-
  ಪತ್ತಾಯಲ್ಲಿ ಇಪ್ಪದು ಕಮ್ಮಿ ಆದರೆ ಹೇಳಿ ,
  ಹೆದರಿಕೆ,
  ಹಾ೦ಗೆ ಹೇಳಿ ಮುಡ್ಲಾಗಿ ಬೈಲ
  ಭಾವ ಹೇಳುಗು .

  ಇನ್ನು ಒತ್ತಾಯಕ್ಕೆ ಒಂದು ಒಪ್ಪ ಹೇಳಿ ,
  ೨೦೦ಪ್ಪಗ ಬಪ್ಪಲು ಸಾಕು!

 2. ಬೊಳುಂಬು ಗೋಪಾಲ says:

  ಇದಾ, ಒತ್ತಾಯಕ್ಕೆ ಸಾಲದ ಗ್ಯಾರೆಂಟರ್ ಆಗಿ ರುಜು ಹಾಕಿರೆ ಮತ್ತೆ ಭಾರೀ ಕಷ್ಟ ಅಕ್ಕು. ಸಾಲ ತೆಗದವ ಕಟ್ಟದ್ದರೆ, ಕೆಟ್ಟು ಹೋಕು ಮಿನಿಯಾ.

  • ಈಗಾಣ ಕಾಲಲ್ಲಿ ,ಬೇಂಕಿಂದ ಲೋನು ತೆಗೆತ್ತರೆ ಗುರ್ತಸಾಕ್ಷಿ ಹಾಕುವಗಳೂ ಜಾಗ್ರತೆ ಬೇಕಾವುತ್ತಲ್ಲೊ ಗೋಪಾಲಣ್ಣ?

   • pattaje shivarama bhat says:

    ಕೆಸವಿನ ಸೆಸಿಲಿ ಕಂಜಿ ಕಟ್ಟಿ ಹಾಕಿಕ್ಕಿ ಬೈಂದೆ ಹೇಳುತ್ತ ಗಾದೆಯನ್ನುದೇ ವಿವರಿಸಿ ವಿಜಯಕ್ಕ,

 3. ಶರ್ಮಪ್ಪಚ್ಚಿ says:

  ರುಜು ಹಾಕಿದ ಮತ್ತೆ ಬಾಧ್ಯತೆ ಇದ್ದು. ಒತ್ತಾಯಕ್ಕೆ ಹಾಕಿದ್ದೋ ಮನಸಿದ್ದು ಹಾಕಿದ್ದೋ ಹೇಳಿ ವಿಮರ್ಶೆ ಇಲ್ಲೆ.
  ನುಡಿಗಟ್ಟಿನ ವಿವರಣೆ ಲಾಯಿಕ ಆಯಿದು

 4. ಬೇಂಕಿನವಕ್ಕೆ ಈ ಕತೆ ಗೊಂತಾದರೆ ರುಜು ಹಾಕುತ್ತಲ್ಲಿ ಒಂದು ಟಿಕ್ಕ ಮಾರ್ಕ ಹಾಕುಲೆ ಹೇಳುಗೋದು. – ಒತ್ತಾಯಕ್ಕೋ ಒಪ್ಪಿಗೆಯೋ ಹೇದು ಖಾತ್ರಿ ಮಾಡಿಗೊಂಬಲೆ!

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *