“ಕಿರುಬೆರಳು ಬೀಗಿರೆ ಎಷ್ಟು ಬೀಗ್ಗು”–(ಹವ್ಯಕ ನುಡಿಗಟ್ಟು-94)

 

“ಕಿರು ಬೆರಳುಬೀಗಿರೆ ಎಷ್ಟು ಬೀಗ್ಗು!”-(ಹವ್ಯಕ ನುಡಿಗಟ್ಟು-94)

 

ಮದಲಿಂಗೆ ಹೇಳಿರೆ, ಒಂದೈವತ್ತು ವರ್ಷ ಹಿಂದಂಗೊರೆಗೆ  ಹವ್ಯಕರ ಪ್ರತಿಯೊಂದು  ಮನೆಲಿಯೂ ತುಂಬಿದ ಸಂಸಾರ!.ಗೆಂಡ-ಹೆಂಡತಿಗೆ ಹತ್ತು-ಹನ್ನೆರಡು ಮಕ್ಕೊ!.ದಂಪತಿಗೊ ಮೂರ್ನಾಲ್ಕು ಜೆನ,ಕೆಲವು ಕಡೆ ಹೆಚ್ಚಿಗಿಪ್ಪಲೂ ಸಾಕು.(ಮಗಳಕ್ಕೊ ಮದುವೆಯಾಗಿ ಹೋಗಿರ್ತವು). ಇವರ ಅಬ್ಬೆ-ಅಪ್ಪᵒ (ಪ್ರಾಯ ಆದೋರು), ಈ ನಾಲ್ಕೈದು ದಂಪತಿಗಳ ಎಲ್ಲಾ ಮಕ್ಕಳೂ ಒಟ್ಟು ಸೇರಿ, ಹತ್ತ್ಮೂವತ್ತೋ,ಐವತ್ತೋ, ಜೆನ ಒಂದು ಮನೆಲಿಕ್ಕಿದ. ರಜೆಲಿ ಅಜ್ಜನಮನೆಲಿ ಸೇರುದು. ಮಾಂಬಳವೋ ಹಪ್ಪಳವೋ ಪುಳ್ಳಿಯಕ್ಕೊಲ್ಲ ಸೇರುವದು ಅಜ್ಜಯಕ್ಕಳೊಟ್ಟಿಂಗೆ ಸಕಾಯಕ್ಕೆ.(ಈಗಾಣವು ಖಂಡಿತ ಸೇರವು ಅನುಮಾನ ಇಲ್ಲೆ).

ಆನು ಸಣ್ಣದಿಪ್ಪಗ ಒಂದು ದೊಡ್ಡರಜೆಲಿ, ಮಾವಿನಣ್ಣಿನ ಸಮಯ.ಅಜ್ಜನ ಮನೆಲಿ ಬೆಲ್ಲಮಾವು ಹೇಳಿ ಇಕ್ಕಿದ. “ಹೆರ್ಕಿ ತಂದದು ಸಾಲ ಮಾಂಬಳ ಎರೆಕಾರೆ ಇನ್ನೂ ರಜ ಬೇಕಾತು” ಹೇಳಿ ಅಜ್ಜಿ ಹೇಳಿಯಪ್ಪಗ; ಅಜ್ಜಿಯ ಸಣ್ಣ ಪುಳ್ಳಿ ಒಬ್ಬᵒ  “ಆನು ಮರಕ್ಕೆ ಹತ್ತಿ ಮರಂದ ಅಲುಗುಸಿ ತತ್ತೆ”. ಹೇಳಿ ಶಿಫಾರಸ್ಸು ಕೊಚ್ಚಿಗೊಂಡು ಓಡಿದᵒ. ಸಾಹಸಿ ಸಣ್ಣ ಪುಳ್ಳಿ.

ಆದರೆ ಅವಂಗೆ ಎಡ್ತತ್ತಿಲ್ಲೆ.ಅವᵒ ಅಂತೇ ಕೈಬೀಸಿಗೊಂಡು ಬಂದಪ್ಪಗ ಅಜ್ಜᵒ ; “ಕಿರು ಬೆರಳು ಬೀಗಿರೆ ಎಷ್ಟು ಬೀಗ್ಗು. ನೀನೊಂದರಿ ಮರಹತ್ತಿ ಅಲುಗುಸು ಒಪ್ಪಕುಞ್ಞ್ “ ಹೇಳಿ ಮಾವನ ಹತ್ತುಸಿ,  ಮಾವಿನಹಣ್ಣು ಒಂದು ಕುರುವೆ ತೆಕ್ಕಂಡು ಬಂದೊವು ಹೇಳುವೊಂ.

ತನ್ನಿಂದ ಹಾಯದ್ದ ಕೆಲಸಾದರೂ ಉತ್ಸಾಹ ತೋರುಸುದು ಮಾತ್ರ. ಅದರ  ಮಾಡ್ಳೆ ಎಡಿಗಾಗದ್ದರೆ  ಹೆರಿಯೊವು  ಈ ಗಾದೆಯ ಬಳಸುತ್ತೊವು.

—–೦—–

 

ವಿಜಯತ್ತೆ

   

You may also like...

15 Responses

 1. ವಿಜಯಕ್ಕ, ನಿನ್ನ ಗಾದೆ ಹಳತ್ತಾದರೂ ಎನ್ನ ಮಟ್ಟಿಂಗೆ ಹೊಸತ್ತು ಹೇದು ಹೇಳ್ಲೆ ಸಂತೋಷ ಪಡುತ್ತೆ. ಧನ್ಯವಾದಗಳು.

  • ನಿಂಗೊ ಸ್ಪಂಧಿಸಿದ್ದು ಕೊಶಿಯಾತು ಶಂಕರಣ್ಣ…ಸಾದಾರಣ ಗಾದಗೊ ಜಾನಪದೀಯಲ್ಲಿ, ಮಾತಿಲ್ಲಿ ಬಳಸುತ್ತಾ ಬಂದದು. ಕೆಲಾವು ನವಗೊಂತಿರುತ್ತಿಲ್ಲೆ. ಎನಗೂ ಗೊಂತಿಲ್ಲದ್ದು ಅದೆಷ್ಟೋ ಇಕ್ಕು.

 2. ಚವರ್ಕಾಡು ಪಟ್ಟಾಜೆ ಶಿವರಾಮ ಜೋಯಿಷರೇ , ಏನಾದರೂ ಕಮೆಂಟ್ಸ್ ಇದ್ದರೆ ಕಳಿಸಿ ಸ್ವಾಮಿ.

 3. ಶರ್ಮಪ್ಪಚ್ಚಿ says:

  ಪ್ರತಿಯೊಂದು ನುಡಿಗಟ್ಟಿಂಗೂ ಒಂದೊಂದು ಸೂಚಿತ ಅರ್ಥ.

  • ಅಪ್ಪು ಭಾವಯ್ಯ. ಹಾಂಗಿದ್ದ ಸಂದರ್ಭಕ್ಕೆ ಹುಟ್ಟಿದ ಮಾತಿದ ಅದು.. ಇಲ್ಲಿ ಅಜ್ಜನಮನೆ ಅಜ್ಜ ’ಕಿಂಕಿಣಿ ಬೆರಳು’ ಹೇಳುಗು. ಆನಿಲ್ಲಿ ಕಿರು ಬೆರಳೂಳಿ ಉಲ್ಲೇಖ ಮಾಡಿದ್ದೆ .ಎಲ್ಲೋರಿಂಗು ಆ ಶಬ್ಧ ಅರ್ಥಆಗಾಳಿ.

 4. ಬೊಳುಂಬು ಗೋಪಾಲ says:

  ಕಿಂಕಿಣಿ ಬೆರಳು ಬೀಗಿರೆ ಎಷ್ಟು ಬೀಗುಗು. ನುಡಿಗಟ್ಟು ಲಾಯಕಿದ್ದು. ಸಣ್ಣವು ಯೇವಾಗಳೂ ಸಣ್ಣವೇ, ಅವಕ್ಕೆ ದೊಡ್ಡ ಕಾರ್ಬಾರು ಮಾಡ್ಳೆಡಿಯ.
  ಇದಕ್ಕೆ ಸರಿ ವಿರುದ್ಧ ನುಡಿಗಟ್ಟು, ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಹೇಳುವನೊ ವಿಜಯಕ್ಕ ?

  • ಬೊಳುಂಬು ಗೋಪಾಲ ಅಂಬಗ ಕಿಂಕಿಣಿ ಬೆರಳು ಹೇಳಿಯೇ ಬರವನೋ? ಎನ್ನ ಹೆರಿಯವು ಹಾಂಗೆ ಹೇಳೆಂಡಿದ್ದರೂ ಈಗಾಣವು ಕೆಲವು ಜೆನ ಕಿರುಬೆರಳು ಹೇಳ್ತ ಕಾರಣ ಆನು ಹಾಂಗೆ ಬರದೆ.

 5. ವಿಜಯಕ್ಕ, ಮರಿ ಪರಬ್ಬೆ ಆಂಟಲಾ ಬಿಸ ಪರಬ್ಬೆ ಅತ್ತು ಹೇದು ಹೇಳುವ ಹಾಂಗೆ ನಿನ್ನ ಗಾದೆ ಹಳತ್ತಾದರೂ ವಿಷಯ ಅಗಾಧವಾದುದು ವಿಜಯಕ್ಕ. ಧನ್ಯವಾದಗಳು.

 6. ಹಾಂಗಾರೆ ಕುಂಞಣ್ಣನ ತುಳು ಗಾದೆಗೋ ಬರಲಿ.

 7. Venugopal Kambaru says:

  ಕಿಂಕಿಣಿ ಬೆರಳು ಹೇಳಿರೆ ಸರಿ ಆವುತಿತ್ತು

 8. S.K.Gopalakrishna Bhat says:

  ಕಿಂಕಿಣಿ ಬೆರಳು ಬೀಗಿರೆ ಎಷ್ಟು ಬೀಗುಗು?
  ಗಾದೆ ಆನು ಕೇಳಿದ್ದೆ. ಒಳ್ಳೆದಾಯಿದು.ಉದ್ದು ಉಬ್ಬಿರೆ ಮದ್ದಳೆ ಅಕ್ಕೋ? ಹೇಳಿ ಹೇಳ್ತವು.

 9. ಚೆನ್ನೈ ಬಾವ says:

  ನೆಗೆ ಮಾಡ್ತಾಂಗೆ ಇದ್ದರೂ ವ್ಯಂಗ್ಯ ಲಾಯಕ ಇದ್ದಪ್ಪೋ

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *