Oppanna.com

“ಹೂಗು ಕೊಡ್ತಲ್ಲಿ ಹೂಗಿನ ಎಸಳು”-{ಹವ್ಯಕ ನುಡಿಗಟ್ಟು-49}

ಬರದೋರು :   ವಿಜಯತ್ತೆ    on   07/03/2016    3 ಒಪ್ಪಂಗೊ

“ಹೂಗು ಕೊಡ್ತಲ್ಲಿ, ಹೂಗಿನ ಎಸಳು”-{ಹವ್ಯಕ ನುಡಿಗಟ್ಟು-49}

ಆನು ಸಣ್ಣದಿಪ್ಪಗ ಒಂದರಿ ಆರೋ ಅಪರೂಪದ ನೆಂಟ್ರು ಅರಾಡಿಯದ್ದೆ[ತಿಳಿಶದ್ದೆ ಬಪ್ಪದಕ್ಕೆ ಹೇಳ್ತವಿದ ಹೀಂಗೆ;ಅವಕ್ಕೆಂತ ಬಪ್ಪಲೆ ಅರಡಿಗಾತಿಲ್ಯೋ ಕೇಳುಗಿದ ಕೆಲವು ಆಪ್ತ ಅಳಿಯಂದ್ರು!!….ಆ ಕಾಲಲ್ಲಿ ಫೋನಿದ್ದೊ? ತಿಳಿಶೆಕ್ಕಾರೆ ಕಾಗದವೇ ಹಾಕೆಕ್ಕಷ್ಟೆ] ಬಂದವಿದ. ಅದ್ಸರಿ.. ನಾವೀಗ ವಿಷಯಕ್ಕೆ ಬಪ್ಪೊಂ.

ಬಂದಪ್ಪಗ…,ಕಾಪಿ-ಚಾಯ ಕೊಡ್ಸು ಸುರುವಾಯಿದು ಆ ಕಾಲಕ್ಕೆ.ಬರೇ ಕಾಪಿ ಕೊಡುದು ಹೇಂಗೆ..? ಕಾಪಿಗೆ  ಕೂಡ್ಳೆ ಕೊಡುತ್ತೆಂತರಾ..ಹೇಳಿ ಎನ್ನಬ್ಬೆ ಹುಡುಕ್ಕಿತ್ತು.

“ಹೋದವಾರ ಮಾಡಿದ ಉಂಡ್ಳಕಾಳು ಇದ್ದೋ ನೋಡುವಗ, ಎಣುಸಿ ಏಳೋ ಎಂಟೋ ಇದ್ದಷ್ಟೆ. ಈ ಮಕ್ಕೊ ಮಡುಗೆಕ್ಕನ್ನೆ! ಇದರ ಅವು ನಾಲ್ಕು ಜೆನ ಇದ್ದವಕ್ಕೆ  ಹೇಂಗಪ್ಪ ಕೊಡುದು!”. ಅಬ್ಬೆ,ಅಪ್ಪನತ್ರೆ  ಪಿಸಿ-ಪಿಸಿನೆ ಹೇಳಿತ್ತು. ಅಷ್ಟಪ್ಪಗ “ತೊಂದರೆ ಇಲ್ಲೆ, ಇದ್ದದರ ಕೊಡು.ಮಜ್ಜಾನಾಗೆಂಡು ಬಂತು. ಈಗ ರಜ ಕಳಿವಗ ಉಣುತ್ತ ಹೊತ್ತೂ ಆತು”.ಹೇಳಿದೊವು ಅಪ್ಪಂ. ಹಾಂಗೆ ಕಾಪಿ ಒಟ್ಟಿಂಗೆ ; ಆ ಉಂಡ್ಳ ಕಾಳಿನ ಅವರ ಕೈಗೆ ಎರಡೆರಡು ಮಡುಗೆಂಡು ಅಬ್ಬೆ ಬಂದಪ್ಪಗ;  ಬಂದವರತ್ರೆ.., “ಬಾವಯ್ಯ ಹೂಗು ಕೊಡ್ತಲ್ಲಿ ಹೂಗಿನ ಎಸಳಿನ ಹಾಂಗಿದು” ಹೇಳಿದೊವು ಎನ್ನಪ್ಪಂ. “ಸಾಕು ಬಾವಯ್ಯ.., ಬರೇ ಚಾಯ ಕುಡಿವಗ ಒಂದೆರಡು ಬಾಯಾಡ್ಸಲೆ ಬೇಕಷ್ಟೆ”.ಅವರ ಉತ್ತರ ಬಂತು ಹೇಳ್ವೊಂ.

ಇದೆಂತಕೆ ಉಂಡ್ಳಕಾಳು ಎರಡೆರಡು ಕೊಡುವಗ ಅಪ್ಪಂ ಹೀಂಗೆ ಹೇಳಿದ್ದೂ …? ಎನ್ನ ಮನಸ್ಸಿಲ್ಲಿ ಹಾಂಗೇ ಮೂಲೆಲಿ ಇದ್ದತ್ತು.ಅವೆಲ್ಲ ಹೋದ ಮತ್ತೆ ಒಂದು ದಿನ ಅಪ್ಪನತ್ರೆ ಕೇಳಿದೆ ಆ ಪದ ಬಳಸುದು ಎಂತಕೆ…?

“ಅದುವೋ.., ಒಬ್ಬನ ಗೌರವ ಸ್ಥಾನಕ್ಕೆ ಕೂರ್ಸುವಗ ಎಲೆ-ಅಡಕ್ಕೆ ತಟ್ಟೆ ಒಟ್ಟಿಂಗೆ ಹೂಗಿನ ಹರಿವಾಣವನ್ನೂ  ಒಡ್ಡಿ ದೆನಿಗೇಳೆಕ್ಕಿದ. ಹೂಗು ದಣಿಯ ಇಲ್ಲದ್ರೆ; ಆ ಎಲೆ-ಅಡಕ್ಕೆ ಹರಿವಾಣಲ್ಲಿ ಹೂಗಿನ ಎಸಳಾದರೂ ಮಡಗೆಕ್ಕು.ಹಾಂಗೆ ನಮ್ಮ ವೈದಿಕ ಆಚರಣೆ. ದಿಬ್ಬಾಣ ಕರವಲೆ ಹೋಪಗ ತೆಕ್ಕೊಳ್ತ ಎಲೆ-ಅಡಕ್ಕೆ ತಟ್ಟೆಲಿ ಹೂಗಿನ ಎಸಳು ಮಡುಗೆಕ್ಕೂಳಿ ಬಟ್ಟಮಾವ ಹೇಳ್ತವನ್ನೆ!. ಹಾಂಗೇಯಿದ. ಕೆಲಾವು ಸಂದರ್ಭಲ್ಲೆಲ್ಲ  ಹೀಂಗೆ ಕಮ್ಮಿ ಇಪ್ಪಗ ಈ ಪದ ಉಪಯೋಗುಸುದು”. ಹೇಳಿದೊವು.

ನಮ್ಮತ್ರೆ ತೀರಾ ಕಮ್ಮಿ ಇದ್ದ ಸಂದರ್ಭಲ್ಲಿ ಛೇ.. ಇದರ ಕೊಡ್ಳೋ ಬಿಡ್ಳೋ ಹೇಳಿ ನವಗೇ ಸಂಕೋಚ ಅಪ್ಪದು! ದಣಿಯ ಕೊಡೆಕಾತು ಹೇಳ್ತ ಭಾವನೆ ಮನಸ್ಸಿಲ್ಲಿ!.ಒಟ್ಟಿಲ್ಲಿ..,  ಇಷ್ಟೇ ಇದ್ದಷ್ಟೇಳಿ ಪರೋಕ್ಷವಾಗಿ ಹೇಳಿಗೊಂಬ  ಶಬ್ಧ ಇದು . ಅದೊಂದು ಮರ್ಯಾದೆ ಕೊಡುವ ಮಾತು. ಎಂತ ಹೇಳ್ತಿ?.

 

3 thoughts on ““ಹೂಗು ಕೊಡ್ತಲ್ಲಿ ಹೂಗಿನ ಎಸಳು”-{ಹವ್ಯಕ ನುಡಿಗಟ್ಟು-49}

  1. ಏನೂ ಕೊಡದ್ದೆ ಇಪ್ಪದರಿಂದ ರಜಾ ಆದರೂ ಕೊಡುವದು ಒಳ್ಳೇದಲ್ಲದೋ?ಲಾಯಕಾಯಿದು ವಿಜಯಕ್ಕ.

  2. ಹೂಗು ಹೇಳ್ತ ಸಿಂಧು ಲ್ಲಿ ಎಸಳು ಒಂದು ಬಿಂದು. ಬಿಂದು ಸೇರಿಯೇ ಸಿಂಧು ಆದ್ದು. ಹಾಂಗಾಗಿ ಹೂಗಿಂಗಿಪ್ಪ ಮರ್ಯಾದೆ ಅದರ ಎಸಳಿಂಗೂ ಇದ್ದು. ಒಳ್ಳೆ ನುಡಿಗಟ್ಟು

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×