Oppanna.com

“ಊದುವ ಶಂಖ ಊದಿದೆ”-{ಹವ್ಯಕ ನುಡಿಗಟ್ಟು-50}

ಬರದೋರು :   ವಿಜಯತ್ತೆ    on   15/03/2016    3 ಒಪ್ಪಂಗೊ

“ಊದುವ ಶಂಖ ಊದಿದೆ”-{ಹವ್ಯಕ ನುಡಿಗಟ್ಟು-50}

“ಶಂಖ ಊದುದು ನಮ್ಮ ಸಂಸ್ಕೃತಿಗಳಲ್ಲಿ ಒಂದು.ಶಂಖ ಊದುವದರಿಂದ ಬಪ್ಪ ಕಂಪನ; ಭೂಮಿಲಿಪ್ಪ ಅನೇಕ ಕೆಟ್ಟ ಶಕ್ತಿಗಳ ನಾಶಮಾಡುತ್ತು.ಪರಿಸರ ಮಾಲಿನ್ಯಂದಾಗಿ ಓಜೋನ್ ಪದರಲ್ಲಿ ಅಪ್ಪ ರಂಧ್ರವ ತಡೆತ್ತು,ಶಂಖನಾದಂದ ನಮ್ಮ ದೇಹಲ್ಲಿ ಸಕಾರಾತ್ಮಕ ಶಕ್ತಿ ಸಂಚಾರಾವುತ್ತು.ಹಾಂಗೇ ಅದರ ಊದುವವಕ್ಕೆ ಶ್ವಾಸಕೋಶ ಬಲಿಷ್ಟಆವುತ್ತು. ಅದೂ ಅಲ್ಲದ್ದೆ ಮಹಾವಿಷ್ಣುವಿನ ಕೈಲಿಯೂ ಶಂಖ ಇದ್ದು.ಇದೆಲ್ಲಾ ಇತ್ತೀಚಿನ ದಿನಲ್ಲಿ ಸಂಶೋಧನೆ ಮಾಡಿಗೊಂತಾದ್ದಡ”. ಇಷ್ಟೆಲ್ಲಾ ನಮ್ಮ ವಿದ್ಯಾಪೀಠಕ್ಕೋಪ ಕುಞ್ಞ್ ಮಾಣಿ ಶಾಲೆಂದ ಬಂದು ಅಜ್ಜನತ್ರೆ ಹೇಳಿಯಪ್ಪಗ ಅವನ ಅಜ್ಜಂ “ಸಂಶೋಧನೆಂದ ತಿಳುದು ಬಯಿಂದೂಳಿ ಇತ್ತೀಚೆಗೆ  ಕೆಲಾವು ಜವ್ವನಿಗರು ಹೇಳುದು ಕೇಳಿತ್ತು. ಇವಕ್ಕೆಲ್ಲಾ ಬೇರಾರೋ ಮಾಡಿದ ಸಂಶೋಧನೆಂದ ತಿಳುದೇ ಆಯೆಕ್ಕಟ್ಟೆ!ಮಿನಿಯ. ನಮ್ಮ ಹೆರಿಯೊವು   ಹೇಳಿದ್ದೊವು ಹೇಳಿರೆ,ಮೂಢನಂಬಿಕೆ ಹೇಳಿಂಡಿಕ್ಕು.ನಂಬಿಕೆ ಬಾರ!ಅದಾರೋ ವಿದೇಶಲ್ಲಿ ಕೂದೊಂಡು ಸಂಶೋಧನೆ ಮಾಡಿದ್ದೂಳಿರೆ ನಂಬುಗಷ್ಟೆ!”. ಅಜ್ಜನ ಅಸಮಾಧಾನ. ಅದು ನಿಜವೂ ಅಪ್ಪು.

ಶಂಖ ಧ್ವನಿಗೆ ಅದೆಷ್ಟೋ ಸಕಾರಾತ್ಮ  ಗುಣಂಗೊ ಇಪ್ಪದರಿಂದಲೇ  ಒಳ್ಳೆಮಾತು ಹೇಳುವಗ;ಹೆಚ್ಚಾಗಿ ಮಾಶ್ಟ್ರು ಕ್ಲಾಸಿಲ್ಲಿ ಪಾಠ ಮಾಡಿದ ಮೇಲೆ ಈ ಶಬ್ಧ ಉಪಯೋಗುಸುದು, ಆನುಸಣ್ಣದಿಪ್ಪಗ ಕೃಷ್ಣ ಮಾಶ್ಟ್ರು ಹೇಳಿ ಇದ್ದಿದ್ದೊವು. ಅವು ಪಾಠಮಾಡಿದ ಮತ್ತೆ ಹೆಚ್ಚಾಗಿ “ಊದುವ ಶಂಖ ಊದಿದೆ.ತೆಕ್ಕಳ್ಳೊದು,ಬಿಡುದು ನಿಮಗೆ ಬಿಟ್ಟಿದ್ದು” ಹೇಳುಗು..ಒಳ್ಳೆ ಮಾತು ಹೇಳಿಯಪ್ಪಗ ಅದರ ಕೇಳಿಗೊಳದ್ರೆ,ಆಚರಣೆ ಮಾಡದ್ರೆ, ಹೆರಿಯೊವು.., “ಊದುವ ಶಂಖ ಊದಿದೆ. ಅದರ ತೆಕ್ಕೊಂಬದು,ಬಿಡುದು ನಿಂಗೊಗೆ ಸೇರಿದ್ದು” ಹೇಳುಗಿದ.ಇನ್ನೊಂದು ’ತೀರ್ಥ ಶಂಖ’ ಹೇಳಿದ್ದು. ’ಶಂಖಂದ ಬಂದದೇ ತೀರ್ಥ’ ಹೇಳುಗಲ್ಲೊ?ಅದರ ಇನ್ನೊಂದಾರಿ ವಿಮರ್ಶೆ ಮಾಡುವನೋ?

 

3 thoughts on ““ಊದುವ ಶಂಖ ಊದಿದೆ”-{ಹವ್ಯಕ ನುಡಿಗಟ್ಟು-50}

  1. ನಮ್ಮ ಕರ್ತವ್ಯವ ನಾವು ಮಾಡುವದು. ಅದರಿಂದ ನವಗೆ ಆತ್ಮ ತೃಪ್ತಿ ಸಿಕ್ಕುತ್ತು. ಮುಂದಾಣದ್ದು ತೆಕ್ಕೊಂಬವಕ್ಕೆ ಬಿಟ್ಟದು.ಒಳ್ಳೆ ನುಡಿಗಟ್ಟಿನ ಪ್ರಸ್ತುತಿ ಲಾಯಕಾಯಿದು ವಿಜಯಕ್ಕ.

  2. ನುಡಿಗಟ್ಟು ಲಾಯಕಿದ್ದು. ಕ್ಲಾಸಿಲ್ಲಿ ಮಾಶ್ಟ್ರಕ್ಕೊ ಹೇಳೆಂಡಿದ್ದಿದ್ದು ನಿಜ. ಎಂಗಳ ಡುಂಡೀರಾಜನ ಪದ್ಯವುದೆ ನೆಂಪಾತು.
    ಅವಳ ಕಿವಿಯಲ್ಲಿ ನನ್ನ ಪ್ರೇಮ ಕವನವನ್ನು ಓದಿದೆ
    ಅದರಿಂದಾಗಿ ನನ್ನ ಬಲಗೆನ್ನೆ ಸ್ವಲ್ಪ ಊದಿದೆ !!

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×