“ಮನೆಂದ ದೊಡ್ಡ ಮೆಟ್ಟುಕಲ್ಲು ಅಪ್ಪಲಾಗ”-(ಹವ್ಯಕ ನುಡಿಗಟ್ಟು-101)

 

“ಮನೆಂದ ದೊಡ್ಡ ಮೆಟ್ಟುಕಲ್ಲು ಅಪ್ಪಲಾಗ”-(ಹವ್ಯಕ ನುಡಿಗಟ್ಟು-101)

ಇದೆಂತಪ್ಪ ಮನೆಂದ ದೊಡ್ಡ ಮೆಟ್ಟುಕಲ್ಲು!.ಹೀಂಗೆ  ಆರಾರು ಮಾಡ್ಳಿದ್ದೊ?. ಎಲ್ಲೋರಿಂಗು ಕಾಂಬ ಮಾತಪ್ಪದು. ಎಂತ ವಿಷಯಕ್ಕೀ ಮಾತು, ನೋಡುವೊ.

ಹವ್ಯಕರಲ್ಲಿ ನೆಂಟಸ್ತಿಕೆ ಮಾಡುವಗ ಹೆಚ್ಚಾಗಿ, ಕೂಸಿನ ಕೊಡುವಗ ತಮ್ಮಿಂದ ಧನಿಕರಿಂಗೂ  ಕೂಸಿನ ತಪ್ಪಗ ತಮ್ಮಿಂದ ರಜ ಬಡವರನ್ನೇ  ಆಯ್ಕೆ ಮಾಡುವದು ಹಿಂದಾಣ ಪದ್ಧತಿ. (ಈಗೀಗ ಇದರ ಪಾಲುಸುತ್ತೊವಿಲ್ಲೆ ಹೇಳುವೊ).

ಒಬ್ಬ ಬಡ, ಭಾವ; ಅವನ ಮಗಂಗೆ ಕೂಸು ಹುಡುಕ್ಕುದು ಮೂರ್ನಾಲ್ಕು ವರ್ಷಾತು. ಅವನ ಮಗ, ಆರಂಕಿಗೆ  ಹತ್ತರತ್ತರೆ ಸಂಬಳದ ಇಂಜಿನಿಯರೆ. ಇದರೆಡೆಲಿ ಕಾಂಬಲೆ ಸಿಕ್ಕಿಪ್ಪಗ ಅವನ ಪೇಚಾಟ ಹೇಳಿಗೊಂಡ.

ಏವದಾರೂ ಒಳ್ಳೆ ಅನುಕೂಲ ಇಪ್ಪ ಕುಳವಾರು ಹೇಳಿತ್ಕಂಡ್ರೆ , “ಆ ಕುಳವಾರು ನವಗೆ ದೊಡ್ಡಾತು.ಪ್ರಾಯಲ್ಲಿ ಅಲ್ಲ!. ಬಗೆ ಬದುಕ್ಕಿಲ್ಲಿ!!. “ಮನೆಂದ ದೊಡ್ಡ ಮೆಟ್ಟುಕಲ್ಲು ಅಪ್ಪಲಾಗ” ನಮ್ಮಾಂಗೆ ಇದ್ದವು ಅಥವಾ ರಜ ಬಡವರಾದರೂ ಚಿಂತೆಯಿಲ್ಲೆ; ಹೇಳುದು ಅವನ ವಾದ.

ಈ ಮಾತಿನ  ಹೀಂಗೂ ಬಳಸಿಗೊಳ್ತವು. ಆದಾಯ ಬತ್ತ ಆಸ್ತಿ ಸಣ್ಣದಾಗಿ ಮನೆ ದೊಡಾ..>.ಬಂಗ್ಲೆ ಹಾಂಗೆ ಕಟ್ಟೀರೂ  “ಮನೆ ಅಶನ ಕೊಡ, ಆದಾಯ ನೋಡೆಂಡೆ ಮನೆ ಕಟ್ಟೆಕ್ಕು, ಮನೆಂದ ದೊಡ್ಡ ಮೆಟ್ಟುಕಲ್ಲು ಅಪ್ಪಲಾಗ” ಹೇಳುಗು.

                                    ———-೦———

 

ವಿಜಯತ್ತೆ

   

You may also like...

10 Responses

 1. pattaje shivarama bhat says:

  ಹಂಚಿದವಂಗೆ ಕೊಚ್ಚಲು ಹೇದು ಒಂದು ಗಾದೆ ಕೇಟ ಹಾಂಗೆ iddu ವಿಜಯಕ್ಕ.

 2. ಯಮ್.ಕೆ. says:

  ನೂರೊಂದು ನೆನಪಿನ ನುಡಿಗಟ್ಟು ಓದಿಪ್ಪಗ ,
  ನಾವಗೆ ಕಾಡಿದ ಮೊಟ್ಟ ಮೊದಲಾಣ
  ಪ್ರಶ್ನೆ ,,,,ಹವ್ಯಕಲ್ಲಿ ,
  ಹಿ೦ಗೇಲ್ಲಾ ಉಂಟೇ !!!!!!!!,
  ಭಾವ ?

 3. ಪ್ರಸನ್ನಾ ವಿ ಚೆಕ್ಕೆಮನೆ says:

  ಆದಾಯ ಕಮ್ಮಿ ಇಪ್ಪವು ಅದಕ್ಕಿಂತ ,ಆಡಂಬರ ಜೀವನ ಮಾಡಿರೆ ಹಿರಿಯರು ಹೇಳುವ ಹಿತವಚನವಾ ಇದು?ಆನು ಹಾಂಗೆ ಗ್ರೇಶಿದ್ದು.

  • ಪ್ರಸನ್ನಾ, ಆದಾಯಕ್ಕೆ ತಕ್ಕಂತೆ ಖರ್ಚು ಮಾಡುದಕ್ಕೆ “ಹೊದಕ್ಕೆ ಇದ್ದಷ್ಟೇ ಕಾಲು ನೀಡೆಕ್ಕು” ಹೇಳ್ತವು ಇದರ ಬಳಸುತ್ತವೋ ಗೊಂತಿಲ್ಲೆ.

 4. Venugopal Kambaru says:

  ನಮ್ಮ ಆದಾಯಕ್ಕೆ ತಕ್ಕ ಹಾಂಗೆ ನಾವು ಖರ್ಚು ಮಾಡೆಕ್ಕು

 5. ಬೊಳುಂಬು ಗೋಪಾಲ says:

  ತಲೆಂದ ದೊಡ್ಡ ಮುಂಡಾಸು ಅಪ್ಪಲಾಗ ಅಲ್ಲದೊ ವಿಜಯಕ್ಕ. ನುಡಿಗಟ್ಟ್ಟು ಅರ್ಥವತ್ತಾಗಿದ್ದು.

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *