Oppanna.com

“ಮರ ಬಿಟ್ಟ ಮಂಗನಾಂಗೆ”-(ಹವ್ಯಕ ನುಡಿಗಟ್ಟು-106)

ಬರದೋರು :   ವಿಜಯತ್ತೆ    on   19/12/2017    5 ಒಪ್ಪಂಗೊ

 

“ಮರ ಬಿಟ್ಟ ಮಂಗನಾಂಗೆ”- (ಹವ್ಯಕ ನುಡಿಗಟ್ಟು-106)

ಕೆಲಾವು ವರ್ಷ ಮದಲೆ ಆನು ಸಣ್ಣಾದಿಪ್ಪಗ ಶಾಲಗೆ ರಜೆ ಸಿಕ್ಕಿತ್ತೂಳಿ ಆದರೆ ಮಕ್ಕೊಗೆ ಅಜ್ಜನ ಮನಗೋ ಅತ್ತೆಕ್ಕಳ ಮನಗೋ ಹೋಪ ತುಡಿತ!.ಏವಗ ರಜೆ ಸಿಕ್ಕುತ್ತೂಳಿ ಹೋಪಲೆ ಮೂರುಕಾಲ್ಲಿ ನಿಂಬದು!!. ಹೋಪಲೆಡಿಯದ್ರೆ ಏನೋ ಕಳಕ್ಕೊಂಡಾಂಗಪ್ಪದು.ಆದರೆ…ಇತ್ತೀಚಗೆ ಹಾಂಗೆ ಹೋಪ ಏವುರ ಏವ ಮಕ್ಕೊಗೂ ಇಲ್ಲೆ ಹೇಳುವೊಂ.ಇದೆಲ್ಲದಕ್ಕೂ ಕಾರಣ ಕೊಡುತ್ತರೆ;ಆಧುನಿಕದ ಕಾಲಹರಣವಾದ ಟಿ.ವಿ, ಮೊಬೈಲುದೆ ಕಂಪ್ಯೂಟರುದೆ!!!.ಇರಳಿ.

ಆನು ಹೈಸ್ಕೂಲು ಕಲಿತ್ತಿಪ್ಪಾಗ ಒಂದಾರಿ ಎಂಗೊಗೆ ರಜೆ ಸಿಕ್ಕಿಯಪ್ಪಾಗ  ತಮ್ಮನ(ಮೂರು ವರ್ಷದ) ಬಿಟ್ಟು ಎಂಗೊಲ್ಲ ನಾಲ್ಕು ಜೆನವೂ ಅಜ್ಜನ ಮನಗೆ ಹೋದಿಯೊಂ..ಒಂದು ವಾರಕ್ಕೆ ಹೋದವಾದರೆ; ಎರಡು ದಿನ ಅಪ್ಪಾಗ ಎನ್ನಪ್ಪᵒ ಬಂದವು ಎಂಗಳ ಕರಕ್ಕೊಂಡೋಪಲೆ!.

“ಆ ಪಕಾಚ(ಪ್ರಕಾಶ) ನಿಂಗೊಲ್ಲ ಇಲ್ಲದ್ದೆ ಮನೆಲಿ, ಮರ ಬಿಟ್ಟ ಮಂಗನಾಂಗಾಯಿದು.ನಿಂಗಳ ಕರಕ್ಕೊಂಡು ಹೋಪಲೆ ಬಂದದಾನು”. ಹೇಳಿದೊವು. ಇಲ್ಲಿ ಓದುಗರಿಂಗೆ ಇದರ ಅರ್ಥ ಆದಿಕ್ಕು. ತನಗಾಸರೆ ಇದ್ದವು,ಪ್ರೀತಿಪಾತ್ರರು ತತ್ಕಾಲ ಅಥವಾ ತುಂಬಾಸಮಯ ದೂರ ಹೋದರೆ, ಈ ಗಾದೆಯ ಬಳಸುತ್ತೊವು.ಹೇಳಿರೆ..,ಮಂಗಂಗೆ ಮರವೇ ಪ್ರಿಯ.ಮರ ಬಿಟ್ಟು ಅದು ಜೀವಿಸುವದು  ಹೇಂಗೆ!?.ಈಗಾಣ ಜನರೇಶನಿಲ್ಲಿ  ಹೇಳ್ತರೆ; ಮಕ್ಕೊಗೆ,ಜವ್ವನಿಗರಿಂಗೆ, ಮೊಬೈಲು,  ಕಂಪ್ಯೂಟರ್, ಬಿಟ್ಟು ಹೋದರೆ, ಪ್ರಾಯಸ್ತರಿದ್ದಲ್ಲಿ ಟಿ.ವಿ. ಹಾಳಾದರೆ; ಮರ ಬಿಟ್ಟ ಮಂಗಂಗಳೇ ಸರಿ!. ಎಂತ ಹೇಳ್ತಿ?.

——೦—–

 

 

5 thoughts on ““ಮರ ಬಿಟ್ಟ ಮಂಗನಾಂಗೆ”-(ಹವ್ಯಕ ನುಡಿಗಟ್ಟು-106)

  1. ಬದಲಾವಣೆ ಬೇಕು ನಿಜ….ಆದರೆ………

    ಒಳ ಹೋಪಲೆ, ಲಾಗಹಾಕಲೆ ಮದಲಾಣಾಂಗೆ ಎಡಿತ್ತಿಲ್ಲೆನ್ನೆ!!!!

  2. ಅಬ್ಬಬ್ಬ!!!. ಹನ್ನೆರಡು ದಿನಾತು ಇದರ ಹಾಕಿ. ಬೊಳುಂಬು ಗೋಪಾಲ ನೀನಾದರೂ ಗಮನಿಸಿದೆನ್ನೆ!.ತುಂಬಾ ಧನ್ಯವಾದಂಗೊ..

  3. ಒಳ್ಳೆ ನುಡಿಗಟ್ಟು. ಈಗಾಣ ಕಾಲದ ಜವ್ವನಿಗರಿಂಗೆ, (ಮಕ್ಕೊಗುದೆ ಹೇಳುವೊ), ಅವರ ಮೊಬೈಲು ಇಲ್ಲದ್ರೆ, ಅಥವಾ ಕಂಪ್ಯೂಟರ್ ಹಾಳಾದರೆ ಈ ಗಾದೆ ಮಾತು ಸರಿಗಟ್ಟು ಅಕ್ಕೊ ಹೇಳೀ.
    ಬೈಲಿಂಗೆ ಬಾರದ್ದೆ ಸುಮಾರು ದಿನ ಆಗಿತ್ತು. ಬೈಲಿನವೆಲ್ಲ ಎಲ್ಲಿ ಹೋದವೊ ?

    1. ಹಾಂ ಅಪ್ಪು ಗೋಪಾಲ. ಮೊಬಯಿಲು, ಕಂಪ್ಯೂಟರಿಂಗೆ ಖಂಡಿತಾ ಇದು ಲಗಾವು ಆವುತ್ತು.ಅದರ ನೆಂಪು ಮಾಡಿದ್ದು ಒಳ್ಳೆದಾತು. .

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×