Oppanna.com

“ತೌಡು ಮುಕ್ಕೆಲ ಹೋದರೆ ಉಮಿ ಮುಕ್ಕೆಲ,ಅದೂ ಹೋದರೆ ಮಣ್ಣು ಮುಕ್ಕೆಲ”-{ಹವ್ಯಕ ನುಡಿಗಟ್ಟು-48}

ಬರದೋರು :   ವಿಜಯತ್ತೆ    on   28/02/2016    11 ಒಪ್ಪಂಗೊ

“ತೌಡು ಮುಕ್ಕೆಲ ಹೋದರೆ ಉಮಿ ಮುಕ್ಕೆಲ, ಅದೂ ಹೋದರೆ ಮಣ್ಣು ಮುಕ್ಕೆಲ”-            {ಹವ್ಯಕ ನುಡಿಗಟ್ಟು-48}

ಸುಮಾರು ವರ್ಷಂದ ಮನೆಕೆಲಸಕ್ಕೆ ಬಂದೊಂಡಿದ್ದ ಲಚ್ಚಿಮಿ ಇತ್ತಿತ್ತಲಾಗಿ ನೇರ್ಪ ಬಪ್ಪಲೇ ಇಲ್ಲೆ!.ರಜೆ ಮಾಡುತ್ತರೆ ಹೇಳೆಡದೊ? ಅದೂ ಇಲ್ಲೆ. ಕೆಲವು ಸರ್ತಿ ಆರಾರು ನೆಂಟ್ರು ಇಪ್ಪಗಳೋ ಮಕ್ಕೊ ಪುಳ್ಳಿಯಕ್ಕೊ ಎಲ್ಲೋರು ಬಂದಿಪ್ಪಗಳೋ ಕೈಕೊಡುದು!. ಲಚ್ಚಿಮಿಯ ಈ ವರ್ತನೆ ಪಾರ್ವತಿಯಕ್ಕಂಗೆ ಪೇಚಾಟಾತು.  “ತೊಳವಲಿಪ್ಪ ಎಲ್ಲ ಪಾತ್ರಂಗಳನ್ನೂ ವಸ್ತ್ರಂಗಳನ್ನೂ ಪೇರ್ಸಿ ಮಡಗಿದ್ದಲ್ಲೊ!. ಆನೇ ಮಾಡ್ತಿದ್ದರೆ ಅಂಬಗಂಬಗಳೇ ಒತ್ತರೆ ಮಾಡಿಕ್ಕಲಾವ್ತಿತು ಹೇಳಿ ಕಂಡತ್ತೊಂದಾರಿ.ಇದೀಗೀಗ ಈ ಹಳ್ಳಿಗಳಲ್ಲಿ ಕೆಲಸಕ್ಕೆ ಜೆನ ಸಿಕ್ಕದ್ದದು, ಪೇಟೆಲಿ ಎಷ್ಟು ಬೇಕಾರೂ ಸಿಕ್ಕುತ್ತು. ಅರ್ಧ ಗಂಟೆಯೋ ಒಂದು ಗಂಟೆಯೋ ಸಮಯ ತೆಕ್ಕಂಡು ಮಾಡ್ತವು,ಸುಮಾರು ಮನಗಳನ್ನೂ ಒಪ್ಪಿಗೊಳ್ತವು.ಎನಗೀಗ ಮದಲಾಣ ಹಾಂಗೆ ಓಡಿ-ಓಡಿ ಮಾಡಿಗೊಂಬಲೆಡಿತ್ತಿಲ್ಲೆ”.

ಪಾರ್ತಿಯಕ್ಕನ ಪರಂಚಾಟ ಕೇಳಿದ ಅದರ ಎಜಮಾನ ಪರಮೇಶ್ವರಣ್ಣ “ಅಂಬಗ ಅದರ ಬಿಟ್ಟು ಆಚಕರೆ ಮಡ್ಡಿಯೋಳ್ತಿಯ ಕಲಸಕ್ಕೆ ದೆನಿಗೋಳ್ತದೊ? ಅದಕ್ಕೆ ತಿಂಗಳಿಂಗಿತಿಷ್ಟೂಳಿ ಕೊಡೆಕಾವುತ್ತು. ಕೊಡೆಕಾರೆ ಕೊಡುಸ್ಸು, ಮತ್ತೆಂತ ಮಾಡುಸ್ಸು!” ಹೇಳಿಯಪ್ಪಗ “ಅದರ ಕೆಲಸ ಏನೂ ಬರ್ಕತ್ತಿಲ್ಲೆ.ಅಂದು ನಮ್ಮ  ಪವಿತ್ರನ ಮದುವೆ ಸಮೆಲಿ ಬರ್ಸಿದ್ದಲ್ಲೊ!. ಬರೇ ಪಿಟ್ಟಿಚ್ಚಿ!.”. ಹೇಳಿತ್ತು ಪಾರ್ತಿಯಕ್ಕ. “ಹಾಂಗಾರೆ ..  ವಾ..,ಗುಡ್ಡೆಲಿ ಒಂದು ಗೌಡೆತ್ತಿ ಇದ್ದಾಡ ಅದರ ದೆನಿಗೇಳುಸ್ಸೋ,?”. ಗೆಂಡನ ಮಾತಿಂಗೆ, “ಅದು ಬರೇ ಕಂಡುಮುಟ್ಟೆಯಾಡ. ಹಾಂಗಿದ್ಸು ಬೇಡ್ಳೇ ಬೇಡಪ್ಪ!”

ನೋಡು ಪಾರ್ವತಿ, ಮದಲಾಣವರ ಮಾತೊಂದು ನೆಂಪಾವುತ್ತೆನಗೆ  ’ತೌಡು ಮುಕ್ಕೆಲ ಹೋದರೆ, ಉಮಿ ಮುಕ್ಕೆಲ,ಅದು ಹೋದರೆ ಮಣ್ಣು ಮುಕ್ಕೆಲ’  ಹಾಂಗಾಗಿ ಈಗ ಬತ್ತದರನ್ನೇ ಒಳುಶಿಗೊಂಬದು ಸುಖ .ಈ ಕಷ್ಟ ಪರಿಹಾರಕ್ಕೆ ಹೋಪಗ ಮತ್ತೊಂದು ಕಷ್ಟ ಇದ್ದು ಮಿನಿಯ” ಪರಮೇಶ್ವರಣ್ಣನ ಈ ಆಲೋಚನೆಯೇ ಅಂತಿಮ ಆತು.

11 thoughts on ““ತೌಡು ಮುಕ್ಕೆಲ ಹೋದರೆ ಉಮಿ ಮುಕ್ಕೆಲ,ಅದೂ ಹೋದರೆ ಮಣ್ಣು ಮುಕ್ಕೆಲ”-{ಹವ್ಯಕ ನುಡಿಗಟ್ಟು-48}

  1. ತಿಂಬಲೆ ಸಿಕ್ಕರೆ ಎಂತದೂ ಅಕ್ಕು ಹೇಳ್ತ ಕಾಲಕ್ಕೆ ಸೂಕ್ತ ನುಡಿಗಟ್ಟು. ರಾಜಕಾರಣಿಗಳ ನಾವು ಆಯ್ಕೆ ಮಾಡುವಾಗ ಗಮನಲ್ಲಿ ಮಡ್ಕೊಳೆಕ್ಕಾದ ನುಡಿಗಟ್ಟು

  2. ಗೋಪಾಲಣ್ಣ ಹೇಳಿದ ಹಾ೦ಗೆ , ಸ್ವಾರ್ಥಚಿಂತಕರ ಉದಾಹರಣೆ ಕೊಡುಲೆ ಬ೦ದ ನುಡಿಗಟ್ಟು ಇದು . ತೌಡೋ, ಉಮಿಯೋ ..ಇನ್ನು ಏನೂ ಸಿಕ್ಕದ್ದರೆ ಮಣ್ಣನ್ನೂ ಮುಕ್ಕುವಂಥಾ ಜೆನಂಗಳ ಬಗ್ಗೆ ಜಾಗ್ರತೆ ವಹಿಸುಲೆ ಬಂದ ವಾಡಿಕೆಯ ಮಾತು ಅರ್ಥಪೂರ್ಣ . ಧನ್ಯವಾದ ಅತ್ತೆ .

  3. ಗೋಪಾಲಂಗೆ ಧನ್ಯವಾದ ಹೇಳ್ತಾ .. ಶಾಮಣ್ಣ ನೆಂಪು ಮಾಡಿದ್ದು ಒಳ್ಳೆದಾತು ಬತ್ತ ಮೆರಿವ ಹೆಣ್ಣುಗಳ ಕತೆ ಮನಸ್ಸಿಲ್ಲಿದ್ದರೂ ಹೇಳಲೇ ಬಿಟ್ಟುಹೋದ್ದದಿದ . ಆ ಕತೆ ಉಲ್ಲೇಖ ಮಾಡೆಕ್ಕಾದ್ದು ಇಲ್ಲಿ ಅನಿವಾರ್ಯ .

  4. ಒಂದರಿಂದ ಕಡೆ ಮತ್ತೊಂದು ಹೇಳಿ ಅರ್ಥ. ಒಂದು ಪಾರ್ಟಿ ಹಾಳು ಹೇಳಿ ಮತ್ತೊಂದರ ಆರಿಸಿ ತಂದಾತು ,ಅದು ಮೊದಲಾಣ ದಕ್ಕಿಂತ ಕಡೆ ಆದರೆ ಹೇಂಗೆ ಹೇಳುದು? ಹೀಂಗೆ ಹೇಳೆಕ್ಕಷ್ಟೇ.

  5. ಇನ್ನೊಂದು ವಿಷಯ ಹೇಳಲೇ ಮರತ್ತೆ . ಮದಲಿಂಗೆ ಬತ್ತ ಮೆರಿವದಿದ. ಕೆಲವು ಸರ್ತಿ ಬತ್ತ ಮೆರಿವಾಗ ಹೆಣ್ಣುಗೊ ತೌಡು dUlu ತಿಂಬಲೆ ಸುರುಮಾಡಿದವಡ.ಅವರ ಬಿಟ್ಟು ಬೇರೆಯವರ ಮಾಡಿಯಪ್ಪಗ ಆ ಹೆಣ್ಣುಗೊ ದೂಳಲ್ಲದ್ದೆ ಉಮಿ ತಿಂಬಲೆ ಸುರು ಮಾಡಿದವಡ. ಅವರನ್ನೂ ಬಿಟ್ಟು ಇನ್ನೂ ಬೇರೆಯವರ ಮಾಡಿಯಪ್ಪಗ ಅವು ದೂಳು, ಉಮಿ , ಅದರೊಟ್ಟಿಂಗೆ ಮಣ್ಣನ್ನೂ ತಿಂದವಡ!!

    1. ಆ… ಅದದ… ವಿಷಯ… ಆ ನುಡಿಕಟ್ಟಿನ ಮೂಲ ಎಂತ ಹೇಳಿ ಬೇಕಾದ್ದದು…

  6. ಬೊಳುಂಬು ಗೋಪಾಲಂಗೂ ನರಸಿಂಹಣ್ಣಂಗೂ ಧನ್ಯವಾದ ಹೇಳ್ತಾ .., ಹರೇರಾಮ ಶ್ಯಾಮಣ್ಣ , ಕೆಲಸದವರ ವಿಷಯಲ್ಲಿಯಾಗಲೀ ಬೇರೆ ಏವದೇ ಸಂದರ್ಭಲ್ಲಿ ಕೆಲವು ಸಣ್ಣ ವಿಷಯಕ್ಕೆಲ್ಲ ಅಸಮಧಾನ ತೋರ್ಸಿ ಹೊಂದಾಣಿಕೆ ಮಾಡಿಗೊಳದ್ರೆ ನಾವೇ ಸೋಲುದು ಹೇಳ್ವದು ಸಂದೇಶ .[ ಆ ಉದಾಹರಣೆ ಕತೆಲೇ ಇದ್ದನ್ನೇ ಶಾಮಣ್ಣ ]

  7. ಅಲ್ಲಾ…. ಅಷ್ಟಕ್ಕೂ ಆ ನುಡಿಕಟ್ಟು ಬಂದದೆಂತಕೆ ಹೇಳಿ?

  8. ಇಪ್ಪದರಲ್ಲೇ ಹೊಂದಾಣಿಕೆ ಮಾಡಿಯೊಂಡು ಹೊಯೇಕ್ಕಾವುತ್ತು. ಲಾಯಕಾಯಿದು ವಿಜಯಕ್ಕ.

  9. ಅಪರೂಪದ ನುಡಿಗಟ್ಟು ಅಕ್ಕಾ, ಲಾಯಕಿದ್ದು. ಬಾಣಲೆಂದ ಬೆಂಕಿಗೆ ಬಿದ್ದತ್ತು ಹೇಳಿ ಅಪ್ಪದು ಬೇಡ ಅಲದೊ ?

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×