Oppanna.com

‘ಅಡಿಗೆ ಸತ್ಯಣ್ಣ’ ಜೋಕುಗೊ – ಭಾಗ 15

ಬರದೋರು :   ಚೆನ್ನೈ ಬಾವ°    on   20/06/2013    4 ಒಪ್ಪಂಗೊ

ಚೆನ್ನೈ ಬಾವ°

1

ಚಿತ್ರ ಕೃಪೆ: ವೆಂಕಟ್ ಕೋಟೂರ್
ಚಿತ್ರ ಕೃಪೆ:
ವೆಂಕಟ್ ಕೋಟೂರ್

 

ಕಲಾರಿಮೂಲೆ ಪುಳ್ಳಿ ಉಪ್ನಾನ ಓ ಮನ್ನೆ ಕಳುತ್ತಪ್ಪೋ..

ಅಡಿಗೆ ಸತ್ಯಣ್ಣನದ್ದೇ ಅಡಿಗೆ..

ಬೈಲಿನೋರು ಕೆಲವು ಜೆನ ಹೋಗಿತ್ತವು..

ಅಡಿಗೆ ಸತ್ಯಣ್ಣ ಕೆಲ್ಸ ಮುಗುಶಿ ಹಪ್ಪಳ ಹೊರ್ಕೊಂಡಿಪ್ಪಗ ಬೈಲಿನೋರು ಒಂದರಿ ಅಡಿಗೆ ಕೊಟ್ಟಗ್ಗೆ ಹೋಗಿ ಸತ್ಯಣ್ಣನ ಮಾತಾಡ್ಸಿಕ್ಕಿ ಬಪ್ಪಲೆ ಹೇದು ಹೋಗಿ ಮಾತಾಡಿಗೊಂಡಿತ್ತವು..

ಎಡಕ್ಕಿಲಿ ಸತ್ಯಣ್ಣ° ಕೇಟ° – ಬೈಲಿಂಗೆ ಬೋಚಬಾವ ಬಾರದ್ದೆ ಸುಮಾರು ದಿನ ಆತನ್ನೇ. ಎಂತ ಊರ್ಲಿ ಇಲ್ಯೋ? ಎಲ್ಲಿ ಹೋದ??

ಬೋಚಬಾವನೂ ಅದೇ ಸಮಯಕ್ಕಾತು ಅಡಿಗೆ ಕೊಟ್ಟಗೆ ಎತ್ತಿದ್ದು ‘ಮಜ್ಜಿಗೆ ನೀರು ಮಾಡಿದ್ದಿದ್ದೋ’ ಹೇದು ವಿಚಾರ್ಸ್ಯೊಂಡು..

ಮಾತಾಡಿಗೊಂಡಿದ್ದಾಂಗೆ ಅಭಾವ° ಕಿಸೆಂದ ಪೆನ್ನು ಕಾಗದ ತೆಗದು ಏನೋ ಬರ್ಕೊಂಡು ಕಿಸೆಲಿ ತುರ್ಕಿಸಿಯೊಂಡ°

ಅಡಿಗೆ ಸತ್ಯಣ್ಣ° ಅದರ ನೋಡಿಕ್ಕಿ – ಹಾ° ಅದಾತದು!! ಹೇದು ಉದ್ಗಾರ ಎಳದ!

ಅಲ್ಲಿಪ್ಪೋರಿಂಗೆ ಇದೆಂತರಪ್ಪ ಸತ್ಯಣ್ಣ ಹೇಳಿದ್ದದು ಅರ್ಥ ಆಯ್ದಿಲ್ಲೆ. ಎಂತ ಸತ್ಯಣ್ಣ ಹಾಂಗೆ ಹೇಳಿದ್ದದು ಎಡೇಲಿ ಹೇದು ಕೇಟವು.

ಸತ್ಯಣ್ಣ° ಹೇಳಿದ° – ಅಭಾವ° ಕಾಗದಲ್ಲಿ ಬರಕ್ಕೊಂಡ°, ಇದಿನ್ನು ನಾಳಂಗೆ ಬೈಲಿಲಿ ಶುದ್ಧಿ ಬಪ್ಪಲಿದ್ದು ನೋಡಿ 😀

~~

2.

ಸತ್ಯಣ್ಣ ಯುಕೆಗೆ ಹೋಗಿ ಬಂದ ನಂತರ, ಯಾವ ಮನೆಗೆ ಅಡಿಗ್ಗೆ ಹೋದರೂ, ಎಲ್ಲೋರು ಅದೇ ವಿಚಾರವ ಕೇಳುದು..

ಮನೆಯವು ಮಾಂತ್ರ ಅಲ್ಲ, ಜೆಂಬ್ರಕ್ಕೆ ಬಂದವು ಕೂಡ- “ಸತ್ಯಣ್ಣ ಹೇಂಗಿದ್ದು ಯುಕೆ? ನಮ್ಮಲ್ಲಿಪ್ಪಾಂಗೆ ಇದ್ದೋ? ನಮ್ಮ ಊಟ ಅವಕ್ಕೆ ಮೆಚ್ಚುತ್ತೋ? ಹೇಂಗೆ ನವಗೆ ಅಲ್ಲಿ ಎಜೆಸ್ಟ್‌ ಆವುತ್ತೋ?… ಹೀಂಗೆ ಪ್ರಶ್ನೆಗಳ ಸುರಿಮಳೆಯೇ…

ಇವಂಗೆ ಬೆಂದಿಗೆ ಉಪ್ಪು ಮೆಣಸು ಹಾಕಲು ಅಲ್ಲ, ಪ್ರಶ್ನೆಗೆ ಉತ್ತರ ಹೇಳಲೂ ಅಲ್ಲ..

ಹೀಂಗಿಪ್ಪ ಪರಿಸ್ಥಿತಿ ಹಲವು ಸರ್ತಿ ಎದುರಾದ ಕಾರಣ, ಇದಕ್ಕೆ ಎಂತಾರೊಂದು ಮದ್ದಾಯಿಕ್ಕನ್ನೇ ಹೇಳಿ ಗ್ರೇಶಿಗೊಂಡ ಸತ್ಯಣ್ಣ°..

ಒಂದು ದಿನ ಮನೆಯ ಕೋಣೆಯ ಒಳಹೋಗಿ, ಈ ಪ್ರಶ್ನೆಗೊಕ್ಕೆಲ್ಲಾ ಸ್ವತಃ ಉತ್ತರ ಹೇಳಿಗೊಂಡು ಮೊಬೈಲಿಲ್ಲಿ ರೆಕಾರ್ಡ್ ಮಾಡಿಕೊಂಡ..

ಅದೇ ದಿನ ಒಂದು ಅಡಿಗೆ ಇತ್ತು ಅಡ್ಯನಡ್ಕಲ್ಲಿ..

ಇರುಳು ಹೋಳಿಗೆ ಲಟ್ಟಿಸಿಕೊಂಡಿಪ್ಪಗ ಒಬ್ಬ° ಬಂದು ಸತ್ಯಣ್ಣೋ ಯುಕೆ ಹೇಂಗಾತು ಕೇಳಿದ°..

ಹೋಳಿಗೆ ಲಟ್ಟುಸುತ್ತದರ ಅರ್ಧಲ್ಲೇ ನಿಲ್ಲಿಸಿ, “ಅಣ್ಣೋ… ನಿಂಗಳ ಮೊಬೈಲಿಲ್ಲಿ ಬ್ಲೂಟೂತ್‌ ಇದ್ದೋ…. ಆನ್‌ ಮಾಡಿ.., ಇದಾ ಎನ್ನ ಮೊಬೈಲಿ ಇಪ್ಪ ವಿವರಣೆಯ ಕಳುಗುತ್ತೆ, ಓ ಅಲ್ಲಿ ಕೂದುಗೊಂಡು ಸಮಧಾನಲ್ಲಿ ಕೇಳಿಗೊಳ್ಳಿ” ಹೇದು ಹೇಳಿದ° ಸತ್ಯಣ್ಣ°.

ಅವ°-  “ಎನ್ನದು ಬೇಸಿಕ್‌ ಸೆಟ್ಟು ಸತ್ಯಣ್ಣ ಅದೆಲ್ಲಾ ಇಲ್ಲೆ” ಹೇಳಿದ°.

“ಹೋ ಹಾಂಗೊ, ಇದಾ ಎನ್ನ ಮೊಬೈಲ್‌ ತೆಕ್ಕೊಂಡು ಹೋಗಿ… ಜಾಲ ಕರೇಲಿ ನಿಂದು ಕೇಳಿಕ್ಕಿ ಬನ್ನಿ ಹೇಳಿದ° – ಸತ್ಯಣ್ಣ° 😀

 

~~

3

ಸತ್ಯಣ್ಣ ಅತ್ಲಾಗಿ ಯುಕೆಗೆ ಹೋದಾಂಗೆ ಇತ್ಲಾಗಿ ರಂಗಣ್ಣಂಗೆ ಭಾರಿ ಕೊಶಿ ಆಗಿತ್ತಿದು..

ಅನುಪ್ಪತ್ಯಂಗಳೂ ಆತು., ಅನುಪ್ಪತ್ಯ ಇಲ್ಲದ್ದ ದಿನ ಪುತ್ತೂರಿಂಗೆ ಹೋಪಲಕ್ಕು ಏನಾರು ಸಾಮಾನು ತಪ್ಪಲೆ 😀  ಹೇಳಿ ಗ್ರೇಶಿತ್ತಿದ° ರಂಗಣ್ಣ.

ಒಂದೇ ವಾರಲ್ಲಿ ಸತ್ಯಣ್ಣ ಯುಕೆಂದ ಬಂದದು ರಂಗಣ್ದಂಗೆ ಹಿತ ಆಯಿದಿಲ್ಲೆ. ಆದರೆ ತೋರ್ಸಲೆ ಗೊಂತಿದ್ದೋ ಇವ° ಎಷ್ಟಾದರು ಹೆಲ್ಪರು ಅಲ್ಲದೋ. ಅಂದರೂ ಇಷ್ಟು ಬೇಗ ಬಂದತೆಂಗಕೆ ಹೇಳಿ ಕೇಳೆಕ್ಕಿತ್ತು ಒಂದರಿ ಅವಂಗೀಗ..

ಅಡಿಗೆ ವಿಚಾರ ಮಾತಾಡ್ಳೆ ಸತ್ಯಣ್ಣನ ಮನೆಗೆ ಹೋದ ರಂಗಣ್ಣ ಕೇಳಿದ°… ಸತ್ಯಣ್ಣೋ, ಯುಕೆಲಿ ಎಂತ ಹವೆ ಹಿಡಿದಿದಲ್ಲೆಯೋ, ಅಥವಾ ನಮ್ಮ ಕೈ ರುಚಿ ಅವಕ್ಕಾವುತ್ತಿಲ್ಲೆಯೋ?!

ಸತ್ಯಣ್ಣಂಗೆ ಮರ್ಮ ಅರ್ಥ ಆತು..  , ‘ಎಲ್ಲಾ ಆವುತ್ತನ್ನೆ ರಂಗಣ್ಣೋ… ಅಲ್ಲಿ ಇದ್ದರೆ ಇಲ್ಲಿ ಕಾಲೇಜಿಂಗೆ ಹೋಪ ಕೂಸುಗಳ ಕಾಂಬಗ ಪೆರ್ಚಿ ಕಟ್ಟುವ ಗೋಣಂಗಳ ಆಳ್ಸುಲೆ ಎಡಿತ್ತಿಲ್ಲನ್ನೇ’ ಹೇಳಿ ಸತ್ಯಣ್ಣ ಹೇಳ್ವದೇ, ರಂಗಣ್ಣ ಹೇದ°- ‘ನಾಳ್ತು ಕೋಳ್ಯೂರಿಲ್ಲಿ ಉಪ್ನಾನಕ್ಕೆ ೧೦ ಸೇರು ಹೋಳಿಗೆ ಆಯೆಕ್ಕಡ ಆತೋ’ 😀

~~

4

ಅಡಿಗೆ ಸತ್ಯಣ್ಣ ಮೂಡ್ಳಾಗಿಂದ ಅನುಪ್ಪತ್ಯ ಮುಗಿಶಿಕ್ಕಿ ಬಸ್ಸಿಲ್ಲಿ ಬತ್ತಾ ಇಪ್ಪದು..

ಒಟ್ಟಿಂಗೆ ರಂಗಣ್ಣ ಇದ್ದ ಹೇಳಿ ಪ್ರತ್ಯೇಕ ಹೇಳೇಕ್ಕಾದ್ದಿಲ್ಲೆ..

ರಂಗಣ್ಣಂಗೆ ಸತ್ಯಣ್ಣನ ಕೆಣಕ್ಕಿದಷ್ಟು ಕೊಶಿಯೇ ಅಪ್ಪದು..

ಎಡೇಲಿ ರಂಗಣ್ಣ ಸುರುಮಾಡಿದ° – ಮಾಂವ°!, ಈ ವಾರ ಬೈಲಿಲಿ “ಆಕಾಶ ನೋಡೂ ಮುಗಿಲೋಡಿ ಬ೦ತೂ” ಹೇದು “ಇ೦ದ್ರವಜ್ರ” ಛ೦ದಸ್ಸಿನಲ್ಲಿ ಪದ್ಯ ಬರವಲೆ ಹೇಳಿದ್ದವನ್ನೇ. ಅಂತೇ ನಿಂಗೊ ಬಸ್ಸಿಲ್ಲಿ ಕೂದೊಂಡು ಹೋಪಗ ಒಂದು ಪದ್ಯ ಕಟ್ಳೆ ಏಕಾಗ?!

ಸತ್ಯಣ್ಣ ಹೇದ° – ಇದಾ.. ಎಷ್ಟು ಜೆನಕ್ಕೆ ಎಷ್ಟು ಹಾಳಿತ ಹೇದು ಕೇಳು, ಹೇಳುವೆ. ಹೀಂಗಿರ್ತದೆಲ್ಲ ನಮ್ಮಂದ ಹರಿಯ. ಆನು ನಾಕನೇ ಕ್ಲಾಸು ಪೈಲು.

ರಂಗಣ್ಣ ಬಿಟ್ಟಿದನಿಲ್ಲೆ. ಇಲ್ಲೆಪ್ಪ ಅಂತೇ ಒಂದು ನಿಂಗೊ ಏನಾರು ಪ್ರಯತ್ನ ಮಾಡಿ ಅಲ್ದಾ..

ಸರಿ., ಅದಕ್ಕೆ ಧಾಟಿ ಹೇಂಗೆ ಹೇಳು – ಸತ್ಯಣ್ಣ ಹೇದ°.

ರಂಗಣ್ಣ ಧಾಟಿ ಎಲ್ಲಿಂದಲೋ ಬಾಯಿಪಾಠ ಮಾಡಿ ಮಡಿಗಿದ್ದರ ಹೇಳಿದ° –  ನಾನಾನನಾನಾನನನಾನನಾನಾ

ಧಾಟಿ ಸಿಕ್ಕಿಯಪ್ಪಗ ಸತ್ಯಣ್ಣಂಗೆ ಕೊಶಿ ಆತು…

ಬಸ್ಸಿನ ಶ್ರುತಿಗೆ ಜೋಡುಸಿ ಸತ್ಯಣ್ಣ° ಹೇಳಿದಾ° –

 ಪಾಪಾಪಪಾಪಾಪಪಪಾಪಪಾಪಾ

 ಪೀಪೀಪಿಪೀಪೀಪಿಪಿಪೀಪಿಪೀಪೀ ।

 ಪೂಪೂಪುಪೂಪೂಪುಪುಪೂಪುಪೂಪೂ

 ಪೇಪೇಪೆಪೇಪೇಪೆಪೆಪೇಪೆಪೇಪೇ ॥

ಸತ್ಯಣ್ಣ ತಿರುಗಿ ನೋಡಿರೆ.. ರಂಗಣ್ಣ° ಒರಗಿಯೊಂಡಿದ್ದ°. 😀

~~

5

ಚೌಕಾರು ಮಾವನಲ್ಲಿಗೆ ಹೋದ ಅಡಿಗೆ ಸತ್ಯಣ್ಣಂಗೆ ಶುಗರು ಜಾಸ್ತಿಯಾಗಿ ಕಂಡಾವಟ್ಟೆ ತಲೆ ತಿರುಗಲೆ ಸುರುವಾತು..

ಸತ್ಯಣ್ಣ° ಹೇಳಿದ° – ಆನು ಎಡಿಗಾಷ್ಟು ಪತ್ಯಲ್ಲೇ ಇದ್ದೆ. ಹೇಂಗೆ ಜೋರಾತಪ್ಪ! ಎನಗೊಂದೂ ಅರ್ಥ ಆವ್ತಿಲ್ಲೆ. ಡಾಕುಟ್ರಣ್ಣ ಹೇಳಿದಾಂಗೆ ಗೋಧಿ ಸರೀ ಉಪಯೋಗಿಸಿದ್ದೆ. ಇಂದು ಮತ್ತೂ ಹೆಚ್ಚಿಗೇ ಉಪಯೋಗಿಸಿದ್ದೆ. ಗೋಧಿ ಪಾಚ ಹೇಳಿರೆ ಎನ ಪಂಚ ಪ್ರಾಣ. 😀

~~

6.

ಓ ಅಂದು ಗ್ರಾಶಾಂತಿ ಕಳುದ ಸಂಪಾಜೆ ಮಾವನ ಮಗಳಿಂಗೆ ಮದುವೆ ನಿಘಂಟು ಆತು..
ಜೆಡಿಗುಟ್ಟಿ ಮಳೆಬಪ್ಪ ಸಮಯಲ್ಲಿ ಮದುವೆ ಮುಹೂರ್ತ ಸಿಕ್ಕಿದ್ದದು..

ಸಂಪಾಜೆ ಮಾವ° ವಿಷಯ ತಿಳ್ಸಿಕ್ಕಿ ಅಡಿಗ್ಗೆ ಏಪ್ಪುಸಲೆ ಸತ್ಯಣ್ಣಂಗೆ ಫೋನು..

“ಸತ್ಯಣ್ಣೋ!, ಹೋಳಿಗೆ ಆಯೇಕ್ಕಿದಾ, ಹಾಂಗೇ ಅಡಿಗೆ ಪಟ್ಟಿಯೂ ಆಯೇಕ್ಕಾತನ್ನೇ”..

ಇತ್ಲಾಗಿಂದ ಸತ್ಯಣ್ಣ ಹೇದಾ° – “ಪಟ್ಟಿ ಒಂದು ವಾರಂದ ಮದಲೆ ಮಾಡಿರೆ ಸಾಕು.., ಮದಾಲು ನಿಂಗೊ ಅಟ್ಟಲ್ಲಿಪ್ಪ ಕೆರುಶಿ ಕೆಳ ಇಳುಶಿ ಸಗಣ ಉದ್ದಿ ಮಡಿಗಿಕ್ಕಿ, ಇಲ್ಲದ್ರೆ.. ಹೀಂಗೆ ಮಳೆ ಬಂದುಗೊಂಡಿದ್ದರೆ ಹೋಳಿಗ್ಗಪ್ಪಗ ಅದು ಓಣಗ, ಆನು ಮತ್ತೆ ಕೊಯಂಙುವೆ 😀

~~

  😀 😀 😀

 

 

4 thoughts on “‘ಅಡಿಗೆ ಸತ್ಯಣ್ಣ’ ಜೋಕುಗೊ – ಭಾಗ 15

  1. ಅಲ್ಲ, ಸತ್ಯಣ್ಣ ನಾಕನೆ ಕ್ಲಾಸು ಫೇಲ್ ಆದರೂ, ಪದ್ಯ ಬರವಷ್ಟು ಹುಷಾರಿ ಆಯ್ದ ಅಪ್ಪೋ.? ಇದು ಓ ಮನ್ನೆ ಬೆಂಗ್ಳೂರಿಲಿ ಹೋಗಿಪ್ಪಗ ಬಾಲ್ಕನಿಲಿ ಕೂದೊಂಡು ಹೋಳಿಗೆ ಲಟ್ಟುಸುವಾಗ ಮನೆ ಎಜಮಾನ ಹೇಳಿ ಕೊಟ್ಟ ಕಲೆಯೋ..?

  2. ಚೆನ್ನೈ ಭಾವಯ್ಯನ ಗೀತಾ ಮಹಾತ್ಮೆ ಓದುವುದರ ಮದಲು ಸತ್ಯಣ್ಣನ ಜೋಕು ಓದಿ ಒಪ್ಪ ಕೊಟ್ಟದಕ್ಕೆ ಕ್ಷಮೆ ಇರಳಿ. ಎಲ್ಲೋರಿಂಗೂ ಹಗುರದ ಓದು ಇಷ್ಟವೋ ಹೇಳಿ. ಸತ್ಯಣ್ಣನ ಬುದ್ದಿವಂತಿಕೆ ಮೆಚ್ಚೆಕಾದ್ದೆ. ಪೆರ್ಚಿಕಟ್ಟುವ ಗೋಣಂಗಳ ಉದಾಹರಣೆ, ಯುಕೆ ಬಗ್ಗೆ ಮೊಬೈಲಿಲ್ಲಿ ರಿಕಾರ್ಡು ಮಾಡಿದ್ಸು, ಸತ್ಯಣ್ನ ಪದ್ಯ ಪೂರಣ ಮಾಡಿದ್ಸು ಎಲ್ಲವೂ ಸೂಪರಾಯಿದು. ಸತ್ಯಣ್ಣ ಬೈಲಿಂಗೆ ಬಂದೊಂಡಿಪ್ಪದು ತುಂಬಾ ಸಂತೋಷ.

  3. ಭಾವ ರೈಸಿದ್ದು…
    ಕೆರುಶಿಗೆ ಸಗಣ ಬಳುಗೆಕ್ಕಾದ್ದೇ…
    ಅಂತೆಯೋ ಸತ್ಯಣ್ಣ ಸಾಧಾರಣದವ° ಅಲ್ಲ ಹೇಳಿ ಹೇಳುದು..

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×