“ಹೊದಕ್ಕೆ ಇದ್ದಷ್ಟೇ ಕಾಲು ನೀಡೆಕ್ಕು”-(ಹವ್ಯಕ ನುಡಿಗಟ್ಟು-95)

“ಹೊದಕ್ಕೆ ಇದ್ದಷ್ಟೇ ಕಾಲು ನೀಡೆಕ್ಕು”-(ಹವ್ಯಕ ನುಡಿಗಟ್ಟು-95)

“ಆಚಕರೆ ಈಚಣ್ಣ ಭಾವ ಜಾಗೆ ಮಾರಿಕ್ಕಿ ಹೋದನಡ” ಒಂದಿನ ಆಚಮನೆ ಕಿಟ್ಟಮಾವ ಬಂದು ಅಪ್ಪನತ್ರೆ ಹೇಳಿದೊವು. ಅಷ್ಟಪ್ಪಗ ಅವನತ್ರೆ  ಅಪ್ಪ “ಆನು ಅಂದಿಂದಲೇ ಹೇಳಿದ್ದಿಲ್ಲಿಯೊ  ಹೀಂಗೆ ಸಿಕ್ಕಾಬಟ್ಟೆ ,ಧಾರಾಧೂರಿ ಆದರೆ ಅವ ಒಂದಿನ ಬೆಳ್ಳಕ್ಕೆ ಹೋಪಲಿದ್ದೂಳಿ.  ’ಹೊದಕ್ಕೆ ಇದ್ದಷ್ಟೇ ಕಾಲು ನೀಡೆಕ್ಕು’ ಹೇಳಿ ಮದಲಾಣವು ಸುಮ್ಮನೆ ಹೇಳಿದ್ದೊವಿಲ್ಲೆ!”. ಅಪ್ಪ ಹೇಳುವಗ “ಅದೆಲ್ಲ ಅವವು ಅರಡಿಯೆಕ್ಕಲ್ಲೊ ಭಾವ , ಇಲ್ಲದ್ರೆ, ಹೇಳುತ್ತವೇ ಹೇಳೆಕ್ಕು”.

ಆಚಮನೆ ಮಾವ ಹೋದ ಮತ್ತೆ  ಅಪ್ಪನತ್ರೆ ಆನುಕೇಳಿದೆ.  “ಎಂತಕೆ ಅಪ್ಪ, ಹೊದಕ್ಕೆ ಇದ್ದಷ್ಟೇ ಕಾಲು ನೀಡೆಕ್ಕು    

ಹೇಳುದು  ಜಾಗೆ ಮಾರುವವಕ್ಕೆ!?”.

ಅದುವೋ  ನಿನಗೀಗ  ಮನುಗುವಗ ನಿನ್ನ ಶರೀರ ಇಡೀ  ಮುಚ್ಚುವಾಂಗಿಪ್ಪ ಹೊದಕ್ಕೆ ಆದರೆ ಸುಖಲ್ಲಿ ಒರಗುತ್ತೆ.     ಒಂದುವೇಳೆ ನಿನಗೆ ಸಿಕ್ಕಿದ ಹೊದಕ್ಕೆ ಸಣ್ಣದಾದರೆ; ಅದಲ್ಲಿ ಚುರುಟಿ ಮನುಗೆಕ್ಕು.ಅಥವಾ ನೀನು ಕಾಲು ನೀಡಿದರೆ,ಚಳಿ     ಅನುಭವಿಸಲೆಡಿಯದ್ದೆ, ಬಙ್ಙ್ ಬರೆಕಾವುತ್ತು.ಏವಗಳೂ ಚಳಿ ನಿಲ್ಲೇಕಾರೆ; ಕಾಲು ಮುಚ್ಚೆಕ್ಕು.  ಹಾಂಗಾಗಿ ಅದಲ್ಲೇ    ಚುರುಟಿ ಮನುಗೀರೆ ಲೇಸು.

ಇದಲ್ಲಿ ವಿವರುಸಿ ಹೇಳುತ್ತರೆ; ಅವು ಕೈಲಿ ಇದ್ದಷ್ಟೇ ಪೈಸವ ಖರ್ಚು ಮಾಡೆಂಡು ಇದ್ದಿದ್ರೆ ಈಗ ಜಾಗೆ ಮಾರೆಕ್ಕಾಗಿ    ಬತ್ತಿತಿಲ್ಲೆ.  ಸಾಲ ತೀರ್ಸಲೆಡಿಯದ್ದೆ ಜಾಗೆ ಮಾರಿದೊವು.ಹೊದಕ್ಕೆ ಸಣ್ಣಾದರೆ ಕಾಲು ನೀಡಿರೆ, ಚಳಿ ಸಹಿಸಲೆಡಿಯದ್ದೆ  ಹೇಂಗೆ ಕುಟುಕೆಂಡು ಇರೆಕಾವುತ್ತೋ ಹಾಂಗೇ  ಸಾಲ ಮಾಡಿತ್ಕಂಡ್ರೆ ಸಾಲಕೊಟ್ಟೊವು ಕೇಳುವಗ ಮೈ ಕೈ ಕುಟುಕುಗು.  ಹಾಂಗಾಗಿ ಹೊದಕ್ಕೆ ಇದ್ದಷ್ಟೇ ಕಾಲು ನೀಡೆಕ್ಕು ಹೇಳಿ ಮದಲಾಣೊವು ಹೇಳುಗು. (ಇಲ್ಲಿ ಹೊದಕ್ಕೆಯ ಬದುಕ್ಕಿಂಗೆ ಹೋಲುಸುವದು)

ನಿಂಗೊ  ಎಂತ      ಹೇಳ್ತಿ?

               —–೦—-

 

ವಿಜಯತ್ತೆ

   

You may also like...

9 Responses

 1. K.Narasimha Bhat Yethadka says:

  ಅಪ್ಪಪ್ಪು.”ಹಾಸಿಗೆ ಇದ್ದಷ್ಟೇ ಕಾಲು ಚಾಚು “ಹೇಳಿ ಕನ್ನಡಲ್ಲಿ ಹೇಳ್ತವಲ್ಲದೋ?ಒಂದು ಹೊಂಡ ತೋಡಿರೆ ಅದರ ಮುಚ್ಚಲೆ ಇನ್ನೊಂದುದೊಡ್ಡ ಹೊಂಡ ತೋಡೆಕ್ಕಾವುತ್ತು.

 2. ಗಾದೆ ಒಳ್ಳೆದಿದ್ದು ವಿಜಯಕ್ಕ. ಕೆಲವು ದಿನದ ಮತ್ತೆ ನಿನ್ನ ಗಾದೆಯ ಓದುವ ಸೌಭಾಗ್ಯ ಎಂಗೊಗೆ ಬಂತು ಹೇದು ಹೇಳುಲಕ್ಕು ವಿಜಯಕ್ಕ. ನಿನಗೆ ಧನ್ಯವಾದಗಳು. ನಿನ್ನ ಇಂಟರ್ನೆಟ್ ಸದಾ ಸರಿಯಾಗಿರಲಿ ಹೇದು ಆಶಿಸುತ್ತೆ.

 3. ಏತಡ್ಕ ನರಸಿಂಹಣ್ಣಂಗೂ ಪಟ್ಟಾಜೆ ಶಂಕರಣ್ಣಂಗೂ ಧನ್ಯವಾದಂಗೊ. ಶಂಕರಣ್ಣಾ ನಿಂಗಳಾಂಗಿದ್ದ ಆತ್ಮೀಯ ಸೋದರರ ಸಂಖ್ಯೆ ಸಾವಿರವಾಗಲಿ, ಎಂದಾಶಿಸುತ್ತೆ..

 4. ಅಪ್ಪಪ್ಪು… ಆದರೆ ಈ ನುಡಿಗಟ್ಟು ನೆಂಪಪ್ಪಗೆಲ್ಲ ಎನ ಇನ್ನೊಂದು ನೆಂಪಾಗಿ ಹೋಪದಿದ್ದು…. ಏವುತ್ತೂ ಚುರುಟಿಯೊಂಡೇ ಇದ್ದರೆ ಮತ್ತೇವಾಗ ನಾವು ಕಾಲುನೀಡುಸ್ಸು ಅಕೇರಿಗೋ! ☺☺

 5. ಬೊಳುಂಬು ಗೋಪಾಲ says:

  ಒಳ್ಳೆ ನುಡಿಗಟ್ಟು ಅಕ್ಕ. ಈಗಾಣ ಕಾಲದವು ಸಾಲ ಮಾಡಿಯಾದರೂ ಗಮ್ಮತ್ತು ಮಾಡೆಕು ಹೇಳ್ತ ಜಾತಿಗೊ ಆಯಿದವು.

 6. S.K.Gopalakrishna Bhat says:

  ಒಳ್ಳೆ ಮಾತು

 7. ಶರ್ಮಪ್ಪಚ್ಚಿ says:

  ಒಳ್ಳೆ ನುಡಿಗಟ್ಟು.
  ಆದರೆ ಈಗ ಸಾಲ ಮಾಡಿ ಆದರೂ ತುಪ್ಪ ತಿನ್ನು ಹೇಳ್ತ ಕಾಲ.
  ಹಾಸಿಗೆ ಇದ್ದಷ್ಟೇ ಕಾಲು ಚಾಚು ಹೇಳ್ತ ಗಾದೆ ಕನ್ನಡಲ್ಲಿ ಇದ್ದು. ಹಾಸಿಗೆ ದೊಡ್ಡ ಮಾಡ್ಲೆ ಎಂತೆಲ್ಲ ಬೇಕೋ ಅದೆಲ್ಲಾ ಮಾಡ್ಲೆ ಪ್ರಯತ್ನ ಪಡುವವೇ ಹೆಚ್ಚು. ಅದಕ್ಕೆ ಸರಿಯಾಗಿ ಬ್ಯಾಂಕಿನವು, ಇತರ ಫೈನಾನ್ಶಿಯಲ್ ಕಂಪೆನಿಯವು ಮನೆಗೇ ಬಂದು ಸಾಲ ಕೊಡ್ತ ಕಾಲ ಕೂಡಾ

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *