“ಸುಟ್ಟವು ತಿಂದರೆ ಸಾಲದೊ, ಗುಳಿ ಎಣುಸೆಕ್ಕೊ?”-(ಹವ್ಯಕ ನುಡಿಗಟ್ಟು-96)

July 10, 2017 ರ 10:07 pmಗೆ ನಮ್ಮ ಬರದ್ದು, ಇದುವರೆಗೆ 19 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

“ಸುಟ್ಟವು ತಿಂದರೆ ಸಾಲದೊ,ಗುಳಿ ಎಣುಸೆಕ್ಕೊ?”-(ಹವ್ಯಕ ನುಡಿಗಟ್ಟು-96)

ಎನ್ನಪ್ಪᵒ ಹೇಳೆಂಡಿದ್ದ ಮಾತು ನೆಂಪಾವುತ್ತು. ಸೀರೆಯೋ,ಅಂಗಿ,ವೇಸ್ಟಿಯೋ ತಂದಪ್ಪಗ ಬಿಡುಸಿ ನೋಡಿಕ್ಕಿ ಎಂಗೊ “ಅದರ ಕ್ರಯ ಎಷ್ಟು?”ಕೇಳಿದರೆ..

“ಕ್ರಯ ಎಷ್ಟೊ, ಸುಟ್ಟವು ತಿಂದರೆ ಸಾಲದೊ  ನಿನ ಗುಳಿ ಎಣುಸುವ ಕೆಲಸ ಎಂತಕೆ!?”. ಕೇಳುಗಿದ.

ಹೀಂಗೊಂದಿನ ಎನ್ನ ದೋಸ್ತಿ ಒಂದು ಮದುವಗೆ ಹೋಪಲಿದ್ದೂಳಿ ಮಧ್ಯಾಹ್ನ ಹನ್ನೊಂದು ಗಂಟೆ ಅಪ್ಪಗಳೇ ಶಾಲೆಂದ ಹೋಗಿಕ್ಕಿ, ಎರಡು ಗಂಟೆಪ್ಪಗ ಬಂತು. ಮದುವೆ ಶುದ್ದಿ ಕೇಳಿದೆ. ಕೂಸಿನ ಕಡೆವು  ಸಂಬಂಧದೊವು” ಹೇಳಿಯಪ್ಪಗ,.  ಮದುವೆ ಗೌಜಿ, ವಿವರ ಎಲ್ಲಾ ಮಾತಾಡಿಯಪ್ಪಗ  ,”ಮಾಣಿ ಎಲ್ಯಾಣವᵒ” ಕೇಳಿದೆ. “ಗೊಂತಿಲ್ಲೆ, ಮದುವೆ ಊಟ ಉಂಡಿಕ್ಕಿ ಬಂದೆ ಬೇರೆ ವಿವರ ಗೊಂತಿಲ್ಲೆ” ಹೇಳಿತ್ತು. ಅಷ್ಟಪ್ಪಗ ಎನ ನೆಂಪಾತು “ಸುಟ್ಟವು ತಿಂದಾತು. ಗುಳಿ ಎಣುಸಿದ್ದಿಲ್ಲೆ ಅಲ್ಲೊ?”.

ಅಪ್ಪು,ಅಪ್ಪು ಹೇಳೆಂಡು ನೆಗೆ ಮಾಡಿತ್ತು.

ಗೆಣವತಿ ದೇವರ ನೈವೇದ್ಯಕ್ಕೆ  ಮದಾಲು ಸುಟ್ಟವು  ನೆಂಪಕ್ಕಿದ. ಹಾಂಗೇ ಹವ್ಯಕರಲ್ಲಿ  ಈ ಗಾದೆ ತುಂಬಾ ಚಾಲ್ತಿಲಿಪ್ಪದು.

ಮಾತು ಹೇಳೆಕ್ಕಾದ, ಅಥವಾ ವಿವರ ಅರಡಿಯದ್ರೆ, ಅಗತ್ಯ ಇಲ್ಲೇಳಿ ಆದರೆ “ನಿನ ಸುಟ್ಟವು ತಿಂದರೆ ಸಾಲದೋ ಗುಳಿ ಎಣುಸೆಕ್ಕೋ ಕೇಳುಗಿದ ಮದಲಾಣವು.

——-೦——

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 19 ಒಪ್ಪಂಗೊ

 1. ಗೋಪಾಲಣ್ಣ
  S.K.Gopalakrishna Bhat

  ನುಡಿಗಟ್ಟುಗೊ ತುಂಬಾ ಇದ್ದು..ನೆನಪಾವುತ್ತ ಹಂಗೆ ಬರೆಯಿರಿ ಚಿಕ್ಕಮ್ಮ.ನಮ್ಮ ಮಾತಿಲಿ ಈಗ ಗಾದೆಗೋ ಕಮ್ಮಿ ಆಯಿದು.

  [Reply]

  ವಿಜಯತ್ತೆ

  ವಿಜಯತ್ತೆ Reply:

  ಹಾಂಗೆ ಮಾಡ್ತೆ ಗೋಪಾಲ .

  [Reply]

  pattaje shivarama bhat Reply:

  ಈ ಗಾದೆಯ ವಿಬಿ bhavayya ಇಂದ್ರಾಣ ಸುದ್ದಿಯ ಚಿಂತನ ಗಾಥಲ್ಲಿ ಹಾಕಿದ್ದವು.

  [Reply]

  ವಿಜಯತ್ತೆ

  ವಿಜಯತ್ತೆ Reply:

  ಎಲ್ಲಿ ಶಿವರಾಮಣ್ಣ?. ಚಿಂತನ ಗಾಥ ಏವದಲ್ಲಿ?. ಅವರ ನಿರೂಪಣೆ ಹೇಂಗೆ?

  VN:F [1.9.22_1171]
  Rating: 0 (from 0 votes)
 2. ಶರ್ಮಪ್ಪಚ್ಚಿ
  ಶರ್ಮಪ್ಪಚ್ಚಿ

  ಈ ನುಡಿಗಟ್ಟು ಕೇಳಿ ಗೊಂತಿಲ್ಲೆ.
  ತಿಳುಶಿದ್ದಕ್ಕೆ ಧನ್ಯವಾದಂಗೊ ವಿಜಯತ್ತಿಗೆಗೆ.
  ಹಾಲು ತಪ್ಪಲೆ ಹೋದವಂಗೆ ಎಮ್ಮೆಯ ಕ್ರಯ ಎಂತಗೆ ಹೇಳ್ತ ಅರ್ಥಲ್ಲಿ ಕನ್ನಡಲ್ಲಿ ಒಂದು ಗಾದೆ ಕೇಳಿದ್ದೆ.

  [Reply]

  VA:F [1.9.22_1171]
  Rating: 0 (from 0 votes)
 3. pattaje shivarama bhat

  ಇಂದ್ರನ ಪುತ್ತೂರು ಸುದ್ದಿ ಪೇಪರಿನ ೨ನೆ ಪುಟ;ಲ್ಲಿ ಇದ್ದು ವಿಜಯಕ್ಕ.

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಶಾ...ರೀಕೆದೂರು ಡಾಕ್ಟ್ರುಬಾವ°ಅನುಶ್ರೀ ಬಂಡಾಡಿಅಜ್ಜಕಾನ ಭಾವಮುಳಿಯ ಭಾವದೊಡ್ಮನೆ ಭಾವಡೈಮಂಡು ಭಾವಬೊಳುಂಬು ಮಾವ°ಶ್ರೀಅಕ್ಕ°ಉಡುಪುಮೂಲೆ ಅಪ್ಪಚ್ಚಿಬಂಡಾಡಿ ಅಜ್ಜಿಚುಬ್ಬಣ್ಣನೆಗೆಗಾರ°ಪವನಜಮಾವಅಕ್ಷರ°ಬಟ್ಟಮಾವ°ಕೇಜಿಮಾವ°ದೊಡ್ಡಮಾವ°ಜಯಗೌರಿ ಅಕ್ಕ°ಶ್ಯಾಮಣ್ಣಡಾಗುಟ್ರಕ್ಕ°ಚೆನ್ನಬೆಟ್ಟಣ್ಣಕಜೆವಸಂತ°ಯೇನಂಕೂಡ್ಳು ಅಣ್ಣಎರುಂಬು ಅಪ್ಪಚ್ಚಿಅಡ್ಕತ್ತಿಮಾರುಮಾವ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ