Oppanna.com

“ಅಣ್ಣ ಆಸೆ ಬೆಳೆಶಿರೆ, ತಮ್ಮ ಮೀಸೆ ಬೆಳೆಶಿದ”-(ಹವ್ಯಕ ನುಡಿಗಟ್ಟು-71)

ಬರದೋರು :   ವಿಜಯತ್ತೆ    on   09/11/2016    4 ಒಪ್ಪಂಗೊ

“ಅಣ್ಣ ಆಸೆ ಬೆಳೆಶಿರೆ,ತಮ್ಮ ಮೀಸೆ ಬೆಳೆಶಿದ-(ಹವ್ಯಕ ನುಡಿಗಟ್ಟು-71)

ಮದಲಿಂಗೆ ನಮ್ಮ ಹವ್ಯಕರಿಂಗೆಲ್ಲ ಒಂದೊಂದು ದಂಪತಿಗೊಕ್ಕೆ ಎಂಟು,ಹತ್ತು ಮಕ್ಕೊ. ಐದಾರರಿಂದ ಕಮ್ಮಿ ಇಪ್ಪಲೇ ಇರ. ಅಂಬಗೆಲ್ಲ ಕುಟುಂಬ ನಿಯಂತ್ರಣಕ್ಕೆ ಹೊಲಮದ್ದುಗೊ ಹೇಳುಸ್ಸು ಕೇಳಿದ್ದೆ!. ಕುಟುಂಬ ಯೋಜನೆ ಮಾಡ್ಳಾಗಾಳಿ ಅವರಿಂದಲೂ ಹೆರಿಯವು ಹೇಳುಗಾಡ. ಈಗೀಗ ನಮ್ಮ ಶ್ರೀ ಗುರುಗೊ ಆಶೀರ್ವಚನಲ್ಲಿ ಎಷ್ಟೋ ಸರ್ತಿ ಅದನ್ನೇ ಪುನರಪಿ ಹೇಳಿ, ನಮ್ಮವಕ್ಕೆ ಭೋದುಸುತ್ತೊವು. ನಮ್ಮ ಜೆನಸಂಖ್ಯೆ ಒಂದ್ಕರ್ಧ, ಅರ್ಧಕ್ಕೆ ಕಾಲು, ಕಾಲಿಂಗರೆಕ್ಕಾಲು, ಆವುತ್ತಾ ಹೋಪದು ನಮ್ಮ ಗಮನಕ್ಕೆ ಬತ್ತು.  ಹಾಂಗಪ್ಪಲಾಗ ಹೇಳುತ್ತ ಮಾತು ಗುರುಗಳ ಚಿಂತನೆ. ಆದರೆ  ಆ ಮಾತು, ಆರು ಕೇಳುತ್ತᵒ!.”ಬೇರೆ ಏವದರ ಪಾಲುಸದ್ದ ಹವ್ಯಕರು ಕುಟುಂಬ ಯೋಜನೆಯ ಸರಿಯಾಗಿ ಪಾಲುಸುತ್ತೊವು”.ಹೇಳ್ತ ಹೇಳಿಕೆಯಿದ್ದು.

ಮದಲಿಂಗೆ ಒಂದು ತುಂಡು ತೋಟವು ಒಂದಿಷ್ಟು ಗೆದ್ದೆಯೂ ಇಕ್ಕಷ್ಟೆಯಿದ ನಮ್ಮವಕ್ಕೆ. ಕೂಡು ಕುಟುಂಬವ ಈ ಸಣ್ಣ ಉತ್ಪತ್ತಿಲಿ ಸಾಂಕೆಕ್ಕಾದ ಪರಿಸ್ಥಿತಿ ಮನೆ ಹಿರಿಯಂಗೆ!. ಇದರಿಂದಾಗಿ ಧಾರಾಳಿತನ ಮಾಡದ್ದೆ,  ತನ್ನಿಂತಾನೆ ’ಕೈ ಬಿಗಿ’ ಮಾಡಿ  ಕುಟುಂಬ ಸುಧಾರ್ಸಿಯೊಂಡು  ಹೋವುತ್ತದು ತನ್ನ ಕರ್ತವ್ಯ ಹೇದೊಂಡು ಪ್ರಾಮಾಣಿಕವಾಗಿರ್ತᵒ.  ಆದರೆ ಅವᵒ ಮಾಡಿದಾಂಗೆ ಅವನ ಮಗನ, ನಂತರದವ(ತಮ್ಮನೂ ಆಗಿಕ್ಕು)ನ ಬುದ್ದಿ  ಹಾಂಗಿಲ್ಲದ್ದೆ ; ಸಿಕ್ಕಾಬಟ್ಟೆ , ಹಿಂದು-ಮುಂದು ನೋಡದ್ದೆ, ಖರ್ಚು ಮಾಡುವವೂ  ಇಕ್ಕು. ಕೆಲವು ಜೆನಕ್ಕೆ ಇಸ್ಪೀಟು, ಜೂಜು ಆಡಿ ಪೈಸ ಕಳವ ಚಾಳಿ ಇಪ್ಪದಿದ್ದು.  ಒಟ್ಟಾರೆ ಸಾಲ-ಸೋಲ ಮಾಡಿ ಕುಟುಂಬವ ಸರಿಯಾಗಿ ನೋಡದ್ದೆ; ಒಳ ಗೋಳೆ ಆದರೂ ಆಢ್ಯತನ ತೋರ್ಸುವ  ಅಭ್ಯಾಸ ಇಕ್ಕಿದ.  ಹೆರಿಯೊವು  ಕೈ ಬಿಗಿ ಮಾಡಿ, ಒಳುಶಿ ಮರ್ಯಾದೆಲಿ ಕಳುದರೆ;  ಕಿರಿಯೊವು  ಇದಕ್ಕೆ  ತದ್ವಿರುದ್ಧ  ಮಾಡಿ  ಪೋಕಳದರೆ,  ’ಮೀಸೆ ಬೆಳೆಶಿದ’ ಹೇಳಿ ವ್ಯಂಗ  ಹೇಳುತ್ತೊವು.

4 thoughts on ““ಅಣ್ಣ ಆಸೆ ಬೆಳೆಶಿರೆ, ತಮ್ಮ ಮೀಸೆ ಬೆಳೆಶಿದ”-(ಹವ್ಯಕ ನುಡಿಗಟ್ಟು-71)

  1. ಅಕ್ಕು. ಆನು ಎನ್ನ ಲ್ಯಾಪ್ ಟಾಪಿಲ್ಲಿ ಡಾಕಿಮೆಂಟಿಲ್ಲಿ ಟೈಪ್ ಮಾಡಿಕ್ಕಿ (ವರ್ಡ್ 14ರಲ್ಲಿ ಟೈಪ್ ಮಾಡ್ತಿಪ್ಪದು, ಇನ್ನು 16ರಲ್ಲಿ ಮಾಡ್ತೆ ಅಂಬಗ) ಕಳುಸಿದಿದ.

  2. ಪೂರ್ತಿ ವಿವರ ಗೊಂತಾವುತ್ತಿಲ್ಲೆನ್ನೆ ಚಿಕ್ಕಮ್ಮ. ರಜ ದೊಡ್ಡಕೆ ಬರೆಯಿರಿ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×