Oppanna.com

'ಅಡಿಗೆ ಸತ್ಯಣ್ಣ' ಜೋಕುಗೊ – ಭಾಗ 17

ಬರದೋರು :   ಚೆನ್ನೈ ಬಾವ°    on   04/07/2013    14 ಒಪ್ಪಂಗೊ

ಚೆನ್ನೈ ಬಾವ°

1.

ಚಿತ್ರಕೃಪೆ : ವೆಂಕಟ್ ಕೋಟೂರ್
ಚಿತ್ರಕೃಪೆ :
ವೆಂಕಟ್ ಕೋಟೂರ್

ಶಿವರಾಮಣ್ಣನ ತಮ್ಮಂಗೆ ಮದುವೆ ನಿಘಂಟು ಆತು, ಬದ್ಧ ಕಳುದತ್ತು..
ಅಡಿಗೆ ಸತ್ಯಣ್ಣನ ಅಡಿಗೆ..
ಬದ್ಧ ಕಳುದಿಕ್ಕಿ ಮಾಣಿ ಮನೆಲಿ ಅಡಿಗೆ ಸತ್ಯಣ್ಣನ ಬರುಸಿ ಅಡಿಗ್ಗೆ ಬಗ್ಗೆ ಮಾತಾಗಿಯೊಂಡಿತ್ತಿದ್ದು..
ಕೂಸುಕೊಂಡೋದ ಬಾವಯ್ಯನೂ ಇತ್ತಿದ್ದ ಮಾತಾಡ್ಳೆ..
ತಾಳೆಂತಕ್ಕು, ಕೊದಿಲೆಂತಕ್ಕು, ಮೇಲಾರ ಎಂತಕ್ಕು ಹೇದೆಲ್ಲ ನಿಘಂಟು ಆತು..
ಪಾಯಸಕ್ಕೆ ಎತ್ತಿಯಪ್ಪಗ ಬಾವಯ್ಯನದ್ದು ಒಂದೇ – “ನೇಂದ್ರ ಬಾಳೆಣ್ಣು ಪಾಚ ಆಗ್ಬೇಕು, ಅದರೊಟ್ಟಿಂಗೆ ಖರ್ಜೂರ ಪಾಚವೂ ಮಾಡುವೊ”.
ಈ ಬಾವಯ್ಯ ಎಂತ ಹೇಳಿರೂ ಕೇಳ. ಅವನದ್ದು ಒಂದೇ – ನೇಂದ್ರ ಬಾಳೆಣ್ಣು ಪಾಚ, ಖರ್ಜೂರ ಪಾಚ!
ಶಿವರಾಮಣ್ಣನ ಸ್ಥಿತಿ ಅಡಿಗೆ ಸತ್ಯಣ್ಣಂಗೆ ಗೊಂತಿದ್ದು.. ಬಾವಯ್ಯನ ಜಬರ್ದಸ್ತಿಯೂ ಗೊಂತಿದ್ದು..
ಸತ್ಯಣ್ಣ ಹೇದ° – ಮದುವೆ ಮಾಡುಸ್ಸೋನು ಈ ಮನೆವ°, ಐದು ವರ್ಷಲ್ಲಿ ಏಳು ಮದುವೆ ಕಳುದ್ದು ಈ ಮನೆಲಿ. ನೀ ಎಂತಕೆ ಇಷ್ಟು ಲಾಗ ಹಾಕುತ್ತೇ? ಕರ್ಚಿಗೆಂತ ನೀನೋ ಕೊಡ್ತೆ??
ಕಾಪಿ ಮುಕ್ಕಾಲು ಕುಡುಕ್ಕೊಂಡಿದ್ದ ಬಾವಯ್ಯ.. “ಎನಗೊಂದರಿ ಅರ್ಗೆಂಟು ಪೇಟಗೆ ಹೋಪಲಿದ್ದು ಹೇದು ಎದ್ದವ ಮೆಟ್ಳು ಇಳುದು ಚೆರ್ಪು ಸುರುದ್ದದೇ! 😀
ಮದುವೆ ಮಾಡ್ತದಾರು?!, ದರ್ಬಾರು ಮಾಡ್ತದಾರು?!! – ಸತ್ಯಣ್ಣನ ಪ್ರಶ್ನೆ.
~~
2.
ಅಡಿಗೆ ಸತ್ಯಣ್ಣ ಪಲ್ಸರ್ ಬೈಕಿಲ್ಲಿ ಗುಡುಗುಡು ಹೇದು ಹೆರಟದು ವಳಕ್ಕುಂಜ ಅನುಪತ್ಯಕ್ಕೆ..
ಏನಂಕೋಡ್ಳಣ್ಣ ಎಲ್.ಎಂ.ಎಲ್. ಪ್ರೀಡಮ್ ಬೈಕಿಲ್ಲಿ ಹೆರಟದು ಕೊಡಯಾಲ ಕೆಲಸಕ್ಕೆ..
ಬಳ್ಳಂಬಟ್ಟು ತಿರ್ಗಾಸಿಂಗೆತ್ತುವಾಗ ಆದವು ಇಬ್ರೂ ಎದುರೆದುರೆ..
ಒಂದರಿ ಮಾತಾಡಿಕ್ಕಿ ಮುಂದೋಪೋಳಿ ಕಾಲ ಕೆಳಮಡಿಗಿ ಬೈಕು ನಿಲ್ಸಿದವು ಇಬ್ರುದೆ..
‘ಏನು – ಒಳ್ಳೆದು’ ಆದಿಕ್ಕಿ ಇನ್ನೆಂತ ಹೆರಡೋದು ಹೇದಪ್ಪಗ ಏನಂಕೋಡ್ಳಣ್ಣಂಗೆ ನೆಂಪಾತು, ಸತ್ಯಣ್ಣನತ್ರೆ ಹೇದ° –
“ಬೈಲಿಲಿ ಭಗವದ್ಗೀತೆ ಮುಗುತ್ತಡಾ.. ಗರುಡ ಪುರಾಣ ಸುರುವಾಯ್ದಿಂದು”
ಸತ್ಯಣ್ಣಂಗೆ ಬೈಲಿಲಿ ಕೂದೊಂಡು ಓದಿನೋಡ್ತಷ್ಟೆಲ್ಲ ಪುರುಸೊತ್ತಿಲ್ಲದ್ರರೂ ಬೈಲಿನೋರ ಮೂಲಕ ಬೈಲ ವರ್ತಮಾನ ಎಲ್ಲ ಕೇಟು ತಿಳ್ಕೊಂಬ ಅಭ್ಯಾಸ ಇದ್ದು..
ಸತ್ಯಣ್ಣ ಹೇದ° – ಹೋ! ಅಪ್ಪೋ!  ಬರೆತ್ತಾ ಇದ್ದನೋ ಇದನ್ನೂ ಹದ್ನಾರು ಮೊಳಕ್ಕೆ !! 😀
~~
3.
ಆಟಿ ತಿಂಗಳು ಕಳುದ ಕೂಡ್ಳೆ ಒಂದೊಂದೇ ಹಬ್ಬಂಗೊ ಸುರುವಾವ್ತು ಇನ್ನು ಬೈಲಿಲಿ..
ವರ್ಷಂಪ್ರತಿ ಹಾಂಗೇ ಈ ವೊರಿಶವೂ ಗಣೇಶೋತ್ಸವ ಮಾಡ್ತದು ಹೇದು ಸುರೂವಾಣ ಮೀಟಿಂಗು ಆತಡ ಓ ಮನ್ನೆ ಅಲ್ಲಿ..
ಗಣೇಶೋತ್ಸವ ಶುದ್ದಿ ಹೇದಪ್ಪಗ ಸತ್ಯಣ್ಣ ಹೇದ° – ಅಪ್ಪೋ! ಕಳುದೊರಿಶ ಆರಿಂಗೆ ಸಮ್ಮಾನ ಮಾಡಿದ್ಡಡ ! ಹೇಂಗಿದ್ದವಡ ಈಗ?! 😀
~~
4.
ಸತ್ಯಣ್ಣಂಗೆ ಮೂಡ್ಳಾಗಿ ಒಂದು ಅನುಪ್ಪತ್ಯ..
ಮಂತ್ರಾಕ್ಷತೆ ಸಮಯಲ್ಲಿ ಪಂಡಿತರೊಬ್ಬರಿಂದ ಭಾಷಣವೂ ಮಡಿಕ್ಕೊಂಡಿತ್ತವು ಮನೆಯೋರು..
ಪಂಡಿತರಿಂದ ಭಾಷಣ ಹೇದಮತ್ತೆ ವಿಷಯ ಹತ್ತು ಹಲವಾರು ತಿಳ್ಕೊಂಬಲೆ ಅಕ್ಕು ಹೇದು ಸತ್ಯಣ್ಣನೂ ಗೆನಾ ವಸ್ತ್ರಸುತ್ತಿಗೊಂಡು ಗೆನಾ ಶಾಲು ಹಿಡ್ಕೊಂಡು ಸಭೆಲಿ ಕೂದ°..
ಪಂಡಿತ° ಒಂದೂ ಕಾಲು ಗಂಟೆ ಭಾಷಣ ಮಾಡಿಕ್ಕಿ ‘ಸ್ವಸ್ತಿ’ ಹೇದಪ್ಪಗ ಭಟ್ಟಮಾವ° ಅವರ ಕೆಲಸ ಮತ್ತೆ ಮುಂದುವರ್ಸಿದವು.
ಸಭೆಂದ ಎದ್ದು ಹೆರ ಬಂದ ಸತ್ಯಣ್ಣನತ್ರೆ ಕುಂಟಾಂಗಿಲ ಬಾವ° ಕೇಳಿದ° – “ಪಂಡಿತರು ಎಂತ ಹೇದವು ಸತ್ಯಣ್ಣ?”
ನಗಬೇಕೋ ಅಳಬೇಕೋ ಹೇದು ಮೋರೆ ಇದ್ದ ಸತ್ಯಣ್ಣ ಹೇದ° – “ಅದೇ ಮಾರಾಯ ಎನಗೂ ಗೊಂತಾಗದ್ದು” 😀
~~
5.
ಅಡಿಗೆ ಸತ್ಯಣ್ಣ UKಗೆ ಹೋದ್ದೂ ಅನಿರೀಕ್ಷಿತವೇ, ಬಂದ್ಸೂ ಅನಿರೀಕ್ಷಿತವೇ..
ಹೋಗಿ ಬಂದಮತ್ತೆ ಅಲ್ಲಿ ಎಂತ ವಿಶೇಷ ಹೇದು ಎಲ್ಲೋರು ಕೇಳುಸ್ಸೇ ಆತು..
ಹೀಂಗೆ ಮನ್ನೆ ಬೈಲಿಲಿ ಕಂಡ ಅಡಿಗೆ ಸತ್ಯಣ್ಣನತ್ರೆ ಕೆಪ್ಪಣ್ಣ ಕೇಟ- “ಸತ್ಯಣ್ಣ ವಿಮಾನಲ್ಲಿ ಹೋದ್ದಪ್ಪೋ. ವಿಮಾನಲ್ಲಿ ಹೋಪಗ ಎಂತ ಕಾಣುತ್ತು?”
ಸತ್ಯಣ್ಣ ವಿಮಾನಲ್ಲಿ ಕೂಬದು ಬಿಡಿ, ಹತ್ರಂದ ನೋಡಿದ್ದದೂ ಇದುವೇ ಸುರುವಾಣ ಸರ್ತಿ.  ಸತ್ಯಣ್ಣ ಹೇದಾ°- ಕಂಡದೆಂತರ! ಎಕ್ಕಳ್ಸಿ ನೋಡಿದ್ದರ್ಲಿ ಎದುರು ಕೂದೊಂಡಿತ್ತಿದ್ದ ನಾಕು ಬೆಳಿ ಕಾಲು. ಅಷ್ಟೇ.
~~
6.
ಅಡಿಗೆ ಸತ್ಯಣ್ಣಂಗೆ ತಾನು ವಿಟ್ಳಲ್ಲಿ ಚೆಕ್ಕಿಂಗು ಪೋಲೀಸುಗೊಕ್ಕೆ ಹೋಳಿಗೆ ಕಟ್ಟ ಕೊಟ್ಟಿಕ್ಕಿ ಬಂದ್ಸು ಪೇಪರ್ಲಿ, ಟಿ.ವಿಲಿ ಬೈಂದೋದು ಒಂದು ಅನುಮಾನ..
ಇಲ್ಲದ್ರೆ ಓ ಮನ್ನೆ ಆಚಿಕಂಗೆ ಹೋಪಲೆ ವಿಮಾನ ಹತ್ರಂಗೆ ಹೋಪಗ, ವಿಮಾನ ನಿಲ್ದಾಣಲ್ಲಿ ಸತ್ಯಣ್ಣನ ತಡದು ನಿಲ್ಸಿ ತನಿಖೆ ಮಾಡಿದ್ದಾರೂ ಎಂತಕೆ!..
ಬಾಕಿದ್ದೋರ ಹಾಂಗೆ ಸತ್ಯಣ್ಣ ಬೇಗು ಪೆಟ್ಟಿಗೆ ಎಂಸೂ ಕೊಂಡೋಯ್ದನಿಲ್ಲೆ. ಬರೇ ಖಾಕಿ ಚೀಲ ಮಾತ್ರ ಹೆಗಲ್ಲಿ ನೇತುಗೊಂಡಿದ್ದದು..
ಕೊಡೆಯಾಲಲ್ಲಿ ವಿಮಾನ ಸ್ಟಾಪಿಲ್ಲಿ ತನಿಖೆ ಆಪೀಸರ ಸತ್ಯಣ್ಣನ ಚೀಲ ನೋಡಿ ಚೀಲದಲ್ಲಿ ಎಂತ ಉಂಟು, ಚೀಲ ಬಿಡ್ಸಿ ತೋರ್ಸು ಹೇದು ಕೇಳಿತ್ತು..
ಸತ್ಯಣ್ಣ° ಹೇಳಿದ°…- ಏ ಇದಾ.. , ನೀನು ಎಷ್ಟು ಹುಡ್ಕಿದರೂ, ಎನ್ನ ಚೀಲಲ್ಲಿ ಹೋಳಿಗೆ ಲಟ್ಟಣಿಗೆಯುದೇ, ಕಣ್ಣಸಟ್ಟುಗ ಬಿಟ್ರೆ ಬೇರೆನು ಸಿಕ್ಕ. ನೀನು ಎನ್ನ ಅಂತೆ  ಬಿಟ್ರೆ ಯುಕೆಂದ ಬಪ್ಪಗ ಒಂದು ಕಟ್ಟು ಹೋಳಿಗೆಯಾದರೂ ಕೊಟ್ಟಿಕ್ಕುವೆ ಮಿನಿಯಾ°’ 😀
~~
7.
ಅಡಿಗೆ ಸತ್ಯಣ್ಣ ಹೋಳಿಗೆ ಮಾಡ್ತರ್ಲಿ ಮಾತ್ರ ಅಲ್ಲ, ಸಪಾದ ಭಕ್ಷ್ಯ ಕಾಸುತ್ತರ್ಲಿಯೂ ಹೆಸರು ಹೋದ ಕೈ.
ಓ ಮನ್ನೆ ಚೆರೆಪೆರೆ ಬಾವನಲ್ಲಿ ಎಸ್.ಎನ್.ಪಿ.., ಸತ್ಯಣ್ಣನತ್ರೇ ಸಪಾದ ಭಕ್ಷ್ಯ ಕಾಸಿಕ್ಕು ಹೇದವು ಮನೆ ಹೆಮ್ಮಕ್ಕ.
ಸಪಾದ ಪಾಕ ಬರೆಕಾರೆ ಸುಮಾರು ಹೊತ್ತು ಒಲೆ ಬುಡಲ್ಲಿ ನಿಂದುಗೊಂಡು ಸೌಟು ತಿರುಗುಸೆಕ್ಕಿದ..
ಮನೆ ಅಟ್ಟುಂಬಳಲ್ಲಿ ಲೊಟ್ಟೆ ಪಟ್ಟಾಂಗ ಹೊಡಕ್ಕೊಂಡಿದ್ದ ಹೆಮ್ಮಕ್ಕೊ ಉತ್ತರಾಖಂಡಲ್ಲಿ ಆದ ಆಪತ್ತಿನ ಬಗ್ಗೆ ಮಾತಾಡಿಕೊಂಡಿತ್ತವು.. – “ಅಲ್ಲಿ ಏಕಾಏಕಿ ಬೆಳ್ಳ ಬಂತಡ, ಬರೆ ಜೆರುತ್ತಡ, ಜೆನಂಗೊ ಎಲ್ಲಾ ಮಣ್ಣಿನಡಿಲಿ ಸಿಕ್ಕಿಹಾಕಿಕೊಂಡಿದವಡ, ಸಾವಿರಾರು ಜೆನಂಗ ಸತ್ತಿದವಡ.., ಅದರ್ಲಿಯೂ ಒಬ್ಬ ದೇವಸ್ಥಾನದ ಗಂಟೆ ಹಿಡ್ಕೊಂಡು ನೇತುಗೊಂಡು ಬದುಕ್ಕಿ ಒಳುದ್ದನಡ..,  ಹಾಂಗೆ ಹೀಂಗೆ…”
ಅನುಪ್ಪತ್ಯದ ತೆರಕ್ಕಿಲ್ಲಿ ಟಿವಿಲಿ ಇದರೆಲ್ಲ ಸತ್ಯಣ್ಣಂಗೆ ನೋಡ್ಳಾಗಿತ್ತಿಲ್ಲೆ.., ಅಡಿಗೆ ಕೊಟ್ಟಗೆಲಿತ್ತಿದ್ದ ಸತ್ಯಣ್ಣಂಗೆ ಈ ಮಾತುಗೊ ಕೆಮಿಗೆ ಬೀಳುತ್ತಾ ಇದ್ದತ್ತು.,
ಹೆಮ್ಮಕ್ಕಳ ಮಾತು ಸತ್ಯಣ್ಣಂಗೆ ಕಿರಿ ಕಿರಿ ಆತು. ಕಿಚ್ಚಿನ ಗಾವಿಂಗೆ ಎನ್ನ ಮೈಲಿ ಬೆಗರು ಬೆಳ್ಳದಾಂಗೆ ಹರಿತ್ತಾ ಇದ್ದು., ಇವರದ್ದು ಇದು ಇಲ್ಲಿ ಲೊಟ್ಟೆ ಪಟ್ಟಾಂಗವೂ ಬೇರೆ!! – ಗ್ರೇಶಿದ° ಸತ್ಯಣ್ಣ°
‘ಯೇವ ಬೆಳ್ಳದ ಬಗ್ಗೆ ಹೇಳುದು ನಿಂಗೊ?.. ಆನು ನೋಡದ್ದ ಬೆಳ್ಳವೋ? ಎಂಗಳ ತೋಡಿಲ್ಲಿ ಮಳೆಗಾಲಲ್ಲಿ ಹೋಪ ಬೆಳ್ಳವ ಕಂಡ್ರೆ ಮೈಲಿ ಚಳಿ ಕೂರುಗು.., ಒಪ್ಪಣ್ಣ ಸಾರಡಿ ತೋಡಿಲ್ಲಿ ಕಾಣದ್ದ ಬೆಳ್ಳವೋ! ಹು೧! ಅಂತೇ ಪುರುಸೊತ್ತು ಇದ್ದು ಹೇಳಿ ಏನಾರು ಮಾತಾಡ್ಳಾಗ ಆತೋ’ – ಸತ್ಯಣ್ಣ° ವಸ್ತ್ರಲ್ಲಿ ಮೋರೆ ಉದ್ದಿಗೊಂಡ.
 ಪಟ್ಟಾಂಗ ಹೊಡಕ್ಕೊಂಡಿದ್ದ ಹೆಮ್ಮಕ್ಕ ತಳಿಯದ್ದೆ ಅಲ್ಲಿಂದ ಎದ್ದು ಹೆರಾಣ ಜೆಗಿಲಿಂಗೆ ಹೋದವು 😀
~~
8.
ಅಡಿಗೆ ಸತ್ಯಣ್ಣಂಗೆ ಓ ಆಚೊರಿಶ ಕೊಡೆಯಾಲಕ್ಕೆ ದುಬಾಯಿ ವಿಮಾನ ಬಂದು ಬಿದ್ದದು ಇನ್ನೂ ನೆಂಪಿದ್ದು..
UKಗೆ ಹೆರಟ ಸತ್ಯಣ್ಣಂಗೆ ವಿಮಾನ ಕಂಡಪ್ಪಗ ಅದೂ ನೆಂಪಾತು..
ಅಂತೂ ವಿಮಾನಲ್ಲಿ ಬಂದು ಕೂದ° ಸತ್ಯಣ್ಣ..
ಸತ್ಯಣ್ಣ ಕೂದ ಕೂಡ್ಳೆ ಅದು ಹೆರಡುತ್ತೋ?! 
ಎಲ್ಲೋರು ಬಂದು ಕೂದಮತ್ತೆ, ಚೆಂದದ ಕೂಸು ಬಂದು ಸ್ವಾಗತ ಭಾಷಣ ಮಾಡಿ., ಹೀಂಗೆ ಮಾಡೆಕ್ಕು ಹಾಂಗೆ ಮಾಡೆಕ್ಕು ಹೇಳಿಕ್ಕಿ ಎಲ್ಲಾ ಅಪ್ಪಗ ಅರ್ಧ ಗಂಟೆ ಬೇಕು.
ಅವು ಇಂಬ್ಲೀಷಿಲ್ಲಿ ಹೇಳುಸ್ಸು ಸತ್ಯಣ್ಣಂಗೆ ಸಮ ಅರ್ಥ ಆಗಿಂಡು ಇತ್ತಿಲ್ಲೆ..
ಇವಂಗೆ ಅರ್ಥ ಆಯಿದಿಲ್ಲಿ ಹೇಳಿ ಅವಕ್ಕೆ ಗೊಂತಾತೊ ಏನೋ!.,  ಒಂದು ಒಪ್ಪಕ್ಕ ಕೂಸು ಬಂದು ಬೆಲ್ಟ್‌ ಕಟ್ಟಿಗೊಳ್ಳಿ, ಮೊಬೈಲು ಸ್ವಿಚ್ಚು ಆಫ್‌ ಮಾಡಿ ಹೇಳಿ ಕೈಕರಣೆ ಮಾಡಿ ತೋರ್ಸಿತ್ತು..
ಅಲ್ಲಾ… ಇಷ್ಟು ಮೆಸ್ತಂಗೆ ಇಪ್ಪ ಸೀಟಿಲ್ಲಿ ಕೂದುಗೊಂಡಿಪ್ಪಗ ಸೊಂಟಕ್ಕೆ ಬೆಲ್ಟು ಕಟ್ಟೆಕ್ಕೋ?! 
ಸತ್ಯಣ್ಣ  ಹೇಳಿಯೇ ಬಿಟ್ಟ°-  “ಏ ಅಕ್ಕೋ… ಆನು ಪಲ್ಸರ್‌ ಬೈಕಿಲ್ಲಿ ಹೋಪಗಳೇ ಸೊಂಟಕ್ಕೆ ಬೆಲ್ಟ್‌ ಕಟ್ಟುತ್ತಿಲ್ಲೆ.. ಅಂಬಗ ಜಾರದ್ದ ಎನ್ನ ವೇಸ್ಟಿ, ಈಗ ವಿಮಾನ ಮೇಲೆ ಹಾರುವಾಗ ಜಾರುಗೊ..? ಜಾರ್ಲೇ ಜಾರ, ನೀನು ಹೆದರೆಡ ಆತೋ”. 😀
 ~~
 
ಓಹ್….  ಇಲ್ಲಿಗೆ 8 ಆತಿಲ್ಯೋ!.., ಇಂದಿರತ್ತೆ.. ರಂಗಣ್ಣ ಬೈಂದನಿಲ್ಲೆ, ಸತ್ಯಣ್ಣ ಕಾಯಿ ಕಡವಲೆ ಕೂಯ್ದ°. ಅಡಿಗೆ ಸತ್ಯಣ್ಣ ಕಾಯಿ ಕಡವಲೆ ಕೂದರೆ ಮಾತಾಡ°, ಕೈ ಚೆರಕ್ಕುಗು 😀
 

😀  ಹ್ಹ್  ಹ್ಹ್  ಹ್ಹೇ..  😀

14 thoughts on “'ಅಡಿಗೆ ಸತ್ಯಣ್ಣ' ಜೋಕುಗೊ – ಭಾಗ 17

  1. ಕೆಲವೆಲ್ಲ ಪ್ರವಚನ ಕೇಳಿದರೆ ನಮ್ಮದೂ ಸತ್ಯಣ್ಣ ಕತೆಯೇ!

  2. ಗೋವಿಂದಣ್ನನ ಕಂಡ್ರೆ ಸಾಕಾವುತ್ತು ಭಾವ.

    1. ಗೋವಿಂದಣ್ಣ ಹೇಳಿರೆ ಆರು?…!!!

      1. ಅದಾ…ಬೈ ಮಿಸ್ಟೇಕಿಲಿ ಹೆಸರು ತಪ್ಪಿತ್ತು. ರಂಗಣ್ಣ ಆಯೆಕ್ಕಾತು .

  3. ಅಡಿಗೆ ಸತ್ಯಣ್ಣನ ಪೋನು ನಂಬರು ಇದ್ದೋ? ಎನಗೆ ರಜ ಹೋಳಿಗೆ ಮಾಡ್ಸುಲೆ ಇದ್ದತ್ತು….

  4. ಅದಾ,ಯ೦ಗಳ ಕಡೆ ಗಾದೆ ಒ೦ದಿದ್ದು, ಮದುವೆ ಮನೆ ಕಾರ್ಯದಲ್ಲಿ, ಮನೆ ಯಜಮಾನ ಕೋಡ೦ಗಿ ಹೇಳೀ.. ಹಾ೦ಗೆ ಉಳುದವರದ್ದೇ ಕಾರ್ಬಾರ್ ಆವ್ತು ಯಜಮಾನ ಕೋಡ೦ಗಿ ತರ ಮಖಾ ಮಾಡಿ ದುಡ್ಡು ಪೀಕಿರೆ ಆತು.ಹ ಹ ಹ್ಹಾ.
    ಬೈಕಿಲೇ ಬೆಲ್ಟ್ ಕಟ್ಟುದು ಇಲ್ಲೆ ಅ೦ಬಾಗ ಮತ್ತೆ ಇಮಾನದಲ್ಲಿ ಯ೦ತಕೆ ಹೇಳುದು ಸರಿ ಸತ್ಯಣ್ಣ.
    ಗಣೇಶೋತ್ಸವದಲ್ಲಿ ಸಮ್ಮಾನ ಆದ್ರ ಮೇಲೆ ಈಗ ಹೆ೦ಗಿದ್ದವಡ ಸೂಪರ್..
    ನಾಕು ಬೆಳಿ ಕಾಲು ಕ೦ಡತ್ತು ಹೆ೦ಗೆ??

    1. ನಾಕು ಬೆಳಿಕಾಲು -> ಆರಾರು ಎರಡು ವಿದೇಶಿ ಒಪ್ಪಕ್ಕಂಗೊ ಕೂದೊಂಡಿತ್ತಿದ್ದವಾಯ್ಕು, ಉಮ್ಮಪ್ಪ

  5. ಅಡಿಗೆ ಸತ್ಯಣ್ನ ಓದಿ, ಒಬ್ಬನೆ ನೆಗೆ ಮಾಡಿ ಆತು… ಪಶ್ಟ್ ಆಯಿದಿದ…

  6. ಹು ಹು ಸತ್ಯಣ್ಣಂಗೆ ಸತ್ಯಣ್ಣನೇ ಸಾಟಿ.. ಯಬೋ…
    ಏ ಭಾವ ಸತ್ಯಣ್ಣ ಹಾಂಗೆ ಹೇಳಿಯಪ್ಪಗ ಚೆಂದದ ಕೂಸು ಎಂತ ಮಾಡಿದ್ದಡಾ…? ಅದುವೆ ಇವನ ಸೊಂಟಕ್ಕೆ ಬೆಲ್ಟ್‌ ಕಟ್ಟಿತ್ತೋ…?

    1. ಅಲ್ಲಾ ಚೆನ್ನೈ ಬಾವ
      ಕೂಸು ಹೇದ ಕೂಡ್ಲೆ ಇವಂಗೆತ ಎಳಗುಸ್ಸು..

  7. ಸತ್ಯಣ್ಣನ ವಿಮಾನ ಪುರಾಣ ರೈಸಿದ್ದು. ಹೋಳಿಗೆ ಬೇಶುವ ಎಂಕಟಣ್ಣನ ಚಿತ್ರವು ಪಟ್ಟಾಯಿದು

  8. ಅನುಪತ್ಯ ತೆಗದವರ ಸ್ಥಿತಿಗತಿ ನೋಡಿಗೊಂಬ ಸತ್ಯಣ್ಣನ ಹಾಂಗಿಪ್ಪವು ಇದ್ದರೆ ನಿಜವಾಗಿಯೂ ಅನುಪತ್ಯ ಮಾಡ್ಸುವವು ಬಚಾವು.
    ಚೆಂದದ ಕೂಸು ಬಂದು ಬೆಲ್ಟು ಕಟ್ಟುಲೆ ಹೇಳಿಯಪ್ಪಗ ಸತ್ಯಣ್ಣ ಉವಾಚ ಓದಿ ಪುಸಕ್ಕನೆ ನೆಗೆ ಪೀಂಕಿತ್ತು. ಪಕ್ಕದ ಮನೆಯವಕ್ಕೆ ಕಂಡಿದಿಲ್ಲೆ- ಇಲ್ಲದ್ರೆ ‘ನಿನ್ನೆ ವರೆಗೆ ಸರೀ ಇದ್ರು- ಇವತ್ತು ಏನಾಯ್ತು ಇವ್ರಿಗೆ’ ಹೇಳಿ ಗ್ರೇಶುತಿತ್ತವು. [ ಮನೆಲಿ ಒಬ್ಬನೇ ಇಪ್ಪಾಗ ನೆಗೆ ಮಾಡಿರೆ ಎಂತ ಹೇಳುಗು ಮತ್ತೆ ! ]
    ಕಾಯಿ ಕಡವಾಗ ಸತ್ಯಣ್ಣನ ಕೈ ಚರಕ್ಕಿದರೆ ಅನುಪತ್ಯಲ್ಲಿ ‘ನಾನ್ವೆಜ್’ ಊಟ ಹಾಕಿದ ಹಾಂಗಕ್ಕು- ಮನೆಯವು ಬೈಗು-‘ಲೊಟ್ಟೆ ಪಂಚಾಯಿತಿಗೆ ಮತ್ತೆ ಮಾಡ್ಳಾಗದಾ ಸತ್ಯಣ್ನಾ’ ಹೇಳಿ. ಅಕ್ಕು, ಕಾಯಿಕಡದಾದಿಕ್ಕಿ ಸುದ್ದಿ ಹೇಳಲಿ.

  9. ಗಣೇಶ ಹೇಳಿದ ಹಾಂಗೆ ಬೆಲ್ಟು ಕಟ್ಟಿದ ಜೋಕು ಸೂಪರ್ ಆಯಿದು. ೧೭ನೇ ಕಂತಿಂಗೆ ಪಾದಾರ್ಪಣೆ ಮಾಡಿದ ಸತ್ಯಣ್ಣನ ಜೋಕುಗೊ ಶತಕ ಬಾರುಸಲಿ ಹೇಳಿ ಒಂದು ಒಪ್ಪ. ಚೆನ್ನೈ ಭಾವಯ್ಯಾ, ಗರುಡ ಪುರಾಣವ ನೋಡೆಕಷ್ಟೆ.

  10. ಹಹಹ್ಹಾ… ಎಲ್ಲವೂ ಲಾಯಿಕಾಯಿದು, ವಿಮಾನಲ್ಲಿ ಬೆಲ್ಟು ಕಟ್ಟಿದ್ದದು ಭಾರೀ ಲಾಯಿಕಾಯಿದಪ್ಪಾ..

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×