“ರಚ್ಚೆಂದ ಬಿಡ,ಗೂಂಜಿಂದ ಬಿಡ”-( ಹವ್ಯಕ ನುಡಿಗಟ್ಟು-91)

“ರಚ್ಚೆಂದ ಬಿಡ,ಗೂಂಜಿಂದ ಬಿಡ”-(ಹವ್ಯಕ ನುಡಿಗಟ್ಟು-91)

ಸಣ್ಣಾದಿಪ್ಪಗಣ ಒಂದು ಪ್ರಸಂಗ! ಚಾವಡಿಲಿ ತಮ್ಮಂದ್ರು ಎರಡು ಜೆನವೂ ಎಂತದೋ ವಿಷಯಕ್ಕೆ ಲಡಾಯಿ ಮಾಡ್ಳೆ ಸುರುಮಾಡಿದೊವು.ಅತ್ತೂ-ಇತ್ತೂ ಹೊಯಿಕ್ಕಯಿ ಮಾಡುದು ನಿಲ್ಲುತ್ತೇ ಇಲ್ಲೆ.ಅಬ್ಬೆ ಅವರ ಎರಡು ಜೆನರನ್ನೂ ಬಿಡುಸಲೆ ನೋಡಿದ್ದು ಪ್ರಯೋಜನ ಆತಿಲ್ಲೆ.

ಅಬ್ಬೆ ಹೆರ ಬಂದು, “ಇದಾ..,ಇವರ ಇಬ್ರ ವಾದಾಂಟ ಮುಗಿತ್ತಿಲ್ಲೆ.ರಚ್ಚೆಂದಲೂ ಬಿಡುತ್ತಿಲ್ಲೆ,ಗೂಂಜಿಂದಲೂ ಬಿಡುತ್ತಿಲ್ಲೆ. ಇವರ ಎಳದು ತೆಕ್ಕಂಡು ಹೋಗಿ ಹೆರಾಂಗೆ” ಹೇಳಿತ್ತಬ್ಬೆ ಅಪ್ಪನತ್ರೆ.

ಅವಕ್ಕೆ ರಜ ಬುದ್ಧಿಮಾತು ಹೇಳಿರೂ ಪ್ರಯೋಜನ ಕಾಣದ್ದಿಪ್ಪಗ; ಅಪ್ಪᵒ ಅವರಿಬ್ಬರನ್ನೂ ಜಾಲಿಂಗೆ ಎಳಕ್ಕೊಂಡು ಬಂದು ನಿಲ್ಲಿಸಿದೊವು. ಅಲ್ಲಿಯೂ ಬಿಡದ್ದೆ ಜಗಳ ಮಾಡುಸ್ಸು ಕಾಂಬಗ ಜಾಲ ತಲೆಲಿದ್ದ ಬೆಳೂಲ ಕಟ್ಟವ ಎಳಕ್ಕೊಂಡು ಬಂದು ಅವರ ಮಧ್ಯಲ್ಲಿ ಮಡಗಿದೊವು. ರಜ ಹೊತ್ತು ಇಬ್ರೂ ಅತ್ತೂ ಇತ್ತೂ ಮೋರೆ ಮಸಕ್ಕೊಂಡು ನೋಡಿಕ್ಕಿ, ಮತ್ತೆ ಹುಳಿ ಹುಳಿ ನೆಗೆ ಮಾಡೆಂಡು, ಅವರವರ ಪಾಡಿಂಗೆ ಹೋದೊವು ಹೇಳುವೊಂ.

ಆರೇ ಆದರೂ ಇಬ್ರೂ ಮಾತಿಲ್ಲಿ ಆಗಲೀ ಕೈಲಿ ಆಗಲೀ ಹೊಯಿಕ್ಕಯಿ ಮಾಡುವದಕ್ಕೆ “ರಚ್ಚೆಂದಲೂ ಬಿಡ,ಗೂಂಜಿಂದಲೂ ಬಿಡ” ಹೇಳ್ತವು. ಹೇಳಿರೆ, ಹಲಸಿನಕಾಯಿ ಕೊರವಗ ರಚ್ಚೆಂದಲೂ ಗೂಂಜಿಂದಲೂ ಸೊಳೆ ಬಿಟ್ಟು,ಎಳಕ್ಕಿ ಬಂದರೇ ಸೊಳೆ ಆಯಿತ್ತ ಮುಂದಾಣ ಕೆಲಸ ಅಕ್ಕಷ್ಟೆ. ಹಾಂಗೆ ರಚ್ಚೆಂದಲೂ ಗೂಂಜಿಂದಲೂ ಬಿಡದ್ದ ಸೊಳೆಯ ಆವಲೂ ಎಡಿಯ. ಕೆಲವು ಜೆನ ಚರ್ಚೆ ಮಾಡುವಗಳೂ ಅಷ್ಟೆ. ಆನು ಮೇಲು,ತಾನು ಮೇಲೂಳಿ ಪಟ್ಟು ಬಿಡದ್ದೆ, ಚರ್ಚೆ ಮಾಡುವಗಳೂ ಈ ಮಾತಿನ ಬಳಕೆ ಮಾಡುತ್ತವು.

—–೦—-

ವಿಜಯತ್ತೆ

   

You may also like...

19 Responses

  1. ನಿನಗೂ ಗೊಂತಾಯಿದಿಲ್ಲೆ ನ್ನೆ. ಆನು ಹೇದೆ ಅದು ಶಿವರಾಮ ನ ಮಗಳು ಹೇದು.

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *