ಹಸ್ತೋದಕ ಕೊಟ್ಟಪ್ಪದ್ದೆ ಸಾರಿನ ಕವಂಗ ನೆಗ್ಗಿ ಆತು

ಅಪ್ಪು., ಹಸ್ತೋದಕ ಕೊಟ್ಟಪ್ಪದ್ದೆ ಸಾರಿನ ಕವಂಗ ನೆಗ್ಗಿ ಆತು . ಇದರ ಹೇಳ್ಳೆ ಎಂತ ಇದ್ದು ಅಲ್ಲದ!.

 

ಆದರೆ ಚೂರು ಅವಲೋಕನ ಮಾಡೇಕ್ಕಾಗಿದ್ದೋದು ಕೆಲವು ಅಲ್ಲ ಹಲವು ಸರ್ತಿ ಗ್ರೇಶಿಹೋದ್ದು ಇಕ್ಕು ಹಲವರಿಂಗಲ್ಲದ್ದರೂ ಕೆಲವರಿಂಗೆ ಅಪ್ಪೋ!
ಶುದ್ದಿಲಿ ಇಲ್ಲದ್ದವನದ್ದು ಇದೆಂತರಪ್ಪ ಶುದ್ದಿ ಹೇದು ಹುಬ್ಬೇರುಸಲೆ ಎಂತಿಲ್ಲೆ…  ಆದರೆ,

 

ಹೆಚ್ಚಾಗಿ ಎಂತಾವ್ತು ಹೇದರೆ .. ಅನುಪ್ಪತ್ಯಕ್ಕೆ ಹೋಪಲೆ ಒಬ್ಬಂಗೂ ಈಗಾಣ ಕಾಲಲ್ಲಿ ಎಡೆ ಇಲ್ಲೆ. ಅಂದರೂ ಮನೆ ಎಜಮಾನ ಹೇಳಿಕೆ ಹೇದಿಪ್ಪಗ ದಾಕ್ಷಿಣ್ಯಕ್ಕಾದರೂ ಒಂದು ಗಳಿಗೆ ಹೋಯಿಕ್ಕಿ ಬಂದಿಕ್ಕುತ್ತೇದು ಬಾಯಿಬಿಟ್ಟು ಹೇಳದ್ದೆ ಮನಸ್ಸಿನೊಳವೇ ಗ್ರೇಶ್ಯೊಂಡು ಹೋಪೋರು ಹೆಚ್ಚಿನವ್ವುದೆ. ಇರಳಿ, ಅವರವರ ತೆರಕ್ಕು ಅವಕ್ಕವಕ್ಕೆ.
ಪಟ ಸಾಂದರ್ಭಿಕ, ನೆಟ್ಟಿಂದ
ಬಪ್ಪೆ ಉಣ್ತವರದ್ದಾದರೆ ಚಿಂತೆ ಇಲ್ಲೆ. ಅತಿ ಅಂಬೇರ್ಪಿನೋರೆ. ಒಂದಾರಿ ಚಾಂಬಿರೆ ಸಾಕು ಹೇದಿಪ್ಪವ್ವೆ. ಹಾಂಗಾಗಿ ಅವ್ವೆಂತಾದರೂ ಗ್ರೇಶುಲೆ ಇಲ್ಲೆ. ಆದರೆ ಹಂತಿಲಿ ಕೂದುಂಬೋರಿದ್ದವನ್ನೇ…ಅವರ ಸಣ್ಣ ಒಂದು ಸಂಕಷ್ಟ ಇಲ್ಲಿ ವಿಶ್ಯ.

 

ಉಂಬಲೆ ಕೂದಾತು. ಬೇಗ ಉಂಡಿಕ್ಕಿ ಹೆರಟ್ರೆ ಸಾಕಿತ್ತು ಹೇದು ಮನಸ್ಸಿನೊಳವೇ. ಅಂದರೂ ಹಂತಿಲಿ ಕ್ರಮಪ್ರಕಾರ ಉಂಬದು…

 

ಹಸ್ತೋದಕ ಕೊಟ್ಟಾತು. ಕೃಷ್ಣಾರ್ಪಣ ಹೇದು ಅಡ್ಡಬಿದ್ದಾತು ಎಜಮಾನ. ಪವಿತ್ರ ಬಿಡುಸಿ ಆಚಮನ ಮಾಡ್ಳೆ ಅಲ್ಲಿಂದ ತಟ್ಟೆ ನೆಗ್ಗಿ ಆಯಿದೋ ಇಲ್ಯೋ.., ಪಂಚಪ್ರಾಣಾಹುತಿ ಕೈಯ್ನೀರು ತೆಕ್ಕೊಂಡವಗ್ಗೆ ತೆಕ್ಕೊಂಡಾಯಿದೋ ಇಲ್ಯೋ.. ಸಾರಿನ ಕವಂಗ ನೆಗ್ಗಿ ಸೌಟದ್ದಿ ತೋಡಿ ಬಗ್ಗಿ ಆತು ಬಳುಸುವೋನು!!

 

ಅದೆಂತ ಅಟ್ಟು ಅಂಬೇರ್ಪು ಹೇದು ಕೆಲವರಿಂಗಪ್ಪದು. ವಿಶ್ಯ ಅಪ್ಪಾದ್ದೇ ಅಪ್ಪೋ!

 

ಅಲ್ಲಿ ಬಾಳೆಕರೆಲಿ ಬಳುಸಿದ  ಪಾಚ ತಾಳು ತೋವೆ ಚಿತ್ರಾನ್ನ ಅವಿಲು ನಕ್ಕಿ ನೋಡಿಕ್ಕಲೂ ಪುರುಸೊತ್ತಿಲ್ಲೆ., ಎಣ್ಣೆ ತುಪ್ಪ ಪರಿಮ್ಮಳ ನೋಡಿಕ್ಕಲೂ ಎಡೆ ಇಲ್ಲೆ.., ಕೊದಿಪ್ಪಟೆ ಸಾರು ತಣಿದೋಕು ಹೇಳ್ತಾಂಗೆ ಸಾರು ಬಡುಸಲೆ ಅಂಬೇರ್ಪಾವುತ್ತು. !

ಅಟ್ಟಪ್ಪಗ ಒಂದು ಮಿಂಟು ನಿಲ್ಲು ಹೇಳಿತ್ತೋ… ಅದೂ ತಪ್ಪಾವ್ತು. ಹೇಳಿದ್ದಿಲ್ಯೋ…, ಅಶನ ಕರೆಂಗೆ ದೂಡುತ್ತ ಕೈಗೇ ಎರದಾತು !! ಹಾಂಗೆ ಸುರುವಾದ ಅಂಬೇರ್ಪು ಕೊದಿಲು ಮೇಲಾರ ಪಾಚ ಮಜ್ಜಿಗೆನೀರಿನವೊರುಗೂ ಹೋವ್ತು !

 

ಅದರೆಡಕ್ಕಿಲಿ ಮನೆ ಎಜಮಾನ ಸಾವಕಾಶ ಸಮಾಧಾನ ಹೇದು ಬೀಸಾಳೆ ಹಿಡ್ಕೊಂಡು ಬಂದಪ್ಪಗ ಅಕ್ಕಕ್ಕು ಹೇದು ಹೇಳ್ತು ನಾವು. ಪಾಪ ಅಂವ° ಎಂತ ತಪ್ಪು ಮಾಡಿದ್ದ° ಅಪ್ಪೋ !

 

ಹಾಂಗಾಗಿ… ಎಂತಾಯೇಕ್ಕೀಗ ಕೇಳುವಿ ನಿಂಗ.   ಎಂತೂ ಆಗೇಡ… ಸಾವಕಾಶ ಉಂಬಾಂಗೆ ಬಳುಸುತ್ತೋರು ಚೂರು ಸಹಕರುಸೆಕು ಹೇದಟ್ಟೇ.

ಅಲ್ಲದ ಏ°

ಚೆನ್ನೈ ಬಾವ°

   

You may also like...

8 Responses

 1. ಎನ್ನ ಮನಸ್ಸಿಲ್ಲಿ ಕೆಲವಾರು ಸಮಯಂದ ಇಪ್ಪ ತಾಕಲಾಟವೇ ಚೆನ್ನೈ ಭಾವನ ಉಲ್ಲೇಖ ಚಿಂತನೆ ಫಸ್ಟಾಯಿದು. ಎನಗೂ ಸಣ್ಣದಿಪ್ಪಗಳೇ ಹೇಳಿಕೊಟ್ಟದೂದೆ ತುಪ್ಪದಶನಲ್ಲಿ ತಾಳು,ಅವಿಲುಗಳಾಂಗಿಪ್ಪ ವ್ಯಂಜನಂಗಳ ಉಂಬಲೆ.ಮತ್ತೆ ಈಚ ಪಾಕಾದಿಗೊ. ಅದಕ್ಕೆ ಈಗಾಣ ಬಡ್ಸುತ್ತ ಜವ್ವನಿಗರು ಬಿಡವು. ನಮ್ಮ ಊಟದ ಕ್ರಮ,ಬಡುಸುವ ರೀತಿ, ಸರಿಯಾಗಿ ಒಂದಾರಿ ಬರದಿಕೇಕು ಜಾನ್ಸಿದ್ದಕ್ಕೆ ಒಳ್ಳೆದಾತು ಚೆನ್ನೈ ಭಾವನ ಈ ಶುದ್ದಿ, ಇದಕ್ಕೆ ಉದ್ದಂಡ ನಮಸ್ಕಾರ.

 2. ಯಮ್.ಕೆ. says:

  ಅದು ಆತನ್ನೆ, ಮತ್ತೆ ಅದೇ ಹ೦ತಿಲಿ ರಿವರ್ಸು ಗೇರಿಲಿ ,ವಿಚಾರಣೆ ಬೇರೆ.
  ಬೇಕಾ ನಾವಾಗೇ.

  ಸುದರಿಕೆಯೆವ ಇದು ಇದು ಎಲ್ಲಿ ಹೋಪದು ?ಕೇಳಿ.
  ಹೋಗಲಿ ,ಹೋಗಲಿ.ಬೇರೆ.ಎಂತಾದರು ಸರಿ.

  ಸಾಲಿಂಗೆ ಶಾಲು ನಿಶಾನೆ.

  ನಾವು ಪಾಚಲಿ ಇಪ್ಪ ಬೀಜ ಬೊಂಡು ,ಕಚ್ಚಿ ಕುಪದೇ ಸರಿ.

  ಇನ್ನು ಬಾಳೆ ತೆಗೆಯೆಕ್ಕಾದರೆ ೨ನೇ ಹ೦ತಿಗೆ ಕೂಪವ ಕುಮ್ಕಿಗೆ ಬೇಲಿ ಹಾಕಿ ಆತು.

  ಆ ಛ೦ದವ ನೋಡಿರೆ…

  ಭಾಗವತರು ಹೇಳುವ ,,ಎಲ್ಲೆಲ್ಲೂ ಸೊಬಗಿದೆ ,,ನೆಂಪಾವುತ್ತು.

 3. ಶರ್ಮಪ್ಪಚ್ಚಿ says:

  ವಾಸ್ತವ್ಯ.ಎರಡ್ನೇ ಹಂತಿಗೆ ಬಳ್ಸಲೆ ಜೆನ ಇದ್ದರೆ ಬಚಾವ್, ಇಲ್ಲದ್ರೆ ಕೈ ಒಣಗಿಸಿಂಡು ಕೂರೆಕ್ಕಷ್ಟೆ. ಬಳ್ಸಲೆ ಜೆನ ಜಾಸ್ತಿ ಆತೋ,ಉಂಬವಂಗೆ ಶಿಕ್ಷೆಯೇ. ಒಂದರ ರುಚಿ ನೋಡುವ ಮದಲೇ ಅದರ ವಿಚಾರಣೆ ಆಗಿ ಮತ್ತಾಣ ಐಟಮ್ ಬಳುಸಿಯೂ ಆತು. ಸಾವಕಾಶ ಹೇಳುವದು ಉಪಚಾರಕ್ಕೆ ಮಾತ್ರ ಸೀಮಿತ

 4. pattaje shivarama bhat says:

  ಮೇಲಾಣ ವಿಷಯಕ್ಕೆ ಸಂಬಂಧ ಇಲ್ಲದ್ದ ಒಂದು ಪ್ರಶ್ನೆ. ಹತ್ತೈವತ್ತು ವರ್ಷ ಮೊದಲು ಕಾಯಿ ಕೆರವಗ ಕೂಸುಗೊ ಕಾಯಿ ಸುಳಿ ತಿಂದರೆ ಅವರ ಮದುವೆಗೆ ಮಳೆ ಬಕ್ಕು ಹೇಳುವ ಬಗ್ಗೆ ನಿಂಗಳತ್ರೆ entaru ವಿವರಣೆ ಇದ್ದೋ ವಿಜಯಕ್ಕ.

  • ಎನ ಗೊಂತಿದ್ದಾಂಗೆ “ಕೂಸುಗೊ ಕಾಯಿ ಕೆರವಗ ಕಾಯಿಸೂಳಿ ತಿಂದರೆ ಮದುವಗೆ ಮಳೆ ಬಕ್ಕು” ಹೇಳಿ ಹೆದರುಸುದು. ಇಲ್ಲದ್ರೆ ಕಾಯಿ ಸೂಳಿ ಹೆಚ್ಚು ಖರ್ಚಕ್ಕು ಹೇಳ್ತ ಗುಮಾನಿ ಗಂಡು ಮಕ್ಕೊಗೆ, ಶಿವರಾಮಣ್ಣ.

 5. Venugopal Kambaru says:

  ಈಗಾಣವಕ್ಕೆ ಎಲ್ಲ ಐಟಂ ತಿಂಬ ತಾಕತ್ತು ಬೇರೆ ಇಲ್ಲೇ . ಕೊಡಿ ಕೊಡಿ ತಿಂಬವು ಜಾಸ್ತಿ

 6. Shyamanna says:

  ನಿಂಗ ಹಂತಿ ನಡೂವಿಲಿ ಕೂರಿ. ಬಳುಸುವವು ನಿಂಗಳ ಹತ್ರಂಗೆ ಎತ್ತುವಗ ನಿಂಗೊಗೆ ಎಲೆಲಿ ವ್ಯವಸ್ತೆ ಮಾಡಿಗೊಂಬಲೆ ಸಮಯ ಸಿಕ್ಕುತ್ತು…

 7. ಬೊಳುಂಬು ಗೋಪಾಲ says:

  ಚೆನ್ನೈ ಬಾವಯ್ಯ ಹೇಳಿದ್ದು ನೂರು ಪರ್ಸೆಂಟು ಕರೆಕ್ಟು. ತುಪ್ಪದೊಟ್ಟಿಂಗೆ ಪಲ್ಯ ಸೇರುಸಿ ಉಂಬ ಮಜವೇ ಸಾರಿನ ಗಡಿಬಿಡಿಲಿ ಹಾಳಾಗಿ ಹೋವ್ತು.
  ಶ್ಯಾಮಣ್ಣನ ಐಡಿಯಾ ಸರಿಯಾಗಿಯೇ ಇದ್ದು. ಹಂತಿಯ ನೆಡುಗೆ ಕೂದರೆ ಎಜಸ್ಟುಮೆಂಟು ಸರೀ ಆವ್ತದ.
  ಈಗಾಣ ಕಾಲಲ್ಲಿ ಸುದರಿಕೆ ಭಾವಂದ್ರ ಸುದರಿಕೆಲಿ ಕೆಲವೊಂದರಿ, ಸುರೂವಾಣ ಸರ್ತಿಯೇ ಬಡುಸೆಂಡು ಬಪ್ಪಗಳೇ ಪಾಯಸ ಬೇಕೋ ಹೇಳುವ ವಿಚಾರಣೆ ಆವ್ತು. ಬೇಕಾದವಂಗೆ, ಬೇಕೂ ಹೇಳಲೂ ದಾಕ್ಷಿಣ್ಯ ಆವ್ತು.

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *