“ತೆಂಕಣ ಕಾಡು ಕಡಿವಲಾಗ” (ಹವ್ಯಕ ನುಡಿಗಟ್ಟು–3)

—“ತೆಂಕಣ ಕಾಡು ಕಡಿವಲಾಗ”— [ಹವ್ಯಕ ನುಡಿಗಟ್ಟು-3]

ಕೆಲಾವು ವರ್ಷ ಹಿಂದೆ ಈಗಾಣ ಹಾಂಗೆ  ಟಿ.ವಿ ಎಲ್ಲ ಇಲ್ಲೆ. ರೇಡಿಯೊ ಸಮೇತ ಬಹು ಅಪರೂಪ. ಮನೆಲಿದ್ದ ಹೆಮ್ಮಕ್ಕೊಗೆ ಮದ್ಯಾಹ್ನದೂಟ ತೀರ್ಸಿಕ್ಕಿ ಮಡ್ಳು ಮೊಡವದೊ, ಕರ್ಕೋಟು[ಉರುವೆ ಅಡಕ್ಕೆ ಕೊರದು ಒಣಗುಸುವದು] ಮಾಡುವದೊ ಇಕ್ಕು.ಅದು ಎಲ್ಲೋರಿಂಗೂ  ಏವಗಳೂ ಇರಯಿದ. ಹೆಚ್ಚಿನವೂ ಆಚೀಚ ಮನಗೊಕ್ಕೆ ಹೋಗಿ ಪಟ್ಟಾಂಗ ಹಾಕುಗು. ಮನೆ ಹತ್ತರೆ ಒಂದು ಪುಟ್ಟಕ್ಕಜ್ಜಿ[ಹೆಸರು ಬದಲ್ಸಿದ್ದೆ] ಹೇದು ಇದ್ದತ್ತು.ಅದು ಬಹು ಪರೋಪಕಾರಿ.ಇನ್ನೊಬ್ಬಂಗೆ ಸಕಾಯ ಮಾಡುಸ್ಸು,ತನ್ನಲ್ಲಿದ್ದ ವಸ್ತು ಇನ್ನೊಬ್ಬಂಗೆ ಕೊಡುವದು ಹೇಳಿರೆ ಅದಕ್ಕೆ ಪ್ರೀತಿ.ಆದರೆ  ’ವಾಚಾಳಿ’. ಹೆಚ್ಚಿನ ದಿನವೂ ಎನ್ನ ಅಜ್ಜಿ ಹತ್ರಂಗೆ ಬಂದು ಪಟ್ಟಾಂಗಕ್ಕೆ ಕೂರುಗು. ದಿನಾ ಒಂದೇ ವಿಷಯ, ಜಗುದ್ದದರನ್ನೇ ಜಗಿವದೂ ಇಕ್ಕು. ಎನ್ನ ಅಜ್ಜಿಗೆ ಕೆಲವು ಸರ್ತಿ ಬೊಡಿಗು.ಅದು ಪೆರೆ-ಪೆರೆ ಹೇದಿಕ್ಕಿ ಹೋದ ಮೇಲೆ  ಒಂದಿನ,  “  ಮಜ್ಜಾನ ಉಂಡಿಕ್ಕಿ ಒಂದು ಕ್ಷಣ ಮಗ್ಗಿಲು ಅಡ್ಡ ಹಾಕುವೊ೦ ಹೇಳಿರೆ; ಈ ಚೆರಪ್ಪಟೆ ಬಿಡೆಕೊ ?” ಎನ್ನಜ್ಜಿ ಕೋಪ್ಸಿಗೊಂಡು ಹೇದಪ್ಪಗ; ಅಲ್ಲೆ ಕೇಳ್ಸಿಗೊಂಡ  ಅಜ್ಜ “ಕೋಪಲ್ಲಿ ಅದರ ಬೈದೋ ಮಣ್ಣು ಮಾಡಿಕ್ಕೆಡ ಮಿನಿಯ. ’ತೆಂಕಣ ಕಾಡು ಕಡಿವಲಾಗ’ ಹೇದಿದ್ದು ಗೊಂತಾತೊ?” ಹೇದವು. ಅಜ್ಜಿ “ಹೂಂ..ಞ್”   ಹೇಳ್ಯೊಂಡು ಸುಮ್ಮನಾದೊವು. ಇದರ ಕೇಳ್ಸಿಗೊಂಡ ಆನು ಸುಮ್ಮನಿರೆಕೋ!. “ ಅಜ್ಜಾ.., ’ತೆಂಕಣ ಕಾಡು ಕಡಿವಲಾಗ’ ಹೇಳ್ತಮಾತು ಇಲ್ಲಿ ಎಂತಕೆ? “ ಕೇಳಿದೆ.

ನಮ್ಮ ಅಡಕ್ಕೆ ತೋಟಂಗಳ ಕರೆಲೆಲ್ಲ ಕಾಡು ಬೆಳೆಶುತ್ತಿದ.ಅದರ ಮಳೆಗಾಲಲ್ಲಿ ಕಡುದು  ತೆಂಗು, ಕಂಗಿನ ಬುಡಕ್ಕೆ ಹಾಕುವ ಪದ್ದತಿ. ತೆಂಕ ಹೊಡೆಯಾಣ ಕಾಡಿನ ಒಂದಿಷ್ಟುಜಾಗೆಲಿ  ಮರಬಗ್ಗಿ ಉಪದ್ರ ಹೇಳಿ ಕಂಡರೂ ಕಡಿಯದ್ದೆ ಬಾಕಿ ಮಾಡೆಕ್ಕು. ಅದು ನಮ್ಮ ತೋಟಕ್ಕೆ ತೆಂಕ ಕಾಚಲು ಬೀಳದ್ದ ಹಾಂಗೆ ರಕ್ಷಣೆ ಮಾಡುತ್ತಿದ.ಅದರ ಒಳುಶೆಕ್ಕು. ಇಲ್ಲಿಯೂ ಪುಟ್ಟಕ್ಕಜ್ಜಿಯ ಸಕಾಯ ಅಷ್ಟಿಷ್ಟಲ್ಲ!ಈ ಮನೆ ಹೆಮ್ಮಕ್ಕಳ ಬಸರು, ಬಾಳಂತನ ಸಮೆಲಿ,ಅನುಪ್ಪತ್ಯ ಸಮೆಲಿ, ಹೀಂಗೆ ತುಂಬ ಉಪಕಾರ ಇದ್ದದರಿಂದ.ಅದರ ನಿಷ್ಟುರ ಮಾಡ್ಳಾಗಯಿದ. ಹೇಳ್ತಾ, ಗುರುಹಿರಿಯವು, ಸಜ್ಜನರು, ಉಪಕಾರ ಮಾಡುತ್ತವು,ನೆರೆಕರೆಯವು ಇವೆಲ್ಲ ನವಗೆ ನೆರಳು ಕೊಡುವವು” ಹೇದೊವು.ಅಪ್ಪು ಒಪ್ಪೆಕ್ಕಾದ ಒಳ್ಳೆ ಮಾತಿದು ಅಲ್ಲೊ! ಎಂತ ಹೇಳ್ತಿ?.

ವಿಜಯತ್ತೆ

   

You may also like...

9 Responses

 1. ಚೆನ್ನೈ ಭಾವ° says:

  ಒಪ್ಪ ಶುದ್ದಿ . ಚೊಕ್ಕ ಆಯ್ದು ವಿಜಯತ್ತೆ .

 2. ಗೋಪಾಲಣ್ಣ says:

  ಒಳ್ಳೆ ಸಂಗತಿ ಚಿಕ್ಕಮ್ಮ .

 3. ಶಾರದಾಗೌರೀ says:

  ವಿಜಯತ್ತೆ, ಲಾಯಕ ನುಡಿಗಟ್ಟು.
  ಮದಲಾಣೋರು ಜಾಗೆ ತೆಕ್ಕೊಂಬಗ ತೆಂಕ ಕಟ್ಟಿಯೇ ಇಪ್ಪ ಜಾಗೆ ನೋಡಿಗೊಂಡಿತ್ತಿದ್ದವು. ಜಾಗೆಗೆ ಪ್ರಾಕೃತಿಕ ನೆರಳು ಸಿಕ್ಕುತ್ತ ಹಾಂಗಿಪ್ಪ ಜಾಗೆ ಹೇಳಿ.
  ಉದಾಹರಿಸಿ ಬರದ್ದದು ತುಂಬ ಲಾಯ್ಕಾಯಿದು.
  ಧನ್ಯವಾದಂಗೊ.

 4. ಒಳ್ಳೆ ನುಡಿಗಟ್ಟು ವಿಜಯಕ್ಕ ,ಹೀಂಗೆ ಎಲ್ಲೊರು ಅವರರವ ಸುತ್ತ ಮುತ್ತ ಪ್ರಚಲಿತ ಇಪ್ಪ ಪಡೆನುಡಿಗಳ ಸಂಗ್ರಹ ಮಡಿ ಬರದರೆ ನಮ್ಮ ಹವ್ಯಕ ಭಾಷೆಗೆ ದೊಡ್ಡ ಇಡು ಗಂಟು ಅಕ್ಕು ಅಲ್ಲದ ?ಒಳ್ಳೆ ಕೆಲಸಕ್ಕೆ ಅಭಿನಂದನೆಗ ವಿಜಯಕ್ಕ

 5. ಶೀಲಾ ಲಕ್ಷ್ಮೀ says:

  ಹೋ…. ವಿಜಯಕ್ಕಾ …. ಇದು ಭಾರೀ ಲಾಯಕಾಯಿದು. ನುಡಿಗಟ್ಟು ಬರೆದು ಭಾಷೆ ಗಟ್ಟಿ ಮಾಡಿ ಮನಸ್ಸು ಮುಟ್ಟಿ ನೋಡಿದಿರನ್ನೆ…?

 6. ಲಲಿತಾಲಕ್ಷ್ಮೀ ಎನ. ಭಟ್ಟ says:

  ಹರೇರಾಮ ವಿಜಯಕ್ಕ ಇಂದು ನಮ್ಮನೆಲೆ ನೆಟ್ ಸಿಕ್ತು, ನಿನ್ ಹತ್ರ ಮಾತಾಡುಲೆ ಹೇಳಿ. ಮೂರೂ ನುಡಿಗಟ್ಟು ರಾಶಿ ರಾಶಿ ಚೆಂದಾಜು ವಿಜಯಕ್ಕ. ನಂಗ್ಳ ಹಿರಿಯರು ಅದೆಷ್ಟು ಜಾಣ್ರು ಅಂದ್ರೆ …ನಂಗೊ ಈಗಿತ್ತಲಾಗಿನವ್ರು ಇಂತಾ ಯಾವ್ದೇ ಪ್ರಯತ್ನ ಮಾಡಿದ್ವಾ ಅಕೊ ಹಳೆಜನ ಹೇಳಿದ್ದರಲ್ಲೇ ಸರ್ವಾರ್ಥ ಕಂಡ್ಕಂಡು ಅದ್ರ ಬೆಳಕಲ್ಲೆ ಬಾಳುವ ಪ್ರಯತ್ನ ಮಾಡ್ತೊ ಅಲ್ದಾ? ೂಟ, ುಡುಪು , ಮಾತು, ವ್ಯವಹಾರ ೆಲ್ಲವ್ದೂ ಚೆಂದ ಹಿರಿಯರದು. ನಿನ್ನಂಥವ್ರು ಅಂತದ್ದರ ಮೇಲೇ ಬೆಳಕು ಚೆಲ್ಲಿ ನಂಗ್ಳಂಥವ್ರ ಬಾಳೀಗೊಂದು ಮಾರ್ಗ ತೋರ್ಸೊ. ಆ ನಿಟ್ಟಿನಲ್ಲಿ ನಿನ್ನ ಪ್ರಯತ್ನ ರಾಶಿ ಚೊಲೋ ಆಜೆ. ಅಭಿನಂದನೆ ಪ್ರೀತಿಯ ವಿಜಯಕ್ಕ…

 7. ಹರೇರಾಮ,ನಿಂಗಳೆಲ್ಲ ಅಭಿಮಾನಕ್ಕೆ, ಪ್ರೋತ್ಸಾಹಕ್ಕೆ ಧನ್ಯವಾದಂಗೊ ಲಲಿತಾ

 8. N. S. Keshava Prakash (pakacha) says:

  ಈ ರೀತಿಯ ಕನ್ನಡ ನುಡಿಗಟ್ಟುಗಳನ್ನು ತಿಳಿಸಿ ಕೊಟ್ಟ ವಿಜಯಕ್ಕಂಗೆ ತುಂಬಾ ಧನ್ಯವಾದಗಳು

 9. ರಘುಮುಳಿಯ says:

  ಭಾರೀ ಅರ್ಥಪೂರ್ಣ ನುಡಿಕಟ್ಟು. ಧನ್ಯವಾದ ಅತ್ತೆ.
  ವಾಸ್ತು ತಜ್ಞರು ತೆ೦ಕ ಕಟ್ಟಿ ಇರೇಕು ಹೇಳೊದಕ್ಕೆ ವೈಜ್ಞಾನಿಕ ಕಾರಣ ಇದುವೇ ಅಲ್ಲದೋ.ಈಗ ಅರ್ಥ ಗೊ೦ತಿಲ್ಲದ್ದೇ ಜೆನ ಅನುಸರಣೆ ಮಾಡ್ತದು ವಿಪರ್ಯಾಸ.

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *