“ಹೇಳೆಕ್ಕಾದವೇ ಹೇಳಿರೆ, ಅದಕ್ಕೊಂದು ತೂಕ”–{ಹವ್ಯಕ ನುಡಿಗಟ್ಟು-18}

“ಹೇಳೆಕ್ಕಾದವೇ ಹೇಳೀರೆ, ಅದಕ್ಕೊಂದು ತೂಕ”—[ಹವ್ಯಕ ನುಡಿಗಟ್ಟು-18]

ಎಂಗೊ ಸಣ್ಣದಿಪ್ಪಗ ಅಜ್ಜನತ್ರೆ  ಎಷ್ಟು ಪ್ರೀತಿಯೊ ಅಷ್ಟೇ ಹೆದರಿಕೆ  ಇಕ್ಕು..ಅವು ಎಂತಾರು ಸಣ್ಣ-ಪುಟ್ಟ ಕೆಲಸ ಹೇಳಿರೆ, ಬೇಗ ಮಾಡುವಿಯೊಂ.ಆದರೆ ಅಜ್ಜಿಯೋ ಅಬ್ಬೆಯೋ  ದೆನಿಗೇಳಿರೆ; ಆತು..,ಬತ್ತೆ..ಬತ್ತೆ.. ಹೇಳೆಂಡು ಬತ್ತ ಕುಟ್ಟುಸ್ಸೇ ಉಳ್ಳೊ!. ಅಷ್ಟಪ್ಪಗ ಅಜ್ಜಿ , ಪುಳ್ಳಿಯಕ್ಕಳ ಉದಾಸನಕ್ಕೆ ಪರಂಚೆಂಡು;  ಅಜ್ಜನತ್ರೆ  ಹೇಳ್ಸಿ ಎಂಗಳತ್ರೆ ಮಾಡ್ಸುವದೂ ಇಕ್ಕು!!. ಕೆಲವು ಮನಗಳಲ್ಲಿ ಅಬ್ಬೆಯ ಮಾತಿಂಗೆ ಗಣ್ಯ ಇಲ್ಲೆ. ಅಪ್ಪ ಹೇಳಿರೆ; ಬೇಗ ಬೆನ್ನು ಬಗ್ಗಿಯೊಂಡು ಬಕ್ಕು. ಹಾಂಗೇ ಅಪ್ಪನತ್ರೆ ಮಕ್ಕೊಗೆ ಕೆಲಸ ಆಯೆಕ್ಕಾರೆ, ಅಬ್ಬೆಯ ಮೂಲಕ ಹೇಳ್ಸುಗಿದ. ಉದಾಃಶಾಲೆಯ ಫೀಸಿಂಗೆ, ಡ್ರೆಸ್ಸ್ ತೆಗವಲೆ,ಹೀಂಗಿದ್ದಕ್ಕೆ. ಆದರೆ ಈಗೀಗ  ಈ ಮಾತಿಂಗೆ ಅಪವಾದವೂ ಇದ್ದು ಹೇಳುವೊಂ. ಮಕ್ಕಳ ಬಾಯಿಂದ ಬೀಳುವ ಮೊದಲೇ ಕಾಲಬುಡಕ್ಕೆ ಬಂದು ಬೀಳುಗು!.ಎಂತಕೆ? ಕೇಳೀರೆ;ಇಪ್ಪದು  ಮದ್ದಿನಕೊಂಬಿನಹಾಂಗೆ ಒಂದೇ ಕುಞ್ಞ್!!

ಕೃಷಿಕೆಲಸ ಮಾಡ್ಸುವಾಗ, ಆಳುಗೊಕ್ಕೆ ಎಜಮಾನನೋ ಎಜಮಾನ್ತಿಯೋ ಹೇಳೆಕ್ಕು.ಅದುಬಿಟ್ಟು ಮನೆಯ ಇನ್ನೊಳುದ ಸದಸ್ಯರು ಹೇಳೀರೆ ಅವಕ್ಕೆ ಗಣ್ಯವೇ ಇಲ್ಲೆ.ಹಾಂಗೇ ಒಂದು ಆಫೀಸಿಲ್ಲಿ, ಒಂದು ಸಂಘ-ಸಂಸ್ಥೆಲಿ, ಒಂದು ಮಂಡಳಿಲಿ,ಅಲ್ಲಿಯ ಕೆಲಸಗಾರರಿಂಗೆ ಅಲ್ಲಿಯ ಅಧಿಕಾರಿ[ಭಾಸ್] ಹೇಳಿದಮಾತಿಂಗೆ ಪರಿಣಾಮ ಹೆಚ್ಚು.ನಮ್ಮ ಮನೆ, ಕೃಷಿಗೆ ಸಂಬಂಧ ಪಟ್ಟಹಾಂಗೆ ನವಗೊಂದು ಪಂಚಾಯತಾಫೀಸಿಲ್ಲಿಯೊ,ಗ್ರಾಮಸಭೆಲಿಯೋ ತಾಲೂಕುಕಚೇರಿಲಿಯೋ ಹೀಂಗೆ ಸರಕಾರಿ ಕಚೇರಿಲಿ ಕೆಲಸ ಆಯೆಕ್ಕಾರೆ  ಅಲ್ಲಿ ಶಿಫಾರಸು ಮಾಡ್ಳೆ ಜೆನ ಹಿಡುದು ಮಾಡೆಕ್ಕಾವುತ್ತು.ನಾವೊಂದು ಮನೆಕಟ್ಟೆಕ್ಕಾದರೆ  ಇಂಜಿನಿಯರತ್ರೆ ಅದರ ಸ್ಕೆಚ್ ಮಾಡ್ಸಿ  ಅವನ ಶಿಫಾರ್ಸ್ ಬೇಕಿದ!. ನಮ್ಮ ಜೋಯಿಶಪ್ಪಚ್ಚಿ ಹಾಕಿಕೊಟ್ಟ  ’ಆಯ’ದ  ಪ್ರಕಾರ; ಮನೆಲೋನಿಂಗೆ ಅನುಮತಿ ಸಿಕ್ಕನ್ನೆ!!.

ಅದೆಲ್ಲ ಹೋಗಲಿ,ಶಾಲಗೆಹೋವುತ್ತ ಮಕ್ಕೊಗೆ ಶಾಲೆಯ ಟೀಚರುಗೊ ಹೇಳಿರೆ ಅದಕ್ಕೆ ಬೆಲೆಹೆಚ್ಚು!. ಅದರಲ್ಲೂ ಹೆಡ್ ಮಾಸ್ಟ್ರು ಹೇಳಿರೆ ಹೆದರಿಕೆ ಹೆಚ್ಚು,ಹಾಂಗಾಗಿ ಅವು ಹೇಳಿದ ಮಾತಿಂಗೆ ತೂಕವೂ ಹೆಚ್ಚು!. ಇದೆಲ್ಲ ಬರವಗ.. ಎನ್ನ ಅಪ್ಪ ಹೇಳಿಂಡಿತ್ತಿದ್ದ ಮಲೆಯಾಳದ ಮಾತು ನೆಂಪಾವುತ್ತು. “ಆಟ್ ನ್ನೋರ್  ಆಟೊಣೊ, ನೆಯಿನ್ನೋರ್ ನೆಯ್ಯೊಣೊ”.  ಅಪ್ಪು  ಹೇಳೆಕ್ಕಾದೊವು ಹೇಳೆಕ್ಕು, ಮಾಡೆಕ್ಕಾದೊವು ಮಾಡೆಕ್ಕು.

ನಿಂಗೊ ಎಂತ ಹೇಳ್ತಿ?. ಓದಿ ಅಭಿಪ್ರಾಯವಾದರೂ ಬರೆಯಿ.

ವಿಜಯತ್ತೆ

   

You may also like...

4 Responses

 1. ಭಾಗ್ಯಲಕ್ಷ್ಮಿ says:

  ವಿಜಯತ್ತೆ ,
  ನುಡಿಗಟ್ಟುದೆ ನಿಂಗೊ ಕೊಟ್ಟ (ಜೋಯಿಷಪ್ಪಚ್ಚಿ ಮತ್ತು ಇಂಜಿನಿಯರ )ಉದಾಹರಣೆ ಭಾರೀ ಲಾಯಿಕಿದ್ದು. ನಿಂಗಳ, ಪ್ರಾಯದ ಅನುಭವದೊಟ್ಟಿಂಗೆ ಕೂಡಿದ ಲೋಕಾನುಭವವ ಸೇರುಸಿ ಬರವ ನಿಂಗಳ ಶೈಲಿ ವಿಚಾರ ಪ್ರಚೋದಕ ಆಗಿದ್ದುಗೊಂಡು ಎನಗಂತೂ ಓದುಲೆ ಕೊಶಿ ಆವುತ್ತು. ”ಶಂಖ೦ದ ಬಿದ್ದರೇ ತೀರ್ಥ” ಹೇಳುದು ಇದೇ ಅರ್ಥ ಕೊಡುತ್ತಲ್ಲದಾ ?

 2. Keshava Prakash. N. S. says:

  ವೆರಿ ಗುಡ್ ಬರೆತ್ತವು ಬರದರೆ ಅದಕ್ಕೆ ಚೆಂದ ಯದ್ಯದಾಚರತಿ ಶ್ರೇಸ್ಟಹ್ ತತ್ತದೆವೆತರೋ ಜನಃ, ಸಹ ಯತ್ ಪ್ರಮಾಣ್ಂ ಕುರುತೇ ಲೋಕಃ ತದನುವರ್ಥಥೆ, ಬರಹ ನಿಜವಾಗಿಯೂ ಒಳ್ಳೆದಿದ್ದು

 3. ರಘು ಮುಳಿಯ says:

  ಅರ್ಥಪೂರ್ಣ ನುಡಿಗಟ್ಟು.ನಮ್ಮ ದಿನನಿತ್ಯದ ಬದುಕಿಲಿ ಇದು ಅನುಭವವೂ ಆವುತ್ತು.

  ಧನ್ಯವಾದ ಅತ್ತೆ.

 4. ಒಪ್ಪಕೊಟ್ಟ ಭಾಗ್ಯಲಕ್ಷ್ಮಿಗೆ , ಕೇಶವಪ್ರಕಾಶಂಗೆ ,ಮುಳಿಯ ರಘುವಿಂಗೆ ಪ್ರೀತಿಪೂರ್ವಕ ಧನ್ಯವಾದಂಗೊ

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *