“ಹೆರಿಯಕ್ಕನ ಚಾಳಿ ಮನೆಮಕ್ಕೊಗೆಲ್ಲ”-{ಹವ್ಯಕ ನುಡಿಗಟ್ಟು-22}

“ಹೆರಿಯಕ್ಕನ ಚಾಳಿ ಮನೆ ಮಕ್ಕೊಗೆಲ್ಲ” –{ಹವ್ಯಕ ನುಡಿಗಟ್ಟು-22}
ನೆಂಟ್ರ ಪೈಕಿ ಒಂದು ಜೆಂಬಾರಕ್ಕೆ ಹೋಗಿತ್ತಿದ್ದೆ.ಊಟದ ಸಮಯಕ್ಕಪ್ಪಗ ಎನ್ನತ್ರೆ, ಸುರುವಾಣ ಹಂತಿಗೆ ಉಂಬಲೆ ಕೂಬ್ಬಲೆ ಹೇಳಿದೊವು. ಹಾಂಗಿಪ್ಪಗ ಎರಡ್ನೇ ಹಂತಿಗೆ ಬಡುಸಲೇ ಬೇಕನ್ನೆ!. ಮತ್ತಾಣ ಹಂತಿಗೆ, ಕೊಟ್ಟ ಮಗಳಕ್ಕೊ, ಮನೆವು ಕೂಬ್ಬದಲ್ಲೋ. ಹಾಂಗೆ ಮಗಳಕ್ಕೊ ಅಪರೂಪಕ್ಕೆ ಬಪ್ಪಾಗ ಒಟ್ಟಿಂಗೆ ಸೇರಿ ಪಂಚಾಯಿತಿಗೆ, ಇದೆಲ್ಲ ಎಲ್ಲಾ ಕಡೆಲಿಯೂ ಇಪ್ಪದು.ಆದರೆ ಈಗೀಗಾಣವಕ್ಕೆ ಅಕ್ಕ-ತಂಗೆಕ್ಕೊ ಒಟ್ಟು ಸೇರುಸ್ಸು ಎಲ್ಲಿಂದ? ಇಪ್ಪದು ಒಂದೇ ಒಂದು ಮದ್ದಿನ ಕೊಂಬು!!.ಅದಿರಳಿ. ಈಗ ಬಡುಸಲೆ ಸೇರಿದ ಆನು; ತುಪ್ಪದ ಕುಞ್ಞಿ ಬರಣಿ, ಹಿಡ್ಕೊಂಡು ಬಂದು ಹಂತಿ ತಲೇಂದ ಸುರುಮಾಡಿದೆಯಿದ.ತಲೇಲಿ ಕೂದ ದೊಡ್ಡ ಅಕ್ಕಂದ ಹಿಡುದು ಹಂತಿ ಕೊಡೀಲಿದ್ದ ತಮ್ಮನವರೆಗೆ ಆರಿಂಗು ತುಪ್ಪ ಬೇಡ!. ಮದಲಾಣವಕ್ಕೆಲ್ಲ ಎಂಟು-ಹತ್ತು ಮಕ್ಕೊಯಿದ!. ಮದ್ದಿನ ಕೊಂಬು ಮಕ್ಕಳಲ್ಲಿ ಅಕೇರಿಯಾಣ ತೋರ್ಸಲಿಲ್ಲೆ!! ಬೇಕಾರೆ, ಮಣ್ಣ ಅಡಿಂದ ಗರ್ಪಿಗೊಳುಸ್ಸು!!!. ಅರೇ..! ನಿಂಗೊಗೆ ಆರಿಂಗೂ ತುಪ್ಪ ಬೇಡ್ದೋ!? ಕೇಟಪ್ಪಗ ಒಂದು ತಂಗೆ,ಒಪ್ಪಕ್ಕ ಹೇಳಿತ್ತು; “ವಿಜಯಕ್ಕ.., ಹೆರಿಯಕ್ಕನ ಚಾಳಿ ಮನೆ ಮಕ್ಕೊಗೆಲ್ಲ ಹೇಳಿ ಒಂದು ಮಾತಿದ್ದನ್ನೆ..! ಹಾಂಗೆ ಎಂಗೊಗೆಲ್ಲ ದೊಡ್ಡಕ್ಕನ ಚಾಳಿ!” . ಹೇಳಿಯಪ್ಪಗ ಮತ್ತೊಂದು ಪುಟ್ಟಕ್ಕ “ಎಂಗೊ ಸಣ್ಣದಿಪ್ಪಗ ಎಂಗಳ ಅಬ್ಬಗೆ; ವರ್ಷ,ವರ್ಷ ಬಾಳಂತನ!. ಎಂಗಳ ಚಾಕ್ರಿ..,ಮೀಶುದು,ಬಡುಸುದು, ತಲೆಕಟ್ಟುದು ,ಶಾಲಗೆ ಹೆರಡುಸುದು,ಇದೆಲ್ಲ ದೊಡ್ಡಕ್ಕನೆ ಮಾಡುವದಿದ!.ಹಾಂಗೆ ಅದೆಂಗೊಗೆ ಅಬ್ಬಗೆ ಸಮ.ಅದು ಹೇಳಿದ್ದದು,ವೇದವಾಕ್ಯ. ಅದು ಮಾಡಿದ್ದದು ಆದರ್ಶ!”.ಹೇಳಿಯಪ್ಪಗ ಅಲ್ಲಿದ್ದ ದೊಡ್ಡಕ್ಕನ ತಮ್ಮಂದ್ರು.., “ಎಂಗೊ ಶಾಲೆ ಬಿಟ್ಟು ಬಂದಪ್ಪಗ ಕಾಫಿ,ತಿಂಡಿ ಕೊಡುದು,ಅಂಗಿತೊಳದಾಕುದು, ಪಾಠ ಅರಡಿಯದ್ರೆ ಹೇಳಿ ಕೊಡುದು, ಒಟ್ಟಾರೆ ಅಬ್ಬೆ ಮಾಡುವ ಅದೆಷ್ಟೋ ಕೆಲಸಂಗಳ ದೊಡ್ಡಕ್ಕನೇ ಮಾಡುಗಿದ.ಹಾಂಗಾಗಿ ಹೆರಿಯಕ್ಕನತ್ರೆ ಒಂದು ತೂಕ ಹೆಚ್ಚಿಗೆ ಪ್ರೀತಿ, ಗೌರವ ಎಂಗೊಗೆ!ಅದರಿಂದಾಗಿ ತನ್ನಿಂತಾನೆ ಅದರ ಎಲ್ಲ ಸ್ವಭಾವದೊಟ್ಟಿಂಗೆ; ಬಾಯಿ ರುಚಿಯೂ ಹೆಚ್ಚಿಗೆ-ಕಮ್ಮಿ ಹಾಂಗೇ ಅಭ್ಯಾಸ ಆತು”. ಹೇಳಿ ಮೇಲ್ಮೆಲಿ ಹೇಳಿಯಪ್ಪಗ ಮತ್ತಿದ್ದವೆಲ್ಲ ಆ ಮಾತಿಂಗೆ ತಾಳ ಹಾಕಿದೊವು.
ಸಾದಾರಣ ಮದಲಾಣ ಕೂಡು ಕುಟುಂಬಲ್ಲಿ , ಎಲ್ಲೋರ ಮನಗಳಲ್ಲೂ ಹೀಂಗೆಯಿದ!. ದೊಡ್ಡ ಕೂಸಿಂಗೆ; ಅಬ್ಬಗೆ ಸಕಾಯ ಹೇದೊಂಡು, ಮನೆಕೆಲಸಂಗಳೆಲ್ಲ ಸಣ್ಣದಿಪ್ಪಗಳೇ ಕಲುಶುಗಿದ!.ಅದರಿಂದಾಗಿ ಮನೆಲಿದ್ದ ಹೆರಿಮಗಳು ಎಲ್ಲದಲ್ಲೂ ಪಳಗಿದ ಕೂಸು!.
ಮನೆ ಹೆರಿಯವರ ಅಭ್ಯಾಸವ ಕಿರಿಯೊವು ಅನುಸರ್ಸಿರೆ, ಲೀಡರುಗೊ ಮಾಡಿದ ಹಾಂಗೆ ಸಾಮಾನ್ಯರೂ ಮಾಡಿರೆ, ಈ ನುಡಿಗಟ್ಟಿನ ಹೇಳ್ತವು. ಹಾಂಗೇ ಕೆಲವು ಸರ್ತಿ ವ್ಯಂಗ್ಯೋಕ್ತಿಲಿಯೂ ಇದರ ಬಳಸುತ್ತೊವು.

ವಿಜಯತ್ತೆ

   

You may also like...

8 Responses

 1. N. S. Keshava Prakash says:

  ಈಗ ಹಿರಿಯಕ್ಕನು ಕಿರಿಯಕ್ಕನು ಎಲ್ಲ ಒಬ್ಬನೇ ಆದಿಕ್ಕೂ. ಕಾಲಾಯ ತಸ್ಮೈ ನಮ:! ಆದರೆ ಯದ್ಯದಾಚರತಿ ಶ್ರೇಷ್ಟ: ತತ್ ಆದೇವ ಇತರೋ ಜನ:! ಮದಲಣವಕ್ಕೆ ಹಿರಿಯಕ್ಕನೇ ಶ್ರೇಷ್ಟ:! ಒಳ್ಳೆದಿದ್ದು.

  • Halemane Muralikrishna says:

   ಅಂಬಗ ಬಯ್ಲಿಂಗೆ ಹಿರಿಯಕ್ಕ ಹೇಳಿ ತಿಳ್ಕೊಳ್ಳಿ ! 🙂

 2. Halemane Muralikrishna says:

  ನುಡಿಗಟ್ಟಿನ ವಿವರಣೆ ಲೈಕ ಆಯಿದು.

 3. Shashiprabha R Karnik says:

  ನುಡಿಗಟ್ಟು ಲಾಯಕ ಆಯಿದು

 4. ಹರೇರಾಮ, ಮುರಲಿ.., ಬಯಲಿಲ್ಲಿ ಹಿರಿಯಕ್ಕ ಹೇಳಿ ತಿಳುಕ್ಕೊಳ್ತಕ್ಕೆ ಅಡ್ಡಿ ಇಲ್ಲೆ. ಸಮಷ್ಟಿಲಿ ಒಳ್ಳೆದು ಹೇಳ್ತರ ಅನುಕರಣೆ ಮಾಡಿ!!. ಒಪ್ಪಕೊಟ್ಟ ಎಲ್ಲೋರಿಂಗು ಧನ್ಯವಾದಂಗೊ

 5. GOPALANNA says:

  ಲಾಯಕ ಆಯಿದು ಚಿಕ್ಕಮ್ಮ

 6. ಹರೇರಾಮ,ಗೊಪಾಲಂಗೆ ಧನ್ಯವಾದ. ತುಂಬ ದಿನಆತನ್ನೆ ಬಯಲಿಲ್ಲಿ ಕಾಣದ್ದೆ!

 7. S K G K Bhat says:

  ಆನು ಕಚೇರಿಯ ವಿಷಯ ತರಬೇತಿಗೆ ಬೈಲು ಬಿಟ್ಟು ಘಟ್ಟ ಹತ್ತಿದೆ ಎರಡು ವಾರ. ಅದೇ ಕಾರಣ ಎನ್ನ ಕಂಡಿದಿಲ್ಲೆ.

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *