Oppanna.com

“ಎಲಿ ಹೋದಲ್ಲಿ ಹುಲಿ ಹೋತು ಹೇಳಿದಾಂಗೆ”-{ಹವ್ಯಕ ನುಡಿಗಟ್ಟು-55}

ಬರದೋರು :   ವಿಜಯತ್ತೆ    on   22/05/2016    4 ಒಪ್ಪಂಗೊ

“ಎಲಿ ಹೋದಲ್ಲಿ ಹುಲಿ ಹೋತು ಹೇಳಿದಾಂಗೆ”-{ಹವ್ಯಕ ನುಡಿಗಟ್ಟು-55}

ನೆಂಟ್ರಲ್ಲಿ ಒಂದು ಮದುವಗೆ ಹೋಗಿ ಬಂದ ಮಾಣಿ ಅಜ್ಜನತ್ರೆ “ಮೂಲೆ ಮನೆ ಮಾಲಿಂಗಮಾವಂಗೆ ಏಕ್ಸಿಡೆಂಟ್ ಆಗಿ ಸೀರಿಯಸ್ ಆಡಜ್ಜಂ. ಬದುಕ್ಕುವದು ಕಷ್ಟಾಡ. ಕಾಸರಗೋಡಿಲ್ಲಿ ಆಗ ಹೇಳಿದ ಕಾರಣ ಮಂಗಳೂರಿಂಗೆ ಕರಕ್ಕೊಂಡು ಹೋಯಿದವಾಡ”. ಅಜ್ಜ ಶಂಬಣ್ಣಂಗೆ ಪುಳ್ಳಿಯ ಮಾತುಕೇಳಿ, ’ಒಳ್ಳೆ ಮನುಷ್ಯ ಎಂತಾತಪ್ಪ ಅವಂಗೆ!’ ಹೇಳಿ ದಿಗಿಲಾತು. ಮೂಲೆ ಮನಗೆ ಪೋನುಮಾಡಿ ಕೇಳಿಕ್ಕುವೋಂ ಹೇದೊಂಡು ಫೋನುಮಾಡಿ ಆತು.  ಫೋನುಮಾಡಿ ವಿಷಯ ತಿಳುದ ಶಂಬಣ್ಣ ಪುಳ್ಳಿಯ ದೆನಿಗೇಳಿ  “ಆರು ಮಾಣಿ ನಿನಗೀ ಶುದ್ದಿ ಹೇಳಿಸ್ಸು”?.

“ಎನಗೆ ಬೋಚಮಾವ ಹೇಳಿಸ್ಸು.

ಅವನ ವರ್ತಮಾನವೊ!?. “ಅವ  ಎಲಿ ಹೋದಲ್ಲಿ ಹುಲಿ ಹೋತು ಹೇಳ್ತ ಜೆನ”!.

“ಎಂತಾಡಂಬಗ?”.ಅಜ್ಜಿಯ ಕುತೂಹಲ!.

“ಬೈಕಿಂದ ಬಿದ್ದು ರಜ ಪೆಟ್ಟಾಯಿದಾಡ. ಬ್ಯಾಂಡೇಜ್ ಮಾಡ್ಸಿಗೊಂಡು ಬಯಿಂದನಾಡ.ಗಾಬರಿ ಇಲ್ಲೇಡ”.

ಹೀಂಗಿದ್ದ ಸುದ್ದಿಗಳ ಸಣ್ಣದರ ದೊಡ್ಡಮಾಡಿ ಹೇಳುದು ಊರಿಲ್ಲಿ ನೆಡೆತ್ತಾ ಇರುತ್ತು.ಕೆಲವು ವಿಷಯ ಒಬ್ಬನ ಬಾಯಿಂದ ಇನ್ನೊಬ್ಬನ ಬಾಯಿಗೆತ್ತುವಗ ಅದಕ್ಕೆ ಕೈ,ಕಾಲು ಸೇರುವದು ಮಾಂತ್ರ ಅಲ್ಲ!. ಎಲಿಯ ರೂಪ ಹೋಗಿ ಹುಲಿಯ ರೂಪ ಬತ್ತು!!.

ಕೆಲವು ಜೆನ ವಿಷೇಶ ರಂಗುಮಾಡಿ ಹೇಳಿ ಸಂತೋಷಪಡುವೊವೂ ಇದ್ದವು.ಸಮಯ,ಸಂದರ್ಭ ,ವಿಷಯದ ಪರಿಣಾಮ ನೋಡದ್ದೆ ಹೇಳಿರೆ ಮಾಂತ್ರ ಅಪಾಯವೂ ಅಪ್ಪು.

4 thoughts on ““ಎಲಿ ಹೋದಲ್ಲಿ ಹುಲಿ ಹೋತು ಹೇಳಿದಾಂಗೆ”-{ಹವ್ಯಕ ನುಡಿಗಟ್ಟು-55}

  1. ಒಳ್ಳೆ ನುಡಿಗಟ್ಟು ವಿಜಯಕ್ಕ. ಗಾಳಿಶುದ್ದಿ ಹಬ್ಬುತ್ತದು ಹೀಂಗೆ ಅಲ್ಲದೊ ?

  2. ಒಳ್ಳೆ ನುಡಿಗಟ್ಟು ಅತ್ತೆ . ” ಸು” ಹೇಳಿರೆ ” ಸುಕ್ರುಂಡೆ ತಿಂದ ಹಾಂಗೆ ” ಅಲ್ಲದೋ ?

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×