“ತುಪ್ಪದ ಪಾಕಕ್ಕೆ ಕೆಟ್ಟುಕಾಯಿ ಒಗ್ಗರಣೆ ಕೊಟ್ಟ ಹಾಂಗೆ”–{ಹವ್ಯಕ ನುಡಿಗಟ್ಟು 25}

March 19, 2015 ರ 7:05 amಗೆ ನಮ್ಮ ಬರದ್ದು, ಇದುವರೆಗೆ 5 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

–“ತುಪ್ಪದ ಪಾಕಕ್ಕೆ, ಕೆಟ್ಟೆಣ್ಣೆಯ ಒಗ್ಗರಣೆ ಹಾಂಗೆ”-[ಹವ್ಯಕ ನುಡಿಗಟ್ಟು-25]–

 

ಪರಿಚಯದ ಒಬ್ಬ ಮಾಣಿಗೆ ಮದುವೆ ನಿಜಾತಿದ. ಮದುವೆ ನಿಜಾಯೆಕ್ಕಾರೆ; ಮದಾಲು ಕೂಸು ನೋಡ್ಳೆ ಹೋಯೆಕ್ಕಲ್ಲೊ.ಹೋದವು.ಕೂಸು ನೋಡಿಕ್ಕಿ,ಇಡ್ಳಿ,ಒಡೆ,ಕೇಸರಿಪ್ಪಾತ್ ತಿಂದು, ಕಾಫಿ ಕುಡುದಿಕ್ಕಿ ಬಂದವು.ಮಾಣಿ ಹತ್ರೆ ಒಪ್ಪಿಗೆ ಆತೊ ಕೇಳಿಯಪ್ಪಗ ಮಾಣಿ, ಹಸುರು ನಿಶಾನೆ ತೋರ್ಸಿದ. ಹಾಂಗೇ ಅವನ ಅಬ್ಬೆ; ಅಪ್ಪನ ಮೋರೆ ನೋಡಿತ್ತು. ನಿಂಗಳ ಅಭಿಪ್ರಾಯ ಎಂತದು? ಕೇಳುವ ಹಾಂಗೆ!. “ನಿನಗೆ ಅಕ್ಕು ಹೇಳಿ ಕಂಡ್ರೆ ಒಪ್ಪಿಗೆ ಕೊಡುವೊಂ.” ಹೇಳಿಂಡು  ಹೆಂಡತ್ತಿಯ ಮೋರೆ ನೋಡಿದಂ. ಅದು “ಕೂಸೆಲ್ಲ…ಚೆಂದಇದ್ದನ್ನೆ..! ಆದರೆ ಅದಕ್ಕೆ   ಅಣ್ಣ-ತಮ್ಮಂದ್ರು ಇಲ್ಲೆ!.ಒತ್ತೆಪ್ಪೋಕಂ” ಹೇಳ್ತ ಒಗ್ಗರಣೆ ಕೊಟ್ಟತ್ತು.ಅಷ್ಟಪ್ಪಗ, “ತುಪ್ಪದ ಪಾಕಕ್ಕೆ ಕೆಟ್ಟೆಣ್ಣೆಯ ಒಗ್ಗರಣೆ ಕೊಟ್ಟಹಾಂಗೆ” ನೀನು ಮಾತಾಡೆಡ ಮಿನಿಯ!.ಹೆಂಡತ್ತಿಯ ಆಕ್ಷೇಪ ಮಾಡಿದಂ.

ಇನ್ನೊಂದಾರಿ ಒಂದು ಮದುವೆ ಊಟಕ್ಕೆ ಹೋಗಿಪ್ಪಾಣ ಕತೆ. ಒಳ್ಳೆ ದೊಡಾ  ಮದುವೆಯಿದ. ಕಾಪಿಗೆ ಸೆಟ್ ದೋಸೆ,ಚಪಾತಿ,ಇಡ್ಳಿ, ಹೀಂಗಿದ್ದರೊಟ್ಟಿಂಗೆ ಎರಡು ಸ್ವೀಟ್, ಎರಡು ಖಾರ, ಊಟಕ್ಕೆ ಸಾದಾರಣ  ಆರು ಬಗೆ ಸ್ವೀಟ್ ಮತ್ತೆ ಈಗಾಣ   ಘೀರೈಸೋ, ಪಲಾವೋ ಹೀಂಗೆಲ್ಲ ಇದ್ದೊಂಡು ಮದುವೆ ರೈಸಿತ್ತು. ಮದುವೆ ಕಳಿಶಿಗೊಂಡು ಹೆರ ಬಪ್ಪಾಗ ಎನ್ನ ಚಙಾಯಿ, “ವಿಜಯಕ್ಕಾ, ಎಂತ ಮಾಡಿದರೆಂತ ಮನೆವು, ಬಂದವರತ್ರೆ ಒಂದು ಶಬ್ಧ ಮಾತಾಡ್ಸಲೆ ಬಯಿಂದವಿಲ್ಲೆ” ಹೇಳಿತ್ತು. ಅಪ್ಪು. ಕೆಲವು ಜೆನ ಅವರ ಆಡಂಬರ ತೋರ್ಸಲೆ ಹೀಂಗೆಲ್ಲಾ ಮಾಡುದು ಹೇಳಿಗೊಂಡೆಯೊಂ. ಒಟ್ಟಿಲ್ಲಿ  ಈ ನುಡಿಗಟ್ಟಿನ ಸಾರಾಂಶ “ಎಲ್ಲಾ ಬಣ್ಣ ಮಸಿ ನುಂಗಿತು” ಹೇಳ್ತ ಅರ್ಥ ಬತ್ತು.

 

 

 

 

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 5 ಒಪ್ಪಂಗೊ

 1. ಚೆನ್ನೈ ಬಾವ°
  ಚೆನ್ನೈ ಭಾವ°

  ತುಪ್ಪದ ಪಾಕಕ್ಕೆ ಕೆಟ್ಟೆಣ್ಣೆ ಒಗ್ಗರಣೆ ವಿವರಣೆ ಲಾಯಕ ಆಯಿದು. ಹರೇ ರಾಮ.

  [Reply]

  VA:F [1.9.22_1171]
  Rating: 0 (from 0 votes)
 2. ತೆಕ್ಕುಂಜ ಕುಮಾರ ಮಾವ°
  ತೆಕ್ಕುಂಜ ಕುಮಾರ ಮಾವ°

  ಒಳ್ಳೆ ನುಡಿಗಟ್ಟು, ವಿಜಯತ್ತೆ

  [Reply]

  VN:F [1.9.22_1171]
  Rating: 0 (from 0 votes)
 3. ವಿಜಯತ್ತೆ

  ಚೆನ್ನೈ ಭಾವಂಗು,ತೆಕ್ಕುಂಜ ಕುಮಾರ ಮಾವಂಗು ಧನ್ಯವಾದಂಗೊ

  [Reply]

  VN:F [1.9.22_1171]
  Rating: 0 (from 0 votes)
 4. ಗೋಪಾಲಣ್ಣ
  S.K.Gopalakrishna Bhat

  ತಣಿಯುಂಡಮರ್ದಮ್ ಗೋಮೂತ್ರದಿಂದೆ ಬಾಯ್ವೂಸಿದವೊಲ್ [ಪಂಪ ಭಾರತ] -ನೆನಪಾತು.

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣತೆಕ್ಕುಂಜ ಕುಮಾರ ಮಾವ°ಪುಟ್ಟಬಾವ°ಜಯಶ್ರೀ ನೀರಮೂಲೆನೀರ್ಕಜೆ ಮಹೇಶಸುವರ್ಣಿನೀ ಕೊಣಲೆದೀಪಿಕಾವಿದ್ವಾನಣ್ಣಡಾಮಹೇಶಣ್ಣಪವನಜಮಾವಅನು ಉಡುಪುಮೂಲೆಸುಭಗಒಪ್ಪಕ್ಕಅಕ್ಷರದಣ್ಣಚೆನ್ನೈ ಬಾವ°ಉಡುಪುಮೂಲೆ ಅಪ್ಪಚ್ಚಿಯೇನಂಕೂಡ್ಳು ಅಣ್ಣಚೂರಿಬೈಲು ದೀಪಕ್ಕಶಾ...ರೀಚುಬ್ಬಣ್ಣಚೆನ್ನಬೆಟ್ಟಣ್ಣಜಯಗೌರಿ ಅಕ್ಕ°ಪುಣಚ ಡಾಕ್ಟ್ರುಮಂಗ್ಳೂರ ಮಾಣಿಅಜ್ಜಕಾನ ಭಾವಪಟಿಕಲ್ಲಪ್ಪಚ್ಚಿಪೆರ್ಲದಣ್ಣ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ